ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮಾಯಣ ೧೭೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೨🏝📖   *ಅವಜ್ಞಯಾ ನ ದಾತವ್ಯಂ ಕಸ್ಯಚಿಲ್ಲೀಲಯಾಪಿ ವಾ | ಅವಜ್ಞಯಾ ಕೃತಂ ಹನ್ಯಾದ್ದಾತಾರಂ ನಾತ್ರ ಸಂಶಯಃ ||* _ವಸಿಷ್ಠರ ಆದೇಶ. ಯಜ್ಞ ಎಂದ ಮೇಲೆ ಸಾವಿರಾರು ದಾನಗಳನ್ನು ನೀಡಲಿರುತ್ತದೆ. ದಾನ ಪರಂಪರೆ ನಡೆಯುತ್ತಲೇ ಇರುತ್ತದೆ. ಜ್ಞಾನ-ಅನ್ನ-ಭೂಷಣ-ಭೂಮಿ-ವಸ್ತು-ಸುವರ್ಣ-ರಜತ  ಇವುಗಳ ದಾನ ಮಾಡಿದಷ್ಟೂ ಶ್ರೇಯಸ್ಸು. ದಾನಕಾಲದಲ್ಲಿ ಎಂತಹ ನಿಯಮ ಇರಬೇಕೆಂದು ನಿರೂಪಿಸುತ್ತಿದ್ದಾರೆ. ದಾನ ತೆಗೆದುಕೊಳ್ಳುವ ವ್ಯಕ್ತಿಯ ಬಗ್ಗೆ ಸ್ವಲ್ಪವೂ ಅಸಡ್ಡೆ ತೋರಬಾರದು. ಹಾಗಾಗಿಯೇ ಸಂಬಂಧಿಕರಿಗೆ-ಕುಟುಂಬಿಕರಿಗೆ ದಾನ ನೀಡಬಾರದು ಎನ್ನುವುದು. ಇವನು ಆ ಧರ್ಮ, ಇವನು ಈ ಮತ, ಇವನು ಮಿತ್ರ, ಇವನು ನನ್ನ ವಿರೋಧಿ ಇತ್ಯಾದಿ ಯಾವ ಭಾವನೆ ಇದ್ದರೂ ದಾನ ಕಾಲದಲ್ಲಿ ಅದೆಲ್ಲವನ್ನೂ ಬದಿಗಿಟ್ಟು ಶ್ರೇಯಸ್ಕಾಮನಾಗಿ ಮನಃಪೂರ್ವಕವಾಗಿ ದಾನ ಮಾಡಬೇಕು. ಅನೇಕ ಶ್ರೀಮಂತರು ದಾನ ಕೊಡುವಾಗ ಅಸಡ್ಡೆ ತೋರುವುದನ್ನು, ಅಪಮಾನ ಮಾಡುವುದನ್ನೂ, ಇವನು ತೆಗೆದುಕೊಳ್ಳಲೆಂದೇ ಹುಟ್ಟಿದವನು ಎಂಬರ್ಥದಲ್ಲಿ ನೋಡುವುದನ್ನು ಮಾತನಾಡುವುದನ್ನೂ ಗಮನಿಸಬಹುದು. ಅಂತಹ ದಾನವೆಲ್ಲ ಕಲ್ಲಮೇಲೆ ಸುರಿದ ಮಳೆಯಂತೆ ವ್ಯರ್ಥ. ಎರಡನೆಯದಾಗಿ ತಮಾಷೆ ಮಾಡುತ್ತಾ ಹೋ ಬನ್ನಿ ದಾನಕ್ಕೆ ಎಂದು ವಿನೋದ ಮಾಡುತ್ತಾ ಅಥವಾ ಚೇಷ್ಟೆ ಮಾಡುತ್ತಾ ದಾನ ಮಾಡಬಾರದು. ಒಮ್ಮೆ ಪ್ರತಿಗೃಹೀತನ ಮನಕ್ಕೆ ಬೇಸರ ಉಂಟಾದರೆ ಅದು ದಾತೃವಿಗೆ ನರಕ ತೋರಬಹುದು. ಹಾಗಾಗಿ ಗ...

ಚಾರುದತ್ತ ೨೧

👳‍♀ಚಾರುದತ್ತ ಬೆಳಕು- ೨೧👳‍♀ *ವಿಷಾದಸ್ರಸ್ತಸರ್ವಾಂಗೀ ಸಂಭ್ರಮೋತ್ಫುಲ್ಲಲೋಚನಾ | ಮೃಗೀವ ಶರವಿದ್ಧಾಂಗೀ ಕಂಪಸೇ ಚಾನುಕಂಪಸೇ ||* _ಭಾಸನ ಒಂದು ಚಿತ್ರಕಾವ್ಯದ ಉದಾಹರಣೆ. ನಾಯಿಕೆಯು ಮೈಯಲ್ಲಿ ನೆಟ್ಟ ಬಾಣದಿಂದ ನಡುಗುತ್ತಿರುವ ಅತ್ತಿತ್ತ ಕಣ್ಣನ್ನು ಬಿಡುತ್ತಾ ತಪ್ಪಿಸಿಕೊಳ್ಳಲು ಸಿದ್ಧವಾಗಿ ನಿಂತಿರುವ ಹರಿಣಿಯಂತೆ ತೋರುತ್ತಿದ್ದಾಳೆ. ಶ್ಲೋಕಕ್ಕನುಗುಣವಾಗಿ ಚಿತ್ರ ಬರೆಯಬಹುದಾದ ಕಾವ್ಯ. ವಸಂತಸೇನೆಯು ತನ್ನ ಬಳಿ ಬಂದ ಗ್ರಾಹಕನಿಂದ ಕೊಡಲ್ಪಟ್ಟ ಆಭರಣವೊಂದನ್ನು ಸ್ವೀಕರಿಸಿದ್ದಾಳೆ. ಆ ಆಭರಣ ತನ್ನದೆಂದು ಶಂಕಿಸಿ ಎಲ್ಲಿ ಸಿಕ್ಕಿತೆಂದು ಅವನ ಬಳಿ ವಿಚಾರಿಸಲಾಗಿ ಅವನು ತನ್ನ ಸಾಹಸದ ಕಾರ್ಯವನ್ನು ವರ್ಣಿಸತೊಡಗಿದನು. ತಾನು ದೊಡ್ಡ ವ್ಯಾಪಾರಿಯಾದ ಚಾರುದತ್ತನ ಮನೆಗೆ ಬೆಳಗಿನ ಜಾವ ಹೋದೆನು ಇತ್ಯಾದಿ. ಆಗ ತನ್ನ ಮನದರಸನಾದ ಚಾರುದತ್ತನಿಗೆ ಈ ಭೂಷಣದ ಸಲುವಾಗಿ ಇವನೇನಾದರೂ ಮಾಡಿದನೋ ಎಂಬ ಆತಂಕದಲ್ಲಿ ಪಿಳಿಪಿಳಿ ಕಣ್ಣುಬಿಡುತ್ತಾ ನಡುಗಿದಳು. ತನ್ನ ಪ್ರಿಯಕರನಿಗೇನಾಯ್ತೋ ಎಂದು ಅನುಕಂಪವನ್ನೂ ತೋರುತ್ತಿದ್ದಾಳೆ. ಆತಂಕದಿಂದ ದೇಹ ನಡುಗುವಾಗ ಇನ್ನೊಬ್ಬರ ಬಗ್ಗೆ ಅನುಕಂಪ ತೋರುವುದು ಕಷ್ಟದ ಕೆಲಸ. ಭಾಸನು ಅವೆರಡನ್ನೂ ಒಬ್ಬಳಲ್ಲೇ ಕಲ್ಪಿಸಿ ಚಿತ್ರಿಸಿದ್ದಾನೆ. ಮೊಗದಲ್ಲಿ ಗಾಬರಿ-ಕುತೂಹಲ-ದುಃಖ-ಅನುಕಂಪ ಇವೆಲ್ಲವನ್ನೂ ಧ್ವನಿಸುವ ಚಂಚಲ ಕಣ್ಣುಗಳು. ನಡುಗುವ ತನು.ಜಿಂಕೆ ಬಾಣದ ಪೆಟ್ಟು ಬಿದ್ದು ಓಡಲು ಸಿದ್ಧವಾಗಿರುವ ದೇಹ, ಕ್ಷಣಕ್ಕೊಮ್ಮೆ ಅತ್ತಿತ್ತ ಧಾವಿಸುವ...

ಪದಶಕ್ತಿ ೪೨

🏹*ಪದಶಕ್ತಿ* ---೪೨🌄 *ಪುಣ್ಯಜನ* _ಈ ಪದ ಕೇಳಿದ ಕ್ಷಣವೇ ನಮ್ಮ ಮನದಲ್ಲಿ ಮೂಡುವ ಭಾವ ಸತ್ಕಾರ್ಯ ಮಾಡಿ ಪುಣ್ಯ ಸಂಪಾದಿಸಿದವರು ಅಂತ. ಆದರೆ ಸಂಸ್ಕೃತದಲ್ಲಿ ಮುಖ್ಯ ಅರ್ಥವಿರುವುದು ಪಾಪಿ ಎಂದು. ರಾಕ್ಷಸರ ಪಾಪಕೃತ್ಯಗಳಿಂದಾಗಿ ಹಿಂಸೆಯಿಂದಾಗಿ ಅವರಿಗೆ ಈ ಹೆಸರು ಬಂದಿದೆ. ಇದು ಒಂದು ರೀತಿಯಲ್ಲಿ ವ್ಯತಿರೇಕ ಹೆಸರು. ನಮ್ಮ ದೈನಂದಿನ ವ್ಯವಹಾರದಲ್ಲಿ ಯಾರಿಗಾದರೂ ಹಾಸ್ಯ ಮಾಡುವಾಗ ಸೋಮಾರಿಯಾದರೆ ಅವನು ಭಾರೀ ಕೆಲಸಗಾರ ಎಂದೋ ಅಥವಾ ಹೆಚ್ಚು ತಿನ್ನುವನಾದರೆ ಅವನಿಗೆ ದಿನವೂ ದ್ವಾದಶಿ ಎನ್ನುವಂತೆ ರಾಕ್ಷಸರಿಗೆ ಈ ಪರ್ಯಾಯಪದಬಳಕೆಯಲ್ಲಿದೆ._ _ಯಕ್ಷ ಜನ್ಮವು ಸಿಗುವುದು ಬಹಳ ಪುಣ್ಯಸಂಪಾದನೆಯಿಂದ. ಅವರು ಸದಾ ಸುಖಲೋಲುಪರು. ಮನುಷ್ಯರಿಗಿಂತ ಶ್ರೇಷ್ಠ ಜನ್ಮವದು. ಹಾಗಾಗಿ ಅವರಿಗೂ ಪುಣ್ಯಜನ ಎಂಬ ಪರ್ಯಾಯ ಇದೆ. *ಪಯೋಧರೈಃ ಪುಣ್ಯಜನಾಂಗನಾನಾಂ* ಎಂದು ಕಾಳಿದಾಸ ತನ್ನ ರಘುವಂಶದಲ್ಲಿ ಯಕ್ಷಾಂಗನೆಯರ ಪಯೋಧರಗಳತ್ತ ಕಣ್ಣು ನೆಟ್ಟಿದ್ದಾನೆ. ಯಕ್ಷರೂ ಕೆಲವೊಮ್ಮೆ ಉದ್ಧಟತನದ ಕೆಲಸ ಮಾಡುವುದುಂಟು.‌ಅಂತಹ ಸಂದರ್ಭದಲ್ಲಿ ರಾಕ್ಷಸರಂತೆ ಅವರಿಗೂ ವಿರುದ್ಧಾರ್ಥಕವಾಗಿ ಬಳಸಬಹುದು._ _ಇನ್ನು ಸಹಜವಾದ ಅರ್ಥ ಒಳ್ಳೆಯ ವ್ಯಕ್ತಿ ಎಂದು. ಅವರು ಪುಣ್ಯವಂತರಪ್ಪಾ ಎಂದು ನಾವು ಆಡುನುಡಿಯಲ್ಲಿ ಹೇಳುವೆವು. ಅಂತಹ ಪ್ರಯೋಗವೂ ಇದೆ._ _ಸಂಸ್ಕೃತದ ಸೊಗಸೇ ಅದು. ಪದಗಳು ಯಾವ ಸಂದರ್ಭದಲ್ಲಿ ಬಳಕೆಯಾಗಿವೆ ಎಂಬುದನ್ನು ಗಮನಿಸಿ ಅರ್ಥವನ್ನು ನಿರ್ಣಯಿಸಬೇಕು. ಹಾಗಿಲ್ಲದೆ ಸುಮ್ಮನೆ ಬಳಕೆಯ ...

ರಾಮಾಯಣ ೧೭೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೧🏝📖      *ಮಿಥಿಲಾಧಿಪತಿಂ ಶೂರಂ ಜನಕಂ ಸತ್ಯವಿಕ್ರಮಮ್ | ಪೂರ್ವ ಸಂಬಂಧಿನಂ ಜ್ಞಾತ್ವಾ ತತಃ ಪೂರ್ವಂ ಬ್ರವೀಮಿ ತೇ || ತಥಾ ಕಾಶೀಪತಿಂ ಸ್ನಿಗ್ಧಂ ಸತತಂ ಪ್ರಿಯವಾದಿನಮ್ | ತಥಾ ಕೇಕಯರಾಜಾನಂ  ವೃದ್ಧಂ ಪರಮಧಾರ್ಮಿಕಮ್ | ಅಂಗೇಶ್ವರಂ ಮಹಾಭಾಗಂ ರೋಮಪಾದಂ ಸುಸಸ್ಕೃತಮ್ | ತಥಾ ಕೋಸಲರಾಜಾನಂ ಭಾನುಮಂತಂ ಸುಸತ್ಕೃತಮ್ | ಮಗಧಾಧಿಪತಿಂ ಶೂರಂ ಸರ್ವಶಾಸ್ತ್ರವಿಶಾರದಮ್ || ಪ್ರಾಚೀನಾನ್ಸಿಂಧುಸೌವೀರಾನ್ಸೌರಾಷ್ಟ್ರೇಯಾಂಶ್ಚ ಪಾರ್ಥಿವಾನ್ | ದಾಕ್ಷಿಣಾತ್ಯಾನ್ನರೇಂದ್ರಾಶ್ಚ ಸಮಸ್ತಾನಾನಯಸ್ವ ಹ ||* _ವಸಿಷ್ಠರು ಸುಮಂತ್ರನಿಗೆ ಆಮಮತ್ರಣದ ಜವಾಬ್ದಾರಿ ನೀಡುತ್ತಿದ್ದಾರೆ. ಮೊದಲಿಗೆ ವೇದ-ವೇದಾಂಗ ನಿಷ್ಣಾತನೂ- ಸಕಲಶಾಸ್ತ್ರ ಪಾರಂಗತನೂ-ಮಹಾಪರಾಕ್ರಮಿಯೂ-ಶೂರನೂ ಆದ ದೂರದ ಹಿಂದಿನ ಸಂಬಂಧಿಯೂ ಆದ ಜನಕನನ್ನು ಆಹ್ವಾನಿಸು. ಇಲ್ಲಿ ಜನಕನಿಗೆ ಸಂಬಂಧ ಇದ್ದದ್ದು ಹಿಂದೆ ಯಾವುದೋ ಕಾಲದಲ್ಲಿ. ಈ ಕಾಲದಲ್ಲಿ ಮೊದಲು ಅವನನ್ನೇ ಕರೆಯಲು ಕಾರಣ ಅವನ ಯೋಗ್ಯತೆ. ಜೀವನ್ಮುಕ್ತನೆಂಬ ಹೆಗ್ಗಳಿಕೆ, ಶಾಸ್ತ್ರ-ಶಸ್ತ್ರ ಎರಡರಲ್ಲೂ ಪ್ರಾವೀಣ್ಯ, ವೇದಾದಿಗಳಲ್ಲೂ ಅಪಾರ ಜ್ಞಾನ ಇವೇ ಮುಖ್ಯ ಕಾರಣ. ಯಾವುದಾದರೂ ಕರ್ಮಕ್ಕೆ ಆಮಂತ್ರಣ ಕೊಡುವಾಗ ಮೊದಲು ಅತ್ಯಂತ ಯೋಗ್ಯರು ಯಾರು ಅವರಿಗೆ ಕರೆಹೇಳಬೇಕು. ಅನಂತರ ಉಳಿದವರಿಗೆ.ಜನಕನಷ್ಟು ಯೋಗ್ಯ ವ್ಯಕ್ತಿ ಹುಡುಕಿದರೂ ಸಿಗುವುದು ಕಷ್ಟ. ಅನಂತರ ಆ ಕಾಲದ ಪ್ರಸಿದ್ಧ...

ಧರ್ಮಾಚರಣೆ ೧೨೩

ಧರ್ಮಾಚರಣೆ-೧೨೩ ವಸೇತ್ಸ ನರಕೇ ಘೋರೇ ದಿನಾನಿ ಪಶುರೋಮಭಿಃ| ಸಂಮಿತಾನಿ ದುರಾಚಾರೋ ಯೋ ಹಂತ್ಯವಿಧನಾಪಶೂನ್ || ಯಾಜ್ಞವಲ್ಕ್ಯ ಸ್ಮೃತಿ|| ಮಾಂಸವೇ ಆಹಾರಪದ್ಧತಿಯಾಗಿದ್ದರೂ ದೇವರಿಗೆ ನಿವೇದಿಸಿಯೇ ತಿನ್ನಬೇಕು. ಸಸ್ಯಾಹಾರಿಗಳಿಗೆ ತಿನ್ನುವುದೇ ನಿಷಿದ್ಧ. ದೇವ-ಅತಿಥಿ ಉದ್ದೇಶವಿಲ್ಲದೆ ಸುಮ್ಮನೆ ತಿನ್ನಬೇಕೆಂದು ಯಾರು ಪಶುಗಳನ್ನು ನಿರ್ದಯವಾಗಿ ಕೊಲ್ಲುವನೋ ಅಂತಹವರು ಪಶುಗಳ ರೋಮದಷ್ಟು ದಿನಗಳ ಕಾಲ ಘೋರ ನರಕದಲ್ಲಿ ಇರುತ್ತಾರೆ. ಹಾಗಾಗಿ ಕೊಲ್ಲುವ ಮುನ್ನ ನರಕದ ಎಚ್ಚರ ಸದಾ ಇರಬೇಕು‌. ನಮ್ಮ ಆಹಾರಪದ್ಧತಿ, ನಾವು ಹೇಗೆ ಬೇಕಾದರೂ ಯಾವಾಗ ಬೇಕಾದರೂ ತಿನ್ನುತ್ತೇವೆ ಎಂಬುದು ಯಾವ ಆಹಾರಕ್ಕೂ ಸಲ್ಲದ ವಿಷಯ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೨

ಧರ್ಮಾಚರಣೆ-೧೨೨ ಪಂಚಪಿಂಡಾನನುದ್ಧೃತ್ಯ ನ ಸ್ನಾಯಾತ್ಪರವಾರಿಷು | ಸ್ನಾಯಾನ್ನದೀ ದೇವಖಾತ ಹ್ರದಪ್ರಸಶ್ರವಣೇಷು ಚ || ಯಾಜ್ಞವಲ್ಕ್ಯ ಸ್ಮೃತಿ|| ಹೊರಗೆ ಎಲ್ಲಾದರೂ ಸ್ನಾನ ಮಾಡುವಾಗ ಐದು ಮುಷ್ಟಿಯಷ್ಟು ಮಣ್ಣು ಅಥವಾ ಕೆಸರು ತೆಗೆದು ನೀರನ್ನು ಸ್ವಚ್ಛ ಮಾಡಿ ಸ್ನಾನ ಮಾಡಬೇಕು. ಇಲ್ಲದಿದ್ದರೆ ಅಲರ್ಜಿ, ಕೀಟಬಾಧೆ ಮೊದಲಾದವು ತಲೆದೋರೀತು. ನದಿಗಳಲ್ಲಿ, ಸಮುದ್ರಕ್ಕೆ ನದಿ ಸೇರುವಾಗಿನ ಹಿನ್ನೀರು, ಜಲಾಶಯ, ಸರೋವರಗಳಲ್ಲಿ ಈ ನಿಯಮ ಇಲ್ಲ. ಆದರೆ ಉಳಿದೆಡೆ ಈ ವಿಷಯವು ಸಾಕಷ್ಟು ಉಪಕಾರಿ ಎನಿಸುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೧

ಧರ್ಮಾಚರಣೆ-೧೨೧ ಮಾತೃಪಿತ್ರತಿಥಿ ಭ್ರಾತೃಜಾಮಿಸಂಬಂಧಿ ಮಾತುಲೈಃ | ವೃದ್ಧಬಾಲಾತುರಾಚಾರ್ಯ ವೈದ್ಯಸಂಶ್ರಿತಬಾಂಧವೈ || ಋತ್ವಿಕ್ಪುರೋಹಿತಾಪತ್ಯ ಭಾರ್ಯಾದಾಸ ಸನಾಭಿಭಿಃ | ವಿವಾದಂ ವರ್ಜಯಿತ್ವಾ ತು ಸರ್ವಾಂಲ್ಲೋಕಾಜ್ಜಯೇದ್ಗೃಹೀ || ಯಾಜ್ಞವಲ್ಕ್ಯ ಸ್ಮೃತಿ|| ತಂದೆ-ತಾಯಂದಿರು, ಮನೆಗೆ ಬಂದ ಅತಿಥಿ, ಸಹೋದರ-ಸಹೋದರಿಯರು, ಸಂಬಂಧಿಕರು, ಮಾವ, ಹಿರಿಯರು, ಸಣ್ಣ ಮಕ್ಕಳು, ಅಶಕ್ತರು, ಗುರುಗಳು, ವೈದ್ಯರು, ನಮ್ಮನ್ನು ಆಶ್ರಯಿಸಿದ ಬಂಧುಗಳು, ಪುರೋಹಿತರು, ಸ್ವಂತ ಮಕ್ಕಳು, ಪತ್ನಿ, ಸೇವಕರು ಹಾಗೂ ಕುಟುಂಬದವರ ಜೊತೆಗೆ ಜಗಳ ಅಥವಾ ಕಲಹ ಮಾಡದಿದ್ದರೆ ಅಂತಹ ವ್ಯಕ್ತಿಗಳು ಹದಿನಾಲ್ಕು ಲೋಕಗಳನ್ನು ಗೆದ್ದು ಮೋಕ್ಷ ಪಡೆಯುವರು. ನಮ್ಮ ಬದುಕು ಕ್ಷಣಿಕ. ಹಾಗಾಗಿ ಇದ್ದಷ್ಟು ಕಾಲ ಯಾರೊಡನೆಯೂ ಕಲಹ ಮಾಡದೇ ಸಂತೋಷದಿಂದ ಸಮಾಧಾನದಿಂದ ಕಳೆಯವಲ್ಲಿ ತಾತ್ಪರ್ಯವಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೦

ಧರ್ಮಾಚರಣೆ-೧೨೦ ಕರ್ಮಣಾ ಮನಸಾ ವಾಚಾ ಯತ್ನಾದ್ಧರ್ಮಂ ಸಮಾಚರೇತ್ | ಅಸ್ವರ್ಗ್ಯಂ ಲೋಕವಿದ್ವಿಷ್ಟಂ ಧರ್ಮ್ಯಮಪ್ಯಾಚರೇನ್ನ ತು || ಯಾಜ್ಞವಲ್ಕ್ಯ ಸ್ಮೃತಿ|| ನಮ್ಮ ಕಾರ್ಯಗಳಲ್ಲಿ, ನಮ್ಮ ಯೋಜನೆಗಳಲ್ಲಿ, ನಮ್ಮ ಮಾತುಗಳಲ್ಲಿ ಪ್ರಯತ್ನಪೂರ್ವಕವಾಗಿ ಧರ್ಮವನ್ನು ಅಳವಡಿಸಿಕೊಳ್ಳಬೇಕು. ಉ: ಇನ್ನೊಬ್ಬರಿಗೆ ಹಿಂಸೆ ಆಗುವ ಕರ್ಮ ಬಿಡುವುದು, ಯಾರನ್ನೂ ನಿಂದಿಸದಿರುವುದು, ಯಾರ ಬಗ್ಗೆಯೂ ಕೆಟ್ಟ ವಿಚಾರ ಮಾಡದಿರುವುದು ಮೊದಲಾದವು. ಸ್ವರ್ಗಾದಿ ಕಾರಣವಲ್ಲದ ಹಾಗೂ ಲೋಕನಿಂದ್ಯ ಕರ್ಮಗಳನ್ನು ಧರ್ಮದ ಹೆಸರಿನಲ್ಲಿ ಎಂದಿಗೂ ಮಾಡಬಾರದು. ಉ: ಗುರು ಹಿರಿಯರ ಅಪಮಾನ, ಬಹಿರಂಗವಾಗಿ ಮಲಮೂತ್ರ ವಿಸರ್ಜನೆ ಮೊದಲಾದವು. ಧರ್ಮದ ತಿರುಳನ್ನು ತಿಳಿದೇ ನಮ್ಮ ಕರ್ಮಗಳನ್ನು ರೂಢಿಸಿಕೊಳ್ಳಬೇಕೇ ಹೊರತು ಯಾರೋ ಮಾಡುತ್ತಿದ್ದಾರೆಂದು ಅವರ ಅಂಧಾನುಕರಣೆ ಮಾಡಿದರೆ ಅದು ಎಂದಿಗೂ ಶ್ರೇಯಸ್ಕರವಾಗದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೯

ಧರ್ಮಾಚರಣೆ-೧೧೯ ನ ಸಂಶಯಂ ಪ್ರಪದ್ಯೇತ ನಾಕಸ್ಮಾದಪ್ರಿಯಂ ವದೇತ್ | ನಾಹಿತಂ ನಾನೃತಂ ಚೈವ ನ ಸ್ತೇನಃ ಸ್ಯಾನ್ನ ವಾರ್ಧುಷೀ || ಯಾಜ್ಞವಲ್ಕ್ಯ ಸ್ಮೃತಿ||  ಒಂದು ವಿಷಯ ತುಂಬಾ ಪ್ರಾಮಾಣಿಕವಾಗಿ ಇದೆ ಎಂದಾದಾಗ ಮತ್ತೆ ಮತ್ತೆ ಸಂಶಯ ವ್ಯಕ್ತಪಡಿಸಬಾರದು.‌ ಉ: ಮಗುವಿನ ನಿಷ್ಕಲ್ಮಶ ನಗು. ಕಾರಣವಿಲ್ಲದೆ ಕಠೋರವಾದ ಮತ್ತು ಸಿಟ್ಟುಬರಿಸುವಂತಹ ಮಾತುಗಳನ್ನು ಎಂದಿಗೂ ಆಡಬಾರದು. ಒಬ್ಬರಿಗೆ ಪ್ರಿಯವಾಗದ ಹಾಗೂ ಅಸತ್ಯವಾದ ಮಾತು ಎಂದಿಗೂ ಸಲ್ಲದು. ಪರರ ಧನ-ವಸ್ತು-ಪುಸ್ತಕ ಏನೇ ಸಣ್ಣದಿರಲಿ ದೊಡ್ಡದಿರಲಿ ಕಳ್ಳತನ ಮಾಡಬಾರದು. ಒಂದು ರೂಪಾಯಿ ಕದ್ದರೂ ಚಿನ್ನ ಕದ್ದರೂ ಪಾಪ ಕಳ್ಳತನಕ್ಕೇ ಹೊರತು ವಸ್ತುವನ್ನು ಆಧರಿಸಿ ಅಲ್ಲ. ಇನ್ನೊಬ್ಬರಿಗೆ ಧನ ನೀಡಿ ಅದರ ಬಡ್ಡಿಯಿಂದ ಜೀವನ ಮಾಡಬಾರದು. ಬದುಕಲು ಯಾವ ಮಾರ್ಗವೂ ಇಲ್ಲದಿದ್ದಾಗ ಮಾತ್ರ ಬಡ್ಡಿಯ ಜೀವನ ಅಂದರೆ ವಾರ್ಧುಷಿ ಆಗಬಹುದು. ಉಳಿದ ಸಮಯದಲ್ಲಿ ಅಂತಹ ಬದುಕು ರಕ್ತ ಹೀರಿ ನಡೆಸುವ ಬದುಕಾಗುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೮

ಧರ್ಮಾಚರಣೆ-೧೧೮ ರಾಜಾಂತೇವಾಸಿಯಾಜ್ಯೇಭ್ಯಃ ಸೀದನ್ನಿಚ್ಛೇದ್ಧನಂ ಕ್ಷುಧಾ | ದಂಭಿಹೈತುಕಪಾಖಂಡಿ ಬಕವೃಂತ್ತೀಂಶ್ಚ ವರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ|| ನಮ್ಮ ಉದ್ಯೋಗಕ್ಕೆ ತಕ್ಕುದಾದ ವೇತನವನ್ನು ಆಳುವ ಸರ್ಕಾರ ಅಥವಾ ಸಂಸ್ಥೆಯಿಂದ, ನಮ್ಮ ಶಿಷ್ಯರಿಂದ, ಪ್ರಾಮಾಣಿಕವಾಗಿ ಧನಿಕನಾದವನಿಂದ ಬಯಸಬಹುದು. ಜನರ ಮನರಂಜನೆಗಾಗಿ ಏನನ್ನು ಬೇಕಾದರೂ ಮಾಡುವ ದಂಭಿಯ ಬಳಿ, ಸಂಸ್ಕೃತಿಯ ಬಗ್ಗೆ ಸಂಶಯ ಹುಟ್ಟಿಸುವ ಹೇತುಕನ ಬಳಿ, ಸಮಾಜ ಒಪ್ಪದ ವರ್ತನೆ ತೋರುವ ಪಾಖಂಡಿಯ ಬಳಿ, ಕಪಟ ವೇಷ ಧರಿಸಿ ಮೋಸ ಎಸಗುವ ವ್ಯಕ್ತಿಯ ಬಳಿ ಎಂದಿಗೂ ಬಯಸಬಾರದು. ಉಪವಾಸ ಇದ್ದರೂ ತೊಂದರೆ ಇಲ್ಲ, ಇಂತಹವರ ಬಳಿ ಸ್ವೀಕರಿಸಿದರೆ ನಮ್ಮ ಪುಣ್ಯವೆಲ್ಲ ಹ್ರಾಸವಾದೀತು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೭

ಧರ್ಮಾಚರಣೆ-೧೧೭ ಕುಶೂಲಕುಂಭೀಧಾನ್ಯೋ ವಾ ತ್ರ್ಯಾಹಿಕೋsಶ್ವಸ್ತನೋಪಿ ವಾ | ಜೀವೇದ್ವಾಪಿಶಿಲೋಂಛೇನ              ಶ್ರೇಯಾನೇಷಃ ಪರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ|| ಕುಟುಂಬಕ್ಕೆ ಹನ್ನೆರಡು ದಿನ ಸಾಲುವಷ್ಟು ಧನಸಂಗ್ರಹ ಕುಶೂಲ, ಆರು ದಿನಕ್ಕೆ ಸಾಕಾಗುವಷ್ಟು ಕುಂಭ, ಮೂರು ದಿನಕ್ಕೆ ಸಾಕಾಗುವಷ್ಟು ತ್ರ್ಯಾಹಿಕ, ಒಂದು ದಿನಕ್ಕೂ ಸಾಕಾಗದಿದ್ದರೆ ಅಶ್ವಸ್ತನ, ರೈತರು ಬೀಳಿಸಿದ ತೆನೆ ಆರಿಸಿಕೊಂಡು ಬದುಕುವುದು ಶೀಲ, ಬಿದ್ದ ಕಾಳು ಆರಿಸಿಕೊಂಡು ಬದುಕುವುದು ಉಂಛ. ಇವುಗಳಲ್ಲಿ ಮುಂದುಮುಂದಿನದು ಅತ್ಯಂತ ಶ್ರೇಷ್ಠ. ಇವುಗಳ ಒಟ್ಟು ತಾತ್ಪರ್ಯ ಬದುಕಲು ಬೇಕಾಗುವಷ್ಟು ಸಂಪತ್ತಿನ ಸಂಗ್ರಹ ಶ್ರೇಷ್ಠ. ಮಕ್ಕಳು ಮೊಮ್ಮಕ್ಕಳು ಊರಿನವರೆಲ್ಲಾ ತಿನ್ನುವಷ್ಟು ಸಂಗ್ರಹ ಮಾಡುವ ಧನದ ದುರಾಸೆ ಎಂದಿಗೂ ವರ್ಜ್ಯ. ಒಂದು ವರ್ಷಕ್ಕೆ ಮೀರುವಷ್ಟು ಸಂಪತ್ತು ಶೇಖರಿಸಿದರೆ ಸೋಮಯಾಗ ಮಾಡಬೇಕೆನ್ನುತ್ತದೆ ಸ್ಮೃತಿ. ಹಾಗಾಗಿ ಧನಸಂಗ್ರಹದ ಬುದ್ಧಿಗಿಂತ ದಾನಬುದ್ಧಿ ಸದಾ ಶ್ರೇಯಸ್ಕರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ರಾಮಾಯಣ ೧೭೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೦🏝📖  *ಯಥೋಕ್ತಂ ತತ್ಸುವಿಹಿತಂ ನ ಕಿಂಚಿತ್ಪರಿಹೀಯತೇ | ಯಥೋಕ್ತಂ ತತ್ಕರಿಷ್ಯಾಮೋ ನ ಕಿಂಚಿತ್ಪರಿಹಾಸ್ಯತೇ ||* _ವಸಿಷ್ಠರು ಎಲ್ಲಾ ಮಂತ್ರಿವರ್ಗದವರಿಗೆ ಹಾಗೂ ಪ್ರಮುಖರಿಗೆ ಆದೇಶ ನೀಡಿದಾಗ ಅವರ ಮಾತನ್ನು ಅಂಗೀಕರಿಸಿದ ಪರಿ. ಯಜ್ಞಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ನಿಯುಕ್ತರಾದವರನ್ನು ಕಾಲಕಾಲಕ್ಕೆ ಸರಿಯಾಗಿ ಉಪಚರಿಸಬೇಕು. ಅನಾಹೂತರಾಗಿ ಅಂದರೆ ಕರೆಯದೇ ಬಂದವರನ್ನೂ ದಕ್ಷಿಣೆ ಹಾಗೂ ಮೃಷ್ಟಾನ್ನಭೋಜನಗಳಿಂದ ತೃಪ್ತಿಪಡಿಸಬೇಕು. ಎಲ್ಲಾ ಕಾರ್ಯಗಳನ್ನೂ ಸುವಿಹಿತವಾಗಿ ಅಂದರೆ ಕ್ರಮಪ್ರಕಾರವಾಗಿ ಯಾವುದೂ ಲೋಪವಾಗದಂತೆ ಮುಖ್ಯವಾಗಿ ಯಾರೊಬ್ಬರಿಗೂ ಅಸಮಾಧಾನ ಆಗದ ರೀತಿಯಲ್ಲಿ ನಿರ್ವಹಿಸಬೇಕೆಂದು ವಸಿಷ್ಠರು ನುಡಿದಾಗ ಉಳಿದವರಾಡುವ ಮಾತು- ಯಾವ ಲೋಪ ಉಂಟಾಗದಂತೆ ನೋಡಿಕೊಳ್ಳುವೆವು. ಯಾರೊಡನೆಯೂ ಪರಿಹಾಸವನ್ನಾಗಲೀ, ವಿನೋದವನ್ನಾಗಲೀ, ಯಾವ ವಿಷಯದಲ್ಲಿ ಆದರೂ ಉದಾಸೀನಮನೋಭಾವವನ್ನಾಗಲೀ ತಾಳದೆ ಶ್ರದ್ಧೆಯಿಂದ ಮಾಡುತ್ತೇವೆ. ಒಂದು ದೊಡ್ಡ ಸಮ್ಮೇಳನ, ಕಾರ್ಯಕ್ರಮ ನಡೆಯುವಾಗ ಯಾರೋ ಒಂದಷ್ಟು ತಿಂದರು, ಇನ್ನಾರೋ ಉಪವಾಸ ಬಿದ್ದರು ಎಂದಾಗುವುದು ಸಹಜ. ನಮ್ಮ ಸಾಂಸ್ಕೃತಿಕ ಅಥವಾ ಸಾಹಿತ್ಯಿಕ ಅಥವಾ ರಾಜಕೀಯ ಕಾರ್ಯಕ್ರಮಗಳಿಗೆ ಒಂದು ನಿಶ್ಚಿತ ಉದ್ದೇಶ, ಶ್ರದ್ಧೆ, ಲೋಕಕಲ್ಯಾಣ ಯಾವುದೂ ಇರುವುದಿಲ್ಲ. ಕೀರ್ತಿ, ಪ್ರತಿಷ್ಠೆ ಆಯೋಜಕರಿಗೆ ಮುಖ್ಯವಾದರೆ ಹಿಂಬಾಲಕರಿಗೆ ಅಥವಾ ಸಹಕಾರಿಗಳಿಗೆ ಸಿಕ್ಕಿದಷ್ಟು ದೋಚುವ ಹಂಬ...

ಅನುವಾದಿತ ಕಥೆ ೩೨

अनूदित कथावलिः -३२ श्रेष्ठिनः विवेकः  एकस्मिन् नगरे एकः प्रसिद्धः श्रेष्ठी आसीत् । सः बहुवत्सरेभ्यः आपणे व्यापारं करोति स्म। तस्य आपणे सर्वदा जनसम्मर्दः । तन्नगरस्थः एकः युवा वाणिज्यविद्यां अधीत्य स्नातको भूत्वा आपणम्  आरब्धुं निश्चितवान् । श्रेष्ठिनः आपणे जनसम्मर्दं दृष्ट्वा तेनैवं चिन्तितम् - यदि अहमत्रैव समीपे आपणं स्थापयामि तदा ममापि यशः लभेदिति।  एवं विचार्य अचिरादेव तदापणम् अभितः एव स्वस्य  आपणं स्थापयित्वा व्यापारः आरब्धः तेन  । सप्ताहानन्तरं तेन चिन्तितम्- तस्मिन् आपणे जनाः यथापूर्वं गच्छन्ति, अत्र तु न्यूनाः इति। तथा च मया   को$पि उपायः अनुसरणीयः इति। अध्ययन काले गुरुणा सः उपदिष्टः एवम्   'वस्तूनां मौल्यस्य न्यूनताकरणेन प्रथमं व्यापारस्य अभिवृद्धिः तथा इतरैः  स्पर्धा योजयितुं शक्यते इति। तदनुसृत्य श्रेष्ठिनः आपणे दशरूप्यकपरिमितस्य नारिकेलस्य अष्टरूप्यकाणि निर्धारितवान् । श्रेष्ठी अपि अष्टरूप्यकाणि स्थापितवान् नारिकेलस्य। ततः चिन्तितः युवा न आयः न व्ययः इति नीतिः प्रदर्शितुकामः तस्य मूलरूप्यकाणि नाम षड्रूप्यकाणि निश्चितवान्।...

ರಾಮಾಯಣ ೧೬೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೯🏝📖 *ತತೋಬ್ರವೀದ್ವಿಜಾನ್ನ್ವೃದ್ಧಾನ್ಯಜ್ಞಕರ್ಮಸು ನಿಷ್ಠಿತಾನ್ | ಸ್ಥಾಪತ್ಯೇ ನಿಷ್ಠಿತಾಂಶ್ಚೈವ ವೃದ್ಧಾನ್ಪರಮಧಾರ್ಮಿಕಾನ್ || ಕರ್ಮಾಂತಿಕಾನ್ ಶಿಲ್ಪಕರಾನ್ವರ್ಧಕೀನ್ಖನಕಾನಪಿ | ಗಣಕಾನ್ ಶಿಲ್ಪಿನಶ್ಚೈವ ತಥೈವ ನಟನರ್ತಕಾನ್ ||* _ವಸಿಷ್ಠರಲ್ಲಿ ನಿವೇದಿಸಿಕೊಂಡ ನಂತರ ರಾಜನು ಅನೇಕ ಜನರನ್ನು ಆಮಂತ್ರಿಸಿದನು‌. ಬ್ರಹ್ಮನನ್ನು ತಿಳಿದ ಜ್ಞಾನಿಗಳನ್ನೂ, ಅನೇಕ ಯಜ್ಞಗಳಲ್ಲಿ ಪಾಲ್ಗೊಂಡ ಅನುಭವಿಗಳನ್ನೂ, ಅಶ್ವಮೇಧ ಶ್ರೌತ ಪ್ರಕ್ರಿಯೆಗನುಸಾರ ನಡೆಯುವ ಯಾಗವಾದ್ದರಿಂದ ಶ್ರೌತಕರ್ಮಪರಿಣತರನ್ನೂ, ಯಜ್ಞಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇರೆ ಬೇರೆ ದ್ರವ್ಯಗಳನ್ನು ತಂದುಹಾಕುವ ವ್ಯಾಪಾರೀ ವರ್ಗದವರನ್ನೂ, ಪರಮ ಧಾರ್ಮಿಕರನ್ನೂ, ಯಜ್ಞದ ಕೊನೆಯವರೆಗೂ ಅನೇಕ ಕೆಲಸಗಳನ್ನು ಮಾಡುವ ಕಾರ್ಮಿಕರನ್ನೂ, ಲಕ್ಷಾಂತರ ಸಂಖ್ಯೆಯ ಇಟ್ಟಿಗೆಗಳನ್ನು ನಿರ್ಮಿಸಲು ಶಿಲ್ಪಿಗಳನ್ನೂ, ಯಜ್ಞದಲ್ಲಿ ಬಳಸುವ ಬೇರೆ ಬೇರೆ ಬಗೆಯ ಮರದ-ಮಣ್ಣಿನ-ಲೋಹದ ಪಾತ್ರೆಗಳನ್ನು ನಿರ್ಮಿಸಲು ಬಡಗಿಗಳನ್ನೂ, ಒಂದೊಂದು ಕರ್ಮಕ್ಕೆ ಸರಿಯಾಗಿ ಮುಹೂರ್ತ ನೋಡಲು ಬಹುಶ್ರುತರಾದ ಜ್ಯೋತಿಷಿಗಳನ್ನೂ, ಚಿತ್ರಗಳನ್ನು ಬರೆದು ಜನರನ್ನು ರಂಜಿಸಲು ಚಿತ್ರಕಾರರನ್ನೂ, ಅಭಿನಯ ನರ್ತನ ಗಾನದಲ್ಲಿ ಪರಿಣತರಾದ ಸಾವಿರಾರು ನಟರನ್ನೂ ಕರೆದು ಯಜ್ಞದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ನಿವೇದಿಸಿಕೊಂಡನು‌._ _ಒಂದು ಯಜ್ಞ ಎಂದರೆ ಸಾಮಾನ್ಯ ಕಾರ್ಯವಲ್ಲ. ಸಮಾಜ...

ಚಾರುದತ್ತ ೨೦

👳‍♀ಚಾರುದತ್ತ ಬೆಳಕು- ೨೦👳‍♀ *ಕೃತ್ವಾ ನಿಶಾಯಾಂ ವಚನೀಯದೋಷಂ ನಿದ್ರಾಂ ಚ ಹಿತ್ವಾ ತಿಮಿರಂ ಭಯಂ ಚ | ಸ ಏವ ಸೂರ್ಯೋದಯಮಂದವೀರ್ಯಃ ಶನೈರ್ದಿವಾಚಂದ್ರ ಇವಾಸ್ಮಿ ಭೀತಃ ||* _ಚಾರುದತ್ತನ ಮನೆಯಲ್ಲಿ ಕಳ್ಳತನ ಮಾಡಲು ಹೋದ ಇವನು ವಿದೂಷಕನ ಮೂರ್ಖತನದಿಂದ ಚಿನ್ನದ ನಾಣ್ಯದ ಚೀಲವನ್ನೇ ಪಡೆದು ಹೊರಬಂದಿದ್ದಾನೆ. ಕಳ್ಳರಿಗೆ ರಾತ್ರಿ ಅಪಾರ ಧೈರ್ಯ. ಅವರ ಸಾಹಸವೆಲ್ಲವೂ ಕತ್ತಲೆಯಲ್ಲಿ ಮಾತ್ರ. ಬೆಳಕು ಹರಿದಾಗ ಪುಕ್ಕಲರು ಅವರು. ಅದನ್ನೇ ಕವಿ ವರ್ಣಿಸಿದ್ದಾನೆ. ರಾತ್ರಿ ಹೊತ್ತು ನಿದ್ರೆ ಬಿಟ್ಟು ಕತ್ತಲೆಯ ಭಯವನ್ನು ತ್ಯಜಿಸಿ ಕಳ್ಳತನವನ್ನೇನೋ ಸುಲಭವಾಗಿ ಮಾಡಿದೆನು. ಆದರೆ ಬೆಳಕು  ಹರಿಯುತ್ತಿದ್ದಂತೆ ಹೆದರಿಕೆ ಉಂಟಾಗುತ್ತಿದೆ. ಸೂರ್ಯನ ಕಿರಣಗಳು ವಾತಾವರಣವನ್ನು ಪ್ರವೇಶಿಸಿದಂತೆ ಶಕ್ತಿಯೆಲ್ಲ ಉಡುಗಿಹೋಗಿ ನಿಧಾನಕ್ಕೆ ಹೆಜ್ಜೆ ಇಡುತ್ತಾ ಹಗಲಿನ ಚಂದ್ರನಂತೆ ಸುಮ್ಮನೆ ಹೆಸರಿಗೆ ಮಾತ್ರ ಇದ್ದೇನೆ. ನನ್ನದಾದ ಧೈರ್ಯ ಸಾಹಸ ಎಲ್ಲವೂ ಕ್ಷೀಣವಾಗಿದೆ. ಯಾರಾದರೂ ಗುರುತಿಸಿದರೆ ಎಂಬ ಭಯವೂ ಕಾಡುತ್ತಿದೆ. ಹಗಲಿನಲ್ಲಿ ಚಂದ್ರನು ಎಷ್ಟು ದೊಡ್ಡದಾಗಿ ಇದ್ದರೂ ಸೂರ್ಯನ ಕಾಂತಿಯ ಎದುರು ಅವನು ನಿಸ್ತೇಜ. ಅಂತೆಯೇ ಮೋಸದಿಂದ ಕಾರ್ಯ ಕತ್ತಲಿನಲ್ಲಿ ಅಥವಾ ಉಳಿದವರಿಗೆ ತಿಳಿಯದಂತೆ ಎಷ್ಟು ಧೈರ್ಯದಿಂದ ಮಾಡಿದರೂ ಎಲ್ಲರೆದುರಿಗೆ ಬೆಳಕಿನಲ್ಲಿ ಏನಾದರೂ ಮಾಡಬೇಕೆಂದರೆ ಅದಕ್ಕೆ ಪ್ರಾಮಾಣಿಕವಾಗಿ ಧೈರ್ಯ ಬೇಕಾಗುತ್ತದೆ. ಮೋಸ-ವಂಚನೆಗೆ ಬೆಳಕು ಅಥವಾ ಜನಸಮೂಹ ಎಂದಿಗೂ ವಿರುದ್...

ಪದಶಕ್ತಿ ೪೧

🏹*ಪದಶಕ್ತಿ* ---೪೧🌄 *ರಾಕ್ಷಸ* _ರಕ್ಷ ಪಾಲನೇ ಎಂಬ ಧಾತುವಿನಿಂದ ಹುಟ್ಟಿದ ಪದ. ರಕ್ಷತಿ ಅಸ್ಮಾತ್ ಇವನಿಂದ ಅಥವಾ ಇವರಿಂದ ರಕ್ಷಿಸಲ್ಪಟ್ಟಿದೆ ಎಂಬ ಅರ್ಥದಲ್ಲಿ ರಾಕ್ಷಸ ಶಬ್ದ ಹುಟ್ಟಿರುವಂತಹದು._ _ಬ್ರಹ್ಮನು ಸೃಷ್ಟಿ ಕಾಲದಲ್ಲಿ ಅತ್ಯಂತ ಕೋಪ ಮತ್ತು ಹಸಿವಿನಿಂದ ತತ್ತರಿಸಲು ಹುಟ್ಟಿಕೊಂಡವರು ಹೇತಿ ಮತ್ತು ಪ್ರಹೇತಿ ಎಂಬ ಈರ್ವರು ರಾಕ್ಷಸರು. ರಕ್ಷಣೆಯ ಭಾರವನ್ನು ಹೊತ್ತವರು ರಾಕ್ಷಸರಾದರು. ಪ್ರಹೇತಿ ತಪಸ್ಸಿಗೆ ಹೊರಟನು. ಹೇತಿಯು ಕಾಲನ ಮಗಳಾದ ಭಯೆಯನ್ನು ಕೈಹಿಡಿದು ಅದೇ ಕಾಯಕ ಕೈಗೊಂಡನು._ _ಅತಿಮಾನುಷ ಪ್ರವೃತ್ತಿಯುಳ್ಳವರನ್ನು ರಾಕ್ಷಸರೆಂದು ಕರೆಯುವ ರೂಢಿ ಇದೆ. ಯಾರಾದರೂ ಅತಿಯಾಗಿ ತಿನ್ನುತ್ತಿದ್ದರೆ, ನಿದ್ರಿಸುತ್ತಿದ್ದರೆ ಹಾಗೂ ಇಡೀ ದಿನ ಕೆಲಸ ಮಾಡುತ್ತಿದ್ದರೆ ಅವರನ್ನು ರಾಕ್ಷಸರೆಂದು ಕರೆಯುವುದು ರಾಕ್ಷಸರ ಅತಿಶಯ ಸಾಮರ್ಥ್ಯ ಸೂಚಿಸಲು. ಸಾಮಾನ್ಯರಿಗಿಂತ ಹೆಚ್ಚಿನ ಸಾಮರ್ಥ್ಯ ರಾಕ್ಷಸರ ವೈಶಿಷ್ಟ್ಯ._ _ಇದೇ ಶಬ್ದಕ್ಕೆ ಙೀಷ್ ಪ್ರತ್ಯಯ ಬಂದರೆ ಹೆಣ್ಣು ರಾಕ್ಷಸಿ ಎಂದು ಅಗುತ್ತದೆ._ _ವಿವಾಹದಲ್ಲಿ ಒಂದು ಬಗೆ ರಾಕ್ಷಸ ವಿವಾಹ. ಕನ್ಯೆಯ ಬಂಧುಗಳನ್ನು ಹೊಡೆದು ಬಡಿದು ಅಳುತ್ತಿರುವ ಕನ್ಯೆಯನ್ನು ಹೊತ್ತೊಯ್ದು ವಿವಾಹವಾದರೆ ಅದು ರಾಕ್ಷಸ ವಿವಾಹ._ _ನವನಂದರ ಮಂತ್ರಿಯು ತನ್ನ ಕೆಲಸದಿಂದಾಗಿ ರಾಕ್ಷಸ ಎಂದು ಹೆಸರು ಸಂಪಾದಿಸಿದ್ದನು. ಅಮಾತ್ಯ ಎಂದರೆ ಮಂತ್ರಿ. ಅಮಾತ್ಯರಾಕ್ಷಸ ಎಂದು ಅವನಿಗೆ ಜನರಿತ್ತ ಬಿರುದು._ _ರಾಕ್ಷಸರಿಗೆ ಸಂಬಂಧಿಸಿದ ಎ...

ರಾಮಾಯಣ ೧೬೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೮🏝📖      *ಪುನಃ ಪ್ರಾಪ್ತೇ ವಸಂತೇ ತು ಪೂರ್ಣಃ ಸಂವತ್ಸರೋಭವತ್ | ಪ್ರಸವಾರ್ಥಂ ಗತೋ ಯಷ್ಟುಂ ಹಯಮೇಧೇನ ವೀರ್ಯವಾನ್ ||* _ಮೊದಲು ನಿಶ್ಚಯಿಸಿದಂತೆ ದಶರಥನು ವಸಂತಪೂರ್ಣಿಮೆಯ ದಿನ ಸಾಂಗ್ರಹಣೇಷ್ಟಿಯನ್ನು ಮಾಡಿ ಅಶ್ವಮೇಧಯಾಗಕ್ಕೆ ದೀಕ್ಷೆ ತೊಟ್ಟನು. ನಾಲ್ಕು ವರ್ಣದವರೊಡನೆ ನಾಲ್ಕೂ ದಿಕ್ಕಿಗೂ ಅಶ್ವವು ಪರ್ಯಟನೆ ಹೊರಟಿತು. ಇತ್ತ ರಾಜನು ದೀಕ್ಷೆ ಸ್ವೀಕರಿಸಿದ ನಂತರ ಅನೇಕ ವಿಧಿನಿಯಮಗಳನ್ನು ಅನುಸರಿಸಲಾರಂಭಿಸಿದನು. ಒಮ್ಮೆ ಪ್ರಾರ್ಥನೆ ನಡೆಸಿ ಕಂಕಣ ತೊಟ್ಟರೆ ಯಜ್ಞ ಮುಗಿಯುವ ತನಕ ಬ್ರಹ್ಮಚರ್ಯ ಪಾಲಿಸಬೇಕು. ಕಾಯಾ-ವಾಚಾ-ಮನಸಾ ಸ್ತ್ರೀ ಸಂಪರ್ಕ ನಿಷಿದ್ಧ. ದ್ಯೂತ-ಬೇಟೆ-ಪಾನ-ನಿಷಿದ್ಧ ಆಹಾರ ಸೇವನೆ-ಹಗಲು ನಿದ್ರೆ- ಧಾರಾಳ ನಿದ್ರೆ- ಆಲಸ್ಯ- ಹರಟೆ ಮೊದಲಾದ ವ್ಯರ್ಥಾಲಾಪ- ಪರನಿಂದೆ-ಹಿಂಸೆ-ಅನಿಯಮಿತ ಆಹಾರ ಇವೆಲ್ಲವೂ ನಿಷಿದ್ಧ. ಹಾಗಾಗಿ ಯಜ್ಞದ ಸಂಕಲ್ಪ ಮಾಡಿದರೆ ಸಾಲದು. ಅದಕ್ಕೆ ತಕ್ಕುದಾದ ವ್ರತಾನುಷ್ಠಾನವೂ ಬೇಕು. ಹಾಗಿದ್ದರೆ ಮಾತ್ರ ಯಜ್ಞದ ಫಲ ಸಿಗಬಹುದು. ಶ್ರೌತ ಪ್ರಕ್ರಿಯೆಯಂತೆ ಮೊದಲು ಸಾಂಗ್ರಹಣೇಷ್ಟಿ ನಡೆಸಿ ಅನಂತರ ಸಾವಿತ್ರ್ಯಾದಿ ಕರ್ಮಗಳನ್ನು ನಿಯತವಾಗಿ ಮಾಡುತ್ತಿದ್ದನು. ಹದಿಮೂರು ಅಮಾವಾಸ್ಯೆ ಕಳೆದು ಅಂದರೆ ವಸಂತದ ಅಮಾವಾಸ್ಯೆಯೂ ಸೇರಿ ಫಾಲ್ಗುಣದ ಅಮಾವಾಸ್ಯೆ ಕಳೆದು ಪುನಃ ವಸಂತ ಉದಯಿಸಿದಾಗ ಅಶ್ವಮೇಧದ ಪ್ರಕ್ರಿಯೆ ಆರಂಭಿಸಿದನು. ಅಶ್ವಮೇಧವೆಂದರೆ ಕೆಲವರು...

ರಾಮಾಯಣ ೧೬೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೭🏝📖     *ಶಕ್ಯಃ ಪ್ರಾಪ್ತುಮಯಂ ಯಜ್ಞಃ ಸರ್ವೇಣಾಪಿ ಮಹೀಕ್ಷಿತಾ | ನಾಪರಾಧೋ ಭವೆತ್ಕಷ್ಟೋ ಯದ್ಯಸ್ಮಿನ್ಕ್ರತುಸತ್ತಮೇ || ಛಿದ್ರಂ ಹಿ ಮೃಗಯಂತೇತ್ರ ವಿದ್ವಾಂಸೋ ಬ್ರಹ್ಮರಾಕ್ಷಸಾಃ | ನಿಹತಸ್ಯ ಹಿ ಯಜ್ಞಸ್ಯ ಸದ್ಯಃ ಕರ್ತಾ ವಿನಶ್ಯತಿ ||* _ಮಹತ್ತಾದ ಕರ್ಮವನ್ನು ಮಾಡಲು ಹೊರಟವರಿಗೆ ಇರಬೇಕಾದ ಎಚ್ಚರವನ್ನು ವಿವರಿಸುತ್ತಿದ್ದಾನೆ ಕವಿ. ಪ್ರಪಂಚದ ಯಾವ ರಾಜರು ಬೇಕಾದರೂ ಅಶ್ವಮೇಧ ನಡೆಸಿ ಫಲವನ್ನುಣ್ಣಬಹುದು. ಆದರೆ ಯಜ್ಞದಲ್ಲಿ ಸ್ವಲ್ಪ ದೋಷ ಉಂಟಾದರೂ ಮಹತ್ತಾದ ಅನರ್ಥಕ್ಕೆ ಕಾರಣವಾಗುತ್ತದೆ. ಸರಿಯಾದ ಯಜ್ಞದ ಆಚರಣೆಯು ಹೇಗೆ ಸತ್ಫಲವನ್ನು ಕರುಣಿಸುವುದೋ ಅಂತೆಯೇ ತಪ್ಪು ಆಚರಣೆಯು ದುಷ್ಫಲವನ್ನು ನಿಶ್ಚಿತವಾಗಿ ಕರುಣಿಸುವುದು. ವಿದ್ವಾಂಸರು ಇನ್ನೊಬ್ಬರಿಗೆ ತಮ್ಮ ವಿದ್ಯೆಯನ್ನು ಬೋಧಿಸದಿದ್ದರೆ ಮುಂದೆ ಬ್ರಹ್ಮರಾಕ್ಷಸರಾಗಿ ಹುಟ್ಟುವರು. ಅಂತಹ ಬ್ರಹ್ಮರಾಕ್ಷಸರು ಯಜ್ಞದಲ್ಲಿ ಉಂಟಾಗುವ ನ್ಯೂನ-ಅತಿರೇಕಗಳನ್ನು ಹುಡುಕಿ ಯಜ್ಞವನ್ನು ನಾಶ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.  ಇದರ ಫಲವಾಗಿ ಯಜಮಾನನೂ ನಾಶ ಹೊಂದುವನು. ಹಾಗಾಗಿ ಸ್ವಲ್ಪವೂ ದೋಷವುಂಟಾಗದಂತೆ ಅಚ್ಚುಕಟ್ಟಾಗಿ ಶಾಸ್ತ್ರಸಮ್ಮತವಾಗಿ ಯಜ್ಞ ನಡೆಸಲು ಪ್ರಯತ್ನಿಸಿ. ನಿಮಗೆ ಇಂತಹ ಯಜ್ಞ ಆಯೋಜಿಸಿ ಸಾಕಷ್ಟು ಅನುಭವ ಇರುವ ಕಾರಣ ಹೆಚ್ಚು ಹೇಳಲಾರೆ ಎಂಬುದು ದಶರಥನ ಮಾತು_ _ಕೈಯಲ್ಲಿ ಧನವಿದೆ ಅಥವಾ ಅಧಿಕಾರವಿದೆ ಅಥವಾ ...

ಪದಶಕ್ತಿ ೪೦

🏹*ಪದಶಕ್ತಿ* ---೪೦🌄 *ಔರ್ವ* _ಸಮುದ್ರದಲ್ಲಿ ಅಡಗಿರುವ ಬೆಂಕಿಯ ಹೆಸರು. ಉರ್ವನಿಂದ ಹುಟ್ಟಿದ್ದು ಅಥವಾ ಉರ್ವನ ಮಗ. ಚ್ಯವನ ಮುನಿಗೆ ಮನುವಿನ ಮಗಳಾದ ಆರುಷಿಯಲ್ಲಿ ಜನಿಸಿದವನು ಉರ್ವ ಅಥವಾ ಊರ್ವ. ಭೃಗು ಗೋತ್ರದವರು ಅತ್ಯಂತ ಕೋಪಿಷ್ಠರೆಂಬುದು ಪ್ರಸಿದ್ಧ ವಿಷಯ. ತನ್ನ ಕೋಪವನ್ನೇ ಸಮುದ್ರದಲ್ಲಿ ಅಡಗಿಸಿದ ಇವನು ನಿಜಕ್ಕೂ ಅದ್ಭುತ ವ್ಯಕ್ತಿ._ _ಗಂಡಸರನ್ನು ಕ್ಷತ್ರಿಯರು ಹುಡುಕಿ ಹುಡುಕಿ ಕೊಲ್ಲಲು ತಾಯಿಯ ತೊಡೆಯಿಂದ ಹುಟ್ಟಿದ ಕಾರಣ ಇವನಿಗೆ ಊರುಜ ಅಥವಾ ಉರ್ವ ಎಂಬ ಹೆಸರು ಬಂತು. ಇವನು ಲೋಕವನ್ನು ನಾಶಮಾಡುವ ಇಚ್ಛೆಯಿಂದ ಭಯಂಕರ ತಪಸ್ಸಿನಲ್ಲಿ ತೊಡಗುತ್ತಾನೆ. ಆಗ ಅವನ ಪಿತೃಗಳು ಪ್ರತ್ಯಕ್ಷರಾಗಿ ಈ ಕೋಪವನ್ನು ಬಿಡುವಂತೆ ಆದೇಶಿಸುತ್ತಾರೆ. ಅವನು ಬಿಡಲು ಇಚ್ಛಿಸಿದರೂ ನನ್ನ ಸ್ವರೂಪವೇ ಆಗಿರುವ ಈ ಕೋಪವನ್ನು ಬಿಡುವುದಾದರೂ ಹೇಗೆಂದು ಅವರನ್ನೇ ಪ್ರಶ್ನಿಸಿದಾಗ ಸಮುದ್ರವು ಇಂತಹ ಬೆಂಕಿಯಂತಹ ಕೋಪವನ್ನು ತನ್ನೊಳಗೆ ಸೇರಿಸಿಕೊಂಡು ತಣಿಸಬಲ್ಲದು ಹಾಗಾಗಿ ಅದರಲ್ಲಿ ಇಡು ಎಂದಾಗ ಅವರ ಮಾತಿನಂತೆ ತಾನು ಲೋಕನಾಶಕ್ಕೆಂದು ತಪದ ಮೂಲಕ ಸಂಪಾದಿಸಿದ ಕೋಪವನ್ನು ಸಾಗರದಲ್ಲಿ ಇಟ್ಟನು. ಹೀಗೆ ನೀರಲ್ಲೂ ಬೆಂಕಿ ಉಂಟಾಯಿತು._ _ಜಮದಗ್ನಿ ಮತ್ತು ವತ್ಸ ಗೋತ್ರದವರ ಪ್ರವರದಲ್ಲೂ ಈ ಔರ್ವನು ಸೇರಿದ್ದಾನೆ._ ಸಂಸ್ಕೃತ ಸಾಹಿತ್ಯದ ಮೇರುಕೃತಿಯಾದ  ಭಾಗವತದಲ್ಲಿ ಇವನ ಉಲ್ಲೇಖ ಇದೆ.  *तापत्यमथ- वासिष्ठमौर्वं चाख्यानमुत्तमम्”* ಇವನ ಆಖ್ಯಾನವು ಪುಣ್ಯದಾಯ...

ರಾಮಾಯಣ ೧೬೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೭🏝📖      *ಸರ್ವಥಾ ಪ್ರಾಪ್ಸ್ಯಸೇ ಪುತ್ರಾಂಶ್ಚತುರೋಮಿತವಿಕ್ರಮಾನ್ | ಯಸ್ಯ ತೇ ಧಾರ್ಮಿಕೀ ಬುದ್ಧಿರಿಯಂ ಪುತ್ರಾರ್ಥಮಾಗತಾ ||* _ವಸಂತಕಾಲದಲ್ಲಿ ಯಜ್ಞ ಸಿದ್ಧತೆ ಆರಂಭಿಸಿದ ರಾಜನು ವಸಿಷ್ಠಪ್ರಮುಖರನ್ನು ಕರೆಯಿಸಿ ಅವರ ಅನುಮತಿ ಬೇಡಿದನು. ಅವರೆಲ್ಲರೂ ಋಷ್ಯಶೃಂಗನ ನೇತೃತ್ವದಲ್ಲಿ ಯಜ್ಞ ಮಾಡಲು ಉತ್ಸುಕರಾಗಿ ರಾಜನಿಗೆ ಹೀಗೆಂದರು. ರಾಜನೇ, ನಿಸ್ಸಂಶಯವಾಗಿ ಮಕ್ಕಳಿಗಾಗಿ ಧರ್ಮಕಾರ್ಯದಲ್ಲಿ ತೊಡಗಿರುವ ನೀನು ನಾಲ್ಕು ಪರಾಕ್ರಮಿಗಳನ್ನು  ಪುತ್ರರನ್ನಾಗಿ  ಪಡೆಯುವೆ. ಇನ್ನೂ ಯಜ್ಞ ಆರಂಭವಾಗಿಲ್ಲ. ಆಗಲೇ ಋಷಿಗಳು ನುಡಿದದ್ದು ಹೇಗೆಂದರೆ ಭೂತ-ಭವಿತವ್ಯಗಳ ಸ್ಪಷ್ಟ ಮಾಹಿತಿ ತಪಶ್ಶಕ್ತಿಯ ಪ್ರಭಾವದಿಂದಾಗಿ ಅವರಿಗೆ ಬಂದಿರುತ್ತದೆ. ಅದಕ್ಕಾಗಿಯೇ ಭವಭೂತಿಯ ಈ ಮಾತು_ *ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ*  _ಸಾಮಾನ್ಯರಾದ ನಮ್ಮ ಮಾತು ಅರ್ಥವನ್ನು ಅಂದರೆ ವಿಷಯವನ್ನು ಅನುಸರಿಸಿದರೆ ಋಷಿಗಳು ಹಾಗೂ ದೇವತೆಗಳ ಮಾತು ಅರ್ಥವನ್ನು ಅನುಸರಿಸುತ್ತದೆ. ಅವರಾಡುವ ಮಾತಿನಂತೆ ಲೋಕದಲ್ಲಿ ಘಟನೆಗಳು ಜರುಗುತ್ತವೆ. ಇಲ್ಲೂ ಎರಡು ವರ್ಷದ ನಂತರ ಕ್ರಮವಾಗಿ ಹುಟ್ಟುವ ರಾಮಾದಿಗಳ ಜನ್ಮವನ್ನು ಈಗಲೇ ಅರಿತಿದ್ದರು ಈ ಮಹಿಮರು._ *ಸಮರ್ಥಾಧಿಷ್ಠಿತಶ್ಚಾಶ್ವಃ ಸೋಪಾಧ್ಯಾಯೋ ವಿಮುಚ್ಯತಾಮ್*  _ರಾಜನು ಆ ಕೂಡಲೇ ಯಜ್ಞಾಶ್ವವನ್ನು ಜೊತೆಗೆ ಯೋಧರನ್ನೂ  ಉಪಾಧ್ಯಾಯರನ್ನೂ ಕಳಿ...

ರಾಮಾಯಣ ೧೬೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೬🏝📖         *ತತಃ ಕಾಲೇ ಬಹುತಿಥೇ ಕಸ್ಮಿಂಶ್ಚಿತ್ಸುಮನೋಹರೇ | ವಸಂತೇ ಸಮನುಪ್ರಾಪ್ತೇ ರಾಜ್ಞೋ ಯಷ್ಟುಂ ಮನೋಭವತ್* _ದಶರಥನ ಕೋರಿಕೆ ಮನ್ನಿಸಿ ಋಷ್ಯಶೃಂಗನು ಶಾಂತೆಯೊಡನೆ ಅಯೋಧ್ಯೆಗೆ ಬಂದು ಬಹಳ ಕಾಲವಾಗಿದೆ. ಅನಂತರ ಒಂದು ದಿನ ವಸಂತ ಋತು ಪ್ರಾರಂಭವಾಗುತ್ತಿರುವುದನ್ನು ಕಂಡು ರಾಜನು ಯಜ್ಞ ಮಾಡಲು ನಿಶ್ಚಯಿಸಿದನು. ಪುರೋಹಿತರು ಸಿಕ್ಕಿದರು ಅಥವಾ ನಮಗೆ ಅನುಕೂಲ ಇದೆಯೆಂದು ಕೂಡಲೇ ಯಜ್ಞ ಕರ್ಮಗಳನ್ನು ಮಾಡುವುದಲ್ಲ. ತಾರಾಬಲ ಅನುಕೂಲವಾಗಿದೆಯಾ, ಭೂಮಿಯಲ್ಲಿ ಅಗ್ನಿಯ ವಾಸ ಹಾಗೂ ಆಹುತಿ ಇದೆಯಾ, ಕೆಟ್ಟ ಯೋಗ-ಕರಣಗಳು ಇಲ್ಲದ ದಿನ ಇವುಗಳನ್ನೆಲ್ಲ ವಿಮರ್ಶಿಸಿ ಕರ್ಮದಲ್ಲಿ ತೊಡಗಬೇಕು. ಹಾಗಿಲ್ಲದೆ ವಿರಾಮದ ದಿನ, ಪುರೋಹಿತರು ಸಿಕ್ಕಿದ ದಿನ ಅಥವಾ ಮಳೆ ಇಲ್ಲದ ದಿನ ಎಂದೆಲ್ಲಾ ಯಜ್ಞದಲ್ಲಿ ತೊಡಗಿದರೆ ಅದು ಕೊಡುವ ಫಲವೂ ಅಷ್ಟೇ ಆಗಿರುತ್ತದೆ._*ಚೈತ್ರಾಂ ಪೌರ್ಣಮಾಸ್ಯಾಂ ಪ್ರಾತಃ ಅಶ್ವಮೇಧೇನ ಯಕ್ಷ್ಯೇ* _ಎಂದು ಶ್ರೌತ ಪ್ರಯೋಗವಿದೆ. ಹಾಗಾಗಿ ಅಶ್ವಮೇಧ ಮಾಡ ಹೊರಟ ದಶರಥನು ಅನುಕೂಲವಾದ ವಸಂತಕಾಲ ಬರಲು ಕಾದನು. ತನಗೆ ಸಂತಾನ ಬೇಗ ದೊರಕಬೇಕೆಂಬ ಬಯಕೆ ಇದ್ದರೂ ಕಾಲ ಅನುಕೂಲ ಆಗದೇ ಮುಂದಡಿ ಇಡುವ ಅವಿಮರ್ಶ ಬುದ್ಧಿ ಅವನದಾಗಿರಲಿಲ್ಲ._ *ತತಃ ಪ್ರಸಾದ್ಯ ಶಿರಸಾ ತಂ ವಿಪ್ರಂ ದೇವವರ್ಣಿನಮ್* _ಅನಂತರ ತನಗಿಂತ ವರ್ಷದಲ್ಲಿ ಅಥವಾ ಅಧಿಕಾರದಲ್ಲಿ ಬಹಳ ಕಿರಿಯನಾದರೂ ಜ್ಞಾನ-ಕರ್ಮಗಳಲ್...

ರಾಮಾಯಣ ೧೬೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೫🏝📖         *ತಾವನ್ಯೋನ್ಯಾಂಜಲಿಂ ಕೃತ್ವಾ ಸ್ನೇಹಾತ್ಸಂಶ್ಲಿಷ್ಯ ಚೋರಸಾ | ನನಂದತುರ್ದಶರಥೋ ರೋಮಪಾದಶ್ಚ ವೀರ್ಯವಾನ್ ||* _ಸಂತಾನಾರ್ಥಿಯಾಗಿ ಯಜ್ಞ, ತನ್ಮೂಲಕ ಸ್ವರ್ಗಕಾಮಿಯಾದ ದಶರಥನು ಮಂತ್ರಿಗಳ ಸಲಹೆಯಂತೆ ಅಂಗರಾಜ್ಯಕ್ಕೆ ಬಂದನು. ರೋಮಪಾದನ ಅಪ್ಪನು ಇವನಿಗೆ ಮಿತ್ರನಾಗಿದ್ದನು. ಬಹುಶಃ ದಶರಥನ ಬದುಕು ಬಹು ದೀರ್ಘಕಾಲ ಇದ್ದುದು ಇದಕ್ಕೆ ಕಾರಣ. ಮೂರು-ನಾಲ್ಕು ತಲೆಮಾರಿನ ರಾಜರುಗಳು ಅವನೊಡನೆ ಒಡನಾಟ ಹೊಂದಿದ್ದರು. ಅಪ್ಪನ ಕಾಲದ ನಂತರ ಮಗನೂ ದಶರಥನ ಜೊತೆ ಉತ್ತಮ ಸಂಬಂಧ ಹೊಂದಿದ್ದನು. ದಶರಥನ ಕೋರಿಕೆಯಂತೆ ರೋಮಪಾದನು ತನ್ನ ಅಳಿಯ ಋಷ್ಯಶೃಂಗನನ್ನು ಕಳುಹಿಸಿಕೊಡುವನು‌. ಅನಂತರ ದಶರಥನು ಹೊರಟುನಿಂತಾಗ ಅವರೀರ್ವರು ಪರಸ್ಪರ ಇನ್ನು ಯಾವಾಗ ಈ ಭೇಟಿಯೋ ಎಂಬಂತೆ ಗಾಢವಾಗಿ ಆಲಿಂಗಿಸಿಕೊಂಡರು. ಗಾಢವಾದ ಆಲಿಂಗನವು ಯಾವಾಗಲೂ ತುಂಬಾ ಪ್ರೀತಿಯ ಸಂಕೇತ. ಅದು ಗೆಳೆತನವಿರಲಿ, ವಾತ್ಸಲ್ಯವಿರಲಿ, ಪ್ರೇಮವಿರಲಿ, ಉದ್ವೇಗವಿರಲಿ ಆಲಿಂಗನವು ಆ ಕ್ಷಣದಲ್ಲಿ ಮನಸ್ಸಿಗೆ ಒಂದು ತೃಪ್ತಿಯನ್ನು ತಂದುಕೊಡುತ್ತದೆ.‌ ಪರಸ್ಪರ ಕೈ ಮುಗಿದರು. ವಸ್ತುತಃ ಇಲ್ಲಿ ದಶರಥನು ಬಹಳ ಹಿರಿಯ. ಆದರೂ ಸ್ನೇಹ ಸಂಬಂಧವು ವಯಸ್ಸಿನ ಅಂತರವನ್ನು ಅಭಿಮಾನವನ್ನು ತೊರೆದು ಪ್ರೀತಿ ಅನುರಣಿಸುವಂತೆ ಮಾಡುತ್ತದೆ. ಅವರು ಎಲ್ಲೋ ದೂರದಲ್ಲಿದ್ದರೂ ಅವರ ನಡುವಿದ್ದ ಆತ್ಮೀಯತೆಯು ಹತ್ತಿರದ ಸಂಬಂಧಿಗಳಂತಿತ್ತು. ಇದಕ್...

ರಾಮಾಯಣ ೧೬೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೪🏝📖        *ವವ್ರೇ ಪ್ರಸಾದಂ ವಿಪ್ರೇಂದ್ರಾತ್ಮಾ ವಿಪ್ರಂ ಮನ್ಯುರಾವಿಶೇತ್*  _ಋಷ್ಯಶೃಂಗನ ಆಗಮನವೇನೋ ಆಯಿತು. ಆದರೆ ತಂದೆ ಈ ಕೃತ್ಯದಿಂದ ಕೋಪಗೊಂಡರೆ ಮತ್ತೆ ರಾಜ್ಯದ ಗತಿಯೇನಾದೀತು! ಹೀಗೆ ಆಲೋಚಿಸಿದ ರೋಮಪಾದನು ಮೊದಲು ವಿಭಾಂಡಕನು ತನ್ನ ಮೇಲೆ ಕೋಪಿಸದಿರಲೆಂದು ಋಷ್ಯಶೃಂಗನ ಬಳಿ ಪ್ರಾರ್ಥಿಸಿದನು‌. ರಾಜನಾದವನು ತನ್ನ ಕಾರ್ಯ ಒಳಿತಿಗೇ ಮೀಸಲಾಗಿದ್ದರೂ ಮುಂದಿನ ಪರಿಣಾಮವನ್ನು ಚಿಂತಿಸಬೇಕು. ದೇಶಕ್ಕೆ ಒಳಿತಾಗುವುದೆಂದು ಒಮ್ಮೆಲೇ ಯಾವ ಕಾರ್ಯವನ್ನೂ ಮಾಡಬಾರದು. ಪರಿಸರ ಹಾನಿಕರ ಎಂದು ಏಕಾಏಕಿ ಪ್ಲಾಸ್ಟಿಕ್-ಪೆಟ್ರೋಲ್ ಮೊದಲಾದವನ್ನು ನಿಷೇಧಿಸಿದರೆ ಜನಜೀವನ ಅಸ್ತವ್ಯಸ್ತವಾದೀತು. ವಿಭಾಂಡಕನಿಗೆ ತಿಳಿಸದೇ ಮಗನನ್ನು ಕರೆದೊಯ್ದು ಮತ್ತೆ ಶಾಪಕ್ಕೊಳಗಾಗಿ ರಾಜ್ಯ ಬರದತ್ತ ಸಾಗಬೇಕೇ! ಹಾಗಾಗಿ ಮೊದಲು ತನ್ನ ಕಾರ್ಯಕ್ಕೆ ಕ್ಷಮೆಯಾಚಿಸಿ ತಂದೆ ಕೋಪಗೊಳ್ಳದಿರಲೆಂದು ಮಗನನ್ನು ಯಾಚಿಸಿದನು. ರಾಜನಾದರೂ ತಪಶ್ಶಕ್ತಿಯ ಎದುರು ನಿಸ್ಸಹಾಯಕ ಹಾಗೂ ವಿನೀತಭಾವ._ *ಅಂತಃಪುರಂ ಪ್ರವಿಶ್ಯಾಸ್ಮೈ ಕನ್ಯಾಂ ದತ್ವಾ ಯಥಾವಿಧಿ| ಶಾಂತಾಂ ಶಾಂತೇನ ಮನಸಾ ರಾಜಾ ಹರ್ಷಮವಾಪ ಸಃ||* _ರಾಜ್ಯದ ಕ್ಷಾಮ ನೀಗಿ ಲಕ್ಷಾಂತರ ಜನರ ಪಾಲಿಗೆ ಬೆಳಕಾದವನನ್ನು ಸತ್ಕರಿಸುವ ಪರಿ ಇದು. ಸಮಾಧಾನ ಚಿತ್ತದಿಂದ ಋಷ್ಯಶೃಂಗನನ್ನು ಅಂತಃಪುರಕ್ಕೆ ಕರೆದೊಯ್ದು ವಿಧಿವತ್ತಾಗಿ ತನ್ನ ಮಗಳನ್ನು ಧಾರೆಯೆರೆದು ಕೊಟ್ಟು ಆನಂ...

ರಾಮಾಯಣ ೧೬೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೩🏝📖       *ಗತಾಸು ತಾಸು ಸರ್ವಾಸು ಕಾಶ್ಯಪಸ್ಯಾತ್ಮಜೋ ದ್ವಿಜಃ | ಅಸ್ವಸ್ಥಹೃದಯಶ್ಚಾಸೀದ್ದುಃಖಾತ್ಸಂಪರಿವರ್ತತೇ ||* _ಋಷ್ಯಶೃಂಗನ ಆಶ್ರಮಕ್ಕೆ ಅವನನ್ನು ಕರೆದೊಯ್ಯಲು ನಗರದ ಗಣಿಕೆಯರು ಸಾಲಂಕೃತರಾಗಿ ಬಂದು ವಿಧವಿಧದ ಭಕ್ಷ್ಯ ಭೋಜ್ಯ ತಿನ್ನಿಸಿ ಮಧುರ ಮಾತುಗಳಿಂದ ಮನಸೆಳೆದು ವಿಭಾಂಡಕನ ಆಗಮನದ ಹೆದರಿಕೆಯಿಂದ ವ್ರತದ ನೆಪವೊಡ್ಡಿ ದೂರ ಹೋಗಿದ್ದಾರೆ. ಇತ್ತ ಋಷ್ಯಶೃಂಗನ ಮನವು ಅವರ ಸಾಮೀಪ್ಯವನ್ನು ಬಯಸುತ್ತಿದೆ. ಅವನ ಹೃದಯದ ಸ್ವಾಸ್ಥ್ಯ ಕದಡಿತು. ಇಷ್ಟು ದಿನ ಸ್ಥಿರವಾಗಿದ್ದ ಮನಸ್ಸು ಇಂದು ಅಲ್ಲೋಲಕಲ್ಲೋಲವಾಗಿದೆ. ಮನವು ವಾರಾಂಗನೆಯರ ರೂಪ-ಲಾವಣ್ಯ ಸ್ಮರಿಸಿ ಪರಿಭ್ರಮಿಸುತ್ತಿದೆ. ಅಲ್ಲಿರಲು ಸಾಧ್ಯವಾಗದೇ ಅವರನ್ನು ಹುಡುಕಿಕೊಂಡು ಹೊರಟನು ಜಿತೇಂದ್ರಿಯನು. ವಿಷಯಗಳ ಆಸಕ್ತಿಯು ನಮ್ಮನ್ನು ಮರುಳು ಮಾಡುವುದು ಹೀಗೆಯೇ. ಒಮ್ಮೆ ರುಚಿ ತೋರಿಸಿ ಅನಂತರ ಹತ್ತಿರದಲ್ಲಿ ಇಲ್ಲದಿದ್ದರೂ ಬೇಕೆಂಬ ಬಯಕೆ ಮೂಡಿ ಪಡೆಯಲು ಪ್ರಯತ್ನದಲ್ಲಿ ತೊಡಗುತ್ತದೆ. ಮನದ ಬಯಕೆಗೆ ಇಂದ್ರಿಯ ದೇಹ ಸಹಕರಿಸುತ್ತದೆ. ಅಷ್ಟು ದೀರ್ಘಕಾಲ ತಪಸ್ಸು ಮಾಡಿ ಕಲ್ಲಾಗಿದ್ದ ಋಷ್ಯಶೃಂಗನೇ ಕರಗಿದ ಮೇಲೆ ಸಾಮಾನ್ಯರ ಪಾಡೇನು!_ *ತತ್ರ ಚಾನೀಯಮಾನೇ ತು ವಿಪ್ರೇ ತಸ್ಮಿನ್ಮಹಾತ್ಮನಿ | ವವರ್ಷ ಸಹಸಾ ದೇವೋ ಜಗತ್ಪ್ರಹ್ಲಾದಯಂಸ್ತದಾ ||*  _ಅವರನ್ನು ಭೇಟಿಯಾದಾಗ ನಮ್ಮ ಆಶ್ರಮಕ್ಕೆ ತಾವು ಒಮ್ಮೆ ಬರಬೇಕು, ನಮ್ಮ ಸತ್...

ಧರ್ಮಾಚರಣೆ ೧೧೬

ಧರ್ಮಾಚರಣೆ-೧೧೬ ವಿದ್ಯಾಕರ್ಮವಯೋಬಂಧುವಿತ್ತೈರ್ಮಾನ್ಯಾ ಯಥಾಕ್ರಮಮ್ | ಏತೈಃ ಪ್ರಭೂತೈಃ ಶೂದ್ರೋಪಿ ವಾರ್ಧಕೇ ಮಾನಮರ್ಹತಿ || ಯಾಜ್ಞವಲ್ಕ್ಯ ಸ್ಮೃತಿ|| ಅಪಾರ ವಿದ್ಯೆ, ಸತ್ಕರ್ಮಾಚರಣೆ ಅಂದರೆ ಶಾಸ್ತ್ರ ಒಪ್ಪಿರುವ ಉತ್ತಮ ಕೆಲಸಗಳನ್ನು ಮಾಡುವುದು, ವಯಸ್ಸಿನಲ್ಲಿ ಹಿರಿಯರು, ಶ್ರೀಮಂತರನ್ನು ಕ್ರಮವಾಗಿ ವಂದಿಸಬೇಕು. ಮೊದಲು ವಿದ್ಯಾವಂತರನ್ನು ಅನಂತರ ಕರ್ಮಠರನ್ನೂ ಅನಂತರ ಹಿರಿಯರನ್ನೂ ಕೊನೆಯದಾಗಿ ಧನಿಕರನ್ನು ಗೌರವಿಸಬೇಕು. ಈ ಗುಣಗಳಿಂದ ಕೂಡಿದ ಶೂದ್ರನಾದರೂ ಸಹಿತ ಹಿರಿಯನಾಗಿದ್ದರೆ ಸನ್ಮಾನಕ್ಕೆ ಅರ್ಹನೇ ಸರಿ. ಗೌರವ ನೀಡುವುದು ಜಾತಿ-ಮತ-ಲಿಂಗಗಳನ್ನು ನೋಡಿ ಅಲ್ಲ. ಅವನೇನು ಶೂದ್ರ, ಅವನೇನು ಪುಳಿಚಾರು ಎಂದು ಯಾರನ್ನೂ ಕಡೆಗಣಿಸದೆ ಅವರ ವಿದ್ಯೆ ಮೊದಲಾದವನ್ನು ನೋಡಿಯೇ ಗೌರವ ನೀಡುವ ಪದ್ಧತಿಯನ್ನು ಘಂಟಾಘೋಷವಾಗಿ ಸಾರಿದೆ ನಮ್ಮ ಸನಾತನ ಸಂಸ್ಕೃತಿ. ಹಾಗಾಗಿಯೇ ಕೌಶಿಕನು ಬ್ರಾಹ್ಮಣನಾದರೂ ಧರ್ಮವ್ಯಾಧನಂತಹ ಯೋಗ್ಯನನ್ನು  ಗೌರವಿಸಿದ್ದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೫

ಧರ್ಮಾಚರಣೆ-೧೧೫ ಅತಿಥಿಂ ಶ್ರೋತ್ರಿಯಂ ತೃಪ್ತಮಾಸೀಮಾಂತಮನುವ್ರಜೇತ್ | ಅಹಃಶೇಷಂ ಸಮಾಸೀತ ಶಿಷ್ಟೈರಿಷ್ಟೈಶ್ಚ ಬಂಧುಭಿಃ ||  ಮನೆಗೆ ಇಂದು ಬರುವನೆಂದು ಹೇಳದೇ ಆಕಸ್ಮಿಕವಾಗಿ ಬರುವವರು ಅತಿಥಿ. ಅಂತಹ ಅತಿಥಿಯನ್ನು ಭೋಜನಾದಿಗಳಿಂದ ತೃಪ್ತಿಪಡಿಸಿ ಸೀಮೆಯ ಕೊನೆ ತನಕ ಬಿಟ್ಟುಬರಬೇಕು. ಮನೆಗೆ ಬಂದ ಅತಿಥಿಯ ಯೋಗ್ಯತೆಗನುಸಾರ ಮನೆಯ ಗಡಿ, ಗ್ರಾಮದ ಗಡಿ, ಊರಿನ ಗಡಿಯವರೆಗೆ ಬಿಟ್ಟು ಬರುವುದು ಕೇವಲ ಸಂಪ್ರದಾಯವಾಗಿರದೇ ಧರ್ಮಶಾಸ್ತ್ರಕ್ಕನುಸಾರವಾದ ಕರ್ಮವಾಗಿದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ಸ್ವಲ್ಪ ದೂರದ ತನಕ ಹೋಗಿ ಕಳುಹಿಸಿಕೊಡುವುದಿದೆ. ಜೈನರಲ್ಲಿ ಯತಿಗಳನ್ನು ಊರಿನ ಹೊರಭಾಗದ ತನಕ ಬಿಟ್ಟು ಬರುವುದಿದೆ. ಮನೆಗೆ ಬಂದ ಅತಿಥಿಯು ಸಾಕ್ಷಾತ್ ದೇವರೆಂದೇ ಭಾವಿಸಿ ಬೀಳ್ಕೊಡುವುದು ಅತ್ಯಂತ ಯೋಗ್ಯ ಪದ್ಧತಿ. ಅನಂತರ ಸಜ್ಜನರು-ಮಿತ್ರರು-ಬಂಧುಗಳೊಡನೆ ಭಗವಚ್ಚಿಂತನೆಯಲ್ಲಿ ಕಳೆಯಬೇಕು. ಅತಿಥಿ ಹೋದ ತಕ್ಷಣ ನಿದ್ರಿಸುವುದೋ, ನಿಂದಿಸುವುದೋ, ನಿಷಿದ್ಧ ಕಾರ್ಯ ಎಸಗುವುದೋ ಎಂದಿಗೂ ಸಲ್ಲದು.   ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೪

ಧರ್ಮಾಚರಣೆ-೧೧೪ ಅಧ್ವನೀನೋತಿಥಿರ್ಜ್ಞೇಯಃ ಶ್ರೋತ್ರಿಯೋ ವೇದಪಾರಗಃ | ಮಾನ್ಯಾವೇತೌ ಗೃಹಸ್ಥಸ್ಯ ಬ್ರಹ್ಮಲೋಕಮಭೀಪ್ಸತಃ || ಯಾಜ್ಞವಲ್ಕ್ಯ ಸ್ಮೃತಿ|| ದಾರಹೋಕರು ಯಾರೇ ಇರಲಿ ಅವರ ಬಳಲಿಕೆಯನ್ನು ನೀಗಿಸಲು ಗೃಹಸ್ಥನು ಪ್ರಯತ್ನಿಸಬೇಕು. ವೇದ-ಶಾಸ್ತ್ರ ಎರಡನ್ನೂ ಕಲಿತ ಶ್ರೋತ್ರಿಯನು ಮನೆಗೆ ಬಂದರೆ ಚ್ಯುತಿ ಬರದಂತೆ ಯಥಾವತ್ತಾಗಿ ಸತ್ಕರಿಸಬೇಕು. ತನ್ನ ಶಾಖೆಯ ವೇದ ಅಧ್ಯಯನ ಮಾಡಿದ ವೇದಪಾರಗನು ಮನೆಗೆ ಬಂದರೂ ಸತ್ಕರಿಸಬೇಕು. ಬ್ರಹ್ಮಲೋಕ ಬಯಸುವ ಅಥವಾ ಬ್ರಹ್ಮ ಚಿಂತನೆಯಲ್ಲಿ ತೊಡಗುವ ಗೃಹಸ್ಥನು ಈ ಮೂವರನ್ನು ತಪ್ಪದೆ ಆದರಿಸಬೇಕು. ಇವರು ಸತ್ಕಾರ ಪಡೆಯಲು ಅಥವಾ ಉಪಚರಿಸಲು ಅತ್ಯಂತ ಯೋಗ್ಯರು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೩

ಧರ್ಮಾಚರಣೆ-೧೧೩ ಪರಪಾಕರುಚಿರ್ನಸ್ಯಾದನಿಂದ್ಯಾಮಂತ್ರಣಾದೃತೇ | ವಾಕ್ಪಾಣಿಪಾದಚಾಪಲ್ಯಂ ವರ್ಜಯೇಚ್ಚಾತಿಭೋಜನಮ್ || ಯಾಜ್ಞವಲ್ಕ್ಯ ಸ್ಮೃತಿ||  ಇನ್ನೊಬ್ಬರ ಮನೆಯಲ್ಲಿ ಅಥವಾ ಕಾರ್ಯಕ್ರಮದಲ್ಲಿ ಭೋಜನ ಮಾಡುವುದಕ್ಕೆ ಭಕ್ಷ್ಯಗಳಿಗಾಗಿ ಆಸೆಪಡಬಾರದು. ಆದರೆ ಅನಿಂದ್ಯನ ಅಂದರೆ ಸದಾಚಾರ-ಸದ್ವಿಚಾರಗಳಿಂದ ಕೂಡಿದವನ ಆಮಂತ್ರಣ ಬಂದರೆ ಸ್ವೀಕರಿಸಬೇಕು. ಊಟದ  ಸಮಯದಲ್ಲಿ ಮಾತಿನ ಚಾಪಲ್ಯ ಅಂದರೆ ಅಸತ್ಯ ಹಾಗೂ ಅಸಭ್ಯ ಭಾಷಣ ಇವುಗಳನ್ನು ತ್ಯಜಿಸಬೇಕು. ಹಸ್ತಚಾಪಲ್ಯ ಅಂದರೆ ಕೈ ತೋರಿಸುವುದು, ಹೊಡೆಯುವುದು, ಮಂಡಿಗಳ ಮೇಲೆ ಹೊಡೆಯುವುದು ಮೊದಲಾದವನ್ನು ಬಿಡಬೇಕು. ಪಾದಚಾಪಲ್ಯ ಅಂದರೆ ಕಾಲು ಕುಣಿಸುವುದು, ಹಿರಿಯರ ಎದುರು ಚಾಚುವುದು, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಇತ್ಯಾದಿ ತ್ಯಜಿಸಬೇಕು. ಕಷ್ಟವಾದರೂ ಒಂದೊಂದಾಗಿ ರೂಢಿಸಿಕೊಂಡರೆ ಶ್ರೇಯಸ್ಸಂಪಾದನೆ ಉಂಟಾಗುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೨

ಧರ್ಮಾಚರಣೆ-೧೧೨ ಅತಿಥಿತ್ವೇ ತು ವರ್ಣಾನಾಂ ದೇಯಂ ಶಕ್ತ್ಯಾನುಪೂರ್ವಶಃ | ಅಪ್ರಣೋಡ್ಯೋತಿಥಿಃ ಸಾಯಮಪಿ ವಾಕ್ಸೂನೃತೋದಕೈಃ || ಯಾಜ್ಞವಲ್ಕ್ಯ ಸ್ಮೃತಿ|| ಮನೆಗೆ ಯಾವುದೇ ವರ್ಣದ ಅತಿಥಿ ಬಂದರೂ ಅವರರವರ ಕ್ರಮಕ್ಕನುಸಾರವಾಗಿ ಆದರಿಸಬೇಕು. ಅನ್ನಾದಿಗಳನ್ನು ನೀಡಬೇಕು. ನಮ್ಮ ಸನಾತನ ಪರಂಪರೆಯ ಉದಾರತೆಯನ್ನು ಇಲ್ಲಿ ಗಮನಿಸಬಹುದು. ಯಾವ ಜಾತಿ, ಮತ ಇದ್ದರೂ ಅದನ್ನು ನೋಡದೇ ಅತಿಥಿಯನ್ನು ದೇವರಂತೆ ಕಂಡು ಅವರ ಪದ್ಧತಿಗನುಸಾರ ಉಪಚರಿಸಬೇಕು. ಸಾಯಂಕಾಲ ಉಳಿಯಲು ಬಂದರೂ ಅವರಿಗೂ ಅನ್ನ ನೀಡಬೇಕು. ಒಂದು ವೇಳೆ ಉಪಚರಿಸಲು ಸಾಕಷ್ಟು ದ್ರವ್ಯ ಇಲ್ಲದಿದ್ದರೆ ಅಂತಹ ಸಮಯದಲ್ಲಿ ಸತ್ಯವೂ ಪ್ರಿಯವೂ ಆದ ಮಾತು, ಕುಳಿತುಕೊಳ್ಳಲು ಸ್ಥಳ, ನೀರು ಇಷ್ಟು ನೀಡಿಯಾದರೂ ಅತಿಥಿಯ ಪೂಜೆ ಮಾಡಬೇಕು. ಮನೆಗೆ ಬಂದವನನ್ನು ಖಾಲಿ ಕೈಯಲ್ಲಿ ಎಂದಿಗೂ ಕಳಿಸಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com  

ಧರ್ಮಾಚರಣೆ ೧೧೧

ಧರ್ಮಾಚರಣೆ-೧೧೧ ಆಪೋಶನೇನೋಪರಿಷ್ಟಾದಧಸ್ತಾದಶ್ನತಾ ತಥಾ | ಅನಗ್ನಮಮೃತಂ ಚೈವ ಕಾರ್ಯಮನ್ನಂ ದ್ವಿಜನ್ಮನಾ || ಯಾಜ್ಞವಲ್ಕ್ಯ ಸ್ಮೃತಿ|| ಭೋಜನದ ಪ್ರಾರಂಭದಲ್ಲಿ ಹಾಗೂ ಕೊನೆಯಲ್ಲಿ ಅಮೃತದ ಬಾಗಿಲನ್ನು ತೆರೆಯುತ್ತೇನೆ ಹಾಗೂ ಮುಚ್ಚುತ್ತೇನೆಂದು ಆಪೋಶನ ತೆಗೆದುಕೊಳ್ಳಬೇಕು. ಮೊದಲು ತೆಗೆದುಕೊಳ್ಳುವ ನೀರು ಅನ್ನವನ್ನು ಅನಗ್ನ ಅಂದರೆ ಸಂಸ್ಕಾರರಹಿತ ದೋಷವನ್ನು ನಿವಾರಿಸಿ, ಅನಂತರ ತೆಗೆದುಕೊಳ್ಳುವ ನೀರು ಅನ್ನವನ್ನು ಅಮೃತಸಮ ಮಾಡುತ್ತದೆ. ಹಾಗಾಗಿ ಉಪನೀತನಾದ ಪ್ರತಿಯೊಬ್ಬರೂ ಉಣ್ಣುವ ಮೊದಲು ಹಾಗೂ ನಂತರ ಎಲ್ಲಿದ್ದರೂ ಈ ನಿಯಮ ಪಾಲಿಸುವುದು ಆರೋಗ್ಯದ ಹಾಗೂ ಧರ್ಮದ ಆಚರಣೆಯ ದೃಷ್ಟಿಯಿಂದ ಉತ್ತಮ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೦

ಧರ್ಮಾಚರಣೆ-೧೧೦ ಬಾಲಸ್ವವಾಸಿನೀ ವೃದ್ಧ ಗರ್ಭಿಣ್ಯಾತುರ ಕನ್ಯಕಾಃ | ಸುಭೋಜ್ಯಾತಿಥಿ ಭೃತ್ಯಾಂಶ್ಚ ದಂಪತ್ಯೋಃ ಶೇಷಭೋಜನಮ್ || ಯಾಜ್ಞವಲ್ಕ್ಯ ಸ್ಮೃತಿ||  ಮನೆಯಲ್ಲಿ ಮೊದಲು ಸಣ್ಣ ಮಕ್ಕಳಿಗೆ ಅನಂತರ ಕನ್ಯೆ ವಿವಾಹಾನಂತರ ತಂದೆ ಮನೆಯಲ್ಲೇ ಉಳಿದಿದ್ದರೆ ಅವಳಿಗೆ, ಹಿರಿಯರಿಗೆ, ಗರ್ಭಿಣಿಯರಿಗೆ, ರೋಗಪೀಡಿತರಿಗೆ, ಸಣ್ಣ ಕುಮಾರಿಯರಿಗೆ, ಅತಿಥಿ ಬರುವನೆಂದು ಕ್ಷಣಕಾಲ ಕಾದು ಬಂದರೆ ಅವರಿಗೆ, ಸೇವಕರಿಗೆ ಉಣಬಡಿಸಿ ನಂತರ ಉಳಿದರೆ ಎಲ್ಲರ ತೃಪ್ತಿಯ ನಂತರ ತನ್ನ ಹಾಗೂ ಮಡದಿಯ ಹಸಿವನ್ನು ನೀಗಿಸಿಕೊಳ್ಳಬೇಕು. ಪುರಾಣದ, ಮಹಾಮಹಿಮರ ಅನೇಕ ದೃಷ್ಟಾಂತಗಳನ್ನು ನೋಡಿದಾಗ ಇದರ ಅರಿವಾಗುತ್ತದೆ. ಮೊದಲು ಜಗಕೆ ಉಣಿಸಿ ಅನಂತರ ತಾನುಣ್ಣುವುದು‌. ನಿತ್ಯವೂ ಈ ಕ್ರಮ ಅವಶ್ಯ ಮಾಡಬೇಕಾದುದು. ವಿಶೇಷ ಸಂದರ್ಭಗಳಲ್ಲಿ ವಿಹಿತವಾದುದು. ತನಗೆಂದು ಸವಿತಿನಿಸು ತೆಗೆದಿಟ್ಟು ಉಳಿದವರಿಗೆ ಸಾಮಾನ್ಯ ಅಡುಗೆಯ ವಿತರಣೆಯೂ ಸಲ್ಲದು. ಎಲ್ಲರೊಳಗೊಂದಾಗಿ ಎಲ್ಲರಲ್ಲೂ ಭಗವಂತನನ್ನು ಕಂಡವನೇ ಪಂಡಿತನೆನಿಸುವನು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೯

ಧರ್ಮಾಚರಣೆ=೧೦೯ ದೇವೇಭ್ಯಶ್ಚ ಹುತಾದನ್ನಾಚ್ಛೇಷಾದ್ಭೂತಬಲಿಂ ಹರೇತ್ | ಅನ್ನಂ ಭೂಮೌ ಶ್ವಚಾಂಡಾಲವಾಯಸೇಭ್ಯಶ್ಚ ನಿಕ್ಷಿಪೇತ್ || ಯಾಜ್ಞವಲ್ಕ್ಯ ಸ್ಮೃತಿ||  ಎರಡೂ ಹೊತ್ತು ಅಶಕ್ತನಾದರೆ ಗೃಹಸ್ಥನು ಒಂದು ಹೊತ್ತಾದರೂ  ವೈಶ್ವದೇವ ಮಾಡಬೇಕು. ಯಾವ ಬೆಂಕಿಯಲ್ಲಿ ಅನ್ನವನ್ನು ಬೇಯಿಸುವೆವೋ ಅದೇ ಅಗ್ನಿಯಲ್ಲಿ ವೈಶ್ವದೇವ ಮಾಡಬೇಕು. ಒಲೆ ಅಥವಾ ಅಗ್ಗಿಷ್ಟಿಕೆಯಲ್ಲಿ ಅನ್ನ ಮಾಡಿದರೆ ಮಾತ್ರ ಇದು ಆಗುವಂತಹದು. ವೈಶ್ವದೇವಕ್ಕೆಂದು ತೆಗೆದು ಅನಂತರ ಅನ್ನವನ್ನು ಮತ್ತೆ ಮೂರು ಪಾಲು ಮಾಡಿ ಒಂದು  ಪಾಲು ಭೂತಗಳಿಗೆ ಬಲಿಯೆಂದೂ, ಎರಡನೇ ಪಾಲನ್ನು ಶ್ವಾನ ಮೊದಲಾದವುಗಳಿಗೆ ಬಲಿಯೆಂದೂ, ಮತ್ತೊಂದು ಪಾಲನ್ನೂ ಪಿತೃಪ್ರೀತ್ಯರ್ಥ ನೀಡಿ ಅತಿಥಿ ಬರುವರೆಂದು ಕ್ಷಣಕಾಲ ಕಾದು ಅನಂತರ ಭುಂಜಿಸಬೇಕು. ಹೀಗೆ ಮಾಡಿದರೆ ಅದೇ ಯಜ್ಞವಾಗುವುದು. ಅಶ್ವಮೇಧಾದಿ ಮಹಾಯಜ್ಞಗಳ ಫಲವನ್ನೂ ಕೊಡುತ್ತದೆ. ವರ್ಷಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನಮ್ಮ ಜಿಹ್ವಾಚಾಪಲ್ಯ ತೀರಿಸುವಂತೆ ಇವುಗಳನ್ನೂ ಮಾಡುವುದು ಶ್ರೇಯಸ್ಕರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೮

ಧರ್ಮಾಚರಣೆ-೧೦೮ ಬಲಿಕರ್ಮಸ್ವಧಾಹೋಮ ಸ್ವಾಧ್ಯಾಯಾತಿಥಿಸತ್ಕ್ರಿಯಾಃ | ಭೂತಪಿತೃಮರಬ್ರಹ್ಮಮನುಷ್ಯಾಣಾಂ ಮಹಾಮಖಾಃ || ಯಾಜ್ಞವಲ್ಕ್ಯ ಸ್ಮೃತಿ||  ಯಜುರ್ವೇದದ ಆರಣ್ಯಕದಲ್ಲಿ ಹೇಳಿದಂತೆ ಗೃಹಸ್ಥನು ದಿನವೂ ಭೂತಯಜ್ಞ= ಬಲಿದಾನ, ಪಿತೃಯಜ್ಞ= ಷಣ್ಣವತಿ ಶ್ರಾದ್ಧ ಹಾಗೂ ನಿತ್ಯತರ್ಪಣಾದಿಗಳು, ದೇವಯಜ್ಞ= ಔಪಾಸನೆ, ಅಗ್ನಿಹೋತ್ರ, ವೈಶ್ವದೇವ ರೂಪದ ನಿತ್ಯಾಗ್ನಿ ಅರ್ಚನೆ, ಬ್ರಹ್ಮಯಜ್ಞ= ನಾವು ಓದಿದ್ದನ್ನು ಮರೆಯದಿರುವಂತೆ ಅಭ್ಯಾಸ ಹಾಗೂ ಹೊಸ ಓದಿನಿಂದ ಜ್ಞಾನ ಸಂಪಾದನೆ, ಮನುಷ್ಯಯಜ್ಞ = ಆಹಾರ ಸ್ವೀಕರಿಸುವ ಮುನ್ನ ಹಸಿದವರಿಗೆ ಉಣಬಡಿಸುವುದು ಅಥವಾ ಹಸಿದವನನ್ನು ಕಂಡಾಗ ಆಹಾರ ನೀಡುವುದು ಇವುಗಳನ್ನು ಅವಶ್ಯವಾಗಿ ಮಾಡಬೇಕು. ಇವುಗಳನ್ನು ಆಚರಿಸಿದಾಗ ನಿತ್ಯದ ಪಂಚಪಾಪಗಳಿಂದ ಬಿಡುಗಡೆ ಹೊಂದುವನು. ಇದು ಮಾಡದೇ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಅಥವಾ ಕ್ಷೇತ್ರಗಳಲ್ಲಿ ಲಕ್ಷಗಟ್ಟಲೆ ಧನವ್ಯಯ ಮಾಡಿ ವಿಜೃಂಭಣೆಯ ಹೋಮ- ಹವನ ಮಾಡಿದರೆಷ್ಟು, ಬಿಟ್ಟರೆಷ್ಟು. ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಗುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೭

ಧರ್ಮಾಚರಣೆ-೧೦೭ ಹುತ್ವಾಗ್ನೀನ್ಸೂರ್ಯದೈವತ್ಯಾನ್ ಜಪೇನ್ಮಂತ್ರಾನ್ಸಮಾಹಿತಃ | ವೇದಾರ್ಥಾನಧಿಗಚ್ಛೇಚ್ಚ ಶಾಸ್ತ್ರಾಣಿ ವಿವಿಧಾನಿ ಚ || ಯಾಜ್ಞವಲ್ಕ್ಯ ಸ್ಮೃತಿ||  ವಿಪ್ರನು ದಿನವೂ ಸಂಧ್ಯಾದಿಗಳನ್ನು ಮುಗಿಸಿ ಆಹವನೀಯ ಅಥವಾ ಸ್ಮಾರ್ತ ಅಗ್ನಿಯಲ್ಲಿ ಆಹುತಿ ನೀಡಬೇಕು. ಅನಂತರ ಸೂರ್ಯಸಂಬಂಧಿ ಉದುತ್ಯಂ, ಉದ್ವಯಂ, ಗಾಯತ್ರೀ ಮೊದಲಾದ ಮಂತ್ರಗಳನ್ನು ಪಠಿಸಬೇಕು‌- ಜಪಿಸಬೇಕು. ಅನಂತರ ಶಾಸ್ತ್ರಗಳನ್ನು ಓದುತ್ತಾ ವೇದಾರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಹಾಗೆ ಮಾಡದೆ ಸುಮ್ಮನೆ ಪಠಿಸಿದರೆ ಭಾರಹೊತ್ತ ಎತ್ತಿನ ಸ್ಥಿತಿ ಅಂತಹ ವಿಪ್ರನದಾಗುತ್ತದೆ. ಅರ್ಥ ಅರಿತು ಮಾಡುವ ಕ್ರಿಯೆಯು ಸಫಲವೂ- ಪರಿಣಾಮಕಾರಿಯೂ ಆಗುವುದು. ಇಲ್ಲದಿದ್ದರೆ ಯಂತ್ರವು ಏನು ಮಾಡುವುದೆಂದು ಗೊತ್ತಿಲ್ಲದಿದ್ದರೂ ಸುಮ್ಮನೆ ಗುಂಡಿ ಒತ್ತಲು ಕುಳಿತವನ ಪರಿಸ್ಥಿತಿ ಬರುತ್ತದೆ. ವಿಪ್ರನೆಂದು ಕರೆಸಿಕೊಳ್ಳುವಲ್ಲಿ ಅಗ್ನಿ-ಸೂರ್ಯರ ಆರಾಧನೆ ಮಹತ್ವದ್ದಾಗಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೬

ಧರ್ಮಾಚರಣೆ-೧೦೬ ಜಾತ್ಯುತ್ಕರ್ಷೋ ಯುಗೇ ಜ್ಞೇಯಃ ಪಂಚಮೇ ಸಪ್ತಮೇ ಪಿ ವಾ | ವ್ಯತ್ಯಯೇ ಕರ್ಮಣಾಂ ಸಾಮ್ಯಂ ಪೂರ್ವವಚ್ಚಾಧರೋತ್ತರಮ್ || ಯಾಜ್ಞವಲ್ಕ್ಯ ಸ್ಮೃತಿ|| ಸನಾತನ ಧರ್ಮದಲ್ಲಿ ಹಿಂದೆಯೂ ವರ್ಣಗಳ ವ್ಯತ್ಯಾಸದ ಕಾರಣದಿಂದ ಬೇರೆ ಬೇರೆ ಜಾತಿಗಳು ಉಂಟಾಗುತ್ತಿದ್ದವು. ಅಂತಹ ಜಾತಿಯ ಎಲ್ಲರಿಗೂ ಉಚ್ಚ ಜಾತಿಯನ್ನು ಪಡೆಯಲೂ ಅವಕಾಶ ಇತ್ತು. ಸಾಂಕರ್ಯದಿಂದ ಹುಟ್ಟಿದ ಮಗುವನ್ನು ಉಚ್ಚ ವರ್ಣದ  ಪುರುಷರು ಏಳು ತಲೆಗಳ ತನಕ,ಅಥವಾ ಐದು ತಲೆಗಳ ತನಕ, ಅಥವಾ ಆರು ತಲೆಗಳ ತನಕ  ವರಿಸಿದರೆ ಅವರೂ ಅದೇ ವರ್ಣದವರಾಗುತ್ತಿದ್ದರು.ಒಂದು ವೇಳೆ ಬೇರೆ ಸಂಸ್ಕಾರ ಪಡೆದಿದ್ದರೂ ಕಾಲಾನುಕ್ರಮದಲ್ಲಿ ಅದೇ ವರ್ಣದ ಸಂಸ್ಕಾರ ನೆಲೆನಿಂತು ವ್ಯವಹಾರಕ್ಕೆ ಸುಲಭವಾಗುತ್ತಿತ್ತು. ವೃತ್ತಿಯಲ್ಲೂ ಇದೇ ನೀತಿ ಅನ್ವಯ. ಜೀವನ ಸಾಗದಿದ್ದಾಗ ಯಾವ ವೃತ್ತಿ ಆಶ್ರಯಿಸಿದರೂ ದೋಷವಿಲ್ಲ. ಸುಖವಾಗಿದ್ದಾಗಲೂ   ಮುಂದುವರಿಸಿದರೆ ಆಯಾ ವರ್ಣಕ್ಕೆ ಕ್ರಮವಾಗಿ ಏಳು-ಆರು-ಐದು ತಲೆಯ ನಂತರ ಪರಿವರ್ತನೆ ಹೊಂದುವರು. ಹೀಗೆ ವ್ಯತ್ಯಾಸ ಎನ್ನುವುದು ನಾಲ್ಕು ವರ್ಣದವರಿಗೂ ಸರ್ವಸಾಮಾನ್ಯ ಸಂಗತಿ ಆಗಿತ್ತು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೫

ಧರ್ಮಾಚರಣೆ-೧೦೫ ಯಥಾಕಾಮೀ ಭವೇದ್ವಾಪಿ ಸ್ತ್ರೀಣಾಂ ವರಮನುಸ್ಮರನ್ | ಸ್ವದಾರನಿರತಶ್ಚೈವ ಸ್ತ್ರಿಯೋ ರಕ್ಷ್ಯಾ ಯತಃ ಸ್ಮೃತಾಃ || ಯಾಜ್ಞವಲ್ಕ್ಯ ಸ್ಮೃತಿ||  ಸ್ತ್ರೀಯರ‌ ಕಾಮನೆಯನ್ನು ಹಾಳು ಮಾಡುವವನು ಪಾತಕಿಯಾಗುವನು ಎಂದು ಇಂದ್ರನ ವರವಿದೆ‌. ಹಾಗಾಗಿ ಗೃಹಸ್ಥನು ಋತುಕಾಲದಲ್ಲಿ ( ೬-೮-೧೦-೧೨-೧೪-೧೬)  ಅಷ್ಟಮಿ-ಹುಣ್ಣಿಮೆ-ಅಮಾವಾಸ್ಯೆ- ಚತುರ್ದಶಿ, ಮಖಾ-ಮೂಲಾ ನಕ್ಷತ್ರ ಮೊದಲಾದ ನಿಷಿದ್ಧ ಕಾಲಗಳನ್ನು ಬಿಟ್ಟು ಸ್ತ್ರೀಯರ ಬಯಕೆಯನ್ನು ತಣಿಸಬೇಕು‌. ಹಾಗೆ ಮಾಡದೆ ಬ್ರಹ್ಮಚರ್ಯ ಆಚರಿಸಿಯೂ ಪಾತಕಿಯಾಗುವನು‌‌. ತನಗೆ ಅಗತ್ಯವಾದ ವಿಷಯಗಳಿಗೆ ಮಾತ್ರ ಸ್ತ್ರೀಯರ ಬಳಕೆ ಸಲ್ಲದು, ಅವರ ಅಗತ್ಯಗಳಿಗೂ ಸ್ಪಂದಿಸುವವನು ಪುಣ್ಯ ಸಂಪಾದಿಸುವನು ಎನ್ನುತ್ತದೆ ಸ್ಮೃತಿ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೪

ಧರ್ಮಾಚರಣೆ -೧೦೪ ಲೋಕಾನಂತಜನ್ಯ ದಿವಃ ಪ್ರಾಪ್ತಿಃ ಪುತ್ರಪೌತ್ರಪ್ರಪೌತ್ರಕೈಃ | ಯಸ್ಮಾತ್ತಸ್ಮಾತ್ ಸ್ತ್ರಿಯಃ ಸೇವ್ಯಾಃ ಕರ್ತವ್ಯಾಶ್ಚ ಸಂರಕ್ಷಿತಾಃ || ಯಾಜ್ಞವಲ್ಕ್ಯ ಸ್ಮೃತಿ || ಸತ್ಸಂತಾನದ ಯೋಗ ಹಾಗೂ ಅಗ್ನಿರಕ್ಷಣೆಯ ಯೋಗದಿಂದ ಪುಣ್ಯಲೋಕಗಳ ಪ್ರಾಪ್ತಿ ಮರಣಾನಂತರ ಉಂಟಾಗುವುದು. ಇವೆರಡೂ ಸ್ತ್ರೀಯನ್ನು ಅವಲಂಬಿಸಿವೆ. ಸಂತತಿಗಾಗಿ ವಿವಾಹ ಅನಂತರ ಅಗ್ನ್ಯಾರಾಧನೆ.  ಇವೆರಡು ಕಾರಣಗಳಿಂದ ಸ್ತ್ರೀಯ ಉಪಭೋಗ ಹಾಗೂ ರಕ್ಷಣೆ ಎರಡನ್ನೂ ಜಾಗರೂಕತೆಯಿಂದ ನಡೆಸಬೇಕು. ಧರ್ಮಕಾರ್ಯಗಳಲ್ಲಿ ಸಹಭಾಗಿತ್ವಕ್ಕೆ ರಕ್ಷಣೆ ಮಾಡಬೇಕಾದುದು ಪತಿಯ ಕರ್ತವ್ಯ. ಸನಾತನ ಧರ್ಮ ಕೇವಲ ಭೋಗಕ್ಕಾಗಿ ವಿವಾಹವನ್ನು ಅಥವಾ ಹೆಣ್ಣನ್ನು ವಿನಿಯೋಗಿಸಿಲ್ಲ. ಇದನ್ನು ಮೀರಿದ ಧಾರ್ಮಿಕ ಸಹಭಾಗಿತ್ವವು ಅವಶ್ಯವಾಗಿ ಹೇಳಲ್ಪಟ್ಟಿದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೩

ಧರ್ಮಾಚರಣೆ- ೧೦೩ ಸೋಮಃ ಶೌಚಂ ದದೌ ಸ್ತ್ರೀಣಾಂ ಗಂಧರ್ವಶ್ಚ ಶುಭಾಂ ಗಿರಮ್ | ಪಾವಕಃ ಸರ್ವಮೇಧ್ಯತ್ವಂ ಮೇಧ್ಯಾ ವೈ ಯೋಷಿತೋ ಹ್ಯತಃ || ಯಾಜ್ಞವಲ್ಕ್ಯ ಸ್ಮೃತಿ|| ಸ್ತ್ರೀಯರಿಗೆ ಸೋಮನು ವಿವಾಹ ಪೂರ್ವದಲ್ಲಿ ಶುಚಿತ್ವ ನೀಡುವನು. ಗಂಧರ್ವರು ಮಾತಿನಲ್ಲಿ ಮಾಧುರ್ಯವನ್ನು ನೀಡುವನು. ಅಗ್ನಿಯು ಪಾವಿತ್ರ್ಯವನ್ನು ನೀಡುತ್ತಾನೆ. ಋತುಕಾಲದಲ್ಲಿ ಮಾತ್ರ ಇವರಿಂದಲೇ ದೋಷ ಬರುತ್ತದೆ. ಹಾಗಾಗಿ ಸ್ತ್ರೀಯರು ಸ್ಪರ್ಶ- ಭಾಷಣ- ಆಲಿಂಗನ ಮೊದಲಾದ ಪ್ರಸಂಗಗಳಲ್ಲಿ ಸದಾ ಶುಚಿಗಳಾಗಿರುತ್ತಾರೆ. ಕೆಲವು ಧರ್ಮಗಳಲ್ಲಿ ಕೆಲವು ದೇಶಗಳಲ್ಲಿ ಸ್ತ್ರೀಯರ ಪಾವಿತ್ರ್ಯ ಪರೀಕ್ಷಿಸಿ ಮದುವೆ ಮಾಡುವ ಕೆಟ್ಟ ಪದ್ಧತಿ ಇದೆ. ನಮ್ಮ ಸನಾತನ ಧರ್ಮದಲ್ಲಿ ವಿವಾಹ ಪೂರ್ವದಲ್ಲಿ ಅವರು ಸದಾಶುಚಿ. ಹಾಗಾಗಿ ಅಂತಹ ಅನಾಗರಿಕತೆಯ ಆಚರಣೆಗಳಿಗೆ ಆಸ್ಪದವಿಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೨

ಧರ್ಮಾಚರಣೆ-೧೦೨ ಪಿತಾ ಪಿತಾಮಹೋ ಭ್ರಾತಾ ಸಕುಲ್ಯೋ ಜನನೀ ತಥಾ | ಕನ್ಯಾಪ್ರದಃ ಪೂರ್ವನಾಶೇ ಪ್ರಕೃತಿಸ್ಥಃ ಪರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ||  ಕನ್ಯಾದಾನ ಮಾಡಲು ಕ್ರಮವಾಗಿ ತಂದೆ- ಅಜ್ಜ-ಅಣ್ಣ ತಮ್ಮ-ದೊಡ್ಡಪ್ಪ ಚಿಕ್ಕಪ್ಪ ಮೊದಲಾದ ತಂದೆಯ ಕುಲದವರು-ತಾಯಿ ಇಷ್ಟುಜನರಿಗೆ ಮಾಡಲು ಶಾಸ್ತ್ರೀಯ ಅನುಮತಿ ಇದೆ. ಇವರಲ್ಲಿ ಮೊದಲಿನವರು ಇಲ್ಲದಿದ್ದಾಗ ಮುಂದಿನವರು ಹೀಗೆ ಯಾರಾದರೂ ಕನ್ಯಾದಾನ ಮಾಡಬಹುದು. ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಗೂ ಕನ್ಯಾದಾನ ಮಾಡಲು ಅಧಿಕಾರ ಕೊಟ್ಟಿರುವುದು ಸ್ತ್ರೀ ಸ್ವಾತಂತ್ರ್ಯದ ಉತ್ತಮ ನಿದರ್ಶನ. ಸಕೃತ್ಪ್ರದೀಯತೇ ಕನ್ಯಾ ಎಂಬಂತೆ ಒಮ್ಮೆ ಮಾತ್ರ ಕನ್ಯೆಯನ್ನು ದಾನ ಮಾಡುವುದು. ಒಂದು ವೇಳೆ ಪುನರ್ವಿವಾಹ ಮೊದಲಾದ ಸಂದರ್ಭ ಒದಗಿದರೆ ಆಗ ಲೋಕರೂಢಿಯೆಂದು ಮಾಂಗಲ್ಯ ಮಾತ್ರ ಸಾಕು. ಬೇರೆ ಯಾವ ರೂಢಿಯೂ ಶಾಸ್ತ್ರ ಸಮ್ಮತವಲ್ಲ. ಒಂದು ವೇಳೆ ಇವರಾರೂ ಲಭ್ಯವಿಲ್ಲದಿದ್ದಾಗ ಕನ್ಯೆ ಸ್ವತಃ ಸ್ವಯಂವರ ಮಾಡಿಕೊಳ್ಳಲು ಧರ್ಮಶಾಸ್ತ್ರ ಅನುಮತಿ ಕೊಟ್ಟಿದೆ. ಇದೇ ಸಮಾನತೆಗೆ ನಿದರ್ಶನ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೧

ಧರ್ಮಾಚರಣೆ-೧೦೧ ಇತ್ಯುಕ್ತ್ವಾ ಚರತಾಂ ಧರ್ಮ ಸಹ ಯಾ ದೀಯತೇರ್ಥಿನೇ | ಸ ಕಾಯಃ ಪಾವಯೇತ್ತಜ್ಜಃ ಷಟ್ ಷಟ್ ವಂಶಾನ್ಸಹಾತ್ಮನಾ || ಆಸುರೋ ದ್ರವಿಣಾದಾನಾದ್ಗಂಧರ್ವಃ ಸಮಯನ್ಮಿಥಃ ||ಯಾಜ್ಞವಲ್ಕ್ಯ ಸ್ಮೃತಿ|| ಇಬ್ಬರೂ ಪರಸ್ಪರ ಪ್ರೀತಿಸಿದಾಗ ಕನ್ಯೆಯನ್ನು ವರನಿಗೆ ನೀಡಿ ಇನ್ನು ಮುಂದೆ ಇಬ್ಬರೂ ಧರ್ಮಗಳಲ್ಲಿ ಸಹಭಾಗಿಗಳಾಗಿ ಎಂದು ವಿವಾಹ  ಮಾಡಿಕೊಡುವುದು ಪ್ರಾಜಾಪತ್ಯ. ಈ ವಿವಾಹದ ಫಲವು ಹದಿನಾರು ವ್ಯಕ್ತಿಗಳನ್ನು ಉದ್ಧರಿಸುವುದು. ಬ್ರಾಹ್ಮ ಇಪ್ಪತ್ತೊಂದಾದರೆ ಇಲ್ಲಿ ಹದಿನಾರು. ಈಗಿನ ಪ್ರೇಮವಿವಾಹಗಳಿಗೆ ಪೋಷಕರ ಸಮ್ಮತಿ ಇದ್ದರೆ ಅವುಗಳು ಪ್ರಾಜಾಪತ್ಯ ವಿವಾಹ ಎಂದು ಕರೆಸಿಕೊಳ್ಳುತ್ತವೆ. ಇನ್ನು ವರದಕ್ಷಿಣೆ ಅಥವಾ ವಧುದಕ್ಷಿಣೆ ತೆಗೆದುಕೊಂಡು ಮಾಡಿಕೊಂಡ ವಿವಾಹ ಆಸುರ. ಮುಂದುವರಿದ ಅಥವಾ ಶಿಕ್ಷಿತ ಅಥವಾ ಶ್ರೀಮಂತ ಕುಟುಂಬಗಳಲ್ಲಿ ಬಹುತೇಕ ಇಂತಹ ಆಸುರ ವಿವಾಹಗಳೇ ನಡೆಯುತ್ತಿವೆ. ಇನ್ನು ಬಹಳ ದಿನ ಒಟ್ಟಿಗಿದ್ದು ಕೊನೆಗೊಮ್ಮೆ ಮದುವೆಯಾದರೆ ಅಥವಾ ಗರ್ಭಿಣಿಯಾದಳೆಂದು ಕಟ್ಟಿಕೊಂಡರೆ ಅದು ಗಾಂಧರ್ವ ವಿವಾಹ. ಆಸುರ ಹಾಗೂ ಗಾಂಧರ್ವಕ್ಕೆ ಪ್ರಾಶಸ್ತ್ಯ ಇಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೦೦

ಧರ್ಮಾಚರಣೆ-೧೦೦ ಬ್ರಾಹ್ಮೋ ವಿವಾಹ ಆಹೂಯ ದೀಯತೇ ಶಕ್ಯ್ತಲಂಕೃತಾ | ತಜ್ಜಃ  ಪುನಾತ್ಯುಭಯತಃ ಪುರುಷಾನೇಕವಿಂಶತಿಮ್ || ಯಾಜ್ಞವಲ್ಕ್ಯ ಸ್ಮೃತಿ||  ಈಗ ಭಾರತದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವುದು ಬ್ರಾಹ್ಮ ವಿವಾಹ. ಬ್ರಾಹ್ಮವೆಂದರೆ ಬ್ರಾಹ್ಮಣರದ್ದು ಎಂದಲ್ಲ, ಬ್ರಹ್ಮ ಹೇಳಿದ್ದು ಅಥವಾ ಬ್ರಹ್ಮನಿಗೆ ಸಂಬಂಧಿಸಿದ್ದು ಎಂದು ಅರ್ಥ. ಕುಲ-ಶೀಲ-ರೂಪ-ಗುಣ-ವಯಸ್ಸುಗಳಿಂದ  ಯೋಗ್ಯನಾದ ವರನನ್ನು ಆಹ್ವಾನಿಸಿ ಅವನಿಗೆ ತನ್ನ ಕೈಲಾದಷ್ಟು  ಸತ್ಕಾರ ಮಾಡಿ ಹೆಣ್ಣನ್ನು ಕೊಟ್ಟು ಮದುವೆ ಮಾಡುವುದು ಬ್ರಾಹ್ಮ ವಿವಾಹದ ಪದ್ಧತಿ. ಇಲ್ಲಿ ವರದಕ್ಷಿಣೆಗೆ ಮಹತ್ವ ಇಲ್ಲ, ವರನನ್ನು ಉಪಚರಿಸುವುದು ಅಥವಾ ಗೌರವಿಸುವುದು ಮಹತ್ವ ಪಡೆದಿದೆ. ಕನ್ಯೆಯನ್ನು ಅಲಂಕರಿಸಿ ಗೌರವಯುತವಾಗಿಯೇ ಕಳಿಸಿಕೊಡುವುದು ಇಲ್ಲಿನ ವಿಶೇಷ. ವರನ ಯೋಗ್ಯತೆ ನೋಡಿಯೇ ಈ ವಿವಾಹ ನಿರ್ಣಯಿಸಬೇಕೆಂದು ಧರ್ಮಶಾಸ್ತ್ರ ಸ್ಪಷ್ಟವಾಗಿ ಹೇಳಿದೆ. ಶೀಲ-ಗುಣಗಳ ವಿಷಯದಲ್ಲಂತೂ ತುಂಬಾ ಮಹತ್ವ ಕೊಟ್ಟಿದೆ. ಇವರ ಸಂಯೋಗದಿಂದ ಜನಿಸಿದ ಮಕ್ಕಳು  ಉಭಯಕುಲದ ಇಪ್ಪತ್ತೊಂದು ಜನರಉದ್ಧಾರಕ್ಕೆ ಕಾರಣರಾಗುವರು. ಈ ವಿವಾಹದ ಉದ್ದೇಶ ಕುಲಗಳ ಉದ್ಧಾರ ಹೊರತು ದೈಹಿಕ ಸುಖವೊಂದೇ ಅಲ್ಲ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೯

ಧರ್ಮಾಚರಣೆ-೯೯ ಅವಿಪ್ಲುತ ಬ್ರಹ್ಮಚರ್ಯೋ ಲಕ್ಷಣ್ಯಾಂ ಸ್ತ್ರಿಯಮುದ್ವಹೇತ್ | ಅನನ್ಯಪೂರ್ವಿಕಾಂ ಕಾಂತಾಮಸಪಿಂಡಾಂ ಯವೀಯಸೀಮ್ || ಅರೋಗಿಣೀಂ ಭ್ರಾತೃಮತೀಂ ಅಸಮಾನಾರ್ಷಗೋತ್ರಜಾಮ್ | ಪಂಚಮಾತ್ಸಪ್ತಮಾದೂರ್ಧ್ವಂ ಮಾತೃತಃ ಪಿತೃತಸ್ತಥಾ|| ಯಾಜ್ಞವಲ್ಕ್ಯ ಸ್ಮೃತಿ|| ಬ್ರಹ್ಮಚರ್ಯವನ್ನು ನಿಯಮಿತವಾಗಿ ಪಾಲಿಸಿದ ವ್ಯಕ್ತಿಯು ಅನಂತರ ಬಾಹ್ಯ-ಆಂತರ್ಯ ಲಕ್ಷಣ ಉಳ್ಳ , ಬೇರೊಬ್ಬರನ್ನು ಚಿಂತಿಸದ, ಕುಟುಂಬಕ್ಕೆ ಸೇರದ, ವಯಸ್ಸಿನಲ್ಲೂ- ಆಕಾರದಲ್ಲೂ ತನಗಿಂತ ಸಣ್ಣವಳನ್ನು, ರೋಗರಹಿತಳನ್ನು, ಅಣ್ಣ-ತಮ್ಮಂದಿರನ್ನು ಹೊಂದಿದವಳನ್ನು, ತನ್ನ ಗೋತ್ರ-ಪ್ರವರಕ್ಕೆ ಸೇರದವಳನ್ನು, ತಾಯಿಯಿಂದ ಐದು ತಲೆ ದಾಟಿದ, ತಂದೆಯಿಂದ ಏಳು ತಲೆ ದಾಟಿದ ಕನ್ಯೆಯನ್ನು ವರಿಸಬೇಕು. ಸನಾತನ ಧರ್ಮದ ವಿವಾಹಯೋಗ್ಯತೆ ಸ್ತ್ರೀ ಪುರುಷರಿಗೆ ಸಮಾನವಾಗಿದೆ. ತಾನು ಸ್ವತಃ ಆರೋಗ್ಯದಿಂದ- ನೈಷ್ಠಿಕ ಬ್ರಹ್ಮಚರ್ಯದಿಂದ ಇದ್ದು- ಉತ್ತಮ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಹೊರೆಯಾಗದಂತೆ ಬದುಕುವ ಜವಾಬ್ದಾರಿ ಹೊಂದಿ ತನಗೆ ಈ ಲಕ್ಷಣಗಳಿಂದ ಯೋಗ್ಯಳೆನಿಸಿದ ಕನ್ಯೆಯನ್ನು ಕೈ ಹಿಡಿಯಬೇಕು. ಸಗೋತ್ರ ಅಥವಾ ಸಪ್ರವರ ಆದರೆ ಮೂಲ ಪುರುಷರು ಒಂದೇ ಆದ ಕಾರಣ ವಂಶವಾಹಿಯ ಕಾರಣದಿಂದ ಮುಂದಿನ ಪೀಳಿಗೆಗೆ ನ್ಯೂನತೆ ಬಂದೀತೆಂಬ ಜಾಗೃತೆ, ಸಂಬಂಧವೇ ಆದರೂ  ಅಷ್ಟು ಪೀಳಿಗೆ ದಾಟಿದಾಗ ಬಂಧ ಮಾತ್ರ ಉಳಿದೀತು ಎಂಬ ಯೋಚನೆಯಿಂದ  ಐದು- ಏಳು ತಲೆಮಾರುಗಳ ಅಂತರ ವಿಹಿತವಾದದ್ದು. ವಿವಾಹವೆಂದರೆ ಸುಮ್ಮನೆ ತಾಳಿ ಕಟ್ಟು...

ಧರ್ಮಾಚರಣೆ ೯೮

ಧರ್ಮಾಚರಣೆ-೯೮ ತೇತೃಪ್ತಾಸ್ತರ್ಪಯಂತ್ಯೇನಂ ಸರ್ವಕಾಮಫಲೈಃ ಶುಭೈಃ| ಯಂ ಯಂ ಕ್ರತುಮಧೀತೇಸೌ ತಸ್ಯ ತಸ್ಯಾಪ್ನುಯಾತ್ಫಲಮ್ || ಯಾಜ್ಞವಲ್ಕ್ಯ ಸ್ಮೃತಿ || ನಿತ್ಯವೂ ವೇದಾಧ್ಯಯನ ಮಾಡುವ  ವ್ಯಕ್ತಿಗೆ ಇಚ್ಛಿಸಿದ ಫಲವನ್ನು ದೇವತೆಗಳು ಕೊಡುತ್ತಾರೆ. ಅಂತೆಯೇ ಅಶ್ವಮೇಧ, ರಾಜಸೂಯ, ಇಷ್ಟಿಗಳು ಮೊದಲಾದ ಯಜ್ಞಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಪಾರಾಯಣ ಮಾಡಿದರೆ ಆಯಾ ಯಜ್ಞಗಳ ಫಲವನ್ನು ಭಗವಂತನು ಕರುಣಿಸುತ್ತಾನೆ. ಇದೇ ಕಾರಣದಿಂದ ಕೆಲವು ಶ್ರದ್ಧಾಳುಗಳು ವೇದವಿದರ ಬಳಿಯಲ್ಲಿ ಇಂತಹ ಮಂತ್ರ ಪಾರಾಯಣ ಮಾಡಿಸುತ್ತಾರೆ. ಸನಾತನ ಧರ್ಮ ಎಷ್ಟು ಕರ್ಮಠತೆಯನ್ನು ಪ್ರತಿಪಾದಿಸುತ್ತದೋ ಅಷ್ಟೇ ನಮ್ಯತೆಯನ್ನೂ ಹೊಂದಿದೆ. ಯಜ್ಞ ಮಾಡಿದರೂ ಫಲ, ಮಾಡದೇ ಮಂತ್ರ ಹೇಳಿದರೂ ಫಲ. ಪೂಜೆ ಮಾಡಿದರೂ ಫಲ- ಧ್ಯಾನಿಸಿದರೂ ಫಲ. ಭಗವತ್ಪ್ರೀತ್ಯರ್ಥಕವಾಗಿ ಮಾಡುವ ನಮ್ಮ ಪ್ರತಿಯೊಂದು ಕರ್ಮಕ್ಕೂ ಫಲ. ಅವರವರ ಭಾವನೆಗೆ ಬೇಕಾದಂತೆ ಸಾಕಷ್ಟು ಅವಕಾಶವನ್ನು ಆರಾಧನೆಗೆ ಒದಗಿಸಿದ ವಿಶ್ವಕುಟುಂಬಿ ಧರ್ಮವೆನ್ನುವ ಹೆಮ್ಮೆ ನಮ್ಮೆಲ್ಲರದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೭

ಧರ್ಮಾಚರಣೆ-೯೭ ವಾಕೋವಾಕ್ಯಂ ಚ ನಾರಾ ಶಂಸೀಂಶ್ಚ ಗಾಥಿಕಾಃ | ಇತಿಹಾಸಾಂಸ್ತಥಾ ವಿದ್ಯಾಃ ಶಕ್ತ್ಯಾಧೀತೇಹಿಯೋನ್ವಹಮ್ || ಮಾಂಸಕ್ಷೀರೌದನಮಧು ತರ್ಪಣಂ ಸದಿವೌಕಸಾಮ್ | ಕರೋತಿ ತೃಪ್ತಿಂ ಕುರ್ಯಾಚ್ಚ ಪಿತೃಣಾಂ ಮಧು ಸರ್ಪಿಷಾ || ಯಾಜ್ಞವಲ್ಕ್ಯ ಸ್ಮೃತಿ|| ವೇದದಲ್ಲಿ ಬರುವ ಪ್ರಶ್ನೋತ್ತರರೂಪದ ವಾಕ್ಯಗಳು, ಬ್ರಹ್ಮ-ಸ್ಕಂದ-ವಿಷ್ಣು ಮೊದಲಾದ ಪುರಾಣಗಳು, ಮನು-ಪರಾಶರ-ಯಾಜ್ಞವಲ್ಕ್ಯ ಮೊದಲಾದ ಸ್ಮೃತಿಗಳು, ರುದ್ರ-ಚಮಕ, ಯಜ್ಞದಲ್ಲಿ ಬಳಸುವ ಸೂಕ್ತಗಳು, ಮಹಾಭಾರತ-ರಾಮಾಯಣ ಮೊದಲಾದ ಇತಿಹಾಸ, ಮಧುವಾತಾ-ಹಿರಣ್ಯಶೃಂಗಂ ಮೊದಲಾದ ಮಂತ್ರಗಳನ್ನು ಪಠಿಸುವನೋ ಅವನು‌ ಮಾಂಸ-ಪರಮಾನ್ನ-ಜೇನುಗಳನ್ನು ದೇವರಿಗೆ ಅರ್ಪಿಸಿ ತೃಪ್ತಿಪಡಿಸಿದ ಪುಣ್ಯವನ್ನೂ, ಪಿತೃಗಳಿಗೆ ತುಪ್ಪ-ಜೇನುತುಪ್ಪ ಅರ್ಪಿಸಿ ತೃಪ್ತಿಪಡಿಸಿದ ಪುಣ್ಯವನ್ನೂ ಸಂಪಾದಿಸುತ್ತಾನೆ. ಹಾಗಾಗಿ ದಿನವೂ ಒಂದಷ್ಟು ಪಾರಾಯಣ- ಪುಸ್ತಕಗಳ ಅವಲೋಕನ ಇಹಪರ ಕ್ಷೇಮದಾಯಕ. ಹೇಗೆ ನಾವು ಸಾಮಾಜಿಕ ಜಾಲತಾಣಗಳನ್ನು, ದೂರದರ್ಶನವನ್ನು, ಸಂಗೀತ ಮೊದಲಾದವನ್ನು ನೋಡಿ- ಕೇಳುವೆವೋ ಅದರಂತೆ ಇದಕ್ಕೂ ಪ್ರಾಶಸ್ತ್ಯ ಕೊಟ್ಟಾಗ ಮೋಕ್ಷದ ದಾರಿ ತೆರೆದುಕೊಳ್ಳುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೬

ಧರ್ಮಾಚರಣೆ-೯೬ ಮೇದಸಾ ತರ್ಪಯದ್ದೇವಾನಥರ್ವಾಂಗಿರಸಃ ಪಠನ್ | ಪಿತೃಂಶ್ಚ ಮಧುಸರ್ಪಿಭ್ಯಾಮನ್ವಹಂ ಶಕ್ತಿತೋ ದ್ವಿಜಃ || ಯಾಜ್ಞವಲ್ಕ್ಯ ಸ್ಮೃತಿ|| ಅಂಗಿರಸಮಹರ್ಷಿ ಕಂಡುಕೊಂಡ ಅಥರ್ವವೇದದ ಮಂತ್ರಗಳನ್ನು ಯಾರು ಪಠಿಸುವನೋ ಅವನು ಪಶುಗಳ ಮೇದಸ್ಸನ್ನು ದೇವತೆಗಳಿಗೆ ಅರ್ಪಿಸಿದ ಪುಣ್ಯವನ್ನೂ, ಪಿತೃಗಳಿಗೆ ಜೇನು ಮತ್ತು ತುಪ್ಪಗಳನ್ನು ಅರ್ಪಿಸಿದ ಪುಣ್ಯಕ್ಕೆ ಪಾತ್ರನಾಗುತ್ತಾನೆ. ನಮ್ಮ ಶ್ರುತಿ-ಸ್ಮೃತಿಗಳು ಹಿಂಸೆಯನ್ನು ಎಂದಿಗೂ ಪ್ರಚೋದಿಸಿಲ್ಲ. ಬರಿದೆ ವೇದದ ದಿನಂಪ್ರತಿ ಪಾರಾಯಣವು ಪಶುಬಲಿ ನೀಡಿದ ಪುಣ್ಯವನ್ನು ತಂದುಕೊಡುವ ಕಾರಣ ಪಶುವನ್ನು ಕೊಲ್ಲುವ ಪಶುಯಾಗ ಮಾಡುವ ಅವಶ್ಯಕತೆ ಇಲ್ಲವೆಂದು ಸ್ಪಷ್ಟವಾಗಿ ಸಾರಿದೆ. ಅಹಿಂಸೆಯನ್ನು ಸನಾತನ ಗ್ರಂಥಗಳು ಪ್ರತಿಪಾದಿಸಿದಷ್ಟು ಬಹುಶಃ ಬುದ್ಧನೂ ಪ್ರತಿಪಾದಿಸಿಲ್ಲ‌.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೫

ಧರ್ಮಾಚರಣೆ-೯೫ ಸ ತು ಸೋಮಘೃತೈರ್ದೇವಾಂಸ್ತರ್ಪಯೇದ್ಯೋನ್ವಹಂ ಪಠೇತ್ | ಸಾಮಾನಿ ತೃಪ್ತಿಂ ಕುರ್ಯಾಚ್ಚ ಪಿತೃಣಾಂ ಮಧುಸರ್ಪಿಷಾ ||ಯಾಜ್ಞವಲ್ಕ್ಯ ಸ್ಮೃತಿ|| ನಿತ್ಯವೂ ಸಾಮವೇದದ ಕೆಲವು ಸಾಮಗಳ‌ನ್ನಾದರೂ ಹಾಡಿದರೆ ಅವರು ದೇವತೆಗಳನ್ನು ಸೋಮರಸ-ತುಪ್ಪದಿಂದ ತೃಪ್ತಿಪಡಿಸಿದ ಪುಣ್ಯವನ್ನೂ, ಪಿತೃಗಳನ್ನು ಜೇನು ಹಾಗೂ ತುಪ್ಪದಿಂದ ತೃಪ್ತಿಪಡಿಸಿದ ಪುಣ್ಯಭಾಜನರಾಗುತ್ತಾರೆ. ವೇದಾನಾಂ ಸಾಮವೇದೋಸ್ಮಿ ಎಂದ ಕೃಷ್ಣನ ಮಾತಿನಂತೆ ಸಾಮಗಾನವು ದೇವತೆಗಳಿಗೆ ಅತ್ಯಂತ ಪ್ರಿಯ. ಅದು ಉಳಿದ ಮಂತ್ರಗಳಿಗಿಂತ ಹೆಚ್ಚಿನ ಫಲದಾಯಕ. 

ಧರ್ಮಾಚರಣೆ ೯೪

ಧರ್ಮಾಚರಣೆ-೯೪ ಯಜೂಂಷಿ ಶಕ್ತಿತೋಧೀತೇ ಯೋನ್ವಹಂ ಸ ಘೃತಾಮೃತೈಃ | ಪ್ರೀಣಾತಿ ದೇವಾನಾಜ್ಯೇನ ಮಧುನಾ ಚ ಪಿತೃಂಸ್ತಥಾ ||  ಯಾರು ದಿನವೂ ಯಜುರ್ವೇದದ ಒಂದಷ್ಟು ವರ್ಗ/ಹನಸು ಗಳನ್ನು ಪಠಿಸುವನೋ ಅವನು ತುಪ್ಪ- ಅಮೃತಗಳಿಂದ ದೇವತೆಗಳನ್ನು ತೃಪ್ತಿ ಪಡಿಸಿದ ಪುಣ್ಯಕ್ಕೂ, ತುಪ್ಪ- ಜೇನುಗಳಿಂದ ಪಿತೃಗಳನ್ನು ತೃಪ್ತಿಪಡಿಸಿದ ಪುಣ್ಯಭಾಜನನಾಗುವನು. ಹಾಗಾಗಿ ವೇದಪಾರಾಯಣವು ದಿನಂಪ್ರತಿ ದೇವ-ಪಿತೃ ಆರಾಧಕವೆನಿಸಿ ಪುಣ್ಯ ತಂದುಕೊಡುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೯೩

ಧರ್ಮಾಚರಣೆ-೯೩ ಮಧುನಾ ಪಯಸಾ ಚೈವ ಸದೇವಾಂಸ್ತರ್ಪಯೇದ್ವಿಜಃ | ಪಿತೃನ್ಮಧುಘೃತಾಭ್ಯಾಂ ಚ ಋಚೋಧೀತೇ ಚ ಯೋನ್ವಹಮ್ || ಯಾಜ್ಞವಲ್ಕ್ಯ ಸ್ಮೃತಿ|| ನಿತ್ಯವೂ ಋಗ್ವೇದದ ಕೆಲವು ಸೂಕ್ತಗಳನ್ನಾದರೂ ಯಾರು ನಿಯಮಿತವಾಗಿ ಸ್ವರಯುಕ್ತವಾಗಿ ಪಠಿಸುವನೋ ಅವನು ಜೇನು- ಹಾಲುಗಳನ್ನು ದೇವತೆಗಳಿಗೆ ಸಮರ್ಪಿಸಿದ ಪುಣ್ಯವನ್ನೂ,ಪಿತೃಗಳಿಗೆ ಜೇನು- ತುಪ್ಪಗಳನ್ನು ಸಮರ್ಪಿಸಿದ ಪುಣ್ಯವನ್ನು ಪಡೆಯುತ್ತಾನೆ. ಹಾಗಾಗಿ ದಿನವೂ ಸಮಯ ಸಿಕ್ಕಾಗಲೆಲ್ಲ ವೇದಮಂತ್ರಗಳ- ಸೂಕ್ತಗಳ ಪಠಣ ಅಭ್ಯಾಸಕ್ಕೂ - ಪುಣ್ಯಕ್ಕೂ ಹೀಗೆ ಇಹ-ಪರ ಫಲದಾಯಕ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ರಾಮಾಯಣ-೧೬೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೨🏝📖       *ಋಷ್ಯಶೃಂಗೋ ವನಚರಸ್ತಪಃಸ್ವಾಧ್ಯಾಯನೇ ರತಃ | ಅನಭಿಜ್ಞಃ ಸ ನಾರೀಣಾಂ ವಿಷಯಾಣಾಂ ಸುಖಸ್ಯ ಚ||* _ದಶರಥನು ಋಷ್ಯಶೃಂಗನನ್ನು ಕರೆತಂದ ಬಗೆಯನ್ನು ವಿವರಿಸಬೇಕೆಂದು ಸುಮಂತ್ರನಲ್ಲಿ ಕೇಳಿದಾಗ ಸುಮಂತ್ರ ವಿವರಿಸುತ್ತಿದ್ದಾನೆ. ಈ ಸುಮಂತ್ರ ಸೂತ ಹಾಗೂ ಮಂತ್ರಿಯೂ ಹೌದು. ಸನತ್ಕುಮಾರನ ಬಳಿ ಈ ಆಖ್ಯಾನ ಅವನು ಕೇಳಿದನೆಂದರೆ ಅವನ ಜ್ಞಾನ ಎಷ್ಟಿತ್ತೆಂದು ನಾವು ಊಹಿಸಬಹುದು. ದಶರಥನಿಗೂ ಮಿಗಿಲಾದ ಜ್ಞಾನ ಅವನಿಗಿತ್ತು. ಹಾಗಾಗಿ ಜ್ಞಾನ ಸಂಪಾದನೆಗೆ ಜಾತಿ- ಮತ- ಧನ ಎಂದಿಗೂ ಕಾರಣವಲ್ಲ. ಅದೊಂದು ಭ್ರಮೆ ಅಷ್ಟೇ. ಋಷ್ಯಶೃಂಗನ ದಿನಚರಿ ಹೇಗಿತ್ತೆಂದರೆ ಈಗಿನ ಕಾಲದ ನಮ್ಮ ಕಲ್ಪನೆಗೂ ಬರಲಾರದು. ಯಾವ ಸ್ತ್ರೀಯನ್ನೂ ಅವನು ಈವರೆಗೆ ನೋಡಿಲ್ಲ. ಕಾಡಿನಲ್ಲಿ ಸಂಚಾರ, ತಪಸ್ಸು, ಸ್ವಾಧ್ಯಾಯ, ಅಧ್ಯಯನ ಇವುಗಳಲ್ಲೇ ನಿರತನು ಅವನು. ವಿಷಯಗಳಾದ ರೂಪ-ರಸ-ಗಂಧ-ಶಬ್ದ-ಸ್ಪರ್ಶಗಳ ಸುಖವೇನೆಂದೇ ಅವನಿಗೆ ಗೊತ್ತಿಲ್ಲ. ಇದು ರುಚಿ, ಇದು ಚಂದ, ಇದು ಇಂಪು, ಇದು ತಂಪು, ಇದು ಪರಿಮಳ ಎನ್ನುವ ಭೇದ ಅವನಿಗೆ ತಿಳಿದಿಲ್ಲ. ತನಗೆ ಸಿಕ್ಕಿರುವಲ್ಲೇ ಆನಂದ ಅನುಭವಿಸುತ್ತಾ ಆನಂದರೂಪಿಯಾಗಿ ವಿಹರಿಸುತ್ತಿದ್ದಾನೆ. ಹಾಗಾಗಿಯೇ ಅವನ ಶಕ್ತಿ ಬರಗಾಲದಲ್ಲೂ ಅತಿವೃಷ್ಟಿ ಬರಿಸುವಷ್ಟಿದೆ. ನಾವೂ ಋಷ್ಯಶೃಂಗನ ದಾರಿ ಸ್ವಲ್ಪ ಕ್ರಮಿಸಿದರೂ ಬಹುಶಃ ನಮ್ಮ ಗಮನಾಗಮನಗಳು ಒಳಿತನ್ನು ಉಂಟು ಮಾಡಿಯಾವು._ *ಪಿತುಃ ಸ ನಿತ್...

ಪದಶಕ್ತಿ-೩೮

🏹*ಪದಶಕ್ತಿ* ---೩೮🌄  _*ವೈಶ್ವಾನರ*_ _ಅಗ್ನಿಯ ಇನ್ನೊಂದು ಹೆಸರಿನ ಬಗ್ಗೆ ಇವತ್ತು ನೋಡೋಣ. *ವಿಶ್ವಶ್ಚಾಸೌ ನರಶ್ಚ* ಎಂಬಂತೆ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವವನಾದ್ದರಿಂದ ಇವನು ವೈಶ್ವಾನರ._  _ಉದರದಲ್ಲಿನ ಆಹಾರ ಜೀರ್ಣವಾಗಲು ವೈಶ್ವಾನರ ಎಂಬ ಬೆಂಕಿ ಮುಖ್ಯ ಕಾರಣ. ಜಿಡ್ಡು ಈ ಅಗ್ನಿಯನ್ನು ಜಾಗೃತವಾಗಿ ಇಡುತ್ತದೆ. ಎಣ್ಣೆ- ತುಪ್ಪ ಮೊದಲಾದವುಗಳ ಸೇವನೆ ಇದೇ ಕಾರಣದಿಂದ ಮಾಡುವಂತಹದು._ _*ವಿಶ್ವಾನ್ನರಾನ್ ಇತಃ ನಯತಿ* ಜನರನ್ನು ಇಲ್ಲಿಂದ ಇನ್ನೊಂದು ಲೋಕಕ್ಕೆ ಕರೆದೊಯ್ಯುವುದು ಎಂಬ ಅರ್ಥದಲ್ಲಿ ಬೆಂಕಿಗೆ ವೈಶ್ವಾನರ ಎಂಬ ಹೆಸರು. ದಹನ ಮಾಡಿದಾಗ ಆತ್ಮವು ಶರೀರದ ವ್ಯಾಮೋಹ ತೊರೆದು ಇನ್ನೊಂದು ಕಡೆ ಪ್ರಯಾಣ ಬೆಳೆಸಲು ಅಗ್ನಿ ಮುಖ್ಯ ಕಾರಣ._ _*ವಿಶ್ವಾನ್ ಜಂತೂನ್ ನಯತಿ* ಜೀವಿಗಳಿಗೆ ಪ್ರಲಯಕಾಲದಲ್ಲಿ ಒಂದು ಗತಿ ಕಾಣಿಸುವ ಮುಖ್ಯ ಸಾಧನಗಳಲ್ಲಿ ಒಂದು ಬೆಂಕಿ. ಹಾಗಾಗಿ ವೈಶ್ವಾನರ._ _*ವಿಶ್ವಾನರಸ್ಯ ಅಪತ್ಯಂ ಇತಿ* ವೈಶ್ವಾನರ. ಎಲ್ಲಾ ಜೀವಿಗಳಲ್ಲಿ  ವಿಶ್ವಾನರ ಎಂಬ ಪ್ರಾಣವಾಯುವಿನಿಂದ ಜನಿಸುವುದು ಈ ವೈಶ್ವಾನರ. ಗೀತೆಯಲ್ಲಿ ಇದನ್ನೇ ಹೇಳಿದ್ದು- *# ಅಹಂ ವೈಶ್ವಾನರೋ ಭೂತ್ವಾ#*  ಭಗವಂತನು ವೈಶ್ವಾನರನಾಗಿ ಜೀವಿಗಳ ಭಕ್ಷ್ಯ- ಭೋಜ್ಯ- ಲೇಹ್ಯ- ಚೋಷ್ಯಗಳೆಂಬ ನಾಲ್ಕು ವಿಧದ ಅನ್ನವನ್ನು ಜೀರ್ಣಮಾಡುತ್ತಾನೆ ಅಥವಾ ತಿನ್ನುತ್ತಾನೆ._ _ಚಿತ್ರಕ ಎಂಬ ಮರಕ್ಕೂ ವೈಶ್ವಾನರ ಎಂಬ ಹೆಸರಿದೆ. ಬಹುಶಃ ಆ ಮರ ಉರಿಯುವ ಬೆಂಕಿಯಂತ...

ರಾಮಾಯಣ-೧೬೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೧🏝📖      *ತಸ್ಯ ವ್ಯತಿಕ್ರಮಾದ್ರಾಜ್ಞೋ ಭವಿಷ್ಯತಿ ಸುದಾರುಣಾ ಅನಾವೃಷ್ಟಿಃ ಸುಘೋರಾ ವೈ ಸರ್ವಭೂತದಯಾವಹಾ* _ಸೂತನಾದ ಸುಮಂತ್ರನು ದಶರಥನಿಗೆ ಋಷ್ಯಶೃಂಗನ ಕಥೆ ಹೇಳುತ್ತಾ ನುಡಿಯುವ ಮಾತು. ಮಹಾಬಲಶಾಲಿಯಾದ ರೋಮಪಾದನು ಅಂಗದೇಶವನ್ನು ಆಳುತ್ತಿದ್ದಾಗ ಧರ್ಮವ್ಯತಿಕ್ರಮ ಆಚರಿಸಿದ ಕಾರಣ ಅನಾವೃಷ್ಟಿ ತಲೆದೋರಿತು. ರೋಮಪಾದನು ಬಹಳ ಅಧ್ಯಯನ ನಡೆಸಿದ್ದನು ಹಾಗೂ ಒಳ್ಳೆಯ ರೀತಿಯಲ್ಲಿ ರಾಜ್ಯವಾಳುತ್ತಿದ್ದನು. ಆದರೂ ಯಾವುದೋ ಸಂದರ್ಭದಲ್ಲಿ ಅವನು ಮಾಡಿದ ಅನರ್ಥ ಇಡೀ ದೇಶಕ್ಕೆ ಗಂಡಾಂತರ ತಂದುಕೊಟ್ಟಿತು. ರಾಜನ ಒಂದು ಅನರ್ಥ ಲಕ್ಷಾಂತರ ಪ್ರಜೆಗಳ, ಜೀವಿಗಳ ಪ್ರಾಣಕ್ಕೆ ಕುತ್ತು ತಂದಿತು. ಹಾಗಾಗಿ ನಾವು ರಾಜನನ್ನು ಆಯ್ಕೆ ಮಾಡುವಾಗ ಧರ್ಮಿಷ್ಠರನ್ನು ಆರಿಸುವುದು ನಮ್ಮ ಕ್ಷೇಮಕ್ಕಾಗಿ ತುಂಬಾ ಆವಶ್ಯಕ. ಧರ್ಮ ಮೀರಿ ನಡೆಯುವನೆಂದರೆ ನಾವೇ ಮುಂದೆ ಕಷ್ಟ ಅನುಭವಿಸಬೇಕು ಎಂದು ಅರ್ಥ._ *ಭವಂತಃ ಶ್ರುತಧರ್ಮಾಣೋ ಲೋಕಚಾರಿತ್ರವೇದಿನಃ ಸಮಾದಿಶಂತು ನಿಯಮಂ ಪ್ರಾಯಶ್ಚಿತ್ತಂ ಯಥಾ ಭವೇತ್* _ತಪ್ಪು ಮಾಡಿ ಅದನ್ನು ತಿದ್ದಿಕೊಳ್ಳುವ ಮನಸ್ಸು ರೋಮಪಾದನಿಗಿತ್ತು. ಹಾಗಾಗಿ ಜ್ಞಾನಿಗಳನ್ನು ಕರೆದು ಹೀಗೆ ಅರಿಕೆ ಮಾಡಿಕೊಳ್ಳುತ್ತಾನೆ- ನಾನು ತಪ್ಪೆಸಗಿದ್ದು ಹೌದು, ನೀವು ಅದನ್ನು ಅರಿತಿರುವಿರಿ, ನನ್ನ ತಪ್ಪಿಗೆ ಸರಿಯಾದ ಪ್ರಾಯಶ್ಚಿತ್ತ ವಿಧಿಸಿರಿ. ಏನು ಮಾಡಿದರೆ ಧರ್ಮವ್ಯತಿಕ್ರಮದ ದೋಷ ಪರಿಹಾರ ಆಗುವುದೋ ಅಂ...

ಪದಶಕ್ತಿ-೩೭

🏹*ಪದಶಕ್ತಿ* ---೩೭🌄  *ಅಗ್ನಿ* _*ಅಂಗತಿ ಊರ್ಧ್ವಂ ಗಚ್ಛತಿ* ಎಂದರೆ ಮೇಲಕ್ಕೆ ಹೋಗುವಂತಹ ವಸ್ತುವೇ ಅಗ್ನಿ. ಬೆಂಕಿ ಉರಿದು ಎತ್ತರೆತ್ತರಕ್ಕೆ ಚಾಚುವುದು ಅದರ ಸಹಜತೆ._ _ಚಲನೆಯಿಲ್ಲದ ವಸ್ತುವಿಗೂ ಚಲನೆ ಕೊಡುವ ಕಾರಣ ಅಗ್ನಿ ಎಂದು ಇನ್ನೊಂದು ಅರ್ಥ._ _ಅಗ್ನಿ ಮುಖ್ಯವಾಗಿ ಮೂರು ವಿಧ. ಭೌಮ,ದಿವ್ಯ,ಜಾಠರ. ಕಟ್ಟಿಗೆ ಮೊದಲಾದ ಉರುವಲುಗಳಿಂದ ಉರಿಸುವಂತಹ ಬೆಂಕಿ ಭೌಮ. ನೀರು-ಗಾಳಿ ಮೊದಲಾದವುಗಳ ಜೊತೆಗೆ ಹುಟ್ಟುವಂತಹದು ದಿವ್ಯ. ಮಿಂಚು ಮೊದಲಾದದ್ದು. ಇವೆರಡಕ್ಕೂ ಊರ್ಧ್ವಗತಿ. ಮೂರನೆಯ ಅಗ್ನಿ ತಿಂದ ಆಹಾರ ಕರಗಿಸಿ ದೇಹದ ಉಷ್ಣಾಂಶವನ್ನು ರಕ್ಷಿಸುವಂತಹದು. ಇದು ಹೆಚ್ಚಾದರೆ ದೇಹಕ್ಕೆ ಸೇರಬೇಕಾದ ಎಲ್ಲವನ್ನೂ ಸುಟ್ಟು ಭಸ್ಮಕ ಎಂದು ಕರೆಸಿಕೊಳ್ಳುತ್ತದೆ._ _ನಿತ್ಯ ಆರಾಧಿಸುವ ಅಗ್ನಿಯು ಮೂರು ಕಾಲಕ್ಕೆ ಮೂರು ವಿಧ. ಆಹವನೀಯ-ದಕ್ಷಿಣ- ಗಾರ್ಹಪತ್ಯ._ _ಋಗ್ವೇದದಲ್ಲಿ ಸುಮಾರು ಇನ್ನೂರ ಐವತ್ತಕ್ಕೂ ಮೀರಿ ಸೂಕ್ತಗಳು ಈ ಅಗ್ನಿಯನ್ನು ಸ್ತುತಿಸಿವೆ. ಅಗ್ನಿಯನ್ನು ಹೊಗಳುವ ಮಂತ್ರಗಳು ಎಲ್ಲಾ ವೇದಗಳಲ್ಲೂ ಸಹಜವಾಗಿವೆ. ಅಗ್ನಿಯು ಬರೀ ವೇದಪರಂಪರೆಯವರಿಗೆ ಮಾತ್ರ ದೇವನಾಗಿರದೆ ಯಹೂದಿಯರಿಗೆ-ಪಾರ್ಸಿಗಳಿಗೆ- ಜ್ಯೂಗಳಿಗೆ- ರೋಮನ್ನರಿಗೆ ಹೀಗೆ ಹೆಚ್ಚಿನ ಧರ್ಮಗಳಲ್ಲಿ ಪೂಜ್ಯನಾಗಿರುವುದು ಅವನ ಮಹತ್ವಕ್ಕೆ ಸಾಕ್ಷಿ._ _ವೇದದ ನುಡಿಯಂತೆ ಹಿಂದೊಮ್ಮೆ ಅಗ್ನಿ ಕೋಪಿಸಿಕೊಂಡು ಲೋಕದಲ್ಲಿ ಅವ್ಯವಸ್ಥೆ ತೋರಿದಾಗ ದೇವತೆಗಳು ಅವನಿಗೂ ಅವನ ಮೂವರು ತಮ್ಮಂದಿರಿಗೂ ಹವಿರ್ಭಾ...

ರಾಮಾಯಣ-೧೬೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೦🏝📖     *ಛಿದ್ರಂ ಹಿ ಮೃಗಯಂತೇತ್ರ ವಿದ್ವಾಂಸೋ ಬ್ರಹ್ಮರಾಕ್ಷಸಾಃ | ನಿಹತಸ್ಯ ಚ ಯಜ್ಞಸ್ಯ ಸದ್ಯಃ ಕರ್ತಾ ವಿನಶ್ಯತಿ||* _ದಶರಥನ ಮಾತು.ಅಶ್ವಮೇಧ ಯಜ್ಞವನ್ನು ಯಾವ ರಾಜರು ಬೇಕಾದರೂ ಮಾಡಬಹುದು. ಆದರೆ ತಪ್ಪಿಲ್ಲದಂತೆ ಮಾಡಬೇಕಾದುದು ಮುಖ್ಯ.ಈ ಯಜ್ಞದಲ್ಲಿ ಸ್ವಲ್ಪ ನ್ಯೂನ ಅತಿರಿಕ್ತ ಉಂಟಾದರೂ ಒಡನೆಯೇ ಕರ್ತೃವಿಗೆ ಅನರ್ಥವಾಗುತ್ತದೆ. ವಿದ್ವಾಂಸರಾದ ಬ್ರಹ್ಮರಾಕ್ಷಸರು ಈ ಯಜ್ಞದಲ್ಲಿ ಏನು ತಪ್ಪು ನಡೆಯುವುದೆಂದು ಹುಡುಕುತ್ತಿರುತ್ತಾರೆ. ಅದರ ಫಲದಿಂದ ದೋಷವಾದರೆ ಕರ್ತೃವು ನಾಶ ಹೊಂದುವನು. ಹಾಗಾಗಿ ತುಂಬಾ ಜಾಗರೂಕರಾಗಿ._ _ಇಲ್ಲಿ ದಶರಥನ ಮುಂಜಾಗೃತೆ ತುಂಬಾ ಸಾಧುವಾಗಿದೆ. ಯಾರು  ಸಾಂಗ ವೇದ ಓದಿ ಇತರರಿಗೆ ಒಂದಕ್ಷರವೂ ಪಾಠ ಹೇಳಲಾರನೋ, ದಾನ ತೆಗೆದುಕೊಂಡು ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಏನನ್ನೂ ಮಾಡದೇ ಉಳಿಯುವನೋ, ಯಾಗ ಮಾಡಲು ಅನರ್ಹರಾದವರಿಗೆ ಯಜ್ಞ ಯಾಗ ಮಾಡಿಸುತ್ತಾ , ತನ್ನ ನಿತ್ಯದ ಅನುಷ್ಠಾನದಲ್ಲಿ ಆಸಕ್ತಿ ಹೊಂದದೇ ಇರುವನೋ ಅಂತಹ ಬ್ರಾಹ್ಮಣನು ಬ್ರಹ್ಮರಾಕ್ಷಸನಾಗುವನು._ _ಇಷ್ಟಲ್ಲದೆ *ಪರಸ್ಯ ಯೋಷಿತಂ ಹೃತ್ವಾ ಪರಸ್ವಮಪಹೃತ್ಯ ಚ | ಅರಣ್ಯೇ ನಿರ್ಜನೇ ದೇಶೇ ಭವತಿ ಬ್ರಹ್ಮರಾಕ್ಷಸಃ ||*  ಎಂಬಂತೆ ಪರಸ್ತ್ರೀ ಅಪಹಾರಕ, ಪರರ ಸ್ವತ್ತಿನ ಅಪಹಾರಕನಾದ ಬ್ರಾಹ್ಮಣನು ಬ್ರಹ್ಮರಾಕ್ಷಸನಾಗುವನು._ _ಇನ್ನೂ  ನೋಡುವುದಾದರೆ *ಸಂಯೋಗಂ ಪತಿತೈರ್ಗತ್ವಾ ಪರಸ್ಯೈವ ಚ...

ರಾಮಾಯಣ-೧೫೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೯🏝📖     *ಚಿಂತಯಾನಸ್ಯ ತಸ್ಯೇಯಂ ಬುದ್ಧಿರಾಸೀನ್ಮಹಾತ್ಮನಃ | ಸುತಾರ್ಥೀ ಹಯಮೇಧೇನ ಕಿಮರ್ಥಂ ನ ಯಜಾಮ್ಯಹಮ್ ||* _ಎಲ್ಲಾ ರೀತಿಯಿಂದಲೂ ಸಮೃದ್ಧವಾಗಿದ್ದ ಅಯೋಧ್ಯೆಯಲ್ಲಿ ರಾಜನಾದ ದಶರಥನ ಮನದಲ್ಲಿ ಒಮ್ಮೆ ಇಂತಹ ಯೋಚನೆ ಮೂಡಿತು. ಕ್ಷತ್ರಿಯರಿಗೆ ಯೋಗ್ಯವಾದ ಯಜ್ಞಗಳಲ್ಲಿ ರಾಜಸೂಯ, ಅಶ್ವಮೇಧ, ವಿಶ್ವಜಿತ್ ಮೊದಲಾದವು ಪ್ರಮುಖವಾದವು. ಇವುಗಳಲ್ಲಿ ಪುತ್ರಾರ್ಥಿಯಾಗಿ ಅಶ್ವಮೇಧ ಯಾಗವನ್ನು ಮಾಡಬೇಕೆಂದು ನಿಶ್ಚಯಿಸಿದನು. ಇದನ್ನು ನೋಡಿದರೆ ಚಕ್ರವರ್ತಿ ಆಗಬೇಕೆಂದು ಅಥವಾ ತನ್ನ ಪರಾಕ್ರಮ ತೋರಬೇಕೆಂಬ ಇಚ್ಛೆ ಮಾತ್ರವಲ್ಲದೆ ಬೇರೆ ಕಾಮನೆಗಳ ಈಡೇರಿಕೆಗೂ  ಅಶ್ವಮೇಧ ಮಾಡಬಹುದೆಂಬ ಸಂಗತಿ ತಿಳಿಯುತ್ತದೆ._ *ಪಾಪ್ಮಾನಂ ತರತಿ ತರತಿ ಬ್ರಹ್ಮಹತ್ಯಾಂ ಯೋಶ್ವಮೇಧೇನ ಯಜತೇ* ಯಜುರ್ವೇದ ಸಂಹಿತೆ *ರಾಜಾ ಸಾರ್ವಭೌಮೋಶ್ವಮೇಧೇನ ಯಜೇತ* ಸ್ಮೃತಿ _ಇವೆರಡನ್ನು ಗಮನಿಸಿದಾಗ ಪಾಪ ಪರಿಹಾರಕವಾಗಿ ಹಾಗೂ ಸಾರ್ವಭೌಮತ್ವ ಪ್ರತಿಪಾದನೆ ಹೀಗೆ ಎರಡೂ ಕಾರಣಗಳಿಂದ ಹಯಮೇಧ ಮಾಡಬಹುದೆನ್ನುವುದು ಸ್ಪಷ್ಟವಾಗಿ ತೋರುತ್ತದೆ. ಕ್ಷತ್ರಿಯರಿಗೆ ಮಾತ್ರ ಏಕೆಂದರೆ ಯುದ್ಧ ಮಾಡುವ ಸಾಮರ್ಥ್ಯ ಹಾಗೂ ಆಡಳಿತ ನಡೆಸುತ್ತಿದ್ದುದು ಅವರು ಮಾತ್ರ._ *ಸರ್ವಥಾ ಪ್ರಾಪ್ಸ್ಯಸೇ ಪುತ್ರಾನಭಿಪ್ರೇತಾಂಶ್ಚ ಪಾರ್ಥಿವ | ಯಸ್ಯ ತೇ ಧಾರ್ಮಿಕೀ ಬುದ್ಧಿರಿಯಂ ಪುತ್ರಾರ್ಥಮಾಗತಾ||* _ದಶರಥನ ಮಾತಿನಿಂದ ತುಂಬಾ ಸಂತೋಷಗೊಂಡ ವಸಿಷ್ಠ ಜಾಬಾಲ ...

ಪದಶಕ್ತಿ-೩೬

🏹*ಪದಶಕ್ತಿ* ---೩೬🌄 *ಗಂಧರ್ವ* _ಗಂಧಂ ಅರ್ವತಿ ಎಂದರೆ ಸುಗಂಧವನ್ನು ಹರಡುವವರು ಎಂಬ ಅರ್ಥದಲ್ಲಿ ಗಂಧರ್ವರು ಇದ್ದಾರೆ.  ಗಾಃ ಧಾರಯತಿ ಇತಿ ಎಂದರೆ ಸ್ತೋತ್ರರೂಪವಾದ ಮಾತನ್ನು ಸದಾ ಉಚ್ಚರಿಸುತ್ತಿರುತ್ತಾರೆ ಅಥವಾ ಹಾಡುತ್ತಿರುತ್ತಾರೆ ಎಂಬ ಅರ್ಥದಲ್ಲಿ ಗಂಧರ್ವರು. ಒಟ್ಟಾರೆ ಗಂಧರ್ವರು ಸುಗಂಧಭರಿತ, ಸಂಗೀತ ಸುಧೆಯ, ಮೃದು ಮಾತಿನ ದೇವ ಪ್ರಭೇದರು._ _ಕುದುರೆಗೂ ಗಂಧರ್ವ ಎಂಬ ಹೆಸರಿದೆ. ಕಸ್ತೂರೀ ಮೃಗಕ್ಕೂ ಈ ಹೆಸರಿದೆ. ವೇಗವಾಗಿ ಸಂಚರಿಸುವ ಕಾರಣ ಕುದುರೆಗೆ, ಪರಿಮಳ ಹೊರಸೂಸುವ ಕಾರಣ ಕಸ್ತೂರಿಗೆ ಈ ಹೆಸರು._ _ಗಂಧಂ ಆಮೋದಂ ಅರ್ವತಿ ಎಂದರೆ ಸದಾ ಸಂತೋಷವನ್ನು ಹರಡುತ್ತಾರೆ ಅಥವಾ ಸುಖಜೀವಿಗಳು ಎಂಬ ಅರ್ಥವೂ ಇವರಿಗೆ ಹೊಂದುತ್ತದೆ._ _ಸುಶ್ರುತ ಸಂಹಿತೆಯಲ್ಲಿ ನರರು ಯಾರಾದರೂ ಹಾಡು- ಕುಣಿತ- ಮೈಗೆ ಗಂಧ ಪೂಸಿಕೊಂಡು- ಮಾಲೆ ಮೊದಲಾದವನ್ನು ಧರಿಸಿ ಹುಚ್ಚರಂತೆ ವರ್ತಿಸುತ್ತಿದ್ದರೆ ಅದು ಗಂಧರ್ವ ಗ್ರಹ ಪೀಡಿತ ಎಂದಿದ್ದಾರೆ. ಇಸ್ಕಾನ್ ಪಂಥದವರು ಇಷ್ಟಲ್ಲದಿದ್ದರೂ ಕೆಲವು ಲಕ್ಷಣ ಹೊಂದಿದ್ದಾರೆ. ಆದರಲ್ಲಿ ಭಕ್ತಿಯಿಂದ ಮೈ ಮರೆಯುವ ಸಂಕೇತ ಹೊರತು ಗ್ರಹಪೀಡೆ ಅಲ್ಲ._ _ಹರಳೆಣ್ಣೆಗೂ ಗಂಧರ್ವತೈಲವೆಂಬ ಹೆಸರಿದೆ. ಬಹುಶಃ ತಂಪಾಗುವ ಕಾರಣದಿಂದ ಬಂದಿರಬಹುದು._ _ಗಾಃ ಧಾರಯತಿ ಕಿರಣಗಳನ್ನು ಹೊರಸೂಸುವ ಚಂದ್ರಾದಿತ್ಯರೂ ಗಂಧರ್ವರೇ ಸರಿ._ _ದೇವಗಾಯಕರೂ ಗಂಧರ್ವರು. ಹಾಹಾ- ಹೂಹೂ ಎಂಬಿಬ್ಬರು ಗಂಧರ್ವರು ಈಗಿನ ಗಾಗಾ- ಸಾಗಾರಂತೆ._ _ಗಂಧರ್ವ ಅಸ್ತ್ರ ಸಮ್ಮ...

ಧರ್ಮಾಚರಣೆ-೯೨

ಧರ್ಮಾಚರಣೆ-೯೨ ಯಜ್ಞಾನಾಂ ತಪಸಾಂ ಚೈವ ಶುಭಾನಾಂ ಚೈವ ಕರ್ಮಣಾಮ್ | ವೇದ ಏವ ದ್ವಿಜಾತೀನಾಂ ನಿಶ್ರೇಯಸಕರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ|| ದ್ವಿಜರಿಗೆ ಮೋಕ್ಷಕ್ಕೆ , ಇಹ-ಪರಗಳಲ್ಲಿ ಸುಖ ಸಿಗಲು ಪ್ರಯೋಜನಕಾರಿಯಾದುದು ವೇದಗಳೇ ಹೊರತು ಬೇರೊಂದಲ್ಲ. ಎಷ್ಟೇ ಯಜ್ಞ- ಯಾಗಗಳನ್ನು ಆಚರಿಸಿ, ಶರೀರ ಶೋಷಿಸುವ ಕೃಚ್ಛ್ರ-ಚಾಂದ್ರಾಯಣ- ಪಂಚಕ ಮೊದಲಾದ ಎಷ್ಟೇ ವ್ರತಗಳನ್ನು ಆಚರಿಸಿ, ಸಂಸ್ಕಾರಗಳನ್ನು ಬಹಳ ಶಾಸ್ತ್ರೋಕ್ತವಾಗಿ ಅದ್ದೂರಿ ಆಚರಿಸಿ ಸ್ವಶಾಖೆಯನ್ನು ಓದದೇ- ದಿನಕ್ಕೊಂದಷ್ಟು ಹೊತ್ತು ವೇದವನ್ನು ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಪಡದಿದ್ದರೆ ಏನೂ ಪ್ರಯೋಜನವಿಲ್ಲ. ದ್ವಿಜತ್ವ ಸಿದ್ಧಿಗೆ ವೇದವು ಆತ್ಯಂತಿಕವಾಗಿ ಸಹಕಾರಿ. ಅದಿಲ್ಲದ ದ್ವಿಜತ್ವ ದಾರ ಹಾಕಿದ ಕಂಬದಂತೆಯೇ ಸರಿ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೯೧

ಧರ್ಮಾಚರಣೆ-೯೧ ಸಂಧ್ಯಾ ಪ್ರಾಕ್ಪ್ರಾತರೇವಂ ಹಿ ತಿಷ್ಠೇದಾಸೂರ್ಯದರ್ಶನಾತ್ | ಅಗ್ನಿಕಾರ್ಯಂ ತತಃ ಕುರ್ಯಾತ್ಸಂಧ್ಯಯೋರುಭಯೋರಪಿ || ಯಾಜ್ಞವಲ್ಕ್ಯ ಸ್ಮೃತಿ|| ಮುಂಜಾನೆಯ ಸಂಧ್ಯಾವಂದನೆಯು ಸೂರ್ಯೋದಯದ ತನಕ ಮುಂದುವರೆಯಬೇಕು. ಅನಂತರ ಅಗ್ನಿಕಾರ್ಯ/ ಔಪಾಸನೆ/ ವೈಶ್ವದೇವಗಳನ್ನು ಮಾಡಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಅಜಪಾ ಜಪ ಮಾಡುತ್ತಾ ದೇಹಶುದ್ಧಿ ಮಾಡಿಕೊಂಡು ಗಾಯತ್ರೀ ಜಪಿಸುತ್ತಾ ಇರಬೇಕು. ಸೂರ್ಯೋದಯಕ್ಕೆ ಸರಿಯಾಗಿ ಅರ್ಘ್ಯ ಕೊಟ್ಟು ಅಗ್ನಿ ಆರಾಧನೆ ಮುಂದುವರೆಸಬೇಕು ಎನ್ನುತ್ತದೆ ಶಾಸ್ತ್ರ. ತಡವಾಗಿ ಕೊಟ್ಟರೆ ಹೇಗೆ ಪ್ರಯೋಜನ ಇಲ್ಲವೋ ಅಂತೆಯೇ ನಮ್ಮ ಅನುಕೂಲಕ್ಕೆಂದು ಬ್ರಹ್ಮಕಲಶ/ ಮಹಾಯಾಗ/ ನಿತ್ಯ ಹೋಮಹವನಗಳಿಗೆಂದು ಸೂರ್ಯನ ಉದಯದ ಮುಂಚೆಯೇ ಸಂಧ್ಯಾವಂದನೆ, ವೈಶ್ವದೇವ, ಯಜ್ಞ ಯಾಗಾದಿಗಳನ್ನು ಮಾಡಿದರೆ ಅದು ವ್ಯರ್ಥ. ಜನರು ಬರುವ ಮುಂಚೆಯೇ ಊಟ ಬಡಿಸಿ ಗುಡಿಸಿದಂತೆ ಆಗುತ್ತದೆ. ದೇವತೆಗಳ ಆಗಮನ ಸೂರ್ಯೋದಯದ ನಂತರ. ಅದಕ್ಕೆ ಪೂರ್ವದಲ್ಲಿ ವೇದೋಕ್ತ ಕರ್ಮಗಳನ್ನು ಪ್ರಾರಂಭ ಮಾಡಲು ಶಾಸ್ತ್ರೀಯ ಸಮ್ಮತಿ ಇಲ್ಲ. ನಮಗಾದರೂ ಅಷ್ಟೇ ಸಮಯಕ್ಕೆ ಸರಿಯಾಗಿ ದೊರೆತ ಆಹಾರವು, ಗೌರವವು ಸ್ವೀಕೃತವಾಗುತ್ತದೆ. ಇಲ್ಲದಿದ್ದರೆ ಅಸಮಾಧಾನ, ಶಾಪಕ್ಕೆ ಕಾರಣವಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೯೦

ಧರ್ಮಾಚರಣೆ-೯೦ ಸ ಗುರುರ್ಯಃ ಕ್ರಿಯಾಃ ಕೃತ್ವಾ ವೇದಮಸ್ಮೈ ಪ್ರಯಚ್ಛತಿ | ಉಪನೀಯ ದದದ್ವೇದಮಾಚಾರ್ಯಃ ಸ ಉದಾಹೃತಃ || ಯಾಜ್ಞವಲ್ಕ್ಯ ಸ್ಮೃತಿ|| ವೇದೋಕ್ತ ಕರ್ಮಗಳನ್ನು ಅಂದರೆ ಸಂಧ್ಯಾವಂದನೆ- ಬ್ರಹ್ಮಯಜ್ಞ- ಔಪಾಸನೆ- ವೈಶ್ವದೇವ- ಪೂಜೆ- ಅತಿಥಿಸತ್ಕಾರ- ಶ್ರಾದ್ಧಾದಿಗಳು- ಪ್ರಾಣಿಗಳಿಗೆ ಆಹಾರ ಕೊಡುವುದು- ಸ್ವಾಧ್ಯಾಯ ತಾನು ನಡೆಸಿ ಇನ್ನೊಬ್ಬರಿಗೆ ವೇದವನ್ನು ಪಾಠ ಮಾಡುವವನು ಗುರು ಎನಿಸಿಕೊಳ್ಳುತ್ತಾನೆ. ತಾನು ಸುಳ್ಳು ಹೇಳಿ ವಿದ್ಯಾರ್ಥಿಗೆ ನೀತಿಯ ಪಾಠ ಮಾಡುವವನು ಗುರುವಲ್ಲ. ವಿದ್ಯೆಯನ್ನು ಅರಸಿ ಉಪನಯನಕ್ಕೆ ಪೂರ್ವದಲ್ಲಿ ಸತ್ಯಕಾಮನಂತೆ ಬಂದರೆ ಉಪನಯನ ಮಾಡಿ ವೇದ ಹೇಳಿಕೊಟ್ಟರೆ ಅವನು ಆಚಾರ್ಯ ಎಂದು ಕರೆಸಿಕೊಳ್ಳುತ್ತಾನೆ. ಹಾಗಾಗಿ ಗುರು- ಆಚಾರ್ಯ ಎಂದು ಕರೆಸಿಕೊಳ್ಳಲು ಸಾಕಷ್ಟು ಯೋಗ್ಯತೆ ಸಂಪಾದಿಸಬೇಕಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೯

ಧರ್ಮಾಚರಣೆ-೮೯ ಮಧುಮಾಂಸಾಂಜನೋಚ್ಛಿಷ್ಟ ಶುಕ್ತ ಸ್ತ್ರೀ ಪ್ರಾಣಿಹಿಂಸನಮ್ | ಭಾಸ್ಕರಾಲ್ಲೋಕನ ಅಶ್ಲೀಲಪರಿವಾದಾದಿ ವರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ||  ಮದ್ಯ ಸೇವನೆ, ಮಾಂಸಭಕ್ಷಣ, ಕಾಡಿಗೆ ಹಚ್ಚುವುದು, ಎಂಜಲು ತಿನ್ನುವುದು, ನಿಷ್ಠುರ ಮಾತು, ಸ್ತ್ರೀ ಭೋಗ, ಪ್ರಾಣಿಹಿಂಸೆ, ಉದಯ ಅಥವಾ ಅಸ್ತಕಾಲದಲ್ಲಿ ಬಹಳ ಹೊತ್ತು ಸೂರ್ಯನನ್ನು ನೋಡುವುದು, ಅಶ್ಲೀಲವಾದ ಮಾತುಗಳು, ಇನ್ನೊಬ್ಬರ ದೋಷಗಳನ್ನು ಎತ್ತಿ ಆಡುವುದು ಇವಿಷ್ಟನ್ನು ವಿದ್ಯಾರ್ಥಿಯು ಮಾಡಲೇಬಾರದು.ಇವುಗಳೆಲ್ಲವೂ ಅವನ/ಳ ಬ್ರಹ್ಮಚರ್ಯಕ್ಕೆ ಧಕ್ಕೆ ತಂದು ಅಥವಾ ಏಕಾಗ್ರತೆಗೆ ಭಂಗ ತಂದು ವಿದ್ಯಾರ್ಜನೆಗೆ ದೊಡ್ಡ ತೊಡಕಾಗಬಹುದು. ಮುಂದಿನ ಭವಿಷ್ಯದ ದೃಷ್ಟಿಯಿಂದ ಇಂದೇ ಜಾಗರೂಕತೆ ವಹಿಸುವುದು  ಬುದ್ಧಿವಂತಿಕೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೮

ಧರ್ಮಾಚರಣೆ-೮೮ ದಂಡಾಜಿನೋಪವೀತಾನಿ ಮೇಖಲಾಂ ಚೈವ ಧಾರಯೇತ್ | ಬ್ರಾಹ್ಮಣೇಷು ಚರೇದ್ಭೈಕ್ಷಮನಿಂದ್ಯೇಷ್ವಾತ್ಮವೃತ್ತಯೇ ||ಯಾಜ್ಞವಲ್ಕ್ಯ ಸ್ಮೃತಿ|| ಆತ್ಮರಕ್ಷಣೆಗೆ ದಂಡ, ಶುದ್ಧತೆಗೆ ಕೃಷ್ಣಾಜಿನ, ದೇವತೆಗಳ ಅನುಗ್ರಹಕ್ಕೆ ಯಜ್ಞೋಪವೀತ, ಕೆಟ್ಟ ಚಿಂತನೆ ಸುಳಿಯದಂತೆ ಕಟಿಗೆ ಮೇಖಲೆಯನ್ನು ಬ್ರಹ್ಮಚಾರಿಯು ಧರಿಸಬೇಕು. ದೋಷರಹಿತನೂ, ಗುರುಗಳು- ಹಿರಿಯರು ಹೇಳಿದ ಕರ್ಮಗಳಲ್ಲಿ ಹಾಗೂ ತನ್ನ ವಿದ್ಯಾರ್ಜನೆಯಲ್ಲಿ ರತನಾಗಿ ಯಾರು ಪ್ರಾಮಾಣಿಕವಾಗಿ- ಸಮಾಜಕ್ಕೆ ಹೊರೆಯಾಗದಂತೆ ಬದುಕುತ್ತಿರುವರೋ ಅಂತಹವರ ಬಳಿಯಲ್ಲಿ ಅನ್ನ ಪಡೆದು ಜೀವನ ನಡೆಸಬೇಕು. ಕೆಟ್ಟವರ ಅನ್ನವು ಕೆಟ್ಟ ಮನಸ್ಸನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇವುಗಳ ತಿಳುವಳಿಕೆಯು ಮುಂದೆ ಸಮಾಜಕ್ಕೆ ಉಪಕಾರಿಯಾಗಿ ನಾಲ್ಕು ಜನಕ್ಕೆ ಸಹಕಾರಿಯಾಗಿ ಬದುಕಲು ಪ್ರೇರಣೆ ನೀಡುತ್ತದೆ. ಬ್ರಹ್ಮಚರ್ಯ ಆಶ್ರಮದ ಜೀವನ ಹೀಗೆ ಸಾಗಿದಾಗ ಮಾತ್ರ ಸಾರ್ಥಕವೆನಿಸುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೭

ಧರ್ಮಾಚರಣೆ-೮೭ ಕೃತಜ್ಞಾದ್ರೋಹಿಮೇಧಾವಿ ಶುಚಿಕಲ್ಯಾನಸೂಯಕಾಃ | ಅಧ್ಯಾಪ್ಯಾ ಧರ್ಮತಃ ಸಾಧುಶಕ್ತಾಪ್ತಜ್ಞಾನವಿತ್ತದಾಃ || ಯಾಜ್ಞವಲ್ಕ್ಯ ಸ್ಮೃತಿ|| ಮಾಡಿದ್ದನ್ನು ನೆನಪಿಟ್ಟುಕೊಳ್ಳುವ ಕೃತಜ್ಞರಿಗೆ, ದ್ರೋಹ ಮಾಡದವರಿಗೆ, ಪಾಠ ಮಾಡಿದ್ದನ್ನು ಗ್ರಹಿಸುವ ಸಾಮರ್ಥ್ಯ ಇದ್ದವರಿಗೆ, ದೈಹಿಕ- ಮಾನಸಿಕ ಶುದ್ಧತೆ ಕಾಪಾಡಿಕೊಂಡವರಿಗೆ, ಸಮರ್ಥರಿಗೆ, ಅಸೂಯೆ ಪಡದೇ ಇದ್ದವರಿಗೆ, ಆಚಾರಸಂಪನ್ನರಿಗೆ, ಗುರುಗಳು ಬಯಸಿದಾಗ ಏನಾದರೂ ಕಾರ್ಯ ಮಾಡಲು ಆಸಕ್ತಿ ಇದ್ದವರಿಗೆ, ತನ್ನಲ್ಲಿರುವ ವಿದ್ಯೆ ಅಥವಾ ಧನವನ್ನು ಇನ್ನೊಬ್ಬರಿಗೆ ದಾನ ಮಾಡುವ ಉದಾರ ಬುದ್ಧಿಯ ವ್ಯಕ್ತಿಗಳಿಗೆ ಅಂತಹ ಶಿಷ್ಯ/ಶಿಷ್ಯೆಯರಿಗೆ ಮಾತ್ರ ವಿದ್ಯಾದಾನ ಮಾಡಬೇಕು. ಗುರುಗಳ ನೆನಪೇ ಇಲ್ಲದವರಿಗೆ, ಗುರುಗಳಿಗೇ ವಂಚನೆ ಎಸಗುವವರಿಗೆ, ಏನು ಪಾಠ ಮಾಡಿದರೂ ತಲೆಗೆ ಹತ್ತದವರಿಗೆ, ಕಾಯಾ-ವಾಚಾ- ಮನಸಾ ಭೇದ ಇರುವವರಿಗೆ, ಮಾನಸಿಕ ಅಸಮರ್ಥರಿಗೆ, ಮತ್ಸರಿಗಳಿಗೆ, ಯಾರಿಗೂ ಸಹಾಯ ಮಾಡುವ ಮನಸ್ಸಿಲ್ಲದ ಸ್ವಾರ್ಥಿಗಳಿಗೆ ಎಂದಿಗೂ ಪವಿತ್ರವಾದ ಜ್ಞಾನ ನೀಡಬಾರದು. ಅಂತಹವರಿಗೆ ನೀಡಿದ ವಿದ್ಯೆಯು ಸಮಾಜದಲ್ಲಿ ಭಯೋತ್ಪಾದಕ-ವಂಚಕ-ದ್ರೋಹಿ-ಕಟುಕರನ್ನು ಸೃಷ್ಟಿಸೀತು.ಅದು ನಮ್ಮ ಮಕ್ಕಳಿರಲಿ ಬೇರೆಯವರ ಮಕ್ಕಳಿರಲಿ ವಿದ್ಯೆಯನ್ನು ಯೋಗ್ಯ ವ್ಯಕ್ತಿಗೆ ಮಾತ್ರ ಧಾರೆ ಎರೆಯಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೬

ಧರ್ಮಾಚರಣೆ-೮೬ ಸ್ನಾನಮಬ್ಧೈವ ತೈರ್ಮಂತ್ರೈರ್ಮಾರ್ಜನಂ ಪ್ರಾಣಸಂಯಮಃ | ಸೂರ್ಯಶ್ಚ ಚಾಪ್ಯುಪಸ್ಥಾನಂ ಗಾಯತ್ರ್ಯಾಃ ಪ್ರತ್ಯಹಂ ಜಪಃ || ಯಾಜ್ಞವಲ್ಕ್ಯ ಸ್ಮೃತಿ|| ಮುಂಜಾನೆ ವರುಣನಿಗೆ ಸಂಬಂಧಿಸಿದ ಮಂತ್ರಗಳನ್ನು ಉಚ್ಚರಿಸುತ್ತಾ ಸ್ನಾನ ಮಾಡಿ, ಅನಂತರ ಅಬ್ಲಿಂಗಕ ಮಂತ್ರಗಳಿಂದ ಮಾರ್ಜನ ಮಾಡಿಕೊಂಡು, ಪ್ರಾಣವನ್ನು ಸಂಯಮನ ಮಾಡಿಕೊಂಡು, ( ಪ್ರಾಣಾಯಾಮ)  ಸೂರ್ಯನಿಗೆ ಅರ್ಘ್ಯ, ಉಪಸ್ಥಾನ ಹಾಗೂ ಮುಖ್ಯವಾಗಿ ಗಾಯತ್ರೀ ಜಪ ಇವಿಷ್ಟು  ಶ್ರೋತ್ರಿಯನು ಮಾಡಲೇಬೇಕಾದ ಅವಶ್ಯ ಕರ್ತವ್ಯಗಳು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೫

ಧರ್ಮಾಚರಣೆ-೮೫ ಏವಮೇನಂ ಶಮಂ ಯಾತಿ ಬೀಜಗರ್ಭಸಮುದ್ಭವಮ್ | ತೂಷ್ಣೀಮೇತಾಃ ಕ್ರಿಯಾಃ ಸ್ತ್ರೀಣಾಂ ವಿವಾಹಸ್ತು ಸಮಂತ್ರಕಃ || ಯಾಜ್ಞವಲ್ಕ್ಯ ಸ್ಮೃತಿ|| ಗರ್ಭಾದಾನ-ಪುಂಸವನ- ಸೀಮಂತ- ಜಾತಕರ್ಮ- ನಾಮಕರಣ- ಅನ್ನಪ್ರಾಶನ- ಉಪನಿಷ್ಕ್ರಮಣ- ಚೌಲ ಹೀಗೆ ಹುಟ್ಟಿದ ಮಗುವಿಗೆ ಸಂಸ್ಕಾರ ಮಾಡಿದಾಗ ಅಂಡಾಣು ಮತ್ತು ವೀರ್ಯಾಣುವಿನಲ್ಲಿ ಅಡಕವಾದ ಹಾಗೂ ಗರ್ಭಕ್ಕೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತವೆ. ಸ್ತ್ರೀ-ಪುರುಷ ಭೇದವಿಲ್ಲದೆ ಈ ಸಂಸ್ಕಾರಗಳನ್ನು ಪ್ರತಿ ಮಗುವಿಗೂ ಮಾಡಬೇಕು. ಸ್ತ್ರೀಯರು  ಮಂತ್ರಗಳನ್ನು ಉಚ್ಚರಿಸಿದಾಗ ಅವರ ಗರ್ಭಕೋಶ ಹಾಗೂ ಹಾರ್ಮೋನುಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅಮಂತ್ರಕವಾಗಿ ಇವುಗಳನ್ನು ಮಾಡಬೇಕು. ಪುರುಷರಿಗೆ ಮಂತ್ರಗಳ ಪ್ರಭಾವ ಸಹಕಾರಿ ಆದ ಕಾರಣ ಮಂತ್ರಸಹಿತವಾಗಿ ಮಾಡಬೇಕು. ಸ್ತ್ರೀ ಎಂದು ಸಂಸ್ಕಾರ ಮಾಡದೇ ಉಳಿಯುವುದನ್ನು ಯಾವ ಶಾಸ್ತ್ರಗಳೂ ಒಪ್ಪುವುದಿಲ್ಲ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೪

ಧರ್ಮಾಚರಣೆ-84 ಗರ್ಭಾದಾನಮೃತೌ ಪುಂಸಃ ಸವನಂ‌ ಸ್ಯಂದನಾತ್ಪುರಾ | ಷಷ್ಠೇಷ್ಟಮೇ ವಾ ಸೀಮಂತೋ ಮಾಸ್ಯೇತೇ ಜಾತಕರ್ಮ ಚ || ಅಹನ್ಯೇಕಾದಶೋನಾಮ ಚತುರ್ಥೇ ಮಾಸಿ ನಿಷ್ಕೃಮಃ | ಷಷ್ಠೇನ್ನಪ್ರಾಶನಂ ಮಾಸಿ ಚೂಡಾಕಾರ್ಯಾ ಯಥಾಕುಲಮ್ || ಯಾಜ್ಞವಲ್ಕ್ಯ ಸ್ಮೃತಿ|| ಮುಟ್ಟಾದ ಆರರಿಂದ - ಹದಿನಾರು ದಿನದವರೆಗೆ ಗರ್ಭಾದಾನ, ಗರ್ಭವು ಚಲಿಸುವ ಮುನ್ನ ಪುಂಸವನ, ಆರು ಅಥವಾ ಎಂಟನೇ ತಿಂಗಳಲ್ಲಿ ಸೀಮಂತ, ಹುಟ್ಟಿದ  ದಿನವೇ ಜಾತಕರ್ಮ, ಹನ್ನೊಂದನೇ ದಿನ ನಾಮಕರಣ, ನಾಲ್ಕನೇ ತಿಂಗಳು ಉಪನಿಷ್ಕೃಮಣ ಅಂದರೆ ಹೊರಗೆ ತಂದು ಬೆಳಕನ್ನು ತೋರುವುದು, ಆರನೆಯ ತಿಂಗಳಲ್ಲಿ ಅನ್ನಪ್ರಾಶನ, ಕುಲದ ಸಂಪ್ರದಾಯದಂತೆ ಚೂಡಾಕರ್ಮ ಅಂದರೆ ಕೂದಲು ತೆಗೆಯುವ ಸಂಸ್ಕಾರಗಳನ್ನು ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹಾಕಲೆಂದೇ ಚಿತ್ರ- ದೃಶ್ಯ ತೆಗೆಯುವುದು ಅಥವಾ ಕೇಕ್ ಮುಂತಾದವನ್ನು ಕತ್ತರಿಸಿ ಆಚರಿಸುವುದಕ್ಕಿಂತ ಇವುಗಳ ಆಚರಣೆ ಮಾನವನ ಮುಂದಿನ ಜೀವನ ಸುಸಂಸ್ಕೃತ ಆಗಲು ಮುಖ್ಯ ಕಾರಣ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com  

ಧರ್ಮಾಚರಣೆ-೮೩

ಧರ್ಮಾಚರಣೆ-೮೩ ಚತ್ವಾರೋ ವೇದಧರ್ಮಜ್ಞಾಃ ಪರ್ಷತ್ರೈವಿದ್ಯಮೇವ ವಾ| ಸಾಬ್ರೂತೇ ಯಂ ಸ ಧರ್ಮಃ ಸ್ಯಾದೇಕೋ ವಾಧ್ಯಾತ್ಮವಿತ್ತಮಃ || ಯಾಜ್ಞವಲ್ಕ್ಯ ಸ್ಮೃತಿ|| ನಾಲ್ಕು ಜನ ವೇದಜ್ಞರು ಅಂದರೆ ವೇದದ ಸಾರವನ್ನು ಬಲ್ಲ ವಿದ್ವಾಂಸರು ಒಂದು ಪರಿಷತ್ ಎಂದು ಕರೆಸಿಕೊಳ್ಳುತ್ತಾರೆ. ಮೂರು ಜನ ಅಂತಹ ಜ್ಞಾನಿಗಳು ಸೇರಿದರೂ ಅದೂ ಕೂಡ ಪರಿಷತ್ ಎಂದೇ ಕರೆಸಲ್ಪಡುವುದು. ಆತ್ಮ- ಪರಮಾತ್ಮನ ಬಗ್ಗೆ ಅರಿವಿರುವ ಅಧ್ಯಾತ್ಮಜ್ಞಾನಿ ಒಬ್ಬನಿದ್ದರೂ ಅವನೇ ಪರಿಷತ್ ಎನಿಸುವನು. ಇವರು ನಿರ್ಣಯಿಸಿದ ವಿಷಯ ಧರ್ಮವೆಂದು ಕರೆಸಿಕೊಳ್ಳುವುದು. ವೇದದ ಅನವರತ ಅಧ್ಯಯನ ಹಾಗೂ ಅಧ್ಯಾತ್ಮಜ್ಞಾನ ಇವೆರಡೂ ಎಲ್ಲೋ ಲಕ್ಷಕ್ಕೊಬ್ಬರಿಗೆ ಮಾತ್ರ ಸಿದ್ಧಿಸುವಂತಹದು. ಹಾಗಾಗಿ ಯಾರೋ ಶಾಸ್ತ್ರವಿದರು- ಹಿರಿಯರು- ಗುರುಗಳು ಹೇಳಿದರೆಂದು ಧರ್ಮದ ನಿರ್ಣಯ ಸಲ್ಲದು. ಧರ್ಮದ ನಡೆ ಅತ್ಯಂತ ಸೂಕ್ಷ್ಮವಾದುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com  

ಧರ್ಮಾಚರಣೆ-೮೨

ಧರ್ಮಾಚರಣೆ-೮೨ ಇಜ್ಯಾಚಾರ ದಮೋಹಿಂಸಾ ದಾನಂ ಸ್ವಾಧ್ಯಾಯ ಕರ್ಮಣಾಮ್ | ಅಯಂತು ಪರಮೋ ಧರ್ಮೋ ಯದ್ಯೋಗೇನಾತ್ಮದರ್ಶನಮ್ || ಯಾಜ್ಞವಲ್ಕ್ಯ ಸ್ಮೃತಿ|| ನಿತ್ಯದ ಔಪಾಸನೆ, ವೈಶ್ವದೇವ,ಅಗ್ನಿಹೋತ್ರ ಮೊದಲಾದ ಯಜ್ಞ, ಶಾಸ್ತ್ರ ಬೋಧಿಸಿರುವ ಸದಾಚಾರ, ಇಂದ್ರಿಯಗಳ ನಿಯಮನ, ಅಹಿಂಸೆ, ದಾನ, ಕಲಿತ ವಿದ್ಯೆಯ ಅಭ್ಯಾಸ, ಶಾಸ್ತ್ರೋಕ್ತ ಕರ್ಮಗಳ ಅನುಷ್ಠಾನ, ಏಕಾಗ್ರತೆಯಿಂದ ಭಗವಂತನ ಧ್ಯಾನ ಇವಿಷ್ಟು ಅತ್ಯಂತ ಶ್ರೇಷ್ಠವಾದ ಧರ್ಮದ ಆಚರಣೆಗಳು. ಇವುಗಳಲ್ಲಿ ಕೆಲವನ್ನು ಪಾಲಿಸಿದರೂ ನಾವು ಧರ್ಮಾತ್ಮರಾಗುತ್ತೇವೆ. ಹಾಗಲ್ಲದೆ ನಾನು ಹಿಂದೂ ಎಂದು ಬಾಯಿ ಮಾತಿನಲ್ಲಿ ಅಥವಾ ವೇಷಧರಿಸಿದ ಮಾತ್ರ ಎಂದಿಗೂ ಅಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೧

ಧರ್ಮಾಚರಣೆ-೮೧ ಶ್ರುತಿಃ ಸ್ಮೃತಿಃ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ | ಸಮ್ಯಕ್ ಸಂಕಲ್ಪಜಃ ಕಾಮೋ ಧರ್ಮಮೂಲಮಿದಂ ಸ್ಮೃತಮ್ || ಯಾಜ್ಞವಲ್ಕ್ಯ ಸ್ಮೃತಿ|| ಐದು ವಿಷಯಗಳು ಧರ್ಮಮೂಲವಾದವುಗಳು. ನಾಲ್ಕು ವೇದಗಳಲ್ಲಿ  ಹಾಗೂ ವೇದಾಂಗಗಳಲ್ಲಿ  ಹೇಳಿರುವ ವಿಷಯಗಳ ಆಚರಣೆ. ಹದಿನೆಂಟು ಸ್ಮೃತಿಗಳು ಹದಿನೆಂಟು ಉಪಸ್ಮೃತಿಗಳ ವಿಷಯಗಳ ಅನುಸರಣೆ, ಯಾವುದೇ ಜಾತಿ-ಮತ- ಧರ್ಮದ ಸಜ್ಜನರ ಆಚರಣೆಗಳ ಅನುಸರಣೆ ( ಇಲ್ಲಿ ಹಿಂದೂ, ಸ್ಮಾರ್ತ- ಮಾಧ್ವ, ಬ್ರಾಹ್ಮಣ-ಶೂದ್ರ ಇತ್ಯಾದಿ ನೋಡಬಾರದು. ) ತನಗೆ ಪ್ರಿಯವಾದದ್ದನ್ನು ಇತರರಿಗೂ ಬಯಸುವುದು ಉದಾಹರಣೆಗೆ ಸುಳ್ಳಾಡದಿರುವುದು- ವಂಚಿಸದಿರುವುದು ಇತ್ಯಾದಿ, ಸತ್ಸಂಕಲ್ಪದಿಂದ ಕೂಡಿದ ಕಾಮನೆ ಉದಾಹರಣೆಗೆ ದಾನ ಮಾಡಲು ಧನ- ಕಲಿಸಲು ವಿದ್ಯಾರ್ಜನೆ- ಉತ್ತಮ ಸಮಾಜಕ್ಕಾಗಿ ಸತ್ಸಂತಾನ ಇತ್ಯಾದಿಗಳು ಧರ್ಮಮೂಲವಾದ ವಿಷಯಗಳು. ಇವುಗಳ ಅನುಸರಿಸುವಿಕೆಯು ನಮ್ಮನ್ನು ಪಾಪ- ನರಕಗಳ ಸಂಕೋಲೆಯಿಂದ ದೂರ ಮಾಡುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೦

ಧರ್ಮಾಚರಣೆ-೮೦ ದೇಶಕಾಲ ಉಪಾಯೇನ ದ್ರವ್ಯಂ ಶ್ರದ್ಧಾ ಸಮನ್ವಿತಮ್ | ಪಾತ್ರೇ ಪ್ರದೀಯತೇ ಯತ್ತತ್ಸಕಲಂ ಧರ್ಮಲಕ್ಷಣಮ್ || ಯಾಜ್ಞವಲ್ಕ್ಯ ಸ್ಮೃತಿ|| ತೀರ್ಥಕ್ಷೇತ್ರ- ತುಳಸಿ ಸಮೀಪ- ಮಹಾನದಿಗಳ ಸಂಗಮ ಮೊದಲಾದ ಶ್ರೇಷ್ಠ ಪ್ರದೇಶಗಳು, ಗ್ರಹಣ-ಸಂಕ್ರಾಂತಿ- ವ್ಯತೀಪಾತ ವೈಧೃತಿ ಮೊದಲಾದ ಯೋಗಗಳಿರುವ ಕಾಲದಲ್ಲಿ ನಮ್ಮಲ್ಲಿರುವ ಅಲ್ಪವಿರಲಿ ಮಹತ್ತಾಗಿರಲಿ ದ್ರವ್ಯವನ್ನು ( ಧನ, ವಸ್ತ್ರ, ವಾಹನ, ಸುವರ್ಣ) ಶ್ರದ್ಧೆಯಿಂದ ಅತ್ಯಂತ ಪಾತ್ರನಾದ ವ್ಯಕ್ತಿಗೆ ಕೊಡುವುದು ಧರ್ಮದ ದೊಡ್ಡ ಲಕ್ಷಣವಾಗಿದೆ. ಬೇರೆಲ್ಲಾ ಬಗೆಯ ಜನರು ಸಿಕ್ಕಿದರೂ ದಾತಾ ಭವತಿ ವಾ ನ ವಾ ಎಂದಿದೆ ಶಾಸ್ತ್ರ. ಯೋಗ್ಯ ವ್ಯಕ್ತಿಗಳನ್ನು ಹುಡುಕಿ ಕಾಲ- ದೇಶಗಳನ್ನು ನಿರ್ಣಯಿಸಿ ದಾನ ಮಾಡುವುದು ಅತ್ಯಂತ ಶ್ರೇಯಸ್ಕರ. ನೀರು ಬೇಕಾದವನಿಗೆ ಧನ ಸಹಾಯವಲ್ಲ, ಗುಟುಕು ನೀರನ್ನೇ ಕೊಡಬೇಕು. ಪಾತ್ರರಲ್ಲದವರಿಗೆ ಮಾಡಿದ ದಾನ ವಂಚಕ ಕಂಪನಿಗಳಿಗೆ ಅಡವಿಟ್ಟಂತೆಯೇ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೯

ಧರ್ಮಾಚರಣೆ-೭೯ ಆಸನಾಚ್ಛಾದನಾದ್ದಾನಾತ್ ಸಂಭಾಷಾತ್ ಸಹಭೋಜನಾತ್ | ಸಂಕ್ರಮಂತೀಹ ಪಾಪಾನಿ ತೈಲಬಿಂದುರಿವಾಂಭಸಿ || ಪರಾಶರ ಸ್ಮೃತಿ|| ಪಾಪಿಗಳ ಜೊತೆಗೆ ನಡೆಯುವುದು- ಕುಳಿತುಕೊಳ್ಳುವುದು- ಮಾತನಾಡುವುದು- ಊಟ ಮಾಡುವುದು ಇತ್ಯಾದಿ ಮಾಡಿದಾಗ ನೀರಿನಲ್ಲಿ ಎಣ್ಣೆಯ ಒಂದು ಬಿಂದುವೂ ಹೇಗೆ ವ್ಯಾಪಿಸುತ್ತದೋ ಅದರಂತೆ ಅವರ ಪಾಪವೂ ನಮ್ಮನ್ನು ವ್ಯಾಪಿಸುವುದು. ಹಾಗಾಗಿ ಪಾಪ ಮಾಡಿದವರ ಜೊತೆಗಿನ ವ್ಯವಹಾರ ಉದ್ದೇಶಪೂರ್ವಕವಾಗಿ ತ್ಯಜಿಸಬೇಕು. ಹೆಂಡದಂಗಡಿಗೆ ಹೋದರೂ ಜನರು ಕುಡಿದರೆಂದೇ ಹೇಗೆ ಭಾವಿಸುವರೋ ಇಲ್ಲಿ ಪಾಪಿಯ ಜೊತೆಗಿನ ಪ್ರತಿಯೊಂದು ಕ್ರಿಯೆಯೂ ಪಾಪಭಾಜನರಾಗಲು ಕಾರಣವಾಗುವುದು. ನಾವೂ ಪಾಪ ಮಾಡದೇ ಪುಣ್ಯಸಂಗ್ರಹದತ್ತ ಗಮನ ಹರಿಸಬೇಕು.  ಇಲ್ಲಿಗೆ ಪರಾಶರ ಸ್ಮೃತಿಯ ಸಂಗ್ರಹ ಶ್ಲೋಕಗಳು ಮುಗಿದವು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೮

ಧರ್ಮಾಚರಣೆ-೭೮ ಗೃಹಸ್ಥಃ ಕಾಮತಃ ಕುರ್ಯಾತ್ ರೇತಸಃ ಸ್ಖಲನಂ ಯದಿ | ಸಹಸ್ರಂ ತು ಜಪೇದ್ದೇವ್ಯಾಃ ಪ್ರಾಣಾಯಾಮೈಸ್ತ್ರಿಭಿಃ ಸಹ || ಪರಾಶರ ಸ್ಮೃತಿ|| ಗೃಹಸ್ಥನಾದವನು ಯಾವುದೋ ಸಂದರ್ಭದಲ್ಲಿ ಕಾಮವಾಸನೆಗೆ ಒಳಗಾಗಿ ರೇತಸ್ಖಲನ ಮಾಡಿಕೊಂಡರೆ ಪ್ರಾಯಶ್ಚಿತ್ತವೆಂದು ಸಾವಿರ ಗಾಯತ್ರೀ ಜಪ ಅಥವಾ ಸಾವಿರ ಬಾರಿ ಇಷ್ಟ ದೇವತೆಯ ನಾಮಜಪ ಮಾಡಬೇಕು ಹಾಗೂ ಮೂರು ಬಾರಿ ಪ್ರಾಣಾಯಾಮ ಮಾಡಬೇಕು. ವಿವಾಹಾನಂತರ ಅತಿಯಾದ ಕಾಮವಾಸನೆ ಎಂದೂ ತರವಲ್ಲ. ಹಾಗಾಗಿ ಜಪ- ಪ್ರಾಣಾಯಾಮಗಳು ಆರೋಗ್ಯದ ದೃಷ್ಟಿಯಿಂದಲೂ, ಧರ್ಮದ ಅಚರಣೆಯಿಂದಲೂ ಹೆಚ್ಚು ಹೆಚ್ಚು ಮಾಡುವುದು ಒಳಿತು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೭

ಧರ್ಮಾಚರಣೆ-೭೭ ವಾಪೀಕೂಪತಟಾಕಾದ್ಯೈಃ ವಾಜಪೇಯಶತೈರ್ಮಖೈಃ | ಗವಾಂ ಕೋಟಿಪ್ರದಾನೇನ ಭೂಮಿಹರ್ತಾ ನ ಶುದ್ಧ್ಯತಿ || ಪರಾಶರ ಸ್ಮೃತಿ|| ದುಡ್ಡು ಕೊಟ್ಟು ತೆಗೆದುಕೊಂಡಿದ್ದು ಅಥವಾ ಪಿತ್ರಾರ್ಜಿತವಾಗಿ ಸಿಕ್ಕಿದ್ದು ಅಥವಾ ಯಾರೋ ದಾನ ಮಾಡಿದ ಭೂಮಿ ಅನುಭವಿಸುವುದು ಪಾಪವಲ್ಲ. ಅದೇ ಅಕ್ರಮ- ಸಕ್ರಮ ಎಂದು ನಾವೇ ಅಕ್ರಮ ಮಾಡಿ ಅಥವಾ ಸರ್ಕಾರದ/ ಖಾಸಗಿ ಜಾಗಗಳ ಒಂದು ಇಂಚಿನ ಪ್ರಮಾಣದಷ್ಟು ಭೂಮಿ ಅಪಹರಿಸಿದರೂ ಆ ಪಾಪಕ್ಕೆ ಯಾವ ಪರಿಹಾರವೂ ಪ್ರಾಯಶ್ಚಿತ್ತವೂ ಇಲ್ಲ. ಬಾವಿ- ಕೆರೆ- ಕಾಲುವೆ ನಿರ್ಮಿಸುವುದು, ನೂರು ವಾಜಪೇಯ ಯಾಗ ಮಾಡುವುದು, ಕೋಟಿ ಗೋವುಗಳನ್ನು ದಾನ ಮಾಡಿದರೂ ಆ ಪಾಪ ಪರಿಹಾರವಾಗದು. ಅದನ್ನು ಅನುಭವಿಸಲು ಮತ್ತೆ ಜನ್ಮ ತಾಳಬೇಕಾಗುವುದು. ಹಾಗಾಗಿ ಭೂಮಿಯ ಮೇಲಿನ ಆಸೆ ಎಂದೂ ಒಳ್ಳೆಯದಲ್ಲ. ಅದು ಒಂದು ಚದರಡಿ ಆಗಲಿ ನೂರಾರು ಎಕ್ರೆ ಆಗಲಿ ಅಕ್ರಮವು ಯಾವ ಪ್ರಾಯಶ್ಚಿತ್ತಕ್ಕೂ ನಿಲುಕದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೬

ಧರ್ಮಾಚರಣೆ-೭೬ ಕುಟುಂಬಿನೇ ದರಿದ್ರಾಯ ಶ್ರೋತ್ರಿಯಾಯ ವಿಶೇಷತಃ | ಯದ್ದಾನಂ ದೀಯತೇ ತ್ವಸ್ಮೈ ತದ್ದಾನಂ ಶುಭಕಾರಕಮ್ || ಪರಾಶರ ಸ್ಮೃತಿ|| ಹೆಂಡತಿ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ವೇದ- ವೇದಾಂಗಗಳನ್ನು ಅಧ್ಯಯನ ನಡೆಸಿ ಅದರಂತೆ ಜೀವನ ನಡೆಸುವ ಬಡವನಾದ ಶ್ರೋತ್ರಿಯನಿಗೆ ದಾನ ಕೊಡುವುದು ತುಂಬಾ ಶ್ರೇಯಸ್ಕರ. ದಾನ ಕೊಡುವುದಾದರೆ ಇಂತಹ ವ್ಯಕ್ತಿಗಳನ್ನು ಹುಡುಕಿ ದಾನ ಮಾಡಬೇಕೇ ಹೊರತು ಸಾಕಷ್ಟು ಸಂಪತ್ತಿದ್ದವರಿಗೆ ಅಥವಾ ಯಾವ ಆಚಾರವೂ ಇಲ್ಲದವರಿಗೆ ಎಂದಿಗೂ ಕೊಡಬಾರದು. ಧರ್ಮಶ್ರದ್ಧೆ- ಸದಾಚಾರ- ಅಧ್ಯಯನ ಇವುಗಳು ದಾನಕ್ಕೆ ತುಂಬಾ ಅವಶ್ಯಕ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೫

ಧರ್ಮಾಚರಣೆ-೭೫ ಅರಣಿಂ ಕೃಷ್ಣಮಾರ್ಜಾರಂ ಚಂದನಂ ಸುಮಣಿಂ ಘೃತಮ್| ತಿಲಾನ್ ಕೃಷ್ಣಾಜಿನಂ ಛಾಗಂ ಗೃಹೇ ಚೈತಾನಿ ರಕ್ಷಯೇತ್ || ಪರಾಶರ ಸ್ಮೃತಿ|| ಮಥನ ಮಾಡಿ ಅಗ್ನಿ ಉತ್ಪಾದಿಸುವ ಅರಣಿ, ಕಪ್ಪುಬೆಕ್ಕು, ಗಂಧ, ಉತ್ತಮ ರತ್ನ, ಹಸುವಿನ ತುಪ್ಪ, ಎಳ್ಳು, ಕೃಷ್ಣಾಜಿನ, ಕುರಿ ಇವುಗಳು ಪುಣ್ಯಕಾರಕ ಹಾಗೂ ಉತ್ತಮ ಲಕ್ಷಣಗಳುಳ್ಳ ಕಾರಣ ಮನೆಯಲ್ಲಿ ಸದಾ ರಕ್ಷಿಸಬೇಕು. ಕಡೇಪಕ್ಷ ಇವುಗಳಲ್ಲಿ ಒಂದಾದರೂ ಮನೆಯಲ್ಲಿ ಇರಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೪

ಧರ್ಮಾಚರಣೆ-೭೪ ಅಗ್ನಿಚಿತ್ಕಪಿಲಾ ಸತ್ರೀ ರಾಜಾ ಭಿಕ್ಷುರ್ಮಹೋದಧಿಃ | ದೃಷ್ಟಮಾತ್ರಾಃ ಪುನಂತ್ಯೇತೆ ತಸ್ಮಾತ್ಪಶ್ಯೇತ್ತು ನಿತ್ಯಶಃ || ಪರಾಶರ ಸ್ಮೃತಿ|| ನಿತ್ಯವೂ ಅಗ್ನಿಯನ್ನು ಆರಾಧಿಸುವ ಅಗ್ನಿಹೋತ್ರಿ ( ನೀರಿನಲ್ಲಿ ಅಲ್ಲ,ಅಥವಾ ವೈಶ್ವದೇವ ಮಾಡುವವರಲ್ಲ) ಕಪಿಲ ಅಥವಾ ಕಂದು ಬಣ್ಣದ ಗೋವು, ಬಹುದಿನಗಳ ಕಾಲ ಆಚರಿಸುವ ಯಜ್ಞ ಕೈಗೊಂಡವನು, ನ್ಯಾಯಯುತವಾಗಿ ಆಳುವ ಉತ್ತಮ ರಾಜ, ಒಮ್ಮೆ ಮಾತ್ರ ಭಿಕ್ಷೆ ಬೇಡಿ ಅದರಲ್ಲೂ ದಾನ ಮಾಡಿ ತನಗೆ ಪ್ರಾಣಧಾರಣೆಗೆ ಅವಶ್ಯಕತೆ ಇದ್ದಷ್ಟು ಉಣ್ಣುವ ಭಿಕ್ಷುಕ, ಸಮುದ್ರ ಇವಿಷ್ಟನ್ನು ನೋಡಿದ ಮಾತ್ರದಿಂದ ನಮ್ಮ ಪಾಪ ಪರಿಹಾರವಾಗುವುದು. ಹಾಗಾಗಿ ದಿನವೂ ಇವರ ದರ್ಶನ ಪುಣ್ಯಕರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೩

ಧರ್ಮಾಚರಣೆ-೭೩ ನ್ಯಾಯೋಪಾರ್ಜಿತವಿತ್ತೇನ ಕರ್ತವ್ಯಂ ಹಿ ಆತ್ಮರಕ್ಷಣಮ್ | ಅನ್ಯಾಯೇನ ತು ಯೋ ಜೀವೇತ್ ಸರ್ವಕರ್ಮಬಹಿಷ್ಕೃತಃ || ಪರಾಶರ ಸ್ಮೃತಿ || ಮನುಷ್ಯರಾದವರು ತಾನು ಅವಲಂಬಿಸಿರುವ ವೃತ್ತಿಯಲ್ಲಿ ನ್ಯಾಯಕ್ಕನುಸಾರವಾಗಿ ಸಂಪಾದಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಇನ್ನೊಬ್ಬರ ರಕ್ಷಣೆಗಾದರೂ ನ್ಯಾಯದ ಧನವನ್ನೇ ಬಳಸಬೇಕು. ಅನ್ಯಾಯದ -ಮನಸ್ಸಾಕ್ಷಿ ಒಪ್ಪದ - ಲೋಕಸಿದ್ಧವೆಂದು ಹಾರಿಕೆ ಉತ್ತರ ಕೊಡುವ ಕರ್ಮಗಳನ್ನು ನಡೆಸಿ ಎಷ್ಟು ಸಂಪಾದಿಸಿದರೂ ಅದು ಇಹಕ್ಕೂ ಪರಕ್ಕೂ ಹಾನಿಕರ. ಇಂದಲ್ಲಾ ನಾಳೆ ಅಧಃಪತನಕ್ಕೆ ಕಾರಣವಾಗುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಅನುವಾದಿತ ಕಥೆ-೩೧

अनूदित कथावलिः - ३१ न हि ज्ञानेन सदृशम्  अन्ये गुरवः के!!! साधुः  सुप्तः एव द्वितीयगुरुविषयं वक्तुमारेभे।  एकः शुनकः अपि मम गुरुरासीत् । एकदा अहं सरस्समीपे पर्यटन् आसम् । तदा सः श्वा तत्र जलपानार्थमागतः ।  यदा जलसमीपं गतवान्  तदा तत्र स्वस्य प्रतिबिम्बं दृष्ट्वा भीतः अभूत् । तस्मिन् भषिते प्रतिबिम्बस्थः शुनकोsपि  भषति स्म । तथापि तृष्णापीडितः सः श्वा किमपि भवतु इति धैर्यात् जले पतितवान् । तदा प्रतिबिम्बस्थः श्वा$पि अदृश्योsभवत्  , तथैव भीतिरपि गता । भगवद्विषये वा अध्यात्मविषये अहमपि भीतः तथा संशयितः आसम् । तदाप्रभृति मम भीतिः दूरंगता। तथा च सो$पि शुनकः मम गुरुः ।  तृतीयः गुरुः एकः बालकः । एकदा सन्ध्याकाले हस्ते दीपमेकं धृत्वा गच्छन् आसीत्। देवालये अन्यं दीपं प्रज्वालयितुं तस्य गमनं निश्चितमासीत् । तस्मिन् काले मम मनसि अतीव अहङ्कारः आसीत्। एतेन बालकेन मम प्रश्नाय उत्तरं  किं दीयते इति दर्पेण अहं तम् एवं पृष्टवान् ।   रे माणवक,  एतदालोकः कस्मादागतः इति तं पृष्टवान् । तदा सः हसन् दीपं प्रशम्य उक्तवान् - इदानीं प्रज्वलन् दीपः निवारितः ।...

ಧರ್ಮಾಚರಣೆ-೭೨

ಧರ್ಮಾಚರಣೆ--೭೨ ಅಸ್ನಾತ್ವಾ ವೈ ನ ಭುಂಜೀತ ತಥೈವಾಗ್ನಿಮಪೂಜ್ಯ ಚ | ನ ಪರ್ಣಪೃಷ್ಠೇ ಭುಂಜೀತ ರಾತ್ರೌ ದೀಪಂ ವಿನಾ ತಥಾ || ಪರಾಶರ ಸ್ಮೃತಿ|| ಸ್ನಾನ ಮಾಡದೇ ಎಂದಿಗೂ ಊಟ ಮಾಡಬಾರದು ಅಥವಾ ಆಹಾರ ಸ್ವೀಕರಿಸಬಾರದು. ಏಕೆಂದರೆ ರಾತ್ರಿಯ ಅವಸ್ಥೆ ಕಳೆದು ಭೋಜನವೆಂಬ ಯಜ್ಞಕ್ಕೆ ಸ್ನಾನ ಮಾಡಿಯೇ ಅಣಿಯಾಗಬೇಕು. ನಿದ್ರೆಯ ಅಮಲು, ದೇಹದ ಅಶುದ್ಧತೆ, ಮನದ ಉದಾಸೀನತೆ ಸ್ನಾನದಿಂದ ದೂರವಾಗುತ್ತದೆ. ಅಗ್ನಿಯನ್ನು ಆರಾಧಿಸದೇ ಅನ್ನ ಉಣ್ಣಬಾರದು. ಅಗ್ನಿಕಾರ್ಯ- ಅಗ್ನಿಹೋತ್ರ- ಔಪಾಸನ- ವೈಶ್ವದೇವ ಇವುಗಳಲ್ಲಿ ಯಾವುದಾದರೂ ರೀತಿಯಿಂದ ಅಗ್ನಿ ಮನೆಯಲ್ಲಿ ಬೆಳಗಿದಾಗ ಆಹಾರ ಶುದ್ಧಿ ಉಂಟಾಗುತ್ತದೆ. ಭಗವದರ್ಪಿತವಾಗಿ ಅದು ಪ್ರಸಾದವಾಗುವುದು. ಬಾಳೆ ಅಥವಾ ಮುತ್ತುಗದ ಎಲೆಯ ಹಿಂಭಾಗದಲ್ಲಿ ಉಣ್ಣಬಾರದು. ಕೀಟಾದಿಗಳ ವಾಸ, ದೊರಗು, ಶಾಸ್ತ್ರ ನಿಷೇಧ ಎಂಬ ಮೂರು ಕಾರಣಗಳಿಂದ ಎಲೆಯ ಮೃದು ಭಾಗವೇ ಶ್ರೇಯಸ್ಕರ. ರಾತ್ರಿ ಎಂದಿಗೂ ದೀಪದ ಬೆಳಕಿನಲ್ಲಿ ಮಾತ್ರ ಉಣ್ಣಬೇಕು. ಕ್ರಿಮಿ ಕೀಟ ಭೂತ ಪ್ರೇತಗಳು ಆಹಾರವನ್ನು ಮಲಿನ ಮಾಡಿ ನಮ್ಮ ದೇಹ ರೋಗಪೀಡಿತವಾಗದಂತೆ ತಡೆಯಲು ಈ ಕ್ರಮ ಅತ್ಯಗತ್ಯ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೧

ಧರ್ಮಾಚರಣೆ--೭೧ ಭುಂಜಾನೇಷು ತು ವಿಪ್ರೇಷು ಯೋಗ್ರೇ ಪಾತ್ರಂ ವಿಮುಂಚತಿ |  ಸ ಮೂಢಃ ಸ ಚ ಪಾಪಿಷ್ಠೋ ಬ್ರಹ್ಮಘ್ನಃ ಸ ಖಲೂಚ್ಯತೇ || ಪರಾಶರ ಸ್ಮೃತಿ|| ಒಂದು ಪಂಕ್ತಿಯಲ್ಲಿ ಹಸ್ತೋದಕ ಹಾಕಿದ ನಂತರ ಊಟ ಮುಗಿಯುವ ಮುನ್ನ ಮಧ್ಯದಲ್ಲಿ ಎದ್ದು ಹೋಗಬಾರದು. ಹಾಗೆ ಅನಿವಾರ್ಯ ಕಾರಣಗಳಿಲ್ಲದೆ ಎದ್ದು ಹೋದರೆ ಅದು ಮೂರ್ಖತನದ ಕೆಲಸ, ಅಂತಹವರು ಪಾಪಭಾಜನರಾಗುತ್ತಾರೆ. ಅಂತಹ ಮನುಷ್ಯರು ಬ್ರಹ್ಮಘ್ನರೆಂದು ಕರೆಸಿಕೊಳ್ಳುತ್ತಾರೆ. ಹಾಗಾಗಿ ಎಲ್ಲರ ಊಟ ಆಗುವ ಮುನ್ನ ಮಧ್ಯದಲ್ಲೇ ಎದ್ದು ನಡೆಯುವುದು ಒಳ್ಳೆಯದಲ್ಲ. ಭೋಜನ ಯಜ್ಞ ಮುಗಿದ ನಂತರವೇ ಏಳಬೇಕು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಅನುವಾದಿತ ಕಥೆ-೩೦

अनूदित कथावलिः - ३० न हि ज्ञानेन सदृशम्  एकः महान् योगी मरणं निरीक्षमाणः सुप्तः आसीत् । तस्य शिष्याः पुरतः स्थित्वा दुःखिताः रुदन्तः आसन् । तेष्वेकेन पृष्टम् - हे गुरुवर्य , भवतः गुरुः कः इति । तदा तेनोक्तम्- तत्सर्वं ज्ञातुम् इदानीं समयः नास्ति। मृत्युः मम समीपे एव वर्तते। तदा शिष्येन उक्तम् - इदानीमपि समयो नातीतः , कानिचन नामानि वदतु इति ।  तदा तेन उत्तरितम् - तदपि अशक्यम् , तथापि त्रयः  गुरवः मम स्मृतिपटले आविर्भूताः , तेषां विषये वदामि इति वक्तुमारेभे।  प्रथमः गुरुः एकः चोरः । तदा अहं कुत्रचित् यात्रां कुर्वन् आसम् । तदा रात्रिकालः । आपणानां  तथा गृहाणां द्वाराणि निमीलितानि आसन्। सर्वत्र तमः व्याप्तः । शीतवायुरपि मन्दं मन्दं नुदति स्म। तन्नगरे यः कोपि नरः न दृश्यते स्म। वीथ्यां सञ्चरन् एकः चोरः भित्तिं विदारयन् दृष्टो मया। तमहं अपृष्टम् - अद्य रात्रौ मम तव गृहे आश्रयः दीयते वा इति। तेनोक्तम्- भवान् साधुरिव दृश्यते, अहमेकः चोरः , चोरेण साकं वासः भवतः रोचते किम् इति। अहं किञ्चित् विषण्णः अभूवम् । तथापि एवं चिन्तितम् - चोरस्य तु  मया सह उषितुं न भीतिः , तथ...