ಧರ್ಮಾಚರಣೆ ೯೭

ಧರ್ಮಾಚರಣೆ-೯೭

ವಾಕೋವಾಕ್ಯಂ ಚ ನಾರಾ ಶಂಸೀಂಶ್ಚ ಗಾಥಿಕಾಃ | ಇತಿಹಾಸಾಂಸ್ತಥಾ ವಿದ್ಯಾಃ ಶಕ್ತ್ಯಾಧೀತೇಹಿಯೋನ್ವಹಮ್ || ಮಾಂಸಕ್ಷೀರೌದನಮಧು ತರ್ಪಣಂ ಸದಿವೌಕಸಾಮ್ | ಕರೋತಿ ತೃಪ್ತಿಂ ಕುರ್ಯಾಚ್ಚ ಪಿತೃಣಾಂ ಮಧು ಸರ್ಪಿಷಾ || ಯಾಜ್ಞವಲ್ಕ್ಯ ಸ್ಮೃತಿ||

ವೇದದಲ್ಲಿ ಬರುವ ಪ್ರಶ್ನೋತ್ತರರೂಪದ ವಾಕ್ಯಗಳು, ಬ್ರಹ್ಮ-ಸ್ಕಂದ-ವಿಷ್ಣು ಮೊದಲಾದ ಪುರಾಣಗಳು, ಮನು-ಪರಾಶರ-ಯಾಜ್ಞವಲ್ಕ್ಯ ಮೊದಲಾದ ಸ್ಮೃತಿಗಳು, ರುದ್ರ-ಚಮಕ, ಯಜ್ಞದಲ್ಲಿ ಬಳಸುವ ಸೂಕ್ತಗಳು, ಮಹಾಭಾರತ-ರಾಮಾಯಣ ಮೊದಲಾದ ಇತಿಹಾಸ, ಮಧುವಾತಾ-ಹಿರಣ್ಯಶೃಂಗಂ ಮೊದಲಾದ ಮಂತ್ರಗಳನ್ನು ಪಠಿಸುವನೋ ಅವನು‌ ಮಾಂಸ-ಪರಮಾನ್ನ-ಜೇನುಗಳನ್ನು ದೇವರಿಗೆ ಅರ್ಪಿಸಿ ತೃಪ್ತಿಪಡಿಸಿದ ಪುಣ್ಯವನ್ನೂ, ಪಿತೃಗಳಿಗೆ ತುಪ್ಪ-ಜೇನುತುಪ್ಪ ಅರ್ಪಿಸಿ ತೃಪ್ತಿಪಡಿಸಿದ ಪುಣ್ಯವನ್ನೂ ಸಂಪಾದಿಸುತ್ತಾನೆ. ಹಾಗಾಗಿ ದಿನವೂ ಒಂದಷ್ಟು ಪಾರಾಯಣ- ಪುಸ್ತಕಗಳ ಅವಲೋಕನ ಇಹಪರ ಕ್ಷೇಮದಾಯಕ. ಹೇಗೆ ನಾವು ಸಾಮಾಜಿಕ ಜಾಲತಾಣಗಳನ್ನು, ದೂರದರ್ಶನವನ್ನು, ಸಂಗೀತ ಮೊದಲಾದವನ್ನು ನೋಡಿ- ಕೇಳುವೆವೋ ಅದರಂತೆ ಇದಕ್ಕೂ ಪ್ರಾಶಸ್ತ್ಯ ಕೊಟ್ಟಾಗ ಮೋಕ್ಷದ ದಾರಿ ತೆರೆದುಕೊಳ್ಳುತ್ತದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩