ಪದಶಕ್ತಿ ೩೧
🏹*ಪದಶಕ್ತಿ* ---೩೧🌄 *ವಾಸವಃ* _ಇಂದ್ರನ ಹೆಸರು. ವಸುಗಳು ಅಂದರೆ ದೇವತೆಗಳು. ದೇವತೆಗಳ ಒಡೆಯ ಅಥವಾ ದೇವಪಕ್ಷದವನು ಇಂದ್ರ. ವಸು ಶಬ್ದಕ್ಕೆ ಮತ್ತೊಂದು ಅರ್ಥ ಸಂಪತ್ತು. ಹೆಚ್ಚಿನ ಸಂಪತ್ತು ಹೊಂದಿರುವವನು ಇಂದ್ರ, ಹಾಗಾಗಿ ವಾಸವ. ವಸುಗಳ ಪುತ್ರ ಎಂಬರ್ಥದಲ್ಲೂ ವಾಸವ. ದೈತ್ಯರ ವಾಸವನ್ನು ಅಥವಾ ಅವರ ಆವಾಸವನ್ನು ನಾಶಮಾಡುವನು ಎಂಬರ್ಥದಲ್ಲೂ ಇಂದ್ರನು ವಾಸವ. ಹೀಗೆ ವಾಸವ ಶಬ್ದಕ್ಕೆ ತುಂಬಾ ಅರ್ಥಗಳಿವೆ. ಬೆಂಗಳೂರು ಕಡೆ ವಾಸವಿ ಕನ್ನಿಕಾ ಎಂಬ ಶಬ್ದದ ಪ್ರಯೋಗ ಇದೆ. ಅಲ್ಲಿ ಇಂದ್ರನ ಮಗಳು ವಾಸವಿ ಎನ್ನಬಹುದು ಅಥವಾ ವಸುಪುತ್ರಿ ವಾಸವಿ ಎನ್ನಬಹುದು. ದೇವಪುತ್ರಿ ಎಂಬ ಅರ್ಥದಲ್ಲಿ, ಅಂತೆಯೇ ವ್ಯಾಸರ ತಾಯಿ ಮತ್ಸ್ಯಗಂಧಿಗೂ ವಾಸವಿ ಎಂಬ ಹೆಸರಿದೆ._ ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಕಡೆ ಈ ಹೆಸರನ್ನು ಕಾಣಬಹುದು. ಮಹಾಭಾರತದ ವನಪರ್ವದ ಈ ಶ್ಲೋಕದಲ್ಲಿ ಅರ್ಜುನನು ಇಂದ್ರನ ಆಸನವನ್ನು ಅರ್ಧ ಅಲಂಕರಿಸಿದಾಗ ಎರಡನೆಯ ಇಂದ್ರನಂತೆ ಶೋಭಿಸಿದನು ಎಂದಿದೆ. *सहस्राक्षनियोगात् स पार्थः शक्रासनं गतः । अध्यक्रामदमेयात्मा द्वितीय इव वासवः ॥* ಕನ್ನಡ ಸಾಹಿತ್ಯದಲ್ಲಿ ಕೆಲವೆಡೆ ಕಾಣಬಹುದು. *ಕಮಲಸಂಭವವಿನುತ ವಾಸವ ನಮಿತ ಮಂಗಳಚರಣ* ಕನಕದಾಸರ ಈ ಕೀರ್ತನೆಯಲ್ಲಿ ಇಂದ್ರನಿಂದ ನಮಿಸಲ್ಪಟ್ಟ ಎಂಬ ಅರ್ಥದಲ್ಲಿ ವಿಷ್ಣುವನ್ನು ಸ್ತುತಿಸಿದ್ದಾರೆ. ಇಂತಹ ವಾಸವ ನಮ್ಮನ್ನು ವಸುಗಳನ್ನಿತ್ತು ಪೊರೆಯಲೆಂದು ಪ್ರಾರ್ಥಿಸೋಣ.🙏 ಸಂಗ್ರಹ: ಶ್ರೀನಿಧಿ ಅಭ್ಯಂಕ...