ಧರ್ಮಾಚರಣೆ ೧೧೩

ಧರ್ಮಾಚರಣೆ-೧೧೩

ಪರಪಾಕರುಚಿರ್ನಸ್ಯಾದನಿಂದ್ಯಾಮಂತ್ರಣಾದೃತೇ | ವಾಕ್ಪಾಣಿಪಾದಚಾಪಲ್ಯಂ ವರ್ಜಯೇಚ್ಚಾತಿಭೋಜನಮ್ || ಯಾಜ್ಞವಲ್ಕ್ಯ ಸ್ಮೃತಿ|| 

ಇನ್ನೊಬ್ಬರ ಮನೆಯಲ್ಲಿ ಅಥವಾ ಕಾರ್ಯಕ್ರಮದಲ್ಲಿ ಭೋಜನ ಮಾಡುವುದಕ್ಕೆ ಭಕ್ಷ್ಯಗಳಿಗಾಗಿ ಆಸೆಪಡಬಾರದು. ಆದರೆ ಅನಿಂದ್ಯನ ಅಂದರೆ ಸದಾಚಾರ-ಸದ್ವಿಚಾರಗಳಿಂದ ಕೂಡಿದವನ ಆಮಂತ್ರಣ ಬಂದರೆ ಸ್ವೀಕರಿಸಬೇಕು. ಊಟದ  ಸಮಯದಲ್ಲಿ ಮಾತಿನ ಚಾಪಲ್ಯ ಅಂದರೆ ಅಸತ್ಯ ಹಾಗೂ ಅಸಭ್ಯ ಭಾಷಣ ಇವುಗಳನ್ನು ತ್ಯಜಿಸಬೇಕು. ಹಸ್ತಚಾಪಲ್ಯ ಅಂದರೆ ಕೈ ತೋರಿಸುವುದು, ಹೊಡೆಯುವುದು, ಮಂಡಿಗಳ ಮೇಲೆ ಹೊಡೆಯುವುದು ಮೊದಲಾದವನ್ನು ಬಿಡಬೇಕು. ಪಾದಚಾಪಲ್ಯ ಅಂದರೆ ಕಾಲು ಕುಣಿಸುವುದು, ಹಿರಿಯರ ಎದುರು ಚಾಚುವುದು, ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಇತ್ಯಾದಿ ತ್ಯಜಿಸಬೇಕು. ಕಷ್ಟವಾದರೂ ಒಂದೊಂದಾಗಿ ರೂಢಿಸಿಕೊಂಡರೆ ಶ್ರೇಯಸ್ಸಂಪಾದನೆ ಉಂಟಾಗುತ್ತದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩