ಧರ್ಮಾಚರಣೆ ೯೮
ಧರ್ಮಾಚರಣೆ-೯೮
ತೇತೃಪ್ತಾಸ್ತರ್ಪಯಂತ್ಯೇನಂ ಸರ್ವಕಾಮಫಲೈಃ ಶುಭೈಃ| ಯಂ ಯಂ ಕ್ರತುಮಧೀತೇಸೌ ತಸ್ಯ ತಸ್ಯಾಪ್ನುಯಾತ್ಫಲಮ್ || ಯಾಜ್ಞವಲ್ಕ್ಯ ಸ್ಮೃತಿ ||
ನಿತ್ಯವೂ ವೇದಾಧ್ಯಯನ ಮಾಡುವ ವ್ಯಕ್ತಿಗೆ ಇಚ್ಛಿಸಿದ ಫಲವನ್ನು ದೇವತೆಗಳು ಕೊಡುತ್ತಾರೆ. ಅಂತೆಯೇ ಅಶ್ವಮೇಧ, ರಾಜಸೂಯ, ಇಷ್ಟಿಗಳು ಮೊದಲಾದ ಯಜ್ಞಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಪಾರಾಯಣ ಮಾಡಿದರೆ ಆಯಾ ಯಜ್ಞಗಳ ಫಲವನ್ನು ಭಗವಂತನು ಕರುಣಿಸುತ್ತಾನೆ. ಇದೇ ಕಾರಣದಿಂದ ಕೆಲವು ಶ್ರದ್ಧಾಳುಗಳು ವೇದವಿದರ ಬಳಿಯಲ್ಲಿ ಇಂತಹ ಮಂತ್ರ ಪಾರಾಯಣ ಮಾಡಿಸುತ್ತಾರೆ. ಸನಾತನ ಧರ್ಮ ಎಷ್ಟು ಕರ್ಮಠತೆಯನ್ನು ಪ್ರತಿಪಾದಿಸುತ್ತದೋ ಅಷ್ಟೇ ನಮ್ಯತೆಯನ್ನೂ ಹೊಂದಿದೆ. ಯಜ್ಞ ಮಾಡಿದರೂ ಫಲ, ಮಾಡದೇ ಮಂತ್ರ ಹೇಳಿದರೂ ಫಲ. ಪೂಜೆ ಮಾಡಿದರೂ ಫಲ- ಧ್ಯಾನಿಸಿದರೂ ಫಲ. ಭಗವತ್ಪ್ರೀತ್ಯರ್ಥಕವಾಗಿ ಮಾಡುವ ನಮ್ಮ ಪ್ರತಿಯೊಂದು ಕರ್ಮಕ್ಕೂ ಫಲ. ಅವರವರ ಭಾವನೆಗೆ ಬೇಕಾದಂತೆ ಸಾಕಷ್ಟು ಅವಕಾಶವನ್ನು ಆರಾಧನೆಗೆ ಒದಗಿಸಿದ ವಿಶ್ವಕುಟುಂಬಿ ಧರ್ಮವೆನ್ನುವ ಹೆಮ್ಮೆ ನಮ್ಮೆಲ್ಲರದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ