ಧರ್ಮಾಚರಣೆ ೯೬
ಧರ್ಮಾಚರಣೆ-೯೬
ಮೇದಸಾ ತರ್ಪಯದ್ದೇವಾನಥರ್ವಾಂಗಿರಸಃ ಪಠನ್ | ಪಿತೃಂಶ್ಚ ಮಧುಸರ್ಪಿಭ್ಯಾಮನ್ವಹಂ ಶಕ್ತಿತೋ ದ್ವಿಜಃ || ಯಾಜ್ಞವಲ್ಕ್ಯ ಸ್ಮೃತಿ||
ಅಂಗಿರಸಮಹರ್ಷಿ ಕಂಡುಕೊಂಡ ಅಥರ್ವವೇದದ ಮಂತ್ರಗಳನ್ನು ಯಾರು ಪಠಿಸುವನೋ ಅವನು ಪಶುಗಳ ಮೇದಸ್ಸನ್ನು ದೇವತೆಗಳಿಗೆ ಅರ್ಪಿಸಿದ ಪುಣ್ಯವನ್ನೂ, ಪಿತೃಗಳಿಗೆ ಜೇನು ಮತ್ತು ತುಪ್ಪಗಳನ್ನು ಅರ್ಪಿಸಿದ ಪುಣ್ಯಕ್ಕೆ ಪಾತ್ರನಾಗುತ್ತಾನೆ. ನಮ್ಮ ಶ್ರುತಿ-ಸ್ಮೃತಿಗಳು ಹಿಂಸೆಯನ್ನು ಎಂದಿಗೂ ಪ್ರಚೋದಿಸಿಲ್ಲ. ಬರಿದೆ ವೇದದ ದಿನಂಪ್ರತಿ ಪಾರಾಯಣವು ಪಶುಬಲಿ ನೀಡಿದ ಪುಣ್ಯವನ್ನು ತಂದುಕೊಡುವ ಕಾರಣ ಪಶುವನ್ನು ಕೊಲ್ಲುವ ಪಶುಯಾಗ ಮಾಡುವ ಅವಶ್ಯಕತೆ ಇಲ್ಲವೆಂದು ಸ್ಪಷ್ಟವಾಗಿ ಸಾರಿದೆ. ಅಹಿಂಸೆಯನ್ನು ಸನಾತನ ಗ್ರಂಥಗಳು ಪ್ರತಿಪಾದಿಸಿದಷ್ಟು ಬಹುಶಃ ಬುದ್ಧನೂ ಪ್ರತಿಪಾದಿಸಿಲ್ಲ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ