ಧರ್ಮಾಚರಣೆ-೮೧
ಧರ್ಮಾಚರಣೆ-೮೧
ಶ್ರುತಿಃ ಸ್ಮೃತಿಃ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ | ಸಮ್ಯಕ್ ಸಂಕಲ್ಪಜಃ ಕಾಮೋ ಧರ್ಮಮೂಲಮಿದಂ ಸ್ಮೃತಮ್ || ಯಾಜ್ಞವಲ್ಕ್ಯ ಸ್ಮೃತಿ||
ಐದು ವಿಷಯಗಳು ಧರ್ಮಮೂಲವಾದವುಗಳು. ನಾಲ್ಕು ವೇದಗಳಲ್ಲಿ ಹಾಗೂ ವೇದಾಂಗಗಳಲ್ಲಿ ಹೇಳಿರುವ ವಿಷಯಗಳ ಆಚರಣೆ. ಹದಿನೆಂಟು ಸ್ಮೃತಿಗಳು ಹದಿನೆಂಟು ಉಪಸ್ಮೃತಿಗಳ ವಿಷಯಗಳ ಅನುಸರಣೆ, ಯಾವುದೇ ಜಾತಿ-ಮತ- ಧರ್ಮದ ಸಜ್ಜನರ ಆಚರಣೆಗಳ ಅನುಸರಣೆ ( ಇಲ್ಲಿ ಹಿಂದೂ, ಸ್ಮಾರ್ತ- ಮಾಧ್ವ, ಬ್ರಾಹ್ಮಣ-ಶೂದ್ರ ಇತ್ಯಾದಿ ನೋಡಬಾರದು. ) ತನಗೆ ಪ್ರಿಯವಾದದ್ದನ್ನು ಇತರರಿಗೂ ಬಯಸುವುದು ಉದಾಹರಣೆಗೆ ಸುಳ್ಳಾಡದಿರುವುದು- ವಂಚಿಸದಿರುವುದು ಇತ್ಯಾದಿ, ಸತ್ಸಂಕಲ್ಪದಿಂದ ಕೂಡಿದ ಕಾಮನೆ ಉದಾಹರಣೆಗೆ ದಾನ ಮಾಡಲು ಧನ- ಕಲಿಸಲು ವಿದ್ಯಾರ್ಜನೆ- ಉತ್ತಮ ಸಮಾಜಕ್ಕಾಗಿ ಸತ್ಸಂತಾನ ಇತ್ಯಾದಿಗಳು ಧರ್ಮಮೂಲವಾದ ವಿಷಯಗಳು. ಇವುಗಳ ಅನುಸರಿಸುವಿಕೆಯು ನಮ್ಮನ್ನು ಪಾಪ- ನರಕಗಳ ಸಂಕೋಲೆಯಿಂದ ದೂರ ಮಾಡುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ