ಧರ್ಮಾಚರಣೆ ೧೦೨

ಧರ್ಮಾಚರಣೆ-೧೦೨

ಪಿತಾ ಪಿತಾಮಹೋ ಭ್ರಾತಾ ಸಕುಲ್ಯೋ ಜನನೀ ತಥಾ | ಕನ್ಯಾಪ್ರದಃ ಪೂರ್ವನಾಶೇ ಪ್ರಕೃತಿಸ್ಥಃ ಪರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ|| 

ಕನ್ಯಾದಾನ ಮಾಡಲು ಕ್ರಮವಾಗಿ ತಂದೆ- ಅಜ್ಜ-ಅಣ್ಣ ತಮ್ಮ-ದೊಡ್ಡಪ್ಪ ಚಿಕ್ಕಪ್ಪ ಮೊದಲಾದ ತಂದೆಯ ಕುಲದವರು-ತಾಯಿ ಇಷ್ಟುಜನರಿಗೆ ಮಾಡಲು ಶಾಸ್ತ್ರೀಯ ಅನುಮತಿ ಇದೆ. ಇವರಲ್ಲಿ ಮೊದಲಿನವರು ಇಲ್ಲದಿದ್ದಾಗ ಮುಂದಿನವರು ಹೀಗೆ ಯಾರಾದರೂ ಕನ್ಯಾದಾನ ಮಾಡಬಹುದು. ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಗೂ ಕನ್ಯಾದಾನ ಮಾಡಲು ಅಧಿಕಾರ ಕೊಟ್ಟಿರುವುದು ಸ್ತ್ರೀ ಸ್ವಾತಂತ್ರ್ಯದ ಉತ್ತಮ ನಿದರ್ಶನ. ಸಕೃತ್ಪ್ರದೀಯತೇ ಕನ್ಯಾ ಎಂಬಂತೆ ಒಮ್ಮೆ ಮಾತ್ರ ಕನ್ಯೆಯನ್ನು ದಾನ ಮಾಡುವುದು. ಒಂದು ವೇಳೆ ಪುನರ್ವಿವಾಹ ಮೊದಲಾದ ಸಂದರ್ಭ ಒದಗಿದರೆ ಆಗ ಲೋಕರೂಢಿಯೆಂದು ಮಾಂಗಲ್ಯ ಮಾತ್ರ ಸಾಕು. ಬೇರೆ ಯಾವ ರೂಢಿಯೂ ಶಾಸ್ತ್ರ ಸಮ್ಮತವಲ್ಲ. ಒಂದು ವೇಳೆ ಇವರಾರೂ ಲಭ್ಯವಿಲ್ಲದಿದ್ದಾಗ ಕನ್ಯೆ ಸ್ವತಃ ಸ್ವಯಂವರ ಮಾಡಿಕೊಳ್ಳಲು ಧರ್ಮಶಾಸ್ತ್ರ ಅನುಮತಿ ಕೊಟ್ಟಿದೆ. ಇದೇ ಸಮಾನತೆಗೆ ನಿದರ್ಶನ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩