ಧರ್ಮಾಚರಣೆ-೯೧
ಧರ್ಮಾಚರಣೆ-೯೧
ಸಂಧ್ಯಾ ಪ್ರಾಕ್ಪ್ರಾತರೇವಂ ಹಿ ತಿಷ್ಠೇದಾಸೂರ್ಯದರ್ಶನಾತ್ | ಅಗ್ನಿಕಾರ್ಯಂ ತತಃ ಕುರ್ಯಾತ್ಸಂಧ್ಯಯೋರುಭಯೋರಪಿ || ಯಾಜ್ಞವಲ್ಕ್ಯ ಸ್ಮೃತಿ||
ಮುಂಜಾನೆಯ ಸಂಧ್ಯಾವಂದನೆಯು ಸೂರ್ಯೋದಯದ ತನಕ ಮುಂದುವರೆಯಬೇಕು. ಅನಂತರ ಅಗ್ನಿಕಾರ್ಯ/ ಔಪಾಸನೆ/ ವೈಶ್ವದೇವಗಳನ್ನು ಮಾಡಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಅಜಪಾ ಜಪ ಮಾಡುತ್ತಾ ದೇಹಶುದ್ಧಿ ಮಾಡಿಕೊಂಡು ಗಾಯತ್ರೀ ಜಪಿಸುತ್ತಾ ಇರಬೇಕು. ಸೂರ್ಯೋದಯಕ್ಕೆ ಸರಿಯಾಗಿ ಅರ್ಘ್ಯ ಕೊಟ್ಟು ಅಗ್ನಿ ಆರಾಧನೆ ಮುಂದುವರೆಸಬೇಕು ಎನ್ನುತ್ತದೆ ಶಾಸ್ತ್ರ. ತಡವಾಗಿ ಕೊಟ್ಟರೆ ಹೇಗೆ ಪ್ರಯೋಜನ ಇಲ್ಲವೋ ಅಂತೆಯೇ ನಮ್ಮ ಅನುಕೂಲಕ್ಕೆಂದು ಬ್ರಹ್ಮಕಲಶ/ ಮಹಾಯಾಗ/ ನಿತ್ಯ ಹೋಮಹವನಗಳಿಗೆಂದು ಸೂರ್ಯನ ಉದಯದ ಮುಂಚೆಯೇ ಸಂಧ್ಯಾವಂದನೆ, ವೈಶ್ವದೇವ, ಯಜ್ಞ ಯಾಗಾದಿಗಳನ್ನು ಮಾಡಿದರೆ ಅದು ವ್ಯರ್ಥ. ಜನರು ಬರುವ ಮುಂಚೆಯೇ ಊಟ ಬಡಿಸಿ ಗುಡಿಸಿದಂತೆ ಆಗುತ್ತದೆ. ದೇವತೆಗಳ ಆಗಮನ ಸೂರ್ಯೋದಯದ ನಂತರ. ಅದಕ್ಕೆ ಪೂರ್ವದಲ್ಲಿ ವೇದೋಕ್ತ ಕರ್ಮಗಳನ್ನು ಪ್ರಾರಂಭ ಮಾಡಲು ಶಾಸ್ತ್ರೀಯ ಸಮ್ಮತಿ ಇಲ್ಲ. ನಮಗಾದರೂ ಅಷ್ಟೇ ಸಮಯಕ್ಕೆ ಸರಿಯಾಗಿ ದೊರೆತ ಆಹಾರವು, ಗೌರವವು ಸ್ವೀಕೃತವಾಗುತ್ತದೆ. ಇಲ್ಲದಿದ್ದರೆ ಅಸಮಾಧಾನ, ಶಾಪಕ್ಕೆ ಕಾರಣವಾಗುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ