ಧರ್ಮಾಚರಣೆ ೧೦೮
ಧರ್ಮಾಚರಣೆ-೧೦೮
ಬಲಿಕರ್ಮಸ್ವಧಾಹೋಮ ಸ್ವಾಧ್ಯಾಯಾತಿಥಿಸತ್ಕ್ರಿಯಾಃ | ಭೂತಪಿತೃಮರಬ್ರಹ್ಮಮನುಷ್ಯಾಣಾಂ ಮಹಾಮಖಾಃ || ಯಾಜ್ಞವಲ್ಕ್ಯ ಸ್ಮೃತಿ||
ಯಜುರ್ವೇದದ ಆರಣ್ಯಕದಲ್ಲಿ ಹೇಳಿದಂತೆ ಗೃಹಸ್ಥನು ದಿನವೂ ಭೂತಯಜ್ಞ= ಬಲಿದಾನ, ಪಿತೃಯಜ್ಞ= ಷಣ್ಣವತಿ ಶ್ರಾದ್ಧ ಹಾಗೂ ನಿತ್ಯತರ್ಪಣಾದಿಗಳು, ದೇವಯಜ್ಞ= ಔಪಾಸನೆ, ಅಗ್ನಿಹೋತ್ರ, ವೈಶ್ವದೇವ ರೂಪದ ನಿತ್ಯಾಗ್ನಿ ಅರ್ಚನೆ, ಬ್ರಹ್ಮಯಜ್ಞ= ನಾವು ಓದಿದ್ದನ್ನು ಮರೆಯದಿರುವಂತೆ ಅಭ್ಯಾಸ ಹಾಗೂ ಹೊಸ ಓದಿನಿಂದ ಜ್ಞಾನ ಸಂಪಾದನೆ, ಮನುಷ್ಯಯಜ್ಞ = ಆಹಾರ ಸ್ವೀಕರಿಸುವ ಮುನ್ನ ಹಸಿದವರಿಗೆ ಉಣಬಡಿಸುವುದು ಅಥವಾ ಹಸಿದವನನ್ನು ಕಂಡಾಗ ಆಹಾರ ನೀಡುವುದು ಇವುಗಳನ್ನು ಅವಶ್ಯವಾಗಿ ಮಾಡಬೇಕು. ಇವುಗಳನ್ನು ಆಚರಿಸಿದಾಗ ನಿತ್ಯದ ಪಂಚಪಾಪಗಳಿಂದ ಬಿಡುಗಡೆ ಹೊಂದುವನು. ಇದು ಮಾಡದೇ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಅಥವಾ ಕ್ಷೇತ್ರಗಳಲ್ಲಿ ಲಕ್ಷಗಟ್ಟಲೆ ಧನವ್ಯಯ ಮಾಡಿ ವಿಜೃಂಭಣೆಯ ಹೋಮ- ಹವನ ಮಾಡಿದರೆಷ್ಟು, ಬಿಟ್ಟರೆಷ್ಟು. ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಗುವುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ