ಪೋಸ್ಟ್‌ಗಳು

ಅಕ್ಟೋಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
💐ಪ್ರತಿಮಾನಾಟಕದ ಒಂದು ಸುಮ💐 *मा स्वयं मन्युमुत्पाद्य परिहासे विशेषत: । शरीरार्धेन मे पूर्वमाबद्धा हि यदा त्वया ।।* _ರಾಮನಾಡುವ ಮಾತಿದು.ಸೀತೆ ತಮಾಷೆಗೆಂದು ನಾರುಬಟ್ಟೆ ಉಟ್ಟಾಗ ರಾಮ ಇದೇನು ಸನ್ಯಾಸಿನಿಯ ಭಾವವೋ ಅಥವಾ ಸುಮ್ಮನೆ ಉಟ್ಟುಕೊಂಡಿಯೋ ಎಂದು ಕೇಳುವನು.ಅನಂತರ ಸೀತೆ ಈಗೇನು ನಾನು ಸುಂದರವಾಗಿ ಕಾಣುವೆನೇ ಇಲ್ಲವೇ ಎಂದು ಪ್ರಶ್ನಿಸುವಳು.  ಆಗ ರಾಮನು ಇಕ್ಷ್ವಾಕುಗಳ ಮುದಿತನದ ಅಲಂಕಾರ ಕಾಣುವುದು ಎನ್ನುತ್ತಾನೆ. ಆಗ   ಸೀತೆ ಬೇಡ ಅಭಿಷೇಕದ ಸಮಯದಲ್ಲಿ ಅಮಂಗಳ ನುಡಿಯಬೇಡ ಎಂದು ವಿನಂತಿಸುತ್ತಾಳೆ. ಆಗ ರಾಮನಾಡುವ ಮಾತು. 'ಸೀತೆ, ನಾನು ತಮಾಷೆ ಮಾಡಿದಾಗ ನೀನೇ ಸ್ವತ: ಸಿಟ್ಟು ಮಾಡಿಕೊಂಡು ಅಮಂಗಳವನ್ನು ಸಂದೇಹಿಸುತ್ತಿದ್ದಿ. ಆದರೆ ನನ್ನ ಅರ್ಧಾಂಗಿಯಾದ ನೀನು ನಾರುಬಟ್ಟೆ ಉಟ್ಟಾಗ ನಾನೂ ಉಟ್ಟಂತೆ ಅಲ್ಲವೇ! ಎಷ್ಟೊಂದು ಪ್ರೀತಿ ತುಂಬಿದ ಮಾತು.ನಾನು ಉಟ್ಟರೇನು ನೀನು ಉಟ್ಟರೇನು ದೇಹವೆರಡು ಮನವು ಒಂದು ಎಂದು ವಿವಾಹ ಮಾಡಿಕೊಂಡಿರುವಾಗ ನೀನು ಅಮಂಗಳ ಸೂಚಕ ನಾರುಬಟ್ಟೆ ಉಟ್ಟಿದ್ದು ನನಗೂ ಉಡಿಸಿದಂತೇ ಆಯಿತಲ್ಲವೇ! ಹಾಗಾಗಿಯೇ ನನ್ನ ತಮಾಷೆಗೆ ಸಿಟ್ಟು ಮಾಡಿಕೊಳ್ಳದಿರು. ತಮಾಷೆಯ ಸಂದರ್ಭದಲ್ಲಿ ನಕ್ಕು ಹಗುರಾಗಿಸು ನಿನ್ನ ಮನದ ತುಮುಲವನ್ನು. ನಾನೂ ಧರಿಸಿದಂತೆ ಆಗುವುದೆಂದು ನೀನು ಯಾಕೆ ಯೋಚಿಸಲಿಲ್ಲ. ಚಿಂತೆ ಮಾಡದಿರು. 'ಅರ್ಧೋ ವಾ ಏಷ ಆತ್ಮನೊ ಯತ್ ಪತ್ನೀ ' ಎಂಬ ವೇದದ ಮಾತಿನಂತೆ ಪತಿ ಪತ್ನಿಯರು ಅರ್ಧ ...
🌹ಶಾಕುಂತಲದ ಸುಂದರ ಕುಸುಮ🌹 *अभिनवमधुलोलुपो भवान् तथा परिचुम्ब्य चूतमञ्जरीम् । कमलवसतिमात्रनिर्वृत्तो विस्मृतोस्येनां कथम् ।।* _ಶಕುಂತಲೆ ನಿರ್ಗಮಿಸಿದ್ದಾಳೆ ರಾಜನ ಹೃದಯದ ಅರಮನೆಯಿಂದ. ರಾಜನು ಸುಮ್ಮನೆ ಕುಳಿತು ಏನನ್ನೋ ಚಿಂತಿಸುತ್ತಿದ್ದಾನೆ. ಸಂಗೀತ ಶಾಲೆಯಿಂದ ಒಂದು ರಾಗ ಕೇಳುತ್ತಿದೆ‌.ಆ ಕಡೆಗೆ ಗಮನ ಕೊಟ್ಟು ಮಧುರವಾದ ಅವಳ ಧ್ವನಿಯನ್ನು ಆಲಿಸುತ್ತಿದ್ದಾನೆ.ಆ ಶ್ಲೋಕ ಹೀಗಿದೆ. ದುಂಬಿಯೇ, ಹೊಸ ಜೇನಿನ ಆಸೆಯಿಂದ ಮಾವಿನ ಹೂವಿನ ಗೊಂಚಲನ್ನು ಅಷ್ಟೊಂದು ಚುಂಬಿಸಿ, ಈಗ ನೋಡಿದರೆ ಕಮಲದ ರಸದಲ್ಲಿ ಮುಳುಗಿದವನಾಗಿ ಅವಳನ್ನು ( ಮಾವಿನ ಹೂವನ್ನು ) ಹೇಗೆ ಮರೆತೆ? ದುಂಬಿಯ ಸ್ವಭಾವ ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುವುದು.ರಾಜನೂ ಅದೇ ಮಾಡುತ್ತಿದ್ದಾನೆಂಬ ಧ್ವನಿ ಅವಳ ಮಾತಿನಲ್ಲಿ ಇದೆ. ಶಕುಂತಲೆಯ ಮೇಲೆ ಹಿಂದೆ ಸಾಕಷ್ಟು ಪ್ರೀತಿ ತೋರಿ ಅವಳಲ್ಲೇ ಅನುರಕ್ತನಾಗಿ ಈಗ ನೋಡಿದರೆ ಅರಮನೆಗೆ ಬಂದು ರಾಣಿಯ ಮುಖವನ್ನು ನೋಡುತ್ತಾ ಅವಳನ್ನು ಮರೆತಿರುವೆಯಲ್ಲಾ! ದುಂಬಿಯಂತೆ ನೀನು ಕೃತಘ್ನತೆಯನ್ನು ತೋರಬಹುದೇ? ಮಾಡುತ್ತಿರುವುದು ಸರಿಯೇ ಎಂಬ ಭಾವ‌. ಹೇತು ಎಂಬ ಅಲಂಕಾರ ಇಲ್ಲಿ ಕಾಣುತ್ತದೆ.ಕಮಲದ ಹೂವಿನ ಮೇಲಿನ ಪ್ರೀತಿಯ ಕಾರಣ ಅವಳ ನೆನಪು ಮಾಸಿದೆ. ಶಕುಂತಲೆಯನ್ನು ಅಷ್ಟೆಲ್ಲ ಪ್ರೇಮಿಸಿ ಅವಳನ್ನು ಕೂಡಿ ಈಗ ತ್ಯಾಗ ಮಾಡುವುದು ಸರಿಯಲ್ಲ ಎಂಬ ಧ್ವನಿಯೂ ಸೇರಿದೆ.ರಾಜನ ಚಂಚಲತೆಯನ್ನೂ ಮರೆವಿನ ಸ್ವಭಾವವನ್ನೂ ಲೋಲುಪತೆಯನ್ನೂ ಇದು...
💐ಪ್ರತಿಮಾನಾಟಕದ ಒಂದು ಸುಮ💐 *कर्णौ त्वरापहृतभूषणभुग्नपाशौ संस्रंसिताभरणगौरतलौ च हस्तौ । एतानि चाभरणभारनतानि गात्रे स्थानानि नैव समतामुपयान्ति तावत् ।।* _ಸೀತೆ ನಾರುಬಟ್ಟೆ ಧರಿಸಿದರೆ ಹೇಗೆ ಕಾಣುವೆನೆಂದು ತರ್ಕಿಸಿ ಅದನ್ನು ಧರಿಸಲು ತೊಟ್ಟ ಆಭರಣಗಳನ್ನು ಕಳಚಿ ಸಖಿಯ ಕೈಯಲ್ಲಿ ನೀಡುತ್ತಾಳೆ.ಆ ಸಮಯದಲ್ಲಿ ಬಂದ ಶ್ರೀರಾಮನು ಅವಳ ಅಲಂಕಾರ ರಹಿತ ಸೌಂದರ್ಯವನ್ನು ಪ್ರಶಂಸಿಸಿ ಸನ್ಯಾಸಿನಿಯಂತೆ ಇರುವುದಕ್ಕೆ ಆಕ್ಷೇಪಿಸುತ್ತಾನೆ.ಹಾಗೆಯೇ ಮುಂದುವರೆಯುತ್ತಾ ಈಗ ತಾನೇ ಈ ಆಭರಣಗಳು ತೆಗಯಲ್ಪಂಟಂತಿವೆ ಎಂದು ಈ ಮಾತನ್ನು ನುಡಿಯುವನು. ಕಿವಿಗಳು ಸದ್ಯದಲ್ಲೇ ಕಳಚಿದ ಓಲೆಗಳನ್ನು ಸೂಚಿಸುತ್ತಿವೆ.ಅವುಗಳ ರಂಧ್ರ ಬೇಗನೇ ತೆಗೆದಿದ್ದರಿಂದ ಸ್ವಲ್ಪ ತಿರುಗಿದೆ.ಎರಡೂ ಕಿವಿಗಳ ರಂಧ್ರಗಳೂ ವಕ್ರವಾಗಿರುವುದು ಈಗ ಸ್ವಲ್ಪ ಮುಂಚೆ ಆಭರಣ ತೆಗೆದ ಸಂಕೇತ. ಕೈಗಳಲ್ಲಿ ಬಳೆಗಳ ಇರುವಿಕೆಯಿಂದ ಉಂಟಾದ ಬಿಳಿಬಣ್ಣ ಇನ್ನೂ ಮಾಸಿಲ್ಲ. ನಿರಂತರ ಧರಿಸುವಿಕೆ ಅಲ್ಲಿ ಚರ್ಮದ ವರ್ಣವನ್ನು ಬದಲಾಯಿಸುತ್ತದೆ.ನಿನ್ನ ಕೈಗಳಿನ್ನೂ ಬಿಳಿಯಾಗಿಯೇ ಇವೆ. ಆಭರಣಗಳಿಂದ ಬಾಗಿದ ದೇಹದ ಭಾಗಗಳ ಗುರುತು ಇನ್ನೂ ಹಾಗೆಯೇ ಇದೆ. ಇನ್ನೂ ಅವುಗಳು ಸಹಜ ಸ್ಥಿತಿಯನ್ನು ಪಡೆದಿಲ್ಲ. ಹೀಗಾಗಿ ನೀನು ಕೆಲ ನಿಮಿಷಗಳ ಮುಂಚೆ ಅಲಂಕಾರಮುಕ್ತಳಾಗಿದ್ದಿ ಎಂಬುದು ನಿನ್ನ ದೇಹದ ಅವಸ್ಥೆಯಿಂದಲೇ ತಿಳಿಯುವುದು.ಕವಿಯ ಚಾತುರ್ಯ ಗಮನಿಸಿ.ವರ್ಣನೆಯಲ್ಲಿಯೂ ಒಂದು ನಿಯಮವಿದೆ. ಕಂಠದಲ್ಲಿ ಸ...
🌹ಶಾಕುಂತಲದ ಒಂದು ಸುಮ🌹 *अर्थो हि कन्या परकीय एव तामद्य सम्प्रेष्य परिग्रहीतु: । जातो ममायं विशद: प्रकामं प्रत्यर्पितन्यास इवान्तरात्मा ।।* _ಶಕುಂತಲೆ ಮರಗಳ ಸಾಲಿನಲ್ಲಿ ಮರೆಯಾಗಿದ್ದಾಳೆ.ಕಣ್ವರು ಒಂದೆಡೆ ದು:ಖಪಡುತ್ತಿದ್ದಾರೆ.ಮತ್ತೊಂದೆಡೆ ಸಂತೋಷವೂ ಆಗಿದೆ.ಅವರದೇ ಮಾತಿನಿಂದ ಅದು ಅಭಿವ್ಯಕ್ತವಾಗಿದೆ. ಕನ್ಯೆ ಎಂದಿಗಾದರೂ ಪರರ ಸ್ವತ್ತೇ. ಹಡೆದ ಮಗಳೆಂದು ಮನೆಯಲ್ಲೇ ಇಟ್ಟುಕೊಳ್ಳಲು ಸಾಧ್ಯವಿಲ್ಲ.ಯಾವತ್ತಿದ್ದರೂ ಯೋಗ್ಯನ ಜೊತೆ ವಿವಾಹ ಮಾಡಿಕೊಡಬೇಕು. ಅವಳನ್ನು ಇಂದು ಪತಿಯ ಮನೆಗೆ  ಕಳುಹಿಸಿ ನನ್ನ ಮನಸ್ಸು ಬೇರೆಯವರು ನನ್ನಲ್ಲಿ ಇಟ್ಟ 'ನ್ಯಾಸ' ವನ್ನು ಅವರಿಗೆ ಹಿಂತಿರುಗಿ ಕೊಟ್ಟಷ್ಟು ಹಗುರಾಗಿದೆ.ನಿಕ್ಷೇಪವಾಗಿ ಇಟ್ಟ ನಿಧಿಯನ್ನು ಅದರ ಒಡೆಯನಿಗೆ ಹಿಂದಿರುಗಿಸಿದಾಗ ಆಗುವ ಋಣಮುಕ್ತತೆಯ ಭಾವಕ್ಕೂ ಮಗಳನ್ನು  ಪತಿಯ ಮನೆಗೆ ಕಳುಹಿಸಿದ ಮೇಲೆ ಜವಾಬ್ದಾರಿ ಪೂರೈಸಿದ ತಂದೆಯ ಮನಸ್ಸಿನಲ್ಲಿ ಉಂಟಾಗುವ ಕೃತಕೃತ್ಯಭಾವಕ್ಕೂ ಸಾಮ್ಯವನ್ನು ಮನೋಹರವಾಗಿ ಕಲ್ಪಿಸಲಾಗಿದೆ. ಹೀಗೆ ಕಣ್ವರ ಮನಸ್ಸು ಹಗುರವಾಗಿ ಆನಂದ ಅನುಭವಿಸುತ್ತಿದ್ದಾರೆ. ಜವಾಬ್ದಾರಿ ಪೂರೈಸಿದ ತೃಪ್ತಿಯೂ ಇದೆ. ಅದರೂ ಮಗಳ ಅಗಲುವಿಕೆ ಕೆಲವೊಮ್ಮೆ ಮನಕ್ಕೆ ಕಳವಳ ತಂದುಕೊಡುತ್ತದೆ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
*ವೇದಧರ್ಮ ಭಾಗ-೧* _ವೇದ ಎನ್ನುವುದು ಭಾರತೀಯ ಸಂಸ್ಕೃತಿಯ ಅಥವಾ ಪರಂಪರೆಯ ಬಹುಮುಖ್ಯ ಅಂಗ. *ಇಷ್ಟಪ್ರಾಪ್ತಿ ಅನಿಷ್ಟಪರಿಹಾರಯೋ: ಅಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದ:*  ಎಂದರು ಸಾಯಣಾಚಾರ್ಯರು. ಯಾವ ಜ್ಞಾನವು ಬೇಕಾದ್ದನ್ನು ತರುವಲ್ಲಿ ಬೇಡವಾದ್ದನ್ನು ನಿರಾಕರಿಸುವಲ್ಲಿ ಸಹಕಾರಿಯೋ ಅವುಗಳೇ ವೇದಗಳು. *ಧರ್ಮೋ ವಿಶ್ವಸ್ಯ ಜಗತ: ಪ್ರತಿಷ್ಠಾ* ಎಂಬ ಮಾತಿನಂತೆ ಧರ್ಮವೇ ಜಗತ್ತಿನ ಎಲ್ಲದರ ಅಳಿವು ಉಳಿವಿಗೆ ಕಾರಣ.ಆಸ್ತಿಕ ಹಾಗೂ ನಾಸ್ತಿಕ ದರ್ಶನಗಳೆರಡರ ಮೂಲವೂ ಇವೇ ವೇದಗಳು.ದೇಹಕ್ಕೆ ಹೇಗೆ ತಲೆಯು ಮುಖ್ಯವೋ ನಮ್ಮ ಎಲ್ಲಾ ಆಚಾರ ವಿಚಾರಗಳಲ್ಲಿ ವೇದಗಳೇ ಮುಖ್ಯ. ಅವುಗಳಿಂದಲೇ ಸಂಸ್ಕೃತಿ ಜನಿಸಿತು. ಇದಕ್ಕಾಗಿಯೇ ಏನೋ *ವೇದೋಖಿಲೋ ಧರ್ಮ ಮೂಲಂ* ಎನ್ನುವ ಮಾತು.ಎಲ್ಲಾ ಧರ್ಮಗಳ ಮೂಲವೂ ವೇದವೆನ್ನುವುದು ಇದರ ಅರ್ಥ. ಹಾಗಾದರೆ ವೇದ ಎಂದರೇನು?ಇದು ಸಾಮಾನ್ಯರ ಪ್ರಶ್ನೆ. ಸರಳವಾಗಿ ಹೇಳುವುದಾದರೆ ವೇದ= ಜ್ಞಾನ ಅಷ್ಟೇ. *ವಿದಂನ್ತ್ತ್ಯೇಭೀ ಧರ್ಮಬ್ರಹ್ಮಣೀ ಕ್ರಿಯಾಜ್ಞಾನಮಯಂ ವೇದ:* ಅಂದರೆ ಧರ್ಮ ಹಾಗೂ ಭಗವಂತನ ಬಗ್ಗೆ ತಿಳಿಸಿಕೊಡುವ ಜ್ಞಾನ. ಯಜ್ಞದ ಅಂಗ ಎಂಬುದು ಇನ್ನೊಂದು ಅರ್ಥ.ನಮ್ಮ ಕರ್ಮಗಳೆಲ್ಲವೂ ಯಜ್ಞ ಅಂದರೆ ತ್ಯಾಗದ ರೂಪವಾದಾಗ ವೇದೋಕ್ತ ಕರ್ಮ ಮಾಡಿದಂತೆ  ಆಗುತ್ತದೆ.ಇದು ಅಪೌರುಷೇಯ.ಋಷಿಗಳು ವೇದಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದು  ಹೊರತು ಈ ಲೇಖನದಂತೆ ಕೂತು ಬರೆದದ್ದಲ್ಲ.ಬರೆದ ಲಿಪಿ ಹಾಳಾಗಬಹುದೇ ಹೊರತು ಒಳಗಿನ ಜ್ಞಾ...
💐ಪ್ರತಿಮಾನಾಟಕದ ಒಂದು ಸುಮ💐 *शत्रुघ्नलक्ष्मणगृहीतघटाभिषेके छत्रे स्वयं नृपतिना रुदता गृहीते । सम्भ्रान्तया किमपि मन्थरया च कर्णै: राज्ञ: शनैरभिहितं च न चास्मि राजा ।।* _ಭಾಸನ ಕಥನಶೈಲಿ ಇಂತಹ ಸಂದರ್ಭಗಳಲ್ಲಿ ಹೆಚ್ಚು ಇಷ್ಡವಾಗುತ್ತದೆ.ಮೂಲರಾಮಾಯಣಕ್ಕೆ ವಿರೋಧ ಬರದಂತೆ ಕೆಲವನ್ನು ಮಾತ್ರ ವ್ಯತ್ಯಾಸ ಮಾಡಿ ಹೇಳುತ್ತಾನೆ. ರಾಮನು ಅಭಿಷೇಕ ಒಪ್ಪದಿದ್ದಾಗ ದಶರಥ ವಯಸ್ಸಿನ ಕಾರಣ ಹೇಳಿ ಒಪ್ಪಿಸುತ್ತಾನೆ. ಅನಂತರ ಲಕ್ಷ್ಮಣ ಶತ್ರುಘ್ನರು ತೀರ್ಥ ತುಂಬಿದ ಕೊಡಗಳನ್ನು ಕೈಗಳಲ್ಲಿ ಹಿಡಿದು ಅಭಿಷೇಕ ಮಾಡಲು ಸಿದ್ಧರಾಗಿರುವಂತೆ, ಆನಂದ ಬಾಷ್ಪ ಸುರಿಸುತ್ತಿರುವ ರಾಜ ದಶರಥ ತಾನೇ ಸ್ವತ: ಬಿಳಿಯ ಬಣ್ಣದ ದೊಡ್ಡ ರಾಜರಿಗೆ ಯೋಗ್ಯವಾದ ಛತ್ರವನ್ನು ಹಿಡಿದು ಇನ್ನೇನು ರಾಜನಾದೆ ಎನ್ನುವಷ್ಟರಲ್ಲಿ , ಬೇಗ ಬೇಗನೇ ಬಂದು ದಶರಥನನ್ನು ಸಮೀಪಿಸಿದ ಮಂಥರೆ ಅವನ ಕಿವಿಯಲ್ಲಿ ಏನನ್ನೋ ಗುಟ್ಟಾಗಿ ಹೇಳಲಾಗಿ ರಾಜನು  ಮೆಲ್ಲನೆ ನಿಟ್ಟುಸಿರು ಬಿಡುತ್ತಾ ನುಡಿದ ಆಗ ತಿಳಿಯಿತು ನಾನು ರಾಜನಲ್ಲ, ಅಥವಾ ಆಗ ಅರುಹಿದಳು ಮಂಥರೆ ನೀನು ರಾಜನಾಗಲಾರೆ ಎಂದು. ರಾಮಾಯಣದಲ್ಲಿ ಇಲ್ಲದ ದೃಶ್ಯ ಸೃಷ್ಟಿಸಿ ಭಾಸ ಅದಕ್ಕೊಂದು ಹಠಾತ್ ತಿರುವು ಕಲ್ಪಿಸಿದ್ದಾನೆ.ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಬಳಸುವ ಅನಿರೀಕ್ಷಿತ ಬದಲಾವಣೆಯ ತಂತ್ರ ಭಾಸನು ಇಲ್ಲೇ ಒಂದನೇ ಶತಮಾನದಷ್ಟು ಹಿಂದಿನ ಕಾಲದಲ್ಲಿ ಬಳಸಿದ್ದಾನೆ.ಎಲ್ಲರೂ ನಿರೀಕ್ಷಿಸುತ್ತಿದ್ದಾರೆ ರಾಮಾಭಿಷೇಕವ...
🌹ಶಾಕುಂತಲದ ಮತ್ತೊಂದು ಸೌರಭ🌹 *भूत्वा चिराय चतुरन्तमहीसपत्नी दौष्यन्तिमप्रतिहतं तनयं निवेश्य । भर्त्रा तदर्पितकुटुम्बभरेण  सार्धं शान्ते करिष्यसि पदं पुनराश्रमेस्मिन् ।।* _ಶಕುಂತಲೆ ತಂದೆಗೆ ನಮಸ್ಕರಿಸಿ ಅಳುತ್ತಿದ್ದಾಳೆ.ಕಣ್ವರು ಮಗಳನ್ನು ಸಮಾಧಾನ ಮಾಡುತ್ತಿದ್ದಾರೆ.ಇನ್ನು ಯಾವಾಗ ಆಶ್ರಮಕ್ಕೆ ನಾನು ಕಾಲಿಡುವುದು ಎಂದು ಶಕುಂತಲೆ ಪ್ರಶ್ನಿಸಿದಾಗ ಕಣ್ವರ ಮನೋಹರವಾದ ಮಾತು.ಮಗಳೇ- ನಾಲ್ಕು ದಿಕ್ಕಿನಲ್ಲಿ ಸಮುದ್ರದಿಂದ ಸುತ್ತುವರೆದ ಭೂಮಿಗೆ ಬಹುಕಾಲ ಸವತಿಯಾಗಿ  , ತನಗೆ ಪ್ರತಿಯಾಗಿ ನಿಲ್ಲಬಲ್ಲ ಮಹಾರಥಿಕನಿಲ್ಲದ ದುಷ್ಯಂತನಿಂದ ಪಡೆದ ನಿನ್ನ ಮಗನನ್ನು ಪಟ್ಟಕಟ್ಟಿ, ಅವನಿಗೆ ಕುಟುಂಬದ ಭಾರವನ್ನು ಒಪ್ಪಿಸಿದ ನಿನ್ನ ಪತಿಯೊಡನೆ ಶಾಂತವಾದ ಈ ಆಶ್ರಮದಲ್ಲಿ ಮತ್ತೆ ಹೆಜ್ಜೆಯನ್ನಿಡುವೆ.ಇದು ಆಶೀರ್ವಾದವೂ ಹೌದು,ಕಿವಿಮಾತೂ ಹೌದು,ಬಯಕೆಯೂ ಹೌದು, ಲೋಕಕ್ಷೇಮವನ್ನು ಬಯಸುವ ಋಷಿಯ ಮನದ ಮಾತೂ ಹೌದು. ರಾಜನಿಗೆ ಮೊದಲ ಪತ್ನಿ ರಾಜ್ಯಲಕ್ಷ್ಮಿ.ಭೂಮಿಯೇ ಅವನ ರಾಣಿ.ಉಳಿದವರೇನಿದ್ದರೂ ಸವತಿಯರು.ರಾಜ್ಯಲಕ್ಷ್ಮಿಗಾಗಿ ಹೋರಾಡುತ್ತಲೇ ಇರುತ್ತಾನೆ.ಅವಳಿಲ್ಲವಾದರೆ ರಾಜಪದವಿ ಎಲ್ಲಿ? ಹಾಗಾಗಿಯೇ ಕಣ್ವರ ಮಾತು ಭೂಮಿಗೆ ಸವತಿಯಾಗಿ ಬಹುಕಾಲ ಇರು.ನಿಮ್ಮ ಜೋಡಿ ಬೇರ್ಪಡದೆ ರಾಜನು ನಿನ್ನನ್ನು ರಾಣಿಯಂತೆ ನೋಡಿಕೊಳ್ಳಲಿ.ದಾಂಪತ್ಯ ಅವಕಾಶವಾದಿ ಆಗದಿರಲಿ. ಎರಡನೆಯ ಮಾತು ಶತ್ರುಗಳ ಶಕ್ತಿ ಬೆಳೆಯದಿರುವ ಮಾತು.ದುಷ್ಯಂತನಷ್ಟೇ ಮ...
ಮಹಾಭಾರತದ ಕೆಲವು ಶ್ಲೋಕಗಳು📃 *ರಾಜಾನಂ ಪ್ರಥಮಂ ವಿಂದೇತ್ ತತೋ ಭಾರ್ಯಾಂ ತತೋ ಧನಮ್.ತ್ರಯಸ್ಯ ಸಂಚಯೇ ಚಾಸ್ಯ ಜ್ಞಾತೀನ್ಪುತ್ರಾಂಶ್ಚ ಧಾರಯೇತ್.* ಏಕಚಕ್ರದ ಬ್ರಾಹ್ಮಣನಾಡುವ ಮಾತು.ಬುದ್ಧಿವಂತನು ಮೊದಲು ಒಳ್ಳೆಯ ರಾಜನನ್ನು ಪಡೆಯಬೇಕು.ಅಥವಾ ಒಳ್ಳೆಯ ರಾಜನಿದ್ದೆಡೆ ವಾಸಿಸಬೇಕು. ಆಮೇಲೆ ಪತ್ನಿಯನ್ನೂ ಅದಾದ ಮೇಲೆ ಧನವನ್ನೂ ಸಂಪಾದಿಸಬೇಕು.ಈ ಮೂರನ್ನೂ ಪಡೆದ ಮೇಲೆ ಬಂಧುಗಳನ್ನೂ ಮಕ್ಕಳನ್ನೂ ರಕ್ಷಿಸಬೇಕು.ಅದರೆ ನಾನು ಇದಕ್ಕೆ ವಿರುದ್ಧವಾಗಿ ಮಾಡಿ ಈಗ ಪಶ್ಚಾತ್ತಾಪ ಪಡುತ್ತಿರುವೆ.ನಾವೂ ಬ್ರಾಹ್ಮಣನಂತೆ ಮೊದಲು ಧನಕ್ಕೆ ಆದ್ಯತೆ ಅಲ್ಲವೇ! ಆಮೇಲೆ ಏನಾದರೂ ಘಟಿಸಿದಾಗ ಯಾರಮೇಲಾದರೂ ದೂರು ಹಾಕುತ್ತೇವೆ.ಆಯ್ಕೆ ಸರಿ ಇರಲಿಲ್ಲವೆಂದು ನಮ್ಮನ್ನು ತೆಗಳುವುದಿಲ್ಲ ಎಂದಿಗೂ. *ಬ್ರಹ್ಮವಧ್ಯಾ ಪರಂ ಪಾಪಂ ನಿಷ್ಕೃತಿರ್ನಾತ್ರ ವಿದ್ಯತೇ.ಅಬುದ್ಧಿಪೂರ್ವಂ ಕೃತ್ವಾಪಿ ಶ್ರೇಯೋ ಆತ್ಮವಧೋ ಮಮ.* ಬ್ರಾಹ್ಮಣನು ಕುಂತಿಯ ಮಕ್ಕಳಿಗಿಂತ ತನ್ನ ಸಾವೇ ಲೇಸು ಎಂದು ಹೇಳುವ ಮಾತು. ಬ್ರಹ್ಮಹತ್ಯೆ ಬಹಳ ದೊಡ್ದ ಪಾಪ.( ಬ್ರಹ್ಮನನ್ನು ಅರಿತವನ ಹತ್ಯೆ ಯಾವುದೇ ಜಾತಿಯವರದ್ದಲ್ಲ) ಇದಕ್ಕೆ ಪ್ರಾಯಶ್ಚಿತ್ತವೂ ಇಲ್ಲ.ಅವಿವೇಕದಿಂದ ತನ್ನ ಪ್ರಾಣ ಬಿಟ್ಟರೂ ಬ್ರಹ್ಮಹತ್ಯೆಗಿಂತ  ಆತ್ಮವಧೆಯೇ ಶ್ರೇಯಸ್ಕರವೆಂದು ತೋರುತ್ತದೆ.ಹಿಂಸೆಯ ಬಗೆಗೆ ಧರ್ಮದ ನಡೆಯನ್ನು ಇದು ಎತ್ತಿಹಿಡಿಯುತ್ತದೆ. *ಆಗತಸ್ಯ ಗೃಹೇ ತ್ಯಾಗಸ್ತಥೈವ ಶರಣಾರ್ಥಿನ: ಯಾಚಮಾನಸ್ಯ ಚ ವಧೋ ನೃಶಂಸಂ ಪರಮಂ ಮತಮ್.* ...
💐ಪ್ರತಿಮಾನಾಟಕದ ಒಂದು ಚಿಕ್ಕ ಸುಮ💐 *समं बाष्पेण पतता तस्योपरि ममाप्यध: । पितुर्मेक्लेदितौ पादौ ममापि क्लेदितं शिर: ।।* _ಸೀತೆಗೆ ರಾಮ ಹೇಳುವ ಮಾತು.ದಶರಥನ ಕರೆಯಂತೆ ಅವನ ಬಳಿ ಸಾಗಿದಾಗ ಪಟ್ಟಕ್ಕೇರಲು ನಿರ್ದೇಶಿಸಿದರು ನನ್ನ ತಂದೆ.ಅನಂತರ ಇಬ್ಬರ ಸ್ಥಿತಿಯೂ ಒಂದೇ ಆಯಿತು.ಹೇಗೆಂದರೆ ಅವರ ಪಾದಗಳಿಗೆ ನಮಸ್ಕರಿಸಲು ತಲೆ ಬಾಗಿದಾಗ ನನ್ನ ತಲೆ ಆರ್ದ್ರವಾಯಿತು.ಅದೇ ಕ್ಷಣ ಅವರ ಕಾಲುಗಳೂ ಆರ್ದ್ರವಾದವು. ಪುತ್ರನ ಮೇಲಿನ ವಾತ್ಸಲ್ಯವು ದಶರಥನ ಕಣ್ಣುಗಳಲ್ಲಿ ಆನಂದಬಾಷ್ಪವನ್ನು ತರಿಸಿ ನಮಸ್ಕರಿಸುತ್ತಿದ್ದ ರಾಮನ ತಲೆಯನ್ನು ಸೋಕಿದವು.ಅವನ ತಲೆ ತಂದೆಯ ಪ್ರೀತಿಯ ಕಡಲಿನಲ್ಲಿ ಒದ್ದೆಯಾಯಿತು.ಅದೇ ಸಂದರ್ಭದಲ್ಲಿ ತಂದೆ ತನ್ನ ಮೇಲೆ ತೋರಿದ ಪ್ರೀತಿಯು ರಾಮನ ಕಣ್ಣುಗಳಲ್ಲಿಯೂ ಆನಂದಾಶ್ರುಗಳನ್ನು ಸುರಿಸಿತು.ಆಗ ದಶರಥನ ಪಾದಗಳು ಪುತ್ರನ ವಾತ್ಸಲ್ಯದ ಪಾದ್ಯದಿಂದ ಆರ್ದ್ರವಾದವು.ಹೀಗೆ ಇಬ್ಬರ ಸ್ಥಿತಿಯೂ ದೈಹಿಕವಾಗಿ ಭಿನ್ನವಿದ್ದರೂ ಮಾನಸಿಕವಾಗಿ ಒಂದೇ ಆಗಿತ್ತು.ಹರಿವೇ ಉಸಿರಾಗಿರುವ ನೀರಿನ ಗುಣದಂತೆ ಅತಿಶಯವಾದ ಪ್ರೀತಿಯೂ ಕೂಡ.ನಾವು ಒಬ್ಬರಲ್ಲಿ ಹೆಚ್ಚು ಪ್ರೀತಿ ತೋರಿದಷ್ಟೂ ನಮ್ಮಲ್ಲೂ ಅವರ ಪ್ರೀತಿ ಹೆಚ್ಚುತ್ತಲೇ ಹೋಗುವುದು ಎಂಬ ಮಧುರ ಸಂದೇಶ ಕವಿಯ ಮಾತಿನ ಭಾವ._ 📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಸುಂದರ ಕುಸುಮ 🌹 *शुश्रूषस्व गुरून् कुरु प्रियसखीवृत्तिं सपत्नीजने भर्तुर्विप्रकृतापि रोषणतया मा स्म प्रतीपं गम: । भूयिष्ठं भव दक्षिणा परिजने भाग्येष्वनुत्सेकिनी यान्त्येवं गृहिणीपदं युवतयो वामा: कुलस्याधय: ।।* _ಕಣ್ವರು ಶಕುಂತಲೆಗೆ ಬೋಧಿಸುವ ಮಧುರ ಶ್ಲೋಕ. ಪತಿಗೃಹದಲ್ಲಿ ಹೇಗಿರಬೇಕೆಂದು ನವಿರಾಗಿ ಉಪದೇಶಿಸುತ್ತಿದ್ದಾರೆ.ಮೊದಲನೇ ಮಾತೇ ಗುರುಹಿರಿಯರನ್ನು ಗೌರವಿಸು. ಅದು ಎಲ್ಲರ ಸ್ನೇಹಕ್ಕೆ ಕಾರಣ.(ಈಗಿನ ಹೆಣ್ಣುಮಕ್ಕಳು ಹಿರಿಯರೇ ಇರದಿರಲಿ ಎಂದು ಬಯಸುತ್ತಿದ್ದಾರೆ. ) ಗುರುಹಿರಿಯರ ಸೇವೆ ಅವರ ಮನವನ್ನು ಗೆಲ್ಲುವ ಪರಿಣಾಮಕಾರಿ ಅಸ್ತೃ. ರಾಜಾನೋ ಬಹುವಲ್ಲಭಾ: ಎಂಬಂತೆ ಅವನಿಗೆ ಅನೇಕ ಪತ್ನಿಯರಿರಬಹುದು.ನೀನು ಅವರೆಲ್ಲರಲ್ಲೂ ಪ್ರಿಯಸಖಿಯಂತೆ ವರ್ತಿಸು.ಅಸೂಯಾರಹಿತಳಾಗಿ ಅವರೊಡನೆ ಸ್ನೇಹ ಮಾಡಿದರೆ ಅದೇ ನಿನ್ನ ಒಳಿತನ್ನು ಸಾರುವುದು. ಪತಿಯು ಕೋಪಗೊಂಡಾಗ ಅಥವಾ ತಿರಸ್ಕಾರ ಮಾಡಿದಾಗ ನೀನು ಅದನ್ನೇ ಮಾಡದೇ ಪ್ರೀತಿಯನ್ನೇ ತೋರು.ಕೋಪ ಜೊತೆಗೂಡಿ ಅನಾಹುತವಾಗಬಹುದು.ಇಂದು ತಿರಸ್ಕಾರ ಮಾಡಿದರೂ ನಿನ್ನ ಪ್ರೀತಿಗೆ ಮುಂದೆ ಮಣಿದು ಪ್ರೀತಿಸಬಹುದು.ಹಾಗಾಗಿ ವಿರೋಧಿಸದಿರು ಪತಿಯನ್ನು. ಸೇವಕರ ವಿಷಯದಲ್ಲಿ ಸೌಜನ್ಯದಿಂದಿರಲಿ ನಿನ್ನ ವರ್ತನೆ.ಅವರು ಅಹಂಕಾರ ತೋರಿದೆಯೆಂದು ಚಾಡಿ ಹೇಳುವುದೋ, ಕೇಡು ಮಾಡುವುದೋ ಮಾಡಬಹುದು.ಅವರೊಡನೆಯ ನಯದ ವರ್ತನೆ ಅವರ ವಿಶ್ವಾಸವನ್ನು ಸಂಪಾದಿಸುತ್ತದೆ. ಐಶ್ವರ್...
📃ಮಹಾಭಾರತದ ಕೆಲವು ಉತ್ತಮ ಶ್ಲೋಕಗಳು💦 *ಅವಧ್ಯಾ: ಸ್ತ್ರಿಯ ಇತ್ಯಾಹು: ಧರ್ಮಜ್ಞಾ ಧರ್ಮನಿಶ್ಚಯೇ |ಧರ್ಮಜ್ಞಾನ್ರಾಕ್ಷಸಾನಾಹುರ್ನಹನ್ಯಾತ್ಸಚ ಮಾಮಪಿ ||* ಏಕಚಕ್ರನಗರದ ಬ್ರಾಹ್ಮಣನ ಪತ್ನಿಯಾಡುವ ಮಾತು- ಸ್ತ್ರೀಯರನ್ನು ಕೊಲ್ಲಬಾರದೆಂದು ಧರ್ಮಜ್ಞರು ಹೇಳಿದ್ದಾರೆ.ಧರ್ಮವನ್ನು ನಿಶ್ಚಯಿಸುವಾಗ ರಾಕ್ಷಸರೂ ಧರ್ಮಜ್ಞರಾಗಿರುವರೆಂದು ಹೇಳುವರು.ಆದುದರಿಂದ ಅವನು ನನ್ನನ್ನು ಕೊಲ್ಲದೆ ಬಿಡಬಹುದು. ರಾಮನು ತಾಟಕಿಯನ್ನು ಕೊಲ್ಲುವ ಮೊದಲು ಏಕೆ ವಿಶ್ವಾಮಿತ್ರರನ್ನು ಪ್ರಶ್ನಿಸಿದನೆಂಬುದಕ್ಕೆ ಇಲ್ಲಿ ಉತ್ತರವಿದೆ.ಸ್ತ್ರೀಯರು ಸಾಮಾನ್ಯವಾಗಿ ವಧಾರ್ಹರಲ್ಲ. *ನಿ:ಸಂಶಯೋ ವಧ: ಪುಂಸಾಂ ಸ್ತ್ರೀಣಾಂ ಸಂಶಯಿತೋ ವಧ: | ಅತೋ ಮಾಮೇವ ಧರ್ಮಜ್ಞ ಪ್ರಸ್ಥಾಪಯಿತುಮರ್ಹಸಿ ||* ಪುರುಷರನ್ನು ಕೊಲ್ಲುವ ವಿಷಯದಲ್ಲಿ ಹೆಚ್ಚು ಸಂಶಯವಿಲ್ಲ. ಆದರೆ ಸ್ತ್ರೀಯರನ್ನು ಕೊಲ್ಲುವುದು ಸಂಶಯಾಸ್ಪದ.ಹಾಗಾಗಿ ನನ್ನನ್ನೇ ಅವನ ಬಳಿಗೆ ಕಳುಹಿಸು ಎಂದು  ಆ ಸ್ತ್ರೀ ಹೇಳುತ್ತಾಳೆ.ಇಲ್ಲಿಯೂ ವ್ಯಾಸರ ಮಾತು ಧರ್ಮಸೂಕ್ಷ್ಮವನ್ನು ತಿಳಿಸುತ್ತದೆ. *ನ ಚಾಪ್ಯಧರ್ಮ: ಕಲ್ಯಾಣ ಬಹುಪತ್ನೀಕತಾ ನೃಣಾಮ್ | ಸ್ತ್ರೀಣಾಮಧರ್ಮ: ಸುಮಹಾನ್ಭರ್ತು: ಪೂರ್ವಸ್ಯ ಲಂಘನೇ ||* ಈ ಶ್ಲೋಕ ಈಗಿನ ಸಮಕಾಲೀನ ವಿವಾದದ ಕೇಂದ್ರಬಿಂದು.ಅನೇಕ ಮಂದಿ ಪತ್ನಿಯರನ್ನು  ಹೊಂದಿರುವುದು ಪುರುಷರಿಗೆ ಅಧರ್ಮವಲ್ಲ. ಆದರೆ ಮೊದಲಿನ ಪತಿಯನ್ನು ಅತಿಕ್ರಮಿಸುವುದು ಸ್ತ್ರೀಯರಿಗೆ ಅಧರ್ಮ.ಇದು ಪತಿ ಸಜ್ಜನನಾಗಿರುವಾಗ...
💐ಪ್ರತಿಮಾನಾಟಕದ ಒಂದು ಕುಸುಮ💐 *छत्रं सव्यजनं सनन्दिपटहं भद्रासनं कल्पितं न्यस्ता हेममया: सदर्भकुसुमास्तीर्थाम्बुपूर्णा घटा:। युक्त: पुष्यरथश्च मन्त्रिसहिता: पौरा: समभ्यागता: सर्वस्यास्य हि मङ्गलं स भगवान् वेद्यां वसिष्ठ: स्थित: ।।* _ರಾಮಾಭಿಷೇಕದ ಸಿದ್ಧತೆಗಳನ್ನು ವರ್ಣಿಸುವ ಶ್ಲೋಕ. ರಾಜರಿಗೆ ಹಿಡಿಯುವ ಬೃಹದಾಕಾರದ ಛತ್ರಿ ಅಲಂಕೃತಗೊಂಡು ಸಿದ್ಧವಾಗಿದೆ.ಅಭಿಷೇಕವಾದ ಮೇಲೆ ಹಿಡಿಯುವುದು ವಾಡಿಕೆ.ಸುತ್ತಲೂ ಹವಳ ಮುತ್ತುಗಳನ್ನು ಪೋಣಿಸಿ ಶ್ರೀಮಂತ ಛತ್ರ ತಯಾರಾಗಿದೆ.ಜೊತೆಗೆ ರಾಜನು ಬೆವರದಿರುವಂತೆ ಬೀಸಣಿಗೆಯು ಸಿದ್ಧವಾಗಿದೆ.ಬೀಸುವವರು ಅಲಂಕಾರ ಮಾಡಿಕೊಂಡು ನಿಂತಿರುವರು.ಸುತ್ತಲೂ ತಂಪಿದ್ದರೂ ಜನಜಂಗುಳಿ ಹಾಗೂ ರಾಜನ ಕಾರ್ಯದ ಒತ್ತಡದಿಂದಾಗಿ ಉಂಟಾಗುವ ಸೆಕೆಯ ನಿವಾರಣೆಗೆ ಈ ಬೀಸುವ ಕಾಯಕ.ಸಿಂಹಾಸನವು ಬಣ್ಣಗಳನ್ನು ಲೇಪಿಸಿಕೊಂಡು, ಹಳೆಯ ಕುಸುರಿಗಳನ್ನು ಇನ್ನಷ್ಟು ನವೀಕರಿಸಿಕೊಂಡು ರಾಜನನ್ನೇ ನಿರೀಕ್ಷಿಸುತ್ತಿದೆ.ಪಕ್ಕದಲ್ಲೇ ರಾಜನ ಆಗಮನದ ಕಾಲದಲ್ಲಿ ನುಡಿಸಲು ಸಿದ್ದವಾದ ಒಂದು ವಿಧದ ಮಂಗಲವಾದ್ಯದೊಡನೆ ಸೇವಕ ಸಿದ್ಧನಾಗಿರುವನು.ಪಟಹ ಒಂದು ಬಗೆಯ ವಾದ್ಯ.ಪಾವಿತ್ಯ್ರದ ಕುರುಹಾದ ದರ್ಭೆಗಳು ಹಾಗೂ ಸುವಾಸಿತ ಪುಷ್ಪಗಳೊಡಗೂಡಿದ ಚಿನ್ನದ ಕಲಶಗಳು ನಾನಾ ನದಿಗಳ ಹಾಗೂ ಸಪ್ತ ಸಮುದ್ರಗಳ ತೀರ್ಥದಿಂದ ತುಂಬಿ ಯಾವಾಗ ರಾಮನ ಶಿರವನ್ನು ಸ್ಪರ್ಶಿಸುವೆವೊ ಎಂದು ಕಾತರಗೊಂಡು ಕಾಯುತ್ತಿವೆ. ಪಟ್ಟಾಭಿಷೇಕ...
🌹ಶಾಕುಂತಲದ ಸುಂದರ ಕುಸುಮ🌹 *अस्मान्साधु विचिन्त्य संयमधनानुच्चै: कुलं चात्मन: त्वय्यास्या: कथमप्यबान्धवकृतां स्नेहप्रवृत्तिं च ताम् । सामान्यप्रतिपत्तिपूर्वकमियं दारेषु दृश्या त्वया भाग्यायत्तमत: परं न खलु तद्वाच्यं वधूबन्धुभि: ।।* _ಕಣ್ವಮಹರ್ಷಿಗಳು ದುಷ್ಯಂತನಿಗೆ ಶಿಷ್ಯನ ಮೂಲಕ ಈ ಸಂದೇಶ ಕಳುಹಿಸುತ್ತಿದ್ದಾರೆ.ಕನ್ಯೆ ಹೆತ್ತವರ ಜವಾಬ್ದಾರಿ ಮತ್ತೆ ಮತ್ತೆ ಸೂಚಿಸುತ್ತಿರುವಂತಿದೆ ಈ ಸುಮ.'ದುಷ್ಯಂತ ' ಇವಳನ್ನು ಹೀಗೆ ನೋಡಿಕೊ.ಸಂಯಮವೇ ನಮ್ಮ ಧನ ಎಂಬುದನ್ನು ಅರ್ಥಮಾಡಿಕೊಂಡು, ತನ್ನ ಕುಲದ ದೊಡ್ಡಸ್ತಿಕೆಯನ್ನೂ, ಬಂಧುಗಳ ಮಧ್ಯಸ್ಥಿಕೆ ಇಲ್ಲದೆ ಇವಳಲ್ಲಿ ತಾನು ಅನುರಾಗ ತಾಳಿದುದನ್ನೂ ಆಲೋಚಿಸಿ, ತನ್ನ ಪತ್ನಿಯರಿಗೆ ಸಾಮಾನ್ಯವಾಗಿ ಸಲ್ಲಬೇಕಾದ ಆದರದಿಂದ ಇವಳನ್ನು ನೋಡಿಕೊಳ್ಳಬೇಕು.ಇದಕ್ಕಿಂತ ಹೆಚ್ಚಿನದು ಅವಳ ಭಾಗ್ಯಕ್ಕೆ ಬಿಟ್ಟದ್ದು.ಅದನ್ನು ವಧುವಿನ ಬಂಧುಗಳು ಹೇಳಬಾರದು.ವಧುವಿನ ತಂದೆಯಾಗಿ ಅಳಿಯನಿಗೆ ಕಣ್ವರಾಡುವ ಮಾತಿದು.ನಮ್ಮ ಸಂಪತ್ತು ಸಹನೆ ಅಥವಾ ತಾಳ್ಮೆ. ಅದನ್ನು ಬಿಟ್ಟು ಹೆಚ್ಚಿನ ಸಂಪತ್ತಿಲ್ಲ.ತವರುಮನೆಯಿಂದ ಅದು ತಾ ಇದು ತಾ ಎಂದು ಕಳುಹಿಸಿದರೆ ತರಲು ಏನೂ ಇಲ್ಲ ಎಂಬ ಗೂಢಾರ್ಥ.ಇನ್ನೊಂದು ಅರ್ಥದಲ್ಲಿ ತಾಳ್ಮೆ ನಮ್ಮ ಬಳಿ ಉಳಿಯುವಂತೆ ಮಾಡು.ಅವಳ ಯೋಗಕ್ಷೇಮ ಹಾಳುಗೆಡವಿ ನಮ್ಮ ತಾಳ್ಮೆ ಕೆಡಿಸದಿರು.ಅದು ನಿನಗೂ ಕ್ಷೇಮ.ನಿನ್ನ ಪುರುವಂಶದ ಶ್ರೇಷ್ಠತೆಗೆ ಅನುಸಾರ ಅವಳನ್...
ದೇವಿಯ ಏಳನೇ ರೂಪ ಕಾತ್ಯಾಯನಿ.ಕತ ವಂಶದಲ್ಲಿ ಕಾಲಾಂತರದಲ್ಲಿ ಜನಿಸಿದವಳು.ಒಂದು ಕೈಯಲ್ಲಿ ಕಮಲ,ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದ ಈಗೆ ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ಎರಡನ್ನೂ ಏಕಕಾಲದಲ್ಲಿ ನಡೆಸುವಳು.ಒಳ ಹೊರ ಶತ್ರುಗಳ ನಾಶ,ಹಾಗೂ ಕಮಲದಂತೆ ನಿರ್ಮಲವಾದ ಬುದ್ಧಿ ನೀಡಲೆಂದು ಪ್ರಾರ್ಥಿಸೋಣ.ಇವಳು ಯುದ್ಧ ದೇವತೆಯೂ ಹೌದು. ಪತಂಜಲಿ ಮಹರ್ಷಿಗಳು ಇವಳನ್ನು ಯೋಗಜ್ಞೆ ಎಂದು ಯೋಗಶಾಸ್ತ್ರದಲ್ಲಿ ಹೊಗಳಿದ್ದಾರೆ.ವೇದ ಪ್ರತಿಪಾದ್ಯಳೂ ಹೌದು ಈಕೆ.( ಯಜುರ್ವೇದ ಆರಣ್ಯಕ) ಶ್ರುತಿ ಸ್ಮೃತಿ ಪ್ರತಿಪಾದ್ಯ ಈ ದೇವಿ ಅದರ ಸಾರವನ್ನು ನಮಗೆ ಕರುಣಿಸಲಿ. ಶ್ರೀನಿಧಿ ಅಭ್ಯಂಕರ್.
ದೇವಿಯ ಆರನೆ ರೂಪ ಕಾಲರಾತ್ರಿ.ಬ್ರಹ್ಮನ ರಾತ್ರಿ ಕಾಲ.ಪ್ರಳಯಕಾಲದ ರಾತ್ರಿಯೂ ಹೌದು.ಇವಳು ವಿದ್ಯಾ ದೇವತೆಯೆಂದೂ ದೇವೀಮಾಹಾತ್ಮ್ಯ ಕೊಂಡಾಡುತ್ತದೆ.ರಾತ್ರಿ ಎನ್ನುವುದು ಕತ್ತಲೆಯ ಸಂಕೇತ.ಅದು ನಮ್ಮ ಪಾಲಿಗೆ ಕರಾಳವಾಗದೇ ಇರುವಂತೆ ದೇವಿ ಸುಜ್ಞಾನ ನೀಡಲೆಂದು ಪ್ರಾರ್ಥಿಸೋಣ.ನಮ್ಮ ಅಜ್ಞಾನಗಳೆಲ್ಲ ಪ್ರಳಯವಾಗಿ ನಮ್ಮ ಪಾಲಿನ ಹೊಸ ವಿಚಾರದ ಸೃಷ್ಟಿ ದೇವಿಯ ಕರುಣೆಯಿಂದ ಒದಗಿಬರಲಿ ಎಂದು ಸ್ತುತಿಸೋಣ. ಶ್ರೀನಿಧಿ ಅಭ್ಯಂಕರ್.
🌺ಪ್ರತಿಮಾನಾಟಕಸ ಒಂದು ಸುರಭಿ 🌺 *सीताभव: पातु सुमन्त्रतुष्ट: सुग्रीवराम: सहलक्ष्मणश्च । यो रावणार्यप्रतिमश्च देव्या विभीषणात्मा भरतोनुसर्गम् ।।* _ಭಾಸನ ನಾಟಕಗಳಲ್ಲಿ ಹೆಚ್ಚು ಪ್ರಸಿದ್ಧವಾದ ನಾಟಕ ಪ್ರತಿಮಾನಾಟಕ.ಮಂಥರೆಯ ದುರ್ಬೋಧೆಯ ಪರಿಣಾಮ ರಾಮನ ವನಗಮನ ನಡೆಯುತ್ತದೆ. ಅವನು ವನಕ್ಕೆ ಹೊರಡುವ ಮುಂಚಿನ ಘಟನೆಗಳಿಂದ ಈ ನಾಟಕ ಪ್ರಾರಂಭವಾಗುವುದು.ಇದರ ವಿಶೇಷತೆ ಪ್ರತಿಮಾಗೃಹದ ಕಲ್ಪನೆ. ರಾಮಾಯಣದಲ್ಲಿ ಇಲ್ಲದ ರಾಜರ ಪ್ರತಿಮೆಗಳನ್ನಿಡುವ  ಒಂದು ಸಂಗ್ರಹಾಲಯ ಇವನ ಹೊಸ ಕಲ್ಪನೆ. ನಾಟಕಕ್ಕೂ ಅದೇ ಹೆಸರಾಗಿದೆ.ಭರತನಿಗೆ ಎಲ್ಲಾ ವಿಷಯ ತಿಳಿಯುವುದು ಅವನು ಹಾಗೆಯೇ ಕಾಡಿಗೆ ರಾಮನಿಗಾಗಿ ತೆರಳುವುದು ಇತ್ಯಾದಿ ಕವಿಯ ಕಥೆ ಹೇಳುವ ಶೈಲಿ ನಿಜಕ್ಕೂ ಸುಂದರ.ಒಂದೊಂದು ಶ್ಲೋಕಗಳು ಕರುಣಾರಸವನ್ನು ಸುಂದರವಾಗಿ ಬಿಂಬಿಸುತ್ತವೆ.ಕೆಲವು ಶ್ಲೋಕಗಳನ್ನು ಓದಿದಾಗ ನಮಗರಿವಿಲ್ಲದೇ ಕಣ್ಣೀರು ಹರಿಯುವುದು ಕವಿಯ ಚಾತುರ್ಯ. ಉತ್ತರರಾಮಚರಿತದಂತೆ ಕರುಣಾರಸ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಪಾದಿಸಲ್ಪಟ್ಟದ್ದು ಇಲ್ಲಿಯೇ ಎನ್ನಬಹುದು. ಅಂತಹ ಕೆಲವು ಉತ್ತಮ ಶ್ಲೋಕಗಳ ಯಥಾಮತಿ ಪರಿಚಯ ಮಾಲಿಕೆ ಇಂದಿನಿಂದ ಆರಂಭಿಸುತ್ತಿದ್ದೇನೆ.ತಪ್ಪು ತಿದ್ದಿ ಮುನ್ನಡೆಸಬೇಕು ಗುರು ಹಿರಿಯರು. _ಸೀತೆಯ ಪತಿ ಅಥವಾ ಜನಕನ ಅಳಿಯನಾದ ಶ್ರೀರಾಮನು ನಮ್ಮನ್ನು ಸಲಹಲಿ.ಸುಮಂತ್ರ ಹೆಸರಿನ ಮಂತ್ರಿಯನ್ನು ಹೊಂದಿದವನು ಅಥವಾ ಮಂತ್ರಾಲೋಚನೆಯಲ್ಲಿ ಪಳಗಿದ ಮಂತ್ರಿಗಳುಳ...
🌹ಶಾಕುಂತಲದ ಸುಂದರ ಕುಸುಮ 🌹 *एषापि प्रियेण विना गमयति रजनीं विषाददीर्घतराम् । गुर्वपि विरहदु:खमाशाबन्ध: साहयति ।।* _ಶಕುಂತಲೆ ಸಖಿಯ ಬಳಿ ಚಕ್ರವಾಕವನ್ನು ತೋರಿಸಿ ಜೊತೆಗಾರನನ್ನು ಕಾಣದೇ ಹೆಣ್ಣು ಚಕ್ರವಾಕ ಜೋರಾಗಿ ಅರಚುತ್ತಿದೆ ನಾನು ಮಾತ್ರ ಪ್ರಿಯನ ಬಗ್ಗೆ ಅಷ್ಟು ಉತ್ಸುಕಳಾಗಿಲ್ಲ ಎಂದಾಗ ಅನಸೂಯೆ ಆಡುವ ಮಾತು.ಗೆಳತಿ ಹಾಗನ್ನಬೇಡ - ಈ ಚಕ್ರವಾಕವೂ ಪ್ರಿಯಕರನನ್ನು ಅಗಲಿ ದು:ಖದಿಂದ ದೀರ್ಘವಾದ ರಾತ್ರಿಯನ್ನು ಕಳೆಯುತ್ತದೆ.ಏಕೆಂದರೆ ಆಶೆಯ ಬಂಧನವು ದು:ಖವು ಬಲವಾಗಿದ್ದರೂ ತಡೆದುಕೊಳ್ಳಯವಂತೆ ಮಾಡುವುದು.ಎಂತಹ ಮಾರ್ಮಿಕ ನೈಜ ಮಾತು.ವಿರಹದು:ಖದಿಂದ ರಾತ್ರಿ ತುಂಬಾ ದೀರ್ಘವೆಂಬಂತೆ ತೋರುತ್ತಿದೆ ಆ ಪಕ್ಷಿಗೆ.ದು:ಖಿತರಿಗೆ ಕ್ಷಣವೊಂದು ಯುಗದಂತೆ ಕಾಣುವುದು. ( ಕನ್ನಡದ ಒಂದು ಚಿತ್ರದಲ್ಲಿ ಹೀಗೆ ಪದ್ಯವೂ ಇದೆ ಕ್ಷಣವೊಂದು ಯುಗವಾಗಿ ನಿನಗಿಂತ ಮಿಗಿಲಾಗಿ ಇತ್ಯಾದಿ) ಅವರಿಗೆ ಕಾಲ ಹೋಗುವುದೇ ಕಷ್ಟ.ಸುಖದಲ್ಲಿದ್ದಾಗ ದೀರ್ಘಕಾಲವೂ ಕ್ಷಣದಂತೆ ಕಳೆದುಹೋಗುತ್ತದೆ.ಮಿಲನದಲ್ಲಿ ಕಾಳಿದಾಸನ ರಘುವಂಶದ ಮಾತು - ರಾಮನಾಡುವುದು ಸೀತೆಯೊಡನೆ ಕಳೆದ ನೆನಪುಗಳ ಬಗ್ಗೆ  ರಾತ್ರಿರೇವ ವ್ಯರಂಸೀತ್ ರಾತ್ರಿ ಕಳೆದುದೇ ತಿಳಿಯಲಿಲ್ಲ. ಆದರೆ ಆಸೆಯೆಂಬ ಬಂಧವು ಆ ನೋವನ್ನು ಸಹಿಸುವ ಶಕ್ತಿ ನೀಡುವುದು.ನಿನಗೂ ಮುಂದೆ ದುಷ್ಯಂತ ದೊರಕುವನು ಎಂಬ ಆಸೆಯಿರುವುದರಿಂದಲೇ  ವಿವರವನ್ನು ಸಹಿಸಿಕೊಂಡಿದ್ದಿ.ಅದೇ ನಿನಗೆ ಔಷಧಿಯಂತೆ ನೆರವಾಗಿದೆ.ಜೀವನ...
🌺ಅವಿಮಾರಕದ ಚಿಕ್ಕ ಸುವಾಸಿತ ಮೊಗ್ಗು🌺 *भवन्त्वरजसो गाव: परचक्रं प्रशाम्यतु  । इमामपि महीं कृत्स्नां राजसिंह: प्रशास्तु न: ।।* _ಅವಿಮಾರಕ  ನಾಟಕದ ಭರತವಾಕ್ಯ.ನಾಟಕದ ಕೊನೆಗೆ ನಾಟ್ಯಶಾಸ್ತ್ರದ ರಚನೆ ಮಾಡಿದ ಭರತನಿಗೆ ಗೌರವ ಸೂಚಿಸುವ, ಲೋಕದ ಕ್ಷೇಮವನ್ನು ದೇವರಲ್ಲಿ ಬೇಡುವ ವಾಕ್ಯ.ಹೆಚ್ಚಾಗಿ ನಾಂದಿಯೊಂದಿಗೆ ನಾಟಕಕ್ಕೆ ಚಾಲನೆ ಕೊಟ್ಟ ಸೂತ್ರಧಾರನೇ ಈ ಮಾತನ್ನು ಹೇಳುತ್ತಾನೆ. ಇಂದ್ರಿಯಗಳು ರಜೋಗುಣವನ್ನು ತ್ಯಜಿಸಲಿ.ಏಕೆಂದರೆ ಆರಂಭದಲ್ಲಿ ಅಮೃತದಂತೆ ಕಂಡರೂ ಪರಿಣಾಮದಲ್ಲಿ ವಿಷದಂತಿರುವ ವಿಷಯಾನುಭವದ ಸುಖ ರಾಜಸ.( ವಿಷಯೇಂದ್ರಿಯಸಂಯೋಗಾದ್  ..... ಪರಿಣಾಮೇ ವಿಷಮಿವ = ಗೀತೆ) ಹಾಗಾಗಿ ರಜೋಗುಣ ಇಂದ್ರಿಯಗಳನ್ನು ಬಿಟ್ಟು ಬಿಡಲಿ.ಕರ್ಮಫಲ,ಕೀರ್ತಿ ಬಯಸುವುದು,ಲೋಭ,ಪರಪೀಡನೆ,ಬಾಹ್ಯಾಂತರ ಅಶುದ್ಧಿ,ಫಲ ದೊರೆತಾಗ ಅತಿ ಸಂತೋಷ, ಇಲ್ಲದಿದ್ದರೆ ಅತಿ ದು:ಖ ಇವೆಲ್ಲ ರಾಜಸ ಲಕ್ಷಣಗಳು.( ಗೀತೆ) ಅವೆಲ್ಲ ನಮ್ಮನ್ನಾಳದಿರಲಿ.ನಮ್ಮ ಶತ್ರುಗಳೆನಿಸಿದವರೆಲ್ಲ  ಕ್ಷೀಣಿಸಲಿ ಅಥವಾ ನಾಶ ಹೊಂದಲಿ.ಈ ಸಂಪೂರ್ಣ ಭೂಮಿಯನ್ನು ಸಿಂಹದ ಗಾಂಭೀರ್ಯ, ಶಕ್ತಿ,ಬೇಟೆಯಲ್ಲಿನ ನಿಷ್ಠೆ, ಪರಿವಾರದ ಮೇಲಿನ ಪ್ರೀತಿ ಉಳ್ಳ ರಾಜನು ಆಳಲಿ.ಇಂದ್ರಿಯಗಳನ್ನು ಪ್ರಜೆಗಳು ಜಯಿಸಿ ಜಿತೇಂದ್ರಿಯರಾದಾಗ ರಾಗದ್ವೇಷಗಳಿಗೆ ಆಸ್ಪದವಿಲ್ಲದೆ,ಅಂತರಂಗ ಬಹಿರಂಗ ಶತ್ರುಗಳು ನಶಿಸಿಹೋದಾಗ,ಈ ಪೃಥ್ವಿಯನ್ನು ಶ್ರೇಷ್ಠನೊಬ್ಬ ಆಳಿದಾಗ ಲೋಕ ಸುಭಿಕ್ಷವೆನಿಸುತ...
🌹ಶಾಕುಂತಲದ ಸುಂದರ ಪುಷ್ಪ 🌹 *उत्पक्ष्मणोर्नयनयोरुपरुद्धवृत्तिं  बाष्पं कुरु स्थिरतया विहतानुबन्धम् । अस्मिन्नलक्षितनतोन्नतभूमिभागे  मार्गे पदानि खलु ते विषमीभवन्ति ।।* _ಮತ್ತೊಂದು ಭಾವನಾತ್ಮಕ ಶ್ಲೋಕ. ಕಾಶ್ಯಪರ ಎಚ್ಚರಿಕೆಯ ಪ್ರೀತಿಯ ಮಾತು.ಶಕುಂತಲೆ ಗಮನಕ್ಕೆ ಹೆಜ್ಜೆ ಇಡುತ್ತಿದ್ದಾಳೆ.ಶಕುಂತಲೆ- ರೆಪ್ಪೆಗಳನ್ನು ಮೇಲಕ್ಕೆತ್ತಿದ ನಿನ್ನ ಕಣ್ಣುಗಳ ಕಾರ್ಯವನ್ನು ಪ್ರತಿಬಂಧಿಸುತ್ತಿರುವ  ಕಣ್ಣೀರನ್ನು ಗಟ್ಟಿ ಮನಸ್ಸಿನಿಂದ ತಡೆದುಕೋ.ತಗ್ಗು ದಿನ್ನೆಗಳಿರುವ ಈ ಮಾರ್ಗದಲ್ಲಿ ಅವುಗಳನ್ನು ಕಾಣದೇ ನಿನ್ನ ಹೆಜ್ಜೆಗಳು ಎಡವುತ್ತಿವೆ.ಮಗಳಿಗೆ ತಿಳಿಹೇಳುವ ಹೀಗೊಂದು ಬಗೆ ಕಾಳಿದಾಸನ ಅದ್ಭುತ ಶೈಲಿ.ಸರಳ ವಾಕ್ಯ ವಿಶಾಲ ಅರ್ಥ.ಶಕುಂತಲೆ ಆಶ್ರಮದ ಅಗಲುವಿಕೆಯನ್ನು ನೆನೆದು ಅಳುತ್ರಿದ್ದಾಳೆ.ಆಗ ಅಪ್ಪನ ಮಾತು.ಪ್ರಯಾಣದ ಪೂರ್ವದಲ್ಲಿ ಕಣ್ಣೀರು ತರವಲ್ಲ.ಅದನ್ನು ದೃಢ ಮನಸ್ಸಿನಿಂದ ತಡೆದುಕೊ.ಈ ಕಾನನದ ದಾರಿಯಲ್ಲಿ ಸಹಜವಾಗಿ ತಗ್ಗು ಕೆಲವೆಡೆ,ದಿನ್ನೆ ಕೆಲವೆಡೆ ಇದೆ.ಕಣ್ಣೀರುಗೈಯುತ್ತಿದ್ದರೆ ನೀನು ಬೀಳಬಹುದು.ಹೆಜ್ಜೆಗಳು ಎಡವಿ ಜಾರಬಹುದು.ಹಾಗಾಗಿ ಕಣ್ಣೀರನ್ನು ದೃಷ್ಟಿ ಸುಗಮವಾಗಲು ಪ್ರತಿಬಂಧಿಸು.ಅಳು ಅಮಂಗಲ‌,ಹಾಗಾಗಿ ಈಗ ಅಳು ಬೇಡ ಎನ್ನುವ ಭಾವ.ನೀನು ಜೀವನವೆಂಬ ದಾರಿಯನ್ನು ಇನ್ನೂ ತುಂಬಾ ಸವೆಸಲಿಕ್ಕಿದೆ.ಅದರ ಮಧ್ಯದ ಅನೇಕ ಘಟನೆಗಳಲ್ಲಿ ಕಣ್ಣೀರು ಹಾಕದೇ ಮುಂದುವರೆ.ಹಾಗೆ ಮಾಡದಿದ್ದರೆ ತಗ್ಗು ದಿನ್ನ...
ಇಂದಿನ ದೇವಿಯ ರೂಪ ಕೂಷ್ಮಾಂಡಾ ಅಥವಾ ಕೂಷ್ಮಾಂಡಿನೀ.ಶಕ್ತಿಯ ಇನ್ನೊಂದು ರೂಪಧಾರಿ ದೇವಿ.ಸೂರ್ಯನಿಗೆ ಜಗವನ್ನು ಬೆಳಗಲು ಒಡಲೊಳಗೆ ಶಕ್ತಿಯನ್ನು ಕರುಣಿಸುವ ತಾಯಿ.ಕು ಎಂದರೆ ಸಣ್ಣದು,ಶ್ಮಾ ಎಂದರೆ ಶಕ್ತಿ,ಅದನ್ನು ಅಂಡ ರೂಪದಲ್ಲಿ ಲೋಕಕ್ಕೆ ಬಿಡುಗಡೆಗೊಳಿಸುವ ತಾಯಿ.ಸಣ್ಣರೂಪದ ಅಂಡದಿಂದ ದೊಡ್ಡ ಬ್ರಹ್ಮಾಂಡ ಉತ್ಪತ್ತಿಯಾಯಿತು,ಹೀಗೆ ಉತ್ಪತ್ತಿಕಾರಕ ಮಾತೆ ಅವಳು.ಕೂಷ್ಮಾಂಡ ಅಂದರೆ ಕುಂಬಳಕಾಯಿಯ ಬಲಿ ಅವಳಿಗೆ ಪ್ರಿಯವೂ ಹೌದು.ಅಂತಹ ತಾಯಿ ಕೂಷ್ಮಾಂಡದಂತೆ ನಮ್ಮ ಮೈ ಮನಗಳೆರಡನ್ನೂ ಶುದ್ಧವಾಗಿಸಲಿ.ಕುಂಬಳ ಒಳಗೂ ಹೊರಗೂ ಬೆಳ್ಳಗೆ ಇರುವಂತೆ ಕಾಯಾ ವಾಚಾ ಮನಸಾ ಶುದ್ಧಿ, ಭಗವದ್ಭಕ್ತಿ ನಮ್ಮಲ್ಲಿ ಆ ಮಹಾಮಾಯೆ ಉಂಟು ಮಾಡಲೆಂದು ಪ್ರಾರ್ಥಿಸೋಣ. ಶ್ರೀನಿಧಿ ಅಭ್ಯಂಕರ್.
ಅರ್ಧಾಕೃತಿಯ ಚಂದ್ರನನ್ನು ಶಿರದಲ್ಲಿ ಧರಿಸಿದ ದುರ್ಗೆಯ ರೂಪ.ಅದು ಗಂಟೆಯಂತೆ ಕಾಣುವುದರಿಂದ ಅವಳು ಚಂದ್ರಘಂಟಾ ಎಂದೇ ಪ್ರಸಿದ್ಧಳಾಗಿದ್ದಾಳೆ.ಗಂಟೆಯು ಪೂಜೆಗೆ ಅತ್ಯಂತ ಮುಖ್ಯವಾದುದು.ದೇವತೆಗಳ ಆಗಮನ ಅಸುರರ ನಿರ್ಗಮನ ಎರಡೂ ಏಕಕಾಲದಲ್ಲಿ ಗಂಟೆಯ ನಾದದಿಂದಲೇ ನಡೆಯುವುದು.( ಆಗಮಾರ್ಥಂ ತು . . .) ನಮ್ಮ ಮನದ ಕೊಳಕುಗಳನ್ನು ನಿವಾರಿಸಿಕೊಂಡು ಭಕ್ತಿಯನ್ನು ತುಂಬಿಕೊಳ್ಳುವುದರ ಸಂಕೇತ ಈ ಗಂಟೆ.( ಸಂಸ್ಕೃತದಲ್ಲಿ ಘಂಟೆ) ಹಾಗೆ ಭಕ್ತಿತುಂಬಿಕೊಂಡಾಗ  ಚಂದ್ರನ ಬೆಳದಿಂಗಳಿನಂತೆ ನಮಗೆ ಶುಭವನ್ನು ಕರುಣಿಸುತ್ತಾಳೆ ಆ ಮಹಾಮಾತೆ.ಈ ರೂಪ ಅವಳ ಯುದ್ಧಕ್ಕೆ ಹೊರಟ ರೂಪವೂ ಹೌದು.ನಮ್ಮ ಒಳ ಹಾಗೂ ಹೊರಶತ್ರುಗಳನ್ನು ಆ ದೇವಿ ನಾಶಮಾಡಿ ನಮ್ಮ ಪಾಲಿನ ಸುದಿನದ ಆರಂಭದ ಗಂಟೆ ನುಡಿಸಲೆಂದು,ಬಾಳಿನಲ್ಲಿ ಚಿಂತೆಗಳಿಲ್ಲದ ತಂಪನ್ನು ನೀಡಲೆಂದು ಪ್ರಾರ್ಥಿಸೋಣ. ಶ್ರೀನಿಧಿ ಅಭ್ಯಂಕರ್.
🌺ಅವಿಮಾರಕದ ಸುಂದರ ಕುಸುಮ🌺 *यज्ञै: शुभै: हरिसमो भव नित्ययुक्तै: सत्यैर्दृढैर्दशरथप्रतिमो भव त्वम् । नित्यार्पितै: पितृसमो भव सम्प्रदानै: स्वेनात्मना सुसदृशेन पराक्रमेण ।।* _ಅಳಿಯನಾದ ಅವಿಮಾರಕ  ಕುರಂಗಿಯ ತಂದೆ ತನ್ನ ಮಾವ ಕುಂತಿಭೋಜನಿಗೆ ನಮಸ್ಕರಿಸುತ್ತಿದ್ದಾನೆ. ಆಗ ಅವನು ನುಡಿಯುವ ಆಶೀರ್ವಚನ. ನಿತ್ಯವೂ ಯಜ್ಞಗಳನ್ನು ಆಚರಿಸಿ ನೀನೂ ಕೂಡ ಇಂದ್ರನಂತೆ ಶ್ರೇಯಸ್ಸನ್ನು ಪಡೆ.( ಹರಿ ಶಬ್ದಕ್ಕೆ ಇಂದ್ರ ಎಂಬ ಅರ್ಥವೂ ಇದೆ.) ಇಂದ್ರನು ನಾನಾ ಯಜ್ಞಗಳಿಂದ ಆ ಮಹತರವಾದ ಸ್ಥಾನ ಪಡೆದಿರುವನು.ಶತಕ್ರತು ಎಂಬ ಅವನ ಹೆಸರು ನೂರು ಯಾಗ ನಡೆಸಿದವನು ಎಂಬುದನ್ನೇ  ಹೇಳುವುದು.ಯಜ್ಞಗಳಿಂದ ಈ ಲೋಕದಲ್ಲಿ ಅನೇಕರನ್ನು ಅನ್ನ ವಸ್ತ್ರ ಧನ ಕನಕ ಗೋ ಮುಂತಾದ ದಾನಗಳಿಂದ ಸಂತೋಷಪಡಿಸುವುದು.ಹಾಗೆಯೇ ದೇವತೆಗಳ ಪ್ರೀತ್ಯರ್ಥವಾಗಿ ಹವಿಸ್ಸನ್ನು ನೀಡಿ ಅವರನ್ನೂ ತೃಪ್ತಿಪಡಿಸಿ ಕಾಲಕಾಲಕ್ಕೆ ಮಳೆ ಬೆಳೆ ಸಮೃದ್ಧಿ ಉಂಟಾಗುವಂತೆ ಮಾಡುವುದು. ಇಂತಹ ಕರ್ಮಗಳನ್ನು ಆಚರಿಸು ಎಂಬ ಭಾವ.ಸತ್ಯದ ದಾರಿಯಿಂದ ಎಂದಿಗೂ ತಪ್ಪಿ ನಡೆಯಬೇಡ.ಪರಾಕ್ರಮಿಯಾದ ದಶರಥ ಶಾಪದ ಮೂಲಕ ತನ್ನ ಪ್ರಾಣ ಹೋದರೂ ಸರಿ ಎಂದು ನಿಶ್ಚಯಿಸಿ ಮಗನನ್ನು ಕೊಂದೆ ಎಂದು ಸತ್ಯವನ್ನು ಋಷಿಯ ಮುಂದೆ ನುಡಿಯುವನು ಹೊರತು ಸುಳ್ಳನ್ನಲ್ಲ.ಹೀಗೆ ಸತ್ಯಂ ವದ ಎಂಬ ಉಪನಿಷದ್ವಾಣಿ ಮರೆಯದಿರು.ದಿನವೂ ಪ್ರಜೆಗಳ ಅಪೇಕ್ಷೆಯಂತೆ ಬೊಕ್ಕಸದ ಧನವನ್ನು ಉಪಯೋಗಿಸಿ ತಂದೆ ಸೌವೀರರಾಜನಂತೆ ...
ಬ್ರಹ್ಮಣಿ = ವೇದೇ ,ಚರತೀತಿ = ಸ್ತುತಿರೂಪೇಣ ವರ್ತತೇ ಎಂಬಂತೆ ವೇದಗಳಲ್ಲಿ ಸ್ತುತಿಸಲ್ಪಟ್ಟವಳು  ದುರ್ಗೆ.ಅಥವಾ ವೇದಗಳ ಸಾರವೇ ಅವಳು.ನವರಾತ್ರಿಯ ಎರಡನೇ ದಿನದ ದುರ್ಗೆಯ ರೂಪ ವೇದಪ್ರತಿಪಾದ್ಯ ದೇವಿಯ ರೂಪ.ಇನ್ನೊಂದು ಅರ್ಥ= ಬ್ರಹ್ಮಚರ್ಯ ವ್ರತದಲ್ಲೇ ಇರುವವಳು.ಅಂದರೆ ಗುಣಗಳ ನಿಯಂತ್ರಣ ಹೊಂದಿದವಳು.ಬ್ರಹ್ಮಚಾರಿಣಿ ಸ್ತ್ರೀ ಉತ್ತಮ ಪತ್ನಿ ಎಂಬ ಮನುವಿನ ಮಾತಿನಂತೆ ಸ್ತ್ರೀಯರಿಗೆಲ್ಲ ಆಕೆ ಆದರ್ಶಳು.(೫ಅಧ್ಯಾಯ ).ಕ್ರೋಧ ದುಷ್ಟರ ನಿಗ್ರಹ ಕಾಲದಲ್ಲಿ ಮಾತ್ರ.ವೇದಗಳಲ್ಲಿ ನಾನಾ ಮಂತ್ರಗಳಿಂದ ಸ್ತುತಿಸಲ್ಪಟ್ಟ ಆ ದೇವಿ ನಮಗೆ ವೇದ ಅಂದರೆ ಪರಮಾರ್ಥ ಸತ್ಯದ ಜ್ಞಾನ ತಂದುಕೊಡಲಿ.ವಸಿಷ್ಟರು ವಿವಾಹಿತರಾಗಿದ್ದರೂ  ತನ್ನ ಕರ್ಮಗಳನ್ನೆಲ್ಲ ಭಗವಂತನಿಗೆ ಅರ್ಪಿಸಿ ಬ್ರಹ್ಮಚಾರಿ,ನಿತ್ಯೋಪವಾಸಿಗಳಾಗಿದ್ದರಂತೆ.ಹಾಗೆ ಬ್ರಹ್ಮಚರ್ಯದ  ಅಂದರೆ ದೇವರೆಡೆಗೆ ಸದಾ ತುಡಿಯುವ ಮನ ನಮ್ಮದಾಗಲಿ. ಅಂತಹ ಪ್ರೇರಣೆ ಬ್ರಹ್ಮಚಾರಿಣಿ ಆ ಮಾತೆ ನಮ್ಮೆಲ್ಲರಿಗೂ ನೀಡಲಿ. ಶ್ರೀನಿಧಿ ಅಭ್ಯಂಕರ್.
ಶೈಲ =ಶಿಲೆಯಿಂದ ಉಂಟಾದ ಪರ್ವತ.ಪರ್ವತರಾಜನ ಮಗಳು. ಪಾರ್ವತಿ.ಅವಳೇ ಶೈಲಪುತ್ರೀ.ದೇವಿಯ ಸೌಮ್ಯರೂಪ.ಪರ್ವತದಂತೆ ಮಳೆಗಾಳಿಗೆ ಜಗ್ಗದೆ ಕುಗ್ಗದೆ ತಪವನ್ನಾಚರಿಸಿ ಶಿವನನ್ನು ಪಡೆದವಳು ಆಕೆ.ನಾವು ಶಿವ ಅಂದರೆ ಮಂಗಳವನ್ನು ಹೊಂದಲು ತಪಸ್ಸು ಮಾಡಬೇಕು.ಹೊರಗಿನ ನಿಂದೆ ಅವಮಾನ ಸೋಲು ದು:ಖ ಇಷ್ಟರ ಸಾವು ಮುಂತಾದವುಗಳಿಗೆ ಕುಗ್ಗದೆ ಜಗ್ಗದೆ ಮಂಗಳ ನಮ್ಮ ಜೀವನದಲ್ಲಿ ಪಡೆಯೋಣ ಎಂಬ ಪ್ರಾರ್ಥನೆ ಆ ದೇವಿಯಲ್ಲಿ.ನಮ್ಮ ನಿಮ್ಮೆಲ್ಲರಿಗೂ ದೇವಿ ಜೀವನವೆಂಬ ಕತ್ತಲೆಗೆ ದೀವಿಗೆಯಾಗಲಿ. 👏ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಒಂದು ಮಧುರ ಶ್ಲೋಕ🌹 *उद्गलिदर्भकवला मृग्य: परित्यक्तनर्तना मयूरा: । अपसृतपाण्डुपत्रा मुञ्चन्त्यश्रूणीव लता: ।।* _ತಪೋವನವನ್ನು ಬಿಡಲು ಶಕುಂತಲೆಗೆ ಮನಸ್ಸೇ ಬರುತ್ತಿಲ್ಲ.ಅವಳಂತೆಯೇ ಆಶ್ರಮದ ಪ್ರಾಣಿಗಳ ಪರಿಸ್ಥಿತಿಯೂ ಆಗಿದೆ. ಅದನ್ನೇ ಪ್ರಿಯಂವದೆ ವ್ಯಕ್ತಪಡಿಸುತ್ತಿರುವಳು. ಜಿಂಕೆಗಳ ಬಾಯಿಯಿಂದ ದರ್ಭೆಯ ತುತ್ತುಗಳು ಕೆಳಗುದುರುತ್ತಿವೆ.ಅವು ತಿನ್ನುವುದನ್ನು ಮರೆತು ಶಕುಂತಲೆ ಹೊರಟುಹೋಗುವಳು ನಮಗಿನ್ಯಾರು ತುತ್ತು ಕೊಡುವರೆಂದು ದು:ಖಿಸುತ್ತಿವೆ. ಸಂತೋಷದಿಂದ ಆಶ್ರಮದ ಪರಿಸರದಲ್ಲಿ ನಲಿಯುತ್ತಿದ್ದ ಮಯೂರಗಳು ತಮ್ಮ ನರ್ತನವನ್ನು ನಿಲ್ಲಿಸಿ ಕ್ಲೇಶಪಡುತ್ತಿವೆ.ಬಳ್ಳಿಗಳು ಉದುರುವ ಎಲೆಗಳಿಂದ ಕಣ್ಣೀರು ಸುರಿಸುತ್ತಿರುವಂತೆ  ಕಾಣುತ್ತಿವೆ.ಹೀಗೆ ಗಿಡ ಮರಗಳು, ಪ್ರಾಣಿ ಪಕ್ಷಿಗಳ ದು:ಖದಲ್ಲಿನ ಸಹಭಾಗಿತ್ವ ಕವಿಯ ಮಾತಿನಲ್ಲಿ ಕಂಡುಬರುತ್ತಿದೆ.ದಿನವೂ ಶಕುಂತಲೆ ಗಿಡಮರಗಳಿಗೆ ನೀರುಣಿಸುತ್ತಿದ್ದಳು.ಈಗ ಅವಳ ವಿರಹ ಅವುಗಳನ್ನು ಬಾಧಿಸುತ್ತಿದೆ.ನವಿಲು ಹಾಗೂ ಜಿಂಕೆಗಳಿಗೆ ಎಳೆ ಹುಲ್ಲಿನ ತುತ್ತನ್ನು ನೀಡಿ ಮುದ್ದಿಸುತ್ತಿದ್ದಳು. ಇನ್ನು ಆ ಪ್ರೇಮಸ್ಪರ್ಶ ಆರೈಕೆ ತಪ್ಪಿಹೋಗುವುದಲ್ಲ ಎಂಬ ಚಿಂತೆ ಅವುಗಳಿಗೆ.ಹೀಗಾಗಿಯೇ ತಮ್ಮ ಕಾರ್ಯ ಬಿಟ್ಟು ಚಿತ್ರದಂತೆ ಸ್ತಬ್ಧವಾಗಿವೆ.ಉತ್ಪ್ರೇಕ್ಷಾ ಅಲಂಕಾರ.ಎಲೆಗಳು ಉದುರುವುದು ಬಳ್ಳಿಯ ಸಹಜತೆ ಕವಿ ಅದನ್ನೂ ಶಕುಂತಲೆಯ ಪ್ರಯಾಣದ ದು:ಖದಿಂದ ಮಾಡುತ್ತಿರುವ ಕ್ರಿಯೆಯೆಂಬಂತೆ ...