ಧರ್ಮಾಚರಣೆ ೧೧೪
ಧರ್ಮಾಚರಣೆ-೧೧೪
ಅಧ್ವನೀನೋತಿಥಿರ್ಜ್ಞೇಯಃ ಶ್ರೋತ್ರಿಯೋ ವೇದಪಾರಗಃ | ಮಾನ್ಯಾವೇತೌ ಗೃಹಸ್ಥಸ್ಯ ಬ್ರಹ್ಮಲೋಕಮಭೀಪ್ಸತಃ || ಯಾಜ್ಞವಲ್ಕ್ಯ ಸ್ಮೃತಿ||
ದಾರಹೋಕರು ಯಾರೇ ಇರಲಿ ಅವರ ಬಳಲಿಕೆಯನ್ನು ನೀಗಿಸಲು ಗೃಹಸ್ಥನು ಪ್ರಯತ್ನಿಸಬೇಕು. ವೇದ-ಶಾಸ್ತ್ರ ಎರಡನ್ನೂ ಕಲಿತ ಶ್ರೋತ್ರಿಯನು ಮನೆಗೆ ಬಂದರೆ ಚ್ಯುತಿ ಬರದಂತೆ ಯಥಾವತ್ತಾಗಿ ಸತ್ಕರಿಸಬೇಕು. ತನ್ನ ಶಾಖೆಯ ವೇದ ಅಧ್ಯಯನ ಮಾಡಿದ ವೇದಪಾರಗನು ಮನೆಗೆ ಬಂದರೂ ಸತ್ಕರಿಸಬೇಕು. ಬ್ರಹ್ಮಲೋಕ ಬಯಸುವ ಅಥವಾ ಬ್ರಹ್ಮ ಚಿಂತನೆಯಲ್ಲಿ ತೊಡಗುವ ಗೃಹಸ್ಥನು ಈ ಮೂವರನ್ನು ತಪ್ಪದೆ ಆದರಿಸಬೇಕು. ಇವರು ಸತ್ಕಾರ ಪಡೆಯಲು ಅಥವಾ ಉಪಚರಿಸಲು ಅತ್ಯಂತ ಯೋಗ್ಯರು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ