ಧರ್ಮಾಚರಣೆ ೧೨೦

ಧರ್ಮಾಚರಣೆ-೧೨೦

ಕರ್ಮಣಾ ಮನಸಾ ವಾಚಾ ಯತ್ನಾದ್ಧರ್ಮಂ ಸಮಾಚರೇತ್ | ಅಸ್ವರ್ಗ್ಯಂ ಲೋಕವಿದ್ವಿಷ್ಟಂ ಧರ್ಮ್ಯಮಪ್ಯಾಚರೇನ್ನ ತು || ಯಾಜ್ಞವಲ್ಕ್ಯ ಸ್ಮೃತಿ||

ನಮ್ಮ ಕಾರ್ಯಗಳಲ್ಲಿ, ನಮ್ಮ ಯೋಜನೆಗಳಲ್ಲಿ, ನಮ್ಮ ಮಾತುಗಳಲ್ಲಿ ಪ್ರಯತ್ನಪೂರ್ವಕವಾಗಿ ಧರ್ಮವನ್ನು ಅಳವಡಿಸಿಕೊಳ್ಳಬೇಕು. ಉ: ಇನ್ನೊಬ್ಬರಿಗೆ ಹಿಂಸೆ ಆಗುವ ಕರ್ಮ ಬಿಡುವುದು, ಯಾರನ್ನೂ ನಿಂದಿಸದಿರುವುದು, ಯಾರ ಬಗ್ಗೆಯೂ ಕೆಟ್ಟ ವಿಚಾರ ಮಾಡದಿರುವುದು ಮೊದಲಾದವು. ಸ್ವರ್ಗಾದಿ ಕಾರಣವಲ್ಲದ ಹಾಗೂ ಲೋಕನಿಂದ್ಯ ಕರ್ಮಗಳನ್ನು ಧರ್ಮದ ಹೆಸರಿನಲ್ಲಿ ಎಂದಿಗೂ ಮಾಡಬಾರದು. ಉ: ಗುರು ಹಿರಿಯರ ಅಪಮಾನ, ಬಹಿರಂಗವಾಗಿ ಮಲಮೂತ್ರ ವಿಸರ್ಜನೆ ಮೊದಲಾದವು. ಧರ್ಮದ ತಿರುಳನ್ನು ತಿಳಿದೇ ನಮ್ಮ ಕರ್ಮಗಳನ್ನು ರೂಢಿಸಿಕೊಳ್ಳಬೇಕೇ ಹೊರತು ಯಾರೋ ಮಾಡುತ್ತಿದ್ದಾರೆಂದು ಅವರ ಅಂಧಾನುಕರಣೆ ಮಾಡಿದರೆ ಅದು ಎಂದಿಗೂ ಶ್ರೇಯಸ್ಕರವಾಗದು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩