ಧರ್ಮಾಚರಣೆ-೮೦
ಧರ್ಮಾಚರಣೆ-೮೦
ದೇಶಕಾಲ ಉಪಾಯೇನ ದ್ರವ್ಯಂ ಶ್ರದ್ಧಾ ಸಮನ್ವಿತಮ್ | ಪಾತ್ರೇ ಪ್ರದೀಯತೇ ಯತ್ತತ್ಸಕಲಂ ಧರ್ಮಲಕ್ಷಣಮ್ || ಯಾಜ್ಞವಲ್ಕ್ಯ ಸ್ಮೃತಿ||
ತೀರ್ಥಕ್ಷೇತ್ರ- ತುಳಸಿ ಸಮೀಪ- ಮಹಾನದಿಗಳ ಸಂಗಮ ಮೊದಲಾದ ಶ್ರೇಷ್ಠ ಪ್ರದೇಶಗಳು, ಗ್ರಹಣ-ಸಂಕ್ರಾಂತಿ- ವ್ಯತೀಪಾತ ವೈಧೃತಿ ಮೊದಲಾದ ಯೋಗಗಳಿರುವ ಕಾಲದಲ್ಲಿ ನಮ್ಮಲ್ಲಿರುವ ಅಲ್ಪವಿರಲಿ ಮಹತ್ತಾಗಿರಲಿ ದ್ರವ್ಯವನ್ನು ( ಧನ, ವಸ್ತ್ರ, ವಾಹನ, ಸುವರ್ಣ) ಶ್ರದ್ಧೆಯಿಂದ ಅತ್ಯಂತ ಪಾತ್ರನಾದ ವ್ಯಕ್ತಿಗೆ ಕೊಡುವುದು ಧರ್ಮದ ದೊಡ್ಡ ಲಕ್ಷಣವಾಗಿದೆ. ಬೇರೆಲ್ಲಾ ಬಗೆಯ ಜನರು ಸಿಕ್ಕಿದರೂ ದಾತಾ ಭವತಿ ವಾ ನ ವಾ ಎಂದಿದೆ ಶಾಸ್ತ್ರ. ಯೋಗ್ಯ ವ್ಯಕ್ತಿಗಳನ್ನು ಹುಡುಕಿ ಕಾಲ- ದೇಶಗಳನ್ನು ನಿರ್ಣಯಿಸಿ ದಾನ ಮಾಡುವುದು ಅತ್ಯಂತ ಶ್ರೇಯಸ್ಕರ. ನೀರು ಬೇಕಾದವನಿಗೆ ಧನ ಸಹಾಯವಲ್ಲ, ಗುಟುಕು ನೀರನ್ನೇ ಕೊಡಬೇಕು. ಪಾತ್ರರಲ್ಲದವರಿಗೆ ಮಾಡಿದ ದಾನ ವಂಚಕ ಕಂಪನಿಗಳಿಗೆ ಅಡವಿಟ್ಟಂತೆಯೇ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ