💐ಪ್ರತಿಮಾನಾಟಕದ ಒಂದು ಪುಷ್ಪ💐 *तप:सङ्ग्रामकवचं नियमद्विरदाङ्कुश: । खलीनमिन्द्रियाश्वानां गृह्यतां धर्मसारथि: ।।* _ಲಕ್ಷ್ಮಣ ಎಷ್ಟು ಹೇಳಿದರೂ ಕೇಳದೇ ರಾಮನ ಪಾದಸೇವೆಗಾಗಿ ತಾನೂ ಕಾಡಿಗೆ ಬರುತ್ತೇನೆಂದು ಸೀತೆಯ ಬಳಿಯೂ ನಿವೇದಿಸಿಕೊಳ್ಳುತ್ತಾನೆ. ಸೀತೆ ಅವನ ಆಗಮನಕ್ಕೆ ಒಪ್ಪಿಗೆ ನೀಡಿದಾಗ ಇಬ್ಬರ ಮನದಿಚ್ಛೆಯಂತೆ ರಾಮನೂ ಸಮ್ಮತಿಸಿ ಅವನಿಗೆ ನಾರುಬಟ್ಟೆ ಕೊಡುತ್ತಾ ನುಡಿಯುವ ಮಾತು. ಈ ವಲ್ಕಲವು ತಪಸ್ಸೆಂಬ ಯುದ್ಧದಲ್ಲಿ ಶೂರನು ಧರಿಸಬೇಕಾದ ಕವಚ. ತೊಡು ಇದನ್ನು, ಅನಂತರ ವನದಲ್ಲಿ ತಪಸ್ಸಿಗೆ ತೊಡಗುವಿಯಂತೆ. ಈ ಯುದ್ಧದಲ್ಲಿ ಆನೆಯನ್ನು ವಶಪಡಿಸಿಕೊಳ್ಳಲು ಮುಖ್ಯವಾಗಿ ಬೇಕಾದ ಅಂಕುಶ ಯಾವುದೆಂದರೆ ಅದು ಮನಸ್ಸಿನ ಸಂಯಮ. ಅದನ್ನು ರೂಢಿಸಿಕೊ. ಇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಿಸಲು ಬಳಸುವ ಹಗ್ಗ ಅದೂ ಸಂಯಮವೇ. ಇಂದ್ರಿಯಗಳ ನಿಗ್ರಹಕ್ಕೆ ಅಥವಾ ಕುದುರೆಗಳಂತೆ ಎಲ್ಲೆಲ್ಲೋ ಓಡುವ ಅವುಗಳಿಗೆ ಸಂಯಮವೆಂಬ ಹಗ್ಗದ ನಿಯಂತ್ರಣ ಬೇಕು. ಧರ್ಮವೆಂಬ ರಥದ ಸಾರಥಿಯಾಗಿ ಈ ಸಂಯಮದ ಪ್ರತಿನಿಧಿಯಾಗಿರುವ ಈ ನಾರುಬಟ್ಟೆಗಳನ್ನು ತೆಗೆದುಕೊ. ಇಲ್ಲಿ ಸಂಗ್ರಾಮದ ಉಲ್ಲೇಖ ಯುದ್ಧದಂತೆ ಇಲ್ಲೂ ಏಕಾಗ್ರತೆ ತಾಳ್ಮೆ ಬೇಕಾಗುತ್ತದೆ ಎಂಬ ಸೂಚನೆ ಕೊಡಲು. ಇಲ್ಲದಿದ್ದರೆ ತಪಸ್ಸು ಕೆಟ್ಟು ಹೋಗುವುದು. ನಿಯಮಗಳು ಆನೆಗಳಂತೆ ಸ್ವಚ್ಛಂದತೆಯನ್ನು ಪಡೆದು ನಮಗೆ ಬೇಕಾದ ಹಾಗೇ ಮಾಡಿಕೊಳ್ಳದಿರಲು ಸಂಯಮವೆಂಬ ಅಂಕುಶ. ಇಂದ್ರಿಯಗಳನ್ನು ಅಶ್ವಕ್ಕೆ ಹೋಲಿಸಿರುವ...
ಪೋಸ್ಟ್‌ಗಳು
ಡಿಸೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📃ವೇದ- ಧರ್ಮ ಭಾಗ-೫ ವೇದದ ದೇವತೆಗಳು. ಮುಂದುವರಿದ ಭಾಗ..... ೭._ಅಶ್ವಿನೀ ದೇವತೆಗಳು= ಹೆಸರೇ ಸೂಚಿಸುವಂತೆ ಅಶ್ವೀ ಎಂದರೆ ಹೆಣ್ಣು ಕುದುರೆಯಿಂದ ಜನಿಸಿದ ಅವಳಿ ದೇವತೆಗಳು. ಸೂರ್ಯನು ತ್ವಷ್ಟೃವಿನ ಮಗಳಾದ ಸಂಜ್ಞೆಯು ಅಶ್ವರೂಪದಲ್ಲಿರುವಾಗ ಸೇರಿ ಜನಿಸಿದ ವೀರರು. ಸ್ವರ್ಗ ಇವರ ಸ್ಥಾನ. ಋಗ್ವೇದದ ಸುಮಾರು ೫೦ ಸೂಕ್ತಗಳಲ್ಲಿ ಇವರ ವರ್ಣನೆ ಕಂಡುಬರುತ್ತದೆ. ಇವರ ಸ್ತುತಿ, ವರ್ಣನೆ ಎಲ್ಲವೂ ಒಟ್ಟಿಗೇ ಕಂಡುಬರುತ್ತದೆ. ಆಹುತಿ ನೀಡುವುದು ಕೂಡ ಇಬ್ಬರಿಗೂ ಸೇರಿ ಒಂದೇ. ಇವರು ಭೂಮಿ ಹಾಗೂ ಅಂತರಿಕ್ಷಗಳನ್ನು ಪ್ರತಿನಿಧಿಸುವರೆಂದೂ, ಹಗಲು ರಾತ್ರಿಗಳನ್ನು ಪ್ರತಿನಿಧಿಸುವರೆಂದೂ, ಸೂರ್ಯ ಚಂದ್ರರನ್ನು ಪ್ರತಿನಿಧಿಸುವರೆಂದೂ ವಿಧ ವಿಧವಾಗಿ ವರ್ಣಿಸಿದೆ ವೇದ. ಒಟ್ಟಾರೆ ಎರಡು ಶಕ್ತಿಗಳ ಪ್ರತಿನಿಧಿಗಳು ಇವರು. ವೇದದಲ್ಲಿ ಉಳಿದ ದೇವತೆಗಳೊಡನೆಯೂ ಇವರ ಸ್ತುತಿ ಇದೆ. ಅವಿಭಕ್ತ ರೂಪದಲ್ಲೇ ಅನುಗ್ರಹಿಸುವ ದೇವತೆಗಳು. ನಿತ್ಯ ಯುವಕರಿವರು. ಇಬ್ಬರೂ ದೇದೀಪ್ಯಮಾನರಾಗಿ ಬೆಳಗುತ್ತಾ ಕಮಲದ ಹಾರವನ್ನು ಧರಿಸಿ ವೇಗದಿಂದ ಸಂಚರಿಸುತ್ತಾರೆ. ದಸ್ರ , ನಾಸತ್ಯಾ, ಹಿರಣ್ಯವರ್ತನ್, ಸುದಾನೂ, ಮಧುಯುವಾ, ಮಧವಾನಾ, ತುವಿಷ್ಯಾ, ಅಧ್ರಿಗೂ ಎಂದೆಲ್ಲಾ ನಾನಾ ಹೆಸರುಗಳಿಂದ ಸ್ತುತಿಸಿವೆ ವೇದಗಳು. ಹೆಸರಿನಂತೆ ಜೇನಿನ ಕೊಡವನ್ನು ಧರಿಸಿದ್ದಾರೆ. ಇವರ ರಥ ಅಂಕುಶ ಎಲ್ಲ ಮಧುಮಯವೇ ಆಗಿದೆ. ಉಷಾ ಮತ್ತು ಸೂರ್ಯರ ಮಕ್ಕಳೆಂದೂ ಕೆಲವೆಡೆ ಉಲ್ಲೇಖಿಸಲಾಗಿದೆ. ಇ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಒಂದು ಕುಸುಮ🌹 *इदमुपनतमेवं रूपमक्लिष्टकान्ति प्रथमपरिगृहीतं स्यान्न वेति व्यवस्यन् । भ्रमर इव विभाते कुन्दमन्तस्तुषारं न च खलु परिभोक्तुं नैव शक्नोमि हातुम् ।।* _ಪತಿಗಾಗಿ ಬಂದ ಶಕುಂತಲೆಯನ್ನು ದುಷ್ಯಂತ ಪತ್ನಿ ಎಂದು ಒಪ್ಪದಿದ್ದಾಗ ಗೌತಮಿಯು ಒಂದು ಕ್ಷಣ ಮುಖದ ಪರದೆಯನ್ನು ಸರಿಸುತ್ತೇನೆ, ಆಗಲಾರದೂ ರಾಜ ಗುರುತು ಹಿಡಿಯಬಹುದು ಎಂದು ಅವಳ ಪರದೆಯನ್ನು ಸರಿಸುತ್ತಾಳೆ. ಆಗ ಅವಳ ಮನಮೋಹಕ ಸೌಂದರ್ಯವನ್ನು ನೋಡಿದ ದುಷ್ಯಂತನ ಮಾತು. ನಿಷ್ಕಲ್ಮಶವಾದ ಕಾಂತಿಯಿಂದ ಕೂಡಿರುವ ತಾನೇ ತಾನಾಗಿ ನನಗೆ ಬಂದೊದಗಿರುವ ಈ ರೂಪಸಿಯನ್ನು ಹಿಂದೆ ಸ್ವೀಕರಿಸಿದ್ದೆನೊ ಇಲ್ಲವೊ ಎಂಬುದನ್ನು ನಿರ್ಧರಿಸಲಾಗದೆ , ಬೆಳಗಿನ ಜಾವದ ಮಂಜು ತುಂಬಿದ ಮಲ್ಲಿಗೆ ಹೂವನ್ನು ಕಂಡ ದುಂಬಿಯಂತೆ ಕಷ್ಟದ ಪರಿಸ್ಥಿತಿ ನನಗೂ ಆಗುತ್ತಿದೆ. ದುಂಬಿ ಹೂವನ್ನು ಕಂಡ ಕ್ಷಣವೇ ಮಕರಂದ ಹೀರಲು ಧಾವಿಸುತ್ತದೆ. ಆದರೆ ಬೆಳಿಗ್ಗೆಯ ಸಮಯದಲ್ಲಿ ಮಲ್ಲಿಗೆ ಹೂವಿನ ಮೇಲೆ ಮಂಜು ಬಿದ್ದು ಮಕರಂದ ಹೀರಲು ಅಡ್ಡಿಯಾಗುವುದು. ಎದುರಿಗೆ ಸುಂದರ ಪುಷ್ಪ ಇದ್ದರೂ ಅನುಭವಿಸಲಾರದ ಸ್ಥಿತಿ ಆ ದುಂಬಿಗೆ. ಪ್ರಕೃತ ರಾಜನ ಸ್ಥಿತಿಯೂ ಹಾಗೇ ಆಗಿದೆ. ಬಯಸದೆಯೇ ಅಪರೂಪದ ರೂಪಸಿ ಕಣ್ಣೆದುರು ನಿಂತಿರುವಳು. ತಾನೇ ಅವಳ ಪತಿ ಎಂದೂ ನುಡಿಯುತ್ತಿದ್ದಾಳೆ. ಆದರೆ ಮಂಜಿನಂತೆ ತಡೆಯಾಗಿರುವುದು ಅವಳನ್ನು ವರಿಸಿದ್ದೆನೊ ಇಲ್ಲವೋ ಎಂಬ ಮನಸ್ಥಿತಿ. ಮನವು ಅವಳ ಪರಿಣಯವನ್ನು ನಿಶ್ಚಯಿಸ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾನಾಟಕದ ಒಂದು ಸುಮ💐 *निर्योगाद् भूषणान्माल्यात् सर्वेभ्योर्धं प्रदाय मे । चिरमेकाकिनाबद्धं चीरे खल्वसि मत्सरी ।।* _ರಾಮ ಸೀತೆಯರು ವನಕ್ಕೆ ನಾರು ಮಡಿ ಉಟ್ಟು ಹೊರಟಿದ್ದಾರೆ.ಲಕ್ಷ್ಮಣನಿಗೆ ರಾಮನು ನಿರಾಕರಿಸಿದ್ದಾನೆ.ಆಗ ಅವನಾಡುವ ನುಡಿ- ಹೊಸ ವಸ್ತ್ರಗಳನ್ನು ಧರಿಸುವ ಸಂದರ್ಭದಲ್ಲಿ ನನಗೆ ನೀಡಿಯೇ ನೀನು ಧರಿಸುತ್ತಿದ್ದಿ. ಆಭರಣಗಳನ್ನು ಧರಿಸುವ ಸಂದರ್ಭದಲ್ಲೂ ನನಗೂ ಕೆಲವನ್ನು ನೀಡಿ ಧರಿಸುತ್ತಿದ್ದಿ.ಪುಷ್ಪ ಮಾಲೆಗಳನ್ನು ಹಾಕಿಕೊಳ್ಳುವಾಗಲೂ ಲಕ್ಷ್ಮಣನಿಗೆ ಕೊಟ್ಟೇ ಹಾಕಿಕೊಳ್ಳುತ್ತಿದ್ದಿ. ಆದರೆ ಈಗ ಅತ್ಯಂತ ಕಡಿಮೆ ಬೆಲೆಯ ಈ ನಾರುಮಡಿಯನ್ನುಡುವ ಸಂದರ್ಭದಲ್ಲಿ ನಿನಗೆ ನನ್ನ ನೆನಪಾಗಲಿಲ್ಲವೇ? ಈ ಸಾಮಾನ್ಯ ವಸ್ತುವಿನಲ್ಲಿ ನಿನಗೆ ಮತ್ಸರ ಭಾವ ಬಂದುಬಿಟ್ಟಿತಲ್ಲ ಇದು ನಿಜಕ್ಕೂ ಆಶ್ಚರ್ಯ. ಒಬ್ಬನೇ ಉಟ್ಟುಕೊಳ್ಳುತ್ತಿರುವುದು ನ್ಯಾಯವೇ? ಅಂತಹ ಬೆಲೆಬಾಳುವ ಬಟ್ಟೆಗಳನ್ನು, ಆಭರಣಗಳನ್ನು, ಹಾರಗಳನ್ನು ಧರಿಸುವ ಸಂದರ್ಭದಲ್ಲಿ ಎಂದೆಂದಿಗೂ ನೆನಪಾಗುತ್ತಿದ್ದ, ಅವನೊಡನೆ ಹಂಚಿಕೊಳ್ಳುತ್ತಿದ್ದ ನೀನು ಈ ತುಂಬಾ ಕಡಿಮೆ ಬೆಲೆಯ ನಾರು ಬಟ್ಟೆಯನ್ನು ಧರಿಸುವಾಗ ನನಗೆಂದು ಎತ್ತಿಟ್ಟಲಿಲ್ಲವೇ? ಅಥವಾ ಈ ವಸ್ತುವಿನಲ್ಲಿ ನಿನಗೆ ಮತ್ಸರವೇ? ನನಗೆ ತಿಳಿಯುತ್ತಿಲ್ಲ. ಇಲ್ಲಿ ರಾಮ - ಲಕ್ಷ್ಮಣರ ಗೆಳೆತನ ಎಷ್ಟು ಹೃದ್ಯವಾಗಿತ್ತು ಎನ್ನುವುದನ್ನು ಗಮನಿಸಬಹುದು. ರಾಮ ತನ್ನ ತಮ್ಮನಿಗೆ ನೀಡದೇ ಯಾವ ಸುಖವನ್ನೂ ಅನುಭವಿಸುತ್ತಿರಲಿಲ್...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಸುಂದರ ಪುಷ್ಪ🌹 *सतीमपि ज्ञातिकुलैकसंश्रयां जनोन्यथा भर्तृमतीं विशङ्कते । अत: समीपे परिणेतुरिष्यते प्रियाsप्रिया वीा प्रमदा स्वबन्धुभि: ।।* _ಶಾಂರ್ಗರವನು ದುಷ್ಯಂತನ ನಡೆಯನ್ನು ಆಕ್ಷೇಪಿಸುತ್ತಿದ್ದಾನೆ. ಪತ್ನಿಯ ವಾಸ ಎಲ್ಲೆಂದು ಲೌಕಿಕರಾದ ನಿಮಗೆ ತಿಳಿದಿಲ್ಲವೇನು? ಅದನ್ನು ನಾವು ಹೇಳಿಕೊಡಬೇಕೇ ನಿಮಗೆ? ಗಂಡನಿದ್ದವಳು ಅಥವಾ ವಿವಾಹಿತ ಮಹಿಳೆ ತವರು ಮನೆಯಲ್ಲಿಯೇ ಬಹಳ ದಿನಗಳ ಕಾಲ ಉಳಿದರೆ ಜನರು ಅವಳ ವಿಷಯದಲ್ಲಿ ಕೆಟ್ಟದ್ದನ್ನೇ ಅಥವಾ ಬೇರೆ ರೀತಿಯಲ್ಲಿಯೇ ಯೋಚಿಸುತ್ತಾರೆ. ಹಾಗಾಗಿ ಗಂಡನಿಗೆ ಅಪ್ರಿಯಳಾದರೂ ಅವಳ ಬಂಧುಗಳು ತಮ್ಮ ಹುಡುಗಿ ಮದುವೆಯಾದವನ ಹತ್ತಿರವೇ ಇರಬೇಕೆಂದು ಅಪೇಕ್ಷಿಸುತ್ತಾರೆ. ಪತಿ ಬದುಕಿರುವಾಗಲೇ ಪತ್ನಿ ತವರು ಮನೆಯಲ್ಲಿಯೇ ಉಳಿದರೆ ಅದು ಜನರ ನಾನಾ ವಿಧದ ಸಂಶಯಗಳಿಗೆ ಕಾರಣವಾಗುತ್ತದೆ. ಅವರ ನಡುವೆ ಸರಿಯಿಲ್ಲವೇನೋ, ಅಥವಾ ಇವಳಿಗೋ/ ಅವನಿಗೋ ಬೇರೆ ಸಂಬಂಧಗಳಿವೆಯೆಂದೋ , ಸ್ವೈರಿಣಿ ಎಂದೋ ಹೀಗೆಲ್ಲ ಶಂಕಿಸುತ್ತಾರೆ. ಪತಿಯ ಮನೆಯಲ್ಲಿಲ್ಲದ ಕ್ಷಣವೇ ಜನರ ಬಾಯಿಗೆ ಅಂತಹ ಮಹಿಳೆ ಆಹಾರವಾಗುವಳು. ಹಾಗಾಗಿ ಗಂಡ ಅವಳನ್ನು ಇಷ್ಟಪಡುತ್ತಿರಲಿ ಇಲ್ಲದಿರಲಿ ಮದುವೆಯಾದ ಕಾರಣ ಅವನ ಮನೆಯಲ್ಲೇ ಅವಳಿರಬೇಕು.ಇದನ್ನೇ ಅವಳ ಬಂಧುಗಳು ಬಯಸುವರು.ಪ್ರಕೃತ ನೀನು ವನದಲ್ಲಿ ಇವಳನ್ನು ವರಿಸಿದ್ದಿ. ಇನ್ನು ಈ ಶಕುಂತಲೆ ನಿನ್ನ ಬಳಿ ಇರಬೇಕಾದವಳು ಹೊರತು ಅಪ್ಪನ ಮನೆಯಲ್ಲಿ ಅಲ್ಲ. ಹಾಗಾಗಿ ನಿನಗೆ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾನಾಟಕದ ಒಂದು ಸುಮ💐 *अनुचरति शशाङ्कं राहुदोषेपि तारा पतति च वनवृक्षे याति भूमिं लता च । त्यजति न च करेणु: पङ्कलग्नं गजेन्द्रं व्रजतु चरतु धर्मं भर्तृनाथा हि नार्य: ।।* _ವನವಾಸ ನಿಶ್ಚಿತವಾದ ಮೇಲೆ ರಾಮನು ತಾನು ಹೊರಡಲು ಅನುವಾಗಿ ಸೀತೆಗೆ ಇಲ್ಲೇ ಅತ್ತೆ ಮಾವಂದಿರೊಡನೆ ಇರುವಂತೆ ಹೇಳುತ್ತಾನೆ. ಅದಕ್ಕವಳು ಒಪ್ಪದಿದ್ದಾಗ ಲಕ್ಷ್ಮಣ ನೀನಾದರೂ ಕಾಡಿನ ಬಗ್ಗೆ ಅತ್ತಿಗೆಗೆ ತಿಳಿಹೇಳು ಎನ್ನುತ್ತಾನೆ ರಾಮ. ಆಗ ಲಕ್ಮ್ಷಣ ಸೀತೆಯ ಅಭಿಪ್ರಾಯವನ್ನೇ ತಾನೂ ಸಮರ್ಥಿಸುತ್ತಾನೆ. ಪತಿಯನ್ನು ಹಿಂಬಾಲಿಸುವ ಶುಭ ಕಾರ್ಯದಲ್ಲಿ ತೊಡಗುತ್ತಿರುವ ಇವಳನ್ನು ಯಾಕೆ ನಾನು ತಡೆಯಲಿ? ಲೋಕದ ಸ್ಥಿತಿ ಹೀಗಿದೆ. ಚಂದ್ರನ ಮಡದಿ ತಾರೆ ತನ್ನ ಪತಿ ರಾಹುವಿನಿಂದ ನುಂಗಲ್ಪಡುತ್ತಿದ್ದರೂ ಅವನನ್ನೇ ಹಿಂಬಾಲಿಸುತ್ತಾಳೆ. ಮರವೊಂದು ಭುವಿಗೆ ಬಿದ್ದಾಗ ಜೊತೆಗಾತಿ ಬಳ್ಳಿಯೂ ಅವನೊಡನೆ ತಾನೂ ನೆಲವನ್ನು ಆಶ್ರಯಿಸುವುದು. ಮರವನ್ನು ಬಿಟ್ಟು ಹೋಗದು ವೃಕ್ಷ. ಅಂತೆಯೇ ಹೆಣ್ಣು ಆನೆಯು ಕೆಸರಿನಲ್ಲಿ ಮುಳುಗುತ್ತಿರುವ ತನ್ನ ಪತಿಯನ್ನು ಬಿಟ್ಟು ಎಂದಿಗೂ ಮುಂದುವರಿಯಲಾರದು. ಹೀಗೆ ದೇವತೆಗಳಲ್ಲಿ, ಮರಗಿಡಗಳಲ್ಲಿ, ಪ್ರಾಣಿಗಳಲ್ಲೇ ಇಂತಹ ಅನ್ಯೋನ್ಯತೆ ಕಂಡುಬರುತ್ತಿರುವಾಗ ಭಾವನೆಗಳ ಜೊತೆಗೆ ಬದುಕು ಸಾಗಿಸುವ ಮನುಷ್ಯ ಮಾತ್ರಳಾದ ಈ ನಿನ್ನ ಸತಿ ನಿನ್ನನ್ನು ಹಿಂಬಾಲಿಸಲಿ, ಧರ್ಮದ ಕಾರ್ಯಗಳನ್ನು ಜೊತೆಗೆ ನಡೆಸಲಿ. ಎಷ್ಟೆಂದರೂ ಪತ್ನಿಯರು ಪತಿಯನ್ನೇ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಒಂದು ಸುಮ🌹 *भवन्ति नम्रास्तरव: फलागमै: नवाम्बुभिर्दूरविलम्बिनो घना: । अनुद्धता: सत्पुरुषा: समृद्धभि: स्वभाव एवैष परोपकारिणाम् ।।* _ಶಾಂರ್ಗರವನು ದುಷ್ಯಂತನ ಕುರಿತು ನುಡಿಯುವ ಸುಂದರ ಮಾತು. ರಾಜನು ನಿಮಗಾಗಿ ನಿಂತು ಕಾಯುತ್ತಿದ್ದಾನೆ ಎಂದು ಪ್ರತೀಹಾರಿ ಹೇಳುವಾಗ ಈ ಮಾತು ನುಡಿಯುವನು. ಮರಗಳು ತಮ್ಮಲ್ಲಿ ಹಣ್ಣು ತುಂಬಿದಾಗ ಅದರ ಭಾರಕ್ಕೆ ಬಾಗುತ್ತವೆ. ತಾವು ಸಮೃದ್ಧವಾಗಿ ಇದ್ದಾಗಲೂ ಎದೆಯುಬ್ಬಿಸದೇ ತಗ್ಗಿ ನಡೆಯುತ್ತವೆ. ಕಪ್ಪು ಮೋಡಗಳು ನೀರು ತುಂಬಿಕೊಂಡಾಗ ಭೂಮಿಗೆ ಮೊದಲಿಗಿಂತ ಸಮೀಪ ಬರುತ್ತವೆ. ತಾವು ತುಂಬಿದವರೆಂದು ಮೇಲೆ ತೇಲುವುದಿಲ್ಲ. ಹೀಗೆಯೇ ಸತ್ಪುರುಷರು ಸಮೃದ್ಧಿಯಿಂದ ನಿರಹಂಕಾರಿಗಳಾಗುವರು. ತಮ್ಮಲ್ಲಿ ದುಡ್ಡು ಇದೆ, ಜ್ಞಾನ ಇದೆ, ಅಧಿಕಾರ ಇದೆ ಎಂದು ಅಹಂಕಾರ ಪಡದೆ ವಿನಯ ತೋರುತ್ತಾರೆ. ಇದು ಲೋಕದಲ್ಲಿ ಪರೋಪಕಾರಿಗಳ ಸ್ವಭಾವ. ಮರ ತಾನು ಸಂಪಾದಿಸಿದ ಹೂವು ಹಣ್ಣುಗಳನ್ನೆಲ್ಲವನ್ನೂ ದಾನ ಮಾಡಲು ತನ್ನ ದೇಹವನ್ನೇ ತಗ್ಗಿಸಿ ಸ್ವಾಗತಿಸುತ್ತದೆ. ಮೋಡ ದೇಹ ತುಂಬಿದ ಮೇಲೆ ಜನರ ಉಪಯೋಗಕ್ಕೆ ಮಳೆ ಸುರಿಸಲು ಮತ್ತಷ್ಟು ಕೆಳಗಿಳಿದು ಬರುತ್ತದೆ. ಸಜ್ಜನರು ತಮಗೆ ಒದಗಿದ ವಿವಿಧ ರೀತಿಯ ಸಮೃದ್ಧಿಯ ಸಮಯದಲ್ಲಿ ಇನ್ನಷ್ಟು ವಿನೀತರಾಗುವರು ಹೊರತು ಅಹಂಕಾರಿಗಳಲ್ಲ. ರಾಜನ ಸ್ವಭಾವವೂ ಉತ್ತಮವಾದ್ದರಿಂದ ಪ್ರಕೃತ ಅವನ ನಡತೆ ಸಹಜವಾಗಿಯೇ ವಿನಯದಿಂದ ಕೂಡಿದೆ ಎಂಬ ಭಾವ. ನಾವೂ ಸಮೃದ್ಧಿಯಲ್ಲಿ ಅಹಂಕಾರ ಪಡದ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📃ವೇದ-ಧರ್ಮ ಭಾಗ-೪ ೫. ರುದ್ರ= *ರುಜಂ ದ್ರಾವಯತಿ* ರೋಗಗಳನ್ನು ಪರಿಹರಿಸುವವನು, *ರೋದಯತಿ ಇತಿ* ಹುಟ್ಟುವಾಗಲೇ ಅಳುತ್ತಿದ್ದವನನ್ನು ಬ್ರಹ್ಮ ವರಗಳನ್ನು ಕೊಟ್ಟು ಸಮಾಧಾನ ಮಾಡಿದ ಕಥೆ ಪುರಾಣಗಳಲ್ಲಿರುವಂತೆ, ಅಥವಾ ರೋಗಗಳ ದುಷ್ಟಶಕ್ತಿಗಳ ನಿಯಂತ್ರಕ ಎಂಬೆಲ್ಲಾ ಅರ್ಥಗಳು ಇವೆ. ಬ್ರಹ್ಮನ ಕೋಪದಿಂದ ಸೃಷ್ಟಿಯ ಕಾಲದಲ್ಲಿ ಹುಬ್ಬುಗಳ ಮಧ್ಯದಿಂದ ಜನಿಸಿದ ದೇವತೆ. ಅಂತರಿಕ್ಷ ಇವನ ಸ್ಥಾನ. ಋಗ್ವೇದದ ೩ ಸೂಕ್ತಗಳಲ್ಲಿ ಇವನನ್ನು ಸಂಪೂರ್ಣವಾಗಿ, ಇನ್ನು ಕೆಲವೆಡೆ ಬೇರೆ ದೇವತೆಗಳೊಡನೆ ಸ್ತುತಿಸಿದ್ದಾರೆ. ಇವನು ಬೂದುಬಣ್ಣದ ದೇವತೆ. ಹೀಗಾಗಿಯೇ *ಬಭ್ರು* ಹೆಸರಿನಿಂದ ಕರೆದಿದೆ ವೇದ. ಇಂದ್ರನಿಗೂ ರುದ್ರನಿಗೂ ತುಟಿಗಳ ಸೌಂದರ್ಯದ ಕಾರಣ *ಸುಶಿಪ್ರ* ಎಂಬ ಹೆಸರೂ ಕಂಡುಬರುವುದು. ಶುಕ್ಲ ಯಜುರ್ವೇದವು ರುದ್ರನನ್ನು ರಕ್ತವರ್ಣದಿಂದ ಪ್ರಕಾಶಿಸುವನೆಂದೂ , ಬೇರೆ ಬೇರೆ ರೂಪಗಳನ್ನು ಧರಿಸಿ ಸೂರ್ಯನಂತೆ ಶೋಭಿಸುತ್ತಾನೆಂದೂ ವರ್ಣಿಸಿದೆ. ಚರ್ಮವೇ ಇವನ ಅಂಬರ. ಪರ್ವತವೇ ಮನೆ. ಭಸ್ಮವೇ ಲೇಪನ. ಸದಾ ಧ್ಯಾನವೇ ಕಾರ್ಯ. *ಧನುರಾತನೋಮಿ ಬ್ರಹ್ಮದ್ವಿಷೇ ಶರವೇ ಹಂತ ವಾ ಉ* ಲಕ್ಷ್ಮಿಯು ನಾಸ್ತಿಕರ ಅಥವಾ ಅಧರ್ಮಿಗಳ ಸಂಹಾರಕ್ಕೆಂದು ರುದ್ರನಿಗೆ ಧನುಸ್ಸನ್ನು ನೀಡಿದ್ದಾಳೆ. ರುದ್ರನು ಕೆಲವೊಮ್ಮೆ ಚಕ್ರ, ವಜ್ರ ,ಕತ್ತಿ ಹೀಗೆ ವಿವಿಧ ಆಯುಧ ಧರಿಸಿರುವ ವರ್ಣನೆ ಇದೆ. ರುದ್ರನ ಖಡ್ಗ ಮಿಂಚಿನಿಂದ ತಯಾರಿಸಿದ್ದು. ಗಾಳಿಗಿಂತಲೂ ವೇಗದ ಚಲನೆ ಇವನ ಖಡ್ಗಕ್ಕೆ. ರುದ್ರನ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾನಾಟಕದ ಒಂದು ಕುಸುಮ💐 *मङ्गलार्थेsनया दत्तान् वल्कलांस्तावदानय । करोम्यन्यैर्नृपैर्धर्मं नैवाप्तं नोपपादितम् ।।* _ಹದಿನಾಲ್ಕು ವರ್ಷ ವನವಾಸ ಮಾಡುವ ಬಗ್ಗೆ ನನಗೆ ದು:ಖವಾಗುತ್ತಿರುವುದು, ರಾಜ್ಯ ನಿನ್ನಿಂದ ತಪ್ಪಿಹೋಗುತ್ತದೆ ಎಂದಲ್ಲ , ನಿಷ್ಕಾರಣವಾಗಿ ನಿನಗೆ ಯಾಕೆ ಈ ಶಿಕ್ಷೆ ಎಂದು ಲಕ್ಷ್ಮಣ ಮರುಗಿದಾಗ ರಾಮನ ಸಹಜ ಮಾತು. ಮೈಥಿಲಿ, ಲಕ್ಷ್ಮಣ ಮೂರ್ಛೆ ಹೊಂದಿದ. ಇರಲಿ ಪಿತನ ಆಜ್ಞೆ ನನ್ನ ಕರ್ತವ್ಯ. ತಂದೆಯ ಆಜ್ಞೆಯ ಪಾಲನೆ ಎಂಬ ಮಂಗಳ ಕಾರ್ಯಕ್ಕಾಗಿ ಈ ನಿನ್ನ ಸಖಿ ಕೊಟ್ಟ ನಾರುಬಟ್ಟೆಗಳನ್ನು ಬೇಗ ತಾ. ( ಅಂಕದ ಆದಿಯಲ್ಲಿ ಸಖಿ ಸೀತೆಯ ಒತ್ತಾಯದಂತೆ ತಮಾಷೆಗಾಗಿ ನಾರು ಬಟ್ಟೆ ತಂದಿರುತ್ತಾಳೆ) ಇದು ನನಗೆ ಅತ್ಯಂತ ಮಂಗಳ ಕಾರ್ಯ.ಏಕೆಂದರೆ ಬೇರೆ ನೃಪರು ಈವರೆಗೆ ಮಾಡದಿರುವ ಅಥವಾ ಅವರಿಗೆ ಒದಗಿಬರದ ಬಾಲ್ಯದಲ್ಲೇ ವನವಾಸವೆಂಬ ಉತ್ತಮ ಕೆಲಸ ನನ್ನ ಪಾಲಿಗೆ ಒದಗಿದೆ.ಇದೊಂದು ಸದವಕಾಶ. ನಮ್ಮ ವಂಶದ ನೃಪರೆಲ್ಲರೂ ವಾರ್ಧಕ್ಯದಲ್ಲಿ ಮಾತ್ರ ವನವಾಸ ಕೈಗೊಳ್ಳುತ್ತಿದ್ದರು.ನನಗಾದರೋ ಈ ತರುಣ ವಯಸ್ಸಿನಲ್ಲಿಯೇ ಅದು ಒದಗಿದೆ.ಎಂದಾದರೂ ಮಾಡಲೇಬೇಕಾದ ಕಾರ್ಯ ಇಷ್ಟು ಬೇಗ ಒದಗಿಬಂದಿರುವುದು ನನ್ನ ಪಾಲಿನ ಅದೃಷ್ಟ.ಹಾಗಾಗಿ ತಡಮಾಡದೆ ಕೇವಲ ಹದಿನಾಲ್ಕು ವರ್ಷಗಳಷ್ಟು ಕಾಲದ ಈ ಉತ್ತಮ ಕಾರ್ಯವನ್ನು ಪೂರೈಸಿಬಿಡೋಣ. ಎಂತಹ ಧನಾತ್ಮಕ ಮಾತು. ಕಷ್ಟಗಳು ಬಂದಾಗಲೆಲ್ಲ ನಮ್ಮ ಚಿಂತನೆ ಈ ದಿಕ್ಕಿನಲ್ಲಿ ಸಾಗಿದರೆ ನಮ್ಮ ಪಾಲಿನ ಸುದಿನಗಳೇ ಎಲ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಒಂದು ಕುಸುಮ🌹 *अभ्यक्तमिव स्नात: शुचिरशुचिमिव प्रबुद्ध इव सु्प्तम् । बद्धमिव स्वैरगतिर्जनमिह सुखसङ्गिनमवैमि ।।* _ಕಣ್ವರ ಶಿಷ್ಯನಾದ ಶಾರದ್ವತನ ಮಾತು. ಅವರ ಸಂದೇಶವನ್ನು ರಾಜನಿಗೆ ನಿವೇದಿಸಲು ನಗರಕ್ಕೆ ಬಂದಿದ್ದಾನೆ.ನಗರದ ಧಾವಂತದ ಬದುಕನ್ನು ನೋಡಿ ಅವನಿಗನ್ನಿಸಿದ ಭಾವವೇ ಈ ಶ್ಲೋಕ. ನಗರ ಪ್ರವೇಶ ಮಾಡಿದಾಗಿನಿಂದ ನನಗೆ ವಿಚಿತ್ರವೆನಿಸುತ್ತಿದೆ. ಸುಖಲೋಲುಪರಾದ ಈ ಜನರನ್ನು ಕಂಡು ಸ್ನಾನ ಮಾಡಿದವನು ಎಣ್ಣೆ ಮೆತ್ತಿಕೊಂಡು ಅಭ್ಯಂಗಕ್ಕೆ ಸಿದ್ಧನಾಗಿರುವವನನ್ನು ಕಂಡಂತೆ, ಪರಿಶುದ್ಧನಾದವನು ಅಶುಚಿಯಾದವನ ಕಂಡಂತೆ, ಎಚ್ಚೆತ್ತವನು ಮಲಗಿದವನನ್ನು ಕಂಡಂತೆ, ಸ್ವತಂತ್ರವಾಗಿರುವವನು ಬಂಧನದಲ್ಲಿದ್ದವನನ್ನು ಕಂಡಂತೆ ಅನುಭವ ಎನಗಾಗುತ್ತಿದೆ. ಹಿಂದೆ ಶಾರ್ಙರವನಿಗೂ ನಗರವು ಹೊತ್ತಿ ಉರಿಯುತ್ತಿರುವಂತೆ ತೋರಿತ್ತು.ಈಗ ಶಾರದ್ವತನಿಗೂ ಅದೇ ಭಾವ.ನಗರದ ಧಾವಂತದ ಬದುಕಲ್ಲಿ ಸ್ನಾನ ಪಾನ ಭೋಜನಗಳಿಗೆ ನಿಯಮಿತ ಸಮಯ ಹೊಂದಿಸಿಕೊಳ್ಳುವುದು ಬಹಳ ಕಷ್ಟ. ಒಬ್ಬ ಸ್ನಾನ ಮಾಡಿ ಸಿದ್ಧನಾಗುವ ಸಮಯದಲ್ಲಿ ಇನ್ನೊಬ್ಬ ಕೆಲಸ ಮುಗಿಸಿ ಬಂದು ಸ್ನಾನಕ್ಕೆಂದು ಹೊರಡುತ್ತಿರುತ್ತಾನೆ.ಅಥವಾ ತಾನು ನಿದ್ರೆ ಮಾಡಲು ತಯಾರಾಗುತ್ತಾನೆ. ಇನ್ನು ಭಾರೀ ಸುಗಂಧದ್ರವ್ಯ ಪೂಸಿಕೊಂಡು ಗರಿಗರಿ ಬಟ್ಟೆ ಹಾಕಿಕೊಂಡು ಹೊರಟ ಕ್ಷಣದಲ್ಲಿಯೇ ಯಾವ ವಾಹನದ ಕೆಸರು ಅಂಟುವುದೋ ತಿಳಿಯುವುದಿಲ್ಲ. ಅಥವಾ ಬೇಗನೆ ಎದ್ದು ನಿತ್ಯಕರ್ಮ ಮಾಡುವವನು ಸೂರ್ಯ ಮೇಲೆ ಬಂ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾನಾಟಕದ ಒಂದು ಸುಮ💐 *ताते धनुर्न मयि सत्यमवेक्षमाणे मुञ्चानि मातरि शरं स्वधनं हरन्त्याम् । दोषेषु बाह्यमनुजं भरतं हनानि किं रोषणाय रुचिरं त्रिषु पातकेषु ।।* _ರಾಮನ ಗಂಭೀರ ವಾಣಿ. ದಶರಥ ನೀಡಿದ ವರಗಳಿಂದ ರಾಮನ ಅಭಿಷೇಕ ತಪ್ಪಿದೆ.ಲಕ್ಷ್ನಣನಿಗೆ ತಡೆಯಲಾರದಷ್ಟು ಸಿಟ್ಟುಬಂದು ಕೈಕೇಯಿಯನ್ನು ತಂದೆಯನ್ನು ನಿಂದಿಸುತ್ತಾನೆ , ರಾಮನಿಗೂ ಏನು ಮಾಡದೇ ಸುಮ್ಮನಿರುವ ನಿನ್ನ ವರ್ತನೆಗೆ ಅರ್ಥವೇನು ಎಂದೆಲ್ಲಾ ಪ್ರಶ್ನಿಸುತ್ತಾನೆ. ಆಗ ರಾಮನ ಮಾತು - ನೀನು ಹೇಳಿದಂತೆ ಮಾಡಿದರೆ ನಾನು ಪಾಪಿಯಾದೇನು. ಅಪ್ಪನ ವಚನ ಸತ್ಯ ಮಾಡಿಕೊಡುವ ಮಗನಾದ ನಾನು ಅಪ್ಪನ ಮೇಲೆಯೇ ಧನುಸ್ಸನ್ನು ಪ್ರಯೋಗಮಾಡಲೇ? ನಾನು ಅವನಂದಂತೆ ನಡೆದರೆ ಅವನ ಮಾತು ಸತ್ಯವೆನಿಸುತ್ತದೆ.ಅಪ್ಪನ ಮಾತಿಗೆ ಗೌರವ ಕೊಡುವುದನ್ನು ಬಿಟ್ಟು ಅಪ್ಪನ ಮೇಲೆಯೇ ಕೈಮಾಡಲೇ? ತಾನು ಹಿಂದೆ ಕೊಟ್ಟ ಮಾತಿನಂತೆ ವರಗಳನ್ನು ನೀಡಿದ್ದಾನೆ ಅದರಲ್ಲಿ ಅವನ ತಪ್ಪೇನಿದೆ! ಇನ್ನು ಕೈಕೇಯಿ ವಿವಾಹ ಸಮಯದಲ್ಲಿ ಕೊಡಲ್ಪಟ್ಟ ರಾಜ್ಯ ಲಕ್ಷ್ಮಿಯನ್ನು ಈಗ ಪಡೆದುಕೊಂಡಿರುವಳು.ಅವಳ ಮೇಲೆ ಶರಪ್ರಯೋಗಿಸಲೇ? ಅವಳು ಅವಳದ್ದೇ ಧನವನ್ನು ಈಗ ಪಡೆದುಕೊಂಡಿದ್ದಾಳೆ. ಹಾಗಾಗಿ ಅವಳ ತಪ್ಪೊಂದೂ ಕಾಣುತ್ತಿಲ್ಲ. ಇನ್ನು ಈ ವಿಷಯಗಳ ಬಗ್ಗೆ ಗೊತ್ತೇ ಇರದ ಭರತನ ಮೇಲೆ ಅಸ್ತ್ರ ಬಿಡಲೇ? ಅವನಿಗೆ ಇಲ್ಲಿ ನಡೆಯುತ್ತಿರುವ ವಿಷಯಗಳೊಂದೂ ತಿಳಿದಿಲ್ಲ.ಅಷ್ಟೇ ಅಲ್ಲ ಯಾವೊಂದು ದೋಷಗಳೂ ಅವನ ಒಳಗಿಲ್ಲ.ಯ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಒಂದು ಶ್ಲೋಕ🌹 *स्वसुखनिरभिलाष: खिद्यसे लोकहेतो: प्रतिदिनमथवा ते वृत्तिरेवं विधैव । अनुभवति हि मूर्ध्ना पादपस्तीव्रमुष्णं शमयति परितापं छायया संश्रितानाम् ।।* _ವೈತಾಲಿಕರಾಡುವ ಮಾತು. ಹೊಗಳುಭಟರನ್ನು ಸಂಸ್ಕೃತದಲ್ಲಿ ವೈತಾಲಿಕ ಎನ್ನುತ್ತಾರೆ. ರಾಜನೇ, ನೀನು ನಿನ್ನ ಸುಖದ ಅಭಿಲಾಷೆಯನ್ನು ತ್ಯಜಿಸಿ ಪ್ರಜೆಗಳ ಸುಖಕ್ಕಾಗಿ ದಿನವೂ ಪರಿಶ್ರಮಪಡುವೆ. ಇದು ನಿನ್ನ ಪ್ರತಿದಿನದ ಕೆಲಸವೇ ಆಗಿದ್ದರೂ ಕಷ್ಟವೇ ಸರಿ.ಹೇಗೆಂದರೆ ವೃಕ್ಷವು ತನ್ನ ತಲೆಯಲ್ಲಿ ತೀವ್ರವಾದ ಬಿಸಿಲಿನ ತಾಪವನ್ನು ಅನುಭವಿಸಿದರೂ ತನ್ನನ್ನು ನೆರಳಿಗಾಗಿ ಆಶ್ರಯಿಸಿದವರಿಗೆ ಮಾತ್ರ ತಂಪನ್ನೇ ಕೊಡುವುದು. ಮರ ತಾನು ಎಷ್ಟು ಬಿಸಿಲಿನ ತಾಪದಿಂದ ಕಷ್ಟ ಅನುಭವಿಸಿದರೂ ಬಿಸಿಲಿನಿಂದ ಬಳಲಿ ತನ್ನನ್ನು ಯಾರು ಆಶ್ರಯಿಸುವರೊ ಅವರ ಸಂತಾಪವನ್ನು ಎಂದಿಗೂ ಪರಿಹರಿಸುತ್ತದೆ. ರಾಜನ ಕಾರ್ಯವೂ ಹೀಗೆಯೇ ಇರುತ್ತದೆ. ತಾನು ಎಷ್ಟೇ ಕಷ್ಟ ಅನುಭವಿಸಿದರೂ ತನ್ನನ್ನು ನಂಬಿದ ಪ್ರಜೆಗಳ ಬದುಕಲ್ಲಿ ಸುಖವನ್ನೇ ಕರುಣಿಸುತ್ತಾನೆ. ನಮ್ಮ ರಾಜನ ಆಡಳಿತ ಹೀಗೆಯೇ ಇದೆ ಎಂದು ಸ್ತುತಿಸುವ ಮಾತು. ಆಕ್ಷೇಪ ಮತ್ತು ದೃಷ್ಟಾಂತ ಅಲಂಕಾರ. ನಾವು ನಮ್ಮ ಬದುಕನ್ನು ಹೀಗೆಯೇ ನಡೆಸಬೇಕು. ನಾವು ಕಷ್ಟ ಪಟ್ಟರೂ ಇನ್ನೊಬ್ಬರಿಗೆ ಒಳಿತನ್ನೇ ಬಯಸಬೇಕು. ಧರ್ಮರಾಜನು ತಾನು ಎಷ್ಟು ಕಷ್ಟ ಅನುಭವಿಸಿದರೂ ಇನ್ನೊಬ್ಬರ ಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದ. ಹಾಗಾಗಿಯೇ ಅವನು ಉತ್ತಮನೆನಿ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📃ವೇದ- ಧರ್ಮ ಭಾಗ -೩ *ವೇದದ ದೇವತೆಗಳು* ಮುಂದುವರೆದ ಭಾಗ- ಸವಿತೃ. ಸೂರ್ಯನನ್ನು ಹೃದ್ರೋಗವನ್ನು ಪರಿಹರಿಸು ಎಂದೂ ಸ್ತುತಿಸಿದೆ ವೇದ. *ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ* ಮಂತ್ರದಲ್ಲಿ. *ದ್ವಿಷಂತಂ ಮಮ ರಂಧಯನ್ ಮೋ ಅಹಂ ದ್ವಿಷತೇ ರಧಮ್* ಎಂಬ ಮಂತ್ರವಂತೂ ಸುಂದರವಾಗಿದೆ. ನನ್ನ ಶತ್ರುಗಳನ್ನು ಅಥವಾ ನನ್ನ ದ್ವೇಷಿಗಳನ್ನು ನಿಗ್ರಹಿಸು, ನಾನು ಕೂಡ ದ್ವೇಷ ಬಿಟ್ಟು ಪ್ರೀತಿ ಬೆಳೆಸಿಕೊಳ್ಳುವಂತೆ ಬುದ್ಧಿ ನೀಡು ಎಂಬ ಪ್ರಾರ್ಥನೆ. ಸೂರ್ಯ ನಮಸ್ಕಾರವಂತೂ ಸರ್ವಾಂಗೀಣ ಆರೋಗ್ಯದ ಸಾಧನ. ಮಂತ್ರ ಅಥವಾ ಶ್ಲೋಕಗಳನ್ನು ಅಥವಾ ಹೆಸರುಗಳನ್ನು ಹೇಳಿ ಮಾಡಿದಾಗ ದೇವನ ಕೃಪೆಗೆ ಕಾರಣವಾಗುತ್ತದೆ. ೩.ವಿಷ್ಣು. ಸ್ವರ್ಗದಲ್ಲಿನ ದೇವತೆ. ಹೆಸರೇ ಹೇಳುವಂತೆ ಸರ್ವವ್ಯಾಪಕ.ಆದಿದೇವ ಇವನು. *ಪೂರ್ವೋ ಯೋ ದೇವೇಭ್ಯೋ ಜಾತ:* ಎಂಬ ಪುರುಷಸೂಕ್ತದ ಉತ್ತರ ಭಾಗ ಇದನ್ನೇ ಹೇಳುತ್ತದೆ. ಸುಮಾರು ೫ ಸೂಕ್ತಗಳು ಇವನನ್ನು ಸ್ತುತಿಸಿವೆ. *ವಿಚಕ್ರಮಾಣಸ್ತ್ರೇಧೋರುಗಾಯ:* *ಯಸ್ಯೋರುಷು ತ್ರಿಷು ವಿಕ್ರಮಣೇಷು* *ಉರುಕ್ರಮಸ್ಯ ಸ ಹಿ ಬಂಧುರಿತ್ಥಾ* *ಸಧಸ್ಥಮೇಕೋ ತ್ರಿಭಿರಿತ್ಪದೇಭಿ:* *ತ್ರೀಣಿ ಪದಾ ವಿಚಕ್ರಮೇ* ಇತ್ಯಾದಿ ಮಂತ್ರಗಳಲ್ಲಿ ವಾಮನಾವತಾರದ ವರ್ಣನೆಯೊಂದೇ ಪ್ರಮುಖವಾಗಿ ಕಂಡುಬರುವುದು ವಿಶೇಷ. ತನ್ನ ಮೂರು ಕಾಲುಗಳಿಂದ ಲೋಕವ್ಯಾಪಿಯಾದ ಆ ವಿಷ್ಣುವು ನಮ್ಮನ್ನು ಹರಸಲಿ ಎಂಬ ಮಾತು ಸುಮಾರು ಹದಿನೈದು ಮಂತ್ರಗಳಲ್ಲಿ ಕಂಡುಬರುವುದು. ಇವನ ವಾಸ ಜೇನಿನ ಸರ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾ ನಾಟಕದ ಒಂದು ವೀರರಸದ ಶ್ಲೋಕ💐 *यदि न सहसे राज्ञो मोहं धनु: स्पृशा मा दया स्वजननिभृत: सर्वोप्येवं मृदु: परिभूयते । अथ न रुचितं मुञ्च त्वं मामहं कृतनिश्चयो युवतिरहितं लोकं कर्तुं यतश्छलिता वयम् ।।* _ಕಂಚುಕಿಯು ರಾಜನು ಮೂರ್ಛೆ ಹೊಂದಿದನು ಕೈಕೇಯಿಯ ಕಾರಣದಿಂದ ಎಂದು ರಾಮನ ಬಳಿ ನುಡಿಯುತ್ತಾನೆ. ಆಗ ಸಮೀಪದಲ್ಲಿದ್ದ ಲಕ್ಷ್ಮಣನು ಕೋಪದಿಂದ ಈ ಮಾತನ್ನಾಡುವನು. ಶ್ರೀರಾಮ , ನೀನು ಒಂದು ವೇಳೆ ರಾಜನ ಈ ದುರವಸ್ಥೆಯನ್ನು ಸಹಿಸುವುದಿಲ್ಲ ಎಂದಾದರೆ ಈ ಕೂಡಲೇ ಧನುಸ್ಸನ್ನು ಸಜ್ಜುಗೊಳಿಸು.ದಯೆಯನ್ನು ದೂರ ಇಡು.ಯಾರು ರಾಜನ ಈ ಅವಸ್ಥೆಗೆ ಕಾರಣರೋ ಅವರ ಮೇಲೆ ಬಾಣ ಬಿಡಲು ಸಜ್ಜಾಗು. ನಮ್ಮವರೆನಿಸಿಕೊಂಡವರು ಅಪಕಾರ ಎಸಗಿದಾಗ , ಅವರ ಬಗ್ಗೆ ಕ್ರಮ ತೆಗೆದುಕೊಳ್ಳದೆ ಸ್ವಜನರೆಂದು ಕ್ಷಮಿಸುವ ಜನರನ್ನು ಅಥವಾ ಅವರ ವಿಷಯದಲ್ಲಿ ಕ್ರಮ ತೆಗೆದುಕೊಳ್ಳದ ಮೃದುಜನರನ್ನು ಪ್ರಜೆಗಳು ತಿರಸ್ಕರಿಸುವರು.ಅಂಥಹವರು ಜನರ ಅನಾದರಕ್ಕೆ ಪಾತ್ರರಾಗುತ್ತಾರೆ. ಅಣ್ಣ ಒಂದು ವೇಳೆ ನಿನಗೆ ಈ ಕಾರ್ಯ ಇಷ್ಟವಿಲ್ಲದಿರೆ ಪೇಳೆನಗೆ , ನೀನು ಚಿಂತಿಸದಿರು , ನನಗೆ ಸ್ವಾತಂತ್ರ್ಯ ನೀಡು. ಈ ಲೋಕವನ್ನು ಯುವತಿಯರಿಲ್ಲದಂತೆ ಮಾಡಲು ನಿಶ್ಚಯಿಸಿದ್ದೇನೆ. ಏಕೆಂದರೆ ಸ್ತ್ರೀಯ ಕಾರಣದಿಂದಲೇ ನಾವೂ ವಂಚನೆಗೊಳಗಾಗಿದ್ದೇವೆ. ಲಕ್ಮಣ ಭಾವೋದ್ವೇಗದಲ್ಲಾಡುವ ಮಾತು.ನಾಟಕದಲ್ಲಿ ಭಾವ ತೀವ್ರತೆ ಪ್ರೇಕ್ಷಕನ ಮನಕ್ಕೆ ಮುದ ನೀಡುತ್ತದೆ. ಇಲ್ಲೂ ರ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಸುಂದರ ಶ್ಲೋಕ🌹 *औत्सुक्यमात्रमवसाययति प्रतिष्ठा क्लिश्नाति लब्धपरिपालन वृत्तिरेनम् । नातिश्रमापनयनाय यथा श्रमाय राज्यं स्वहस्तधृतदणडमिवातपत्रम् ।।* _ದುಷ್ಯಂತನ ಮಾತು.ವಾಸ್ತವವೂ ಹೌದು. ಅಧಿಕಾರದ ಆಯಾಸ ಯಾವ ರೀತಿಯೆಂದರೆ - ಕಾರ್ಯಸಿದ್ಧಿಯು ಆ ಕಾರ್ಯದ ಉತ್ಸಾಹವನ್ನು ತಣಿಸುತ್ತದೆ. ಕಾರ್ಯದಿಂದ ಆದ ಲಾಭದ ರಕ್ಷಣೆಯು ಆಯಾಸವನ್ನೇ ಉಂಟುಮಾಡುತ್ತದೆ. ರಾಜ್ಯದ ಅಧಿಕಾರವು ನಮ್ಮ ಕೈಯಲ್ಲಿ ಹಿಡಿದ ಭಾರವಾದ ದಂಡವಿರುವ ಛತ್ರದಂತೆ ಶ್ರಮವನ್ನು ಪರಿಹರಿಸುವುದಕ್ಕಿಂತ ಹೆಚ್ಚು ಶ್ರಮಕ್ಕೇ ಕಾರಣವಾಗುತ್ತದೆ. ಬಿಸಿಲಿನಲ್ಲಿ ನೆರಳಿಗಾಗಿ ಛತ್ರಿ ಆಶ್ರಯಿಸಬೇಕು.ಆದರೆ ಆ ಛತ್ರಿಯ ದಂಡ ತುಂಬಾ ಭಾರವಿದ್ದರೆ ಬಿಸಿಲಿನಿಂದ ಆಗುವ ಆಯಾಸಕ್ಕಿಂತ ಹೆಚ್ಚು ಆಯಾಸ ಛತ್ರಿಯನ್ನು ಹಿಡಿಯುವುದರಿಂದ ಆಗುತ್ತದೆ.ಅದನ್ನು ನೋಡಿದಾಗ ಛತ್ರಿಯೇ ಬೇಡವೆಂದೆನಿಸುತ್ತದೆ. ರಾಜನ ಅಧಿಕಾರವೂ ಹಾಗೆಯೇ ಇದೆ. ಸ್ವಂತ ಕೈಯಲ್ಲಿ ಹಿಡಿದ ಕೊಡೆ ಬಿಸಿಲು ಅಥವಾ ಮಳೆಯ ಶ್ರಮವನ್ನು ಪರಿಹರಿಸಿದರೂ ಹಿಡಿದು ಕೊಳ್ಳುವ ಶ್ರಮ ಹೆಚ್ಚಾದರೆ ಕಷ್ಟ. ರಾಜ್ಯದಂಡವು ಪ್ರಜೆಗಳಿಗೆ ಶತ್ರುಗಳ ಭಯ ಹೋಗಲಾಡಿಸಿದರೂ. ಜನಪ್ರಿಯತೆ ತಂದುಕೊಟ್ಟರೂ ನಡೆಯಿಸಿಕೊಂಡುಹೋಗುವ ಶ್ರಮವನ್ನೇ ಉಂಟುಮಾಡುತ್ತದೆ. ನಮ್ಮ ಬದುಕೂ ಹೀಗೆಯೇ ಅಲ್ಲವೇ! ಏನಾದರೂ ಕಾರ್ಯ ಕೈಗೊಂಡು ಯಶಸ್ವಿಯಾದರೆ ಆ ಕಾರ್ಯದಲ್ಲಿನ ಉತ್ಸಾಹ ತಣಿಯುತ್ತದೆ. ಸಂಪತ್ತನ್ನು, ಕೀರ್ತಿಯನ್ನು, ಗೌರವವನ್ನು, ಪ್ರ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📃ವೇದ-ಧರ್ಮ ಭಾಗ-೨ _ವೇದದ ದೇವತೆಗಳು_ ನಮ್ಮ ಹಿರಿಯರು ಒಂದೊಂದು ಕ್ರಿಯೆಗೆ ಸಂಬಂಧಪಟ್ಟಂತೆ ಮೂಲಶಕ್ತಿಯನ್ನು ಅಥವಾ ಕಾರಣಶಕ್ತಿಯನ್ನು ದೇವತೆಗಳ ರೂಪದಲ್ಲಿ ಪ್ರತಿಪಾದಿಸಿದರು. ದೇವತೆಗಳ ರೂಪ ಸಾಕಾರವೂ ಹೌದು ನಿರಾಕಾರವೂ ಹೌದು. ನಮ್ಮ ಮನದಲ್ಲಿ ಧ್ಯಾನಕಾಲದಲ್ಲಿ ಜ್ಯೋತಿಯೊಂದು ಮೂಡಿದರೆ ಅದೇ ದೇವರ ರೂಪ. ಪ್ರಕೃತಿಯ ಪರಿಣಾಮಗಳಲ್ಲೂ ಅದನ್ನೇ ಕಾಣಬಹುದು.ಅದಕ್ಕೆ ನಮ್ಮ ರೂಪವನ್ನು ಕಲ್ಪಿಸಿಕೊಂಡಾಗ ಅಂದರೆ ಸ್ತ್ರೀ ಅಥವಾ ಪುರುಷನ ಆಕಾರ ಕಲ್ಪಿಸಿದಾಗ ಅದು ಮೂರ್ತಿ ಅಥವಾ ವಿಗ್ರಹರೂಪದಲ್ಲಿ ಗೋಚರಿಸುತ್ತದೆ. *ದಾನಾತ್, ದ್ಯೋತನಾತ್, ದೀಪನಾತ್ ವಾ ದೇವತಾ* ಎಂದು ಪದದ ನಿಷ್ಪತ್ತಿ. ನಮಗೆ ಬೆಳಕು ತೋರುವ ಅಥವಾ ನಮ್ಮ ಅಗತ್ಯಗಳನ್ನು ಕರುಣಿಸುವ ಶಕ್ತಿ, ಅಥವಾ ಸ್ವತ: ಬೆಳಗುವ ಶಕ್ತಿ ಹೀಗೆ ಅರ್ಥ ಹೇಳಬಹುದು. ಒಟ್ಟಾರೆ ಯಾವುದೇ ಅಪೇಕ್ಷೆ ಇಲ್ಲದೆ ಅನುಗ್ರಹಿಸುವ ಒಂದು ಅಲೌಕಿಕ ಶಕ್ತಿಯೇ ದೇವತೆ. ಹಾಗಾದರೆ ಹೋಮ ಪೂಜೆ ಅರ್ಚನೆ ಅಲಂಕಾರ ಅಭಿಷೇಕ ಅವೆಲ್ಲವೂ ಯಾಕೆ ಎಂದಾಗ ಅವೆಲ್ಲ ನಮ್ಮ ಮನಸ್ಸಂತೋಷಕ್ಕೆ ,ಭಗವಂತನಿಗೆ ಕೃತಜ್ಞತೆ ತಿಳಿಸುವ ಕ್ರಮಗಳಷ್ಟೇ ಅವುಗಳು. ದೇವ ಶಬ್ದಕ್ಕೆ ಸ್ವಾರ್ಥದಲ್ಲಿ *ತತ್* ಪ್ರತ್ಯಯ ಬಂದಿದೆ. ಆರಾಧಿಸಲ್ಪಡುವ ಮೂರ್ತಿ ಎಂದು ಅರ್ಥ. *ದೀವ್ಯತಿ* ಮಂತ್ರೇಣ ದ್ಯೋತ್ಯತೇ ಮಂತ್ರದಿಂದ ಕಾಣಿಸಲ್ಪಡುವುದು ಅಥವಾ ಸ್ತುತಿಸಲ್ಪಡುವುದು. *ದೇವನಾದ್ವೈ ದೇವತಾತ್ವಂ* ಸಾನ್ನಿಧ್ಯ ಹೊಂದುವುದರಿಂದ ದೇವತೆಯೆಂದೂ ಕರೆಸಲ್ಪಡುತ್ತದೆ. ಮಂತ್ರದ ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾನಾಟಕದ ಒಂದು ಸುರಭಿ💐 *शुल्के विपणितं राज्यं पुत्रार्थे यदि याच्यते । तस्यालोभोsत्र नास्माकं भ्रातृराज्यापहारिणाम् ।।* _ಕಂಚುಕಿಯು ಕೈಕೇಯಿಯು ನಿನಗೆ ಅನ್ಯಾಯ ಮಾಡಿದ್ದಾಳೆ ಎಂದು ನುಡಿದಾಗ ರಾಮನಾಡುವ ಮಾತು. ಅವಳು ಕೇಳಿದ್ದು ಸರಿಯಾಗಿಯೇ ಇದೆ.ಅಮ್ಮನ ತಪ್ಪೊಂದೂ ನನಗೆ ಕಾಣುತ್ತಿಲ್ಲ. ಏಕೆಂದರೆ ದಶರಥನು ವಿವಾಹದ ಸಮಯದಲ್ಲಿ ವಿಶೇಷವಾಗಿ ದಕ್ಷಿಣೆಯ ರೂಪದಲ್ಲಿ ಮಾತುಗಳಲ್ಲಿ ಕೊಡಲ್ಪಟ್ಟ ರಾಜ್ಯವನ್ನು ಮಗನಿಗಾಗಿ ಕೇಳಿದರೆ ಅದು ಅವಳ ಕರ್ತವ್ಯ. ಅದು ನನಗೆ ವಂಚನೆ ಮಾಡಲೆಂಬ ಕಾರಣದಿಂದಲ್ಲ.ಮದುವೆಯ ಸಮಯದಲ್ಲಿಯೇ ಮುಂದೆ ಇವಳ ಮಗನು ರಾಜ್ಯವನ್ನಾಳುವನು ಎಂದು ಒಪ್ಪಿಯೇ ನನ್ನ ತಂದೆ ಅಮ್ಮನ ಕೈ ಹಿಡಿದದ್ದಲ್ಲವೇ! ಈ ವಿಷಯದಲ್ಲಿ ಅವಳ ಲೋಭ ಎಂದು ಹೇಳಲಾಗದು.ಅದಕ್ಕೆ ಹೊರತಾಗಿ ಸಹೋದರನ ರಾಜ್ಯವನ್ನು ನಾನು ಅಪೇಕ್ಷಿಸಿದರೆ ಅದು ಲೋಭವಾಗುತ್ತದೆ ಅಥವಾ ಸಹೋದರನಿಗೆ ನ್ಯಾಯವಾಗಿ ದೊರೆಯಬೇಕಿದ್ದ ರಾಜ್ಯದ ಅಧಿಕಾರ ನನ್ನಿಂದ ಅಪಹರಿಸಲ್ಪಂಟ್ಟಂತೆ ಆಗುವುದು. ಹಾಗಾಗಿ ಅಭಿಷೇಕದಲ್ಲಿ ನನ್ನ ಬಯಕೆಯೇ ತಪ್ಪು. ಕೈಕೇಯಿಯ ವರಯಾಚನೆಯಲ್ಲಿ ಅಲ್ಲ.ಇನ್ನೂ ಮುಂದುವರೆಯುತ್ತಾ ಅಮ್ಮನ ನಿಂದನೆಯ ಮಾತೊಂದೂ ಆಡಬೇಡ ಎಂದು ಗದರಿಸುತ್ತಾನೆ ರಾಮ.ಇಲ್ಲಿ ರಾಮನ ಹೃದಯ ವೈಶಾಲ್ಯವನ್ನು ನಾವು ಗುರುತಿಸಬಹುದು. ತಮ್ಮನಿಗೆ ರಾಜ್ಯ ದೊರಕುವುದರಲ್ಲಿ ಅವನಿಗೆ ಸಂತೋಷವೇ ಇದೆ.ಹಾಗೆಯೇ ಕೈಕೇಯಿಯ ಬಗೆಗೆ ಅಸಮಾಧಾನ ಎಳ್ಳಷ್ಟೂ ಕಂಡುಬರುವುದಿಲ್ಲ.ಇದೇ ಧರ್ಮ.ಪ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಶಾಕುಂತಲದ ಸುಂದರ ಸುಮ🌹 *प्रजा: प्रजा: स्वा इव तन्त्रयित्वा निषेवतेsशान्तमना विविक्तम् । यूथानि सञ्चार्य रविप्रतप्त: शीतं दिवा स्थानमिव द्विपेन्द्र: ।।* _ಕಂಚುಕಿಯು ರಾಜನ ಜವಾಬ್ದಾರಿಯ ಬಗ್ಗೆ ನುಡಿಯುವ ಮತ್ತೊಂದು ಅಣಿಮುತ್ತು.ಉಪಮಾಲಂಕಾರ ಪ್ರಯೋಗದಲ್ಲಿ ಕಾಳಿದಾಸನಿಗೆ ಇರುವ ಕೌಶಲ್ಯ ಇಲ್ಲಿ ಕಾಣಬಹುದು. ಈ ನಮ್ಮ ರಾಜನು ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಪಾಡಿ ತಾನು ದಣಿದಿದ್ದಾನೆ.ಇದು ಹೇಗಿದೆಯೆಂದರೆ ತನ್ನ ಹಿಂಡನ್ನು ಜತನದಿಂದ ಓಡಾಡಿಸಿ ಅವರಿಗೆಲ್ಲ ಆಹಾರಾದಿ ಒದಗಿಸಿ ಬಿಸಿಲಿನಿಂದ ಬಳಲಿದ ಮದ್ದಾನೆಯು ಮಧ್ಯಾಹ್ನದ ವೇಳೆಯಲ್ಲಿ ತಂಪಾದ ಸ್ಥಾನವನ್ನು ಆಶ್ರಯಿಸುವಂತೆ ಈ ನಮ್ಮ ರಾಜನು ಏಕಾಂತದಲ್ಲಿ ವಿರಮಿಸಿದ್ದಾನೆ. ತನ್ನ ಮಕ್ಕಳೊಡನೆ ಹೇಗೆ ಸಮಾಧಾನದಿಂದ ವ್ಯವಹರಿಸಿ ಅವರ ಬೇಕು ಬೇಡಗಳನ್ನು ವಿಚಾರಿಸುತ್ತಾಯೋ ಹಾಗೆಯೇ ಪ್ರಜೆಗಳ ವಿಷಯದಲ್ಲಿ ರಾಜನ ನಡತೆ ಇರಬೇಕು. *ಪ್ರಜಾರಂಜಕಾತ್ ರಾಜ:* ಎಂಬಂತೆ ಪ್ರಜೆಗಳಿಗೆ ಆನಂದ ಉಂಟುಮಾಡುವುದು ಉತ್ತಮ ಆಡಳಿತದ ಮೂಲಕ ಅದು ರಾಜನ ಕರ್ತವ್ಯ. ಸಲಗವೊಂದು ಹೇಗೆ ತನ್ನ ಗುಂಪನ್ನು ಜಾಗೃತೆಯಿಂದ ಸುತ್ತಿಸಿ ಹಿಂತಿರುಗಿ ತಾನೂ ಬಳಲಿ ವಿರಮಿಸುವುದೋ ಹಾಗೆಯೇ ರಾಜನ ಪ್ರಕೃತ ಸ್ಥಿತಿ.ಸಲಗದಂತೆ ಪರಾಕ್ರಮ ಜವಾಬ್ದಾರಿ ತನ್ನ ನಂಬಿದ ಜನರ ಬಗ್ಗೆ , ಕಾಳಜಿ ಇವೆಲ್ಲಾ ರಾಜನ ಮುಖ್ಯ ಲಕ್ಷಣಗಳು. ನಾವೂ ನಮ್ಮ ರಾಜರ ಆಯ್ಕೆಯಲ್ಲಿ ಜಾಗರೂಕರಾಗೋಣ. ಭಾಗ್ಯವು ಹೇಗೆ ಹೇಗೊ ದೊ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
💐ಪ್ರತಿಮಾ ನಾಟಕದ ಒಂದು ಕುಸುಮ💐 *वनगमननिवृत्ति: पार्थिवस्यैव तावन्मम पितृपरवत्ता बालभाव: स एव । नवनृपतिविमर्शे नास्ति शङ्का प्रजानां अथ च न परिभोगैर्वञ्चिता भ्रातरो मे ।।* _ರಾಮನ ಮಾತು.ಕೈಕೇಯಿಯಿಂದಾಗಿ ನಿನ್ನ ಪಟ್ಟಾಭಿಷೇಕ ನಿಂತು ಹೋಯಿತು , ಇದು ಅನರ್ಥವಲ್ಲದೆ ಮತ್ತೇನು ಎಂದು ಕಂಚುಕಿಯು ನುಡಿದಾಗ ರಾಮನಾಡುವ ಸುಂದರ ಮಾತು. ಕೈಕೇಯಿಯ ಈ ನಿರ್ಧಾರ ನನಗಂತೂ ಅನುಕೂಲಕರವೇ ಆಗಿದೆ,ಇದರಲ್ಲಿ ಯಾವ ದೋಷವೂ ಕಂಡುಬರುತ್ತಿಲ್ಲ.ಹೇಗೆಂದರೆ ನಾನು ರಾಜನಾದರೆ ದಶರಥನು ಇಕ್ಷ್ವಾಕು ವಂಶದ ಪರಂಪರೆಯಂತೆ ಆಡಳಿತದ ಎಲ್ಲಾ ಜವಾಬ್ದಾರಿಗಳನ್ನು ನನಗೆ ವಹಿಸಿ ತಾನು ಕಾಡಿಗೆ ತೆರಳಬೇಕಿತ್ತು.ಆದರೆ ನನ್ನ ಅಭಿಷೇಕ ನಿಂತ ಕಾರಣ ದಶರಥನ ವನಗಮನವು ನಿವೃತ್ತವಾಯಿತು. ಎರಡನೆಯದಾಗಿ ನಾನಿನ್ನೂ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳದೆ ಅಪ್ಪನ ಪಾಲಿಗೆ ಮಗುವಾಗಿಯೇ ಉಳಿಯುವಂತಾಯಿತು.ರಾಜನಾಗಿದ್ದರೆ ಆ ಸಲುಗೆ , ಪ್ರೀತಿ, ಮುದ್ದಾಟ ಸಾಧ್ಯವಾಗುತ್ತಿರಲಿಲ್ಲ. ಮೂರನೆಯದಾಗಿ ಪ್ರಜೆಗಳು ಹೊಸ ರಾಜನ ಆಡಳಿತ ಹೇಗೆ ಇರುತ್ತದೆಯೋ ಏನೋ, ನಮ್ಮ ಪಾಲಿಗೆ ಪ್ರತಿಕೂಲವೋ ಅನುಕೂಲವೋ ಇತ್ಯಾದಿ ಚಿಂತಿಸುವುದೂ ನಿಂತಿತು.ಅವರಿಗೆ ಮೊದಲಿನಂತೆ ಉತ್ತಮ ಆಡಳಿತ ದಶರಥನ ನೇತೃತ್ವದಲ್ಲಿ ದೊರಕಿತು.ನಾಲ್ಕನೆಯದಾಗಿ ನಾವೆಲ್ಲ ಅಣ್ಣತಮ್ಮಂದಿರು ರಾಜಕುಮಾರರಾಗಿಯೇ ಉಳಿದು ಭೋಗಗಳಿಂದ ವಂಚಿತರಾಗಿಲ್ಲ.ನಾನು ರಾಜನಾಗಿದ್ದರೆ ನನ್ನ ತಮ್ಮಂದಿರು ಕೆಲವು ಜವಾಬ್ದಾರಿ ಹೊಂದ...