ಧರ್ಮಾಚರಣೆ ೧೧೮

ಧರ್ಮಾಚರಣೆ-೧೧೮

ರಾಜಾಂತೇವಾಸಿಯಾಜ್ಯೇಭ್ಯಃ ಸೀದನ್ನಿಚ್ಛೇದ್ಧನಂ ಕ್ಷುಧಾ | ದಂಭಿಹೈತುಕಪಾಖಂಡಿ ಬಕವೃಂತ್ತೀಂಶ್ಚ ವರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ||

ನಮ್ಮ ಉದ್ಯೋಗಕ್ಕೆ ತಕ್ಕುದಾದ ವೇತನವನ್ನು ಆಳುವ ಸರ್ಕಾರ ಅಥವಾ ಸಂಸ್ಥೆಯಿಂದ, ನಮ್ಮ ಶಿಷ್ಯರಿಂದ, ಪ್ರಾಮಾಣಿಕವಾಗಿ ಧನಿಕನಾದವನಿಂದ ಬಯಸಬಹುದು. ಜನರ ಮನರಂಜನೆಗಾಗಿ ಏನನ್ನು ಬೇಕಾದರೂ ಮಾಡುವ ದಂಭಿಯ ಬಳಿ, ಸಂಸ್ಕೃತಿಯ ಬಗ್ಗೆ ಸಂಶಯ ಹುಟ್ಟಿಸುವ ಹೇತುಕನ ಬಳಿ, ಸಮಾಜ ಒಪ್ಪದ ವರ್ತನೆ ತೋರುವ ಪಾಖಂಡಿಯ ಬಳಿ, ಕಪಟ ವೇಷ ಧರಿಸಿ ಮೋಸ ಎಸಗುವ ವ್ಯಕ್ತಿಯ ಬಳಿ ಎಂದಿಗೂ ಬಯಸಬಾರದು. ಉಪವಾಸ ಇದ್ದರೂ ತೊಂದರೆ ಇಲ್ಲ, ಇಂತಹವರ ಬಳಿ ಸ್ವೀಕರಿಸಿದರೆ ನಮ್ಮ ಪುಣ್ಯವೆಲ್ಲ ಹ್ರಾಸವಾದೀತು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩