ಧರ್ಮಾಚರಣೆ ೧೦೯

ಧರ್ಮಾಚರಣೆ=೧೦೯

ದೇವೇಭ್ಯಶ್ಚ ಹುತಾದನ್ನಾಚ್ಛೇಷಾದ್ಭೂತಬಲಿಂ ಹರೇತ್ | ಅನ್ನಂ ಭೂಮೌ ಶ್ವಚಾಂಡಾಲವಾಯಸೇಭ್ಯಶ್ಚ ನಿಕ್ಷಿಪೇತ್ || ಯಾಜ್ಞವಲ್ಕ್ಯ ಸ್ಮೃತಿ|| 

ಎರಡೂ ಹೊತ್ತು ಅಶಕ್ತನಾದರೆ ಗೃಹಸ್ಥನು ಒಂದು ಹೊತ್ತಾದರೂ  ವೈಶ್ವದೇವ ಮಾಡಬೇಕು. ಯಾವ ಬೆಂಕಿಯಲ್ಲಿ ಅನ್ನವನ್ನು ಬೇಯಿಸುವೆವೋ ಅದೇ ಅಗ್ನಿಯಲ್ಲಿ ವೈಶ್ವದೇವ ಮಾಡಬೇಕು. ಒಲೆ ಅಥವಾ ಅಗ್ಗಿಷ್ಟಿಕೆಯಲ್ಲಿ ಅನ್ನ ಮಾಡಿದರೆ ಮಾತ್ರ ಇದು ಆಗುವಂತಹದು. ವೈಶ್ವದೇವಕ್ಕೆಂದು ತೆಗೆದು ಅನಂತರ ಅನ್ನವನ್ನು ಮತ್ತೆ ಮೂರು ಪಾಲು ಮಾಡಿ ಒಂದು  ಪಾಲು ಭೂತಗಳಿಗೆ ಬಲಿಯೆಂದೂ, ಎರಡನೇ ಪಾಲನ್ನು ಶ್ವಾನ ಮೊದಲಾದವುಗಳಿಗೆ ಬಲಿಯೆಂದೂ, ಮತ್ತೊಂದು ಪಾಲನ್ನೂ ಪಿತೃಪ್ರೀತ್ಯರ್ಥ ನೀಡಿ ಅತಿಥಿ ಬರುವರೆಂದು ಕ್ಷಣಕಾಲ ಕಾದು ಅನಂತರ ಭುಂಜಿಸಬೇಕು. ಹೀಗೆ ಮಾಡಿದರೆ ಅದೇ ಯಜ್ಞವಾಗುವುದು. ಅಶ್ವಮೇಧಾದಿ ಮಹಾಯಜ್ಞಗಳ ಫಲವನ್ನೂ ಕೊಡುತ್ತದೆ. ವರ್ಷಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನಮ್ಮ ಜಿಹ್ವಾಚಾಪಲ್ಯ ತೀರಿಸುವಂತೆ ಇವುಗಳನ್ನೂ ಮಾಡುವುದು ಶ್ರೇಯಸ್ಕರ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩