ಧರ್ಮಾಚರಣೆ-೮೭

ಧರ್ಮಾಚರಣೆ-೮೭

ಕೃತಜ್ಞಾದ್ರೋಹಿಮೇಧಾವಿ ಶುಚಿಕಲ್ಯಾನಸೂಯಕಾಃ | ಅಧ್ಯಾಪ್ಯಾ ಧರ್ಮತಃ ಸಾಧುಶಕ್ತಾಪ್ತಜ್ಞಾನವಿತ್ತದಾಃ || ಯಾಜ್ಞವಲ್ಕ್ಯ ಸ್ಮೃತಿ||

ಮಾಡಿದ್ದನ್ನು ನೆನಪಿಟ್ಟುಕೊಳ್ಳುವ ಕೃತಜ್ಞರಿಗೆ, ದ್ರೋಹ ಮಾಡದವರಿಗೆ, ಪಾಠ ಮಾಡಿದ್ದನ್ನು ಗ್ರಹಿಸುವ ಸಾಮರ್ಥ್ಯ ಇದ್ದವರಿಗೆ, ದೈಹಿಕ- ಮಾನಸಿಕ ಶುದ್ಧತೆ ಕಾಪಾಡಿಕೊಂಡವರಿಗೆ, ಸಮರ್ಥರಿಗೆ, ಅಸೂಯೆ ಪಡದೇ ಇದ್ದವರಿಗೆ, ಆಚಾರಸಂಪನ್ನರಿಗೆ, ಗುರುಗಳು ಬಯಸಿದಾಗ ಏನಾದರೂ ಕಾರ್ಯ ಮಾಡಲು ಆಸಕ್ತಿ ಇದ್ದವರಿಗೆ, ತನ್ನಲ್ಲಿರುವ ವಿದ್ಯೆ ಅಥವಾ ಧನವನ್ನು ಇನ್ನೊಬ್ಬರಿಗೆ ದಾನ ಮಾಡುವ ಉದಾರ ಬುದ್ಧಿಯ ವ್ಯಕ್ತಿಗಳಿಗೆ ಅಂತಹ ಶಿಷ್ಯ/ಶಿಷ್ಯೆಯರಿಗೆ ಮಾತ್ರ ವಿದ್ಯಾದಾನ ಮಾಡಬೇಕು. ಗುರುಗಳ ನೆನಪೇ ಇಲ್ಲದವರಿಗೆ, ಗುರುಗಳಿಗೇ ವಂಚನೆ ಎಸಗುವವರಿಗೆ, ಏನು ಪಾಠ ಮಾಡಿದರೂ ತಲೆಗೆ ಹತ್ತದವರಿಗೆ, ಕಾಯಾ-ವಾಚಾ- ಮನಸಾ ಭೇದ ಇರುವವರಿಗೆ, ಮಾನಸಿಕ ಅಸಮರ್ಥರಿಗೆ, ಮತ್ಸರಿಗಳಿಗೆ, ಯಾರಿಗೂ ಸಹಾಯ ಮಾಡುವ ಮನಸ್ಸಿಲ್ಲದ ಸ್ವಾರ್ಥಿಗಳಿಗೆ ಎಂದಿಗೂ ಪವಿತ್ರವಾದ ಜ್ಞಾನ ನೀಡಬಾರದು. ಅಂತಹವರಿಗೆ ನೀಡಿದ ವಿದ್ಯೆಯು ಸಮಾಜದಲ್ಲಿ ಭಯೋತ್ಪಾದಕ-ವಂಚಕ-ದ್ರೋಹಿ-ಕಟುಕರನ್ನು ಸೃಷ್ಟಿಸೀತು.ಅದು ನಮ್ಮ ಮಕ್ಕಳಿರಲಿ ಬೇರೆಯವರ ಮಕ್ಕಳಿರಲಿ ವಿದ್ಯೆಯನ್ನು ಯೋಗ್ಯ ವ್ಯಕ್ತಿಗೆ ಮಾತ್ರ ಧಾರೆ ಎರೆಯಬೇಕು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩