ಧರ್ಮಾಚರಣೆ ೧೧೨
ಧರ್ಮಾಚರಣೆ-೧೧೨
ಅತಿಥಿತ್ವೇ ತು ವರ್ಣಾನಾಂ ದೇಯಂ ಶಕ್ತ್ಯಾನುಪೂರ್ವಶಃ | ಅಪ್ರಣೋಡ್ಯೋತಿಥಿಃ ಸಾಯಮಪಿ ವಾಕ್ಸೂನೃತೋದಕೈಃ || ಯಾಜ್ಞವಲ್ಕ್ಯ ಸ್ಮೃತಿ||
ಮನೆಗೆ ಯಾವುದೇ ವರ್ಣದ ಅತಿಥಿ ಬಂದರೂ ಅವರರವರ ಕ್ರಮಕ್ಕನುಸಾರವಾಗಿ ಆದರಿಸಬೇಕು. ಅನ್ನಾದಿಗಳನ್ನು ನೀಡಬೇಕು. ನಮ್ಮ ಸನಾತನ ಪರಂಪರೆಯ ಉದಾರತೆಯನ್ನು ಇಲ್ಲಿ ಗಮನಿಸಬಹುದು. ಯಾವ ಜಾತಿ, ಮತ ಇದ್ದರೂ ಅದನ್ನು ನೋಡದೇ ಅತಿಥಿಯನ್ನು ದೇವರಂತೆ ಕಂಡು ಅವರ ಪದ್ಧತಿಗನುಸಾರ ಉಪಚರಿಸಬೇಕು. ಸಾಯಂಕಾಲ ಉಳಿಯಲು ಬಂದರೂ ಅವರಿಗೂ ಅನ್ನ ನೀಡಬೇಕು. ಒಂದು ವೇಳೆ ಉಪಚರಿಸಲು ಸಾಕಷ್ಟು ದ್ರವ್ಯ ಇಲ್ಲದಿದ್ದರೆ ಅಂತಹ ಸಮಯದಲ್ಲಿ ಸತ್ಯವೂ ಪ್ರಿಯವೂ ಆದ ಮಾತು, ಕುಳಿತುಕೊಳ್ಳಲು ಸ್ಥಳ, ನೀರು ಇಷ್ಟು ನೀಡಿಯಾದರೂ ಅತಿಥಿಯ ಪೂಜೆ ಮಾಡಬೇಕು. ಮನೆಗೆ ಬಂದವನನ್ನು ಖಾಲಿ ಕೈಯಲ್ಲಿ ಎಂದಿಗೂ ಕಳಿಸಬಾರದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ