ಧರ್ಮಾಚರಣೆ-೮೫
ಧರ್ಮಾಚರಣೆ-೮೫
ಏವಮೇನಂ ಶಮಂ ಯಾತಿ ಬೀಜಗರ್ಭಸಮುದ್ಭವಮ್ | ತೂಷ್ಣೀಮೇತಾಃ ಕ್ರಿಯಾಃ ಸ್ತ್ರೀಣಾಂ ವಿವಾಹಸ್ತು ಸಮಂತ್ರಕಃ || ಯಾಜ್ಞವಲ್ಕ್ಯ ಸ್ಮೃತಿ||
ಗರ್ಭಾದಾನ-ಪುಂಸವನ- ಸೀಮಂತ- ಜಾತಕರ್ಮ- ನಾಮಕರಣ- ಅನ್ನಪ್ರಾಶನ- ಉಪನಿಷ್ಕ್ರಮಣ- ಚೌಲ ಹೀಗೆ ಹುಟ್ಟಿದ ಮಗುವಿಗೆ ಸಂಸ್ಕಾರ ಮಾಡಿದಾಗ ಅಂಡಾಣು ಮತ್ತು ವೀರ್ಯಾಣುವಿನಲ್ಲಿ ಅಡಕವಾದ ಹಾಗೂ ಗರ್ಭಕ್ಕೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತವೆ. ಸ್ತ್ರೀ-ಪುರುಷ ಭೇದವಿಲ್ಲದೆ ಈ ಸಂಸ್ಕಾರಗಳನ್ನು ಪ್ರತಿ ಮಗುವಿಗೂ ಮಾಡಬೇಕು. ಸ್ತ್ರೀಯರು ಮಂತ್ರಗಳನ್ನು ಉಚ್ಚರಿಸಿದಾಗ ಅವರ ಗರ್ಭಕೋಶ ಹಾಗೂ ಹಾರ್ಮೋನುಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅಮಂತ್ರಕವಾಗಿ ಇವುಗಳನ್ನು ಮಾಡಬೇಕು. ಪುರುಷರಿಗೆ ಮಂತ್ರಗಳ ಪ್ರಭಾವ ಸಹಕಾರಿ ಆದ ಕಾರಣ ಮಂತ್ರಸಹಿತವಾಗಿ ಮಾಡಬೇಕು. ಸ್ತ್ರೀ ಎಂದು ಸಂಸ್ಕಾರ ಮಾಡದೇ ಉಳಿಯುವುದನ್ನು ಯಾವ ಶಾಸ್ತ್ರಗಳೂ ಒಪ್ಪುವುದಿಲ್ಲ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ