ಧರ್ಮಾಚರಣೆ ೧೧೯
ಧರ್ಮಾಚರಣೆ-೧೧೯
ನ ಸಂಶಯಂ ಪ್ರಪದ್ಯೇತ ನಾಕಸ್ಮಾದಪ್ರಿಯಂ ವದೇತ್ | ನಾಹಿತಂ ನಾನೃತಂ ಚೈವ ನ ಸ್ತೇನಃ ಸ್ಯಾನ್ನ ವಾರ್ಧುಷೀ || ಯಾಜ್ಞವಲ್ಕ್ಯ ಸ್ಮೃತಿ||
ಒಂದು ವಿಷಯ ತುಂಬಾ ಪ್ರಾಮಾಣಿಕವಾಗಿ ಇದೆ ಎಂದಾದಾಗ ಮತ್ತೆ ಮತ್ತೆ ಸಂಶಯ ವ್ಯಕ್ತಪಡಿಸಬಾರದು. ಉ: ಮಗುವಿನ ನಿಷ್ಕಲ್ಮಶ ನಗು. ಕಾರಣವಿಲ್ಲದೆ ಕಠೋರವಾದ ಮತ್ತು ಸಿಟ್ಟುಬರಿಸುವಂತಹ ಮಾತುಗಳನ್ನು ಎಂದಿಗೂ ಆಡಬಾರದು. ಒಬ್ಬರಿಗೆ ಪ್ರಿಯವಾಗದ ಹಾಗೂ ಅಸತ್ಯವಾದ ಮಾತು ಎಂದಿಗೂ ಸಲ್ಲದು. ಪರರ ಧನ-ವಸ್ತು-ಪುಸ್ತಕ ಏನೇ ಸಣ್ಣದಿರಲಿ ದೊಡ್ಡದಿರಲಿ ಕಳ್ಳತನ ಮಾಡಬಾರದು. ಒಂದು ರೂಪಾಯಿ ಕದ್ದರೂ ಚಿನ್ನ ಕದ್ದರೂ ಪಾಪ ಕಳ್ಳತನಕ್ಕೇ ಹೊರತು ವಸ್ತುವನ್ನು ಆಧರಿಸಿ ಅಲ್ಲ. ಇನ್ನೊಬ್ಬರಿಗೆ ಧನ ನೀಡಿ ಅದರ ಬಡ್ಡಿಯಿಂದ ಜೀವನ ಮಾಡಬಾರದು. ಬದುಕಲು ಯಾವ ಮಾರ್ಗವೂ ಇಲ್ಲದಿದ್ದಾಗ ಮಾತ್ರ ಬಡ್ಡಿಯ ಜೀವನ ಅಂದರೆ ವಾರ್ಧುಷಿ ಆಗಬಹುದು. ಉಳಿದ ಸಮಯದಲ್ಲಿ ಅಂತಹ ಬದುಕು ರಕ್ತ ಹೀರಿ ನಡೆಸುವ ಬದುಕಾಗುವುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ