ಪೋಸ್ಟ್‌ಗಳು

ಜುಲೈ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಾಕುಂತಲ ಸುರಭಿ ಎರಡು

🌺🌿🌺🌿🌺🌿🌺🌿🌺🌿🌺           ಶಾಕುಂತಲದ ಕುಸುಮ ಸರಣಿ           ಶ್ರೀನಿಧಿ ಅಭ್ಯಂಕರ್ 🌺🌿🌺🌿🌺🌿🌺🌿🌺🌿🌺 ಶಾಕುಂತಲದ ಕುಸುಮ -1 04/07/2016 ಶಾಕುಂತಲದ ಒಂದು ಕುಸುಮ: ಅಭಿಮುಖೇ ಮಯಿ ಸಂಹೃತಮೀಕ್ಷಿತಂ ಹಸಿತಮನ್ಯನಿಮಿತ್ತಕೃತೋದುಮ್ / ವಿನಯವಾರಿತವೃತ್ತಿರತಸ್ತಯಾ ನ ವಿವೃತೋ ಮದನೋ ನ ಚ ಸಂವೃತ: // ವಿದೂಷಕನ ಬಳಿ ದುಷ್ಯಂತನು ಶಕುಂತಲೆಯ ಚರ್ಯೆಯನ್ನು ವರ್ಣಿಸುತ್ತಿರುವನು. ನಾನು ನೇರವಾಗಿ ಅವಳನ್ನು ನೋಡಿದಾಗಲೆಲ್ಲ ತನ್ನ ದೃಷ್ಟಿಯನ್ನು ಹಿಂದೆಗೆದುಕೊಳ್ಳುತ್ತಿದ್ದಳು. ( ನನ್ನ ನೋಟವನ್ನು ಎದುರಿಸಲು ನಾಚಿಕೊಳ್ಳುತ್ತಿದ್ದಳು) ಅದೇ ಸಮಯದಲ್ಲಿ ಬೇರೊಂದು ನೆವದಿಂದ ನಗುತ್ತಿದ್ದಳು. ಹುಟ್ಟಿನಿಂದ ಬೆಳೆದುಬಂದ ಪರಿಸರದ ಸೌಜನ್ಯವು ಅವಳ ಅಭಿವ್ಯಕ್ತಿಗೆ ತಡೆಯಾಗಿತ್ತು. ಹೀಗಾಗಿ ಅವಳ ಪ್ರೇಮವು ಅಷ್ಟೊಂದು ಸ್ಪಷ್ಟವಾಗಿಯೂ ಇರಲಿಲ್ಲ ಹಾಗಂತ ಮತ್ತೆ ಮತ್ತೆ ನೋಟ ನಗು ಇದ್ದಿದ್ದರಿಂದ ಗುಟ್ಟಾಗಿಯೂ ಇರಲಿಲ್ಲ. ನನ್ನೆಡೆಗೆ ನೋಡಿ ನಗುವ ಹಂಬಲವಿದ್ದರೂ ಬೇರೆಯವರು ತಪ್ಪು ತಿಳಿದಾರೆಂದು ಅಥವಾ ಆಶ್ರಮವಾಸಿಗಳು ಏನಂದುಕೊಳ್ಳುವರೋ ಎಂಬ ಕಾರಣದಿಂದಲೋ ಏನೋ ಅಥವಾ ಸ್ತ್ರೀಯರ ಸ್ವಭಾವ ಸಹಜ ನಾಚಿಕೆಯಿಂದಲೋ ಏನೋ ನನ್ನನ್ನು ನೋಡಿಯೂ ನೋಡದವಳಂತೆ ಕಣ್ಣಿಗೆ ಕಣ್ಣು ಕೊಡದೆ ಮಧ್ಯದಲ್ಲಿ ನಕ್ಕು ಬೇಸರವಿಲ್ಲವೆಂದು ಸೂಚಿಸುತ್ತಾ ಪ್ರೀತಿ ತೋರಿಸುತ್ತಿದ್ದ ರೀತಿ ಹೆಚ್ಚು ಸ್ಪಷ್...
🌷🌷🌷🌷🌷🌷🌷🌷 *ಶಾಕುಂತಲದ ಒಂದು ಸುರಭಿ* *ಕ್ಷಾಮಕ್ಷಾಮಕಪೋಲಮಾನನಮುರ: ಕಾಠಿಣ್ಯಮುಕ್ತಸ್ತನಂ ಮಧ್ಯ: ಕ್ಲಾಂತತರ: ಪ್ರಕಾಮವಿನತಾವಂಸೌ ಛವಿ: ಪಾಂಡುರಾ | ಶೋಚ್ಯಾ ಚ ಪ್ರಿಯದರ್ಶನಾ ಚ ಮದನಾಕ್ಲಿಷ್ಟೇಯಮಾಲಕ್ಷ್ಯತೇ ಪತ್ರಾಣಾಮಿವ ಶೋಷಣೇನ ಮರುತಾ ಸ್ಪೃಷ್ಟಾ ಲತಾ ಮಾಧವೀ||* _ಶಕುಂತಲೆ ದುಷ್ಯಂತನನ್ನು ನೆನೆದು ನಿಟ್ಟುಸಿರುಬಿಡುತ್ತಿರುವಳು.ಯಾವ ವಿಷಯದಲ್ಲಿಯೂ ಆಸಕ್ತಿ ಇಲ್ಲ ಅವಳಿಗೆ. ಅದನ್ನು ನೋಡಿದ ದುಷ್ಯಂತನಾಡುವ ಮಾತು. ಶಕುಂತಲೆಯ ಗಲ್ಲಗಳು ಒಣಗಿ ಮುಖ ಕಾಂತಿಹೀನವಾಗಿದೆ. ಸ್ತನಗಳ ಬಿರುಸು ಇಲ್ಲದಂತಾಗಿದೆ. ಸೊಂಟ ಬಡವಾಗಿದೆ. ಹೆಗಲುಗಳು ತುಂಬಾ ಬಾಗಿವೆ.ದೇಹದ ಕಾಂತಿಯು ಬಿಳಿಬಣ್ಣಕ್ಕೆ ತಿರುಗಿದೆ. ಹೀಗೆ ಮದನನ ಬಾಧೆಗೆ ಒಳಗಾದ ಇವಳು ಗಾಳಿಯಿಂದ ಎಲೆಗಳುದುರಿದ ವಸಂತ ಋತುವಿನ ಬಳ್ಳಿಯಂತೆ ಶೋಚನೀಯಳೂ ಸುಂದರಿಯೂ ಆಗಿದ್ದಾಳೆ. ಪ್ರಿಯಕರನನ್ನೇ ನೆನೆಯುತ್ತಾ ಆಹಾರ ನಿದ್ರಾದಿಗಳನ್ನು ಬಿಟ್ಟ ಪರಿಣಾಮ ಗಲ್ಲಗಳು ತುಂಬಿಲ್ಲ.ಕಳಾಹೀನವಾಗಿವೆ.ಮನವು ಏನನ್ನೋ ಯೋಚಿಸುತ್ತಿರುವುದರಿಂದ ದೇಹವು ಸಹಜವಾಗಿಲ್ಲ.ಸ್ತನಗಳ ಬಿರುಸು ಕಡಿಮೆಯಾಗಿ ಉತ್ಸಾಹ ಕುಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸದಾ ಅತ್ತಿತ್ತ ಓಲಾಡುವ ಕಟಿ ( ಸೊಂಟ) ಆಹಾರವಿಲ್ಲದೇ ಬಡವಾಗಿದೆ.( ಝೀರೋ ಸೈಝ್) ಕೈಗಳು ಯಾವ ಕಾರ್ಯವನ್ನೂ ಬಯಸದೇ ಇರುವ ಕಾರಣ ಹೆಗಲು ವಯಸ್ಸಾದವರಂತೆ ಜೋತುಬೀಳುತ್ತಿದೆ.ದೇಹದ ಯಾವಾಗಿನ ಬಂಗಾರದ ಕಾಂತಿಯು ಇಲ್ಲದೆ ಬಿಳಿಚಿಕೊಂಡಂತಿದೆ ಮೈ.( ಈಗಿನ ಜಾಹೀರಾತು...