ಪೋಸ್ಟ್‌ಗಳು

ಸೆಪ್ಟೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
🌺ಅವಿಮಾರಕದ ಸುಂದರ ಕುಸುಮ🌺 *क्षमया जय विप्रेन्द्रान् दयया जय संश्रितान् । तत्वबुध्या जयात्मानं तेजसा जय पार्थिवान् ।।* _ಅವಿಮಾರಕನು ಮಾವ ಕುಂತಿಭೋಜನಿಗೆ ನಮಸ್ಕರಿಸುತ್ತಿದ್ದಾನೆ. ಅವನ ಆಶೀರ್ವಾದದ ಮಾತಿದು.ಬ್ರಾಹ್ಮಣ ಶ್ರೇಷ್ಠರನ್ನು ಕ್ಷಮಾಗುಣದಿಂದ ಜಯಿಸು.ಕ್ಷಮಿಸುವ ಗುಣದಿಂದಲೇ ಬ್ರಾಹ್ಮಣರು ಪ್ರಸಿದ್ಧರು.ಶಮೀಕನೆಂಬ ಶ್ರೇಷ್ಠ ಋಷಿ ತನ್ನ ತಪಸ್ಸಿನ ಕಾಲದಲ್ಲಿ ರಾಜನು ಸತ್ತ ಸರ್ಪವನ್ನು ಮೈಗೆ ಹಾಕಿದರೂ ಕ್ಷಮಿಸಿದನಂತೆ. ನಿಜವಾದ ಬ್ರಹ್ಮ ಚಿಂತನೆ ಇರುವ ನರನಿಗೆ ಸರ್ವಂ ಬ್ರಹ್ಮಾತ್ಮಕಂ ಎಂಬ ಉಪನಿಷತ್ತಿನ ವಾಕ್ಯದಂತೆ ಎಲ್ಲೂ ತಪ್ಪು ಕಂಡುಬರಲಾರದು.ಹಾಗಾಗಿ ಅವನು ಕೋಪಗೊಳ್ಳದೆ ಕ್ಷಮಿಸುವ ಗುಣ ಅಳವಡಿಸಿಕೊಂಡಿರುತ್ತಾನೆ. ನೀನು ಬ್ರಾಹ್ಮಣರಂತೆ ಕ್ಷಮಾಶೀಲನಾಗಿ ಅವರಿಗಿಂತಲೂ ಔನ್ನತ್ಯವನ್ನು ಹೊಂದು ಎಂಬ ಭಾವ.ನಿನ್ನನ್ನು ನಂಬಿಕೊಂಡಿರುವ ಜನರನ್ನು ಕರುಣೆಯಿಂದ ಗೆಲ್ಲು.ಸೇವಕರಿರಲಿ, ಸೈನಿಕರಿರಲಿ,ಸಾಮಾನ್ಯರಿರಲಿ,ಸಾಧುಗಳಿರಲಿ ಅವರೆಲ್ಲರಲ್ಲಿ  ದಯೆ ತೋರಿ ವಿಶ್ವಾಸವನ್ನು ಸಂಪಾದಿಸು.ಅಹಂಕಾರದಿಂದ ಅಥವಾ ದರ್ಪದಿಂದ,ಪರಾಕ್ರಮದಿಂದ ಕೆಲವು ಕಾಲ ಗೆಲ್ಲಬಹುದು ಆದರೆ ದಯೆಯಿಂದ ಯಾವಾಗಲೂ ಗೆಲ್ಲಬಹುದು.ಇದನ್ನೇ ಬಸವಣ್ಣನವರ ವಚನ ಹೇಳುವುದು ದಯವೇ ಧರ್ಮದ ಮೂಲವಯ್ಯ ಎಂಬುದಾಗಿ.ಧರ್ಮದ ಮೂಲವೇ ದಯೆ.ಹಾಗಾಗಿ ಪ್ರತಿಯೊಂದು ಜೀವಿಗಳಲ್ಲಿ ದಯೆ ತೋರು. ಇನ್ನು ನಿನ್ನನ್ನು ನೀನು ತತ್ವಬುದ್ಧಿಯಿಂದ ಜಯಿಸು.ಸರಿ ತಪ್ಪುಗಳ,ಧರ್ಮ ಅಧ...
🌹ಶಾಕುಂತಲದ ಸುಂದರ ಸುಮ🌹 *पातुं न प्रथमं व्यवस्यति जलं युष्मास्वपीतेषु या नादत्ते प्रियमण्डनापि भवतां स्नेहेन या पल्लवम् । आद्ये व: कुसुमप्रसूतिसमये यस्या भवत्युत्सव: सेयं याति शकुन्तला पतिगृहं सर्वैरनुज्ञायताम् ।।* _ಶಕುಂತಲೆಯ ಗಮನವನ್ನು ಕಣ್ವರು ಆಶ್ರಮದ ತರುಲತೆಗಳಿಗೆ ತಿಳಿಸುತ್ತಿದ್ದಾರೆ. ಓ ತಪೋವನವೃಕ್ಷಗಳೇ, ತರುಲತೆಗಳೇ, ನಿಮಗೆ ನೀರು ಉಣಿಸುವ ಮೊದಲು ಯಾರು ಸ್ವತಃ ನೀರು ಕುಡಿಯುತ್ತಿದ್ದಿಲ್ಲವೋ , ಯಾರಿಗೆ ಅಲಂಕಾರ ಮಾಡಿಕೊಳ್ಳುವ ಪ್ರೀತಿಯಿದ್ದರೂ ನಿಮ್ಮ ಮೇಲಿನ ಸ್ನೇಹದಿಂದ ಯಾರು ಚಿಗುರೆಲೆಗಳನ್ನೂ ಕಿತ್ತುಕೊಳ್ಳುತ್ತಿರಲಿಲ್ಲವೋ,ನಿಮಗೆ ಮೊದಲನೆಯ ಸಲ ಹೂ ಬಿಟ್ಟಾಗ ಯಾರಿಗೆ ಹಬ್ಬವೆನಿಸುತ್ತಿತ್ತೋ  ಆ ಶಕುಂತಲೆ ನಿಮ್ಮನ್ನಗಲಿ ಪತಿಯ ಮನೆಗೆ ಹೊರಟಿದ್ದಾಳೆ.ದಯವಿಟ್ಟು ಅವಳಿಗೆ ಅನುಮತಿ ಕೊಡಿ.ಎಷ್ಟು ಸುಂದರ ಕಾವ್ಯ.ಪ್ರಕೃತಿಯ ಆರಾಧನೆ ನಮ್ಮ ಕ್ರಿಯೆಗಳಲ್ಲಿರಬೇಕು  ಹೊರತು ಭಾಷಣ ಬರಹಗಳಲ್ಲಿ ಅಲ್ಲ.ಕಣ್ವರ ಮಾತು ಅದನ್ನೇ ತಿಳಿಸುತ್ತದೆ.ಶಕುಂತಲೆ ಪ್ರತಿ ದಿನವೂ ಗಿಡಗಳಿಗೆ ನೀರುಣಿಸಿಯೇ ತಾನು ನೀರು ಕುಡಿಯುತ್ತಿದ್ದಳು.ಅಷ್ಟು ಮಮತೆ ಅವುಗಳಲ್ಲಿ. ಬಗೆಬಗೆಯ ಚಿಗುರು ಹಾಗೂ ಪುಷ್ಪಗಳನ್ನು ಅಲಂಕರಿಸಿಕೊಳ್ಳುವ ಇಚ್ಛೆ ಇದ್ದರೂ ಗಿಡಗಳು ಎಲ್ಲಿ ದು:ಖಿಸುತ್ತವೆಯೋ ಅವುಗಳ ಸೌಂದರ್ಯ ಎಲ್ಲಿ ಮಾಸಿಹೋಗುವುದೋ ಎಂಬ ಆತಂಕದಿಂದ ಚಿಗುರೆಲೆಗಳನ್ನು ಕೀಳದೇ ಹಾಗೇ ಬಿಟ್ಟು ಸುಖಿಸುತ್ತಿದ್ದಳ...
ಸ್ತ್ರೀಯರ ಬಗ್ಗೆ ವ್ಯಾಸರ ದೃಷ್ಟಿಕೋನ ಎಷ್ಟು ವಿಶಾಲವಾಗಿತ್ತು ಎನ್ನುವುದರ ಬಗ್ಗೆ ಕೆಲವು ಶ್ಲೋಕಗಳು. ತಥಾಕಥಿತರು ಸ್ತ್ರೀಯರ ಬಗ್ಗೆ ಪುರಾಣಗಳ ಭಾವನೆ ಅರಿಯಲಿ ಎಂಬ ಉದ್ದೇಶ. *क्रुद्धोपि पुरुषव्याघ्र भीम मा स्म स्त्रियं वधी: । शरीरगुप्त्याभ्यधिकं धर्मं  गोपय पाण्डव ।।* ಯುಧಿಷ್ಠಿರ ಭೀಮಸೇನ ನಿಗೆ ಹೇಳುವ ಮಾತು.ನೀನು ಕೋಪಗೊಂಡಿದ್ದರೂ ಸ್ತ್ರೀಯನ್ನು ಕೊಲ್ಲಕೂಡದು.ಶರೀರ ರಕ್ಷಣೆಗಿಂತಲೂ ಹೆಚ್ಚಾಗಿ ಧರ್ಮವನ್ನು ರಕ್ಷಿಸು.ಹಿಡಿಂಬನ ವಧೆಯ ನಂತರ ಅವನ ತಂಗಿಯನ್ನು ಸಾಯಿಸಲು ಹೊರಟ ಭೀಮನಿಗೆ ಹೇಳುವ ಮಾತು.ಅಧರ್ಮ ಆಚರಿಸದ ಸ್ತ್ರೀಯ ವಧೆ ಅಧರ್ಮವಾಗುವುದು.ಹಾಗಾಗಿ ಶರೀರ ನಾಶವಾಗುವ ಸ್ಥಿತಿ ಇದ್ದರೂ ಸ್ತ್ರೀ ವಧೆ ಸಲ್ಲದು. *कुत एव परित्यक्तुं सुतां शक्ष्याम्यहं सुतम् । बालामप्राप्तवयसमजातव्यञ्जनाकृतिम् ।। भर्तुरर्थाय निक्षिप्तां  न्यासं धात्रा महात्मना । यस्यां दौहित्रजाल्लोकानाशंसे पितृभि: सह । स्वयमुत्पाद्य तां बालां कथमुत्स्रष्टुमुत्सहे ।।* ಏಕಚಕ್ರನಗರದ ಸಂಕಷ್ಟಕ್ಕೊಳಗಾದ ಬ್ರಾಹ್ಮಣ ಹೇಳುವ ಮಾತು.ಇನ್ನೂ ಹುಡುಗಿಯಾಗಿರುವ ವಯಸ್ಸಿಗೆ ಬಾರದ ಯೌವನದ ಗುರುತುಗಳು ಸ್ಪಷ್ಟವಾಗಿ ಕಾಣದಿರುವ ನನ್ನ ಮಗಳನ್ನು ನಾನಾಗಿಯೇ ಹೇಗೆ ತಾನೇ ರಾಕ್ಷಸನಿಗಾಗಿ ಪರಿತ್ಯಜಿಸಲಿ? ಮಹಾತ್ಮನಾದ ಬ್ರಹ್ಮನು ಒಬ್ಬ ವರನಿಗಾಗಿಯೇ ಅವಳನ್ನು ನನ್ನ ಬಳಿ ನ್ಯಾಸ ವಾಗಿ ಇಟ್ಟಿದ...
🌹ಶಾಕುಂತಲದ ಒಂದು ಆಶೀರ್ವಚನ🌹 *ययातेरिव शर्मिष्ठा भर्तुर्बहुमता भव । सुतं त्वमपि सम्राजं पूरुमवाप्नुहि ।।* _ಗೌತಮಿಯ ಮಾತಿನಂತೆ ಆಶ್ರಮದಿಂದ ಹೊರಡುವ ಮುನ್ನ ಕಣ್ವರಿಗೆ ನಮಸ್ಕರಿಸುತ್ತಿದ್ದಾಳೆ  ಶಕುಂತಲೆ.ಆ ಸಮಯದಲ್ಲಿ ಕಣ್ವರು ಕೊಡುವ ಆಶೀರ್ವಾದ. ಶರ್ಮಿಷ್ಠೆಯು ತನ್ನ ಪತಿ ಯಯಾತಿಯ ಬಹುಮಾನಕ್ಕೆ ಪಾತ್ರಳಾದಂತೆ ನೀನೂ ಆಗು.ಅವಳು 'ಪುರು' ಎಂಬ ಚಕ್ರವರ್ತಿಯನ್ನು ಮಗನಾಗಿ ಪಡೆದಂತೆ ನಿನಗೂ ಚಕ್ರವರ್ತಿಯಾಗುವ ಮಗ ಜನಿಸಲಿ.ಯಯಾತಿ ಪ್ರಖ್ಯಾತ ದೊರೆ.ಅವನು ಶಾಸ್ತ್ರೋಕ್ತವಾಗಿ ಕೈ ಹಿಡಿದದ್ದು ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು.ಅವಳ ದಾಸಿಯಾಗಿ ಅವಳ ಜೊತೆಗೆ ಅಂತ:ಪುರ ಸೇರಿ ತನ್ನ ನಡತೆಯಿಂದ ಯಯಾತಿಯ ಮನಗೆದ್ದು ಗಾಂಧರ್ವರೀತಿಯಲ್ಲಿ  ಅವನನ್ನು ವರಿಸಿದಳು ಶರ್ಮಿಷ್ಠೆ.ತನ್ನ ಕುಲದ ಶ್ರೇಯಸ್ಸಿಗಾಗಿ ತನ್ನ ಸುಖವನ್ನು ತ್ಯಾಗ ಮಾಡಿ ದಾಸಿಯಾಗಿ ಬಂದವಳು ಮಹಿಮಾನ್ವಿತ ಸ್ತ್ರೀ. ಅವಳ ಗುಣಗಳಿಗೆ ಮಾರುಹೋದ ಯಯಾತಿ ಅವಳಿಗೆ ಮೂವರು ಮಕ್ಕಳನ್ನು ಕರುಣಿಸಿದ.ಅದರಲ್ಲಿ ತಾಯಿಯಂತೆ ತ್ಯಾಗಜೀವಿಯಾಗಿ ಮುಂದೆ ಚಕ್ರವರ್ತಿಯಾಗಿ ಮೆರೆದವನು ಪುರು.ಅವನಂತೆಯೇ ಉತ್ತಮ ಮಗನನ್ನು ಪಡೆ ಎಂಬ ಮಾತಿನಿಂದ ತಂದೆತಾಯಂದಿರಿಗೆ ವಿಧೇಯರಾದ ಶ್ರೇಷ್ಟ ಮಕ್ಕಳು ಜನಿಸಲಿ ಎಂಬ ಆಶಯ.ಇನ್ನು 'ರಾಜಾನೋ ಬಹುವಲ್ಲಭಾ:' ಎಂಬಂತೆ ಅನೇಕ ಜನ ಪತ್ನಿಯರಿದ್ದಾಗ ಎಲ್ಲರೂ ರಾಜನ ಪ್ರಿಯರಾಗುವರೆಂಬ ನಿಶ್ಚಯವಿರುವುದಿಲ್ಲ. ಹಾಗಿದ್ದಾಗಲೂ ತನ್ನ ಉತ್ತಮ ಗುಣ...
ಮಹಾಭಾರತದ ಕೆಲವು ಉತ್ತಮ ಶ್ಲೋಕಗಳು *आपदस्तरणे प्राणान्धारयेद्येन येन हि । सर्वमादृत्य कर्तव्यं तद्धर्ममनुवर्तता ।।* _ಹಿಡಿಂಬೆ ಧರ್ಮಜನನ್ನು ಉದ್ದೇಶಿಸಿ ಹೇಳುವ ಮಾತು.ಆಪತ್ತನ್ನು ದಾಟುವುದಕ್ಕೆ ಯಾವ ಯಾವ ಉಪಾಯದಿಂದ ಪ್ರಾಣರಕ್ಷಣೆ ಮಾಡಿಕೊಳ್ಳಬಹುದೋ ಅದೆಲ್ಲವನ್ನೂ ಧರ್ಮಾಚರಣೆ ಮಾಡುವ ನರನು ಆದರಪೂರ್ವಕವಾಗಿ ಮಾಡಬೇಕು.ಆಪತ್ತಿನಲ್ಲಿ ದೈವವೇ ತನ್ನನ್ನು ರಕ್ಷಿಸುವುದು ಅಥವಾ ತಾನು ಮಾಡಿದ ಕರ್ಮವೇ ಕಾಪಾಡುವುದು ಎಂದೆಲ್ಲ ಯೋಚಿಸದೇ ಆಪತ್ತಿನಿಂದ ಪಾರಾಗುವ ಬಗೆ ಹೇಗೆ ಎಂದು ಆಲೋಚಿಸುವುದು ಆಪದ್ಧರ್ಮ ಎನಿಸುತ್ತದೆ._ *आपत्सु यो धारयति धर्मं धर्मविदुत्तम: । व्यसनं ह्येव धर्मस्य धर्मिणामापदुच्यते ।।* _ಅನೇಕ ಆಪತ್ತುಗಳಲ್ಲಿಯೂ ತನ್ನ ಧರ್ಮವನ್ನು ಯಾರು ರಕ್ಷಿಸುವನೋ ಅವನೇ  ಉತ್ತಮನಾದ ಧರ್ಮಜ್ಞ. ಧರ್ಮಿಷ್ಠರಾದವರಿಗೆ ಧರ್ಮಹಾನಿಯೇ ದೊಡ್ಡ ಆಪತ್ತೆನಿಸುತ್ತದೆ.ತನಗೆ ಆಪತ್ತು ಒದಗಿಬಂದಾಗಲೂ ಇನ್ನೊಬ್ಬರ ಆಪತ್ತು ಪರಿಹರಿಸಲು ಪ್ರಯತ್ನಿಸುವುದು ಧರ್ಮ.ಹೀಗಾಗಿಯೇ ಅಪಘಾತ ಭೂಕಂಪ ಸುನಾಮಿ ಅಥವಾ ಅವಘಡಗಳೇನಾದರೂ ಸಂಭವಿಸಿದಾಗ ಅವರ ರಕ್ಷಣೆಯೇ ಮುಖ್ಯ ಧರ್ಮ._ *पुण्यं प्राणान्धारयति पुण्यं प्राणदमुच्यते । येन येनाचरेद्धर्मं तस्मिन्गर्हा न विद्यते ।।* _ಪುಣ್ಯವೇ ಪ್ರಾಣಗಳನ್ನು ರಕ್ಷಿಸುತ್ತದೆ.ಪುಣ್ಯವೇ ಪ್ರಾಣಪ್ರದವೆನ್ನುತ್ತಾರೆ. ಯಾವ ಯಾವ ವಿಧಾನದಿಂದ  ಪುಣ್ಯಸಂಪಾದನ...
🌺ಅವಿಮಾರಕದ ಒಂದು ಕುಸುಮ🌺 *शापे प्रसादेषु च सक्तबुद्धि: वेदेषु गीतेषु च रक्तकण्ठ: । स्निग्धेषु वैराण्युपपाद्य यत्नात् नष्टानि कार्याणि समीकरोति ।।* _ನಾರದರ ಬಗೆಗಿನ ಮತ್ತೊಂದು ಶ್ಲೋಕ. ಅವಿಮಾರಕನು ನಾರದರನ್ನು ನೋಡಿ ಹೇಳುವ ಮಾತು.ಶಾಪ ಕೊಡುವುದಕ್ಕೂ ,ಅನುಗ್ರಹಿಸಲಿಕ್ಕೂ ಈತ ಸದಾ ಸಮರ್ಥ.ಅವೆರಡರಲ್ಲೂ ಸಮಾನವಾದ ಭಾವ ಇವನದ್ದು.ವಿಷ್ಣು ನಾಮಸ್ಮರಣೆಯೆಂಬ ತಪಸ್ಸಿನ ಪ್ರಭಾವದಿಂದ ಶಾಪ ಕೊಡಲು,ಹಾಗೂ ಅನುಗ್ರಹಿಸಲು ಶಕ್ತನಿದ್ದಾನೆ.ಸದಾ ವೇದಗಳನ್ನು ಪಠಿಸುತ್ತಾ ,ಬೇರೆ ಬೇರೆ ಗೀತೆಗಳನ್ನು ನುಡಿಸುತ್ತಾ ತನ್ನ ಗಂಟಲನ್ನು ಮಧುರವಾಗಿಸಿದ್ದಾನೆ. ಅಥವಾ ಅವೆರಡನ್ನೂ ಗಂಟಲಿಗೆ ಅಭ್ಯಾಸಮಾಡಿಬಿಟ್ಟಿದ್ದಾನೆ.ವೇದಮಂತ್ರಗಳು ಹಾಗೂ ಸ್ತುತಿ ಮಾಡುವ ಗೀತೆಗಳಲ್ಲಿ ರಾಗ ಇದೆ ಗಂಟಲಿಗೆ.ತುಂಬಾ ಪ್ರೀತಿ ಹೊಂದಿರುವ ವ್ಯಕ್ತಿಗಳಲ್ಲಿ ವೈರವನ್ನು ಹುಟ್ಟುಹಾಕುವನು ಇವನು.ಹೀಗೆ ಮಾಡುವುದರ ಮೂಲಕ ನಷ್ಟವಾದ ಕಾರ್ಯಗಳನ್ನು ಸರಿಮಾಡುವರು.ಅವರ ಸ್ನೇಹದಿಂದಾಗಿ ಅವರಿಂದ ಆಗಬೇಕಾಗಿದ್ದ ಲೋಕೋಪಕಾರಗಳನ್ನು ವೈರದ ಮೂಲಕ ನೆನಪಿಸಿ ಮಾಡಿಸುವರು ನಾರದರು.ಹೀಗೆ ನಾರದರ ಪ್ರತಿಯೊಂದು ಕಾರ್ಯವೂ ಸದುದ್ದೇಶದಿಂದ ಕೂಡಿದೆ.ನಾವು ಶಪಿಸಲು ಅಥವಾ ಅನುಗ್ರಹಿಸಲು ಶಕ್ತಿಯನ್ನು ಸಂಪಾದಿಸದಿದ್ದರೂ ಸಿಟ್ಟಿನಿಂದ ಯಾರನ್ನೋ ಶಪಿಸುತ್ತೇವೆ ,ಕೆಲವೊಮ್ಮೆ ತಲೆಬಾಗಿದವರನ್ನು ಭಾರೀ ಅನುಗ್ರಹಿಸುವಂತೆ ನಾಟಕಮಾಡುತ್ತೇವೆ.ನಿಜವಾಗಿ ನಮ್ಮಲ್ಲಿ ಅಷ್ಟು ಸಾಮರ್ಥ್ಯ ಇದೆಯೇ...
🌹🌹🌹🌹🌹🌹🌹🌹 🌹ಶಾಕುಂತಲದ ಸುಂದರ ಕುಸುಮ🌹 *यास्यत्यद्य शकुन्तलेति हृदयं संस्पृष्टमुत्कण्ठया कण्ठ: स्तम्भितबाष्पवृत्तिकलुषश्चिन्ताजडं दर्शनम् | वैक्लव्यं मम तावदीदृशमिदं स्नेहादरण्यौकस: पीड्यन्ते गृहिण: कथं नु तनयाविश्लेषदुखैर्नवै: ||* _ಕಣ್ವರು ಮುಂಜಾನೆಯ ಕರ್ಮಗಳನ್ನು ಮುಗಿಸಿ ಬಂದಿದ್ದಾರೆ.ಶಕುಂತಲೆಯನ್ನು ಪತಿಯ ಮನೆಗೆ ಕಳುಹಿಸಿಕೊಡಲು ನಿಶ್ಚಯಿಸಿದ್ದಾರೆ.ಅವರ ಭಾವ ಕಟ್ಟಿಕೊಡುವ ಸುಂದರ ಮಾತು ಇದು.ಇಂದು ಶಕುಂತಲೆ ಹೊರಡುವಳು ಎಂದು ನನ್ನ ಮನವು ಕಾತರತೆಯಿಂದ ಕೂಡಿದೆ.ಕಣ್ಣೀರುಗಳನ್ನು ತಡೆಹಿಡಿದಿದ್ದರಿಂದ  ನನ್ನ ಕುತ್ತಿಗೆ ಬಿಗಿದಿದೆ. ಚಿಂತೆಯಿಂದ ದೃಷ್ಟಿ ಮಂದವಾಗಿದೆ.ಅರಣ್ಯವಾಸಿಯಾದ ನನಗೇ ಇಷ್ಟೊಂದು ದು:ಖ ಉಂಟಾಗಿರುವಾಗ ಮಗಳ ಅಗಲುವಿಕೆಯಿಂದ ಉಂಟಾಗುವ ದು:ಖದಿಂದ ಸಾಮಾನ್ಯ ಗೃಹಸ್ಥಾಶ್ರಮಿಗಳು ಎಷ್ಟು ಕಷ್ಟಪಡುವರೋ! ಶಾಕುಂತಲದ ಮುಖ್ಯ ನಾಲ್ಕು ಶ್ಲೋಕಗಳಲ್ಲಿ ಇದೂ ಒಂದು. ಇದರಲ್ಲಿ ವ್ಯಕ್ತವಾಗುವ ಭಾವನೆಗಳು ಸಾರ್ವಕಾಲಿಕ ಸಾರ್ವದೇಶಿಕ ಅನುಭವ ಸಾಕ್ಷಿಕವಾದವು.ಹೃದಯಸ್ಪರ್ಶಿ ಶ್ಲೊಕವಿದು.ಪ್ರೀತಿಯಿಂದ ಬೆಳೆಸಿದ ಮಗಳನ್ನು ಪತಿಯ ಮನೆಗೆ ಕಳುಹಿಸುವಾಗ ಎಲ್ಲಾ ತಂದೆ-ತಾಯಂದಿರಿಗೆ ಉಂಟಾಗುವ ಭಾವನೆ ಇಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ.ಶಕುಂತಲೆ ಹೋಗುವಳೆಂಬ ವಿಷಯವೇ ಹೃದಯತುಂಬಿಬರುವಂತೆ  ಮಾಡುತ್ತಿದೆ.( ಇನ್ನು ಅವಳು ಇಲ್ಲೇ ಆಡಿಕೊಂಡಿರಲಾರಳು ) ಕಣ್ಣೀರುಗರೆದರೆ ಏನ...
🌺ಅವಿಮಾರಕದ ಒಂದು ಸುಮ🌺 *दृष्ट्वा तदानीं गजसंभ्रमे मां मद्विक्रमं ये परिकीर्तयन्ति | ते किन्नु वृत्तान्तमिमं विदित्वा चारित्रदोषं मयि पातयन्ति ||* _ಅವಿಮಾರಕನು ತನ್ನಲ್ಲೇ ಹೇಳಿಕೊಳ್ಳುವ ಮಾತು.ಹಿಂದೆ ಅರಮನೆಯ ಉದ್ಯಾನದಲ್ಲಿ ಆನೆಯೊಂದು ಮದವೇರಿ ಎಲ್ಲವನ್ನೂ ದಮನ ಮಾಡಿ ರಾಜಕುಮಾರಿಯನ್ನು ಬೆನ್ನಟ್ಟಿ ಬಂದು ಎಲ್ಲರ ಆತಂಕಕ್ಕೆ ಕಾರಣವಾದಾಗ ನಾನು ಅವಳನ್ನು ರಕ್ಷಿಸಿ ಪರಾಕ್ರಮಿ ಎನಿಸಿದ್ದೆ.ಅಂದು ಆರಂಭವಾದ ಅವಳ ಮೇಲಿನ ಅನುರಾಗ ಇಂದು ಹೇಗಾದರೂ ಜೊತೆ ಸೇರಬೇಕೆಂದು ಬಯಸಿದೆ.ಆಗ ನನ್ನ ಪರಾಕ್ರಮವನ್ನು ಅನೇಕರು ಹೊಗಳಿದ್ದರು.ಆದರೆ ಈಗ ಪ್ರಿಯಳಿಗಾಗಿ ಮಾಯಾ ಉಂಗುರವನ್ನು ಧರಿಸಿ ಅವಳ ಅಂತ:ಪುರ ಸೇರಿದ ನನ್ನ ಕಾರ್ಯವನ್ನು ನೋಡಿ ನನ್ನ ನಡತೆಯನ್ನು ದೂಷಿಸಲಾರರೇ! ಹಿಂದೆ ಯಾರು ಗಜಸಂಭ್ರಮದ ರಕ್ಷಕನೆಂದು ಸ್ತುತಿಸಿದ್ದರೊ ಅವರೇ ಇಂದು ಈ ನನ್ನ ಮಾಯಾವೇಷದ ವೃತ್ತಾಂತ ಅರಿತು ನನ್ನ ನಡತೆಯನ್ನು ತೆಗಳಬಹುದೇ ! ಅಥವಾ ಈ ಕಾಮ ಪೀಡಿತರ ಹಣೆಬರಹವೇ ಇಷ್ಟು ಎನ್ನಬಹುದೇನೊ ! ವಿದ್ಯಾಧರನ ಅನುಗ್ರಹ ವಿಶೇಷವಾದ ಮಾಯಾ ಅಂಗುಲೀಯಕ ಧರಿಸಿ ಬಂದದ್ದು ಅವಳನ್ನು ಪಡೆದದ್ದು ಹೌದು ಆದರೆ ಜನರು ಇದನ್ನು ಸರಿಯೆನ್ನುವರೇ ಎನ್ನುವ ಆತಂಕ ನಾಯಕನ ಮನದ ಭಾವ.ನಮ್ಮ ಅನೇಕ ವರ್ತನೆಗಳು ಹಾಗೆಯೇ ಇರುತ್ತವೆ.ಆ ಕಾಲದ ಒತ್ತಡವೋ ,ಮಹಿಮೆಯೋ ,ನಮ್ಮ ಅಸಡ್ಡೆಯೋ ತಿಳಿದೂ ಅನೇಕ ಕಾರ್ಯಗಳನ್ನು ಮಾಡಿರುತ್ತೇವೆ.ಅದು ನಮಗೆ ಮಾತ್ರ ಒಪ್ಪಿಗೆಯಾದರೆ ಸಾಕೆ,ಉಳಿದವರ...
🌹ಶಾಕುಂತಲದ ಒಂದು ಕುಸುಮ 🌹 *क्षौमं केनचिन्दुपाण्डु तरुणा माङ्गल्यमाविष्कृतं निष्ठ्यूतश्चरणोपभोगसुलभो लाक्षारस: केनचित् | अन्येभ्यो वनदेवताकरतलैरापर्वभागोत्थितै: दत्तान्याभरणानि तत्किसलयोद्भेदप्रतिद्वन्द्विभि: ||* _ಕಣ್ವರು ತನ್ನ ಮಗಳನ್ನು ಪತಿಗೃಹಕ್ಕೆ ಕಳುಹಿಸಲು ಅಣಿಯಾಗಿದ್ದಾರೆ.ಮಗಳ ಸಂಗಮದ ಬಗ್ಗೆ ಆತಂಕವೆನಿಸಿದರೂ ವಿಧಿಯೇ ನಿರ್ಣಯಿಸುವುದು ಕಾಲನ ನಡೆಯನ್ನೆಂದು ಅರಿತು ಮುಂದಡಿ ಇಡುತ್ತಿರುವರು. ಸಖಿಯರು ಅವಳನ್ನು ಅಲಂಕರಿಸಿ ಬೀಳ್ಕೊಡಲು ತಯಾರಿ ಮಾಡುತ್ತಿದ್ದಾರೆ.ಆಗ ಶಿಷ್ಯನೊಬ್ಬ ಆಭರಣಗಳನ್ನು ತಂದುಕೊಡುವನು.ಇವೆಲ್ಲ ಎಲ್ಲಿಂದ ಈ ಕಾಡಿನಲ್ಲೆಂದು ಎಲ್ಲರೂ ಆಶ್ಚರ್ಯ ಪಟ್ಟಾಗ ಶಿಷ್ಯನು ಹೇಳಿದ ಮಾತು. ಒಂದು ಮರದಿಂದ ಚಂದ್ರನಂತೆ ಶುಭ್ರವಾದ ಮಂಗಲಕರವಾದ ರೇಶಿಮೆಯ ಬಟ್ಟೆ ಹೊರಬಂದಿತು.ಇನ್ನೊಂದು ತರುವು ಕಾಲುಗಳಿಗೆ ಹಚ್ಚುವ ಲಾಕ್ಷಾರಸವನ್ನು ಹೊರಹಾಕಿತು.ಬೇರೆ ಕೆಲವು ಮರಗಳಿಂದ ಮೊಣಕೈಯವರೆಗೆ ಹೊರಚಾಚಿದ ಹೊಸದಾಗಿ ಹುಟ್ಟಿದ ಚಿಗುರೆಲೆಯಂತಿರುವ ಅಪ್ಸರೆಯರ ಕೈಗಳಿಂದ ಈ ಆಭರಣಗಳು ನೀಡಲ್ಪಟ್ಟವು.ಹೀಗೆ ಶಕುಂತಲೆಯ ಪತಿಗೃಹದ ಪ್ರಸ್ಥಾನಕ್ಕೆ ತರುಲತೆಗಳು ತಮ್ಮ ಕೊಡುಗೆಯನ್ನು ನೀಡಿ ಪ್ರೀತಿ ವ್ಯಕ್ತಪಡಿಸಿದವು.ಇದು ಕವಿಸಮಯ.ಕಲ್ಪನೆ ಎಂದೇ ತೋರಿದರೂ ನಾವು ದಿನವೂ ಆರೈಕೆ ಮಾಡುವ ಗಿಡಮರಗಳು ಹೇಗೆ ನಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತವೆ ಎಂಬುದನ್ನು ಕವಿ ಮಾರ್ಮಿಕವಾಗಿ ತೋರಿಸಿದ್ದಾನೆ.ವನದಲ್ಲೇ ಹ...
🌺ಅವಿಮಾರಕದ ಒಂದು ಶ್ಲೋಕ🌺 *वेदै: पितामहमहं परितोषयामि गीतै: करोमि हरिमुद्गतरोमहर्षम् | उत्पादयाम्यहरहर्विविधैरुपायै: तन्त्रीषु च स्वरगणान् कलहांश्च लोके ||* _ನಾರದನ ಸ್ವಗತ. ನಾನು ವೇದಪಾರಾಯಣದ ಮೂಲಕ ಬ್ರಹ್ಮ ದೇವನನ್ನು ದಿನವೂ ಸ್ತುತಿಸುತ್ತೇನೆ.ಹಾಗಾಗಿ ಅವನು ಪ್ರಸನ್ನನಾಗಿರುವನು. ಗೀತೆಗಳನ್ನು ಹಾಡಿ ವಿಷ್ಣುವನ್ನು ದಿನವೂ ಸ್ತುತಿಸಿ ಒಲಿಸಿಕೊಂಡಿದ್ದೇನೆ. ಪ್ರತಿದಿನವೂ ಬೇರೆ ಬೇರೆ ಉಪಾಯಗಳಿಂದ ವೀಣೆಯ ತಂತಿಗಳನ್ನು ಮೀಟಿ ಹೊಸ ರಾಗ ಸ್ವರಗಳನ್ನು, ಜೊತೆಗೆ ರಾಗ ಹೋಗುವ ಕಲಹಗಳನ್ನು ಜನರ ಮಧ್ಯೆ ಹುಟ್ಟುಹಾಕುತ್ತೇನೆ. ಕುಂತಿಭೋಜನ ಆಸ್ಥಾನಕ್ಕೆ ಬಂದ ನಾರದನ ಮಾತಿದು.ದಿನವೂ ವೇದವನ್ನು ಓದಿ ಅಂದರೆ ಜ್ಞಾನವನ್ನು ಸಂಪಾದಿಸುತ್ತಾ ಇತರರಿಗೆ ಹಂಚುತ್ತಾ ಜ್ಞಾನ ಕಾರ್ಯ ಮಾಡಿ ಬ್ರಹ್ಮನನ್ನು ಪ್ರಸನ್ನನಾಗಿಸುವುದು.ಬಗೆಬಗೆಯ ಸ್ತೋತ್ರಗಳಿಂದ ನಾಮಸ್ಮರಣೆಯಿಂದ ವಿಷ್ಣುವಿನ ಅನುಗ್ರಹಕ್ಕೆ ನಾರದರು ಪಾತ್ರರಾಗಿದ್ದಾರೆ.ಅಷ್ಟಲ್ಲದೇ ಅವರ ಮಹತೀ ಎಂಬ ವೀಣೆಯ ನಾದ ಕರ್ಣಾನಂದಕರ.ಸಂಗೀತದ ಸರ್ವಸ್ವ ಬಲ್ಲ ದೇವಗಾನಿಗಳಲ್ಲಿ ತುಂಬುರ ನಾರದರು ಪ್ರಮುಖರು.ಇನ್ನು ಕೊನೆಯ ಲಕ್ಷಣ ನಾವೆಲ್ಲ ನಾರದರಲ್ಲಿ ಕಾಣುವಂತಹದು.ಅಥವಾ ಅದನ್ನು ಮಾತ್ರ ಗುರುತಿಸುವುದು.ಕಲಹವನ್ನು ಉಂಟುಮಾಡುವುದರ ಮೂಲಕ ದೇವರ ಬಗೆಗಿನ ಶರಣಾಗತಿಯನ್ನು ತಂದುಕೊಟ್ಟು ಮೋಕ್ಷ ಕಾರಣರಾಗುವುದು ನಾರದರೇ.ನಾವು ಸಾಮಾನ್ಯ ಜನರಲ್ಲಿ ದೇವರ ಗುಣಗಳನ್ನು ಕಂಡಿರುತ್ತ...
🌹ಶಾಕುಂತಲದ ಸುಂದರ ಕುಸುಮ🌹 *अन्तर्हिते शशिनि सैव कुमुद्वती मे दृष्टिं न नन्दयति संस्मरणीयशोभा | इष्टप्रवासजनितान्यबलाजनस्य दु:खानि नूनमतिमात्रदु:सहानि ||* _ಕಣ್ವರ ಶಿಷ್ಯನು ಚಂದ್ರನ ಅಸ್ತವನ್ನು ವರ್ಣಿಸುತ್ತಿದ್ದಾನೆ. ಪ್ರಕೃತ ಶಕುಂತಲೆಯ ಸ್ಥಿತಿಯನ್ನು ತಿಳಿಸಿಕೊಡುವುದು ಕವಿಯ ಜಾಣ್ಮೆ. ಚಂದ್ರನು ಮುಳುಗಿದ ಮೇಲೆ ( ಸಮಯದಲ್ಲಿ ಲೀನನಾದ ಮೇಲೆ) ಈ ಹಿಂದಿನ ಕಾಂತಿಯು ನೆನಪಿನಲ್ಲಿ ಮಾತ್ರ ಇರುವ ನೈದಿಲೆಯ ಬಳ್ಳಿಯು ನನ್ನ ಕಣ್ಣುಗಳನ್ನು ತಣಿಸುತ್ತಿಲ್ಲ.ಚಂದ್ರನ ಉದಯದೊಂದಿಗೆ ತಾನೂ ಅರಳಿನಿಂತು ಶೋಭಿಸುತ್ತಿದ್ದ ಅನೇಕ ಹೂವುಗಳನ್ನು ಹೊತ್ತಿದ್ದ ನಿಸರ್ಗ ರಮಣೀಯವಾದ ನೈದಿಲೆಯ ಬಳ್ಳಿ ಈಗ ಹೂವಿನಿಂದ ಕೂಡಿದ್ದರೂ ಹಿಂದಿನ ಕಾಂತಿ ಉಳಿದಿಲ್ಲ.ಶಕುಂತಲೆ ಸ್ವಭಾವ ಸಹಜ ಸುಂದರಿಯಾದರೂ ಅವಳ ಮೊಗದಲ್ಲಿ ದುಷ್ಯಂತನ ಸಾಂಗತ್ಯದಲ್ಲಿ ಉಂಟಾದ ಮನೋಹರತೆ ಈಗಿಲ್ಲ.ಈಗ ಅವಳ ಮೊಗ ಬಾಡಿಹೋಗುತ್ತಿರುವ ಸುಮ.ಅವಳು ಬಾಡಿಹೋದ ಬಳ್ಳಿ. ಅಬಲೆಯರಿಗೆ ( ಪ್ರಿಯನ ಸಾಹಚರ್ಯವೇ ಬಲವಾಗುಳ್ಳ ಮಾನಿನಿಯರಿಗೆ) ತಮ್ಮ ಪ್ರಿಯಕರನ ವಿರಹದಿಂದ ಉಂಟಾದ ದು:ಖವು ತುಂಬಾ ಅಸಹನೀಯ.ಕುಮುದ್ವತಿಯು ( ನೈದಿಲೆಯ ಬಳ್ಳಿಯು ಚಂದ್ರನಿಲ್ಲದೇ ಹೂವಿದ್ದರೂ ಸೊರಗುತ್ತಿದೆ.) ಚಂದ್ರನೆಂಬ ತನ್ನ ಹೂವನ್ನು ಅರಳಿಸುವ ಪ್ರಿಯಕರನ ವಿರಹ ತಾಳದೇ ಅಳುತ್ತಿರುವಂತಿದೆ.ಸೊರಗುತ್ತಿದೆ ಕೂಡ. ಹೂವು ನಿಧಾನಕ್ಕೆ ಮುದುಡುತ್ತಿದೆ.ಶಕುಂತಲೆಯ ಮೊಗವೆಂಬ ಕುಮುದವು ದುಷ್ಯಂತನ ಅಗಲಿಕೆ...
🌺ಅವಿಮಾರಕದ ಒಂದು ಸುಮ🌺 *प्रपतदशनिना यथा गिरीन्द्रो दवदहनेन यथा वनप्रदेश: | युधि ललितमनायुधेन तेन क्षितिपसुतेन तदा हत: स नीच: ||* _ಸೌವೀರದೇಶದ ರಾಜನ ಮಗನಾದ ವಿಷ್ಣುಸೇನನು ಅವಿಮಾರಕನಾದ ಕಥೆ ಈ ಶ್ಲೋಕದಲ್ಲಿದೆ. ಹಿಂದೆ ಧೂಮಕೇತು ಎಂಬ ರಾಕ್ಷಸ ಸೌವೀರದೇಶದ ಸಮೀಪ ಬಂದಿದ್ದನು.ಎಲ್ಲೆಡೆ ಕೋಲಾಹಲ ಉಂಟುಮಾಡುತ್ತಾ ಜನರನ್ನು ಕೊಲ್ಲುತ್ತಾ ಲೋಕಸುತ್ತುವ ದೃಷ್ಟಿಯಿಂದ ಇಲ್ಲಿಗೆ ಬಂದಿದ್ದನು.ಇಲ್ಲಿಯ ಜನರ ಬವಣೆಯನ್ನು ಕೇಳಿದ ರಾಜನು ರಾಕ್ಷಸನಿಗೆ ಪ್ರತೀಕಾರ ಮಾಡುವ ಉಪಾಯ ತಿಳಿಯದೆ ಚಿಂತೆಗೀಡಾದನು.ಇದನ್ನೆಲ್ಲ ಅರಿತ ಮಗನಾದ ವಿಷ್ಣುಸೇನನು ಚಿಕ್ಕ ಪ್ರಾಯದವನಾದರೂ ಇನ್ನೂ ಬೆಳೆಯುತ್ತಿರುವ ದಟ್ಟವಾದ ಕೂದಲು ಹೊಂದಿದವನೂ ಸಮಾನ ವಯಸ್ಕರ ತರುಣ ಪಡೆಯೊಂದಿಗೆ ತೆರಳಿ ರಾಕ್ಷಸನನ್ನು ಸಮೀಪಿಸಿದನು.ತಾನಾಗಿಯೇ ಆಹಾರ ಒದಗಿತೆಂದು ಸಂತೋಷ ಪಟ್ಟ ರಾಕ್ಷಸನನ್ನು ಏನು ಮಾಡಿದನೆಂಬ ವರ್ಣನೆ ಈ ಶ್ಲೋಕದಲ್ಲಿದೆ. ಇಂದ್ರನ ವಜ್ರಾಯುಧವು ಹೇಗೆ ಪರ್ವತಗಳನ್ನು ಸಂಹರಿಸಿತೊ ( ರೆಕ್ಕೆ ಕತ್ತರಿಸುವ ಮೂಲಕ ಅಹಂಕಾರ ಕತ್ತರಿಸಿದ್ದು) , ಆಕಸ್ಮಿಕವಾಗಿ ಹುಟ್ಟಿಕೊಂಡ ಕಾಡ್ಗಿಚ್ಚು ಹೇಗೆ ವನವನ್ನೆಲ್ಲ ದಹಿಸಿತೋ,ಅಂತೆಯೇ ಯುದ್ಧವೆಂಬ ಆಟದಲ್ಲಿ ಆ ಬಾಲಕನು ಆಯುಧವಿಲ್ಲದೇ ಭೀಮನು ಅಸುರರನ್ನು ಕುಟ್ಟಿ ಕೊಂದಂತೆ ಆ ನೀಚನಾದ ಧೂಮಕೇತುವಿನ ದೇಹ ಧೂಮವೇ ಕೇತುವಾಗುವಂತೆ ಮಾಡಿದನು‌.( ದೊಡ್ಡ ದೇಹವಾದ್ದರಿಂದ ಸಂಸ್ಕಾರದಲ್ಲಿ ಎದ್ದ ಹೊಗೆ ಆಕಾಶದೆತ್ತರಕ್ಕೆ ವ್ಯಾಪ...
🌹ಶಾಕುಂತಲದ ಸುಂದರ ಒಂದು ಶ್ಲೋಕ🌹 *यात्येकतोस्तशिखरं पतिरोषधीनां आविष्कृतोरुणपुर:सर एकतोर्क: | तेजोद्वयस्य युगपद्व्यसनोदयाभ्यां लोको नियम्यत इवात्मदशान्तरेषु ||* _ಕಣ್ವ ಮಹರ್ಷಿಗಳು ಶಿಷ್ಯನಿಗೆ ವೇಳೆ ತಿಳಿದು ಬರಲು ಕಳುಹಿದ್ದಾರೆ.ಬೆಳಕಿದ್ದಲ್ಲಿಗೆ ಹೋಗಿ ರಾತ್ರಿ ಎಷ್ಟು ಉಳಿದಿದೆ ಎಂದು ಪರೀಕ್ಷಿಸುತ್ತಾ ಶಿಷ್ಯನಾಡುವ ಮಾತು. ಒಂದೆಡೆ ಚಂದ್ರನು ಅಸ್ತಾಚಲದ ಶಿಖರೆಡೆಗೆ ಪಾದ ಬೆಳೆಸಿದ್ದಾನೆ.ತಾನು ತನ್ನ ಕಾರ್ಯ ಮುಗಿಸಿ ಹಿಂತಿರುಗುತ್ತಿರುವನು. ಇನ್ನೊಂದೆಡೆ ಸೂರ್ಯನು ಅರುಣನೆಂಬ ಸಾರಥಿಯನ್ನು ಮುಂದೆ ಇಟ್ಟುಕೊಂಡು ಪ್ರಕಟವಾಗುತ್ತಿದ್ದಾನೆ. ಒಂದೇ ಸಮಯದಲ್ಲಿ ಎರಡು ತೇಜಸ್ಸುಳ್ಳ ವಸ್ತುಗಳ ಪತನ ಮತ್ತು ಉದಯಗಳಿಂದ ಜನರು ತಮ್ಮ ತಮ್ಮ ದಶೆಗಳು ಬದಲಾಗುವ ವಿಷಯದಲ್ಲಿ ಉಪದೇಶಿಸಲ್ಪಡುವಂತಿದೆ. ಗಿಡಮೂಲಿಕೆಗಳ ಬೆಳವಣಿಗೆಯ ಮೇಲೆ ಚಂದ್ರನ ಪ್ರಭಾವ ಹೆಚ್ಚು. ಆದ್ದರಿಂದ ಚಂದ್ರನಿಗೆ ಔಷಧಿಗಳ ಒಡೆಯನೆಂದು ಹೆಸರು.ಸೋಮ ಎಂಬ ಮೂಲಿಕೆಯು ಔಷಧಿಗಳ ರಾಜ.ಹಾಗಾಗಿ ಚಂದ್ರನಿಗೂ ಆ ಹೆಸರು ಇರಬಹುದೇನೋ.ಇಲ್ಲಿ ಅಂತರ ಎಂಬ ಶಬ್ದವು ವಿಶೇಷಾರ್ಥದಾಯಕ.ಜೀವನದಲ್ಲಿ ಏರಿಳಿತಗಳು ಸಹಜ.ವೃದ್ಧಿಯಾದಾಗ ಅತಿಯಾದ ಸಂತೋಷ, ವ್ಯಸನದಲ್ಲಿ ಅತಿಯಾದ ದು:ಖ ಸಲ್ಲದು.ಪ್ರಕೃತಿನಿಯಮವನ್ನು  ಸೂರ್ಯ ಚಂದ್ರರೇ ಮೀರಲಾರರು.ಸಾಧಾರಣ ಮಾನವರಾದ ನಾವು ಹೇಗೆ ಮೀರಲು ಸಾಧ್ಯ.ಎರಡು ತೇಜ:ಪುಂಜದ ಏಕಕಾಲಿಕ ವ್ಯಸನೋದಯಗಳು ಮತ್ತು ಲೋಕದ ದಶಾಂತರಗಳ ಬಗ್ಗೆ...
🌹ಶಾಕುಂತಲದ ಅತಿಮುಖ್ಯ ಶ್ಲೋಕ🌹 *विचिन्तयन्ती यमनन्यमानसा तपोधनं वेत्सि न मामुपस्थितम् | स्मरिष्यति त्वां न स बोधितोपि सन् कथां प्रमत्त: प्रथमं कृतामिव ||* _ದೂರ್ವಾಸರು ಕಣ್ವರ ಆಶ್ರಮಕ್ಕೆ ಬಂದಿದ್ದಾರೆ.ಕಣ್ವರು ಯಜ್ಞಕ್ಕಾಗಿ ಬೇರೆಡೆಗೆ ತೆರಳಿದ್ದಾರೆ.ಬಂದ ಮಹರ್ಷಿಗಳನ್ನು ಶಕುಂತಲೆ ಉಪೇಕ್ಷಿಸಿದ್ದಾಳೆ.ನಲ್ಲನ ಕನವರಿಕೆಯಲ್ಲೇ ಕಾಲ ಕಳೆಯುತ್ತಿರುವಳು.ಬಂದವರು ಕೋಪವೇ ಭೂಷಣವಾಗಿರುವ ದೂರ್ವಾಸರಾದರೂ ಅವಳ ಗಮನವೆಲ್ಲ ರಾಜನಲ್ಲೇ ಇದೆ. ಸಿಟ್ಟುಗೊಂಡ ಮಹರ್ಷಿಗಳು ನೀಡಿದ ತಾಪ ಕೊಡುವ ಶಾಪ. ಯಾರನ್ನು ಒಂದೇ ಮನಸ್ಸಿನಿಂದ ಯೋಚಿಸುತ್ತ ನಾನು ಬಂದಿದುದನ್ನು ಗಮನಿಸದೇ ನನಗೆ ಅಪಮಾನವೆಸಗಿದ್ದೀಯೋ , ಅಂತಹ ನಿನ್ನ ಮನದ ಲಹರಿಯ ವ್ಯಕ್ತಿಯು ಬುದ್ಧಿಮಾಂದ್ಯನು ಆಗಿಹೋದ ಘಟನೆಗಳನ್ನು ಮರೆಯುವಂತೆ ,ನೀನಾಗಿ ನೆನಪಿಸಿದರೂ ಅವನು ನಿನ್ನ ನೆನಪು ಪಡೆಯಲಾರ.ಇದು ದುಷ್ಯಂತ ಶಕುಂತಲೆಯರ ಸಮಾಗಮಕ್ಕೆ ಅಡ್ಡಿತಂದದ್ದು.ತಾನಾಗಿ ಸ್ಮರಿಸಲಾರ,ಯಾರಾದರೂ ನೆನಪಿಸಿದರೂ ಸ್ಮರಿಸಲಾರ.ಬುದ್ಧಿಮಾಂದ್ಯತೆ ಹೊಂದಿದ ವ್ಯಕ್ತಿ ಹೇಗೆ ತನ್ನ ಜೀವನದಲ್ಲಿ ಹಿಂದೆ ನಡೆದ ಘಟನೆಗಳನ್ನು ಸಂಪೂರ್ಣ ಮರೆಯುವನೋ ಹಾಗೆಯೇ ನಿನ್ನ ಮನದ ಅರಸನೂ ಬುದ್ಧಿವಂತನಾದರೂ ನನ್ನ ಶಾಪದಿಂದಾಗಿ ಮರೆಯುವನು.ಕಾವ್ಯಲಿಂಗ ಮತ್ತು ಉಪಮಾ ಅಲಂಕಾರ. ಮಹಾಭಾರತದಲ್ಲಿ ಈ ಶಾಪದ ಉಲ್ಲೇಖವಿಲ್ಲ.ಹಾಗಾಗಿ ದುಷ್ಯಂತನು ರಾಜರ್ಷಿಯೆಂದು ಒಪ್ಪಲು ತಿರಸ್ಕರಿಸುವ ಘಟನೆ ಅಡ್ಡ ಬರುವುದು.ಅದಕ್ಕಾಗಿ...
🌺ಅವಿಮಾರಕದ ಒಂದು ಸಿಟ್ಟಿನ ಶ್ಲೋಕ🌺 *न भाषसे वृत्तमुपैषि रोषं निष्कारणं प्रक्षिपसि प्रकामम् | अभाजनं त्वं तपसां प्रकोपाद् ब्रह्मर्षिरूपेण भवाञ्छ्वपाक: ||* _ಅವಿಮಾರಕನ ತಂದೆಯಾದ ಸೌವೀರರಾಜನೊಮ್ಮೆ ಬೇಟೆಗೆಂದು ಕಾಡಿಗೆ ತೆರಳಿರುತ್ತಾನೆ.ಆ ಸಮಯದಲ್ಲಿ ಚಂಡಭಾರ್ಗವ ಎಂಬ ಮಹರ್ಷಿಯನ್ನು ಸಂದರ್ಶಿಸುತ್ತಾನೆ.ಅದೇ ಸಮಯದಲ್ಲಿ ಅವನ ಶಿಷ್ಯನನ್ನು ಹುಲಿಯೊಂದು ಕೊಂದಿರುತ್ತದೆ. ರಾಜನನ್ನು ಕಂಡ ಕೂಡಲೇ ಋಷಿಯು ನಿಂದಿಸಲು ಆರಂಭಿಸುತ್ತಾನೆ.ರಾಜನು ಸ್ವಲ್ಪ ಹೊತ್ತು ಶಾಂತನಾಗಿದ್ದರೂ ಕೆಲವು ಮಾತಿನ ನಂತರ ಸಿಟ್ಟುಗೊಂಡು ಹೀಗೆ ನುಡಿಯುವನು. ನೀನು ವೃತ್ತಾಂತವನ್ನು ಸಂಪೂರ್ಣ ಅರಿಯದೇ,ನನ್ನ ಮಾತನ್ನು ಕೇಳದೇ ಕೋಪಗೊಂಡಿರುವೆ. ಕಾರಣವಿಲ್ಲದೆ ನನ್ನನ್ನು ನಿಂದಿಸುತ್ತಿರುವೆ.ನಿನ್ನ ಕೋಪದ ಕಾರಣವೇನೆಂದು ನುಡಿಯುತ್ತಿಲ್ಲ.ಈ ಅತಿಯಾದ ಕೋಪದ ಕಾರಣದಿಂದ ನೀನು ತಪಸ್ವಿಯಾಗಲು ಯೋಗ್ಯನಲ್ಲ.ನೀನು ನೋಡಲು ಬ್ರಹ್ಮರ್ಷಿಯಂತೆ ಕಂಡರೂ ನಿನ್ನ ವರ್ತನೆಯಿಂದ ಚಂಡಾಲನಾಗಿರುವೆ. ಹಾಗಾಗಿ ಬ್ರಹ್ಮರ್ಷಿರೂಪದಲ್ಲಿರುವ  ಚಂಡಾಲನಾಗಿರುವೆ. ಇಲ್ಲಿ ರಾಜನು ಒಬ್ಬ ಋಷಿಯ ನಿಷ್ಕಾರಣ ಕೋಪವನ್ನು ಕಂಡು ಹೀಗೆ ನುಡಿಯುತ್ತಿರುವನು.ಹಾಗಾದರೆ ನಾವು ನಮ್ಮ ಜೀವನದಲ್ಲಿ ಎಷ್ಟೋ ಬಾರಿ ಕಾರಣವಿಲ್ಲದೆ ಕೊಪಗೊಳ್ಳುತ್ತೇವೆ ಆಗೆಲ್ಲ ನಮ್ಮ ವರ್ತನೆಯು ಚಾಂಡಾಲನಂತೆಯೇ ಸರಿ.ಸಕಾರಣವಾದರೂ ಕೋಪವು ನಮ್ಮ ನಿಯಂತ್ರಣ ಮೀರದಿದ್ದಾಗ ನಮಗೆ ಒಳಿತು.ಇಲ್ಲದಿದ್ದರೆ ನಮಗೂ ಇತರ...
🌹ಶಾಕುಂತಲದ ಸುಂದರ ಸುಮ🌹 *तस्या: पुष्पमयी शरीरलुलिता शय्या शिलायामियं क्लान्तो मन्मथलेख एष नलिनीपत्रे नखैरर्पित: | हस्ताद्भ्रष्टमिदं बिसाभरणमित्यासज्यमानेक्षणो निर्गन्तुं सहसा न वेतसगृहाच्छक्नोमि शून्यादपि ||* _ಶಕುಂತಲೆ ಗೌತಮಿಯ ಆಜ್ಞೆಯಂತೆ ತೆರಳಿದ್ದಾಳೆ.ಅವಳಿಲ್ಲದ ಆ ನಲಿನೀಗೃಹ ಅಥವಾ ಬೆತ್ತದ ಮಂಟಪ ದುಷ್ಯಂತನಿಗೆ ಕಾಣುವುದು ಹೀಗೆ. ಇಲ್ಲಿ ಶಿಲೆಯ ಮೇಲೆ ಅವಳ ಶರೀರದ ಭಾರಕ್ಕೆ ಮುದುಡಿದ ಈ ಹೂವಿನ ಹಾಸಿಗೆಯಿದೆ. ಕಮಲದ ಎಲೆಯ ಮೇಲೆ ತನ್ನ ಕೋಮಲ ನಖಗಳಿಂದ ಗೀಚಿದ ಆದರೂ ಬಾಡಿದ ಪ್ರೇಮಪತ್ರವಿದೆ.ಪ್ರೀತಿಗಾಗಿ ಹಂಬಲಿಸಿ ಆಹಾರ ಬಿಟ್ಟು ಕೃಶವಾದ ಕೈಯಿಂದ ಜಾರಿದ ಕಮಲದ ದಂಟಿನಿಂದ ಮಾಡಿದ ಕಳಚಿಬಿದ್ದ ಬಳೆ ಇಲ್ಲಿದೆ. ಹೀಗೆ ಅವಳಿಲ್ಲದಿದ್ದರೂ ಕಣ್ಣುಗಳು ಅವಳಿರುವಂತೆಯೇ ಆಸಕ್ತವಾಗಿರುವುದರಿಂದ ಈ ಬೆತ್ತದ ಮಂಟಪದಿಂದ ಕೂಡಲೇ ಹೊರಡಲು ಶಕ್ತನಾಗುತ್ತಿಲ್ಲ.ಪ್ರಿಯಳು ಸಮೀಪದಲ್ಲಿ ಇಲ್ಲದಿದ್ದಾಗ ಅವಳು ಉಪಯೋಗಿಸುವ ವಸ್ತುಗಳಲ್ಲೆಲ್ಲ ಅವಳನ್ನೇ ಕಾಣುವನು ಪ್ರಿಯತಮ.ಪ್ರಕೃತ ಸಂದರ್ಭದಲ್ಲಿ ಶಕುಂತಲೆ ಇಲ್ಲದಿದ್ದರೂ ಅವಳು ಮಲಗಿದ ಹೂವಿನ ಹಾಸಿಗೆಯಿದೆ. ಕಾಮಪೀಡೆಯಿಂದ ಅವಳು ಮುದುಡಿದಂತೆ ಅವಳಿಗೆ ಆಶ್ರಯಕೊಟ್ಟ ಈ ಹೂವಿನ ಪಲ್ಲಂಗ ಮುದುಡಿದೆ.ನನಗಾಗಿ ಅತ್ಯಂತ ಪ್ರೀತಿಯಿಂದ ಮನದ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿದ ಉಗುರುಗಳಿಂದ ಅಕ್ಷರಗಳಿಗೆ ರೂಪ ಕೊಟ್ಟ ಪ್ರೇಮಪತ್ರವಿದೆ. ಅದು ಬಿಸಿಲಿಗೆ ಬಾಡಿದ್ದರೂ ( ಕಮ...
🌺ಅವಿಮಾರಕದ ಒಂದು ಗೆಳೆತನದ ಸೆಳೆತದ ಶ್ಲೋಕ🌺 *किं प्रेक्षसे मम मुखं चिरकालदृष्टो गाढं परिष्वज सखे स्मर बालभावम् | प्रीत्या भवन्तमनिवेषमवेक्षितुं मे स्नेहान्नवीकृत इवाद्य वयस्यभाव: ||* _ಕುಂತಿಭೋಜ ಮತ್ತು ಸೌವೀರರಾಜರು ಬಹುಕಾಲದ ನಂತರ ಭೇಟಿಯಾಗಿದ್ದಾರೆ. ಅವರ ಗೆಳೆತನ ಮೊದಲಿಗೆ ಗಾಢವಾಗಿತ್ತು.ಬಹುಕಾಲದ ನಂತರ ಗೆಳೆಯನನ್ನು ನೋಡುತ್ತಾ ಸೌವೀರರಾಜನು ಮಾತನಾಡುವುದನ್ನು ಮರೆತು ಹಾಗೆಯೇ ನಿಂತುಬಿಡುತ್ತಾನೆ.ಆಗ ಕುಂತಿಭೋಜನಾಡುವ ಮಾತು. ಏನು ಗೆಳೆಯ ಸುಮ್ಮನೇ ನೋಡುತ್ತ ನಿಂತುಬಿಟ್ಟಿರುವೆಯಲ್ಲ.ನಿನ್ನನ್ನು ಭೇಟಿಯಾಗದೇ ಕಾಲ ದೂರ ಹೋಗಿದ್ದು ನಿಜವೇ.ನಮ್ಮ ಗೆಳೆತನಕ್ಕೆ ಸಾಕ್ಷಿಯೆಂಬಂತೆ ನನ್ನನ್ನು ಒಮ್ಮೆ ಗಾಢವಾಗಿ ಆಲಿಂಗಿಸು. ಆ ಚಿಕ್ಕ ವಯಸ್ಸಿನಲ್ಲಿ ನಾವು ಮಾಡಿದ ಬಾಲ್ಯಲೀಲೆಗಳನ್ನು ನೆನಪಿಗೆ ತಂದುಕೊ. ಗಟ್ಟಿಯಾಗಿ ಅಪ್ಪಿಹಿಡಿದು ನಮ್ಮೆಲ್ಲಾ ತುಂಟತನಗಳನ್ನು ನೆನಪು ಮಾಡಿಕೊ. ಪ್ರೀತಿಯಿಂದ ಬಿಡದೇ ನಿನ್ನನ್ನು ನೋಡುತ್ತಿದ್ದರೆ ಗೆಳೆತನದಿಂದಾಗಿ ನೀನು ಹೊಸದಾಗಿ ರೂಪುಗೊಂಡ ಆತ್ಮೀಯ ಗೆಳೆಯನಂತೆ ತೋರುತ್ತಿರುವೆ.ನಮ್ಮ ಗೆಳೆತನವೂ ನಿನ್ನೆ ಮೊನ್ನೆ ಆದದ್ದೇನೋ ಎಂಬಂತೆ ತೋರುತ್ತಿದೆ. ನಮಗೂ ಯಾರಲ್ಲಾದರೂ ತುಂಬಾ ಗೆಳೆತನ ಉಂಟಾದರೆ ಅವರನ್ನು ಬಹುಕಾಲದ ಬಳಿಕ ಭೇಟಿಯಾದಾಗ ಇಂತಹದೇ ಭಾವನೇ ಮನದಲ್ಲಿ ಹುಟ್ಟುವುದಲ್ಲವೇ.ಅವರು ನಮಗೆ ಸಹಾಯ ಮಾಡಿರಲಿ ಅಥವಾ ನಮ್ಮಿಂದ ಸಹಾಯ ಪಡೆದಿರಲಿ ಅದು ಗೆಳೆತನದಲ್ಲಿ ಮುಖ್ಯವಾಗುವುದ...
🌹ಶಾಕುಂತಲದ ಒಂದು ಸುಂದರ ಶ್ಲೋಕ🌹 *मुहुरङ्गुलिसंवृताधरोष्ठं प्रतिषेधाक्षरविक्लवाभिरामम् । मुखमसंविवर्ति पक्ष्मलाक्ष्या: कथमप्युन्नमितं न चुम्बितं तु ।।* _ದುಷ್ಯಂತ ಶಕುಂತಲೆಯರು ಪರಸ್ಪರ ಒಂದೆಡೆ ಸೇರಿದ್ದಾರೆ.ಅವರ ಸರಸ ಸಲ್ಲಾಪಗಳು ನಡೆಯುತ್ತಿದ್ದಾಗ ವಿಘ್ನ ತರಲೆಂಬಂತೆ ಗೌತಮಿ ಎಂಬ ತಪಸ್ವಿನಿ ಬಂದು ಶಕುಂತಲೆಯ ದೇಹಬಾಧೆಯ ನಿವಾರಣೆಗೆಂದು ತಪೋಜಲವನ್ನು ಪ್ರೋಕ್ಷಿಸಿದ್ದಾಳೆ. ಹಾಗೆಯೇ ಶಕುಂತಲೆಯನ್ನು ಅಲ್ಲಿಂದ ಕರೆದುಕೊಂಡು ಹೋಗುವಳು ಗೌತಮಿ. ಆಗ ರಾಜನಾಡುವ ಸುಂದರ ಮಾತು. ಶಕುಂತಲೆ ಮತ್ತೆ ಮತ್ತೆ ತನ್ನ ಬೆರಳುಗಳಿಂದ ಕೆಳದುಟಿಯನ್ನು ಮುಚ್ಚಿಕೊಳ್ಳುತ್ತಿದ್ದಳು ಚುಂಬನ ಬೇಡವೆನ್ನುವ ಭಾವದಿ. ಹಾಗೆಯೇ ಬೇಡ ಬೇಡ ಎನ್ನುವ ಗಾಬರಿಯ ಮಾತನ್ನಾಡುತ್ತಾ ಸುಂದರವಾದ ರೆಪ್ಪೆಗಳಿಂದ ಕೂಡಿದ ಅತ್ತಿತ್ತ ವೇಗವಾಗಿ ಸಂಚರಿಸುತ್ತಿರುವ ,ಗಾಬರಿಯಿಂದ ಇನ್ನಷ್ಟು ಮನೋಹರವಾದ ಅವಳ ಕಮಲದಂತಹ ಕಣ್ಣುಗಳಿರುವ ಮುಖವನ್ನು ನನ್ನ ಕೈಗಳಿಂದ ಎತ್ತಿಹಿಡಿದೆನಷ್ಟೇ ಚುಂಬಿಸಲಿಲ್ಲ. ದುಷ್ಯಂತನು ಚುಂಬನದ ಬಯಕೆಯನ್ನು ವ್ಯಕ್ತಪಡಿಸಿದಾಗ ಶಕುಂತಲೆ ಬೇಡ ಬೇಡವೆಂದು ತುಟಿಗಳಿಗೆ ತನ್ನ ಬೆರಳುಗಳನ್ನು ಅಡ್ಡ ಇಟ್ಟು ನಿರಾಕರಿಸಿದಳು.ಆ ನಿರಾಕರಣೆಯಲ್ಲಿ ಬಯಕೆಯೂ ಅಡಗಿದೆ. ಗಾಬರಿಯಿಂದ ಕೂಡಿದ ಕಣ್ಣುಗಳು ಅತ್ತಿತ್ತ ಗಮನಿಸುತ್ತಿವೆ. ನಾಚಿ ನೀರಾಗಿದ್ದಾಳೆ ಶಕುಂತಲೆ. ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲವಲ್ಲಾ ಎಂಬ ನಿರಾಶೆಯ ಭಾವವು ಮನೋಹರವಾಗಿ ಬಿಂಬಿತ...
🌺ಅವಿಮಾರಕದ ಸುಂದರ ವರ್ಣನೀಯ ಹಾಗೂ  ಶೃಂಗಾರ ಶ್ಲೋಕ🌺 *व्योमार्णवोर्मिसदृशा निनदन्ति मेघा मेघप्ररोहसदृशा प्रपतन्ति धारा: | रक्षोङ्गनाभ्रुकुटिवत् तडित: स्फुरन्ति प्राप्तोग्रयौवनघनस्तमर्दकाल: ||* _ಮಳೆಹನಿಗಳು ದೊಡ್ಡದಾಗಿವೆ. ಅದರಿಂದ ಉಂಟಾಗುತ್ತಿರುವ ಧ್ವನಿಯೂ ದಿಕ್ಕುಗಳಲ್ಲೆಲ್ಲ ಮಾರ್ದನಿಸುತ್ತಿದೆ. ನಾಯಕ ಈ ದೃಶ್ಯವನ್ನು ವರ್ಣಿಸುತ್ತಿದ್ದಾನೆ. ಈ ಮೋಡಗಳು ಆಕಾಶವೆಂಬ ಸಮುದ್ರದ ತರಂಗಗಳಂತೆ ಶಬ್ದಮಾಡುತ್ತಿವೆ. ( ಸಮುದ್ರದ ಅಲೆಗಳು ನಿರಂತರ ಬಡಿದು ತೀರದಲ್ಲಿ ದೊಡ್ದ ಧ್ವನಿ ಕೇಳುವಂತೆ ಇವುಗಳಿಂದ ಬೀಳುತ್ತಿರುವ ನೀರಿನ ಹನಿಗಳು ಹೆಚ್ಚು ಧ್ವನಿಯನ್ನು ಹುಟ್ಟಿಸುತ್ತಿವೆ. ನೀರಿನ ಧಾರೆ ಮೇಘವೆಂಬ ಬೃಹತ್ ಮರದ ಕೊಂಬೆಗಳಂತೆ ಎಲ್ಲೆಡೆ ಚಾಚಿವೆ. ( ಆಲ ಮುಂತಾದ ಮರಗಳ ರೆಂಬೆ ಕೊಂಬೆ ಹರಡುವಂತೆ ಮಳೆಹನಿಗಳು ಭೂಮಿಯಲ್ಲೆಲ್ಲ ಹರಡಿವೆ. ) ಮಧ್ಯದಲ್ಲಿ ಆಗೊಮ್ಮೆ ಈಗೊಮ್ಮೆ ಬರುವ ಮಿಂಚು ರಾಕ್ಷಸ ಸ್ತ್ರೀಯರ ಹುಬ್ಬಿನ ಕುಣಿತದಂತಿದೆ. ಅವರ ವಾರೆನೋಟವೂ ಅದೇ ಏನೋ ಅನ್ನುವಂತೆ ಎದೆಯಲ್ಲೊಮ್ಮೆ ಭಯ ಹುಟ್ಟಿಸುತ್ತಿದೆ. ಇವೆಲ್ಲವೂ ಈ ಕಾಲದ ಮತ್ತೊಂದು ಕಾರ್ಯಕ್ಕೆ ಸಹಕಾರ ಕೊಡುತ್ತಿವೆ. ಏನೆಂದರೆ ಈ ಕಾಲ ಯೌವನದ ಪ್ರಾರಂಭದಲ್ಲಿ ಮಾಡಬೇಕಾದ ಸ್ತನಗಳ ಮರ್ದನದ ಕಾಲ‌. ಆ ಕಾರ್ಯ ಮಾಡಲು ಇದೇ ಯೋಗ್ಯ ಸಮಯ. ಕಾಮಸುಖವನ್ನು ಅನುಭವಿಸಲು ಇದು ಸರಿಯಾದ ಕಾಲ ಎಂಬುದು ಕವಿಯ ಭಾವ._ 📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
🌹ಶಾಕುಂತಲದ ಒಂದು ಶೃಂಗಾರ ಶ್ಲೋಕ🌹 *अपरिक्षतकोमलस्य यावत्कुसुमस्येव नवस्य षट्पदेन | अधरस्य पिपासता मया ते सदयं सुन्दरि गृह्यते रसोस्य ||* _ದುಷ್ಯಂತ ಶಕುಂತಲೆಯರು ಒಂದುಗೂಡಿದ್ದಾರೆ. ಕಾಮತಪ್ತಳಾಗಿದ್ದರೂ  ಸಭ್ಯತೆಯನ್ನು ಮೀರಬೇಡ,ಸ್ವತಂತ್ರಳಾಗಿ ವರ್ತಿಸಲಾರೆ ಎಂದು ಶಕುಂತಲೆ ನುಡಿದಾಗ ಗಾಂಧರ್ವ ವಿವಾಹ ಸಾಧುವೆಂದು ಸಮಾಧಾನ ಕೊಡುತ್ತಾನೆ ದುಷ್ಯಂತ. ಬಿಡು ಎಂದು ನಾಚಿಕೆಯಿಂದ  ಬಿಡಬೇಡ ಎಂಬ ಭಾವದಲ್ಲಿ ನುಡಿದಾಗ ದುಷ್ಯಂತನಾಡುವ ಮಾತು. ಸುಂದರಿ,ಇಲ್ಲಿಯವರೆಗೆ ಯಾರೂ ಸವಿಯದಿರುವ ( ತಮ್ಮ ತುಟಿಯಿಂದ ಸ್ಪರ್ಶಿಸದಿರುವ) ಈ ನಿನ್ನ ಕೆಳತುಟಿಯ ಅಮೃತವನ್ನು ಸವಿಯುವ ಆಸೆ ತುಂಬಿದ ನಾನು ದುಂಬಿಯು ಹೊಸದಾಗಿ ಅರಳಿದ ಹೂವಿನ ಮಕರಂದವನ್ನು ಸವಿಯುವಂತೆ ಹಿತವಾಗಿ ಸವಿದು ಬಿಟ್ಟುಬಿಡುವೆನು. ಶೃಂಗಾರ ರಸದ ಮಧುರ ಕ್ಷಣ ಚುಂಬನ. ಕವಿ ಅದನ್ನು ದೃಶ್ಯದಲ್ಲಿ ತೋರಿಸದೇ ವರ್ಣನೆಯಿಂದಲೇ ಪ್ರೇಕ್ಷಕರು ರಸಾಸ್ವಾದ ಮಾಡುವಂತೆ ಮಾಡುವುದು ಸಂಸ್ಕೃತ ನಾಟಕಕಾರರ ಅದ್ಭುತ ಕಲ್ಪನೆ.ಕೆಲವು ದೃಶ್ಯಗಳು ತೆರೆಯ ಮೇಲೆ ಪ್ರದರ್ಶನ ಪಡುವಂತಿಲ್ಲ. ( ಈಗ ಎಲ್ಲವನ್ನೂ ಪ್ರದರ್ಶನ ಮಾಡುವರು ) ಅಂತಹ ದೃಶ್ಯಗಳು ಪ್ರೇಕ್ಷಕನ ಮನ ಮುಟ್ಟಿ ಆ ರಸದ ಆಸ್ವಾದನೆಗೆ ಭಂಗ ಬರಬಾರದೆಂಬ ಉದ್ದೇಶದಿಂದ ಇಂತಹ ವರ್ಣನೆಗಳು ಅಲ್ಲಲ್ಲಿ ಕಾಣುತ್ತವೆ. ಈವರೆಗೂ ಯಾರೂ ಕಚ್ಚದಿರುವ ಹಾಗಾಗಿಯೇ ಕೋಮಲವಾದ ,ರಾಜನ ರಸಿಕತೆ ಇಲ್ಲಿ ಎದ್ದು ಕಾಣುತ್ತದೆ. ಉಪಮಾ ಅಲಂಕಾರ. ...
🌺ಅವಿಮಾರಕದ ಸುಂದರ ಶ್ಲೋಕ🌺 *जलदसमयघोषणाडम्बरानेकरूपक्रियाजम्भका वज्रभृद्गृष्टय: भगणयवनिकास्तडित्पन्नगीवासवल्मीकभूता नभोमार्गरूढक्षुपा: | मदनशरनिशानशैला: प्ररुष्टाङ्गनासन्धिपाला: गिरिस्नापनाम्भोघटा: उदधिसलिलभैक्षहारा रवीन्द्वर्गला देवयन्त्रप्रपा भान्तिनीलाम्बुदा: ||* _ಮಳೆಗಾಲದ ಅಂಬರವನ್ನು ವರ್ಣಿಸುವ ಒಂದು ಆಕಾಶದಷ್ಟೇ ವಿಶಾಲವಾದ ಛಂದಸ್ಸಿನ ಸುಂದರ ಶ್ಲೋಕ. ಮಳೆಗಾಲದ ಸಮಯವೆಂದು ಘೋಷಣೆ ಕೂಗುತ್ತಿರುವಂತೆ ನಾನಾ ಸೂಚನೆಗಳನ್ನು ಕೊಡುತ್ತಿರುವ ಅದನ್ನು ನಾನಾವಿಧದ ಆಡಂಬರದ ಕ್ರಿಯೆಗಳಿಂದ ಸಾರುತ್ತಿರುವ ಇಂದ್ರನ ಹಸುಗಳಂತೆ ಮಿಂಚುತ್ತಿರುವ ಮೋಡಗಳು,( ಗುಡುಗು,ಸಿಡಿಲು,ಬಿರುಗಾಳಿ, ಮಿಂಚು,ಕತ್ತಲೆ ಕವಿಯುವುದು,ಬರುವ ಮೊದಲೇ ಬೃಹತ್ ಶಬ್ದ ಇವೆಲ್ಲ ಸೂಚನೆ) ( ಲೋಕದ ಕ್ಷೇಮಕ್ಕೆ ಅಗತ್ಯವಾದ ನೀರನ್ನು ಇಂದ್ರನು ಮೋಡಗಳಿಂದ ಕರೆಯುವುದರಿಂದ ಹಸುಗಳಂತೆ) ,ಇವುಗಳಿಗೆ ನಕ್ಷತ್ರಗಳ ಸಮೂಹವೇ ಆವರಣದಂತೆ ಅಥವಾ ವಿಶಾಲವಾದ ಕೈಗಳಂತೆ, ಮಿಂಚೆಂಬ ಹಾವುಗಳಿಗೆ ವಾಸಸ್ಥಾನವಾದ ಹುತ್ತಗಳು ಈ ಮೋಡಗಳು, ಆಕಾಶದ ದಾರಿಯಲ್ಲಿ ಹುಟ್ಟಿಕೊಂಡ ಬೃಹತ್ ಮರಗಳು ಈ ಮೇಘಗಳು,( ದಾರಿಯ ಇಕ್ಕೆಲಗಳಲ್ಲಿ ಮರಗಳಿರುವಂತೆ ಆಕಾಶಮಾರ್ಗದಲ್ಲಿ ಮೋಡಗಳು) ,ಇನ್ನೂ ಹೇಳಬೇಕೆಂದರೆ ಮನ್ಮಥನ ಕಾಮಬಾಣಗಳನ್ನು ಚೂಪುಮಾಡುವ ಕಲ್ಲುಗಳು,( ಈ ಸಮಯ ಪ್ರೇಮಾಭಿವೃದ್ಧಿಗೆ  ಸುಸಮಯ ) ಬಹುಕಾಲದ ವಿರಹದಿಂದ ಕೋಪಗೊಂಡ ಮಹಿಳೆಯರಿಗೆ ಪ್ರ...
🌹ಶಾಕುಂತಲದ ಉತ್ತಮ ಶ್ಲೋಕ🌹 *तपति तनुगात्रि मदनस्त्वामनिशं मां पुनर्दहत्येव | ग्लपयति यथा शशाङ्कं न तथा हि कुमुद्वतीं दिवस: ||* _ದುಷ್ಯಂತ ಶಕುಂತಲೆಯರು ಪರಸ್ಪರ ಹತ್ತಿರವಿದ್ದರೂ ಮೈಲುಗಟ್ಟಲೆ ದೂರದಲ್ಲಿರುವಂತೆ ಚಡಪಡಿಸುತ್ತಿದ್ದಾರೆ. ರಾಜ ಮರೆಯಲ್ಲಿ ಅವಳ ಮಾತಿಗೆ ಕಿವಿ ಕೊಡುತ್ತಿರುವನು.ಶಕುಂತಲೆ ಹೀಗನ್ನುತ್ತಾಳೆ- ನಿನ್ನ ಮನದ ಅಭಿಪ್ರಾಯ ನನಗೆ ತಿಳಿಯದು.ಆದರೆ ನಿರ್ದಯನೇ ಕಾಮನು ನಿನ್ನಲ್ಲಿ ಆಸಕ್ತಿಯುಳ್ಳ ನನ್ನ ಅಂಗಾಂಗಗಳಿಗೆ ಅಹರ್ನಿಶಿ ನೋವನ್ನುಂಟು ಮಾಡುತ್ತಿರುವನು ಎಂದಾಗ ಆಕಸ್ಮಿಕವಾಗಿ ಅವಳನ್ನು ಸಮೀಪಿಸಿ ಎದುರಿಗೆ ನಿಂತು ದುಷ್ಯಂತನಾಡುವ ಮಾತು. ಕೋಮಲಾಂಗಿಯೇ ,ಕಾಮನು ನಿನಗೆ ಬರಿದೆ ಬೇಗೆಯನ್ನು ಮಾತ್ರ ಉಂಟುಮಾಡುತ್ತಿರುವನು.ಆದರೆ ನನ್ನನ್ನು ಸತತವಾಗಿ ಸುಡುತ್ತಿರುವನು .ಅದು ಹೇಗೆಂದರೆ ಹಗಲು ಚಂದ್ರನಿಗೆ ಎಷ್ಟು ದು:ಖವನ್ನುಂಟುಮಾಡುವುದೋ ಅಷ್ಟು ಕಮಲದ ಬಳ್ಳಿಗಲ್ಲ. ಸೂರ್ಯನು ಹಗಲಿನಲ್ಲಿ ತನ್ನ ಶೌರ್ಯವನ್ನು ಪುರುಷನಾದ ಚಂದ್ರನ ಮೇಲೆ ತೋರುವನೇ ಹೊರತು ಹೆಣ್ಣಾದ ಕುಮುದ್ವತಿಯ ಮೇಲಲ್ಲ. ಕಾಮನು ಕೂಡ ಅವನಂತೆಯೇ.ಅವನು ಪುರುಷನಿಗೆ ಕೊಡುವಷ್ಟು ನೋವನ್ನು ಹೆಣ್ಣಾದ ನಿನಗೆ ಕೊಡಲಾರ. ಶಕುಂತಲೆಯು ಸರಳವಾಗಿ ನುಡಿದ ವಿಷಯವನ್ನು ರಾಜ ಕಾವ್ಯಾತ್ಮಕವಾಗಿ ನುಡಿದು ತನ್ನ ಪ್ರೇಮದ ತಾಪವೇ ಹೆಚ್ಚು ಎನ್ನುತ್ತಿರುವನು. ದೃಷ್ಟಾಂತ ಅಲಂಕಾರ. ಲೋಕದಲ್ಲಿಯೂ ಸಾಮಾನ್ಯವಾಗಿ ಸ್ತ್ರೀಯರು ಬಾಧೆಪಡುವರಾದರೂ ಅಲ್ಪಕಾಲದಲ್ಲಿ ...
🌺ಅವಿಮಾರಕದ ಸುಂದರ ಕುಸುಮ🌺  *न ते न बुद्धिर्मम दूषणीया येन प्रकामं भवितास्मि हास्य:| प्राज्ञस्य मूर्खस्य च कार्ययोगे समत्वमभ्येति तनुर्नबुद्धि: ||* _ಅವಿಮಾರಕ  ಹಾಗೂ ಕುರಂಗಿಯರ ಮಿಲನವಾಗಿ ಅಶ್ರುಬಾಷ್ಪಗಳನ್ನು ಸುರಿಸುತ್ತಿರುವರು. ವಿದೂಷಕನು ಅವರನ್ನು ನೋಡಿ ತನಗೆ ಕಣ್ಣೀರು ಬರುವುದಿಲ್ಲ ಎಂದು ಹಾಸ್ಯ ಮಾಡುವನು.ಆಗ ತಮಾಷೆ ಸಾಕೆಂದು ಅವಿಮಾರಕನು ನುಡಿಯುವ ಮಾತು.ಸ್ನೇಹವೆಂದರೆ ಬಿಡಿಸಲಾಗದ ಬಂಧ. ಈ ವಿಷಯದಲ್ಲಿ ನಿನ್ನ ಅಥವಾ ನನ್ನ ಬುದ್ಧಿಯನ್ನು ದೂಷಿಸಿ ಪ್ರಯೋಜನವಿಲ್ಲ.ನಮ್ಮ ಇಷ್ಟು ದಿನದ ಅವಸ್ಥೆ ಅದು ವಿಧಿ ಲಿಖಿತ. ಅದಕ್ಕಾಗಿ ದೂಷಣೆ ಸಲ್ಲ. ಹಾಗೆ ಹೇಳಿದರೆ ನನ್ನ ಕಾರ್ಯಗಳನ್ನು ನೀನು ಉಪಹಾಸ್ಯ ಮಾಡುವೆ. ಏಕೆಂದರೆ ಕೆಲಸ ಮುಗಿದಾಗ ಬುದ್ಧಿವಂತನ ಹಾಗೂ ಮೂರ್ಖನ ದೇಹ ಒಂದೇ ರೀತಿಯಲ್ಲಿ ಶ್ರಮಿಸಿರುತ್ತದೆ.ಆದರೆ ಬುದ್ಧಿ ಯಲ್ಲ. ನಾನು ಸಾಹಸ ಮಾಡಿ ದೈಹಿಕವಾಗಿ ತುಂಬಾ ಶ್ರಮಪಟ್ಟಿರುವುದು ಸತ್ಯವೇ ಆದರೂ ನಿನ್ನ ಬುದ್ಧಿವಂತಿಕೆ ನನ್ನ ಪ್ರಯತ್ನಕ್ಕೆ ಸಹಕಾರಿಯಾಗಿದೆ. ಹಾಗಾಗಿ ನಮ್ಮಿಬ್ಬರ ಸ್ನೇಹವು ಇದನ್ನು ಸಾಧ್ಯವಾಗಿಸಿದೆ.ಇಲ್ಲಿ ವಿದೂಷಕನು ಹೆಚ್ಚು ಪ್ರಯತ್ನ ಪಡದಿದ್ದರೂ ರಾಜನು ತನ್ನ ಗೆಳೆಯನನ್ನು ಬಿಟ್ಟುಕೊಡಲಾರ.ತನ್ನ ಪ್ರೀತಿ ಫಲಿಸಿದ್ದಕ್ಕೆ ಅವನೂ ಕಾರಣವೆಂದು ಹೊಗಳುತ್ತಿರುವನು.ಗೆಳೆತನದ ವಿಶಾಲತೆಯೇ ಅದು.ಕಾರ್ಯ ಯಶಸ್ಸು ಪಡೆಯಲು ಇಂತಹ ಆದರ್ಶ ಗೆಳೆತನ ಮುಖ್ಯ ಕಾರಣ ಎಂಬ ಭಾವ ಕವಿಯದ್ದು._...
🌹ಶಾಕುಂತಲದ ಸುಂದರ ಸುಮ🌹 _अयं स ते तिष्ठति सङ्गमोत्सुको विशङ्कसे भीरु यतोवधीरणाम् | लभेत वा प्रार्थयिता न वा श्रियं श्रिया दुराप: कथमीप्सितो भवेत् ||_ *ಶಕುಂತಲೆ ರಾಜನ ನೆನೆದು ಬಾಧೆ ಪಡುತ್ತಿರುವಳು.ರಾಜನು ಅವಳನ್ನೇ ಹುಡುಕುತ್ತಾ ಬಂದು ಮರೆಯಲ್ಲಿ ನಿಂತು ತನ್ನ ಪ್ರೇಮ ಅವಳಿಗೆ ಒಪ್ಪಿಗೆಯೋ ಎಂದು ಪರೀಕ್ಷಿಸುತ್ತಿರುವನು. ಸಖಿಯರ ಸಲಹೆಯಂತೆ ಪ್ರೇಮಪತ್ರ ಬರೆಯಲು ಮುಂದಾಗಿ ರಾಜನು ತಿರಸ್ಕರಿಸುವನೇನೋ ಎಂದು ಸಂದೇಹಪಡುವಳು.ಆಗ ರಾಜನಾಡುವ ಮಾತು. ಹೆದರುವ ಸ್ವಭಾವದವಳೇ ,ನೀನು ಯಾರಿಂದ ತಿರಸ್ಕಾರವಾಗಬಹುದೆಂದಯ ಸಂಶಯ ಪಡುತ್ತಿರುವೆಯೋ ಆ ನಾನು ನಿನ್ನ ಸಮಾಗಮಕ್ಕೆ ಕಾತರದಿಂದ ಕಾಯುತ್ತಿರುವೆನು‌. ಇದು ಹೇಗೆಂದರೆ ಲಕ್ಷ್ಮಿಯನ್ನು ಬಯಸುವವನು ಅವಳನ್ನು ಪಡೆಯಬಹುದು.ಅಥವಾ ಪಡೆಯದೆಯೂ ಇರಬಹುದು.ಆದರೆ ಲಕ್ಷ್ಮಿಯಿಂದಲೇ ಅಪೇಕ್ಷಿಸಲ್ಪಟ್ಟವನು  ಹೇಗೆ ಲಕ್ಷ್ಮಿಗೆ ದುರ್ಲಭನಾಗುವನು .ಎಂದಿಗೂ ಸಾಧ್ಯವಿಲ್ಲ. ಕವಿಯ ಸೂಕ್ಷ್ಮವಾದ ಅನುಭವ ಇಲ್ಲಿ ವ್ಯಕ್ತವಾಗಿದೆ.ಪ್ರೇಮಿಯು ಬಯಸಿದ ತರುಣಿ ಅವನ ಕೋರಿಕೆಯನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು.ಆದರೆ ಸುಂದರಿಯು ಆರಿಸಿದ ಪುರುಷ ಅವಳಿಗೆ ದುರ್ಲಭನಲ್ಲ. ಸ್ವಾಭಾವಿಕವಾಗಿ ಅಂಗೀಕರಿಸುತ್ತಾನೆ.ಪ್ರಕೃತ ದುಷ್ಯಂತನ ಕೋರಿಕೆ ಲೋಕೈಕಸುಂದರಿ ಶಕುಂತಲೆ ಅಂಗೀಕರಿಸುವಳೋ ,ಬಿಡುವಳೋ ಅವಳಿಷ್ಟ.ಆದರೆ ಅವಳೇ ದುಷ್ಯಂತನನ್ನು ಬಯಸಿದಾಗ ಅವನು ಒಪ್ಪದಿರುತ್ತಾನೆಯೇ  ಅವಳ ಪ್ರೇಮಪತ...
🌺ಅವಿಮಾರಕದ ಸುಂದರ ಕುಸುಮ🌺 *सततपरिचितो मनोभियोगात् अधिकरस: प्रथमात् समागमात् | रणशिरसि नृपेण साहसाद्यो विजय इवाद्य मयानुभूयते ||* _ಅವಿಮಾರಕನ ಪ್ರೇಯಸಿ ಪ್ರಿಯನಿಲ್ಲದೆ ನೇಣು ಹಾಕಿಕೊಂಡು ಪ್ರಾಣ ಬಿಡಲು ಉದ್ಯುಕ್ತಳಾದಾಗ ವಿದ್ಯಾಧರನಿಂದ ಮಾಯಾ ಉಂಗುರ ಪಡೆದ ಅವಿಮಾರಕನು ಅದೃಶ್ಯನಾಗಿಯೇ ಅವಳನ್ನು ಕಾಪಾಡಿ ತನ್ನ ಹಸ್ತಗಳಲ್ಲಿ ಹಿಡಿದಿದ್ದಾನೆ.ಆ ಕ್ಷಣದಲ್ಲೇ ಅವಳ ಶರೀರದ ಜ್ವರವೆಲ್ಲ ಶಾಂತವಾಗಿದೆ.ನಾಯಕನಿಗೂ ಈ ಸ್ಪರ್ಶ ರೋಮಾಂಚನವನ್ನು  ತಂದುಕೊಟ್ಟಿದೆ. ಸ್ಪರ್ಶದ ಕುರಿತು ನಾಯಕನ ವರ್ಣನೆಯ ಶ್ಲೋಕ. ಇವಳ ಈ ಸ್ಪರ್ಶ ನನಗೆ ವಿಶೇಷ .ಏಕೆಂದರೆ ನಮ್ಮಿಬ್ಬರ ಮನಗಳು ಇಂದಿಗೆ ಒಂದಾಗಿವೆ. ಹೀಗಾಗಿ ಯಾವಾಗಲೂ ನೆನಪು ಮಾಡಿಕೊಳ್ಳುವ ಆ ಮೊದಲ ಭೇಟಿಗಿಂತಲೂ ಆ ಮೊದಲ ಸ್ಪರ್ಶಕ್ಕಿಂತಲೂ ಇಂದಿನ ಈ ಸ್ಪರ್ಶ ನಿಜವಾಗಿಯೂ ವಿಶಿಷ್ಟ. ಆಗ ಬರಿದೆ ಆಕರ್ಷಣೆ ಅಥವಾ ಮೋಹವಿತ್ತು.ಈಗ ಬಹುಕಾಲದ ವಿರಹದ ಕಾರಣ ಪ್ರೀತಿ ಮಾಗಿ ಮಧುರವಾಗಿದೆ. ಬರಿಯ ದೇಹಗಳು ಸೇರದೆ ಈಗ ಮನವೂ ಒಂದಾಗಿರುವುದು ವಿಶೇಷ. ಇದು ಹೇಗೆಂದರೆ ರಣದಲ್ಲಿ ಕಲಿಗಳೊಡನೆ ಸತತವಾಗಿ ಹೋರಾಡುತ್ತಾ ಸಾಹಸದಿಂದ ಪಡೆದ ವಿಜಯವು ಆ ರಾಜನಿಗೆ ಮರೆಯಲಾಗದ ಘಟನೆಯಂತೆ ನನಗೆ ಈ ಪ್ರಿಯೆಯ ಮಿಲನವು ಮರೆಯಲಾಗದ ಅನುಭವ. ಇಲ್ಲಿ ನಾಯಕನು ಕ್ಷತ್ರಿಯನಾದ್ದರಿಂದ ದೃಷ್ಟಾಂತವೂ ರಣದ ಬಗ್ಗೆಯೇ ಇದೆ. ಕವಿ ತಾನು ಪಾತ್ರವಾಗಿ ಆಲೋಚನೆ ಮಾಡುವ ಪರಿ ಇದು. ಮೊದಲ ಸಂಪರ್ಕ ಕಾಲದಲ್ಲಿ  ನೀರಿನ ಹನಿ...
🌺ಶಾಕುಂತಲದ ಒಂದು ಸುರಭಿ🌹 *इदमशिशिरैरन्स्तापाद्विवर्णमणीकृतं निशि निशि भुजन्यस्तापाङ्गप्रसारिभिरश्रुभि:| अनभिलुलितज्याघाताङकं मुहुर्मणिबन्धनात् कनकवलयं स्रस्तं स्रस्तं मया प्रतिसार्यते ||* _ದುಷ್ಯಂತನ ಪರಿಸ್ಥಿತಿಯನ್ನು ನೆನೆದು ಪ್ರಿಯಂವದೆ ಸಖಿಯ ಬಳಿ ರಾಜನು ಕೃಶನಾಗಿರಬೇಕೆಂದು ಹೇಳುವಾಗ ರಾಜ ತನ್ನಲ್ಲೇ ಆಡುವ ನುಡಿ. ನಿಜವಾಗಿಯೂ ಕಾಂತಿಹೀನನಾಗಿದ್ದೇನೆ. ತೋಳಿನ ಮೇಲೆ ತಲೆ ಇಟ್ಟು ಕಣ್ಣಿನ ಕುಡಿಯಿಂದ ಉದುರುವ ಮನದ ಬೇಗೆಯಿಂದ ಬೆಚ್ಚಗಿರುವ ಕಣ್ಣೀರು ಬಿದ್ದು ಕೈಯಲ್ಲಿ ಧರಿಸಿರುವ ರತ್ನ ಖಚಿತವಾದ ಬಳೆಯು ಮಲಿನವಾಗಿದೆ. ಕ್ಷತ್ರಿಯರಿಗೆ ಸಾಮಾನ್ಯವಾದ ಧನುಸ್ಸಿನ ಹೆದೆಯೇರಿಸುವಾಗ ಕೈಮೇಲೆ ಉಂಟಾದ ಗಾಯಕ್ಕೆ ತಾಗದಿರುವ ಆ ಬಳೆ ಆಹಾರ ನಿದ್ರೆಗಳ ಉಪವಾಸ ಸತ್ಯಾಗ್ರಹದಿಂದ ಮತ್ತೆ ಮತ್ತೆ ಮುಂಗೈಯಿಂದ ಕೆಳಗೆ ಸರಿದು ಗಾಯವನ್ನು ಕೆರಳಿಸುತ್ತಿರುವ ಕಡಗವನ್ನು ಪ್ರತಿಬಾರಿಯೂ ಹಿಂದೆ ಸರಿಸುತ್ತಿದ್ದೇನೆ. ಭುಜಗಳ ಮೇಲೆ ತಲೆ ಇಟ್ಟು ರೋದಿಸುವಾಗ ಕಣ್ಣೀರು ಕೆಳಗಿಳಿಯುತ್ತಿದೆ.ಅದು ಒಳಗಿನ ದು:ಖವೆಂಬ ಬೆಂಕಿಯನ್ನು ಹೊರ ಹಾಕುತ್ತಿದೆ.ಹಾಗಾಗಿ ಬಿಸಿಯಾಗಿದೆ. ದು:ಖದ ಸಂದರ್ಭದಲ್ಲಿ ಬರುವುದೆಲ್ಲ ಬಿಸಿಯೇ ಬಿಸಿಯುಸಿರು ಇತ್ಯಾದಿ. ಕಡಗದಲ್ಲಿ ಜೋಡಿಸಿದ ರತ್ನಗಳು ಮಲಿನವಾಗಿವೆ ಕಣ್ಣೀರಿನ ಸ್ಪರ್ಶದಿಂದ. ಸಾಮಾನ್ಯವಾಗಿ ರತ್ನಗಳು ನಿರಂತರ ನೀರಿನ ಸಂಪರ್ಕ ಪಡೆದು ನೈಜತೆ ಕಳೆದುಕೊಳ್ಳುವವು. ರಾಜನ ಪರಾಕ್ರಮಕ್ಕೆ ಸಾಕ್ಷಿ...
🌺ಅವಿಮಾರಕದ ಒಂದು ಸುಮ🌺 *सव्ये करे समुपवेश्य मुखं सुदीनं कालं मनोभवसहायममृषमाणा | व्यग्रा विचिन्तयति किञ्चिदलोलदृष्टि बाष्पं निवारयितुं ऊर्ध्वमवेक्षमाणा ||* _ಅವಿಮಾರಕನು ತನ್ನ ಪ್ರಿಯಳ ಅವಸ್ಥೆಗಳನ್ನು ವರ್ಣಿಸುತ್ತಿರುವನು. ಸುಂದರ ಕವಿ ಕಲ್ಪನೆ. ಕುರಂಗಿಯು( ನಾಯಕಿ) ತನ್ನ ದು:ಖದಿಂದ ಬಸವಳಿದ ಅಥವಾ ಕಳಾಹೀನವಾದ ಮೊಗವನ್ನು ಎಡಗೈಯಲ್ಲಿ ಇರಿಸಿ ಅಥವಾ ಆನಿಸಿ ,ಕಾಮನ ಗೆಳೆಯನಾದ ಮಳೆಗಾಲದ ಈ ಸಮಯದಲ್ಲಿ ಪ್ರಿಯನ ವಿರಹವೇದನೆಯನ್ನು ತಾಳದೆ ಸದಾ ಅತ್ತಿತ್ತ ನೋಟ ಬೀರುತ್ತಿದ್ದ ಕಣ್ಣುಗಳ ನೋಟ ಇಂದು ಒಂದೇ ಕಡೆ ಬೀರುತ್ತಾ, ಅಥವಾ ಪ್ರಿಯನನ್ನೇ ಧ್ಯಾನಿಸುತ್ತಾ ಎಲ್ಲೋ ನೆಟ್ಟದೃಷ್ಟಿಯುಳ್ಳವಳಾಗಿ ,ಈ ಸ್ಥಿತಿಯಿಂದ ಮನಕ್ಕೆ ಸಮಾಧಾನವಿಲ್ಲದೆ ಮನದ ವ್ಯಾಪಾರ ಕೆಟ್ಟುಹೋದವಳಾಗಿ ( ವ್ಯಗ್ರಳಾಗಿ) ,ನಿರಂತರವಾಗಿ ಹರಿಯುತ್ತಿರುವ ಕಣ್ಣೀರನ್ನು ತಡೆಯಲೆಂಬಂತೆ ಮೇಲೆ ನೋಡುತ್ತಿರುವ ಇವಳ ಅವಸ್ಥೆಯನ್ನು ಏನೆಂದು ವರ್ಣಿಸಲಿ! ಇಲ್ಲಿ ಕವಿ ಒಂದೊಳ್ಳೆ ಚಿತ್ರವನ್ನು ಬರೆದಂತೆ ವರ್ಣಿಸಿದ್ದಾನೆ ವಿರಹದಲಿ ಬಳಲಿದ ಬಾಲೆಯನ್ನು.ಚಿಂತೆಯಿಲ್ಲ ಮುಳುಗಿದಾಗ ಎಡಗೈ ಅನಿಸಿ ಯೋಚಿಸುವುದು ಸಹಜ. ಕಾಮನಿಗೆ ಮನೋಭವ ಎಂಬ ಹೆಸರು ಮನದಲ್ಲೇ ಹುಟ್ಟುವ ಬಯಕೆಗಳು ಎಂಬ ಧ್ವನಿ ಅಡಗಿದೆ. ಅಮೃಷ್ಯಮಾಣಾ ಎಂದರೆ ಆ ವಿರಹವು ಸಹಿಸಲು ಅಸಾಧ್ಯ ಎಂದು. ವ್ಯಗ್ರತೆ ಎಂದರೆ ಕೋಪಗೊಳ್ಳುವುದಲ್ಲ ಪ್ರಕೃತ. ಅದು ಮನದ ಸಹಜತೆಯನ್ನು ಹಾಳುಮಾಡಿದ ಸ್ಥಿತಿ. ಅದರಿಂದಾಗಿ...
🌹ಶಾಕುಂತಲದ ಒಂದು ಮಕರಂದ 🌹 *स्मर एव तापहेतु: निर्वापयिता स एव मे जात: |दिवस इवाभ्रश्यामस्तपात्यये जीवलोकस्य||* _ದುಷ್ಯಂತನು ಮರೆಯಲ್ಲಿ ಶಕುಂತಲೆಯನ್ನು ನೋಡುತ್ತಾ ಮಾತುಗಳನ್ನು ಆಲಿಸುತ್ತಿರುವನು. ತನ್ನ ಬಗೆಗೆ ಎಂತಹ ಭಾವನೆ ಅವಳ ಮನದಲ್ಲಿ ಎಂಬ ಕುತೂಹಲ ಅವನಿಗೆ. ನಾಚಿಕೆಯಿಂದ ಶಕುಂತಲೆ ಸಖಿಯರ ಬಳಿ ಮನದ ಭಾವವನ್ನು ವ್ಯಕ್ತಪಡಿಸಿದಾಗ ಅವನಾಡುವ ಮಾತು. ನನ್ನ ಪಾಲಿಗೆ ದು:ಖ ಉಂಟು ಮಾಡಿದವನೂ ಕಾಮನೇ,ದು:ಖ ನಿವಾರಕನೂ ಅವನೇ ಆಗಿದ್ದಾನೆ. ಹೇಗೆಂದರೆ ಬೇಸಿಗೆಯ ಕೊನೆಗೆ ಕಾಣುವ ಕಪ್ಪಾದ ಮೋಡಗಳು ಅತಿ ಹೆಚ್ಚು ತಾಪಕ್ಕೆ ಕಾರಣವಾಗುತ್ತವೆ,ಮಾತ್ರವಲ್ಲದೆ ಮುಂದೆ ಮಳೆ ಸುರಿಸುವುದರ ಮೂಲಕ ಜಗದ ಬೇಗೆಯನ್ನು ಹೋಗಲಾಡಿಸಿ ತಂಪನ್ನೂ ಚೆಲ್ಲುತ್ತವೆ. ಶಕುಂತಲೆಯ ಬಗ್ಗೆ ನನ್ನಲ್ಲಿ ಮೂಡಿದ ಪ್ರೇಮ ನನ್ನ ಈ ಸದಾ ಚಿಂತಿಸುವ ದುರವಸ್ಥೆಗೆ ಕಾರಣವಾಯಿತು. ಆದರೆ ಅವಳ ವಾಣಿಯಿಂದ ನನ್ನ ಮೇಲಿರುವ ಪ್ರೀತಿಯನ್ನು ಕಂಡಾಗ ಅದು ಸಾರ್ಥಕವಾಯಿತೆಂದು ಅನಿಸುವುದು. ಹೀಗೆ ಕಾಮನು ತಾಪವನ್ನು ಶಾಂತಿಯನ್ನು ಮೋಡದಂತೆ ನನ್ನ ಬಾಳಲ್ಲಿ ಉಂಟುಮಾಡಿರುವನು ಎಂಬ ಭಾವ.ಈಗ ಶಕುಂತಲೆಯಲ್ಲಿ ಪ್ರೇಮಭಾವ ಹುಟ್ಟಿಸಿದ್ದು ಅದೇ ಮನ್ಮಥನು ಎಂಬ ಅಭಿಪ್ರಾಯ. ಮೋಡದ ನೆರಳು ವಾತಾವರಣದ ಬಿಸಿಯನ್ನು ಹೆಚ್ಚಿಸುವುದು ಅನುಭವ ಜನ್ಯ.ನಮ್ಮ ಜೀವನದಲ್ಲಿ ಕೆಲವು ಘಟನೆಗಳು ಹೀಗೆ ನಡೆಯುತ್ತವೆ.ದುರ್ಘಟನೆಗಳು ನಮಗೆ ಆ ಕ್ಷಣಕ್ಕೆ ದು:ಖ ಕೊಟ್ಟರೆ ಮುಂದೆ ತಪ್ಪು ಮಾಡದೆ ಜಾಗರೂಕತೆಯನ್...