ಪದಶಕ್ತಿ ೪೦

🏹*ಪದಶಕ್ತಿ* ---೪೦🌄

*ಔರ್ವ*

_ಸಮುದ್ರದಲ್ಲಿ ಅಡಗಿರುವ ಬೆಂಕಿಯ ಹೆಸರು. ಉರ್ವನಿಂದ ಹುಟ್ಟಿದ್ದು ಅಥವಾ ಉರ್ವನ ಮಗ. ಚ್ಯವನ ಮುನಿಗೆ ಮನುವಿನ ಮಗಳಾದ ಆರುಷಿಯಲ್ಲಿ ಜನಿಸಿದವನು ಉರ್ವ ಅಥವಾ ಊರ್ವ. ಭೃಗು ಗೋತ್ರದವರು ಅತ್ಯಂತ ಕೋಪಿಷ್ಠರೆಂಬುದು ಪ್ರಸಿದ್ಧ ವಿಷಯ. ತನ್ನ ಕೋಪವನ್ನೇ ಸಮುದ್ರದಲ್ಲಿ ಅಡಗಿಸಿದ ಇವನು ನಿಜಕ್ಕೂ ಅದ್ಭುತ ವ್ಯಕ್ತಿ._

_ಗಂಡಸರನ್ನು ಕ್ಷತ್ರಿಯರು ಹುಡುಕಿ ಹುಡುಕಿ ಕೊಲ್ಲಲು ತಾಯಿಯ ತೊಡೆಯಿಂದ ಹುಟ್ಟಿದ ಕಾರಣ ಇವನಿಗೆ ಊರುಜ ಅಥವಾ ಉರ್ವ ಎಂಬ ಹೆಸರು ಬಂತು. ಇವನು ಲೋಕವನ್ನು ನಾಶಮಾಡುವ ಇಚ್ಛೆಯಿಂದ ಭಯಂಕರ ತಪಸ್ಸಿನಲ್ಲಿ ತೊಡಗುತ್ತಾನೆ. ಆಗ ಅವನ ಪಿತೃಗಳು ಪ್ರತ್ಯಕ್ಷರಾಗಿ ಈ ಕೋಪವನ್ನು ಬಿಡುವಂತೆ ಆದೇಶಿಸುತ್ತಾರೆ. ಅವನು ಬಿಡಲು ಇಚ್ಛಿಸಿದರೂ ನನ್ನ ಸ್ವರೂಪವೇ ಆಗಿರುವ ಈ ಕೋಪವನ್ನು ಬಿಡುವುದಾದರೂ ಹೇಗೆಂದು ಅವರನ್ನೇ ಪ್ರಶ್ನಿಸಿದಾಗ ಸಮುದ್ರವು ಇಂತಹ ಬೆಂಕಿಯಂತಹ ಕೋಪವನ್ನು ತನ್ನೊಳಗೆ ಸೇರಿಸಿಕೊಂಡು ತಣಿಸಬಲ್ಲದು ಹಾಗಾಗಿ ಅದರಲ್ಲಿ ಇಡು ಎಂದಾಗ ಅವರ ಮಾತಿನಂತೆ ತಾನು ಲೋಕನಾಶಕ್ಕೆಂದು ತಪದ ಮೂಲಕ ಸಂಪಾದಿಸಿದ ಕೋಪವನ್ನು ಸಾಗರದಲ್ಲಿ ಇಟ್ಟನು. ಹೀಗೆ ನೀರಲ್ಲೂ ಬೆಂಕಿ ಉಂಟಾಯಿತು._

_ಜಮದಗ್ನಿ ಮತ್ತು ವತ್ಸ ಗೋತ್ರದವರ ಪ್ರವರದಲ್ಲೂ ಈ ಔರ್ವನು ಸೇರಿದ್ದಾನೆ._

ಸಂಸ್ಕೃತ ಸಾಹಿತ್ಯದ ಮೇರುಕೃತಿಯಾದ  ಭಾಗವತದಲ್ಲಿ ಇವನ ಉಲ್ಲೇಖ ಇದೆ. 
*तापत्यमथ- वासिष्ठमौर्वं चाख्यानमुत्तमम्”* ಇವನ ಆಖ್ಯಾನವು ಪುಣ್ಯದಾಯಕ ಎಂದಿದೆ. 

_ನಮ್ಮ ಕೋಪ ಔರ್ವನ ಕೋಪದಂತೆ ಬೆಳೆಯದೆ ಮೊದಲೇ ತಣಿಯಲೆಂದು ಆಶಿಸೋಣ._

ತಪ್ಪುಗಳಿದ್ದರೆ ತಿದ್ದಿ.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩