ಧರ್ಮಾಚರಣೆ ೧೧೫

ಧರ್ಮಾಚರಣೆ-೧೧೫

ಅತಿಥಿಂ ಶ್ರೋತ್ರಿಯಂ ತೃಪ್ತಮಾಸೀಮಾಂತಮನುವ್ರಜೇತ್ | ಅಹಃಶೇಷಂ ಸಮಾಸೀತ ಶಿಷ್ಟೈರಿಷ್ಟೈಶ್ಚ ಬಂಧುಭಿಃ || 

ಮನೆಗೆ ಇಂದು ಬರುವನೆಂದು ಹೇಳದೇ ಆಕಸ್ಮಿಕವಾಗಿ ಬರುವವರು ಅತಿಥಿ. ಅಂತಹ ಅತಿಥಿಯನ್ನು ಭೋಜನಾದಿಗಳಿಂದ ತೃಪ್ತಿಪಡಿಸಿ ಸೀಮೆಯ ಕೊನೆ ತನಕ ಬಿಟ್ಟುಬರಬೇಕು. ಮನೆಗೆ ಬಂದ ಅತಿಥಿಯ ಯೋಗ್ಯತೆಗನುಸಾರ ಮನೆಯ ಗಡಿ, ಗ್ರಾಮದ ಗಡಿ, ಊರಿನ ಗಡಿಯವರೆಗೆ ಬಿಟ್ಟು ಬರುವುದು ಕೇವಲ ಸಂಪ್ರದಾಯವಾಗಿರದೇ ಧರ್ಮಶಾಸ್ತ್ರಕ್ಕನುಸಾರವಾದ ಕರ್ಮವಾಗಿದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ಸ್ವಲ್ಪ ದೂರದ ತನಕ ಹೋಗಿ ಕಳುಹಿಸಿಕೊಡುವುದಿದೆ. ಜೈನರಲ್ಲಿ ಯತಿಗಳನ್ನು ಊರಿನ ಹೊರಭಾಗದ ತನಕ ಬಿಟ್ಟು ಬರುವುದಿದೆ. ಮನೆಗೆ ಬಂದ ಅತಿಥಿಯು ಸಾಕ್ಷಾತ್ ದೇವರೆಂದೇ ಭಾವಿಸಿ ಬೀಳ್ಕೊಡುವುದು ಅತ್ಯಂತ ಯೋಗ್ಯ ಪದ್ಧತಿ. ಅನಂತರ ಸಜ್ಜನರು-ಮಿತ್ರರು-ಬಂಧುಗಳೊಡನೆ ಭಗವಚ್ಚಿಂತನೆಯಲ್ಲಿ ಕಳೆಯಬೇಕು. ಅತಿಥಿ ಹೋದ ತಕ್ಷಣ ನಿದ್ರಿಸುವುದೋ, ನಿಂದಿಸುವುದೋ, ನಿಷಿದ್ಧ ಕಾರ್ಯ ಎಸಗುವುದೋ ಎಂದಿಗೂ ಸಲ್ಲದು. 

 ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩