ಧರ್ಮಾಚರಣೆ ೯೯

ಧರ್ಮಾಚರಣೆ-೯೯

ಅವಿಪ್ಲುತ ಬ್ರಹ್ಮಚರ್ಯೋ ಲಕ್ಷಣ್ಯಾಂ ಸ್ತ್ರಿಯಮುದ್ವಹೇತ್ | ಅನನ್ಯಪೂರ್ವಿಕಾಂ ಕಾಂತಾಮಸಪಿಂಡಾಂ ಯವೀಯಸೀಮ್ || ಅರೋಗಿಣೀಂ ಭ್ರಾತೃಮತೀಂ ಅಸಮಾನಾರ್ಷಗೋತ್ರಜಾಮ್ | ಪಂಚಮಾತ್ಸಪ್ತಮಾದೂರ್ಧ್ವಂ ಮಾತೃತಃ ಪಿತೃತಸ್ತಥಾ|| ಯಾಜ್ಞವಲ್ಕ್ಯ ಸ್ಮೃತಿ||

ಬ್ರಹ್ಮಚರ್ಯವನ್ನು ನಿಯಮಿತವಾಗಿ ಪಾಲಿಸಿದ ವ್ಯಕ್ತಿಯು ಅನಂತರ ಬಾಹ್ಯ-ಆಂತರ್ಯ ಲಕ್ಷಣ ಉಳ್ಳ , ಬೇರೊಬ್ಬರನ್ನು ಚಿಂತಿಸದ, ಕುಟುಂಬಕ್ಕೆ ಸೇರದ, ವಯಸ್ಸಿನಲ್ಲೂ- ಆಕಾರದಲ್ಲೂ ತನಗಿಂತ ಸಣ್ಣವಳನ್ನು, ರೋಗರಹಿತಳನ್ನು, ಅಣ್ಣ-ತಮ್ಮಂದಿರನ್ನು ಹೊಂದಿದವಳನ್ನು, ತನ್ನ ಗೋತ್ರ-ಪ್ರವರಕ್ಕೆ ಸೇರದವಳನ್ನು, ತಾಯಿಯಿಂದ ಐದು ತಲೆ ದಾಟಿದ, ತಂದೆಯಿಂದ ಏಳು ತಲೆ ದಾಟಿದ ಕನ್ಯೆಯನ್ನು ವರಿಸಬೇಕು. ಸನಾತನ ಧರ್ಮದ ವಿವಾಹಯೋಗ್ಯತೆ ಸ್ತ್ರೀ ಪುರುಷರಿಗೆ ಸಮಾನವಾಗಿದೆ. ತಾನು ಸ್ವತಃ ಆರೋಗ್ಯದಿಂದ- ನೈಷ್ಠಿಕ ಬ್ರಹ್ಮಚರ್ಯದಿಂದ ಇದ್ದು- ಉತ್ತಮ ವಿದ್ಯೆಯನ್ನು ಸಂಪಾದಿಸಿ ಸಮಾಜಕ್ಕೆ ಹೊರೆಯಾಗದಂತೆ ಬದುಕುವ ಜವಾಬ್ದಾರಿ ಹೊಂದಿ ತನಗೆ ಈ ಲಕ್ಷಣಗಳಿಂದ ಯೋಗ್ಯಳೆನಿಸಿದ ಕನ್ಯೆಯನ್ನು ಕೈ ಹಿಡಿಯಬೇಕು. ಸಗೋತ್ರ ಅಥವಾ ಸಪ್ರವರ ಆದರೆ ಮೂಲ ಪುರುಷರು ಒಂದೇ ಆದ ಕಾರಣ ವಂಶವಾಹಿಯ ಕಾರಣದಿಂದ ಮುಂದಿನ ಪೀಳಿಗೆಗೆ ನ್ಯೂನತೆ ಬಂದೀತೆಂಬ ಜಾಗೃತೆ, ಸಂಬಂಧವೇ ಆದರೂ  ಅಷ್ಟು ಪೀಳಿಗೆ ದಾಟಿದಾಗ ಬಂಧ ಮಾತ್ರ ಉಳಿದೀತು ಎಂಬ ಯೋಚನೆಯಿಂದ  ಐದು- ಏಳು ತಲೆಮಾರುಗಳ ಅಂತರ ವಿಹಿತವಾದದ್ದು. ವಿವಾಹವೆಂದರೆ ಸುಮ್ಮನೆ ತಾಳಿ ಕಟ್ಟುವುದಲ್ಲ. ಅದೊಂದು ವಿಶಿಷ್ಟ ಪರಿಕಲ್ಪನೆ ಸನಾತನ ಸಂಸ್ಕೃತಿಯಲ್ಲಿ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩