ಧರ್ಮಾಚರಣೆ ೧೧೦

ಧರ್ಮಾಚರಣೆ-೧೧೦

ಬಾಲಸ್ವವಾಸಿನೀ ವೃದ್ಧ ಗರ್ಭಿಣ್ಯಾತುರ ಕನ್ಯಕಾಃ | ಸುಭೋಜ್ಯಾತಿಥಿ ಭೃತ್ಯಾಂಶ್ಚ ದಂಪತ್ಯೋಃ ಶೇಷಭೋಜನಮ್ || ಯಾಜ್ಞವಲ್ಕ್ಯ ಸ್ಮೃತಿ|| 


ಮನೆಯಲ್ಲಿ ಮೊದಲು ಸಣ್ಣ ಮಕ್ಕಳಿಗೆ ಅನಂತರ ಕನ್ಯೆ ವಿವಾಹಾನಂತರ ತಂದೆ ಮನೆಯಲ್ಲೇ ಉಳಿದಿದ್ದರೆ ಅವಳಿಗೆ, ಹಿರಿಯರಿಗೆ, ಗರ್ಭಿಣಿಯರಿಗೆ, ರೋಗಪೀಡಿತರಿಗೆ, ಸಣ್ಣ ಕುಮಾರಿಯರಿಗೆ, ಅತಿಥಿ ಬರುವನೆಂದು ಕ್ಷಣಕಾಲ ಕಾದು ಬಂದರೆ ಅವರಿಗೆ, ಸೇವಕರಿಗೆ ಉಣಬಡಿಸಿ ನಂತರ ಉಳಿದರೆ ಎಲ್ಲರ ತೃಪ್ತಿಯ ನಂತರ ತನ್ನ ಹಾಗೂ ಮಡದಿಯ ಹಸಿವನ್ನು ನೀಗಿಸಿಕೊಳ್ಳಬೇಕು. ಪುರಾಣದ, ಮಹಾಮಹಿಮರ ಅನೇಕ ದೃಷ್ಟಾಂತಗಳನ್ನು ನೋಡಿದಾಗ ಇದರ ಅರಿವಾಗುತ್ತದೆ. ಮೊದಲು ಜಗಕೆ ಉಣಿಸಿ ಅನಂತರ ತಾನುಣ್ಣುವುದು‌. ನಿತ್ಯವೂ ಈ ಕ್ರಮ ಅವಶ್ಯ ಮಾಡಬೇಕಾದುದು. ವಿಶೇಷ ಸಂದರ್ಭಗಳಲ್ಲಿ ವಿಹಿತವಾದುದು. ತನಗೆಂದು ಸವಿತಿನಿಸು ತೆಗೆದಿಟ್ಟು ಉಳಿದವರಿಗೆ ಸಾಮಾನ್ಯ ಅಡುಗೆಯ ವಿತರಣೆಯೂ ಸಲ್ಲದು. ಎಲ್ಲರೊಳಗೊಂದಾಗಿ ಎಲ್ಲರಲ್ಲೂ ಭಗವಂತನನ್ನು ಕಂಡವನೇ ಪಂಡಿತನೆನಿಸುವನು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩