ಪೋಸ್ಟ್‌ಗಳು

ಜುಲೈ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮಾಯಣ ೧೮೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೧🏝📖  *ತಮೇವ ಹತ್ವಾ ಸಬಲಂ ಸಬಾಂಧವಂ ವಿರಾವಣಂ ರಾವಣಮುಗ್ರಪೌರುಷಮ್ | ಸ್ವರ್ಲೋಕಮಾಗಚ್ಛ ಗತಜ್ವರಶ್ಚಿರಂ ಸುರೇಂದ್ರಗುಪ್ತಂ ಗತದೋಷಕಲ್ಮಷಮ್ ||* _ದೇವತೆಗಳ ಪ್ರಾರ್ಥನೆ ಮಹಾವಿಷ್ಣುವನ್ನು ಕುರಿತು- ಹೇ ದೇವದೇವ, ಸೈನ್ಯ ಹಾಗೂ ಬಂಧುಸಮೇತನಾದ, ಅತ್ಯುಗ್ರಪರಾಕ್ರಮಿಯಾದ, ಸರ್ವಜನರಿಗೂ ದುಃಖದಾಯಕನಾದ, ರಾವಣನ ವಧೆ ಮಾಡಿ ದೇವತೆಗಳ ಚಿರಕಾಲದ  ಜ್ವರವನ್ನು ನಿವಾರಿಸಿ ಇಂದ್ರನ ಆಳ್ವಿಕೆಯಲ್ಲಿ ರಕ್ಷಿತವಾದ ಈ ಸ್ವರ್ಗಕ್ಕೆ ಆಗಮಿಸು. ರಾವಣನ ಪರಾಕ್ರಮದ ಬಗೆಗೆ ದೇವತೆಗಳಿಗೆ ಪೂರ್ಣ ಅರಿವಿದೆ. ಉಗ್ರಪೌರುಷ ಎಂದು ಕರೆಯುತ್ತಾರೆ. ಅವನ ಪರಾಕ್ರಮ ಸಹಿಸಲು ಅಸಾಧ್ಯ. ಹಾಗಾಗಿಯೇ ಅವನಿಂದ ದೇವತೆಗಳಿಗೆ ಚಿರಕಾಲದ ಜ್ವರ ಅಥವಾ ಬಾಧೆ. ಬಹುಕಾಲ ಒಂದೇ ಸ್ಥಾನದಲ್ಲಿ ನೆಲೆನಿಂತ ಬಾಧಾಗ್ರಹದಂತಿರುವನು ಇ ದುಷ್ಟ. ಅವನನ್ನು ಬಲ ಹಾಗೂ ಬಂಧು ಎರಡರ ಸಹಿತ ಮುಗಿಸು ಎನ್ನುತ್ತಾರೆ. ಬಲ ಉಳಿದರೆ ಇನ್ನೊಬ್ಬ ಬಂದು ಪೀಡಿಸಿಯಾನು. ಬಂಧುಗಳು ಉಳಿದರೆ ಅದೇ ಮನಸ್ಥಿತಿ ಲೋಕಕ್ಕೆ ತೊಂದರೆ ಕೊಟ್ಟೀತು. ಹಾಗಾಗಿ ದುಷ್ಟತನಕ್ಕೆ ಬೆಂಗಾವಲಾದ ಬಲವನ್ನೂ-ಬಂಧವನ್ನೂ ಕಳಚಿಬಿಡಬೇಕು. ಯುದ್ಧದ ಪೂರ್ವದಲ್ಲಿ ಹನುಮಂತ ಸುಮಾರಾಗಿ ಈ ಕೆಲಸ ಮಾಡುತ್ತಾನೆ. ಇಷ್ಟೆಲ್ಲಾ ಮಾಡಿ ನೀನು ಅಲ್ಲೇ ವಾಸಮಾಡದಿರು. ಹರಿಯ ನೆಲೆ ಇಲ್ಲದಿರೆ ನಮ್ಮ ಅಧಿಕಾರ-ಸುಖಗಳು ಹರಿದುಹಂಚಿಹೋದೀತು. ಹಾಗಾಗಿ ಆದಷ್ಟು ಶೀಘ್ರ ಸುರಲೋಕಕ್ಕೆ ಬಂದುಬಿಡು ಎನ್ನುವರು ಅ...

ಅನೂದಿತಕಥಾವಲಿ ೩೪

अनूदितकथावलिः -३४            .........     सङ्घे शक्तिः    ............. एकस्मिन् जनपदे राज्ञा  एका स्पर्धा आयोजिता। वेगेन यः शीघ्रं धावन्  निर्दिष्टस्थलं गच्छति सः विजयी भवतीति । ये तत्र विजयं प्राप्नुवन्ति तेषां कृते आशा पारितोषकरूपेण दीयते इत्यपि उद्घोषितवान् । सर्वे$पि भागं ग्रहीतुं शक्नुवन्ति । तत्र विशेष नियमः आसीत् यत्  समूहरूपेण सर्ववयस्काः मिलित्वा तस्यां स्पर्धायां भागं ग्रहीतुं शक्नुवन्ति इति । एकैकस्य समूहस्य एकवारम् अवकाशः लभ्यते स्म । सर्वैः समूहसदस्यैरपि निर्धारितं दूरं यथाकथञ्चिदपि गन्तव्यम्  इति ।  विहितसमये स्पर्धा आरब्धा । प्रथमसमूहे अनेकजनाः आसन् । तेषु युवानः  अत्यन्तवेगेन धावमानाः  आसन् । किंतु तत्र समूहस्थाः  वृद्धाः, बालाः तेषां वेगेन गन्तुं  अशक्ताः  मध्ये एव पतिताः । समूहस्थैः सर्वैरपि न उद्देशः साधितः इति  ते  पराजिताः । द्वितीयसमूहस्यापि स्पर्धा यदा आरब्धा तदा तत्रस्थाः  पुरुषाः   मनसि एवं चिन्तितवन्तः । वयं वेगेन प्रथमं गमिष्यामः,...

ರಾಮಾಯಣ ೧೮೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೦🏝📖  *ತ್ವಂ ಗತಿಃ ಪರಮಾ ದೇವ  ಸರ್ವೇಷಾಂ ನಃ ಪರಂತಪ | ವಧಾಯ ದೇವಶತ್ರೂಣಾಂ ನೃಣಾಂ ಲೋಕೇ ಮನಃ ಕುರು ||* _ದೇವತೆಗಳ ಮಾತು ಪರಮಾತ್ಮನನ್ನು ಕುರಿತು- ಹೇ ಭಗವಾನ್ ನಮ್ಮೆಲ್ಲರಿಗೂ ಕೊನೇ ಗತಿ ನೀನೇ. ನಮ್ಮ ಶತ್ರುಗಳನ್ನು ನಾಶಮಾಡುವವನು ನೀನೇ ಆಗಿರುವಿ. ದೇವಶತ್ರುವೆನಿಸಿದ ರಾವಣನ ಸಂಚಾರಕ್ಕಾಗಿ ಮನುಜರ ಲೋಕದಲ್ಲಿ ಜನ್ಮ ತಾಳಲು ಮನಸ್ಸು ಮಾಡು. ದೇವತೆಗಳೇ ಅನನ್ಯಗತಿಕರಾಗಿ ಪ್ರಾರ್ಥಿಸುವಾಗ ಅವರ ದಶಾಂಶವೂ ಯೋಗ್ಯತೆ ಇರದ ನಮಗೆ *ನಾರಾಯಣ* ಎಂಬ ನಾಮ ಹತ್ತಾರು ಬಾರಿ ಪಠಿಸಲು ಏಕೆ ಹಿಂಜರಿಕೆ! ದೇವ ಶತ್ರುವೆಂದಲ್ಲಿ ಅಂತಹವರು ಲೋಕಕಂಟಕರು. ಅವರನ್ನು ಒಪ್ಪುವ, ತುಷ್ಟೀಕರಿಸುವ, ಹೊಗಳುವ ಮಂದಿಯೂ ಒಂದರ್ಥದಲ್ಲಿ ಲೋಕಕಂಟಕರೇ ಸರಿ. ರಾವಣನನ್ನು ಉತ್ತಮ ಆಡಳಿತಗಾರ, ಪರಾಕ್ರಮಿ ಎಂದೆಲ್ಲಾ ಬೊಗಳೆಬಿಡುವ ಅವನ ವಂಶಸ್ಥರು ಅಥವಾ ಅನುಯಾಯಿಗಳು ಲೋಕಕಂಟಕರೇ ಸರಿ. ಅವರನ್ನು ಬೇರೆ ಗತಿಯಿಲ್ಲ ಎಂದೋ, ನಮ್ಮ ಜಾತಿಯವರೆಂದೋ, ನಮಗೆ ಉಪಕಾರ ಮಾಡಿದಾರೆ ಎಂದೋ ಬೆಂಬಲಿಸುವುದು ಲೋಕದ ಅನಿಷ್ಟಗಳಿಗೆ ಬೆಂಬಲ ಕೊಟ್ಟಂತೆ. ಪರಮಾ ಗತಿಃ ಎಂಬ ದೇವತೆಗಳ ಮಾತು ಕೊನೇ ಗತಿ ಅವನೇ ಎಂಬ ಪ್ರಾರ್ಥನೆ. ನೀನಲ್ಲದೆ ನಮ್ಮನ್ನು ಕಾಯುವರಾರು ಎಂಬ ಭಾವ. ನಮ್ಮನ್ನು ಪೊರೆಯಲೆಂದಾದರೂ ಒಮ್ಮೆ ಈ ದುಃಖಭೂಯಿಷ್ಠವಾದ ಜನರ ಮಧ್ಯೆ ಅವತಾರ ತಾಳು ಎಂಬ ನಿವೇದನೆ._ *ಭಯಂ ತ್ಯಜತ ಭದ್ರಂ ವೋ ಹಿತಾರ್ಥಂ ಯುಧಿ ರಾವಣಮ್ |  ಸಪುತ್ರಪೌ...

ರಾಮಾಯಣ ೧೭೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೯🏝📖  *ನಾಕೀರ್ತಯದವಜ್ಞಾನಾತ್ತದ್ರಕ್ಷೋ ಮಾನುಷಾಂಸ್ತದಾ| ತಸ್ಮಾತ್ಸ ಮಾನುಷಾದ್ವಧ್ಯೋ ಮೃತ್ಯುರ್ನಾನ್ಯೋಸ್ಯ ವಿದ್ಯತೇ||* _ಋಷ್ಯಶೃಂಗನು ಅಥರ್ವ ಮಂತ್ರಗಳಿಂದ ಯಾಗ ಮಾಡಲು ತೊಡಗಿದಾಗ ಅಲ್ಲಿಯೇ ಸೂಕ್ಷ್ಮರೂಪದಲ್ಲಿ ನೆರೆದಿದ್ದ ದೇವತೆಗಳು ಬ್ರಹ್ಮನ ಬಳಿ ಪ್ರಾರ್ಥಿಸುತ್ತಾರೆ. ಲೋಕಕಂಟಕನಾದ ರಾವಣನು ಪ್ರಕೃತಿಸಹಜತೆಯನ್ನು ಮೀರಿ ವ್ಯವಸ್ಥೆಯನ್ನು ಹಾಳುಮಾಡುತ್ತಿರುವನು. ಸೂರ್ಯನು ತನ್ನ ಪ್ರಕಾಶ ಬೀರಲು, ಗಾಳಿ ಬೀಸಲು ಅವನಪ್ಪಣೆ ಪಡೆಯಬೇಕಾಗಿದೆ. ಹಾಗಾಗಿ ಅವನ ಮೃತ್ಯುವಿನ ಬಗೆಗೆ ಯೋಚಿಸು ಎಂದಾಗ ಬ್ರಹ್ಮನಾಡಿದ ಮಾತು. ನಾನು ವರ ನೀಡಿದಾಗ ಮಾನವರ ಮೇಲಿನ ತುಚ್ಛ ಭಾವನೆಯಿಂದ ಅವನು ಅವರನ್ನು ಬಿಟ್ಟಿರುವನು. ಹಾಗಾಗಿ ಮಾನವನಿಂದಲೇ ಸಾಯುವನು ಎಂದು. ದೇವ-ದಾನವ-ಗಂಧರ್ವ-ಯಕ್ಷ ಇವರೆಲ್ಲರಿಂದಲೂ ಅವಧ್ಯನೆಂದು ವರ ಕೊಟ್ಟಿರುವೆನು. ಆದರೆ ಮಾನವನ ವಿಷಯದಲ್ಲಿ ಮಾತ್ರ ವರವಿಲ್ಲ. ಇಲ್ಲಿ ಅನೇಕ ವಿಷಯಗಳಿವೆ. ಯಜ್ಞದಲ್ಲಿ ದೇವತೆಗಳು ಹೇಗೆ ಇರುವರೆಂದರೆ ಮಂತ್ರಗಳನ್ನು ಸ್ವರ ಸಹಿತವಾಗಿ ಶ್ರದ್ಧೆಯಿಂದ ನುಡಿದಾಗ ಆಯಾ ದೇವತೆಗಳು ಬಂದು ನೆಲೆಸುವರು. ಅಲ್ಲಿ ಮುಖ್ಯ ಕಾರಣ ಮಂತ್ರ. ಯಜ್ಞದಲ್ಲಿ ಬ್ರಹ್ಮನ ಸ್ಥಾನದಲ್ಲಿ ಕುಳಿತ ಯೋಗ್ಯ ವ್ಯಕ್ತಿಯಲ್ಲಿ ಬ್ರಹ್ಮನೇ ಸ್ವತಃ ಸೂಕ್ಷ್ಮವಾಗಿ ನೆಲೆಸಿರುತ್ತಾನೆ. ಇವರು ಪರಸ್ಪರ ಸಂಭಾಷಿಸುವದನ್ನೇ ಮಹರ್ಷಿಗಳು ಉಲ್ಲೇಖಿಸಿದ್ದಾರೆ. ದೇವತೆಗಳು ಎಂದಿಗೂ ಪ್ರತ್ಯಕ್ಷ ಬರುವುದ...

ರಾಮಾಯಣ ೧೭೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೮🏝📖  *ತತಃ ಪ್ರೀತಮನಾ ರಾಜಾ ಪ್ರಾಪ್ಯ ಯಜ್ಞಮನುತ್ತಮಮ್ | ಪಾಪಾಪಹಂ ಸ್ವರ್ನಯನಂ ದುಷ್ಕರಂ ಪಾರ್ಥಿವರ್ಷಭೈಃ ||* _ಯಜ್ಞವನ್ನು ನೋಡಲು ಬಂದವರೆಲ್ಲರಿಗೂ ಬಯಸಿದ ವಸ್ತುಗಳನ್ನು ಧಾರಾಳವಾಗಿ ದಾನ ಮಾಡಿದನು ರಾಜಾ ದಶರಥ. ಅವರ ಆಶೀರ್ವಾದ ಬಯಸಿ ದೀರ್ಘದಂಡ ನಮಸ್ಕಾರ ಮಾಡಿದನು. ಅವರೆಲ್ಲರೂ ಸಂತೋಷದಿಂದ ಪುತ್ರವಂತನಾಗು ಎಂದು ಹರಸಿದರು. ರಾಜನ ಯಜ್ಞದ ಮುಖ್ಯ ಸಂಕಲ್ಪವೇ ಅದು. ಬರೀ ಸಂತಾನ ಮಾತ್ರವಲ್ಲ, ಈ ಯಜ್ಞ ಎಂದಿಗೂ ಪಾಪವನ್ನು ತೊಳೆಯುವಂತಹದು. ಇದಕ್ಕಿಂತ ಉತ್ತಮವಾದ ಸಾಧನ ಪಾಪ ಕಳೆಯಲು ಮತ್ತೊಂದಿಲ್ಲ. ಸರಿಯಾಗಿ ಬದುಕಿದರೆ ಹೇಗೆ ಪಾಪ ಬಂದೀತು ಎಂದರೆ ಹುಲ್ಲಾಗಲಿ ಮಾಂಸವಾಗಲಿ ತಿಂದರೆ ಪ್ರಾಣಹಾನಿ ಮಾಡಿದ ಪಾಪ. ತಿನ್ನದಿದ್ದರೆ ಆತ್ಮಹತ್ಯೆಯ ಪಾಪ. ಹಾಗಾಗಿ ಕ್ಷಣ ಜೀವಿಸಿದರೂ ಆಗುವ ಪಾಪದ ರಾಶಿ ಸಾವಿರಾರು ಜನ್ಮಗಳಲ್ಲಿ ಕಳೆಯಲು ಆಗದಷ್ಟು. ತನು-ಮನ-ಧನಗಳ ಪೂರ್ಣತ್ಯಾಗವೇ ಪಾಪನಿವಾರಕ. ಅದು ಯಜ್ಞದಲ್ಲಿ ಸಾಕಾರಗೊಳ್ಳುತ್ತದೆ. ಸ್ವರ್ಗಸಾಧನವಾದುದೂ ಹೌದು ಈ ಅಶ್ವಮೇಧ. ಉಳಿದ ರಾಜರಿಂದ ಆಚರಿಸಲು ಅಸಾಧ್ಯವೆನಿಸಿದ ಅದ್ಭುತವಾದ ಈ ಯಜ್ಞದ ಮೂಲಕ ದಶರಥನು ಸಂತಾನಕ್ಕೆ ಪ್ರತಿಬಂಧಕವಾದ ಅನೇಕ ಪಾಪಗಳನ್ನು ಪರಿಹರಿಸಿಕೊಂಡನು. ಸುಮಂತ್ರನ ಮಾತನ್ನು ಮತ್ತೆ ನೆನಪಿಸಿಕೊಂಡು ಸಂತಾನ ಪಡೆಯಲು ಮಾಡಬೇಕಾದ ಕಾರ್ಯದ ಬಗೆಗೆ ಚಿಂತಿಸಿದನು. ಪ್ರತಿಬಂಧಕ ದೂರವಾದರೆ ಮತ್ತೇನು ಎಂದರೆ ಕೊಳೆತದ್ದನ್ನು ದೂರ ಮಾಡಿದ ಕ್ಷಣ...

ಪದಶಕ್ತಿ ೪೪

🏹*ಪದಶಕ್ತಿ* ---೪೪🌄 *ಪವನ* _ಪುನಾತಿ ಇತಿ ಪವನಃ ಎಂಬಂತೆ ಪವಿತ್ರಗೊಳಿಸುವುದು ಎಂಬ ಅರ್ಥದಲ್ಲಿ ಈ ಶಬ್ದ ಪ್ರಯೋಗ ಇದೆ. ಪೂಙ್ ಧಾತುವಿಗೆ ಲ್ಯುಟ್ ಪ್ರತ್ಯಯ ಶುದ್ಧೀಕರಿಸು ಎಂಬ ಅರ್ಥದಲ್ಲಿ ಬಂದು ಈ ಪದ ಸಿದ್ಧವಾಗುತ್ತದೆ._ _ಪವನ ಶಬ್ದಕ್ಕೆ ಪ್ರಸಿದ್ಧ ಅರ್ಥ ಗಾಳಿ. ಅನೇಕ ವಸ್ತುಗಳಿಗೆ ಗಾಳಿ ಹಾಯಿಸಿದಾಗ ಅವುಗಳು ಶುದ್ಧವಾಗುತ್ತವೆ. ನಮ್ಮ ದೇಹದೊಳಗೆ ಆಗಾಗ ಪ್ರಣಾಯಾಮದ ಮೂಲಕ ಗಾಳಿಯನ್ನು ವ್ಯವಸ್ಥಿತವಾಗಿ ಜೋಡಿಸಿದಾಗ ದೇಹವು ಶುದ್ಧವಾಗುವುದು. ಪಾಪದ ಪ್ರಾಯಶ್ಚಿತ್ತ ರೂಪವಾಗಿ ಪ್ರಾಣಾಯಾಮದ ವಿಧಾನವೂ ಇದೇ ಅರ್ಥದಲ್ಲಿ ವಿಹಿತವಾಗಿದೆ. ಹತ್ತು ಅಥವಾ ನೂರು ಅಥವಾ ಸಾವಿರ ಪ್ರಾಣಾಯಾಮ ಮಾಡಿದಾಗ ತನು-ಮನಗಳೆರಡರ ಶುದ್ಧಿ ಸಹಜವಾಗಿ ಆಗುತ್ತದೆ. ಒಗೆಯಲು ಅಸಾಧ್ಯವಾದ ಬಟ್ಟೆಗಳನ್ನು ಗಾಳಿಗೆ ಹರವಿದಾಗ  ಅದೇ ಅದನ್ನು ಶುದ್ಧಮಾಡುತ್ತದೆ.ಹಾಗಾಗಿ ವಾಯು ಪ್ರಧಾನ ಶುದ್ಧಿಕಾರಕ._ _ಎರಡನೆಯದಾಗಿ ಅಕ್ಕಿ ಅಥವಾ ಧಾನ್ಯಗಳನ್ನು ಬೀಸಲು ಉಪಯೋಗಿಸುವ ಮೊರ ಅಥವಾ ತಡ್ಪೆಯೂ ಪವನ. ಅದರ ಕೆಲಸವೂ ಧಾನ್ಯಗಳಲ್ಲಿನ ಧೂಳು-ಕಸ-ಕಡ್ಡಿ-ಕಲ್ಲು-ಹುಳುಗಳ ನಿವಾರಣೆ. ಹಾಗಾಗಿ ಲೋಹದ-ಬಳ್ಳಿಯ-ಪ್ಲಾಸ್ಟಿಕ್ ಮೊದಲಾದ ವಸ್ತುಗಳಿಂದ ತಯಾರಾದ ಬಗೆಬಗೆ ಗಾತ್ರದ ಮೊರದ ಕೆಲಸ ಒಂದೇ ಅದು ಶುದ್ಧೀಕರಿಸುವುದು. ಬಾಗಿನ ಕೊಡುವಾಗಲೂ ಬಹುಶಃ ಮುಂದೆ ಮನೆಯ ವಸ್ತುಗಳ ಸ್ವಚ್ಛತೆಗೆ ಉಪಯೋಗಕ್ಕೆ ಬಂದೀತು ಎನ್ನುವ ದೃಷ್ಟಿಯಿಂದಲೂ ಅದನ್ನೇ ಕೆಲವೆಡೆ ಕೊಡುತ್ತಾರೆ. (ಬೇರೆ ಕಾರಣವೂ ಇದೆ.)_ _ಮತ್ತ...

ಚಾರುದತ್ತ ೨೩

👳‍♀ಚಾರುದತ್ತ ಬೆಳಕು- ೨೩👳‍♀ *यः कश्चिच्चकितगतिर्निरीक्षते मां सम्भ्रान्तो द्रुतमुपसर्पति स्थितो वा । सर्वांस्तांस्तुलयति दोषतो मनो मे  स्वैर्दोषैरभवति हि शङ्कितो मनुष्यः ।।* _ಚಾರುದತ್ತನ ಮನೆಯಲ್ಲಿ ತನ್ನ ಪ್ರಿಯೆಗಾಗಿ ಭೂಷಣಗಳನ್ನು ಕದ್ದು ಪ್ರಿಯೆಗೆ ಒಪ್ಪಿಸಿದಾಗ ಅವಳ ಇಂಗಿತದಂತೆ ಮತ್ತೆ ಚಾರುದತ್ತನ ಬಳಿ ಹೋಗಲು ಹಿಂಜರಿದು ಅವನ ಪ್ರಿಯಳಾದ ವಸಂತಸೇನೆಯ ಬಳಿ ಬಂದಾಗ ಸಜ್ಜಲಕನಾಡುವ ಮಾತು._  _ನಮ್ಮ ಕುಕೃತ್ಯದ ಬಗೆಗಿನ ಹೆದರಿಕೆ ನಿಜಕ್ಕೂ ಕಷ್ಟ.ಏನೋ ಒಂದು ತಪ್ಪು ಮಾಡಿದಾಗ ನಮ್ಮ ಮನಸ್ಸು ಅದರ ಬಗ್ಗೆಯೇ ಚಿಂತಿಸಿ ಸದಾ ಹೆದರಿಕೆಯಿಂದ ನರಳಿಸುತ್ತದೆ. ಅದನ್ನು ಯಾರ ಬಳಿಯಲ್ಲಾದರೂ ನಿವೇದಿಸಿದರೆ ತಕ್ಕಮಟ್ಟಿಗೆ ಆ ಕಾಲದಲ್ಲಿ ದೂರವಾದೀತು. ಅದನ್ನೇ ಇವನು ಈ ಶ್ಲೋಕದಲ್ಲಿ ಮುಂದುವರೆಸುತ್ತಿದ್ದಾನೆ. ಯಾರಾದರೂ ಸಂಶಯದ ದೃಷ್ಟಿಯಿಂದ ನನ್ನನ್ನು ನೋಡಿದರೆ, ಚಂಚಲಕಣ್ಣುಗಳು ನನ್ನನ್ನೇ ಎವೆಯಿಕ್ಕದಂತೆ ನೋಡಿದರೆ, ಅವಸರದಲ್ಲಿ ನನ್ನನ್ನು ಸಮೀಪಿಸಿದರೆ ಅಂತಹವರನ್ನೆಲ್ಲ ನನ್ನ ಮನಸ್ಸು ನನ್ನ ತಪ್ಪು ತಿಳಿದು ದಂಡಿಸಲು ಬಂದವರೆಂದು ಭಾವಿಸುತ್ತದೆ. ತಪ್ಪು ಮಾಡಿದ ಸಮಯದಲ್ಲಿ ಬಂದ ಪ್ರತಿಯೊಬ್ಬರನ್ನೂ ನನ್ನ ತಪ್ಪು ವಿಚಾರಿಸಲು ಬಂದವರೆಂದೇ ಭಾವಿಸುವುದು ಮಾನವನ ಸಹಜಗುಣ. ನನ್ನ ಮನಸ್ಸೂ ಈ ಆಭರಣ ಕದ್ದ ಕಾರಣದಿಂದ ಯಾರನ್ನು ನೋಡಿದರೂ ಅವರೆಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದೆ. ಏಕೆಂದರೆ ಮಾನವನಾದವನು ತ...

ರಾಮಾಯಣ ೧೭೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೭🏝📖    *ನ ಭೂಮ್ಯಾ ಕಾರ್ಯಮಸ್ಮಾಕಂ ನ ಹಿ ಶಕ್ತಾಃ ಸ್ಮ ಪಾಲನೇ | ರತಾಃ ಸ್ವಾಧ್ಯಾಯಕರಣೇ ವಯಂ ನಿತ್ಯಂ ಹಿ ಭೂಮಿಪ||* *ನಿಷಯಂ ಕಿಂಚಿದೇವೇಹ ಪ್ರಯಚ್ಛತು ಭವಾನಿತಿ | ಮಣಿರತ್ನಂ ಸುವರ್ಣಂ ವಾ ಗಾವೋ ಯದ್ವಾ ಸಮುದ್ಯತಮ್||* _ಅಶ್ವಮೇಧದ ದಕ್ಷಿಣೆಯೆಂದು ದಶರಥನು ಪೂರ್ವದಿಕ್ಕಿನ ರಾಜ್ಯಗಳನ್ನು ಹೋತೃವಿಗೆ, ಪಶ್ಚಿಮದ ರಾಜ್ಯಗಳನ್ನು ಅಧ್ವರ್ಯುವಿಗೆ, ಉತ್ತರದಿಕ್ಕಿನ ರಾಜ್ಯಗಳನ್ನು ಉದ್ಗಾತೃವಿಗೆ, ಬ್ರಹ್ಮನಿಗೆ ದಕ್ಷಿಣದಿಕ್ಕಿನ ರಾಜ್ಯಗಳನ್ನು ದಾನವಾಗಿ ಕೊಟ್ಟಾಗ ಅವರಾಡಿದ ಮಾತು. ರಾಜನೇ, ಈ ಭೂಮಿಯನ್ನಾಳಲು ನೀನೇ ಸಮರ್ಥನು. ನಮಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ನಾವು ಯಾವಾಗಲೂ ಅಧ್ಯಯನ-ಅಧ್ಯಾಪನಗಳಲ್ಲಿ ನಿರತರಾಗಿರುವೆವು. ಕೊಡುವುದೇ ನಿನ್ನ ನಿಶ್ಚಯವಾಗಿದ್ದರೆ ಅದರ ಬದಲಿಗೆ ಮಣಿ-ರತ್ನ-ಸುವರ್ಣ-ಗೋವು ಇವುಗಳಲ್ಲಿ ಯಾವುದಾದರೂ ಕೊಡು. ಗೋವುಗಳಿಗೆ ಆ ಕಾಲದಲ್ಲಿ ಇದ್ದ ಪ್ರಾಶಸ್ತ್ಯವನ್ನು ನಾವಿಲ್ಲಿ ಕಾಣಬಹುದು. ಸುವರ್ಣ ಅಥವಾ ರತ್ನಗಳಷ್ಟೇ ಮೌಲ್ಯವನ್ನು ಕೊಡುತ್ತಿದ್ದುದು ಕಾಣುವುದು.‌ ಭೂಮಿಗಾಗಿ ಕಾದಾಡಿದ ಲಕ್ಷಾಂತರ ಜನರ ನಡುವೆಯೂ ಋಷಿಗಳು ಅಥವಾ ಯಾಜ್ಞಿಕರು ಎದ್ದು ಕಾಣುವುದು ಇದೇ ಕಾರಣದಿಂದ. ರಾಜನೇ ಸ್ವತಃ ದಾನ ಮಾಡುತ್ತಿದ್ದರೂ ತಾವು ಸ್ವೀಕರಿಸದೇ ಉಳಿಯುವುದು ಅಥವಾ ಭೂಮಿಯ ಮೇಲಿನ ಆಸೆಯನ್ನು ಬಿಡುವುದು ಮಹಾತ್ಯಾಗ. ಒಂದೊಂದು ರಾಜ್ಯಗಳು ಅಪಾರ ಸಂಪತ್ತಿನಿಂದ ತುಳುಕುವ ಕಾಲದಲ್...

ಚಾರುದತ್ತ೨೨

👳‍♀ಚಾರುದತ್ತ ಬೆಳಕು- ೨೨👳‍♀ *त्वत्स्नेहबद्धहृदयो हि करोम्यकार्यं सन्तुष्टपूर्वपुरुषे$पि कुले प्रसूतः । रक्षामि मन्मथगृहीतमिदं शरीरं मित्रं च मां व्यपदिशस्यपरं च यासि ।।* _ವಸಂತಸೇನೆಯನ್ನು ಪ್ರೀತಿಸುವ ಸಜ್ಜಲಕನೆಂಬ ವಿಟನ ಮಾತು. ಪ್ರಿಯೆಯ ಪ್ರೀತಿಯನ್ನು ಸಂಪಾದಿಸಲು ಚಾರುದತ್ತನ ಮನೆಗೆ ಕನ್ನ ಹಾಕಿ ಆಭರಣಗಳನ್ನು ತಂದಿದ್ದಾನೆ. ಬರುವಾಗ ಯಾರನ್ನೋ ಕೊಂದೋ ಹೊಡೆದೋ ಬಂದಿಯಾ ಎಂದು ಚೇಟಿಯು ಪ್ರಶ್ನಿಸಿದಾಗ ಹಾಗೆಲ್ಲ ಮಾಡುವವನಲ್ಲ ಈ ಹೃದಯಚೋರ. ಕೇವಲ ನಿನ್ನ ಪ್ರೀತಿ ಬಯಸಿ ಈ ಭೂಷಣಗಳನ್ನು ಕದ್ದಿರುವೆನು ಎನ್ನುತ್ತಾನೆ. ಆಗ ಆ ವೇಶ್ಯೆಯು ತುಂಬಾ ಒಳ್ಳೆಯ ವಿಷಯ, ಇದು ನನಗೆ ಪ್ರಿಯ ಎನ್ನುವಳು. ಆಗ ಅವನಾಡುವ ಮಾತು- ನನ್ನ ಪೂರ್ವಜರು ತುಂಬಾ ಸಂತೋಷದಿಂದಿರುವ ಕಾರಣ ನನ್ನ ಜನ್ಮ ಶ್ರೇಷ್ಠವಾದ ವಂಶದಲ್ಲಿ ಉಂಟಾಯಿತು. ಪಿತೃಗಳು ದುಃಖತಪ್ತರಾಗಿದ್ದರೆ ಮಕ್ಕಳು ನಾನಾ ಕಾರಣಗಳಿಂದ ದುಃಖಿಸಬೇಕಾಗುತ್ತದೆ. ಆದರೆ ನನಗೆ ದುಃಖಕಾರಣ ಯಾವುದೂ ಇಲ್ಲ. ಉತ್ತಮ ವಂಶದಲ್ಲಿ ಜನನ, ಪಾಲನೆ ಪೋಷಣೆಗಳು ಸುಖಮಯವಾಗಿ ನಡೆದವು. ಆದರೂ ನಿನ್ನಂತಹ ಸುರಸುಂದರಿಯ ಬಯಸಿ ನಿನ್ನ ಪ್ರೀತಿಯಿಂದ ಬಂಧಿತನಾಗಿ ಈ ಅಕಾರ್ಯವನ್ನೆಲ್ಲಾ ಎಸಗುತ್ತಿರುವೆ. ಕಳ್ಳತನ ನಿಂದಿತಕರ್ಮವೆಂದು ಗೊತ್ತಿದ್ದರೂ ಪ್ರೇಮವೊಂದೇ ನನ್ನನ್ನು ಈ ಕಾರ್ಯದಲ್ಲಿ ತೊಡಗಿಸುತ್ತಿದೆ. ಕಾಮದಿಂದ ಸುಟ್ಟುಹೋಗುತ್ತಿರುವ ಈ ನನ್ನ ತನುವನ್ನು ಹೇಗೊ ರಕ್ಷಿಸಿಕೊಂಡಿದ್ದೇನೆ. ನರನಿಗೆ ಯಾ...

ರಾಮಾಯಣ ೧೭೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೬🏝📖   *ಕೌಸಲ್ಯಾ ತಂ ಹಯಂ ತತ್ರ ಪರಿಚರ್ಯ ಸಮಂತತಃ |ಕೃಪಾಣೈರ್ವಿಶಶಾಸೈನಂ* *ತ್ರಿಭಿಃ ಪರಮಯಾ ಮುದಾ||ಪತತ್ರಿಣಾ ತದಾ ಸಾರ್ಧಂ ಸುಸ್ಥಿತೇನ ಚ ಚೇತಸಾ *ಅವಸದ್ರಜನೀಮೇಕಾಂ ಕೌಸಲ್ಯಾ ಧರ್ಮಕಾಮ್ಯಯಾ||* _ಅಶ್ವಮೇಧ ಎಂದರೆ ಬರೀ ಕುದುರೆಯನ್ನಷ್ಟೇ ಬಲಿ ಕೊಡುವುದಲ್ಲ. ಐನೂರ ಹತ್ತೊಂಬತ್ತು ಬೇರೆ ಬೇರೆ ಪ್ರಾಣಿಗಳನ್ನು ಬಲಿ ಕೊಡುವ ಮಹಾಯಜ್ಞ. ಇಲ್ಲಿ ಪತ್ನಿಯ ಪಾತ್ರ ಎಂತಹದ್ದು ಎನ್ನುವುದಕ್ಕೆ ಈ ಶ್ಲೋಕ ಉತ್ತರ. ಪಟ್ಟಮಹಿಷಿಯಾದ ಕೌಸಲ್ಯೆಯು ಮೇಧಕ್ಕೆ ಸಿದ್ಧವಾದ ಯಜ್ಞವನ್ನು ಶಾಸ್ತ್ರೀಯ ರೀತಿಯಲ್ಲಿ ಪೂಜಿಸಿ-ನಮಸ್ಕರಿಸಿ ಅನಂತರ ಕೃಪಾಣದಿಂದ ಅದರ ಛೇದನಮಾರ್ಗವನ್ನು ಗುರುತು ಮಾಡಿ ಅನಂತರ ಧರ್ಮಕಾಮನೆಯಿಂದ, ಸ್ಥಿರಬುದ್ಧಿಯಿಂದ ಕೂಡಿ ಒಂದು ರಾತ್ರಿ ಬಳಿಯಲ್ಲೇ ಕಳೆದಳು. ಅಶ್ವವೆಂದರೆ ಪರಮಾತ್ಮನ ಒಂದು ರೂಪ ಎಂಬ ಭಾವನೆಯಲ್ಲಿ ಜಾಗರಣೆ ಮಾಡುತ್ತಾ ಭಗವಚ್ಚಿಂತನೆಯಲ್ಲಿ ತೊಡಗುವುದು. ಅನೇಕರು ದಶರಥನ ಪಟ್ಟಮಹಿಷಿ ಕೈಕೇಯಿಯಾಗಿದ್ದಳು, ಕೌಸಲ್ಯೆಯ ಮೇಲೆ ದಶರಥನಿಗೆ ಏನೂ ಪ್ರೀತಿ ಇರಲಿಲ್ಲ ಇತ್ಯಾದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರಿಲ್ಲಿ ವಾಲ್ಮೀಕಿಗಳು ಸ್ಪಷ್ಟವಾಗಿ ಕೌಸಲ್ಯೆಯನ್ನು ಉಲ್ಲೇಖಿಸಿದ್ದಾರೆ. ಮೂವರಲ್ಲಿ ಕೌಸಲ್ಯೆಯು ಪಟ್ಟದರಾಣಿಯಾಗಿದ್ದಳು. ಕೇವಲ ಕಾಮವು ಪಾಪಜನಕ. ಧರ್ಮಸಹಿತ ಕಾಮವು ಮಾತ್ರವೇ ಪುಣ್ಯಪ್ರದ. ಹಾಗಾಗಿ ಧರ್ಮಕಾಮನೆಯಿಂದ ಎಂಬ ಮಾತು ಬಹಳ ಸಾಧುವಾದುದು. ಧರ್ಮಕ್ಕೆ ಸಮ್...

ಧರ್ಮಾಚರಣೆ ೧೪೭

ಧರ್ಮಾಚರಣೆ-೧೪೮ ಸತ್ಯಾsಸತ್ಯಾನ್ಯಥಾಸ್ತೋತ್ರೈರ್ನ್ಯೂನಾಗೇಂದ್ರಿಯರೋಗಿಣಾಮ್| ಕ್ಷೇಮಂ ಕರೋತಿ ಚೇದ್ದಂಡ್ಯಃ ಪಣಾನರ್ಧತ್ರಯೋದಶಾನ್|| ಅಭಿಗಂತಾಸ್ಮಿ ಭಗಿನೀಂ ಮಾತರಂ ವಾ ತವೇತಿ ಹ | ಶಪಂತಂ ದಾಪಯೇದ್ರಾಜಾ ಪಂಚವಿಂಶತಿಕಂ ದಮಮ್ || ||ಯಾಜ್ಞವಲ್ಕ್ಯ ಸ್ಮೃತಿ|| ಯಾರಿಗಾದರೂ ವಿಕಲನಲ್ಲದಿದ್ದರೂ ಕುರುಡ-ಕುಂಟ-ಮೂಗ ಎಂದೆಲ್ಲಾ ನಿಂದಿಸುವುದು, ಉದ್ವೇಗ ಹೆಚ್ಚಾಗುವಂತೆ ಮಾತನಾಡುವುದು, ಅಶ್ಲೀಲ ವಾಕ್ಕನ್ನು ಪ್ರಯೋಗಿಸುವುದು, ಯಾವುದಾದರೂ ರೋಗದ ಹೆಸರಿನಿಂದ ನಿಂದಿಸುವುದು, ನಿನ್ನ ಭಗಿನಿ-ತಾಯಿಯೊಡನೆ ಅಭಿಗಮನ ಮಾಡುವೆನೆಂದು ಕೆಟ್ಟ ಪದಗಳನ್ನು ಪ್ರಯೋಗಿಸುವುದೇ ಮೊದಲಾದ ಮಾತಿನ ತಪ್ಪುಗಳಿಗೆ ಅವನ ಆದಾಯದ ಕೆಲವು ಭಾಗ ದಂಡ ವಿಧಿಸಬೇಕು. ಇಂತಹ ಕರ್ಮಗಳು ಇಹಕ್ಕೂ ಒಳ್ಳೆಯದಲ್ಲ, ಪರಕ್ಕೂ ಪಾಪಕರವೇ ಆಗುತ್ತವೆ. ಹಾಗಾಗಿ ವಿನಾಕಾರಣ ಯಾರನ್ನೂ ನಿಂದಿಸಲು,ಬಿರುನುಡಿಯಲು ತೊಡಗಬಾರದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೬

ಧರ್ಮಾಚರಣೆ-೧೪೭ ಧರ್ಮಜ್ಞಾಃ ಶುಚಯೋsಲುಬ್ಧಾ ಭವೇಯುಃ ಕಾರ್ಯಚಿಂತಕಾಃ | ಕರ್ತವ್ಯಂ ವಚನಂ ತೇಷಾಂ ಸಮೂಹಹಿತವಾದಿನಾಮ್ ||ಯಾಜ್ಞವಲ್ಕ್ಯ ಸ್ಮೃತಿ|| ಒಂದು ಸಮೂಹಕ್ಕೆ ನಾಯಕನನ್ನು ಆರಿಸುವಾಗ ಧರ್ಮದ ನಡೆಯನ್ನು ಸರಿಯಾಗಿ ಅರಿತವರನ್ನು, ಬಾಹ್ಯ-ಅಂತರಗಳಲ್ಲಿ ಅಂದರೆ ಮೈ-ಮನಸ್ಸಿನ ಶುದ್ಧಿಯನ್ನು ಕಾಪಾಡಿಕೊಂಡವರನ್ನು, ಧನ-ಜನರ ವಿಷಯದಲ್ಲಿ ಲೋಭರಹಿತರನ್ನು ಆಯ್ಕೆ ಮಾಡಬೇಕು. ಅಂತಹವರ ಮಾತು ಇಡೀ ಸಮೂಹಕ್ಕೆ ಹಿತವಾದುದಾಗಿರುತ್ತದೆ. ಸಮೂಹದ ಸದಸ್ಯರು ಒಮ್ಮೆ ಆರಿಸಿದ ಮೇಲೆ ನಾಯಕನ ಮಾತನ್ನು ಅಕ್ಷರಶಃ ಅನುಸರಿಸಬೇಕು. ಆಯ್ಕೆ ಮಾಡುವ ಮುನ್ನ ಯೋಗ್ಯತೆ ಪರಿಶೀಲಿಸಿ ಆಯ್ಕೆ ಆದ ನಂತರ ಅನುಸರಿಸುವುದು ಎರಡೂ ಅವಶ್ಯಕ. ಇಂತಹ ನಡೆ ರಾಷ್ಟ್ರದ ಒಳಿತಿಗೆ ಸದಾ ಕಾರಣ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೫

ಧರ್ಮಾಚರಣೆ-೧೪೬ ಕರ್ತವ್ಯಂ ವಚನಂ ಸರ್ವೈಃ ಸಮೂಹಹಿತವಾದಿನಾಮ್ | ಯಸ್ತತ್ರ ವಿಪರೀತಃ ಸ್ಯಾತ್ಸದಾಪ್ಯಃ ಪ್ರಥಮಂ ದಮಮ್ || ಯಾಜ್ಞವಲ್ಕ್ಯ ಸ್ಮೃತಿ|| ಎಲ್ಲರಿಗೂ ಒಳಿತಾಗುವ ಯಾವುದಾದರೂ ಸಲಹೆಯನ್ನು ನಾಯಕನೊಬ್ಬನು ನೀಡಿದರೆ ಸಮೂಹವು ಅದನ್ನು ಅಂಗೀಕರಿಸಬೇಕು. ನಾಯಕನು ನಿಜಕ್ಕೂ ಒಳಿತುಮಾಡುವ ಮನಸ್ಸಿನವನಾಗಿದ್ದೂ ಅವನ ಮಾತನ್ನು ಕೇಳದೆ ವಿತಂಡ ಅಥವಾ ವಿರೋಧ ಮಾಡಿದರೆ ಅಂತಹವನಿಗೆ ರಾಜನು ದಂಡ ವಿಧಿಸಬೇಕು. ದೇಶಕ್ಕೆ-ರಾಜ್ಯಕ್ಕೆ- ಗ್ರಾಮಕ್ಕೆ ಒಳಿತನ್ನು ಬಯಸುವ ಯಾವ ಕಾರ್ಯವನ್ನೂ ವಿನಾಕಾರಣ ವಿರೋಧಿಸಬಾರದು. ಸಮೂಹದ ಶ್ರೇಯಸ್ಸೇ ನಮ್ಮ ಶ್ರೇಯಸ್ಸಿಗೂ ಕಾರಣವಾಗುವುದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೪

ಧರ್ಮಾಚರಣೆ-೧೪೫ ಸಾಹಸಸ್ತೇಯ ಪಾರುಷ್ಯಗೋಭಿಶಾಪಾತ್ಯಯೇ ಸ್ತ್ರಿಯಾಮ್ | ವಿವಾದಯೇತ್ಸದ್ಯ ಏವ ಕಾಲೋsನ್ಯತ್ರೇಚ್ಛಯಾ ಸ್ಮೃತಃ || ಯಾಜ್ಞವಲ್ಕ್ಯ ಸ್ಮೃತಿ|| ವಿಷ ಅಥವಾ ಶಸ್ತ್ರ ಮುಂತಾದವುಗಳಿಂದ ಹಿಂಸೆ ನೀಡುವುದು ಹಾಗೂ ಕೊಲ್ಲುವುದು, ಕಳ್ಳತನ, ಕೆಟ್ಟದಾಗಿ ನಿಂದಿಸುವುದು, ದನಕಳ್ಳತನ ಅಥವಾ ವಧೆ, ಸುಳ್ಳು ಆರೋಪ, ಅತಿಕ್ರಮಿಸುವುದು, ಸ್ತ್ರೀಯರ ಆಚರಣೆಯ ವಿಷಯದಲ್ಲಿ ಅಥವಾ ಸ್ತ್ರೀ  ಯಾರನ್ನು ವರಿಸಿದ್ದಾಳೆ ಮೊದಲಾದ ವಿವಾದಗಳಲ್ಲಿ ಎಷ್ಟು ಶೀಘ್ರವಾಗಿ ಉತ್ತರ ಪಡೆದುಕೊಳ್ಳಲು ಸಾಧ್ಯವೋ ಅಷ್ಟು ಬೇಗ ಆರೋಪಿಗಳಿಂದ ಉತ್ತರ ಪಡೆದು ಕಾಲವ್ಯಯ ಮಾಡದೆ ತೀರ್ಮಾನ ಕೊಡಬೇಕು. ಒಂದು ವೇಳೆ ವಿಚಾರಣೆ-ತೀರ್ಮಾನಗಳು ತಡವಾದರೆ ಪ್ರಾಣ-ಧನ-ಮಾನ ಹಾಗೂ ಸ್ವತ್ವ ಎಲ್ಲವೂ ನಾಶವಾದೀತು. ಹಾಗಾಗಿ ನ್ಯಾಯ ನಿರ್ಣಯಿಸುವಾಗ ಮೊದಲ ಆದ್ಯತೆ ಯಾವುದಕ್ಕೆ ಎಂಬುದನ್ನು ಮಹರ್ಷಿಗಳು ಸ್ಪಷ್ಟವಾಗಿ ಸಾರಿದ್ದಾರೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೩

ಧರ್ಮಾಚರಣೆ-೧೪೪ ವರ್ಣಿನಾಂ ಹಿ ವಧೋ ಯತ್ರ ತತ್ರ ಸಾಕ್ಷ್ಯನೃತಂ ಭವೇತ್ | ತತ್ಪಾವನಾಯ ನಿರ್ವಾಪ್ಯಶ್ಚರುಃ ಸಾರಸ್ವತೋ ದ್ವಿಜೈಃ || ಯಾಜ್ಞವಲ್ಕ್ಯ ಸ್ಮೃತಿ|| ಎಲ್ಲಾದರೂ, ಯಾವುದಾದರೂ ಸಂದರ್ಭದಲ್ಲಿ ನಾವು ಸತ್ಯ ಹೇಳುವುದರಿಂದ ನಾಲ್ಕು ವರ್ಣದವರಲ್ಲಿ ಯಾರದಾದರೂ ವಧೆಯಾಗುವ ಸಂದರ್ಭ ಬಂದರೆ ಅಂತಹ ಸಮಯದಲ್ಲಿ ಅಸತ್ಯ ನುಡಿಯಬೇಕು. ಅದರ ಪ್ರಾಯಶ್ಚಿತ್ತಕ್ಕಾಗಿ ತುಪ್ಪದ ಅನ್ನ ಬೇಯಿಸಿ ನಿವೇದಿಸಿ ಹಸಿದವರಿಗೆ ದಾನ ಮಾಡಬೇಕು. ಜಾತಿ-ಮತ ಯಾವುದೇ ಇರಲಿ ನಮ್ಮ ಒಂದು ನುಡಿ ಒಬ್ಬನ ಪ್ರಾಣ ತೆಗೆಯುವಂತೆ ಆಗಬಾರದು ಎನ್ನುವುದೇ ನಮ್ಮ ಸ್ಮೃತಿಕಾರರ ಆಶಯ. ಅವರು ಯಾರ ಪಕ್ಷಪಾತಿಯೂ ಆಗದೇ ಮಾನವಕುಲವೊಂದೇ ಎಂಬ ಆಶಯ ಹೊಂದಿದ್ದರು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೨

ದೈವೇ ಪುರುಷಕಾರೇ ಚ ಕರ್ಮಸಿದ್ಧಿರ್ವ್ಯವಸ್ಥಿತಾ | ತತ್ರ ದೈವಮಭಿವ್ಯಕ್ತಂ ಪೌರುಷಂ ಪೌರ್ವದೇಹಿಕಮ್ || ಯಾಜ್ಞವಲ್ಕ್ಯ ಸ್ಮೃತಿ|| ಕರ್ಮದ ಫಲವು ಇಷ್ಟ ಹಾಗೂ ಅನಿಷ್ಟರೂಪದಲ್ಲಿರುತ್ತದೆ. ಅದು ದೈವವನ್ನು ಹಾಗೂ ಪುರುಷಪ್ರಯತ್ನವನ್ನು ಅವಲಂಬಿಸಿರುತ್ತದೆ. ದೈವ ಎಂದರೆ ಕಣ್ಣೆದುರು ಕಂಡ ಫಲ. ಪೌರುಷ ಎಂದರೆ ಪೂರ್ವಜನ್ಮಾರ್ಜಿತ ಕರ್ಮದ ಫಲ. ಬರೀ ಈಗಿನ ಪ್ರಯತ್ನ ಅಥವಾ ಕರ್ಮವೊಂದೇ ನಿರ್ಣಾಯಕ ಅಲ್ಲ. ಈಗಿನ ಪ್ರಯತ್ನ ನಿರರ್ಥಕ ಎನಿಸಲು ಕೆಲವೊಮ್ಮೆ ದೈವ, ಕೆಲವೊಮ್ಮೆ ಪೂರ್ವಜನ್ಮದ ಕರ್ಮಫಲ ಕಾರಣವಾಗುವುದು. ಹಾಗಾಗಿಯೇ ಫಲಾಪೇಕ್ಷೆ ಬಿಟ್ಟು ಕರ್ಮ ಮಾಡಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೧

ನ ಯೋಷಿತ್ಪತಿಪುತ್ರಾಭ್ಯಾಂ ನ ಪುತ್ರೇಣ ಕೃತಂ ಪಿತಾ | ದದ್ಯಾದೃತೇ ಕುಟುಂಬಾರ್ಥಾನ್ನ ಪತಿಃ ಸ್ತ್ರೀಕೃತಂ ತಥಾ || ಯಾಜ್ಞವಲ್ಕ್ಯ ಸ್ಮೃತಿ|| ಕುಟುಂಬ ಪೋಷಣೆಯನ್ನು ಬಿಟ್ಟು ಬೇರೆ ಉದ್ದೇಶದಿಂದ  ಪತಿಯು ಮಾಡಿದ ಸಾಲವನ್ನು ಪತ್ನಿಯು, ಪುತ್ರನು ಮಾಡಿದ ಋಣವನ್ನು ತಾಯಿ-ತಂದೆಯರು, ಪತ್ನಿ ಮಾಡಿದ ಋಣವನ್ನು ಪತಿಯು ಹಿಂದಿರುಗಿಸಬಾರದು. ಒಂದು ವೇಳೆ ಕುಟುಂಬ ಪೋಷಣಾರ್ಥವಾಗಿ ಸಾಲ ಮಾಡಿದ್ದರೆ ಅದನ್ನು ಅವರ ಕಾಲದ ನಂತರ ಮಕ್ಕಳು ತೀರಿಸಬೇಕು. ಹಾಗಾಗಿ ಸಾಲ ಮಾಡುವ ಮುನ್ನ ನಮ್ಮ ಆಯುಷ್ಯ ಪ್ರಮಾಣ, ಉದ್ದೇಶ, ದೀರ್ಘಕಾಲದ ಪ್ರಯೋಜನ ಇವುಗಳನ್ನು ವಿಚಾರ ಮಾಡಿ ಮುಂದುವರೆಯಬೇಕು. ವಸ್ತು-ವಾಹನ-ಅಲಂಕಾರ ಮೊದಲಾದ ವಿಷಯಗಳಿಗೆ ಹೆಚ್ಚು ಋಣಭಾರ ಹೊಂದಿದಷ್ಟೂ ಅದು ಆಪತ್ತಿನಲ್ಲಿ ಎಲ್ಲರಿಗೂ ಹಾನಿ ತರುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೪೦

ಧರ್ಮಾಚರಣೆ-೧೪೧ ಪಿಂಡಾಂಸ್ತು ಗೋಜವಿಪ್ರೇಭ್ಯೋ ದದ್ಯಾದಗ್ನೌ ಜಲೇಪಿ ವಾ| ಪ್ರಕ್ಷಿಪೇತ್ಸತ್ಸು ವಿಪ್ರೇಷು ದ್ವಿಜೋಚ್ಛಿಷ್ಟಂ ನ ಮಾರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ|| ಪಿತೃಗಳಿಗೆ ಸಮರ್ಪಿಸಿದ ಪಿಂಡವನ್ನು ಗೋವುಗಳಿಗೆ ಅಥವಾ ಆಡಿಗೆ ಅಥವಾ ಅತ್ಯಂತ ಬಡವನಾದ ವಿಪ್ರನು ಬಯಸಿದಲ್ಲಿ ಅಥವಾ ಬೆಂಕಿಯಲ್ಲಿ ಅಥವಾ ನೀರಿನಲ್ಲಿ ಬಿಡಬೇಕು.  ಪಿಂಡವನ್ನು ಎಲ್ಲೆಲ್ಲೋ ಬಿಸಾಕುವ ಬದಲು ಈ ಮಾರ್ಗವನ್ನು ಅನುಸರಿಸಬೇಕು. ವಿಪ್ರರು ಊಟ ಮಾಡುತ್ತಿರುವಾಗ ಎಂದಿಗೂ ಉಚ್ಛಿಷ್ಟವನ್ನು ತೆಗೆಯಬಾರದು. ಒಬ್ಬರು ಕೂತಿದ್ದರೂ ಅವರು ಎದ್ದ ಮೇಲೆಯೇ ಎಲೆಗಳನ್ನು ತೆಗೆಯಬೇಕು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೯

ಧರ್ಮಾಚರಣೆ-೧೪೦ ದಾತಾರೋ ನೋಭಿವರ್ಧಂತಾಂ ವೇದಾಃ ಸಂತತಿರೇವ ಚ | ಶ್ರದ್ಧಾ ಚ ನೋ ಮಾಗಮದ್ಬಹುದೇಯಂ ನೋ ಅಸ್ತ್ವಿತಿ || ಯಾಜ್ಞವಲ್ಕ್ಯ ಸ್ಮೃತಿ|| ಶ್ರಾದ್ಧದ ಅಂತ್ಯದಲ್ಲಿ ನಮ್ಮ ಪ್ರಾರ್ಥನೆ ಎಷ್ಟು ಉತ್ಕೃಷ್ಟವಾಗಿದೆಯೆಂದರೆ- ನಮ್ಮ ಮನೆಯಲ್ಲಿ, ಕುಟುಂಬದಲ್ಲಿ ದಾನಿಗಳು ಹೆಚ್ಚಾಗಲಿ. ದಾನ ಮಾಡಲು ಸಂಪತ್ತು ಹಾಗೂ ಉದಾರತೆ ಎರಡೂ ಇರುವವರು ಹೆಚ್ಚಲಿ. ಅಧ್ಯಯನ-ಅಧ್ಯಾಪನ ಮೊದಲಾದ ಸತ್ಕರ್ಮಗಳಲ್ಲಿ ತೊಡಗಿಕೊಳ್ಳುವವರ ಸಂತತಿ ಹೆಚ್ಚಾಗಲಿ. ನಮ್ಮ ಸಂತತಿ ಸಮಾಜಕ್ಕೆ ಹಾನಿ ತರದಿರಲಿ. ನಾವು ಮಾಡುವ ಯಾವ ಕರ್ಮದಲ್ಲೂ ಶ್ರದ್ಧೆ ಕಡಿಮೆಯಾಗದಿರಲಿ. ಕರ್ಮದ ಸಾಫಲ್ಯಕ್ಕೆ ಅದೇ ಕಾರಣ. ನಾವು ಇನ್ನೂ ಹೆಚ್ಚು ದಾನ ಮಾಡುವಂತೆ ಅನುಗ್ರಹಿಸಿರಿ. ಶ್ರಾದ್ಧದ ಫಲ ಸಿರಿಸಂಪತ್ತನ್ನೂ-ಆಮುಷ್ಮಿಕ ಫಲವನ್ನೂ ಕೊಡುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೮

ಧರ್ಮಾಚರಣೆ-೧೩೯ ಅಪರಾಹ್ನೇ ಸಮಭ್ಯರ್ಚ್ಯ ಸ್ವಾಗತೇನಾಗತಾಂಸ್ತು ತಾನ್ | ಪವಿತ್ರಪಾಣಿರಾಚಾಂತಾನಾಸನೇಷೂಪವೇಶಯೇತ್|| ಯಾಜ್ಞವಲ್ಕ್ಯ ಸ್ಮೃತಿ|| ಮನೆಯಲ್ಲಿ ಶ್ರಾದ್ಧ ಇದ್ದಾಗ ಹಿಂದಿನ ದಿನ ಆಮಂತ್ರಿಸಿದ ವಿಪ್ರರನ್ನು ಆ ದಿನ ಮಧ್ಯಾಹ್ನದ ಸಮಯದಲ್ಲಿ ಸ್ವಾಗತಿಸಿ ಪಾದ ತೊಳೆದು ಆಚಮನ ಮಾಡಿ ಪವಿತ್ರ ಧರಿಸಿ ಆಸನದಲ್ಲಿ ಕುಳ್ಳಿರಿಸಬೇಕು. ಶ್ರಾದ್ಧವನ್ನು ನಮ್ಮ ಅನುಕೂಲವೆಂದು ಅಥವಾ ಮಠಗಳ ಮಂದಿರಗಳ ಅನುಕೂಲಕ್ಕೆಂದು ಬೇಕುಬೇಕಾದ ಸಮಯಕ್ಕೆ ಮಾಡುವುದು ಎಂದಿಗೂ ಸರಿಯಲ್ಲ. ಈ ಸ್ಮೃತಿ ಹೇಳುವಂತೆ ನಿಮಂತ್ರಿತ ವಿಪ್ರರು ಬರಬೇಕಾದುದೇ ಮಧ್ಯಾಹ್ನ. ಕುತಪ ಕಾಲದಲ್ಲಿ ಅಂದರೆ ಸುಮಾರು ೧೨ ಗಂಟೆಯ ಮೇಲೆ ಆರಂಭಿಸಿ ಮುಂದಿನ ಎಂಟು ಗಳಿಗೆಯಲ್ಲಿ ಅಂದರೆ ಸುಮಾರು ನಾಲ್ಕು ಗಂಟೆಯ ಒಳಗೆ ಮುಗಿಸಬೇಕು. ನಮಗಾದರೂ ಸಮಯಕ್ಕೆ ಸರಿಯಾಗಿ ಊಟ ಕೊಟ್ಟರೆ ಹೊಟ್ಟೆ ತುಂಬುವುದು. ಮಧ್ಯರಾತ್ರಿ ಅಥವಾ ಬೆಳಿಗ್ಗೆ ನಾಲ್ಕು ಗಂಟೆಗೆ ಊಟಕ್ಕೆ ಬನ್ನಿ ಎಂದರೆ ಹೇಗಾಗುವುದು! ಹಾಗಾಗಿ ಶ್ರಾದ್ಧದಲ್ಲಿ ಶ್ರದ್ಧೆಯ ಜೊತೆಗೆ ಸಮಯವೂ ಮುಖ್ಯ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೭

ಧರ್ಮಾಚರಣೆ-೧೩೮ ವ್ಯತೀಪಾತೋ ಗಜಚ್ಛಾಯಾ ಗ್ರಹಣಂ ಚಂದ್ರಸೂರ್ಯಯೋಃ | ಶ್ರಾದ್ಧಂ ಪ್ರತಿರುಚಿಶ್ಚೈವ ಶ್ರಾದ್ಧಕಾಲಾಃ ಪ್ರಕೀರ್ತಿತಾಃ ||ಯಾಜ್ಞವಲ್ಕ್ಯ ಸ್ಮೃತಿ|| ವ್ಯತೀಪಾತಯೋಗ, ಸೂರ್ಯನು ಹಸ್ತಾನಕ್ಷತ್ರದಲ್ಲೂ-ಚಂದ್ರನು ಮಖಾನಕ್ಷತ್ರದಲ್ಲಿ ಇದ್ದಾಗ ಅದು ಗಜಚ್ಛಾಯಾಯೋಗ,  ಸೂರ್ಯ ಹಾಗೂ ಚಂದ್ರನ ಗ್ರಹಣಕಾಲ, ಯುಗಾದಿ, ಮನ್ವಾದಿತಿಥಿಗಳು ಹಾಗೂ ಒಂದು ವೇಳೆ ಶ್ರಾದ್ಧ ಮಾಡಬೇಕೆಂದು ಮನಸ್ಸಿಗೆ ಅನಿಸಿದರೆ ಆ ಕೂಡಲೇ ಶ್ರಾದ್ಧ ಮಾಡಬೇಕು. ಗ್ರಹಣದ ಸಮಯದಲ್ಲಿ ರಾತ್ರಿಶ್ರಾದ್ಧಕ್ಕೂ ಅವಕಾಶವಿದೆ. ಹಾಗಾಗಿ ಶ್ರದ್ಧೆಯೇ ಪ್ರಧಾನವಾಗಿ ನಿಯಮಗಳು ಪೂರಕವಾಗಿ ನಡೆಸುವ ಪಿತೃಕರ್ಮ ಶ್ರಾದ್ಧ. ಇಷ್ಟು ಕಾಲ ಹೇಳಿಯೂ ಒಮ್ಮೆಯೂ ಮಾಡದೇ ಹೋದಾಗ ಪಿತೃದೇವತೆಗಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೬

ಧರ್ಮಾಚರಣೆ-೧೩೬ ದೇವಾತಿಥ್ಯರ್ಚನಕೃತೇ ಗುರುಭೃತ್ಯಾರ್ಥಮೇವ ಚ| ಸರ್ವತಃ ಪ್ರತಿಗೃಹ್ಣೀಯಾದಾತ್ಮವೃತ್ಯರ್ಥಮೇವ ಚ|| ಯಾಜ್ಞವಲ್ಕ್ಯ ಸ್ಮೃತಿ || ದೇವಪೂಜೆಯನ್ನು ನಿಯಮಿತವಾಗಿ ಮಾಡಲು, ಅತಿಥಿ ಸತ್ಕಾರಕ್ಕಾಗಿ, ಮಾತಾ-ಪಿತೃಗಳ ಪೋಷಣೆಗಾಗಿ, ಗುರುಗಳು-ಆಶ್ರಿತರು-ಭೃತ್ಯರು ಮೊದಲಾದವರ ಪೋಷಣೆಯ ಸಲುವಾಗಿ ಹಾಗೂ ಆತ್ಮರಕ್ಷಣೆಗಾಗಿ ಪ್ರತಿಗ್ರಹ ಎಂದರೆ ಇನ್ನೊಬ್ಬರು ಕೊಟ್ಟದ್ದನ್ನು ದಾನ ತೆಗೆದುಕೊಳ್ಳುವುದು ತಪ್ಪಲ್ಲ. ಹೀಗೆ ತೆಗೆದುಕೊಂಡದ್ದನ್ನು ಭೋಗಾರ್ಥವಾಗಿ ಅಂದರೆ ಅತಿಯಾದ ಸುಖಲೋಲುಪತೆಗೆ ಬಳಸಿದರೆ ಅದು ಪಾಪಕಾರಕವಾಗುವುದು. ಈ ಪ್ರತಿಗ್ರಹವನ್ನು ನಿಂದ್ಯರಿಂದ ಪಡೆಯುವುದು ಪಾಪಕಾರಕ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೫

ಧರ್ಮಾಚರಣೆ-೧೩೫ ಪ್ರತಿಗ್ರಹಸಮರ್ಥೋಪಿ ನಾದತ್ತೇ ಯಃ ಪ್ರತಿಗ್ರಹಮ್ | ಯೇ ಲೋಕಾ ದಾನಶೀಲಾನಾಂ ತಾನ್ಸಪ್ರಾಪ್ನೋತಿ ಪುಷ್ಕಲಾನ್ || ಯಾಜ್ಞವಲ್ಕ್ಯ ಸ್ಮೃತಿ|| ಷಟ್ಕರ್ಮಗಳಲ್ಲಿ ದಾನ-ಪ್ರತಿಗ್ರಹ ಎರಡೂ ಸೇರಿದೆ. ಹಾಗಿದ್ದರೂ ಯಾರಾದರೂ ಕೊಟ್ಟದ್ದನ್ನು ಸ್ವೀಕರಿಸುವ ಅಂದರೆ ಪ್ರತಿಗ್ರಹದ ಬಗ್ಗೆ ಹೆಚ್ಚು ಆಸಕ್ತಿ ಇರಬಾರದು‌. ದಾನ ಕೊಟ್ಟದ್ದನ್ನು ಸ್ವೀಕರಿಸಲು ಯೋಗ್ಯತೆ ಇದ್ದರೂ ಯಾರು ಪ್ರತಿಗ್ರಹ ಮಾಡುವುದಿಲ್ಲವೋ ಅಂತಹವರು ದಾನ ಮಾಡುವ ವ್ಯಕ್ತಿ ಹೊಂದುವ ಉತ್ತಮಲೋಕಗಳನ್ನು ಪಡೆಯುವನು. ದಾನಿಯ ಪುಣ್ಯದಷ್ಟೇ ಪುಣ್ಯ ಅಂತಹ ವ್ಯಕ್ತಿಗೆ ಸಿಗುವುದು. ಹಾಗಾಗಿ ಯಾರಾದರೂ ಕೊಡುವರೆಂದ ಕೂಡಲೇ ನಮಗೆ ಅದರ ಅವಶ್ಯಕತೆ ಇದೆಯೋ? ಅದಿಲ್ಲದೆ ನಮ್ಮ ಬದುಕು ಕಷ್ಟವೋ? ಮುಂತಾದುದರ ಬಗೆಗೆ ಸ್ವಲ್ಪ ವಿಚಾರ ಮಾಡಿ ಪ್ರತಿಗ್ರಹ ಮಾಡುವುದು ಇಹ-ಪರ ಶ್ರೇಯಸ್ಕರ. ಎಲ್ಲವನ್ನೂ ನಾವೇ ಪ್ರತಿಗ್ರಹ ಮಾಡುವುದು ಅಥವಾ ಪ್ರತಿಗ್ರಹಕ್ಕಾಗಿ ಕಾಯುವುದು ಯಾವಾಗಲೂ ಒಳ್ಳೆಯದಲ್ಲ. 

ಧರ್ಮಾಚರಣೆ ೧೩೪

ಧರ್ಮಾಚರಣೆ-೧೩೪ ಕುಶಾಃ ಶಾಕಂ ಪಯೋ ಮತ್ಸ್ಯಾ ಗಂಧಾಃ ಪುಷ್ಪಂ ದಧಿ ಕ್ಷಿತಿಃ | ಮಾಂಸಂ ಶಯ್ಯಾಸನಂ ಧಾನ್ಯಾಃ ಪ್ರತ್ಯಾಖ್ಯೇಯಂ ನ ವಾರಿ ಚ || ಯಾಜ್ಞವಲ್ಕ್ಯ ಸ್ಮೃತಿ|| ದರ್ಭೆ-ತರಕಾರಿ-ಹಾಲು-ಮೀನು,ಮಾಂಸ( ಮಾಂಸಾಹಾರಿಗಳಾದ ಪಕ್ಷದಲ್ಲಿ) -ಗಂಧ-ಹೂವು-ಮೊಸರು-ಭೂಮಿ( ಉಳಿದುಕೊಳ್ಳಲು ಜಾಗ) - ಹಾಸಿಗೆ-ಚಾಪೆ, ಕುರ್ಚಿ ಮೊದಲಾದ ಆಸನ- ಧಾನ್ಯಗಳನ್ನು ಯಾರಾದರೂ ಪ್ರೀತಿ ಅಥವಾ ವಿಶ್ವಾಸದಿಂದ ಕೊಟ್ಟರೆ ಮರುಮಾತಿಲ್ಲದೆ ಸ್ವೀಕರಿಸಬಹುದು. ಅವುಗಳನ್ನು ಬೆಲೆ ಕೊಟ್ಟು ತೆಗೆದುಕೊಳ್ಳುವವುದಕ್ಕಿಂತ ಹೀಗೆ ಕೊಡುಕೊಳ್ಳುವಿಕೆ ಮೂಲಕ ಸ್ವೀಕರಿಸುವುದು ಉತ್ತಮ. ಆಹಾರ ಹಾಗೂ ಕೆಲವು ವಸ್ತುಗಳ ಬಗ್ಗೆ ಬೆಲೆ ಕಟ್ಟುವುದು ಅಥವಾ ತಾತ್ಸಾರ ಎಂದಿಗೂ ಸಲ್ಲದು.  ಪರಸಂತೋಷಾಚರಣೆಯೇ ಭಗವಂತನ ಅತಿದೊಡ್ಡ ಪೂಜೆ. ಸಮಯ ಸಂದರ್ಭ ನೋಡಿ ಪ್ರತಿಗ್ರಹ ಮಾಡುವುದು ಇವುಗಳ ವಿಷಯದಲ್ಲಿ ಪಾಪಕರ ಅಲ್ಲ.   ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೩

ಧರ್ಮಾಚರಣೆ-೧೩೩ ಗೃಹಧಾನ್ಯಾಭಯೋ ಪಾನಚ್ಛತ್ರ ಮಾಲ್ಯಾನುಲೇಪನಮ್ | ಯಾನಂ ವೃಕ್ಷಂ ಪ್ರಿಯಂ ಶಯ್ಯಾಂ ದತ್ವಾತ್ಯಂತಸುಖೀ ಭವೇತ್ || ಯಾಜ್ಞವಲ್ಕ್ಯ ಸ್ಮೃತಿ||  ವಸತಿ ಇಲ್ಲದವನಿಗೆ ಮನೆ ಕಟ್ಟಿಸಿಕಟ್ಟಿಕೊಡುವುದು, ಉಣ್ಣಲು ಕಷ್ಟ ಇದ್ದವನಿಗೆ ಧಾನ್ಯ ನೀಡುವುದು, ಭಯಪಡುವವರಿಗೆ ಅಭಯ ನೀಡುವುದು, ಪಿಪಾಸುವಿಗೆ ನೀರು ಅಥವಾ ಪಾನಕ ಕೊಡುವುದು,  ಉಳಿದುಕೊಳ್ಳಲು ಛತ್ರ ಅಥವಾ ಎಲ್ಲಾದರೂ ಜಾಗ ವ್ಯವಸ್ಥೆ ಮಾಡುವುದು, ಧರಿಸಲು ಉತ್ತಮ ಸುಗಂಧದ ಪುಷ್ಪದ ಹಾರ ನೀಡುವುದು, ಪೂಸಿಕೊಳ್ಳಲು ಗಂಧ-ಚಂದನ ನೀಡುವುದು, ವಾಹನಗಳನ್ನು ದಾನ ಮಾಡುವುದು, ಫಲಭರಿತ ಮರವೊಂದನ್ನು ನೆಟ್ಟು ಬಳಸಿಕೊಳ್ಳಲು ಬಿಡುವುದು, ಇದಾವುದೂ ಆಗದಿದ್ದರೂ ವ್ಯಕ್ತಿಗೆ ಯಾವುದು ಇಷ್ಟವೋ ಅದನ್ನು ನೀಡುವುದು ಅಥವಾ ಮಲಗಲು ಹಾಸಿಗೆ ನೀಡುವುದು. ಈ ಎಲ್ಲಾ ದಾನಗಳೂ ಇಹಪರಗಳಲ್ಲಿ ಜನ್ಮಜನ್ಮಗಳಲ್ಲಿ ಸುಖವನ್ನು ತಂದುಕೊಡುತ್ತವೆ. ಹೆಸರಿನ ಕೀರ್ತಿಯ ಅಪೇಕ್ಷೆ ಇಲ್ಲದೆ ಪ್ರತಿಫಲ ಅಥವಾ ಕೃತಜ್ಞತೆ ಬಯಸದೇ ದಾನ ಮಾಡುವುದು ಸರ್ವಥಾ ಶ್ರೇಷ್ಠ ಆಗಿದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೨

ಧರ್ಮಾಚರಣೆ-೧೩೨ ಭೂದೀಪಾಶ್ಚಾನ್ನವಸ್ತ್ರಾಂಭಸ್ತಿಲ ಸರ್ಪಿಃ ಪ್ರತಿಶ್ರಯಾನ್ | ನೈವೇಶಿಕಂ ಸ್ವರ್ಣಧುರ್ಯಂ ದತ್ತ್ವಾ ಸ್ವರ್ಗೇ ಮಹೀಯತೇ || ಯಾಜ್ಞವಲ್ಕ್ಯ ಸ್ಮೃತಿ||  ಧಾನ್ಯ ಮೊದಲಾದ ಫಲಕೊಡುವ ಭೂಮಿಯನ್ನು ದಾನಮಾಡುವುದರಿಂದ ಪಾಪ ನಿವಾರಣೆ, ದೀಪದಾನದಿಂದ ಉತ್ತಮ ದೃಷ್ಟಿ, ಅನ್ನದಾನದಿಂದ ಅಕ್ಷಯ ಸುಖ, ವಸ್ತ್ರದಾನದಿಂದ ಚಂದ್ರಸಾಲೋಕ್ಯ, ಜಲದಾನದಿಂದ ಬದುಕಿನಲ್ಲಿ ತೃಪ್ತಿ, ತಿಲದಾನದಿಂದ ಅನುಕೂಲ ಸಂತಾನ, ಘೃತದಾನದಿಂದ ದೀರ್ಘಾಯುಷ್ಯ, ಧರ್ಮಛತ್ರ ಕಟ್ಟಿಸುವುದರಿಂದ ಸದಾ ಉತ್ತಮ ಮನೆಯಲ್ಲಿ ವಾಸಿಸುವ ಭಾಗ್ಯ, ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವುದರಿಂದ ಅಪಾರ ಪುಣ್ಯ, ಚಿನ್ನದಂತಹ ಬೆಲೆಬಾಳುವ ವಸ್ತುವಿನ ದಾನದಿಂದ ಸ್ವರ್ಗಪ್ರಾಪ್ತಿ. ಆದರೆ ಯಾವ ದಾನವನ್ನೂ ನಾಲ್ಕು ಜನರಿಗೆ ಗೊತ್ತಾಗುವಂತೆ ಹೆಸರು ಹೇಳಿ ಮಾಡಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೩೧

ಧರ್ಮಾಚರಣೆ-೧೩೧ ಶ್ರಾಂತಸಂವಾಹನಂ ರೋಗಿಪರಿಚರ್ಯಾ ಸುರಾರ್ಚನಮ್ | ಪಾದಶೌಚಂ ದ್ವಿಜೋಚ್ಛಿಷ್ಟಂ ಮಾರ್ಜನಂ ಗೋಪ್ರದಾನವತ್|| ಯಾಜ್ಞವಲ್ಕ್ಯ ಸ್ಮೃತಿ|| ಈಗಿನ ಕಾಲದಲ್ಲಿ ಗೋವನ್ನು ಪೋಷಿಸುವವರೇ ಕಡಿಮೆ. ‌ಅಂತಹುದರಲ್ಲಿ ಗೋದಾನ ಕೊಡುವುದಾದರೆ ತೆಗೆದುಕೊಳ್ಳಲು ಜನರೇ ಸಿಗುವುದಿಲ್ಲ. ಅದರ ಬದಲಿಗೆ ದೂರಪ್ರಯಾಣ ಮಾಡಿ ದಣಿದ ಮನುಷ್ಯನಿಗೆ ಆಸನ-ಅಶನ-ಶಯನದ ವ್ಯವಸ್ಥೆ ಮಾಡುವುದು, ಭಯಂಕರ ರೋಗದಿಂದ ಬಳಲುವ ವ್ಯಕ್ತಿಗೆ ಔಷಧ-ನೀರು ಮೊದಲಾದವನ್ನು ಕೊಟ್ಟು ಉಪಚರಿಸುವುದು, ದೇವರನ್ನು ಬಗೆಬಗೆಯಲ್ಲಿ ಪೂಜಿಸುವುದು, ಜ್ಞಾನಿಗಳ ಕಾಲು ತೊಳೆಯುವುದು, ಸಂತರ್ಪಣೆಗಳಲ್ಲಿ ಜನರ ಎಂಜಲೆಲೆಯನ್ನು ತೆಗೆಯುವುದು ಮೊದಲಾದ ಕಾರ್ಯಗಳು ಶ್ರದ್ಧೆಯಿಂದ ಮಾಡಿದಾಗ ಗೋದಾನದ ಪೂರ್ಣಫಲ ದೊರಕುವುದು‌.ಈಗಿನ ಆಧುನಿಕ ಧಾವಂತದ ಬದುಕಿನಲ್ಲಿ ಈ ಮಾರ್ಗ ಅತ್ಯಂತ ಸೂಕ್ತವಾಗಿದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com