ಪೋಸ್ಟ್‌ಗಳು

ಫೆಬ್ರವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮಾಚರಣೆ ೧೩೦

ಧರ್ಮಾಚರಣೆ-೧೩೦ ದಾನ ನೀಡಲು ಯಾರು ಅಯೋಗ್ಯರು ಎನ್ನುವುದನ್ನು ಮನುಸ್ಮೃತಿ ಹೀಗೆ ಹೇಳಿದೆ- ವಂಚನೆ ಮಾಡಿ ಬದುಕುವವನೂ, ವೇದವನ್ನು ಮನ್ನಿಸದವನೂ, ಯಾವೊಂದು ವ್ರತ ಮಾಡದವನೂ, ಮಂತ್ರಗಳನ್ನು ಪಠಿಸದವನೂ, ಕೇವಲ ಹುಟ್ಟಿನಿಂದ ಮಾತ್ರ ತಾನು ಈ ಜಾತಿಯವನೆಂದು ಹೇಳಿಕೊಳ್ಳುವವನು ( ಸಂಧ್ಯಾದಿ ಮಾಡದೆ ಹೆಸರಿಗೆ ಬ್ರಾಹ್ಮಣನಾದವನು) , ಅಗ್ನಿಹೋತ್ರ ಹಾಳುಮಾಡುವವನು, ಮಾತಾ-ಪಿತೃ ದ್ವೇಷಿಯೂ, ಪಾಪಕರ್ಮರತನೂ, ಅನರ್ಹರಿಗೂ ವೇದ ಬೋಧಿಸುವವನು, ಧೂರ್ತನು, ದಾನದ ಧನ ದುಷ್ಕರ್ಮಕ್ಕೆ ಬಳಸುವವನು, ಮೂರು ತಲೆಮಾರಿನಿಂದ ಮನೆಯಲ್ಲಿ ಪೂಜೆ ಆಗದೆ ವಾಸಿಸುವವನು, ನಿಂದ್ಯರನ್ನು ಸ್ತುತಿಸುವವನು, ಸಮಯಾನುಸಾರ ನಿತ್ಯಕರ್ಮ ಮಾಡದಿರುವವನಿಗೆ ಕೊಟ್ಟ ದಾನ ಎಲ್ಲಾ ರೀತಿಯಿಂದಲೂ ನಿಷ್ಫಲ. ಹಾಗಾಗಿ ಸುಮ್ಮನೆ ಗೌಜಿ ಆಗಲೆಂದು ಐವತ್ತು ಅಥವಾ ನೂರು ಜನರಿಗೆ  ದಾನ ಕೊಟ್ಟು ಪಾಪ  ಭಾಜನನಾಗಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೯

ಧರ್ಮಾಚರಣೆ-೧೨೯ ಗೋ ಭೂ ತಿಲಹಿರಣ್ಯಾದಿ ಪಾತ್ರೇ ದಾತವ್ಯಮರ್ಚಿತಮ್ | ನಾಪಾತ್ರೇ ವಿದುಷಾ ಕಿಂಚಿದಾತ್ಮನಃ ಶ್ರೇಯ ಇಚ್ಛತಾ || ಯಾಜ್ಞವಲ್ಕ್ಯ ಸ್ಮೃತಿ||  ಗೋವು-ಭೂಮಿ-ಎಳ್ಳು-ಸುವರ್ಣ ಮೊದಲಾದವನ್ನು ದಾನ ಮಾಡುವ ಮುನ್ನ ವ್ಯಕ್ತಿಯನ್ನು ಸತ್ಕರಿಸಿ ಶಾಸ್ತ್ರೋಕ್ತವಾಗಿ ನೀಡಬೇಕು. ಯಾವ ದಾನವೇ ಇರಲಿ ಪಾತ್ರತೆ ಇದ್ದಲ್ಲಿ ಮಾತ್ರ ಫಲ ದೊರಕುತ್ತದೆ. ನೀರಿನ ಪಸೆಯೇ ಇರದ ಕಲ್ಲಿನ ಜಾಗದಲ್ಲಿ ಬೀಜ ಬಿತ್ತಿದರೆ ಮೊಳಕೆ ಎಂತು ಬಂದೀತು! ಇದರಂತೆ ವ್ಯಕ್ತಿಯ ಯೋಗ್ಯತೆಯನ್ನು ನೋಡಿ ಬುದ್ಧಿವಂತನಾದವನು ದಾನ ಮಾಡಬೇಕು. ಕೀರ್ತಿಕಾಮನೆಗಾಗಿಯೋ ಪ್ರತಿಫಲಾಪೇಕ್ಷೆಯಿಂದಲೋ ಉಪಕಾರಭಾವದಿಂದಲೋ ಅಪಾತ್ರರಿಗೆ ದಾನ ಮಾಡಿದರೆ ಅದರ ಫಲ ದುಷ್ಟವೇ ಆಗುತ್ತದೆ. ಹೀಗೆ ಕೊಡುವುದಕ್ಕಿಂತ ಕೊಡದಿದ್ದರೂ ತೊಂದರೆ ಇಲ್ಲ. ಪಾತ್ರಾಪಾತ್ರ ವಿವೇಚಿಸಿಯೇ ಎಂದಿಗೂ ದಾನ ಮಾಡಬೇಕು. ಇಲ್ಲದಿದ್ದರೆ ಮತ-ದಾನದಿಂದ ಆಯ್ಕೆಯಾದ ವ್ಯಕ್ತಿ ನಮ್ಮನ್ನೇ ನುಂಗಿದ ಕಥೆ ದಾನದ ವಿಷಯದಲ್ಲೂ ಪುನರಾವರ್ತನೆ ಆಗುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೮

ಧರ್ಮಾಚರಣೆ-೧೨೮ ನ ವಿದ್ಯಯಾ ಕೇವಲಯಾ ತಪಸಾ ವಾಪಿ ಪಾತ್ರತಾ | ಯತ್ರ ವೃತ್ತಮಿಮೇ ಚೋಭೇ ತದ್ಧಿ ಪಾತ್ರಂ ಪ್ರಕೀರ್ತಿತಮ್ || ಯಾಜ್ಞವಲ್ಕ್ಯ ಸ್ಮೃತಿ|| ಕೇವಲ ಅಪಾರ ವಿದ್ಯೆಯನ್ನು ಗಳಿಸಿದ ಮಾತ್ರಕ್ಕೆ ಅಥವಾ ತುಂಬಾ ಅನುಷ್ಠಾನ-ತಪಸ್ಸು ಮಾಡುತ್ತಾರೆಂಬ ಕಾರಣಕ್ಕೆ ಮನುಷ್ಯನು ಪಾತ್ರತೆಯನ್ನು  ಪಡೆಯುವುದಿಲ್ಲ.  ಉತ್ತಮ ವಿದ್ಯೆ, ಉತ್ತಮ ಅನುಷ್ಠಾನದ ಜೊತೆಗೆ ನಮ್ಮ ನಡತೆಯೂ ಅದಕ್ಕೆ ಅನುಸಾರಿಯಾಗಿದ್ದಾಗ ಮಾತ್ರ ಇಹ-ಪರದಲ್ಲಿ ಪಾತ್ರನಾಗಲು ಅಂದರೆ ಯೋಗ್ಯನಾಗಲು ಸಾಧ್ಯ. ಅಪಾರ ವಿದ್ಯೆ ಗಳಿಸಿ ಯಾರಿಗೂ ಬೋಧಿಸದೇ ಅಹಂಕಾರದಿಂದ ಮೆರೆದರೆ ಅದೇ ಅವರಿಗೆ ಕೆಡುಕು. ಜ್ಞಾನದ ದಾಹ ಇಲ್ಲದೇ ಕೇವಲ ಕರ್ಮಮಾರ್ಗದಲ್ಲೇ ಮುಳುಗೇಳುತ್ತಿದ್ದರೆ ಅವರದ್ದೂ ಮೋಕ್ಷಗಾಮಿಯಾಗದ ಬದುಕು‌. ಇವೆರಡೂ ಇದ್ದೂ ಜೊತೆಗೆ ಸ್ವಜನ ಪಕ್ಷಪಾತ-ಆತ್ಮಪ್ರಶಂಸೆ-ಧನದಾಹ- ಕೀರ್ತಿಕಾಮನೆ-ದೋಷೈಕದರ್ಶನ  ಮೊದಲಾದ ಅವಗುಣಗಳು ಇಲ್ಲದಿದ್ದರೆ ಅವರು ಎಲ್ಲಾ ಬಗೆಯಿಂದಲೂ ಯೋಗ್ಯರೆನಿಸುವರು. ಇಂತಹವರಿಗೆ ನೀಡುವ ಮಾನ ಸನ್ಮಾನವಾಗುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೭

ಧರ್ಮಾಚರಣೆ-೧೨೭ ಸ್ನಾತ್ವಾ ಪೀತ್ವಾ ಕ್ಷುತೇ ಸುಪ್ತೇ ಭುಕ್ತ್ವಾ ರಥ್ಯೋಪಸರ್ಪಣೇ | ಆಚಾಂತಃ ಪುನರಾಚಾಮೇದ್ವಾಸೋ ವಿಪರಿಧಾಯ ಚ || ಯಾಜ್ಞವಲ್ಕ್ಯ ಸ್ಮೃತಿ|| ಸ್ನಾನ ಮಾಡಿದಾಗ, ಏನನ್ನಾದರೂ ಕುಡಿದಾಗ, ಸೀನಿದಾಗ, ಮಲಗಿ ಎದ್ದಾಗ, ಊಟದ ನಂತರ, ದೂರ ಎಲ್ಲಾದರೂ ಹೋಗಿ ಬಂದಾಗ, ಬಟ್ಟೆ ಬದಲಾಯಿಸಿದಾಗ ಹೀಗೆ ಇವಿಷ್ಟೂ ಸಂದರ್ಭದಲ್ಲಿ ಆಚಮನ ಮಾಡಬೇಕು. ಆಚಮನ ಮಾಡುವ ಉದ್ದೇಶ ಭಗವನ್ನಾಮ ಸ್ಮರಣೆಯೇ ಹೊರತು ಬಾಯಾರಿಕೆ ತಣಿಸುವುದು ಅಥವಾ ಕರ್ಮಬಿಡದಿರುವುದು ಅಲ್ಲ. ಆದಷ್ಟೂ ಎಲ್ಲಾ ಸಂದರ್ಭದಲ್ಲಿ ಭಗವಂತನ ನಾಮ ಪಠಿಸುತ್ತಾ ಪದ್ಮಪತ್ರದಂತೆ ಪಾಪವಿಮುಖರಾಗುತ್ತಿರಿ ಎಂಬುದೇ ಮುಖ್ಯ ಉದ್ದೇಶ.ನೀರು ಸಿಗದಿದ್ದಾಗ, ಮಡಿ ಆಗದಿದ್ದಾಗ, ಸ್ಥಳ-ಕಾಲ ಸರಿಯಿಲ್ಲದಿದ್ದಾಗ ದೇವರ ನಾಮ ಸ್ಮರಣೆಯೂ ಇದೇ ಫಲವನ್ನು ತಂದುಕೊಡುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೬

ಧರ್ಮಾಚರಣೆ-೧೨೬ ಅಮೇಧ್ಯಾಕ್ತಸ್ಯ ಮೃತ್ತೋಯೈಃ ಶುದ್ಧಿರ್ಗಂಧಾದಿಕರ್ಷಣಾತ್ | ವಾಕ್ಯಸ್ತಮಂಬುನಿರ್ಣಿಕ್ತಮಜ್ಞಾತಂ ಚ ಸದಾ ಶುಚಿ || ಯಾಜ್ಞವಲ್ಕ್ಯ ಸ್ಮೃತಿ||  ನೊಣ-ವೀರ್ಯ- ರಕ್ತ- ಚರ್ಮದ ತುಂಡು- ಮೂತ್ರ- ಕಿವಿಯ ಮಲ-ಉಗುರು- ಕಣ್ಣೀರು- ಬೆವರು- ಮದ್ಯ-ಉಗುಳು-ಸೀನು  ಮೊದಲಾದವು ಅಮೇಧ್ಯಗಳು ಹಾಗಾಗಿ ಅಪವಿತ್ರ. ಇವುಗಳ ಸಂಸರ್ಗಕ್ಕೆ ಒಳಗಾದರೆ ಮಣ್ಣು ಹಚ್ಚುವುದು ಹಾಗೂ ನೀರಿನಿಂದ ತೊಳೆಯುವುದರ ಮುಖಾಂತರ ಶುದ್ಧಿ ಮಾಡಿಕೊಳ್ಳಬೇಕು. ಗಂಧ- ಚಂದನದ ಲೇಪನದಿಂದಲೂ ಶುದ್ಧಿ ಇದೆ. ಇದು ಆಗದಿದ್ದರೆ ಶ್ರೇಷ್ಠ ಜ್ಞಾನಿಗಳು ಇದು ಶುದ್ಧ ಎಂದು ನುಡಿದರೂ ಶುದ್ಧಿಯಾಗುವುದು. ನಮಗೆ ತಿಳಿಯದೇ ಇವುಗಳ ಸಂಪರ್ಕ ಉಂಟಾಗಿ ಉಪಯೋಗಿಸಿದ್ದರೆ ಅದು ಶುಚಿಯೇ ಸರಿ. ಅಮೇಧ್ಯವೆಂದು ತಿಳಿದೂ ಶುದ್ಧಿ ಮಾಡಿಕೊಳ್ಳದಿರುವುದು ರೋಗ-ಪಾಪ ಕಾರಕ. ಸಾಂಕ್ರಾಮಿಕ ರೋಗಗಳಿಗೆ ಇದೇ ಹೇತು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೫

ಧರ್ಮಾಚರಣೆ-೧೨೫ ಗೋಘ್ರಾತೇನ್ನೇ ತಥಾ ಕೇಶಮಕ್ಷಿಕಾಕೀಟ ದೂಷಿತೇ | ಸಲಿಲಂ ಭಸ್ಮಮೃದ್ವಾಪಿ ಪ್ರಕ್ಷೇಪ್ತವ್ಯಂ ವಿಶುದ್ಧಯೇ || ಯಾಜ್ಞವಲ್ಕ್ಯ ಸ್ಮೃತಿ||  ಅನ್ನವನ್ನು ಗೋವು ಮೊದಲಾದ ಪ್ರಾಣಿಗಳು ಮೂಸಿದ್ದಾಗ, ಕೂದಲು-ನೊಣ-ಕ್ರಿಮಿಕೀಟಗಳು ಆಹಾರ ಪದಾರ್ಥದ ಮೇಲೆ ಬಿದ್ದಿದ್ದಾಗ ನೀರು-ಭಸ್ಮ-ಮಣ್ಣು ಇವುಗಳ ಸಿಂಪಡಣೆಯಿಂದ ಶುದ್ಧವಾಗುತ್ತದೆ. ಭೋಜನದ ಮೊದಲು ಗಾಯತ್ರಿ ಅಥವಾ ಬೇರೆ ಶ್ಲೋಕಗಳನ್ನು ಪಠಿಸಿ ಆಹಾರದ ಮೇಲೆ ನೀರು ಚಿಮುಕಿಸುವುದು ಇದೇ ಉದ್ದೇಶದಿಂದ, ವೀರಶೈವ ಅಥವಾ ಲಿಂಗಾಯತ ಮಠಗಳಲ್ಲಿ ಭಸ್ಮದಿಂದ ಚಿಮುಕಿಸುವುದು ಇದೇ ಉದ್ದೇಶದಿಂದ, ವಿರಾಗಿಗಳು ಚಿಟಿಕೆಯಷ್ಟು ಶುದ್ಧ ಮಣ್ಣನ್ನು ಸೇರಿಸಿಕೊಳ್ಳುವುದು ಇದೇ ಉದ್ದೇಶದಿಂದ ಹೊರತು ಇದು ಮೂಢನಂಬಿಕೆ ಅಥವಾ ಸಂಪ್ರದಾಯದ ಆಚರಣೆ ಅಲ್ಲ. ಆಹಾರ ಶುದ್ಧವಿದ್ದರೆ ಮನಸ್ಸು ಶುದ್ಧವಿರುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೪

ಧರ್ಮಾಚರಣೆ-೧೨೪ ಭೂಶುದ್ಧಿಮಾರ್ಜನಾದ್ದಾಹಾತ್ಕಾಲಾದ್ಗೋಕ್ರಮಣಾಸ್ತಥಾ | ಸೇಕಾದುಲ್ಲೇಪಾದ್ಗೃಹಂ ಮಾರ್ಜನಲೇಪನಾತ್ || ಯಾಜ್ಞವಲ್ಕ್ಯ ಸ್ಮೃತಿ|| ಭೂಶುದ್ಧಿ ಮಾಡಬೇಕಾದರೆ ಪೊರಕೆಯಿಂದ ಗುಡಿಸಬೇಕು. ಹೋಮ-ಹವನ ಮಾಡುವುದರಿಂದ ಶುದ್ಧವಾಗುತ್ತದೆ. ಉದಕಶಾಂತಿ ಮೊದಲಾದವುಗಳ ಜಲಪ್ರೋಕ್ಷಣೆಯಿಂದ ಶುದ್ಧವಾಗುವುದು. ಗೋ ಸಂಚಾರದಿಂದ ಸರ್ವಶುದ್ಧಿ ಉಂಟಾಗುವುದು. ಗೋಮೂತ್ರ-ಗೋಮಯದ ಸಿಂಪಡಣೆಯಿಂದ ಪವಿತ್ರವಾಗುವುದು. ಸೆಗಣಿ ಸಾರಿಸುವುದರಿಂದಲೂ ಇದನ್ನು ಸಾಧಿಸಬಹುದು. ಹೆರಿಗೆಯಾದಾಗ-ಮೃತರಾದಾಗ-ಸ್ನಾನ,ಪೂಜೆ ಮಾಡದೇ ಉಣ್ಣಾಗ- ನಾಯಿ,ಹಂದಿ, ಕತ್ತೆ ಪ್ರವೇಶಿಸಿದಾಗ- ಇದ್ದಿಲು,ತೌಡು, ಕೂದಲು, ಕೆಟ್ಟ ಬೂದಿಯಿಂದ- ಒಂಟೆ,ಕೋಳಿ ಮೊದಲಾದವುಗಳ ವಾಸದಿಂದ ಅಶುದ್ಧವೆನಿಸಿದಾಗ ಈ ಮೇಲಿನ ಉಪಾಯಗಳನ್ನು ಅನುಸರಿಸಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಪದಶಕ್ತಿ ೪೩

🏹*ಪದಶಕ್ತಿ* ---೪೩🌄   *ಮಾತರಿಶ್ವಾ* _ಮಾತರಿ-ಅಂತರಿಕ್ಷೇ ಶ್ವಯತಿ ಎಂಬಂತೆ ತಾಯಿಯಲ್ಲೂ ಅಂತರಿಕ್ಷದಲ್ಲೂ ಸಂಚರಿಸುವಂತಹದ್ದು ಗಾಳಿ. ನಮ್ಮನ್ನು ತಾಯಿಯಂತೆ ಸದಾ ಪೊರೆಯುವಂತಹದು. ಗರ್ಭಾವಸ್ಥೆಯಲ್ಲಿ ಜೀವ ಮೊಳಕೆ ಒಡೆದ ಕ್ಷಣದಿಂದ ತಾಯಿಯೆಂಬ ಮಾಧ್ಯಮದ ಮೂಲಕ ನಮ್ಮನ್ನು ಅನುಕ್ಷಣವೂ ಬದುಕಿಸುವ ಶಕ್ತಿ._ _ಮಾತರಿ ಶ್ವಯತೇ ವರ್ಧತೇ ಎಂದರೆ ನಮ್ಮ ಜೀವಶಕ್ತಿಯನ್ನು ತಾಯಿಯ ಮೂಲಕ ಹೆಚ್ಚಿಸುತ್ತದೆ ಎನ್ನಬಹುದು._ _तनूनपादुच्यते गर्भं आसुरो नराशंसो भवति यद्विजायते । मातरिश्वा यदमिमीत मातरि वातस्य सर्गो अभवत् सरीमणि_ _ವೇದದ ಈ ಮಂತ್ರದಂತೆ ಬೆಂಕಿಯು ಅರಣಿಯಲ್ಲಿ ಗೂಢವಾಗಿದ್ದಾಗ ತನೂನಪಾತ್ ಎಂಬ ಹೆಸರು ಪಡೆದರೆ ಹೊರ ಬಂದಾಗ ಮಾತರಿಶ್ವಾ ಎಂಬ ಹೆಸರು ಪಡೆಯುತ್ತದೆ. ಹಾಗಾಗಿ ಅಗ್ನಿಯ ಪರ್ಯಾಯವೂ ಹೌದು._ ಋಗ್ವೇದದ ಬಹಳ ಕಡೆ ಈ ಶಬ್ದ ಸಿಗುತ್ತದೆ.  *आन्यं दिवो मातरिश्वाजभारामथ्नादन्यं परिश्येनो अद्रेः* ಇಲ್ಲೂ ಅಗ್ನಿ ಅಥವಾ ಅಗ್ನಿಗೆ ಸಹಾಯಕ ಎಂಬ ಅರ್ಥದಲ್ಲೇ ಇರುವುದು. ಅಗ್ನಿ-ವಾಯು ಪರಸ್ಪರ ಸಹಾಯಕ ದೇವತೆಗಳು ಅಥವಾ ಒಂದೇ ಶಕ್ತಿಯ ಎರಡು ರೂಪಗಳು ಎನ್ನಬಹುದು. _|ತಾವಕದಿ ನೀ ಮಾತರಿಶ್ವಾಖ್ಯನೆಂದೆನಿಸಿ ಸೇವಿಸುವೆ ಘರ್ಮೋಕ್ತದಿ ||ಜೀವ ಸಕಲೋತ್ತಮನೆ | ದಾವ ಶಿಖಿ ಭವವನಕೆದೇವ ಬಲಿಭುಜ ಮಾರುತೀ |ದೇವಾದಿ ವಂದ್ಯ ಗುರು | ಗೋವಿಂದ ವಿಠ್ಠಲನಭಾವದಲಿ ತೋರಿ ಪೊರೆಯೊ_ ಗುರುಗೋವಿಂದವಿಠಲರು ವಾಯುವನ್ನು ಸ್ತುತಿಸ...

ರಾಮಾಯಣ ೧೭೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೩🏝📖     *ಪ್ರವರ್ಗ್ಯಂ ಶಾಸ್ತ್ರತಃ ಕೃತ್ವಾ ತಥೈವೋಪಸದಂ ದ್ವಿಜಾಃ | ಚಕ್ರುಶ್ಚ ವಿಧಿವತ್ಸರ್ವಮಧಿಕಂ ಕರ್ಮ ಶಾಸ್ತ್ರತಃ ||* _ಸಾಂಗ್ರಹಣ ಯಜ್ಞವನ್ನು ಮಾಡಿ ವರ್ಷದ ನಂತರ ಸರಯೂನದಿಯ ಉತ್ತರದ ತೀರದಲ್ಲಿ ದಶರಥನು ಯಜ್ಞವನ್ನು ಆರಂಭಿಸಿದನು. ವೇದದ ಅರ್ಥವನ್ನು ತಿಳಿದ ಋತ್ವಿಜರು ಯಜ್ಞವನ್ನು ಮೀಮಾಂಸಾಶಾಸ್ತ್ರ ಹಾಗೂ ಕಲ್ಪಸೂತ್ರಕ್ಕನುಸಾರವಾಗಿ  ಉಪಕ್ರಮಿಸಿದರು.ಇಲ್ಲಿ ಒಮ್ಮೆ ದೀಕ್ಷೆ ಪಡೆದ ಮೇಲೆ ಋತ್ವಿಜರು ಸ್ವೇಚ್ಛೆಯಾಗಿ ತಿರುಗುವಂತಿಲ್ಲ. ಯಜ್ಞಶಾಲೆಯ ಒಳಗೇ ತಿರುಗಬೇಕು,  ಇಂತಹ ದಿಕ್ಕಿಗೇ ಕುಳಿತುಕೊಳ್ಳಬೇಕು, ಇಂತಹ ಆಹಾರವನ್ನು ಮಾತ್ರ ಸೇವಿಸಬೇಕು ಮೊದಲಾದ ಅನೇಕ ನಿಯಮಗಳಿವೆ. ಅದರಲ್ಲಿ ಒಂದು ಅಂಗವಾದ ಸೋಮಯಾಗ ಮುಗಿಯುವ ಮೊದಲು ಅಧ್ವರ್ಯುವು ಆ ಮಂಟಪದ ಪಶ್ಚಿಮಭಾಗವನ್ನು ದಾಟಿ ಹೋಗಬಾರದು. ಯಜ್ಞ ಎಂದರೆ ಅನೇಕ ನಿಯಮಗಳ ಒಂದು ಕರ್ಮ. ಹೇಗೆ ಒಂದು ಸಂಸ್ಥೆಗೆ ಸೇರಿದ ಮೇಲೆ ಅಲ್ಲಿಯ ನಿಯಮಗಳಿಗೆ ಬದ್ಧರಾಗಿ ಅಲ್ಲಿಯ ವಾತಾವರಣ ಬಿಟ್ಟು ಬೇರೆ ಕಡೆ ಕೆಲಸದ ವೇಳೆಯಲ್ಲಿ ಹೋಗುವಂತಿಲ್ಲವೋ ಅಂತೆಯೇ ಇಲ್ಲೂ ಅನೇಕ ನಿಯಮಗಳಿವೆ._ _ಋತ್ವಿಜರು ಮೊದಲು ಪ್ರವರ್ಗ್ಯವನ್ನು ನಂತರ ಉಪಸದ ಎಂಬ ಯಾಗವನ್ನು ನಿರ್ವಹಿಸಿದರು. ದೇಸೀ ತಳಿಯ ಗೋವಿನ ಹಾಲನ್ನು ಕಾಯಿಸಿ ಸುಮಾರು ಒಂದು ದೊಡ್ಡ ಲೋಟದಷ್ಟು ಪ್ರಮಾಣದಲ್ಲಿ ಅಶ್ವಿನೀ ದೇವತೆಗಳ ಪ್ರೀತ್ಯರ್ಥವಾಗಿ ಕೊಡುವುದು. ಹೀಗೆ ನೀಡಿದಾಗ ಆಕಾಶ...

ರಾಮಾಯಣ ೧೭೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೪🏝📖    *ನ ಚಾಹುತಮಭೂತ್ತತ್ರ ಸ್ಖಲಿತಂ ವಾಪಿ ಕಿಂಚನ | ದೃಶ್ಯತೇ ಬ್ರಹ್ಮವತ್ಸರ್ವಂ ಕ್ಷೇಮಯುಕ್ತಂ ಹಿ ಚಕ್ರಿರೇ ||* _ದಶರಥನ ಆ ಅಶ್ವಮೇಧದಲ್ಲಿ ಕೊಡಬೇಕಾದ ಆಹುತಿಗಳಾವುವೂ ಅಧ್ವರ್ಯುವಿನ ಅಥವಾ ಬ್ರಹ್ಮನ ಮರೆವು ಅಥವಾ ಗಮನಿಸದಿರುವ ಕಾರಣದಿಂದಾಗಿ ತಪ್ಪಿಹೋಗಲಿಲ್ಲ. ಬ್ರಹ್ಮನ ಕೆಲಸವೇ ಅದು. ಯಜ್ಞ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಆಮೂಲಾಗ್ರವಾಗಿ ಅವಲೋಕಿಸುವುದು. ಪ್ರಸ್ತುತ ಋಷ್ಯಶೃಂಗನೇ ಬ್ರಹ್ಮನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಬ್ರಹ್ಮನಾದವನಿಗೆ ಜ್ಞಾನ ಪೂರ್ಣತೆ ಇರಬೇಕಾಗುತ್ತದೆ. ವಯಸ್ಸಿನಲ್ಲಿ ಹಿರಿಯನು ಅಥವಾ ಕುಲಪುರೋಹಿತ ಅಥವಾ ಊರಿನ ಹಿರಿಯ ಅಥವಾ ಇಂತಹ ಮಠ-ದೇವಸ್ಥಾನದವನು ಇತ್ಯಾದಿ ಯಾವುದೂ ಬ್ರಹ್ಮತ್ವದ ಅರ್ಹತೆ ಅಲ್ಲ. ಮಾಡುವ ಕರ್ಮದ ಸಂಪೂರ್ಣ ಅರಿವಿದೆಯೋ ಇಲ್ಲವೋ ಎಂಬುದಷ್ಟೇ ಮುಖ್ಯ. ಲಕ್ಷಾಂತರ ಆಹುತಿಗಳಿದ್ದರೂ ಯಾವೊಂದೂ ತಪ್ಪದಂತೆ ಯಜ್ಞ ನಡೆಯುತ್ತಿತ್ತು. ಅಷ್ಟಲ್ಲದೇ ಯಾವ ಯಾವ ದೇವತೆಗೆ ಸಂಬಂಧಿಸಿದ ಮಂತ್ರ ಹೇಳುತ್ತಿದ್ದರೋ ತ್ಯಾಗವನ್ನು ಆಯಾ ದೇವತೆಗೇ ನೀಡುತ್ತಿದ್ದರು. ಇಂದ್ರನ ಮಂತ್ರ ಹೇಳಿ ಸೂರ್ಯನಿಗೆ ತ್ಯಾಗವನ್ನೋ ಅಥವಾ ವಿಷ್ಣುವಿನ ಮಂತ್ರ ಹೇಳಿ ರುದ್ರನಿಗೆ ತ್ಯಾಗವನ್ನೋ ನೀಡುತ್ತಿರಲಿಲ್ಲ. ಯಜ್ಞದಲ್ಲಿ ಇದು ಪ್ರಮುಖ ಅಂಗ. ಮಂತ್ರಗಳು ಯಾವ ದೇವತೆಗೆ ಪ್ರಸಕ್ತ ಯಜ್ಞದಲ್ಲಿ ಉಪಯೋಗಿಸಲ್ಪಡುತ್ತವೆ ಎಂಬುದರ ಅರಿವು ಇರಬೇಕು. ಅದಕ್ಕನುಸ...

ರಾಮಾಯಣ ೧೭೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೫🏝📖    *ನ ತೇಷ್ವಹಸ್ಸು ಶ್ರಾಂತೋ ವಾ ಕ್ಷುಧಿತೋ ವಾಪಿ ದೃಶ್ಯತೇ | ನಾವಿದ್ವಾಬ್ರಾಹ್ಮಣಸ್ತತ್ರ ನಾಶತಾನುಚರಸ್ತಥಾ || ವೃದ್ಧಾಶ್ಚ ವ್ಯಾಧಿತಾಶ್ಚೈವ ಸ್ತ್ರಿಯೋ ಬಾಲಾಸ್ತಥೈವ ಚ | ಅನಿಶಂ ಭುಂಜಮಾನಾನಾಂ ನ ತೃಪ್ತಿರುಪಲಭ್ಯತೇ ||* _ರಾಜನ ಯಜ್ಞ ನಡೆಯುತ್ತಿದ್ದ ಸಮಯದಲ್ಲಿ ಹಸಿವು-ಬಾಯಾರಿಕೆಯಿಂದ ಬಳಲುತ್ತಿರುವವರನ್ನು ಕಾಣಲು ಸಾಧ್ಯವಿರಲಿಲ್ಲ. ಎಲ್ಲಿ ನೋಡಿದರಲ್ಲಿ_ *ದೀಯತಾಮನ್ನಂ* _ಎಂದು ಅನ್ನದಾನ ಹೊತ್ತು ಹೊತ್ತಿಗೆ ನಡೆಯುತ್ತಲೇ ಇತ್ತು. ನಾಲ್ಕು ವರ್ಣದವರು ಮಾತ್ರವಲ್ಲದೆ ತಪಸ್ವಿಗಳೂ, ದಿಗಂಬರರೂ, ವ್ಯಾಧಿಪೀಡಿತರೂ, ವೃದ್ಧರೂ, ಬಾಲಕರೂ ಹೀಗೆ ಎಲ್ಲರೂ ಸಾಕಷ್ಟು ಉಂಡೂ ತೃಪ್ತಿಹೊಂದುತ್ತಿರಲಿಲ್ಲ. ಏಕೆಂದರೆ ಇನ್ನೊಂದಷ್ಟು ದಿನ ಈ ಯಜ್ಞದ ಪ್ರಸಾದದ ರುಚಿ ನಾಲಗೆಯಲ್ಲಿ ಇರಲಿ ಎಂಬ ಬಯಕೆಯನ್ನು ಹುಟ್ಟಿಸುವಂತಿತ್ತು ಪಾಕದ ರುಚಿ. ಅಲ್ಲಿನ ಪ್ರಸಾದದ ರುಚಿಯು ಸಾಕು ಎಂಬ ಮಾತನ್ನು ಬರಿಸುತ್ತಲೇ ಇರಲಿಲ್ಲ. ಅಲ್ಲಿ ವಿದ್ವಾಂಸನಲ್ಲದ ಬರೇ ಉಪವೀತಧಾರಣೆಗೆ ಯೋಗ್ಯನೆನಿಸಿದ ಬ್ರಾಹ್ಮಣನು ಒಬ್ಬನೂ ಇರಲಿಲ್ಲ. ಆ ಕಾಲದಲ್ಲಿ ಹುಟ್ಟು ಎನ್ನುವುದು ಒಂದು ನಿಮಿತ್ತ. ಬ್ರಾಹ್ಮಣ ಎಂದು ಕರೆಸಿಕೊಳ್ಳಬೇಕಾದರೆ ಸಾಕಷ್ಟು ವೇದ-ವೇದಾಂಗಗಳ ಅಧ್ಯಯನ ಅವಶ್ಯಕವಾಗುತ್ತಿತ್ತು. ಹಾಗೆ ಮಾಡದಿದ್ದರೆ ಸಮಾಜ ಅಂತಹವರನ್ನು ತಮಾಷೆ ಮಾಡುತ್ತಿತ್ತು ಹಾಗೂ ನಿಂದಿಸುತ್ತಿತ್ತು. ಯಾವೊಂದು ಶಾಸ್ತ್ರೋಕ್ತ ಕರ್ಮ ಮಾಡದೇ ...