ಧರ್ಮಾಚರಣೆ-೯೦
ಧರ್ಮಾಚರಣೆ-೯೦
ಸ ಗುರುರ್ಯಃ ಕ್ರಿಯಾಃ ಕೃತ್ವಾ ವೇದಮಸ್ಮೈ ಪ್ರಯಚ್ಛತಿ | ಉಪನೀಯ ದದದ್ವೇದಮಾಚಾರ್ಯಃ ಸ ಉದಾಹೃತಃ || ಯಾಜ್ಞವಲ್ಕ್ಯ ಸ್ಮೃತಿ||
ವೇದೋಕ್ತ ಕರ್ಮಗಳನ್ನು ಅಂದರೆ ಸಂಧ್ಯಾವಂದನೆ- ಬ್ರಹ್ಮಯಜ್ಞ- ಔಪಾಸನೆ- ವೈಶ್ವದೇವ- ಪೂಜೆ- ಅತಿಥಿಸತ್ಕಾರ- ಶ್ರಾದ್ಧಾದಿಗಳು- ಪ್ರಾಣಿಗಳಿಗೆ ಆಹಾರ ಕೊಡುವುದು- ಸ್ವಾಧ್ಯಾಯ ತಾನು ನಡೆಸಿ ಇನ್ನೊಬ್ಬರಿಗೆ ವೇದವನ್ನು ಪಾಠ ಮಾಡುವವನು ಗುರು ಎನಿಸಿಕೊಳ್ಳುತ್ತಾನೆ. ತಾನು ಸುಳ್ಳು ಹೇಳಿ ವಿದ್ಯಾರ್ಥಿಗೆ ನೀತಿಯ ಪಾಠ ಮಾಡುವವನು ಗುರುವಲ್ಲ. ವಿದ್ಯೆಯನ್ನು ಅರಸಿ ಉಪನಯನಕ್ಕೆ ಪೂರ್ವದಲ್ಲಿ ಸತ್ಯಕಾಮನಂತೆ ಬಂದರೆ ಉಪನಯನ ಮಾಡಿ ವೇದ ಹೇಳಿಕೊಟ್ಟರೆ ಅವನು ಆಚಾರ್ಯ ಎಂದು ಕರೆಸಿಕೊಳ್ಳುತ್ತಾನೆ. ಹಾಗಾಗಿ ಗುರು- ಆಚಾರ್ಯ ಎಂದು ಕರೆಸಿಕೊಳ್ಳಲು ಸಾಕಷ್ಟು ಯೋಗ್ಯತೆ ಸಂಪಾದಿಸಬೇಕಾಗುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ