ಧರ್ಮಾಚರಣೆ-೭೯

ಧರ್ಮಾಚರಣೆ-೭೯

ಆಸನಾಚ್ಛಾದನಾದ್ದಾನಾತ್ ಸಂಭಾಷಾತ್ ಸಹಭೋಜನಾತ್ | ಸಂಕ್ರಮಂತೀಹ ಪಾಪಾನಿ ತೈಲಬಿಂದುರಿವಾಂಭಸಿ || ಪರಾಶರ ಸ್ಮೃತಿ||

ಪಾಪಿಗಳ ಜೊತೆಗೆ ನಡೆಯುವುದು- ಕುಳಿತುಕೊಳ್ಳುವುದು- ಮಾತನಾಡುವುದು- ಊಟ ಮಾಡುವುದು ಇತ್ಯಾದಿ ಮಾಡಿದಾಗ ನೀರಿನಲ್ಲಿ ಎಣ್ಣೆಯ ಒಂದು ಬಿಂದುವೂ ಹೇಗೆ ವ್ಯಾಪಿಸುತ್ತದೋ ಅದರಂತೆ ಅವರ ಪಾಪವೂ ನಮ್ಮನ್ನು ವ್ಯಾಪಿಸುವುದು. ಹಾಗಾಗಿ ಪಾಪ ಮಾಡಿದವರ ಜೊತೆಗಿನ ವ್ಯವಹಾರ ಉದ್ದೇಶಪೂರ್ವಕವಾಗಿ ತ್ಯಜಿಸಬೇಕು. ಹೆಂಡದಂಗಡಿಗೆ ಹೋದರೂ ಜನರು ಕುಡಿದರೆಂದೇ ಹೇಗೆ ಭಾವಿಸುವರೋ ಇಲ್ಲಿ ಪಾಪಿಯ ಜೊತೆಗಿನ ಪ್ರತಿಯೊಂದು ಕ್ರಿಯೆಯೂ ಪಾಪಭಾಜನರಾಗಲು ಕಾರಣವಾಗುವುದು. ನಾವೂ ಪಾಪ ಮಾಡದೇ ಪುಣ್ಯಸಂಗ್ರಹದತ್ತ ಗಮನ ಹರಿಸಬೇಕು. 

ಇಲ್ಲಿಗೆ ಪರಾಶರ ಸ್ಮೃತಿಯ ಸಂಗ್ರಹ ಶ್ಲೋಕಗಳು ಮುಗಿದವು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩