ಧರ್ಮಾಚರಣೆ ೧೦೭
ಧರ್ಮಾಚರಣೆ-೧೦೭
ಹುತ್ವಾಗ್ನೀನ್ಸೂರ್ಯದೈವತ್ಯಾನ್ ಜಪೇನ್ಮಂತ್ರಾನ್ಸಮಾಹಿತಃ | ವೇದಾರ್ಥಾನಧಿಗಚ್ಛೇಚ್ಚ ಶಾಸ್ತ್ರಾಣಿ ವಿವಿಧಾನಿ ಚ || ಯಾಜ್ಞವಲ್ಕ್ಯ ಸ್ಮೃತಿ||
ವಿಪ್ರನು ದಿನವೂ ಸಂಧ್ಯಾದಿಗಳನ್ನು ಮುಗಿಸಿ ಆಹವನೀಯ ಅಥವಾ ಸ್ಮಾರ್ತ ಅಗ್ನಿಯಲ್ಲಿ ಆಹುತಿ ನೀಡಬೇಕು. ಅನಂತರ ಸೂರ್ಯಸಂಬಂಧಿ ಉದುತ್ಯಂ, ಉದ್ವಯಂ, ಗಾಯತ್ರೀ ಮೊದಲಾದ ಮಂತ್ರಗಳನ್ನು ಪಠಿಸಬೇಕು- ಜಪಿಸಬೇಕು. ಅನಂತರ ಶಾಸ್ತ್ರಗಳನ್ನು ಓದುತ್ತಾ ವೇದಾರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಹಾಗೆ ಮಾಡದೆ ಸುಮ್ಮನೆ ಪಠಿಸಿದರೆ ಭಾರಹೊತ್ತ ಎತ್ತಿನ ಸ್ಥಿತಿ ಅಂತಹ ವಿಪ್ರನದಾಗುತ್ತದೆ. ಅರ್ಥ ಅರಿತು ಮಾಡುವ ಕ್ರಿಯೆಯು ಸಫಲವೂ- ಪರಿಣಾಮಕಾರಿಯೂ ಆಗುವುದು. ಇಲ್ಲದಿದ್ದರೆ ಯಂತ್ರವು ಏನು ಮಾಡುವುದೆಂದು ಗೊತ್ತಿಲ್ಲದಿದ್ದರೂ ಸುಮ್ಮನೆ ಗುಂಡಿ ಒತ್ತಲು ಕುಳಿತವನ ಪರಿಸ್ಥಿತಿ ಬರುತ್ತದೆ. ವಿಪ್ರನೆಂದು ಕರೆಸಿಕೊಳ್ಳುವಲ್ಲಿ ಅಗ್ನಿ-ಸೂರ್ಯರ ಆರಾಧನೆ ಮಹತ್ವದ್ದಾಗಿದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ