ಧರ್ಮಾಚರಣೆ-೮೨
ಧರ್ಮಾಚರಣೆ-೮೨
ಇಜ್ಯಾಚಾರ ದಮೋಹಿಂಸಾ ದಾನಂ ಸ್ವಾಧ್ಯಾಯ ಕರ್ಮಣಾಮ್ | ಅಯಂತು ಪರಮೋ ಧರ್ಮೋ ಯದ್ಯೋಗೇನಾತ್ಮದರ್ಶನಮ್ || ಯಾಜ್ಞವಲ್ಕ್ಯ ಸ್ಮೃತಿ||
ನಿತ್ಯದ ಔಪಾಸನೆ, ವೈಶ್ವದೇವ,ಅಗ್ನಿಹೋತ್ರ ಮೊದಲಾದ ಯಜ್ಞ, ಶಾಸ್ತ್ರ ಬೋಧಿಸಿರುವ ಸದಾಚಾರ, ಇಂದ್ರಿಯಗಳ ನಿಯಮನ, ಅಹಿಂಸೆ, ದಾನ, ಕಲಿತ ವಿದ್ಯೆಯ ಅಭ್ಯಾಸ, ಶಾಸ್ತ್ರೋಕ್ತ ಕರ್ಮಗಳ ಅನುಷ್ಠಾನ, ಏಕಾಗ್ರತೆಯಿಂದ ಭಗವಂತನ ಧ್ಯಾನ ಇವಿಷ್ಟು ಅತ್ಯಂತ ಶ್ರೇಷ್ಠವಾದ ಧರ್ಮದ ಆಚರಣೆಗಳು. ಇವುಗಳಲ್ಲಿ ಕೆಲವನ್ನು ಪಾಲಿಸಿದರೂ ನಾವು ಧರ್ಮಾತ್ಮರಾಗುತ್ತೇವೆ. ಹಾಗಲ್ಲದೆ ನಾನು ಹಿಂದೂ ಎಂದು ಬಾಯಿ ಮಾತಿನಲ್ಲಿ ಅಥವಾ ವೇಷಧರಿಸಿದ ಮಾತ್ರ ಎಂದಿಗೂ ಅಲ್ಲ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ