ಧರ್ಮಾಚರಣೆ-೭೨

ಧರ್ಮಾಚರಣೆ--೭೨

ಅಸ್ನಾತ್ವಾ ವೈ ನ ಭುಂಜೀತ ತಥೈವಾಗ್ನಿಮಪೂಜ್ಯ ಚ | ನ ಪರ್ಣಪೃಷ್ಠೇ ಭುಂಜೀತ ರಾತ್ರೌ ದೀಪಂ ವಿನಾ ತಥಾ || ಪರಾಶರ ಸ್ಮೃತಿ||

ಸ್ನಾನ ಮಾಡದೇ ಎಂದಿಗೂ ಊಟ ಮಾಡಬಾರದು ಅಥವಾ ಆಹಾರ ಸ್ವೀಕರಿಸಬಾರದು. ಏಕೆಂದರೆ ರಾತ್ರಿಯ ಅವಸ್ಥೆ ಕಳೆದು ಭೋಜನವೆಂಬ ಯಜ್ಞಕ್ಕೆ ಸ್ನಾನ ಮಾಡಿಯೇ ಅಣಿಯಾಗಬೇಕು. ನಿದ್ರೆಯ ಅಮಲು, ದೇಹದ ಅಶುದ್ಧತೆ, ಮನದ ಉದಾಸೀನತೆ ಸ್ನಾನದಿಂದ ದೂರವಾಗುತ್ತದೆ. ಅಗ್ನಿಯನ್ನು ಆರಾಧಿಸದೇ ಅನ್ನ ಉಣ್ಣಬಾರದು. ಅಗ್ನಿಕಾರ್ಯ- ಅಗ್ನಿಹೋತ್ರ- ಔಪಾಸನ- ವೈಶ್ವದೇವ ಇವುಗಳಲ್ಲಿ ಯಾವುದಾದರೂ ರೀತಿಯಿಂದ ಅಗ್ನಿ ಮನೆಯಲ್ಲಿ ಬೆಳಗಿದಾಗ ಆಹಾರ ಶುದ್ಧಿ ಉಂಟಾಗುತ್ತದೆ. ಭಗವದರ್ಪಿತವಾಗಿ ಅದು ಪ್ರಸಾದವಾಗುವುದು. ಬಾಳೆ ಅಥವಾ ಮುತ್ತುಗದ ಎಲೆಯ ಹಿಂಭಾಗದಲ್ಲಿ ಉಣ್ಣಬಾರದು. ಕೀಟಾದಿಗಳ ವಾಸ, ದೊರಗು, ಶಾಸ್ತ್ರ ನಿಷೇಧ ಎಂಬ ಮೂರು ಕಾರಣಗಳಿಂದ ಎಲೆಯ ಮೃದು ಭಾಗವೇ ಶ್ರೇಯಸ್ಕರ. ರಾತ್ರಿ ಎಂದಿಗೂ ದೀಪದ ಬೆಳಕಿನಲ್ಲಿ ಮಾತ್ರ ಉಣ್ಣಬೇಕು. ಕ್ರಿಮಿ ಕೀಟ ಭೂತ ಪ್ರೇತಗಳು ಆಹಾರವನ್ನು ಮಲಿನ ಮಾಡಿ ನಮ್ಮ ದೇಹ ರೋಗಪೀಡಿತವಾಗದಂತೆ ತಡೆಯಲು ಈ ಕ್ರಮ ಅತ್ಯಗತ್ಯ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩