ಧರ್ಮಾಚರಣೆ-೮೩

ಧರ್ಮಾಚರಣೆ-೮೩

ಚತ್ವಾರೋ ವೇದಧರ್ಮಜ್ಞಾಃ ಪರ್ಷತ್ರೈವಿದ್ಯಮೇವ ವಾ| ಸಾಬ್ರೂತೇ ಯಂ ಸ ಧರ್ಮಃ ಸ್ಯಾದೇಕೋ ವಾಧ್ಯಾತ್ಮವಿತ್ತಮಃ || ಯಾಜ್ಞವಲ್ಕ್ಯ ಸ್ಮೃತಿ||

ನಾಲ್ಕು ಜನ ವೇದಜ್ಞರು ಅಂದರೆ ವೇದದ ಸಾರವನ್ನು ಬಲ್ಲ ವಿದ್ವಾಂಸರು ಒಂದು ಪರಿಷತ್ ಎಂದು ಕರೆಸಿಕೊಳ್ಳುತ್ತಾರೆ. ಮೂರು ಜನ ಅಂತಹ ಜ್ಞಾನಿಗಳು ಸೇರಿದರೂ ಅದೂ ಕೂಡ ಪರಿಷತ್ ಎಂದೇ ಕರೆಸಲ್ಪಡುವುದು. ಆತ್ಮ- ಪರಮಾತ್ಮನ ಬಗ್ಗೆ ಅರಿವಿರುವ ಅಧ್ಯಾತ್ಮಜ್ಞಾನಿ ಒಬ್ಬನಿದ್ದರೂ ಅವನೇ ಪರಿಷತ್ ಎನಿಸುವನು. ಇವರು ನಿರ್ಣಯಿಸಿದ ವಿಷಯ ಧರ್ಮವೆಂದು ಕರೆಸಿಕೊಳ್ಳುವುದು. ವೇದದ ಅನವರತ ಅಧ್ಯಯನ ಹಾಗೂ ಅಧ್ಯಾತ್ಮಜ್ಞಾನ ಇವೆರಡೂ ಎಲ್ಲೋ ಲಕ್ಷಕ್ಕೊಬ್ಬರಿಗೆ ಮಾತ್ರ ಸಿದ್ಧಿಸುವಂತಹದು. ಹಾಗಾಗಿ ಯಾರೋ ಶಾಸ್ತ್ರವಿದರು- ಹಿರಿಯರು- ಗುರುಗಳು ಹೇಳಿದರೆಂದು ಧರ್ಮದ ನಿರ್ಣಯ ಸಲ್ಲದು. ಧರ್ಮದ ನಡೆ ಅತ್ಯಂತ ಸೂಕ್ಷ್ಮವಾದುದು.


ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩