ಧರ್ಮಾಚರಣೆ ೧೦೦
ಧರ್ಮಾಚರಣೆ-೧೦೦
ಬ್ರಾಹ್ಮೋ ವಿವಾಹ ಆಹೂಯ ದೀಯತೇ ಶಕ್ಯ್ತಲಂಕೃತಾ | ತಜ್ಜಃ ಪುನಾತ್ಯುಭಯತಃ ಪುರುಷಾನೇಕವಿಂಶತಿಮ್ || ಯಾಜ್ಞವಲ್ಕ್ಯ ಸ್ಮೃತಿ||
ಈಗ ಭಾರತದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವುದು ಬ್ರಾಹ್ಮ ವಿವಾಹ. ಬ್ರಾಹ್ಮವೆಂದರೆ ಬ್ರಾಹ್ಮಣರದ್ದು ಎಂದಲ್ಲ, ಬ್ರಹ್ಮ ಹೇಳಿದ್ದು ಅಥವಾ ಬ್ರಹ್ಮನಿಗೆ ಸಂಬಂಧಿಸಿದ್ದು ಎಂದು ಅರ್ಥ. ಕುಲ-ಶೀಲ-ರೂಪ-ಗುಣ-ವಯಸ್ಸುಗಳಿಂದ ಯೋಗ್ಯನಾದ ವರನನ್ನು ಆಹ್ವಾನಿಸಿ ಅವನಿಗೆ ತನ್ನ ಕೈಲಾದಷ್ಟು ಸತ್ಕಾರ ಮಾಡಿ ಹೆಣ್ಣನ್ನು ಕೊಟ್ಟು ಮದುವೆ ಮಾಡುವುದು ಬ್ರಾಹ್ಮ ವಿವಾಹದ ಪದ್ಧತಿ. ಇಲ್ಲಿ ವರದಕ್ಷಿಣೆಗೆ ಮಹತ್ವ ಇಲ್ಲ, ವರನನ್ನು ಉಪಚರಿಸುವುದು ಅಥವಾ ಗೌರವಿಸುವುದು ಮಹತ್ವ ಪಡೆದಿದೆ. ಕನ್ಯೆಯನ್ನು ಅಲಂಕರಿಸಿ ಗೌರವಯುತವಾಗಿಯೇ ಕಳಿಸಿಕೊಡುವುದು ಇಲ್ಲಿನ ವಿಶೇಷ. ವರನ ಯೋಗ್ಯತೆ ನೋಡಿಯೇ ಈ ವಿವಾಹ ನಿರ್ಣಯಿಸಬೇಕೆಂದು ಧರ್ಮಶಾಸ್ತ್ರ ಸ್ಪಷ್ಟವಾಗಿ ಹೇಳಿದೆ. ಶೀಲ-ಗುಣಗಳ ವಿಷಯದಲ್ಲಂತೂ ತುಂಬಾ ಮಹತ್ವ ಕೊಟ್ಟಿದೆ. ಇವರ ಸಂಯೋಗದಿಂದ ಜನಿಸಿದ ಮಕ್ಕಳು ಉಭಯಕುಲದ ಇಪ್ಪತ್ತೊಂದು ಜನರಉದ್ಧಾರಕ್ಕೆ ಕಾರಣರಾಗುವರು. ಈ ವಿವಾಹದ ಉದ್ದೇಶ ಕುಲಗಳ ಉದ್ಧಾರ ಹೊರತು ದೈಹಿಕ ಸುಖವೊಂದೇ ಅಲ್ಲ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ