ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪದಶಕ್ತಿ ೩೪

🏹*ಪದಶಕ್ತಿ* ---೩೪🌄 *ನಾರದ* _ನರಸ್ಯ ಧರ್ಮ್ಯಮ್ ಎಂಬ ಅರ್ಥದಲ್ಲಿ ನರರ ಧರ್ಮವನ್ನು ಅತಿಕ್ರಮಿಸದೇ ಸದಾಚಾರದಲ್ಲಿ ಇರುವವನು ನಾರದ. ನಾರಂ ದದಾತಿ ಎಂದರೆ ಪರಮಾತ್ಮವಿಷಯಕ ಜ್ಞಾನ ನೀಡುವವನು ನಾರದ. ( ನಾರ ಎಂದರೆ ಜನರ ಹಾಗೂ ಪರಮಾತ್ಮನ ಎಂಬ ಎರಡೂ ಅರ್ಥಗಳು ಇವೆ. ನರಸಂಬಂಧಿ ಎಂಬುದು ಮುಖ್ಯಾರ್ಥ )_ _ನಾರಂ ಪಿತೃಭ್ಯಃ ದದಾತಿ ಎಂದರೆ ತನ್ನ ಸುಚರಿತದಿಂದ ಪಿತೃಗಳಿಗೆ ಸದಾ ಆಹಾರ ನೀಡುತ್ತಾ ಅವರನ್ನು ಉದ್ಧರಿಸಿದ ಕಾರಣ ನಾರದ. ನಾರಂ ಕಲಹೇನ ದ್ಯತಿ ಎಂದರೆ ಜನರನ್ನು ಕಲಹದಿಂದ ಬೇರ್ಪಡಿಸುವವನು ಎಂಬ ಅರ್ಥದಲ್ಲೂ ನಾರದ. ನುಃ ಇದಂ ನಾರಂ ಎಂದರೆ ಅಜ್ಞಾನ. ಅದರ ನಿವಾರಕನು ಸುಜ್ಞಾನ ಉಪದೇಶಿಸುವ ಮೂಲಕ ನಾರದನು ಮಾಡುತ್ತಾನೆ. ಹೀಗೆ ಅನೇಕ ಅರ್ಥಗರ್ಭಿತ ಪದ ನಾರದ. ಬ್ರಹ್ಮನ ಮಾನಸಪುತ್ರ ಹಾಗೂ ಜನ್ಮಾಂತರದಲ್ಲಿ ದಾಸೀಪುತ್ರನಾಗಿ ಜನಿಸಿಯೂ ನಂತರ ಬ್ರಹ್ಮರ್ಷಿಯಾಗಿ ಬೆಳೆದುನಿಂತ ನಾರದರ ವ್ಯಕ್ತಿತ್ವ ನಮ್ಮೆಲ್ಲರ ಬೆಳವಣಿಗೆಗೆ ಭಗವದಾರಾಧನೆಗೆ ಸದಾ ಪ್ರೇರಕ._ _ವಿಶ್ವಾಮಿತ್ರನ ಪುತ್ರರಲ್ಲಿ ಒಬ್ಬನ ಹೆಸರು, ಭಗವಂತನ ಅವತಾರ ರೂಪಗಳಲ್ಲಿ ಒಂದು, ಗಂಧರ್ವರಲ್ಲಿ ಒಬ್ಬ, ಪ್ರಜಾಪತಿಗಳಲ್ಲಿ ಒಬ್ಬನು ನಾರದ. ಹೀಗೆ ಈ ಹೆಸರು ಬೇರೆಯವರಲ್ಲೂ ಇದೆ. ಆದರೆ ಹೆಚ್ಚಿನ ಬಳಕೆ ನಾರದಮುನಿಯಲ್ಲಿ ನಾರಾಯಣ ಭಕ್ತನಲ್ಲಿ ಮಾತ್ರ._ _*ನಾರದೇನೈಷ ಸಂಪೃಷ್ಟೋ* ಎಂಬುದು ವ್ರತಕಥೆಗಳಲ್ಲಿ ಬರುವ ಸಹಜಸಾಲು. ಜನರ ಕಷ್ಟ ನಿವಾರಣೆಗೆ ನಾರದರು ದೇವನ ಬಳಿ ಪರಿಹಾರ ಕೇಳಿ ದುಃಖಿತರ ಕಣ್ಣೊರೆಸು...

ರಾಮಾಯಣ ೧೫೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೫🏝📖   *ಭದ್ರೈರ್ಮಂದ್ರೈರ್ಮೃಗೈಶ್ಚೈವ ಭದ್ರಮಂದ್ರಮೃಗೈಸ್ತಥಾ | ಭದ್ರಮಂದ್ರೈರ್ಭದ್ರಮೃಗೈ ಮೃಗಮಂದ್ರೈಶ್ಚ ಸಾ ಪುರೀ ||* _ವಾಲ್ಮೀಕಿಗಳ ಈ ಶ್ಲೋಕ ನೋಡಿದಾಗ ಮೇಲ್ನೋಟಕ್ಕೆ ಹೇಳಿದ್ದನ್ನೇ ತಿರುಗಿಸಿ ಹೇಳಿದಂತೆ ಕಾಣುತ್ತದೆ. ಆದರೆ ಅರ್ಥ ನೋಡಿದಾಗ ಚಮತ್ಕಾರಿಕ ಶೈಲಿ ಅರಿವಿಗೆ ಬರುತ್ತದೆ. ಹಿಮಾಲಯದಲ್ಲಿ ಹುಟ್ಟಿದ ಭದ್ರ ಜಾತಿಯ ಆನೆಗಳು, ವಿಂಧ್ಯಶ್ರೇಣಿಯಲ್ಲಿ ಹುಟ್ಟಿದ ಮಂದ್ರ ಜಾತಿಯ ಆನೆಗಳು, ಸಹ್ಯಾದ್ರಿ ಯಲ್ಲಿ ಜನಿಸಿದ ಮೃಗ ಜಾತಿಯ ಆನೆಗಳು ಇದ್ದವು. ಆ ಮೂರು ಜಾತಿಗಳ ಆನೆಗಳ ಅನ್ಯೋನ್ಯ ಸಂಪರ್ಕದಿಂದ ಜನಿಸಿದ ಭದ್ರಮಂದ್ರ- ಭದ್ರಮೃಗ- ಮೃಗಮಂದ್ರ ಎಂಬ ಉಪಜಾತಿಗಳ ಆನೆಗಳೂ ಅಸಂಖ್ಯವಾಗಿದ್ದವು. ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಅಥವಾ ಸಾಮಾಜಿಕ ಜೀವನವನ್ನು ಬರಹದಲ್ಲಿ ಇರಿಸುವ ಪ್ರಜ್ಞೆ ಧಾರಾಳವಾಗಿರುವ ಕಾರಣ ಇಂತಹ ಅಪೂರ್ವ ಮಾಹಿತಿ ನಮಗೆ ದೊರಕುತ್ತದೆ. ಪಾಶ್ಚಾತ್ಯರ ಒಬ್ಬನ ಸುತ್ತಲೇ ಗಿರಕಿ ಹೊಡೆಯುವ ಕೃತಕ ಇತಿಹಾಸಗಳಿಗಿಂತ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಬೆಳಕು ಚೆಲ್ಲುವ ರಾಮಾಯಣದಂತಹ ಐತಿಹಾಸಿಕ ಗ್ರಂಥಗಳ ಮಹತ್ವ ಮೇಲೆನಿಸುತ್ತದೆ. ಆನೆಗಳ, ಕುದುರೆಗಳ ಹಾಗೂ ಅನೇಕ ಪ್ರಾಣಿಗಳ ಜಾತಿ, ವರ್ತನೆ, ಸಂಖ್ಯೆ ಹೀಗೆ ಮಹರ್ಷಿಗಳ ಕಥಾನಕದಲ್ಲಿ ಬರುವ ವಿವರಣೆ ನೋಡಿದರೆ ಅವರ ಅಪಾರ ಜ್ಞಾನದ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಗುತ್ತದೆ._ *ಅಷ್ಟೌ ಬಭೂವುರ್ವೀರಸ್ಯ ತಸ್ಯಾಮಾತ್ಯಾ ಯಶಸ್ವಿ...

ರಾಮಾಯಣ ೧೫೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೪🏝📖  *ನ ನಾಸ್ತಿಕೋ ನಾನೃತಕೋ ನ ಕಶ್ಚಿದಬಹುಶ್ರುತಃ | ನಾಸೂಯಕೋ ನ ಚಾಶಕ್ತೋ ನಾವಿದ್ಯಾನ್ವಿದ್ಯತೇ ಕ್ವಚಿತ್ ||* *ವರ್ಣೇಷ್ವಗ್ರ್ಯಚತುರ್ಥೇಷು ದೇವತಾತಿಥಿಪೂಜಕಾಃ | ಕೃತಜ್ಞಾಶ್ಚ ವದಾನ್ಯಾಶ್ಚ ಶೂರಾ ವಿಕ್ರಮಸಂಯುತಾಃ ||* _ಅಯೋಧ್ಯೆಯಲ್ಲಿ ಯಾವೊಬ್ಬ ನಾಸ್ತಿಕನೂ, ಸುಳ್ಳು ಹೇಳುವವನೂ, ಅಲ್ಪವಿದ್ಯೆಯುಳ್ಳವನೂ, ಪರರ ಸಂಪತ್ತು ಅಥವಾ ಅಭಿವೃದ್ಧಿ ಕಂಡು ಮಾತ್ಸರ್ಯಪಡುವವರು, ಕಾರ್ಯಸಾಧನೆಯಲ್ಲಿ ಅಶಕ್ತರೂ ಅಥವಾ ಅಜ್ಞಾನಿಯೂ ಇರಲಿಲ್ಲ. ನಾಸ್ತಿಕ ಎಂದರೆ ಎಲ್ಲರ ಅಸ್ತಿತ್ವ ಒಪ್ಪದೇ ನಿರಾಶಾವಾದಿಯಾಗಿರುವುದು. ಜೀವಜಗತ್ತಿನ ವ್ಯವಸ್ಥೆಯ ದ್ವೇಷಿ  ನಾಸ್ತಿಕನೆನಿಸುತ್ತಾನೆ. ಇನ್ನು ಪರಹಿತಕ್ಕಾಗಿ ಹೇಳುವ ಸುಳ್ಳು ಸುಳ್ಳಲ್ಲ. ಸಜ್ಜನರ- ಲೋಕದ - ಸಮಾಜದ ಹಿತಕ್ಕಾಗಿ ನುಡಿದ ಸುಳ್ಳು ಕ್ಷಮ್ಯ. ಉಳಿದಂತೆ ತನ್ನ ಹಿತಕ್ಕಾಗಿ ಮಾತ್ರ ನುಡಿಯುವ ಸುಳ್ಳಾಡುವವರು ಅಯೋಧ್ಯೆಯಲ್ಲಿ ಇರಲಿಲ್ಲ. ತೃಪ್ತಿ ಎನ್ನುವುದು ಅಯೋಧ್ಯೆಯ ಜನರಲ್ಲಿ ಸಹಜವಾಗಿ ನೆಲೆಸಿದ್ದ ಕಾರಣ ಮಾತ್ಸರ್ಯಕ್ಕೆ ಅವಕಾಶ ಎಂದಿಗೂ ಇರಲಿಲ್ಲ. ಇನ್ನು ಯಾವ ವಿದ್ಯೆಯನ್ನೂ ಸರಿಯಾಗಿ ಅರ್ಜಿಸದೆ ಲೋಕಕ್ಕೆ - ಸಮಾಜಕ್ಕೆ- ತನ್ನ ಕುಟುಂಬಕ್ಕೆ ಭಾರವಾಗಿ ಸಮಾಜವನ್ನು ನಿಂದಿಸುವ ಜನರಾರೂ ಅಲ್ಲಿ ಇರಲಿಲ್ಲ. ಪ್ರತಿಯೊಬ್ಬರೂ ಯಾವುದಾದರೂ ವಿದ್ಯೆಯನ್ನು ಅರ್ಜಿಸಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿದ್ದರು._ _ಇನ್ನೊಂದು ಗಮನಿಸಬೇಕಾದ ಅಂಶ ನಾಲ್ಕು...

ರಾಮಾಯಣ ೧೫೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೩🏝📖  *ನಾಕುಂಡಲೀ ನಾಮುಕುಟೀ ನಾಸ್ರಗ್ವೀ ನಾಲ್ಪಭೋಗವಾನ್ | ನಾಮೃಷ್ಟೋ ನಾನುಲಿಪ್ತಾಂಗೋ  ನಾಸುಗಂಧಶ್ಚ ವಿದ್ಯತೇ || ನಾಮೃಷ್ಟಭೋಜೀ ನಾದಾತಾ ನಾಪ್ಯನಂಗದನಿಷ್ಕಧೃಕ್ | ನಾಹಸ್ತಾಭರಣೋ ವಾಪಿ ದೃಶ್ಯತೇ ನಾಪ್ಯನಾತ್ಮವಾನ್ ||* _ಅಯೋಧ್ಯೆಯಲ್ಲಿ ಜನರ ಬದುಕು ಹೇಗಿತ್ತೆಂಬ ವರ್ಣನೆ ಆರನೇ ಸರ್ಗದಲ್ಲಿ ಮುಂದುವರೆಯುತ್ತದೆ. ಹಿಂದಿನ ಜನಗಳಲ್ಲಿ ಅಲಂಕಾರಪ್ರಿಯತೆ, ಜೀವನೋತ್ಸಾಹ, ಜೀವನಪ್ರೀತಿ ಎಷ್ಟಿತ್ತು ಎಂಬುದು ಇವುಗಳಿಂದ ತಿಳಿದುಬರುತ್ತದೆ. ಎಲ್ಲರೂ ಕರ್ಣಕುಂಡಲಧಾರಿಗಳಾಗಿ, ಶಿರಸ್ತ್ರಾಣಗಳನ್ನೂ ( ಟೊಪ್ಪಿಗೆ, ಮುಂಡಾಸು, ಕಿರೀಟ ಮೊದಲಾದವು) ರತ್ನಹಾರಗಳನ್ನೂ ಧರಿಸುತ್ತಿದ್ದರು. ತುಂಬಾ ಬಡತನ ಎಂಬ ಪದವೇ ಅಯೋಧ್ಯೆಯಲ್ಲಿ ಕೇಳಿಸುತ್ತಿರಲಿಲ್ಲ. ತಮ್ಮ ಅಭಿಲಾಷೆಯನ್ನು ಪೂರ್ಣಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ಯಾರೂ ಸುಳ್ಳಾಡುತ್ತಿರಲಿಲ್ಲ. ಮೈಗೆ ಚಂದನ- ಶ್ರೀಗಂಧ ಮೊದಲಾದವನ್ನು ಪೂಸಿಕೊಂಡು ಸದಾ ನವಯೌವ್ವನಿಗಳಂತೆ ಕಂಗೊಳಿಸುತ್ತಿದ್ದರು. ಕಾಲಕಾಲಕ್ಕೆ ಅಭ್ಯಂಗವನ್ನು ( ಎಣ್ಣೆ ಹಚ್ಚಿ ದೀರ್ಘ ಸ್ನಾನ) ಮಾಡಿ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಅವರ ದೇಹಗಳಲ್ಲಿ ದುರ್ಗಂಧದ ಛಾಯೆ ಎಂದಿಗೂ ಕಂಡು ಬರುತ್ತಿರಲಿಲ್ಲ. ಎಲ್ಲರೂ ಮೃಷ್ಟಾನ್ನಭೋಜನ ಮಾಡುತ್ತಿದ್ದರು. ( ವ್ರತಗಳಲ್ಲಿ ಉಪವಾಸವನ್ನೂ, ಪ್ರಾಯಶ್ಚಿತ್ತ ಮೊದಲಾದ ಸಂದರ್ಭದಲ್ಲಿ ಒಪ್ಪೊತ್ತನ್ನೂ ಮಾಡುತ್ತಿದ್ದರು. ) ದ...

ಅನುವಾದಿತ ಕಥೆ ೨೨

अनूदित कथावलिः ----- २२                  भक्तिरव्यभिचारिणी १. जटिलस्य भीतिः  काननसमीपस्थे एकस्मिन् ग्रामे जटिलनामको बालकः वसति स्म। सः प्रत्यहं अरण्यमार्गमनुसृत्य शालां गच्छति स्म। सः मार्गः सदा तस्य भीतिजनकः आसीत्। अतः कदाचित् शालां गच्छति कदाचित् न । एवं दिनानि यापयति स्म सः । एकदा सः मातुः सकाशे उक्तवान् - अम्ब, अहं शालां गन्तुं नेच्छामि, तन्मार्गे मया भीतिः अनुभूयते प्रत्यहम्, इतः परं तव सकाशे पठितुमिच्छामीति । तया भणितं -' वत्स , कुतः त्वं बिभेषि, यदाकदा त्वया भीतिः अनुभूता चेत् त्वम् अग्रजं मधुसूदनमाह्वय, सः आगत्य त्वां नेष्यति '  इति । अस्त्विति तदाज्ञां शिरसि धृतवान् ।  ततः एकदा गमनकाले सः अतिशयेन भीतः , झटिति आहूतवान् मधुसूदनम्  ' भो मधुसूदन कुत्रासि, अहं बिभेमि, आगच्छ शीघ्रम् ' इति। कुत्र मधुसूदनः , वा अग्रजः ? न को$पि आगतवान्।  तथापि मातृवचने विश्वस्तेन तेन उच्चैः पुनः द्वित्रिवारं आहूतः मधुसूदनः - अरे आगच्छ, कुतः मां परीक्षसि इति। तथापि  तेन अनागते तारकस्वरेण क्रन्दितुमारेभे । तदा तस्य अवस्थां दृष्ट्व...

ಧರ್ಮಾಚರಣೆ ೫೭

ಧರ್ಮಾಚರಣೆ-೫೭ ಏಕಪಂಕ್ತ್ಯುಪವಿಷ್ಟಾನಾಂ ವಿಪ್ರಾಣಾಂ ಸಹಭೋಜನೇ | ಯದ್ಯೇಕೋಪಿ ತ್ಯಜೇತ್ಪಾತ್ರಂ ಶೇಷಮನ್ನಂ ನ ಭೋಜಯೇತ್ || ಪರಾಶರ ಸ್ಮೃತಿ|| ಒಂದೇ ಪಂಕ್ತಿಯಲ್ಲಿ ಕುಳಿತು ಹಸ್ತೋದಕ ಕೊಟ್ಟು ವಿಪ್ರರು ಅಥವಾ ಜ್ಞಾನಿಗಳು ಉಣ್ಣುತ್ತಿರುವಾಗ ಒಬ್ಬನು ಮಧ್ಯದಲ್ಲಿ ಎದ್ದುಹೋದರೂ ಉಳಿದವರು ಊಟ ಮಾಡುವುದು ಸರಿ ಆಗುವುದಿಲ್ಲ. ಹಾಗಾಗಿ ಊಟ ಮಾಡಲೆಂದು ಕೂತ ಮೇಲೆ ಎಲ್ಲರೊಡನೆ ಒಂದಾಗಿ ಪ್ರಸಾದವೆಂದು ಭುಂಜಿಸಬೇಕು. ಎಲ್ಲಿಗೋ ಹೋಗಬೇಕೆಂದೋ, ಬಡಿಸುವುದು ನಿಧಾನವೆಂದೋ, ಹಸಿವೆ ಕ್ಷೀಣವಿದೆ ಎಂದು ಮಧ್ಯದಲ್ಲಿ ಎದ್ದರೆ ಕುಳಿತವರನ್ನು ಅವಮಾನಿಸಿದ ದೊಡ್ಡ ಪಾಪಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳದೇ ಇರುವುದು ಆತ್ಮಕ್ಕೆ ಶ್ರೇಯಸ್ಕರ. ಅದಕ್ಕಾಗಿ ಸಂತರ ಮಾತು *ಉದರ ಭರಣ ನೋಹೇ ಝಾಣಿರೇ ಯಜ್ಞ ಕರ್ಮ* ಎಂದು. ಇದೊಂದು ಯಜ್ಞವೆಂಬ ಭಾವನೆಯಿಂದ ಭುಂಜಿಸತೊಡಗಿದರೆ ಏಳುವ ಪ್ರಸಕ್ತಿ ಎಂದಿಗೂ ಬರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೬

ಧರ್ಮಾಚರಣೆ-೫೬ ತಾಂಬೂಲೇಕ್ಷುಫಲಂ ಚೈವ ಭುಕ್ತಸ್ನೇಹಾನುಲೇಪನೇ | ಮಧುಪರ್ಕೇ ಚ ಸೋಮೇ ಚ ನೋಚ್ಛಿಷ್ಟಂ ಧರ್ಮತೋ ವಿದುಃ || ಪರಾಶರ ಸ್ಮೃತಿ || ತಾಂಬೂಲವನ್ನು ಅನೇಕರು ಒಂದೇ ತಟ್ಟೆಯಿಂದ ಸ್ವೀಕರಿಸುತ್ತಿದ್ದರೂ ಉಚ್ಛಿಷ್ಠ ದೋಷವಿಲ್ಲ. ಕಬ್ಬನ್ನು ಅನೇಕರು ತುಂಡುಗಳನ್ನು ಸ್ವೀಕರಿಸಿದಾಗ ಪರ್ವಭೇದವಿಲ್ಲದಾಗಲೂ ಅಂದರೆ ಒಂದೇ ಗಿಣ್ಣಿನಲ್ಲಿ ಅನೇಕ ತುಂಡನ್ನು ತಿಂದರೂ ಎಂಜಲ ದೋಷವಿಲ್ಲ. ಎಣ್ಣೆ ಅಥವಾ ಜಿಡ್ಡಿನ ಪದಾರ್ಥ ತಿಂದು ಕೈಯ ಜಿಡ್ಡನ್ನು ಅಂಗಗಳಿಗೆ ಲೇಪಿಸಿಕೊಂಡರೆ ದೋಷವಿಲ್ಲ. ಮದುವೆ ಅಥವಾ ದೊಡ್ಡ ಸಮಾರಂಭಗಳಲ್ಲಿ ಮಧುಪರ್ಕ ಒಂದೇ ಪಾತ್ರೆಯಿಂದ ಎಲ್ಲರಿಗೆ ನೀಡುತ್ತಿದ್ದರೂ ಅಲ್ಲೂ ದೋಷವಿಲ್ಲ. ಸೋಮಯಾಗದ ಕಾಲದಲ್ಲಿ ಸೋಮರಸಪಾನ ಏಕಪಾತ್ರದಿಂದಲೇ ಋತ್ವಿಜರಿಗೆ ವಿಹಿತವಾದ ಕಾರಣ ಅಲ್ಲೂ ಉಚ್ಛಿಷ್ಟ ದೋಷ ಇಲ್ಲ.  ಉಳಿದ ಸಂದರ್ಭದಲ್ಲಿ ಎಂಜಲು ದೊಡ್ಡ ದೋಷಕ್ಕೆ ಕಾರಣ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೫

 ಧರ್ಮಾಚರಣೆ -೫೫ ಉಪವಾಸೈರ್ವ್ರತೈಃ ಪುಣ್ಯೈಃ ಸ್ನಾನಸಂಧ್ಯಾರ್ಚನಾದಿಭಿಃ | ಜಪಹೋಮದ್ವಯಾ ದಾನೈಃ ಶುದ್ಧ್ಯಂತೇ ಬ್ರಾಹ್ಮಣಾದಯಃ || ಪರಾಶರ ಸ್ಮೃತಿ ||   ಪಕ್ಷಕ್ಕೊಂದಾವರ್ತಿ ಉಪವಾಸ ಅಥವಾ ವಿಶೇಷ ಪರ್ವಗಳಲ್ಲಿ ಆದರೂ ಉಪವಾಸ, ಪ್ರತಿಯೊಂದು ಮಾಸಗಳಲ್ಲಿ ಬರುವ ನಾನಾ ವ್ರತಗಳಲ್ಲಿ ಕೆಲವನ್ನಾದರೂ ಯಥಾಶಕ್ತಿ ಆಚರಿಸುವುದು, ತೀರ್ಥಗಳಲ್ಲಿ ಕೆಲವೊಮ್ಮೆ ಮಿಂದೇಳುವುದು, ಸಂಧ್ಯಾಸಮಯದಲ್ಲಿ ಭಗವಂತನ ಚಿಂತನೆಯಲ್ಲಿ- ಜ್ಞಾನಾರ್ಜನೆಯಲ್ಲಿ ತೊಡಗುವುದು,  ಪರಮಾತ್ಮನನ್ನು ಭಕ್ತಿಯಿಂದ ಕೆಲವು ನಾಮಗಳಿಂದಾದರೂ ಅರ್ಚಿಸುವುದು, ಇಷ್ಟಮಂತ್ರಗಳನ್ನು ಅಥವಾ ದೇವರ ಹೆಸರುಗಳನ್ನು ಯಥಾಶಕ್ತಿ ಜಪಿಸುವುದು, ಯಜ್ಞ ಮಾಡುವುದು, ಸಂಪತ್ತಿನ ಶೇಖರಣೆಗೆ ಗಮನ ಕೊಡುವಂತೆ ಒಂದು ಭಾಗ ಸದಾ ದಾನ ಮಾಡುವುದು ಇವುಗಳು ಎಲ್ಲಾ ಜಾತಿ- ವರ್ಣಗಳ ಪಾಪ ಪರಿಹಾರಕ ಕರ್ಮಗಳು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೪

ಧರ್ಮಾಚರಣೆ-೫೪ ಚಾತುರ್ವರ್ಣ್ಯಸ್ಯ ನಾರೀಣಾಂ ಕೃಚ್ಛ್ರಂ ಚಾಂದ್ರಾಯಣಂ ವ್ರತಮ್ | ಯಥಾ ಭೂಮಿಸ್ತಥಾ ನಾರೀ ತಸ್ಮಾತ್ತಾಂ ನ ತು ದೂಷಯೇತ್ || ಪರಾಶರ ಸ್ಮೃತಿ|| ಯಾವುದೇ ವರ್ಣದ ಸ್ತ್ರೀಯರು ಎಂತಹ ಪಾಪ ಮಾಡಿದರೂ ಅವರಿಗೆ ತುಂಬಾ ದೊಡ್ಡ ಪ್ರಾಯಶ್ಚಿತ್ತ ಅಥವಾ ಶಿಕ್ಷೆ ಎಂದರೆ ಅದು ದಿನಕ್ಕೊಂದು ತುತ್ತು ಹೆಚ್ಚಿಸಿ- ಕಡಿಮೆ ಮಾಡುತ್ತಾ ಒಂದು ದಿನ ಉಪವಾಸ ಇರುವ ಚಾಂದ್ರಾಯಣ ವ್ರತ ಮಾತ್ರ. ಅದಕ್ಕೆ ಮಿಗಿಲಾಗಿ ಯಾವ ಸ್ತ್ರೀಯನ್ನೂ ಶಿಕ್ಷಿಸಬಾರದು. ಏಕೆಂದರೆ ನಮ್ಮ ಪ್ರಜಾಸಂತತಿ ಬೆಳೆಯಲು ಮುಖ್ಯ ಕಾರಣ ಸ್ತ್ರೀ. ಹಾಗಾಗಿ ಧಾನ್ಯ- ಶಾಕ- ಫಲಗಳ ಉತ್ಪತ್ತಿಗೆ ಆಧಾರವಾದ ಭೂಮಿಯನ್ನು ಹೇಗೆ ಜತನದಿಂದ ರಕ್ಷಿಸುವೆವೋ ಅದರಂತೆ ನಮ್ಮ ಸ್ತ್ರೀಯರನ್ನೂ ರಕ್ಷಿಸಬೇಕು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೩

   ಧರ್ಮಾಚರಣೆ-೫೩ ಡಾಮರೇ ಸಮರೇ ವಾಪಿ ದುರ್ಭಿಕ್ಷೇ ವಾ ಜನಕ್ಷಯೇ | ವಂದಿಗ್ರಾಹೇ ಭಯಾರ್ತೋ ವಾ ಸದಾ ಸ್ವಸ್ತ್ರೀಂ ನಿರೀಕ್ಷಯೇತ್ || ಪರಾಶರ ಸ್ಮೃತಿ|| ಸ್ತ್ರೀಯರ ವಿಷಯದಲ್ಲಿ ನಮ್ಮ ಸ್ಮೃತಿಗಳು ಎಷ್ಟು ಉತ್ತಮ ಭಾವನೆ- ಗೌರವ ತೋರಿದ್ದಾವೆ ಎನ್ನುವುದಕ್ಕೆ ಈ ಮಾತು ಉತ್ತಮ ಉದಾಹರಣೆ. ಎಲ್ಲೋ ದೊಡ್ಡ ಮಟ್ಟದಲ್ಲಿ ದೊಂಬಿ ನಡೆದಾಗ, ಯುದ್ಧದ ಸಮಯದಲ್ಲಿ, ಕ್ಷಾಮದ ಕಾಲದಲ್ಲಿ, ಸ್ತ್ರೀ ಜನಸಂಖ್ಯೆ ತುಂಬಾ ಕಡಿಮೆ ಇದ್ದಾಗ, ಸೆರೆಯಾಳುಗಳಾಗಿದ್ದಾಗ, ತುಂಬಾ ಹೆದರಿಕೆಯಿಂದ ಕೂಡಿ ಸ್ತ್ರೀಯರು ಅತ್ಯಾಚಾರ ಅಥವಾ ಶೋಷಣೆಗೊಳಗಾಗುವ ಸಂಭವವಿದ್ದಾಗ ಅಥವಾ ಅಂತಹ ದುರ್ಘಟನೆ ನಡೆದಾಗ  ಪತಿಯು ಅವಳನ್ನು ಶಿಕ್ಷಿಸದೇ ಸಮಾಧಾನಿಸಿ  ಅವಳನ್ನು ಪರಿಗ್ರಹಿಸಬೇಕು. ಅಂತಹ ಸಮಯದಲ್ಲಿ ಅವಳು ತನ್ನನ್ನು ರಕ್ಷಿಸಿಕೊಳ್ಳಲು ಅಸಮರ್ಥಳಾಗಿರುತ್ತಾಳೆ. ಪತಿಯು ರಕ್ಷಿಸದಿದ್ದಾಗ ಆದ ಅನಾಹುತಕ್ಕೆ ಅವಳನ್ನು ದೂಷಿಸದೇ ಸ್ತ್ರೀಯ ವಿಷಯದಲ್ಲಿ ಉದಾರತೆಯನ್ನು ತೋರಿಸಬೇಕು. ಇದೇ ಸನಾತನ ಧರ್ಮದ ಶ್ರೇಷ್ಠತೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೨

     ಧರ್ಮಾಚರಣೆ- ೫೨ ವಿದ್ಯಮಾನೇಷು ಹಸ್ತೇಷು ಬ್ರಾಹ್ಮಣೋ ಜ್ಞಾನದುರ್ಬಲಃ | ತೋಯಂ ಪಿಬತಿ ವಕ್ತ್ರೇಣ ಶ್ವಯೋನೌ ಜಾಯತೇ ಧ್ರುವಮ್ ||ಪರಾಶರ ಸ್ಮೃತಿ|| ಕೈಗಳು ಸರಿಯಾಗಿದ್ದಾಗ ಅವುಗಳಿಂದ ನೀರನ್ನು   ನಾಯಿ- ಬೆಕ್ಕುಗಳಂತೆ ಬಾಯಿಯಿಂದ ಕುಡಿದ ಮನುಜನು ಮುಂದೆ ಪ್ರಾಣಿಯಾಗಿಯೇ ಹುಟ್ಟುವನು. ನಲ್ಲಿ ಅಥವಾ ತೊರೆ,ಕೆರೆ, ನದಿಯ ನೀರನ್ನು ಕುಡಿಯುವಾಗ ಅಥವಾ ಯಾರಾದರೂ ಕೊಡಪಾನ- ಕಲಶ ಮೊದಲಾದವುಗಳಿಂದ ಕುಡಿಯಲೆಂದು ನೀರು ಸುರಿದಾಗ ಕೈಗಳಿಂದ ಕುಡಿಯಬೇಕು. ಕೈಗಳಿಲ್ಲದ ಮನುಜರಿಗೆ ಮಾತ್ರ ವಿನಾಯಿತಿ ಇದೆ. ಇಲ್ಲದಿದ್ದರೆ ಆ ಎಲ್ಲಾ ನೀರೂ ಎಂಜಲಿಗೆ ಸಮವಾಗುವ ಕಾರಣ ಬ್ರಾಹ್ಮಣನನ್ನು ಉದ್ದೇಶಿಸಿ ಎಲ್ಲರಿಗೂ ಬೋಧಿಸಿರುವುದು. ಭಗವಂತ ಕೊಟ್ಟ ಅಮೂಲ್ಯ ಸಂಪತ್ತು ಎಲ್ಲರ ಬಳಕೆಗೆ ಸಿಗಬೇಕೆಂಬ ಉದಾತ್ತ ಚಿಂತನೆ ಇಲ್ಲಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೧

          ಧರ್ಮಾಚರಣೆ--೫೧ ಏಕೈಕಂ ಹ್ರಾಸಯೇದ್ಗ್ರಾಸಂ ಕೃಷ್ಣೇ ಶುಕ್ಲೇ ಚ ವರ್ಧಯೇತ್ | ಅಮಾವಾಸ್ಯಾಂ ನ ಭುಂಜೀತ ಹ್ಯೇಷಚಾಂದ್ರಾಯಣೋ ವಿಧಿಃ || ಪರಾಶರ ಸ್ಮೃತಿ| ಧರ್ಮಶಾಸ್ತ್ರದಲ್ಲಿ ಬೃಹತ್ ಪಾಪಗಳಿಗೆ ( ಕೊಲೆ, ಹಿಂಸೆ, ಅತ್ಯಾಚಾರ ಮೊದಲಾದವುಗಳಿಗೆ ಪ್ರಾಯಶ್ಚಿತ್ತ ಇಲ್ಲ ) ಪ್ರಾಯಶ್ಚಿತ್ತ ರೂಪವಾಗಿ ಚಾಂದ್ರಾಯಣ ವ್ರತವನ್ನು ಹೇಳುತ್ತಾರೆ. ಇದು ಬರಿಯ ಪಾಪ ನಿವೇದನೆ ಅಲ್ಲ. ದಿನಕ್ಕೆ ಒಂದು ತುತ್ತಿನಂತೆ ಶುಕ್ಲಪಕ್ಷದ ಪಾಡ್ಯದಿಂದ ಆರಂಭಿಸಿ  ತನಕ ಹದಿನೈದು ತುತ್ತು ತಿನ್ನುವುದು. ನಂತರ ಒಂದೊಂದು ಕಡಿಮೆ ಮಾಡುತ್ತಾ ಅಮಾವಾಸ್ಯೆಯಂದು ಉಪವಾಸ ಮಾಡುವುದು. ಒಂದು ತುತ್ತು ಒಂದು ಮೊಟ್ಟೆಯ ಗಾತ್ರ ಮೀರಬಾರದು. ಮೊದಲ ದಿನ ಕೇವಲ ಒಂದೇ ತುತ್ತು ಊಟ. ಹೀಗೆ ಮಾಡಿದಾಗ ಸಣ್ಣ ಪುಟ್ಟ ಪಾಪಗಳಿಂದ ಉ: ಸುಳ್ಳಾಡುವುದು, ನಿಂದಿಸುವುದು, ಹಂಗಿಸುವುದು, ಅಪ್ರಾಮಾಣಿಕತೆ ಮೊದಲಾದವುಗಳಿಂದ ಶುದ್ಧನಾಗುವನು. ಪ್ರಾಯಶ್ಚಿತ್ತ ಆಚರಿಸಿ ಮತ್ತೆ ಪಾಪ ಮಾಡಿದರೆ ಮತ್ತೆ ಪ್ರಾಯಶ್ಚಿತ್ತ ಇಲ್ಲ. ಮತ್ತೆ ನರಕವೇ ಗತಿ. ಹಾಗಾಗಿ ಚಕ್ರದಂತೆ ಪುನಃಪಾಪ, ಪುನಃ ಪ್ರಾಯಶ್ಚಿತ್ತ ಅಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೦

 ಧರ್ಮಾಚರಣೆ ---೫೦ ಹತೇ ತು ರುಧಿರಂ‌ ದೃಶ್ಯಂ ವ್ಯಾಧಿಗ್ರಸ್ತಃ ಕೃಶೋ ಭವೇತ್ | ಲಾಲಾ ಭವತಿ ದಷ್ಟೇಷು ಏವಮನ್ವೇಷಣಂ ಭವೇತ್ || ಪರಾಶರ ಸ್ಮೃತಿ|| ಧರ್ಮಕಾರ್ಯಗಳನ್ನು ಮಾಡುವಾಗ ದೇಹವು ಸ್ವಸ್ಥವಾಗಿರುವುದು ಅತ್ಯಂತ ಅವಶ್ಯಕವಾದ ವಿಷಯ. ಏಕೆಂದರೆ ಶರೀರಮಾದ್ಯಂ ಖಲು ಧರ್ಮಸಾಧನಮ್ ಎಂಬಂತೆ ಶರೀರ ಸರಿಯಾಗಿದ್ದರೆ ಎಲ್ಲಾ ಆಚರಣೆ. ಗಾಯಗಳಾದಾಗ ರಕ್ತಸ್ರಾವದಿಂದಾಗಿ ಗುರುತಿಸಿ ಉಪಚಾರ ಔಷಧ ಪಡೆಯಬೇಕು‌. ರಕ್ತಸುರಿಯುತ್ತಿದ್ದಾಗ ಯಾವ ಕಾರ್ಯವೂ ತರವಲ್ಲ.  ದೊಡ್ಡ ರೋಗದಿಂದ ಪೀಡಿತರಾದಾಗ ವ್ಯಕ್ತಿ ಕೃಶನಾಗವನು. ಅಂತಹ ಸಮಯದಲ್ಲೂ ಯಾವ ಕರ್ಮಗಳನ್ನು ಮಾಡದೇ ವಿಶ್ರಾಂತಿ ಪಡೆದು ರೋಗಪರಿಹಾರಕ್ಕೆ ಯತ್ನಿಸಬೇಕು. ಸರ್ಪ- ಶ್ವಾನ- ಕರ್ಕಾಟಕ ಮೊದಲಾದ ದುಷ್ಟ ಜಂತುಗಳು ಕಡಿದಾಗ ಅವುಗಳ ಜೊಲ್ಲಿನಿಂದ ಗುರುತಿಸಿ ಕೂಡಲೇ ಪರಿಹಾರ ಕೈಗೊಳ್ಳಬೇಕು, ಇಲ್ಲದಿದ್ದರೆ ಅದೇ ಪ್ರಾಣಾಂತಿಕವಾಗಬಹುದು. ಹಾಗಾಗಿ  ಗಾಯವನ್ನು- ರೋಗವನ್ನು- ಕಡಿತವನ್ನು ಅನ್ವೇಷಿಸಿ ಪರಿಹಾರ ಪಡೆದು ಕರ್ಮಗಳನ್ನು ಮಾಡುವುದೇ ಶಾಸ್ತ್ರ ವಿಹಿತ. ಸುಮ್ಮನೆ ದೇಹವನ್ನು ಹಾಳುಮಾಡಿಕೊಂಡು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಸದಾ ಶಾಸ್ತ್ರ ನಿಷಿದ್ಧ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೪೯

     ಧರ್ಮಾಚರಣೆ--೪೯ ಏಕಾಹಮೇಕಭುಕ್ತಾಶೀ ಏಕಾಹಂ ನಕ್ತಭೋಜನಃ | ಅಯಾಚಿತಮೇಕಮಹಃ ಏಕಾಹಂ ಮಾರುತಾಶನಃ || ಪರಾಶರ ಸ್ಮೃತಿ|| ನಾವು ತಿಳಿದೂ ಕೆಲವೊಮ್ಮೆ ಪಾಪಕಾರ್ಯ ಮಾಡಿ ಅನಂತರ ಹೀಗೆ ಮಾಡಬಾರದಿತ್ತು ಎಂದುಕೊಳ್ಳುತ್ತೇವೆ. ಅಂತಹ ಸಮಯದಲ್ಲಿ ಪ್ರಾಜಾಪತ್ಯ ಎಂಬ ಪ್ರಾಯಶ್ಚಿತ್ತ ಆಚರಿಸಬೇಕು. ಒಂದು ದಿನ ಒಂದು ಹೊತ್ತು ಮಾತ್ರ ಊಟ, ಮರುದಿನ ರಾತ್ರಿ ಮಾತ್ರ ಊಟ, ಅದರ ಮರುದಿನ ಯಾರಾದರೂ ಏನಾದರೂ ಆಹಾರ ಕೊಟ್ಟರೆ ತಿನ್ನುವುದು ಇಲ್ಲದಿದ್ದರೆ ಉಪವಾಸ, ನಾಲ್ಕನೇ ದಿನ ಉಸಿರಾಟ ಮಾತ್ರ ಮಾಡುತ್ತಾ ನೀರು ಕುಡಿಯದೆ ಉಪವಾಸ ಮಾಡಿದಾಗ ಪಾಪದ ಪರಿಣಾಮ ಕಡಿಮೆ ಆಗುವುದು. ದೇಹದಂಡನೆ ಮುಂದೆ ಪಾಪ ಮಾಡದಂತೆ ಮನಸ್ಸನ್ನು ನಿರ್ದೇಶಿಸಿದರೆ ಆಗ ಸಾರ್ಥಕ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ರಾಮಾಯಣ ೧೫೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೨🏝📖  *ನಾಲ್ಪಸನ್ನಿಚಯಃ ಕಶ್ಚಿದಾಸೀತ್ತಸ್ಮಿನ್ಪುರೋತ್ತಮೇ | ಕುಟುಂಬೀ ಯೋ ಹ್ಯಸಿದ್ಧಾರ್ಥೋ ಗವಾಶ್ವಧನಧಾನ್ಯವಾನ್ || ಕಾಮೀ ವಾ ನ ಕದರ್ಯೋ ವಾ ನೃಶಂಸಃ ಪುರುಷಃ ಕ್ವಚಿತ್ | ದ್ರಷ್ಟುಂ ಶಕ್ಯಮಯೋಧ್ಯಾಯಾಂ ನಾವಿದ್ವಾನ್ನ ಚ ನಾಸ್ತಿಕಃ ||* _ಅಯೋಧ್ಯೆಯಲ್ಲಿ ಎಂತಹ ಜನರಿದ್ದರೆಂಬ ವರ್ಣನೆ ಇಲ್ಲಿದೆ. ಆ ನಗರದಲ್ಲಿ ಅಲ್ಪಧನದಿಂದ ಕಷ್ಟಪಟ್ಟು ಜೀವನ ಸಾಗಿಸುವ ಒಬ್ಬರೂ ಇರಲಿಲ್ಲ. ಸಾಕಷ್ಟು ಧನಸಂಪತ್ತು ಜನರ ಬಳಿಯಲ್ಲಿತ್ತು. ಧನವೇ ಮುಖ್ಯವಾಗಿ ತೃಪ್ತಿ ಹೇತು. ಅದೇ ಸಾಕಷ್ಟಿದ್ದರೆ ಜನರು ಸದಾ ಸುಖಿಗಳು. ಬಹುಶಃ ಬಡಬ್ರಾಹ್ಮಣರು ಅಥವಾ ದೀನರು ಎಂಬ ಪದ ಅಯೋಧ್ಯೆಯಲ್ಲಿ ಮಾಯವಾಗಿತ್ತು. ಧರ್ಮ-ಅರ್ಥ-ಕಾಮಗಳನ್ನು ಸಾಧಿಸದ, ಗೋ-ಅಶ್ವ-ಧನ-ಧಾನ್ಯ ಮೊದಲಾದ ಸಂಪತ್ತಿಲ್ಲದ ಕುಟುಂಬಿ ಒಬ್ಬರೂ ಇರಲಿಲ್ಲ. ಕುಟುಂಬಿ ಎಂದರೆ *ಮಾತಾ ಪಿತಾ ಸ್ನುಷೇ ಪುತ್ರೌ ಪುತ್ರೀ ಪತ್ನ್ಯತಿಥಿಃ ಸ್ವಯಮ್ |ದಶಸಂಖ್ಯಃ ಕುಟುಂಬೀ*  ಎಂಬಂತೆ ತಾಯಿ-ತಂದೆ-ಇಬ್ಬರು ಸೊಸೆಯರು-ಇಬ್ಬರು ಗಂಡುಮಕ್ಕಳು-ಮಗಳು-ಪತ್ನಿ- ಅತಿಥಿ ಮತ್ತು ಯಜಮಾನ. ಇವರು ಸಮೃದ್ಧವಾಗಿ ಬದುಕಲು ಬೇಕಾದ ಎಲ್ಲಾ ಸೌಕರ್ಯಗಳು ಅಯೋಧ್ಯೆಯಲ್ಲಿ ಬಹುಕಾಲದಿಂದ ನೆಲೆಸಿದ್ದವು. ಹಿಂದೆ ಗೋವನ್ನೂ ಮುಖ್ಯ ಸಂಪತ್ತಾಗಿ ಪರಿಗಣಿಸುತ್ತಿದ್ದರು. ಯುದ್ಧದ ದೃಷ್ಟಿಯಿಂದ ಅಶ್ವಗಳು ಒಂದು ಸಂಪತ್ತು. ಧನ ಧಾನ್ಯ ಸಾರ್ವಕಾಲಿಕ ಸಾರ್ವದೇಶಿಕ  ಸಂಪತ್ತು. ಇವಿಷ್ಟಿದ್ದರೂ ಧರ್...

ರಾಮಾಯಣ ೧೫೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೧🏝📖  *ತೇನ ಸತ್ಯಾಭಿಸಂಧೇನ ತ್ರಿವರ್ಗಮನುತಿಷ್ಠತಾ | ಪಾಲಿತಾ ಸಾ ಪುರೀ ಶ್ರೇಷ್ಠಾ ಇಂದ್ರೇಣೇವಾಮರಾವತೀ || ತಸ್ಮಿನ್ಪುರವರೇ ಹೃಷ್ಟಾ ಧರ್ಮಾತ್ಮಾನೋ ಬಹುಶ್ರುತಾಃ | ನರಾಸ್ತುಷ್ಟಾ ಧನೈಃಸ್ವೈಃ ಸ್ವೈರಲುಬ್ಧಾಃ ಸತ್ಯವಾದಿನಃ ||* _ಆರನೇ ಸರ್ಗದಲ್ಲಿ ದಶರಥನ ಹಾಗೂ ಅವನ ಪ್ರಜೆಗಳ ವರ್ಣನೆ ಇದೆ. ದಶರಥನು ಸತ್ಯವ್ರತನಾಗಿ ಧರ್ಮ-ಅರ್ಥ-ಕಾಮಗಳೆಂಬ ಪುರುಷಾರ್ಥಗಳನ್ನು ಸಾಧನೆಮಾಡುತ್ತಾ ಇಂದ್ರನು ಅಮರಾವತಿಯನ್ನು ಪಾಲಿಸುವಂತೆ ಇಲ್ಲಿ ಆಡಳಿತ ನಡೆಸುತ್ತಿದ್ದನು. ಇಲ್ಲಿ ಸತ್ಯವೇ ಒಂದು ವ್ರತ ಮಹಾರಾಜನಿಗೆ. ರಾಮಾಯಣ ಕಥೆ ನಡೆಯಲು ಇದೂ ಒಂದು ಕಾರಣ. ಶ್ರವಣ ಕುಮಾರನನ್ನು ಕೊಂದ ಕ್ಷಣದಲ್ಲಾಗಲಿ, ಕೈಕೇಯಿ ಬೇಡಿದ ಕ್ಷಣದಲ್ಲಾಗಲಿ ದಶರಥನಿಗೆ ಸತ್ಯವೇ ವ್ರತವಾಗಿತ್ತು. ನಮಗೆಲ್ಲ ಈ ಸತ್ಯವೆಂಬ ವ್ರತ ಮಾದರಿ. ಬೇರೆಲ್ಲಾ ವ್ರತಗಳನ್ನು ಆಚರಿಸಿ ಸತ್ಯವನ್ನು ಅಥವಾ ಪರಹಿತವನ್ನು ಬಯಸದ ಬದುಕು ಎಂದಿಗೂ ಬದುಕಲ್ಲ, ಅದೊಂದು ಸತ್ವರಹಿತ ಬದುಕು. ದಶರಥನು ತ್ರಿವರ್ಗಗಳನ್ನು ಸೇವಿಸುತ್ತಿದ್ದನು ಎಂದಿದೆ. ತ್ರಿವರ್ಗಗಳ ಸರಿಯಾದ ಸೇವನೆ ನಾಲ್ಕನೆಯ ಮೋಕ್ಷಕ್ಕೆ ಹೆದ್ದಾರಿ. ಮೂರೂ ಒಂದಕ್ಕೊಂದು ಪೂರಕವಾಗಿದ್ದು ನಾಲ್ಕನೆಯದನ್ನು ಸಾಧಿಸಲು ಅನುವು ಮಾಡಿಕೊಡುವಂತಿರಬೇಕು. ಅರ್ಥ- ಕಾಮಗಳ ಸಂಪಾದನೆ ಅಥವಾ ಅನುಭವ ಧರ್ಮವನ್ನು ಬಿಟ್ಟಿರದೆ ಧರ್ಮದ ಚೌಕಟ್ಟಿನಲ್ಲಿ ಸಾಗಿದಾಗ ಅದಕ್ಕೊಂದು ಸೌಂದರ್ಯ, ಗಾಂಭೀರ್ಯ. ಇಲ್ಲದಿದ್ದರೆ ದ...

ಪದಶಕ್ತಿ‌ ೩೩

🏹*ಪದಶಕ್ತಿ* ---೩೩🌄 *ವಿಮಾನ* _ಸ್ವರ್ಗದ ಯಾನದ ಹೆಸರೇ ವಿಮಾನ. *ವಿಶಿಷ್ಟಂ ಮಾನಯಂತಿ ಅನೇನ* ಎಂಬಂತೆ ಇದರಿಂದಾಗಿ ಒಳಗಿರುವವರ ಅಥವಾ ಪ್ರಯಾಣಿಕರ ಗೌರವ ಹೆಚ್ಚಾಗುವುದು ಅಥವಾ ಅವರಿಗೆ ಸುಖ ದೊರಕುವುದು ಅಥವಾ ಇದರೊಳಗೆ ಸೇರಿದರೆ ಗೌರವಿಸುವುದು ಇತ್ಯಾದಿ ಅರ್ಥದಲ್ಲಿ ಆಕಾಶವಾಹಕ ವಿಮಾನ. ಇನ್ನೊಂದು ಅರ್ಥದಲ್ಲಿ ನೋಡುವುದಾದರೆ *ವಿಶೇಷೇಣ ಮಾಂತಿ* ವಿಶಿಷ್ಟವಾಗಿ ಶೋಭಿಸುತ್ತದೆ ಅಥವಾ ವಿಶಿಷ್ಠವಾದ ಸತ್ಕಾರ ನೀಡುತ್ತದೆ ವಿಮಾನ. ಮತ್ತೊಂದು ಅರ್ಥದಲ್ಲಿ *ವಿಗತಂ ಮಾನಂ ಅಸ್ಯ* ಎಂದರೆ ಮಾನ ಹೋಯ್ತು ಎಂದಲ್ಲ. ಇದಕ್ಕೆ ಸಮನಾದ ಹೋಲಿಕೆ ಅಥವಾ ಉಪಮೆ ಇಲ್ಲ ಎಂಬ ಅರ್ಥದಲ್ಲಿ ಅಸದೃಶವಾದುದು ವಿಮಾನ. ಇದರಿಂದಾಗಿ ರಥಾದಿಗಳ ಮಾನ ಹೋಯ್ತು ಎಂದು ಕಲ್ಪನೆಯನ್ನು ಮಾಡಬಹುದು. ಇವೆಲ್ಲ ಅರ್ಥಕಲ್ಪನೆ ಕುಬೇರನ ಬಳಕೆಯಲ್ಲಿದ್ದ ಅನಂತರ ರಾವಣ ಕಿತ್ತುಕೊಂಡ ಸದ್ಯಕ್ಕೆ ದೇವಲೋಕದಲ್ಲಿರುವ ಪುಷ್ಪಕ ವಿಮಾನದ್ದು. ಏಕೆಂದರೆ ಅದು ಪ್ರಯಾಣಿಕನ ಮನಸ್ಸಿನ ವೇಗಕ್ಕೆ ಹೊಂದಿಕೊಂಡು ಯಾವ ಪ್ರದೇಶಕ್ಕೆ ಬೇಕಾದರೂ ಕೊಂಡೊಯ್ಯುವ ಮಹಿಮೆ ಹೊಂದಿದೆ. ರಾಕ್ಷಸ- ದೇವತೆ ಇತ್ಯಾದಿ ಯಾವ ಭೇದವೂ ಇಲ್ಲದೆ ಯಾವತ್ತಿಗೂ ಕೈಕೊಡದೇ ಒಡೆಯನ  ಸೇವೆ ಮಾಡುವ ಹಾಗೂ ಮನೆಯ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ವಿಮಾನವದು. ಈ ವಿಮಾನ ಶಬ್ದವು ಇನ್ನೊಂದು ಅರ್ಥದಲ್ಲೂ ಬಳಕೆಯಲ್ಲಿ ಇದೆ. ಏಳು ಮಹಡಿ ಅಥವಾ ಅದಕ್ಕಿಂತ ಹೆಚ್ಚು ಎತ್ತರದ ಗಗನಚುಂಬಿ ಕಟ್ಟಡಗಳನ್ನು ವಿಮಾನ ಎನ್ನುತ್ತಾರೆ‌ ಸಂಸ್ಕೃತ...

ರಾಮಾಯಣ ೧೫೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೦🏝📖 *ಆಯತಾ ದಶ ಚ ದ್ವೇ ಚ ಯೋಜನಾನಿ ಮಹಾಪುರೀ | ಶ್ರೀಮತೀ ತ್ರೀಣಿ ವಿಸ್ತೀರ್ಣಾ ಸುವಿಭಕ್ತಮಹಾಪಥಾ || ರಾಜಮಾರ್ಗೇಣ ಮಹತಾ ಸುವಿಭಕ್ತೇನ ಶೋಭಿತಾ | ಮುಕ್ತಪುಷ್ಪಾವಕೀರ್ಣೇನ ಜಲಸಿಕ್ತೇನ ನಿತ್ಯಶಃ ||* _ಐದನೇ ಸರ್ಗದಲ್ಲಿ ಅಯೋಧ್ಯೆಯ ಪರಿಚಯ ಇದೆ. ಅಯೋಧ್ಯೆ ಎಷ್ಟು ವಿಸ್ತಾರವಾಗಿತ್ತು ಎಂದರೆ ಹನ್ನೆರಡು ಯೋಜನಗಳಷ್ಟು ಉದ್ದ = ಸುಮಾರು ೧೫೬ ಕಿಲೋಮೀಟರ್, ಹಾಗೂ ಮೂರು ಯೋಜನಗಳಷ್ಟು ಅಗಲ= ೩೯ ಕಿಲೋಮೀಟರ್ ವಿಶಾಲವಾಗಿತ್ತು. ಮನು ಚಕ್ರವರ್ತಿಯಿಂದ ನಿರ್ಮಿಸಲ್ಪಟ್ಟ ಆ ನಗರದಲ್ಲಿ ಬೀದಿಗಳು ಬಹಳ ಅಗಲವಾಗಿಯೂ ಸಾಲುಮರಗಳಿಂದ ಅಲಂಕೃತವಾಗಿಯೂ ಇತ್ತು. ನೇರವಾದ ಹಾಗೂ ಅಗಲವಾದ ಹಳ್ಳ ತಿಟ್ಟುಗಳಿಲ್ಲದ ರಾಜಮಾರ್ಗಗಳಿದ್ದವು ಆ ನಗರದಲ್ಲಿ. ಎಲ್ಲಾ ಸಮಯದಲ್ಲಿ ಹೂವು ಬಿಡುವ ಮರಗಳಿಂದಾಗಿ ಯಾವಾಗಲೂ ಉದುರಿದ ಹೂಗಳಿಂದ ಸದಾ ಸುಗಂಧಭರಿತವಾಗಿದ್ದವು ಆ ವೀಥಿಗಳು. ನಿತ್ಯವೂ ಮಣ್ಣು ಎದ್ದು ಧೂಳಾಗದಂತೆ ನೀರು ಸಿಂಪಡಿಸುವ ವ್ಯವಸ್ಥೆಯೂ ಅಲ್ಲಿತ್ತು. ರಾಮಾಯಣದ ಈ ವರ್ಣನೆ ನೋಡಿದರೆ ನಗರ ರಚನೆ ಎಷ್ಟು ವ್ಯವಸ್ಥಿತವಾಗಿತ್ತು ಹಿಂದೆ ಎಂಬುದು ಅರಿವಿಗೆ ಬರುತ್ತದೆ. ಜನಸಂಖ್ಯೆ ಈಗಿನಷ್ಟು ಇಲ್ಲದಿದ್ದರೂ ಜನರು ಸುಖವಾಗಿ ಇರಲೆಂದು ವಿಶಾಲ ನಗರಗಳನ್ನು ನಿರ್ಮಿಸುತ್ತಿದ್ದರು. ಬೀದಿಯಲ್ಲಿ ಸಂಚರಿಸುವವರಿಗೆ ನೆರಳಿಗೆ ಮರಗಳನ್ನು ಬೆಳೆಸುವ ಪರಂಪರೆ ಅಂದೇ ಚಾಲ್ತಿಯಲ್ಲಿತ್ತು. ರಾಜಬೀದಿಯಲ್ಲಿ ಸದಾ ಗಿಜಿಗಿಡುವ ಓಡಾಟದಿಂದಾಗಿ ಜನರ...

ಧರ್ಮಾಚರಣೆ ೪೮

    ಧರ್ಮಾಚರಣೆ--೪೮ ಗಾಯತ್ರೀ ರಹಿತೋ ವಿಪ್ರಃ ಶೂದ್ರಾದಪ್ಯಶುಚಿರ್ಭವೇತ್ | ಗಾಯತ್ರೀ ಬ್ರಹ್ಮ ತತ್ವಜ್ಞಾಃ ಸಂಪೂಜ್ಯಂತೇ ಜನೈರ್ದ್ವಿಜಾಃ || ಪರಾಶರ ಸ್ಮೃತಿ || ಬ್ರಾಹ್ಮಣ ಎಂದು ಕರೆಸಿಕೊಳ್ಳುವ ಮನುಷ್ಯನು ಅವಶ್ಯವಾಗಿ ಎರಡು ಹೊತ್ತು ಗಾಯತ್ರೀ ಮಂತ್ರವನ್ನು ಜಪಿಸಬೇಕು. ಹಾಗಿಲ್ಲದೆ ಇದ್ದಲ್ಲಿ ಅವನು ಉಳಿದವರಿಗಿಂತಲೂ ಅಶುಚಿ ಎಂದು ಕರೆಸಿಕೊಳ್ಳುತ್ತಾನೆ. ಗಾಯತ್ರಿ ಮಂತ್ರಪಠನ ಹಾಗೂ ದೇವರ ಅನುಸಂಧಾನವೇ ಶುದ್ಧತೆಗೆ ಮುಖ್ಯ ಕಾರಣ. ಸ್ನಾನ, ವಸ್ತ್ರ, ನೀರು ಮೊದಲಾದವು ನಂತರದ ವಿಷಯಗಳು. ಗಾಯತ್ರೀ ಮಂತ್ರ ದಿನವೂ ಜಪಿಸುತ್ತಾ ಬ್ರಹ್ಮತತ್ವವನ್ನು ಯಾರು ಚಿಂತಿಸುವರೋ ಅಂತಹವರು ಎರಡನೇ ಜನ್ಮ ಪಡೆದು ಅಂದರೆ ಶುದ್ಧರಾಗಿ ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ. ಹಾಗಾಗಿ ಹುಟ್ಟು ಮಾತ್ರ ಬ್ರಾಹ್ಮಣ್ಯಕ್ಕೆ ಕಾರಣವಲ್ಲ. ಅವರ ಕರ್ತೃತ್ವವೇ ಮುಖ್ಯ ಕಾರಣ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೪೭

    ಧರ್ಮಾಚರಣೆ--- ೪೭ ಅಜ್ಞಾತ್ವಾ ಧರ್ಮಶಾಸ್ತ್ರಾಣಿ ಪ್ರಾಯಶ್ಚಿತ್ತಂ ದದಾತಿ ಯಃ | ಪ್ರಾಯಶ್ಚಿತ್ತೀ ಭವೇತ್ಪೂತಃ ಕಿಲ್ಪಿಷಂ ಪರ್ಷದಿ ವ್ರಜೇತ್ || ಪರಾಶರ ಸ್ಮೃತಿ||    ಧರ್ಮಜ್ಞರಾಗಲಿ, ಜ್ಯೋತಿಷಿಗಳಾಗಲಿ, ಪಂಡಿತರಾಗಲಿ ಯಾವುದಾದರೂ ಪಾಪಗಳಿಗೆ, ದೋಷಗಳಿಗೆ, ಕುಕರ್ಮಗಳಿಗೆ ಪ್ರಾಯಶ್ಚಿತ್ತ ಹೇಳುವಾಗ ಶಾಸ್ತ್ರದ ನೆರವನ್ನು ಪಡೆದು ಹೇಳಬೇಕು. ಕರ್ತೃವಿನ ಅನುಕೂಲ,ಕಾಲ, ದೇಶ, ಧರ್ಮ ಇವುಗಳನ್ನು ಗಮನಿಸಿ ಶಾಸ್ತ್ರೋಕ್ತವಾದ ಪ್ರಾಯಶ್ಚಿತ್ತ ಹೇಳಿದರೆ ಪುಣ್ಯಭಾಗಿಯಾಗುವನು. ಹಾಗಲ್ಲದೆ ತನ್ನ ಮನಸ್ಸಿಗೆ ಬಂದಂತೆ ಉದ್ದುದ್ದ ಅಥವಾ ಮಾಡಲು ಅಸಾಧ್ಯವೆನಿಸುವಂತಹ ದೊಡ್ಡ ದೊಡ್ಡ ಪ್ರಾಯಶ್ಚಿತ್ತ ಹೇಳಿದರೆ ಕರ್ತೃವಿನ ಪಾಪ ಕಳೆಯುವ ತನಕ ಹೇಳಿದವನು ದೋಷವನ್ನು ಪಡೆಯುತ್ತಾನೆ. ಇನ್ನೊಬ್ಬರ ಪಾಪ ಕಳೆಯಲು ಹೋಗಿ ತಾನೇ ಪಾಪಿಯಾಗುವನು ಅಂತಹ ವ್ಯಕ್ತಿ. ಹಾಗಾಗಿ ಸ್ವಲ್ಪವೇ ಕಲಿತು ಅಥವಾ ಏನನ್ನೂ ಕಲಿಯದೇ ಉಪದೇಶ ಮಾಡುವ ವೃತ್ತಿ ಕೈಗೊಂಡರೆ ಶೀಘ್ರ ಅವಸಾನ ಹೊಂದುವರು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೪೬

   ಧರ್ಮಾಚರಣೆ ----೪೬ ಯಸ್ಯ ನ ದ್ವಿಗುಣಂ ದಾನಂ ಕೇಶಶ್ಚ ಪರಿರಕ್ಷಿತಃ | ತತ್ಪಾಪಂ ತಸ್ಯ ತಿಷ್ಠೇತ ತ್ಯಕ್ತ್ವಾ ಚ ನರಕಂ ವ್ರಜೇತ್ ||   ಯತ್ಕಿಂಚಿತ್ ಕ್ರಿಯತೇ ಪಾಪಂ ಸರ್ವಂ ಕೇಶೇಷು ತಿಷ್ಠತಿ | ಸರ್ವಾನ್ಕೇಶಾನ್ಸಮುದ್ಧೃತ್ಯ ಛೇದಯೇದಂಗುಲಿದ್ವಯಮ್ || ಪರಾಶರ ಸ್ಮೃತಿ|| ಅಕಾರಣವಾಗಿ ಬಹುದಿನಗಳ ಕಾಲ ಯಾರೂ ಕೂದಲನ್ನು ಉಳಿಸಿಕೊಳ್ಳಬಾರದು. ( ವ್ರತ, ದೀಕ್ಷೆ ಬಿಟ್ಟು) ಒಂದು ವೇಳೆ ಹಾಗೆ ಉಳಿಸಿಕೊಂಡರೆ ದ್ವಿಗುಣ ದಾನವನ್ನು ನೀಡಬೇಕಾಗುವುದು. ಹಾಗೆ ಕೊಡದಿದ್ದರೆ ನರಕಗಾಮಿಯಾಗುವರು. ಹಾಗಾಗಿ ಸಿನೆಮಾ ಅಥವಾ ಕ್ರೀಡಾಳುಗಳನ್ನು ಅನುಸರಿಸಿ ಬಹುಕಾಲ ಪುರುಷರು ಕೇಶವನ್ನು ಬಿಡುವುದು ಸರಿಯಲ್ಲ. ನಾವು ಸಣ್ಣ ಪಾಪ ಮಾಡಿದರೂ ಅದು ಕೂದಲಿನಲ್ಲಿ ನೆಲೆಸುವುದು. ಹಾಗಾಗಿ ಅಂತಹ ಪ್ರಸಂಗದಲ್ಲಿ ಎರಡು ಅಂಗುಲದಷ್ಟಾದರೂ ಕೂದಲನ್ನು ಕತ್ತರಿಸಬೇಕು. ಈ ಕಾರಣಗಳಿಂದಲೇ ಹಿಂದಿನವರು ಹೇಳುತ್ತಿದ್ದುದು - ಕೂದಲು, ಉಗುರು ಬಹುಕಾಲ ಬಿಡದೇ ಬೆಳೆದಂತೆ ಕತ್ತರಿಸಬೇಕು. ಮನೆಯ ಹತ್ತಿರ ಬಿಸಾಡದೇ ದೂರದಲ್ಲಿ ಗಿಡದ ಕೆಳಗೆ ಅಥವಾ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸಬೇಕು ಎಂಬುದಾಗಿ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಅನುವಾದಿತ ಕಥೆ ೨೧

   अनूदित कथावलि: --२१          महामारी कं न पीडयति ? तत्र एक: सुखी कुटुम्ब: | ग्रामादागत्य अपारश्रमेण नगरे धनादि अर्जयित्वा वृद्धिमाप्तवान्  कुटुम्बमुख्य: |  बाल्ये एव तस्य पिता यमसदनं गत: | अग्रज: उत्तमम्  अध्ययनं कृत्वा नगरे उद्योगं तत्समये एव प्राप्तवान् आसीत्। सहजतया कुटुम्बभरणं तेनैव कृतम् । कनिष्ठेन एवं चिन्तितम् - अग्रजस्य एकस्य धनार्जनं कुटुम्बभरणार्थं न पर्याप्तं भवति , अत: अहमपि कञ्चन उद्योगं करोमीति । किंतु स: द्वादशकक्ष्यापर्यन्तमेव पठितवानासीत् , तेन स: एकस्मिन् आपणे सहायकत्वेन नियुक्त: । दिवा  कार्यं समाप्य सन्ध्याकाले पदवी शिक्षणार्थं विद्यालयं गत्वा पदवीं प्राप्तवान्।  तस्य आपणस्य स्वामी एक: सज्जन: । तस्य एक  एव पुत्र: उन्नतशिक्षणं समाप्य वैदेशिक्यां संस्थायां कार्यमग्न: आसीत्। तेन स्वामिना एवं चिन्तितम् - मया अल्पवेतनं दीयमानमपि एष: ऋजुमार्गेण कार्यं कुर्वन्नस्ति , कालेगते एष एव आपणस्वामी भवितुं अर्हः  इति व्यापारस्य सर्वसूक्ष्म विषयान् तस्मै क्रमशः उपदिदेश । कार्यकुशलेन एतेन तत्सर्वं मनसि सुष्टु स्थ...

ಧರ್ಮಾಚರಣೆ ೪೫

   ಧರ್ಮಾಚರಣೆ--- ೪೫ ಕ್ಷುತೇ ನಿಷ್ಠೀವನೇ ಚೈವ ದಂತೋಚ್ಛಿಷ್ಟೇ ತಥಾನೃತೇ | ಪತಿತಾನಾಂ ಚ ಸಂಭಾಷೇ ದಕ್ಷಿಣಂ ಶ್ರವಣಂ ಸ್ಪೃಶೇತ್ || ಪರಾಶರ ಸ್ಮೃತಿ|| ಸಭೆಯಲ್ಲಿ ಅಥವಾ ಪ್ರಯಾಣದಲ್ಲಿ ಅಥವಾ ಪೂಜಾದಿಗಳಲ್ಲಿ ತೊಡಗಿದ್ದಾಗ ಸೀನು ಬಂದರೆ, ಆಕಳಿಕೆ ಬಂದರೆ, ಉಗುಳು ಹೊರ ಚೆಲ್ಲಿದರೆ, ಹಲ್ಲಿನಲ್ಲಿ ಏನೋ ಆಹಾರಶೇಷ ಸಿಕ್ಕಿಕೊಂಡು ಕಿರಿಕಿರಿಯೆಂದು ತೆಗೆದಾಗ, ಆಕಸ್ಮಿಕವಾಗಿ ಸುಳ್ಳು ನುಡಿದಾಗ , ಕೆಟ್ಟ ಮನಸ್ಥಿತಿಯ ವ್ಯಕ್ತಿಗಳೊಡನೆ ಸಂಭಾಷಣೆ ಮಾಡಿದಾಗ ದೋಷ ನಿವೃತ್ತಿಗೆ ಬಲಗಿವಿಯನ್ನು ಸ್ಪರ್ಶಿಸಬೇಕು. ಸಮೀಪದಲ್ಲಿ ನೀರಿನ ಲಭ್ಯತೆ ಕಂಡುಬಂದರೆ ಅಚಮನ ಮಾಡಬೇಕು, ಹಾಗಲ್ಲದಿದ್ದರೆ ಬಲಗಿವಿಯ ಸ್ಪರ್ಶದಿಂದ ಶೌಚವು ಸಂಪನ್ನವಾಗುವುದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೪೪

   ಧರ್ಮಾಚರಣೆ---೪೪ ಯದ್ವದಂತಿ ತಮೋ ಮೂಢಾ ಮೂರ್ಖಾ ಧರ್ಮಮತದ್ವಿದಃ | ತತ್ಪಾಪಂ ಶತಧಾ ಭುಕ್ತ್ವಾ ತದ್ವಕ್ತೃಮಧಿಗಚ್ಛತಿ || ಪರಾಶರ ಸ್ಮೃತಿ|| ಯಾವ ವಿಷಯದ ಬಗ್ಗೆಯೂ ಹೆಚ್ಚು ವಿಚಾರ ಮಾಡದೇ ಧರ್ಮೋಪದೇಶ ಮಾಡಿದರೆ ಉಪದೇಶ ಕೇಳಿ ಆಚರಿಸುವವನ ನೂರ್ಮಡಿ ಪಾಪ ಉಪದೇಶಕನನ್ನು ಸೇರುವುದು. ಜಪ ಹತ್ತು ಮಾಡಿದರೂ ಸಾಕು, ಅಶೌಚ ಆಚರಿಸದಿದ್ದರೂ ತೊಂದರೆ ಇಲ್ಲ, ಪೂಜೆ- ವ್ರತ- ಶೌಚದ ಆಚರಣೆ ಅಲ್ಪವಾದರೂ ಸಾಕು ಇತ್ಯಾದಿ ಮನಸ್ಸಿಗೆ ಬಂದಂತೆ ಅಥವಾ ಆಪತ್ಕಾಲದ ಧರ್ಮವನ್ನು ಸಾಮಾನ್ಯ ಧರ್ಮದಂತೆ ಉಪದೇಶಿಸಿದರೆ ಅದರಿಂದ ಸಮಾಜದ ಸದಾಚಾರಕ್ಕೆ ಕುಂದುಂಟಾಗಿ ಇಂತಹ ಉಪದೇಶ ಮಾಡಿದವನು ಪಾಪಿಯಾಗುವನು. ಹಾಗಾಗಿ ಸಂಪ್ರದಾಯವೆಂತಲೋ, ರೂಢಿಯೆಂತಲೋ ತಪ್ಪು ಆಚರಣೆಗಳ ಉಪದೇಶ ಎಂದಿಗೂ ಸಲ್ಲದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಪದಶಕ್ತಿ ೩೨

🏹*ಪದಶಕ್ತಿ* ---೩೨🌄   *ಸ್ವಾರಾಜ್* _ಇಂದ್ರನ ಹೆಸರು. ಸ್ವ ಎಂದರೆ ಸ್ವರ್ಗ. ಸ್ವರ್ಗದಲ್ಲಿ ಶೋಭಿಸುತ್ತಾನೆ ರಾಜನಾಗಿ. ಇನ್ನೊಂದು ಸ್ವ ಎಂದರೆ ದೇವತೆಗಳು. ಅವರಿಗೆ ಒಡೆಯನಾಗಿ ದೇವರಾಜನಾಗಿ ಮಿಂಚುತ್ತಿದ್ದಾನೆ. ಇನ್ನೊಂದು ಅರ್ಥ ಸ್ವ ಅಂದರೆ ಧನ. ಸ್ವರ್ಗದಲ್ಲಿ ಅಪಾರ ಸಂಪತ್ತಿನಿಂದ ಮೆರೆಯುತ್ತಿರುವನು. ಮತ್ತೊಂದು ಅರ್ಥದಲ್ಲಿ ಸು ಎಂದರೆ ಒಳ್ಳೆಯ ಸಂಪತ್ತಿನಿಂದ ಎಲ್ಲೆಡೆ ರಾಜಿಸುತ್ತಿರುವನು ಎಂಬುದಾಗಿ. ಇಂದ್ರ ಶಬ್ದದ ಅರ್ಥವೇ ಐಶ್ವರ್ಯಾಧಿಪತಿ ಎಂದು. ಇಲ್ಲಿ ಅದನ್ನೂ ಹೇಳಲಾಗಿದೆ._ ಭಾಗವತದ ಈ ಶ್ಲೋಕದಲ್ಲಿ ಸ್ವಾರಾಜ್ಯ ಪದದ ಬಳಕೆಯಿದೆ. *भवान् भक्तिमता लभ्यो दुर्लभः सर्वदोहिनाम् । स्वाराज्यस्याप्यभिमत एकान्तेना- त्मविद्गतिः* _ಭಗವಂತನು ಭಕ್ತಿಗೆ ಮಾತ್ರ ಒಲಿಯುವವನು.  ದೇವತೆಗಳು ಮುಕ್ತಿ ಪಡೆಯಲು ಇವನಲ್ಲೇ ಭಕ್ತಿ ನಡೆಸಬೇಕು. ಸ್ವರ್ಗವಾಸಿಗಳೆಂದಾಕ್ಷಣ ಮುಕ್ತಿ ಸಿಕ್ಕಿತೆಂದಲ್ಲ, ಹಾದಿ ಹತ್ತಿರವಿದೆ, ಬೇಕಾದರೆ ಭಕ್ತಿಯಿಂದ ಪಡೆಯಬಹುದು._ ಕನ್ನಡದ ದಾಸರು ಸ್ವರ್ಗ ಎಂಬ ಅರ್ಥದಲ್ಲಿ ಈ ಸ್ವಾರಾಜ್ಯವನ್ನು ಬಳಸಿದ್ದಾರೆ.  _ಶ್ಯಾಮಸುಂದರಾ ರಾಜರಾಜಪೂಜ್ಯ ಸ್ವಾರಾಜ್ಯ ಚೆನ್ನಕೇಶವಾ  ಸ್ವರ್ಗಾಧಿಪ ಚೆನ್ನಕೇಶವನೇ ಎಂದು ಸ್ತುತಿಸಿದ್ದಾರೆ‌._ _ಇಂದ್ರನು ನಮಗೂ ಸ್ವ ಎಂದರೆ ಸಂಪತ್ತನ್ನು, ದೇವತ್ವವನ್ನು, ಸ್ವರ್ಗವನ್ನೂ ಕರುಣಿಸಲೆಂದು ಪ್ರಾರ್ಥಿಸೋಣ._ ಸಂಗ್ರಹ: ಶ್ರೀನಿಧಿ ಅಭ್ಯಂಕರ್

ರಾಮಾಯಣ ೧೪೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೯🏝📖     *ಹ್ಲಾದಯನ್ಸರ್ವಗಾತ್ರಾಣಿ ಮನಾಂಸಿ ಹೃದಯಾನಿ ಚ | ಶ್ರೋತ್ರಾಶ್ರಯಸುಖಂ ಗೇಯಂ ತದ್ಬಭೌ ಜನಸಂಸದಿ || ತತಸ್ತು ತೌ ರಾಮವಚಃಪ್ರಚೋದಿತಾವಗಾಯತಾಂ ಮಾರ್ಗವಿಧಾನಸಂಪದಾ | ಸ ಚಾಪಿ ರಾಮಃ ಪರಿಷದ್ಗತಃ ಶನೈರ್ಬುಭೂಷಯಾ ಸಕ್ತಮನಾ ಬಭೂವ ಹ ||* _ಲವಕುಶರು ಆಸ್ಥಾನದಲ್ಲಿ ರಾಮನ ಇಚ್ಛೆಯಂತೆ ಗಾನವನ್ನು ಆರಂಭಿಸದರು. ಅವರ ದಿವ್ಯಗಾಯನವು ಎಲ್ಲರ ಶರೀರಕ್ಕೆ- ಮನಸ್ಸಿಗೆ- ಹೃದಯಕ್ಕೆ  ಆಹ್ಲಾದವನ್ನು ತಂದುಕೊಟ್ಟಿತು. ಅರ್ಥವಾಗುವಂತಹ ಭಾಷೆ ಹಾಗೂ ಮಧುರಧ್ವನಿಯಲ್ಲಿ ರಾಮಚರಿತೆಯನ್ನು ಹಾಡುತ್ತಿದ್ದಾಗ ಕೇಳುಗರ ಹೃದಯ ತುಂಬಿಬಂತು. ಮನಸ್ಸು ಆನಂದದ ಅಲೆಯಲ್ಲಿ ತೇಲಲಾರಂಭಿಸಿತು. ಶರೀರವೂ ಆಯಾಸ ಹೊಂದದೇ ಬಹಳ ಹೊತ್ತು ಕೇಳುವ ಅವಕಾಶವನ್ನು ಒದಗಿಸಿತು. ಆ ಗಾನವು ಕಿವಿಗಳಿಗೆ ಅತ್ಯಂತ ಸುಖದಾಯಕವಾದ ಕಾರಣ ಜನರು ಸ್ವಲ್ಪವೂ ಶಬ್ದವಾಗದಂತೆ ಮೈಯೆಲ್ಲ ಕಿವಿಯಾಗಿ ಆಲಿಸಿ ಆನಂದಿಸಿದರು. ಹಿಂದಿನ ದಿನದ ಜನರ ಆಸಕ್ತಿ ಕಂಡ ರಾಮನು ಮತ್ತೆ ಅವರ ಗಾಯನವನ್ನು ಮುಂದುವರೆಸುವಂತೆ ವಿನಂತಿಸಿದನು. ಆ ಮಕ್ಕಳು *ಮಾರ್ಗ* ಎಂಬ ಸಂಗೀತ ಸಂಪ್ರದಾಯವನ್ನು ಅನುಸರಿಸಿ ಹೃದಯಮುಟ್ಟುವಂತೆ ಹಾಡಿದರು. ಸಂಗೀತದಲ್ಲಿ ಎರಡು ಪ್ರಕಾರದ ಸಂಪ್ರದಾಯಗಳು ಹಿಂದೆ ಇದ್ದವು- ದೇಶೀ ಹಾಗೂ ಮಾರ್ಗ. ಪ್ರಾಕೃತಗೀತೆಗಳನ್ನು ದೇಶೀ ಸಂಪ್ರದಾಯದಲ್ಲಿ ಹಾಡಿದರೆ, ಸಂಸ್ಕೃತ ಗೀತೆಗಳನ್ನು ಮಾರ್ಗ ಪದ್ಧತಿಯಲ್ಲಿ ಹಾಡುತ್ತಿದ್ದರು. ಇಲ್ಲಿ...

ಧರ್ಮಾಚರಣೆ ೪೩

  ಧರ್ಮಾಚರಣೆ ---೪೩ ರಜಸಾ ಶುದ್ಧ್ಯತೇ ನಾರೀ ವಿಕೃತಿಂ ಸಾ ನ ಗಚ್ಛತಿ | ನದೀ ವೇಗೇನ ಶುದ್ಧ್ಯೇತ ಲೇಪೋ ಯದಿ ನ ದೃಶ್ಯತೇ || ಪರಾಶರ ಸ್ಮೃತಿ|| ಉತ್ತಮಸ್ತ್ರೀಯನ್ನು ಪರಪುರುಷರು ಸ್ಪರ್ಶ- ಕಿರುಕುಳ- ಅನಾಚಾರಗಳಿಂದ ದೂಷಿತಳನ್ನಾಗಿ ಮಾಡಿದರೆ ಅವಳು ರಜಸ್ವಲೆ ಆಗುವುದರಿಂದ ಶುದ್ಧಳಾಗುವಳು‌ . ಅವಳಿಗೆ ಮನಸ್ಸಿಲ್ಲದೆ ತಪ್ಪು ಘಟಿಸಿದ ಪಕ್ಷದಲ್ಲಿ ಮಾತ್ರ ರಜಸ್ವಲೆಯಾಗಿ ಶುದ್ಧಳಾಗುವಳು. ತಾನೇ ಸ್ವತಃ ತಪ್ಪು ಮಾಡಿದರೆ ಪ್ರಾಯಶ್ಚಿತ್ತವಿಲ್ಲದೆ ಶುದ್ಧಳಲ್ಲ. ವೇಗವಾಗಿ ಹರಿಯುವ ನದಿ ನೀರಿಗೆ ಯಾವ ದೋಷವೂ ಇಲ್ಲ. ಎಷ್ಟೇ ಕೊಳೆ- ಕ್ರಿಮಿ- ರಾಸಾಯನಿಕ ಮಿಶ್ರವಾದರೂ ನೀರಿನ ವೇಗಕ್ಕೆ ಅದು ಕೊಚ್ಚಿಕೊಂಡು ಮುಂದೆ ಹೋಗುವುದು. ಗಂಗೆ ಅದೇ ಕಾರಣದಿಂದ ಸದಾ ಶುದ್ಧಳು. ನಿಂತ ನೀರಲ್ಲಿ ಮಲಿನತೆ ಜನಸಂಸರ್ಗದಿಂದ ಸಹಜವಾಗಿ ಹುಟ್ಟುವುದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೪೨

   ಧರ್ಮಾಚರಣೆ--- ೪೨ ಅಷ್ಟವರ್ಷಾ ಭವೇದ್ಗೌರೀ ನವವರ್ಷಾ ತು ರೋಹಿಣೀ | ದಶವರ್ಷಾ ಭವೇತ್ಕನ್ಯಾ ಅತ ಊರ್ಧ್ವಂ ರಜಸ್ವಲಾ || ಪರಾಶರ ಸ್ಮೃತಿ|| ನಮ್ಮ ಪರಂಪರೆಯಲ್ಲಿ ಅದರಲ್ಲೂ ನವರಾತ್ರಿ ದುರ್ಗಾಪೂಜೆ ತ್ರಿಕಾಲ ಪೂಜೆ ಮೊದಲಾದ ಸಮಯದಲ್ಲಿ ಸ್ತ್ರೀಯನ್ನು ದೇವಿಯೆಂದು ಭಾವಿಸಿ ಪೂಜಿಸುವ ಉಪಚರಿಸುವ ಕ್ರಮ ಇದೆ. ಇದಕ್ಕೆ ಎಷ್ಟು ವರ್ಷದೊಳಗಿನ ಸ್ತ್ರೀಯರು  ಯೋಗ್ಯರು ಎಂದರೆ ಅದಕ್ಕೆ ಶಾಸ್ತ್ರದ ವಚನ ಹೀಗಿದೆ- ಎಂಟು ವರ್ಷದ ಹುಡುಗಿಯನ್ನು ಗೌರೀ ಎನ್ನುತ್ತಾರೆ. ಕೆಲವು ಪೂಜೆಗಳಲ್ಲಿ ಗೌರೀ ಆರಾಧನೆ ಹೇಳಲ್ಪಟ್ಟಿದೆ. ಇನ್ನು ಒಂಭತ್ತು ವರ್ಷದ ಹುಡುಗಿಗೆ ರೋಹಿಣಿ ಎಂಬ ಹೆಸರು. ದಶವರ್ಷದ ಹುಡುಗಿ ಕನ್ಯೆ ಎಂದು ಕರೆಸಿಕೊಳ್ಳುವಳು. ಕನ್ಯೆಯನ್ನು ಕರೆಸಿ ಮಂಗಲವಸ್ತುಗಳನ್ನಿತ್ತು ದೇವೀಪ್ರೀತ್ಯರ್ಥ ಉಪಚಾರ ಮಾಡುವಾಗ ಆಯಾ ವರ್ಷದ ಸ್ತ್ರೀ ಯರನ್ನು ಆರಾಧಿಸಬೇಕು. ಆಗ ಆ ಆರಾಧನೆ ಸಾರ್ಥಕವಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ರಾಮಾಯಣ ೧೪೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೮ 🏝📖     *ಅಹೋ ಗೀತಸ್ಯ ಮಾಧುರ್ಯಂ ಶ್ಲೋಕಾನಾಂ ತು ವಿಶೇಷತಃ| ಚಿರನಿರ್ವೃತ್ತಮಪ್ಯೇತತ್ಪ್ರತ್ಯಕ್ಷಮಿವ ದರ್ಶಿತಮ್ || ಪ್ರವಿಶ್ಯ ತಾವುಭೌ ಸುಷ್ಠು ಭಾವಂ ಸಮ್ಯಗಗಾಯತಾಮ್ | ಸಹಿತೌ ಮಧುರಂ ರಕ್ತಂ ಸ್ವರಸಂಪದಾ ||* _ವಾಲ್ಮೀಕಿ ಮಹರ್ಷಿಗಳ ಆಜ್ಞೆಯಂತೆ ರಾಮಾಯಣವನ್ನು ಸುಮಧುರಕಂಠದಿಂದ ಹಾಡಿದರು. ಅದನ್ನು ಕೇಳಿ ಸ್ವತಃ ಮಹರ್ಷಿಗಳೇ ಬೆರಗಾಗಿ ಮಾಡಿದ ಉದ್ಗಾರ- ನಿಸ್ಚಯವಾಗಿಯೂ ಇವರ ಗಾಯನ ಎಷ್ಟು ಮಧುರ, ಶ್ಲೋಕಗಳಂತೂ ಬಹಳ ಇಂಪಾಗಿವೆ, ಇವರ ಕೋಕಿಲದನಿಯಲ್ಲಿ ಹೊರಟ ಈ ಆಖ್ಯಾನ ಬಹಳ ಕಾಲದವರೆಗೂ ಆ ಕಥೆ ನಮ್ಮ ಕಣ್ಣಮುಂದೆಯೇ ನಡೆದಂತೆ ತೋರುತ್ತಿದೆ. ಷಡ್ಜ ಮೊದಲಾದ ಸಪ್ತಸ್ವರಗಳಿಂದ ಪೂರ್ಣವಾದ ಇವರ ಗಾಯನವು ಪೂರ್ಣವಾಗಿ ಶೋಭಿಸುತ್ತಿದೆ. ಶೃಂಗಾರ- ವೀರ ಮೊದಲಾದ ರಸಗಳನ್ನು ಆಯಾ ಶ್ಲೋಕದಲ್ಲಿ ಯಥಾವತ್ತಾಗಿ ಒಡಮೂಡುವಂತೆ ಹಾಡುತ್ತಿದ್ದಾರೆ. ಒಮ್ಮೆಯೂ ಅಪಸಬ್ದಗಳು ಇವರ ಮೊಗದಿಂದ ಹೊರಹೊಮ್ಮಲಿಲ್ಲ. ಭಾವಪರವಶರಾಗಿ ತಮ್ಮನ್ನೇ ಮರೆತುಹೋದವರಂತೆ ಹಾಡುತ್ತಿರುವರಲ್ಲ ಈ ಮಕ್ಕಳು. ಏನಿದು ಆಶ್ಚರ್ಯ! ಗುರುವೊಬ್ಬ ಶಿಷ್ಯರ ಏಳ್ಗೆ ಅಥವಾ ಸಾಧನೆ ಕಂಡು ಮನದುಂಬಿ ಪ್ರಶಂಸಿಸುವ ಸಾಲುಗಳಿವು. ಸ್ವತಃ ಕರ್ತೃವಿಗೆ ಆನಂದಾಶ್ರು ಉಕ್ಕುವಂತೆ ಮಾಡುವ ರಾಮಾಯಣದ ಶ್ಲೋಕಗಳ ಮಹಿಮೆ ಇದು._ *ಪ್ರೀತಃ ಕಶ್ಚಿನ್ಮುನಿಸ್ತಾಭ್ಯಾಂ ಸಸ್ಮಿತಃ ಕಲಶಂ ದದೌ | ಪ್ರಸನ್ನೋ ವಲ್ಕಲಂ ಕಶ್ಚಿದ್ದದೌ ತಾಭ್ಯಾಂ ಮಹಾತಪಾಃ|| ಅನ್ಯಃ...

ಧರ್ಮಾಚರಣೆ ೪೧

ಧರ್ಮಾಚರಣೆ---೪೧ ಭಸ್ಮನಾ ತು ಭವೇಚ್ಛುದ್ಧಿಃ ಉಭಯೋಸ್ತಾಮ್ರಕಾಂಸ್ಯಯೋಃ| ಜಲಶೌಚೇನ ವಸ್ತ್ರಾಣಾಂ ಪರಿತ್ಯಾಗೇನ ಮೃಣ್ಮಯಮ್ || ಪರಾಶರ ಸ್ಮೃತಿ|| ದೇವಪೂಜೆಗೆ, ಹೋಮಕ್ಕೆ ತಾಮ್ರ ಅಥವಾ ಕಂಚಿನ ಪಾತ್ರೆಗಳ ಬಳಕೆ ಶ್ರೇಷ್ಠ. ಅವುಗಳು ಒಂದೊಮ್ಮೆ ಅಶುಚಿಯಾದರೆ ಅವುಗಳನ್ನು ಗೋಮಯದಿಂದ ಮಾಡಿದ ಭಸ್ಮದಿಂದ ಒರೆಸಿದರೆ ಅವು ಶುದ್ಧವಾಗುತ್ತವೆ. ಹುಳ ಇತ್ಯಾದಿ ಬಂದರೆ, ಸ್ನಾನ ಮಾಡದೆ ಸ್ಪರ್ಶಿಸಿದರೆ, ಕೊಳೆಯಾಗಿದ್ದರೆ ಅಂತಹ ಸಮಯದಲ್ಲಿ ಅವುಗಳಿಗೆ ಭಸ್ಮಲೇಪನ ಮಾಡಿ ಬಳಸಬೇಕು. ಬಟ್ಟೆಗಳು ಅಶುಚಿಯಾದರೆ ನೀರಲ್ಲಿ ಮುಳುಗಿಸಿ ಹಿಂಡಿದರೆ ಶುದ್ಧಿ. ಆದರೆ ಸುಮ್ಮನೆ ಒದ್ದೆಮಾಡಿದರೆ ಅದು ಅಶುದ್ಧ. ಕೀಟಗಳು- ಮಣ್ಣು- ಮಲ- ಸ್ನಾನ ಮಾಡದವರ ಸ್ಪರ್ಶ ಇವುಗಳ ಕಾರಣದಿಂದ ಅಶುಚಿಯಾದ ಪಕ್ಷದಲ್ಲಿ ನೀರಿನಿಂದ ಶುದ್ಧಿ. ಮಣ್ಣು ಹೋಮಕ್ಕೆ ಅಥವಾ ಹಚ್ಚಿಕೊಳ್ಳಲೆಂದೋ ತಂದು ಅಸ್ವಚ್ಛವಾದರೆ ಅದನ್ನು ಬಿಸುಟು ಬೇರೆ ಶುದ್ಧ ಮಣ್ಣನ್ನು ಸ್ವೀಕರಿಸಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೪೦

    ಧರ್ಮಾಚರಣೆ- ೪೦ ಚರೇತ್ಸಾಂತಪನಂ ವಿಪ್ರಃ ಪ್ರಾಜಾಪತ್ಯಮನಂತರಮ್| ತದರ್ಧಂ‌ಚ ಚರೇದ್ವೈಶ್ಯಃ ಪಾದಂ ಶೂದ್ರಸ್ಯ ದಾಪಯೇತ್ || ಪರಾಶರ ಸ್ಮೃತಿ|| ನಮ್ಮ ಧರ್ಮಶಾಸ್ತ್ರಗಳು ಬ್ರಾಹ್ಮಣರಿಗೆ ಅವಕಾಶ ಕೊಟ್ಟಷ್ಟೇ ರೀತಿಯಲ್ಲಿ ತಪ್ಪಿಗೆ ಹೆಚ್ಚಿನ ಶಿಕ್ಷೆಯನ್ನೂ ವಿಧಿಸಿವೆ. ಏಕೆಂದರೆ ಮಾರ್ಗದರ್ಶಕನೇ ತಪ್ಪೆಸಗಿದರೆ ಉಳಿದವರ ಕಥೆ ಏನು ಎಂಬ ಜಾಗೃತೆಯಲ್ಲಿ. ಬ್ರಾಹ್ಮಣನು ಅಕಸ್ಮಾತ್ ಪ್ರಾಣಿವಧೆ ಮಾಡಿದರೆ ಅವನಿಗೆ ಒಂದು ದಿನ ಪಂಚಗವ್ಯ ಮಾತ್ರ ತೀರ್ಥದಷ್ಟು ಕುಡಿದು ಇನ್ನೊಂದು ದಿನ ಉಪವಾಸ ಮಾಡಿ ಶುದ್ಧಿ. ಕ್ಷತ್ರಿಯನಿಗೆ  ಯಾರ ಬಳಿಯೂ ಕೇಳದೇ ಮೂರು ಹೊತ್ತು ತಾನಾಗಿ ಸಿಕ್ಕಿದ ಅನ್ನವನ್ನು ಮೂರು ತುತ್ತುಗಳಷ್ಟು ತಿನ್ನುವುದರಿಂದ ಶುದ್ಧಿ.  ವೈಶ್ಯನಿಗೆ ಇದರ ಅರ್ಧ ಎಂದರೆ ಎರಡು ಹೊತ್ತು ಅಯಾಚಿತವಾಗಿ ಸಿಕ್ಕ ಅನ್ನ ಮೂರು ತುತ್ತು ತಿನ್ನುವ ಶಿಕ್ಷೆಯಿಂದ ಶುದ್ಧಿ. ಶೂದ್ರನಿಗೆ ಕೇವಲ ಒಂದು ಹೊತ್ತು ಹೀಗೆ ಮಾಡಿದರೆ ಸಾಕು. ಜವಾಬ್ದಾರಿ ಹೆಚ್ಚಿದ್ದಷ್ಟೂ ಹೊರೆಯೂ ಹೆಚ್ಚು, ತಪ್ಪೆಸಗಿದರೆ ಶಿಕ್ಷೆಯೂ ವಿಧಿ- ನಿಷೇಧಗಳೂ ಹೆಚ್ಚು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೩೯

   ಧರ್ಮಾಚರಣೆ---೩೯ ನಷ್ಟೇ ಮೃತೇ ಪ್ರವ್ರಜಿತೇ ಕ್ಲೀಬೇ ಚ ಪತಿತೇ ಪತೌ | ಪಂಚಸ್ವಾಪತ್ಸು ನಾರೀಣಾಂ ಪತಿರನ್ಯೋ ವಿಧೀಯತೇ || ಪರಾಶರ ಸ್ಮೃತಿ|| ಪತಿ ಸತ್ತಾಗ ಅಥವಾ ದೀರ್ಘಕಾಲ ಕಾಣೆಯಾದಾಗ , ನಪುಂಸಕನಾಗಿದ್ದಾಗ, ಕೆಟ್ಟ ಕರ್ಮಗಳನ್ನು ಆಚರಿಸುವನಾದರೆ ( ಅತ್ಯಾಚಾರ, ಕೊಲೆ, ಹಿಂಸೆ) ಪತ್ನಿಯು ಇನ್ನೊಂದು ವಿವಾಹವಾಗಲು ಅಡ್ಡಿಯಿಲ್ಲ. ಪತಿಯಾದರೂ ಪತ್ನಿಯ ವಿಷಯದಲ್ಲಿ ಇಂತಹುದೇ ನಿಯಮಕ್ಕೆ ಬದ್ಧನಾಗಿರುತ್ತಾನೆ. ಧರ್ಮದ ನಡೆ ಸ್ತ್ರೀ ಪುರುಷರಿಗೆ ಎಂದಿಗೂ ಸಮಾನವಾಗಿದೆ. ಬಹುಶಃ ರಾಜಾರಾಮ ಮೋಹನರಾಯರು ಇದನ್ನು ಓದಿಯೇ ವಿಧವಾ ವಿವಾಹ ಕಾನೂನು ತಂದರು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ರಾಮಾಯಣ ೧೪೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೭ 🏝📖     *ಪಾಠ್ಯೇ ಗೇಯೇ ಚ ಮಧುರಂ ಪ್ರಮಾಣೈಸ್ರ್ತಿಭಿರನ್ವಿತಮ್ | ಜಾತಿಭಿಃ ಸಪ್ತಭಿರ್ಬದ್ಧಂ ತಂತ್ರೀಲಯಸಮನ್ವಿತಮ್ ||* _ರಾಮಾಯಣ ಕಾವ್ಯದ ಮಹತ್ವ ಸಾರುವ ಶ್ಲೋಕ. ಇದರಲ್ಲಿ ಓದುಗನಿಗೆ  ಮಧುರಾನುಭೂತಿ ತರುವ ವಿಷಯಗಳು ಇವೆ. ಗಾಯನ ಮಾಡಲಂತೂ ಅಕ್ಷರವಿನ್ಯಾಸ ಸೊಗಸಾಗಿದೆ. ಸಂದರ್ಭಕ್ಕನುಗುಣವಾಗಿ ರಾಗಗಳನ್ನು ಜೋಡಿಸಿ ಮಧುರವಾಗಿ ಹಾಡಲು ಅನುಕೂಲವಾಗುವ ಗಾಯನಮಾಧುರ್ಯ ಇದೆ. ಶ್ಲೋಕಗಳು ಮೂರು ಬಗೆಯ ಪ್ರಮಾಣಗಳಿಂದ ಅಥವಾ ಲಕ್ಷಣಗಳಿಂದ ಕೂಡಿವೆ. ಗಾನ- ಧ್ವನಿ- ಪರಿಚ್ಛೇದ. ಗಾಯನ ಯೋಗ್ಯತೆ, ಪದಗಳಿಂದ ಹೊರಹೊಮ್ಮುವ ಧ್ವನಿ ( ಆಂತರಿಕ ಅರ್ಥ) , ಶಬ್ದ ಪರಿಚ್ಛೇದ ಸುಲಭವಾಗಲು ಸಂಧಿ ಸಮಾಸಗಳ ಬಳಕೆ. ಇನ್ನೊಂದು ಬಗೆಯಲ್ಲಿ ನೋಡುವುದಾದರೆ ತ್ರ್ಯಶ್ರ್ಯ- ಚತುರಶ್ರ- ಮಿಶ್ರ. ಹಾಡುವಾಗ ಯಾವ ಯಾವ ಭಾಗಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಿ ರಾಗದ ಅಭಿವ್ಯಕ್ತಿಗೆ ಒದಗಿಬರುವ ಸೌಕರ್ಯ. ( ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಕ್ಷಮಿಸಿ) . ಅಂತೆಯೇ ದ್ರುತ- ಮಧ್ಯಮ- ವಿಲಂಬಿತ ಎಂಬ ಗಾಯನದ ಮೂರು ಪ್ರಕಾರಗಳಿಗೆ ಅನುಸಾರವಾದ ಶ್ಲೋಕ ರಚನೆ ಇಲ್ಲಿದೆ. “द्रुतामध्यमने वृत्तिं प्रयोगार्थे तु मध्यमाम् । शिष्याणामुपरोधार्थे विलम्बितां समाचरेत्|| ವೇದಾಧ್ಯಯನ ಮಾಡುವ ಸಮಯದಲ್ಲಿ ಪಾಠದ ಕ್ರಮವನ್ನು ಹೇಳುವಾಗ ಈ ಮೂರು ಲಯದ ಕ್ರಮವನ್ನು ಹೇಳುತ್ತಾರೆ. ಅಂತೆಯೇ ನಿಷಾದ- ಋಷಭ-...

ಧರ್ಮಾಚರಣೆ ೩೮

  ಧರ್ಮಾಚರಣೆ-೩೮ ಕಂಡನೀ ಪೇಷಣೀ ಚುಲ್ಲೀ ಉದಕುಂಭೀ ಚ ಮಾರ್ಜನೀ | ಪಂಚಸೂನಾ ಗೃಹಸ್ಥಸ್ಯ ಅಹನ್ಯಹನಿ ವರ್ತತೇ|| ಪರಾಶರ ಸ್ಮೃತಿ||  ಅಕ್ಕಿಯನ್ನು ಅಥವಾ ಧಾನ್ಯಗಳನ್ನು ಒನಕೆಯಿಂದ ಅಥವಾ ಯಂತ್ರಗಳ ಮೂಲಕ ಹೊಟ್ಟು ಬೇರ್ಪಡಿಸುವಿಕೆ, ಅರೆಯುವ ಕಲ್ಲು- ಮಿಕ್ಸಿ ಅಥವಾ ದೊಡ್ಡ ಯಂತ್ರಗಳಿಂದ ಅಡಿಗೆ ಪದಾರ್ಥಗಳನ್ನು ಪುಡಿ ಮಾಡುವುದು, ಬೆಂಕಿಯಲ್ಲಿ ಬೇಯಿಸುವುದು, ನೀರು ಕೊಡಪಾನದಲ್ಲಿ ಅಥವಾ ನಲ್ಲಿಗಳ ಮೂಲಕ ಬಂದಾಗ, ನೀರನ್ನು ಸ್ವಚ್ಛ ಮಾಡಲೆಂದು ಮನೆ ಎದುರಿಗೆ ಅಥವಾ ಎಲ್ಲಾದರೂ ಸಿಂಪಡಿಸಿದಾಗ ಅನೇಕ ಸೂಕ್ಷ್ಮ ಜೀವಿಗಳ ಹಾನಿಯಾಗುತ್ತದೆ. ಭಗವಂತನ ಸೃಷ್ಟಿಯಲ್ಲಿ ನಮಗೆ ಹಾನಿ ಮಾಡುವ ಅಧಿಕಾರ ಎಳ್ಳಷ್ಟೂ ಇಲ್ಲ. ಇದರ ಪ್ರಾಯಶ್ಚಿತ್ತ ಎಂದು ಪಂಚಮಹಾಯಜ್ಞಗಳನ್ನು ವಿಧಾನ ಮಾಡಿದ್ದಾರೆ. ಸ್ವಾಧ್ಯಾಯ, ದೇವಪೂಜೆ, ಪಿತೃಗಳ ಸ್ಮರಣೆ, ಭೂತ- ಕಾಕ ಮೊದಲಾದವುಗಳಿಗೆ ಬಲಿ, ಅತಿಥಿ ಸತ್ಕಾರ ಇವುಗಳಿಂದ ದಿನವೂ ಮಾಡುವ ಪಾಪಗಳಿಂದ ಮುಕ್ತನಾಗುವನು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೩೭

    ಧರ್ಮಾಚರಣೆ----೩೭ ಯೋ ವೇಷ್ಟಿತಶಿರಾಭುಂಕ್ತೇ ಯೋ ಭುಂಕ್ತೇ ದಕ್ಷಿಣಾಮುಖಮ್ | ವಾಮಪಾದಕರಃ ಸ್ಥಿತ್ವಾ ತದ್ವೈರಕ್ಷಾಂಸಿ ಭುಂಜತೇ || ಪರಾಶರ ಸ್ಮೃತಿ||  ತಲೆಗೆ ಮುಂಡಾಸು ಅಥವಾ ಉತ್ತರೀಯವನ್ನು ಕಟ್ಟಿಕೊಂಡು ಊಟ ಮಾಡಬಾರದು. ದಕ್ಷಿಣ ದಿಕ್ಕಿಗೆ ಮುಖಮಾಡಿ ಉಣ್ಣಬಾರದು. ಹೇಗೆ ಉತ್ತರಕ್ಕೆ ತಲೆ ಹಾಕಿ ನಿದ್ರಿಸಬಾರದೋ ಅಂತೆಯೇ ದಕ್ಷಿಣಕ್ಕೆ ಮುಖ ಮಾಡಿ ಉಣ್ಣಬಾರದು. ಎಡಕಾಲ ಮೇಲೆ ಕೈ ಊರಿ  ಊಟ ಮಾಡಬಾರದು. ಊಟ ಮಾಡುವಾಗ ಎಲೆಯಲ್ಲಾದರೆ ಎಡಗೈ ಎಲೆ ತುದಿಗೆ ಇಟ್ಟುಕೊಳ್ಳಬೇಕು, ತಟ್ಟೆಯಲ್ಲಾದರೆ ಹಾಗೆ ಆಗದಿದ್ದರೂ ಎಡಗಾಲ ಮೇಲೆ ಇಡಬಾರದು. ಬೇಕಾದರೆ ಹೃದಯವನ್ನು ಸ್ಪರ್ಶಿಸಿ ಭಗವಂತನನ್ನು ಚಿಂತಿಸುತ್ತಾ ಉಣ್ಣಬಹುದು. ಈ ಮೂರು ನಿಯಮ ಅಚರಿಸದಿದ್ದರೆ ನಾವು ತಿಂದ ಅನ್ನ ರಾಕ್ಷಸರ ಪಾಲಾಗಿ ರಾಕ್ಷಸರ ಗುಣಗಳಾದ ಕ್ರೋಧ-ಅತಿಕಾಮ-ಅತಿನಿದ್ರೆ- ಲಾಲಸೆ ಮೊದಲಾದವು ಒಡಮೂಡುತ್ತವೆ. ಹಾಗಾಗಿ ಊಟವನ್ನು ಹೇಗೆ ಬೇಕಾದರೂ ಮಾಡಿದರೆ ಬದುಕೂ ದಾರಿತಪ್ಪುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೩೬

    ಧರ್ಮಾಚರಣೆ---೩೬ ಸುಕ್ಷೇತ್ರೇ ವಾಪಯೇತ್ ಬೀಜಂ ಸುಪಾತ್ರೇ ನಿಕ್ಷಿಪೇದ್ಧನಮ್ | ಸುಕ್ಷೇತ್ರೇ ಚ ಸುಪಾತ್ರೇ ಚ ಹ್ಯುಪ್ತಂ ದತ್ತಂ ನ ನಶ್ಯತಿ || ಪರಾಶರ ಸ್ಮೃತಿ|| ಗಿಡ ನೆಡುವಾಗ ಮಣ್ಣು ಒಳ್ಳೆಯದಿದೆಯೋ, ಬಿಸಿಲು ಹೇಗಿದೆ, ನೀರು ನಿಲ್ಲದ ಪ್ರದೇಶವೋ ( ಭತ್ತ ಮೊದಲಾದವು ಬಿಟ್ಟು) ಇತ್ಯಾದಿ ಯೋಚಿಸಿ ನೆಟ್ಟಾಗ ಆ ಗಿಡ ಮರವಾಗಿ ಬಹುಕಾಲ ಫಲಕೊಡುತ್ತದೆ. ಅಂತೆಯೇ ದಾನ ಮಾಡುವಾಗ ಪಾತ್ರಾಪಾತ್ರ ವಿವೇಚನೆ ಮಾಡಿ ಕೊಡಬೇಕು. ನಮ್ಮ ಬಂಧುಗಳು, ಮಿತ್ರರು, ಪರಿಚಿತರು, ಗುರುಗಳ ಬಂಧುಗಳು ಇತ್ಯಾದಿ ವಿಚಾರ ಮಾಡದೇ ವ್ಯಕ್ತಿಯಲ್ಲಿ ದಾನ ತೆಗೆದುಕೊಳ್ಳುವ ಯೋಗ್ಯತೆ ಎಷ್ಟಿದೆ? ಅದನ್ನು ಜೀರ್ಣಿಸಿಕೊಳ್ಳಲು ಏನಾದರೂ ಸಾಧನೆ ಮಾಡುವನೋ ಎಂಬುದನ್ನು ವಿಚಾರ ಮಾಡಿ ಕೊಟ್ಟಾಗ ಮಾತ್ರ ಬಹುಫಲದಾಯಕ. ಇಲ್ಲದಿದ್ದರೆ ಅರಣ್ಯ ಇಲಾಖೆಯವರ ವನಮಹೋತ್ಸವದ ಗಿಡದಂತೆ ನಾವು ಕೊಟ್ಟ ದಾನದ ಫಲವು ಕ್ಷಣದಲ್ಲೇ ನಾಶವಾಗುವುದು. ಇವೆರಡರ ನಿವೇಶ ಬಹು ಮುಖ್ಯವಾದುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೩೫

    ಧರ್ಮಾಚರಣೆ-೩೫ ಶ್ರದ್ಧಯಾ ಚಾನ್ನದಾನೇನ ಪ್ರಿಯಪ್ರಶ್ನೋತ್ತರೇಣ ಚ | ಗಚ್ಛತಶ್ಚಾನುಯಾನೇನ ಪ್ರೀತಿಮುತ್ಪಾದಯೇತ್ ಗೃಹೀ || ಪರಾಶರ ಸ್ಮೃತಿ|| ಗೃಹಸ್ಥನು ಅತಿಥಿಗೆ ಅನ್ನಾದಿಗಳು ಎಷ್ಟಿದ್ದರೂ ಬಿಸಿಬಿಸಿಯಾಗಿ ಶ್ರದ್ಧೆಯಿಂದ ಬಡಿಸಬೇಕು. ಏನೋ ಒಂದು ತಿನ್ನಲಿ ಅಥವಾ ಬೇಗ ಕಳಿಸಿದರಾಯಿತು ಇತ್ಯಾದಿ ಯೋಚಿಸದೇ ಭಗವಂತನೇ ಬಂದಿರುವನೆಂದು ಅವನ ಅನಾದರ ಮಾಡದೆ ಊಟ ಮಾಡಿಸಬೇಕು. ಅತಿಥಿಯ ಜೊತೆಗೆ ಮಧುರಭಾಷಣ ಮಾತ್ರ ಮಾಡಬೇಕು. ಪರನಿಂದೆಯನ್ನೋ, ಭರ್ತ್ಸನೆಯನ್ನೋ ಮಾಡಬಾರದು. ಹೊರಟಾಗ ತಾನೂ ಹತ್ತು ಹೆಜ್ಜೆ ಹೋಗಿ ಬೀಳ್ಕೊಡಬೇಕು. ಇಂತಹ ಅತಿಥಿಸತ್ಕಾರ ಭಗವತ್ಪ್ರೀತಿದಾಯಕ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೩೪

ಧರ್ಮಾಚರಣೆ-೩೪ ನೈಕಗ್ರಾಮೀಣಮತಿಥಿಂ ಸಂಗೃಹ್ಣೀತ ಕದಾಚನ | ಅನಿತ್ಯಮಾಗತೋ ಯಸ್ಮಾತ್ತಸ್ಮಾದತಿಥಿರುಚ್ಯತೇ|| ಪರಾಶರ ಸ್ಮೃತಿ|| ಒಂದೇ ಗ್ರಾಮದ ಮನೆಯವರು ಎಂದಿಗೂ ಅತಿಥಿಗಳಲ್ಲ. ದೂರದಿಂದ ಬಂದಿದ್ದರೆ ಮಾತ್ರ ಅತಿಥಿ. ತನ್ನ ಮನೆಯಲ್ಲೇ ಅನುಕೂಲ ಇರುವಾಗ ಬೇರೆ ಕಡೆ ಆತಿಥ್ಯ ಬಯಸಿ ಹೋಗುವುದು ಪಾಪಕರ. ನಿತ್ಯ ಮನೆಗೆ ಬರುತ್ತಿದ್ದರೆ ಅವರೂ ಅತಿಥಿಗಳಲ್ಲ. ಅವರೆಲ್ಲರೂ ಅಭ್ಯಾಗತರು. ಹೇಳದೇ ಆಕಸ್ಮಿಕವಾಗಿ ಭೋಜನದ ಹೊತ್ತಲ್ಲಿ ಬಳಲಿ ಬಂದರೆ ಅವರು ನಿಜವಾದ ಅತಿಥಿ. ಹಾಗಾಗಿ ಅತಿಥಿ ಸತ್ಕಾರವೆಂದು ಪಕ್ಕದಮನೆಯವರನ್ನು, ಬಂಧುಗಳನ್ನು, ಮಿತ್ರರನ್ನು ಕರೆಯುವುದಲ್ಲ. ಅದು ಮಿತ್ರ- ಬಂಧು ಭೋಜನ. ಎಲ್ಲಿಂದಲೋ ನಮಗೆ ಅರಿವಿಲ್ಲದೆ ಬರುವವರು ಅತಿಥಿಗಳು. ಅಂತಹವರ ಆತಿಥ್ಯವು ದೇವಪ್ರೀತಿಕರ. ಇಹಪರ ಫಲದಾಯಕ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೩೩

     ಧರ್ಮಾಚರಣೆ--- ೩೩ ಇಷ್ಟೋ ವಾ ಯದಿ ವಾ ದ್ವೇಷ್ಯೋ ಮೂರ್ಖಃ ಪಂಡಿತ ಏವ ವಾ | ಸಂಪ್ರಾಪ್ತೋ ವೈಶ್ವದೇವಾಂತೇ ಸೋತಿಥಿಃ ಸ್ವರ್ಗ ಸಂಕ್ರಮಃ || ಪರಾಶರ ಸ್ಮೃತಿ|| ಊಟದ ಸಮಯಕ್ಕೆ ಬಂದ ಅತಿಥಿಗೆ ಎಂದೂ ಅನ್ನ ನಿರಾಕರಿಸಬಾರದು. ಬಂಧು-ಮಿತ್ರರಾಗಲಿ, ಶತ್ರುವಾಗಲಿ, ಮೂರ್ಖನಾಗಲಿ- ಪಂಡಿತನಾಗಲಿ ಯಾವ ವರ್ಣ- ಧರ್ಮದವರಾದರೂ ವೈಶ್ವದೇವ ಮಾಡಿ ಕೆಲವು ಕ್ಷಣ ಕಾದು ಬಂದರೆ ಊಟ ಬಡಿಸಿ ನಂತರ ತಾನು ಉಣ್ಣಬೇಕು. ಅಂತಹ ಸಮಯದ ಅತಿಥಿಯು ಸ್ವರ್ಗವನ್ನೇ ನಮ್ಮ ಪಾಲಿಗೆ ಕರುಣಿಸುತ್ತಾನೆ. ಕರೆಯದೇ ಬಂದ ಅಂತಹ ವ್ಯಕ್ತಿಯಲ್ಲಿ ಭಗವಂತನ ಸಾನ್ನಿಧ್ಯ ಇರುವ ಕಾರಣ ಮಡಿ- ಮೈಲಿಗೆ ಹೆಚ್ಚೇನೂ ವಿಚಾರಿಸದೆ ಅನ್ನ ಕೊಡಬೇಕು‌. ಹಿಂದೂ ಧರ್ಮದ ಅನ್ನದಾನದ ಶ್ರೇಷ್ಠ ಪರಂಪರೆ ಇದೇ ಆಗಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಅನುವಾದಿತ ಕಥೆ ೩೦

अनूदित कथावलि: --२०            समयानुसारिणी गति: मतिश्च एकस्मिन् जनपदे एक: राजा प्रशासति स्म। तस्य एकैव पुत्र: आसीत्। सहजतया तद्विषये महतीं प्रीतिं दर्शितवन्तौ तस्य पितरौ । कालक्रमेण स: युवावस्थां प्रविष्ट: । मित्रै: साकं द्वित्रिवारं मृगयार्थं गतवान् । तेन नितरां तुष्ट: स: सप्ताहे चतु:पञ्चवारं यावत् मृगयार्थं गन्तुमारेभे।  पुत्रस्य एतादृशस्वभावेन चिन्तित: पिता तस्मै एवं वारंवारं मृगयार्थं गमनं न साधु भवति, प्रजा: मृगै: पीडिता: चेत् तदा अवश्यं गन्तव्यम् इत्याद्युपदिदेश। परंतु यौवनमदमत्त: राजपुत्र: तस्य वचनं अन्यकर्णेन त्यक्तवान् । तदा राजा मन्त्रिणमाहूय पुत्रस्य राजकार्येषु अनासक्ति: , मित्रै: साकम् अटनार्थं अतीव आसक्ति: , कथं तस्य मन: परिवर्तितव्यम् , किं करणीयं तद्विषये, अहं चिन्ताक्रान्त: अभवम् इत्युक्तवान्। तदा तेनोक्तम् - कालेनैव स: शिक्षितो भवति। भवान् मा कुरु चिन्ता इति ।  तत: काल: गत: । एकदा कुमार: मृगयार्थं वनं गत: । तद्दिने अकस्मात् एकस्य सिंहस्योपरि आक्रमणकाले अश्वात् पतितो बभूव। मृगराजस्तु अनुक्षणमेव तं उपसर्प्य आक्रमितुमारेभे । तदा सह...

ರಾಮಾಯಣ ೧೪೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೬ 🏝📖     *ಕೃತ್ವಾಪಿ ತನ್ಮಹಾಪ್ರಾಜ್ಞಃ ಸಭವಿಷ್ಯಂ ಸಹೋತ್ತರಮ್ | ಚಿಂತಯಾಮಾಸ ಕೋನ್ವೇತತ್ಪ್ರಯುಂಜೀಯಾದಿತಿ ಪ್ರಭುಃ||* _ವಾಲ್ಮೀಕಿ ಮಹರ್ಷಿಗಳು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳುಳ್ಳ, ಐದುನೂರು ಸರ್ಗಗಳಿಂದ ಕೂಡಿದ, ಏಳು ಕಾಂಡರೂಪದ ಮಹಾಕೃತಿಯನ್ನು ರಚಿಸಿ ಹೀಗೆ ಚಿಂತಿಸಿದರು- ಇನ್ನು ಯಾರು ಇದನ್ನು ಚೆನ್ನಾಗಿ ಕಲಿಯುವರು? ಅರಿತು ಪ್ರಚುರಪಡಿಸುವವರು ಯಾರಿರುವರು ಲೋಕದಲ್ಲಿ? ಕೃತಿ ರಚನೆ ಮಾಡಿ ಶಿಷ್ಯರಿಗೆ ಬೋಧಿಸದಿದ್ದರೆ ಅದು ಲೋಕಮುಖದಲ್ಲಿ ಹೇಗೆ ಬೆಳಕು ಕಂಡೀತು. ಹಿಂದೆ ಲಿಪಿಕಾರರು ಹಾಗೂ ಓದುಗರು ಕಡಿಮೆ ಇದ್ದರು. ಲಿಪಿ ಗೊತ್ತಿದ್ದ ಬರಹಗಾರರು ಹಾಗೂ ಬರೆದದ್ದನ್ನು ಓದಲು ಅರಿತವರ ಸಂಖ್ಯೆ ವಿರಳ‌. ಕೇವಲ ಶ್ರುತವಾಗಿ ಅಂದರೆ ಕಿವಿಯಿಂದ ಕಿವಿಗೆ ಗುರುಮುಖೇನ ಕೇಳಿ ಪ್ರಸಾರವಾಗುತ್ತಿತ್ತು. ವೇದ ಶಾಸ್ತ್ರಗಳ ಪಾಠ ಎಷ್ಟು ಸ್ಪಷ್ಟ ಹಾಗೂ ಶುದ್ಧವಾಗಿತ್ತೆಂದರೆ ಒಂದೊಂದು ಊರಿಗೆ ಒಂದೊಂದು ಶಾಸ್ತ್ರ ವೇದ ಹಿಂದೆಯೂ ಇರಲಿಲ್ಲ, ಇಂದೂ ಇಲ್ಲ. ಪುಸ್ತಕ ಅಥವಾ ತಾಳೆಗರಿಯಲ್ಲಿ ಬರೆದು ಓದುವ ಜನರು ಇಲ್ಲದಿದ್ದಾಗ ಹೇಗೆ ರಾಮನ ಚರಿತೆ ಜನರಿಗೆ ಮಾರ್ಗದರ್ಶಕವಾದೀತು ಎಂಬ ಚಿಂತೆ ಮುನಿಗಳನ್ನು ಬಾಧಿಸಿತು. ಗುರುವಿನ ಲಕ್ಷಣವೇ ಅದು. ತಾನು ಕಲಿತದ್ದನ್ನು, ತಾನು ಅರಿತಿದ್ದನ್ನು ಮತ್ತೊಬ್ಬನಿಗೆ ತಿಳಿಸದೇ ಅವನು ಎಂದಿಗೂ ಸಮಾಧಾನ ಹೊಂದಲಾರ. ಯೋಗ್ಯ ವ್ಯಕ್ತಿ ಸಿಕ್ಕಾಗಲೂ ಗೊತ್ತಿರುವುದನ್ನು...

ಧರ್ಮಾಚರಣೆ ೩೨

     ಧರ್ಮಾಚರಣೆ-೩೨ ಧರ್ಮಃ ಶ್ರೇಯಸ್ಸಮುದ್ದಿಷ್ಟಂ ಶ್ರೇಯೋಭ್ಯುದಯಲಕ್ಷಣಮ್| ಅಸ್ಯ ಸಮ್ಯಗನುಷ್ಠಾನಾತ್ ಸ್ವರ್ಗೋ ಮೋಕ್ಷಶ್ಚ ಜಾಯತೇ|| ಭವಿಷ್ಯ ಪುರಾಣ|| ಮಾನವನ ಬದುಕಿನಲ್ಲಿ ಧರ್ಮದ ಆಚರಣೆಗೆ ತುಂಬಾ ಮಹತ್ವ ಇದೆ. ಆಧುನಿಕರನೇಕರ ಪ್ರಶ್ನೆ- ಧರ್ಮಾಚರಣೆಯಿಂದ ಏನು ಪ್ರಯೋಜನ? ಅದಕ್ಕುತ್ತರ ಇಲ್ಲಿದೆ- ಧರ್ಮವೇ ಅತ್ಯಂತ ಪ್ರಶಸ್ತವಾದುದು. ಶ್ರೇಯಸ್ಕರ ಎಂದರೆ ಪ್ರಶಸ್ತ ಅಥವಾ ಉತ್ತಮಮಾರ್ಗ ಎಂದರ್ಥ. ನಮ್ಮ ಬದುಕಿನಲ್ಲಿ ಉತ್ತಮ ಮಾರ್ಗದೆಡೆಗಿನ ನಡೆಯೇ ಉದ್ಧಾರಕಾರಣ. ಇಂತಹ ಸನ್ಮಾರ್ಗದಲ್ಲಿ ಸಾಗುವುದೇ ಕಾಮನೆ ಹೊಂದಿದವನಿಗೆ ಸ್ವರ್ಗವನ್ನು, ನಿಷ್ಕಾಮನಿಗೆ ಮೋಕ್ಷವನ್ನೂ ತಂದುಕೊಡುತ್ತದೆ. ಸನ್ಮಾರ್ಗದ ನಡೆ, ಸಜ್ಜನಿಕೆಯ ಅನುಷ್ಠಾನ ಎಂದೂ ವ್ಯರ್ಥವಲ್ಲ. ಅದು ಆತ್ಮ ಎಷ್ಟು ದೂರ ಕ್ರಮಿಸುವುದೋ ಅಲ್ಲಿಯವರೆಗೂ ಫಲ ಕೊಡುತ್ತಲೇ ಇರುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೩೧

      ಧರ್ಮಾಚರಣೆ ---೩೧ ವಿಹಿತಸ್ಯ ಅನನುಷ್ಠಾನಾತ್ ನಿಂದಿತಸ್ಯ ಚ ಸೇವನಾತ್ | ಅನಿಗ್ರಹಾಚ್ಛೇಂದ್ರಿಯಾಣಾಂ ನರಃ ಪತನಮೃಚ್ಛತಿ || ಯಾಜ್ಞವಲ್ಕ್ಯ ಸ್ಮೃತಿ|| ಜನರು ತಮ್ಮ ವರ್ಣಕ್ಕೆ ವಿಹಿತವಾದ ಕರ್ಮಗಳನ್ನು ಲೋಪವಿಲ್ಲದೆ ಮಾಡಬೇಕು. ಹಾಗೆ ಮಾಡದಿದ್ದರೆ ದೋಷವಿದೆ. ಉ- ಸಂಧ್ಯಾ, ಪೂಜೆ, ದಾನ, ಅಧ್ಯಯನ ಮೊದಲಾದವನ್ನು ಬ್ರಾಹ್ಮಣನು ಆಚರಿಸದಿದ್ದರೆ ದೋಷ ಕಂಡುಬರುವುದು. ಇನ್ನು ನಿಂದಿತ ಕರ್ಮಗಳನ್ನು ಆಚರಿಸುವುದು ಸರ್ವರಿಗೂ ದೋಷಕಾರಕ. ಉ- ಆರರ ಮೇಲೂ ಏಳದಿರುವುದು, ಸ್ನಾನಾದಿಗಳನ್ನು ದಿನವೂ ಮಾಡದಿರುವುದು, ಕುಡಿತ- ಅಮಲು ಸೇವನೆ- ಪರಸ್ತ್ರೀ ಆಕರ್ಷಣೆ ಇತ್ಯಾದಿ. ಮೂರನೆಯದು ಇಂದ್ರಿಯಗಳ ನಿಗ್ರಹ. ಪಂಚ ಕರ್ಮ ಹಾಗೂ ಪಂಚ ಜ್ಞಾನೇಂದ್ರಿಯಗಳ ನಿಗ್ರಹವು ಅವಶ್ಯಕ. ನಾಲಿಗೆ ಚಪಲ- ಮಾತು ಹಾಗೂ ತಿನ್ನುವುದರಲ್ಲಿ, ಕಲಹ- ಅಪಘಾತ-ಅನಾಚಾರಗಳನ್ನು ನೋಡುವ ಚಪಲ ಕಣ್ಣಿಗೆ, ಬೇರೊಬ್ಬರ ಗುಟ್ಟನ್ನು ಕೇಳುವ ಅಥವಾ ಅಶ್ಲೀಲ ಮಾತು ಕೇಳುವ ಚಪಲ ಕಿವಿಗೆ, ಎಲ್ಲಾ ಬಗೆಯ ವಾಸನೆ ಸ್ವೀಕರಿಸುವ ಚಪಲ ಮೂಗಿಗೆ, ಸಿಕ್ಕಿದ್ದನ್ನೆಲ್ಲ ಸ್ಪರ್ಶಿಸುವ ತವಕ ಚರ್ಮಕ್ಕೆ ಹೀಗೆ ಇಂದ್ರಿಯ ನಿಗ್ರಹ ಬಲು ಕಷ್ಟ. ಇವುಗಳ ನಿಗ್ರಹವು ಮಾನವನ ಪತನವನ್ನು ತಡೆಯುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಅನುವಾದಿತ ಕಥೆ ೧೯

अनूदित कथावलि: - १९     गुणेषु क्रियतां यत्न: एकस्मिन् ग्रामे चत्वारि मित्राण्यासन् । तेषां समेषां आशा महती आसीत्। भाविनि जीवने महत्तरं स्थानं वयं प्राप्स्याम:  इति चिन्तितं तै: । तदर्थं सर्वकारीयपरीक्षासु सदा भागं वहन्त: आसन् ।  एकदा ते ग्रामात् बहि:  नद्या: तीरे अटनार्थं तथा जलक्रीड़ार्थं गतवन्त: । तत्र तै: एक: पेरूकफलस्य बृहद्वृक्ष: दृष्ट: । तेषु एक: गूढं तद्वृक्षम्  अवलोक्य झटिति आरुह्य पेरुकं वियुज्य खादितुमारेभे।  अन्ये तमेव कौतुकेन ईक्षितुमारेभिरे । किंतु तत्र अधस्थात् अन्यानि फलानि वृक्षे सन्ति वा न वा इति न दृश्यते स्म।  तेषु द्वितीय: फलं स्यात् कस्याञ्चित्  शाखायां इति मत्वा यावच्छीघ्रं आरुह्य फलं प्राप्य भक्षितवान् ।  तदा अवशिष्टौ द्वौ चिन्तितुमारेभाते - हन्त, फलानि बहूनि न  सन्ति, आवां भाग्यहीनौ , पापिनौ स्व:  इत्यादि। किंतु अचिरादेव ताभ्यां चिन्तितम् - वृक्षस्तु बहुशाखायुक्त: , यत्र कुत्रापि एकं फलं  निश्चयेन स्यादित्यालोच्य सहसा आरोढुमारभेताम् । दशनिमेषाणां अन्वेषणेन ताभ्यां स्वादु पेरूकं प्राप्तं भक्षितं च । ...

ರಾಮಾಯಣ ೧೪೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೫ 🏝📖    *ಕಾಮಾರ್ಥಗುಣಸಂಯುಕ್ತಂ ಧರ್ಮಾರ್ಥಗುಣವಿಸ್ತರಮ್ | ಸಮುದ್ರಮಿವ ರತ್ನಾಢ್ಯಂ ಸರ್ವಶ್ರುತಿಮನೋಹರಮ್||*  _ರಾಮಾಯಣದ ಹಿರಿಮೆ ಇಲ್ಲಿದೆ- ಕಾಮವೆಂಬ ಪುರುಷಾರ್ಥವನ್ನು ಧರ್ಮಾನುಸಾರ ಹೇಗೆ ಪಡೆಯಬಹುದೆಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಅಂತೆಯೇ ಧರ್ಮದ ಮಹತ್ವ ಹಾಗೂ ಆಚರಣೆಯ ಪ್ರತಿಪಾದನೆ ಇಲ್ಲಿದೆ. ಅನೇಕ ರತ್ನಗಳಿಂದ ಕೂಡಿದ ಸಮುದ್ರದಂತೆ ಸದ್ವಿಚಾರಗಳ ಸಮುದ್ರ ಈ ಕಾವ್ಯ. ಕೇಳುಗನಿಗೂ, ಓದುಗನಿಗೂ ಎಷ್ಟು ಬಾರಿಯೂ ಮನಸ್ಸಿಗೆ ಮುದ ಕೊಡುವ ಕಾವ್ಯವೊಂದಿದ್ದರೆ ಅದು ರಾಮಾಯಣ. ಪುರುಷಾರ್ಥಗಳ ಪ್ರತಿಪಾದಕ, ಸದ್ವಿಚಾರಗಳ ಗಣಿ, ಸದಾ ಪಠನೀಯ ಹಾಗೂ ಶ್ರವಣೀಯವಾದುದು ಈ ಆದಿಕಾವ್ಯ._ *ವಾಸ್ತುಕರ್ಮವಿಧಾನಂ ಚ ಭರತಾಗಮನಂ ತಥಾ | ಪ್ರಸಾದನಂ ಚ ರಾಮಸ್ಯ ಪಿತುಶ್ಚ ಸಲಿಲಕ್ರಿಯಾಮ್||* _ರಾಮಾಯಣದ ಒಂದೊಂದೇ ಘಟನೆಗಳನ್ನು ಸಂಕ್ಷೇಪವಾಗಿ ಉಲ್ಲೇಖಿಸುತ್ತಾ ಹದಿನಾರನೇ ಶ್ಲೋಕ ಇದಾಗಿದೆ. ಚಿತ್ರಕೂಟಕ್ಕೆ ಭರದ್ವಾಜರ ಅಪ್ಪಣೆ ಪಡೆದು ಹೊರಟ ರಾಮ ಅಲ್ಲಿ ಪರ್ಣಕುಟಿಯನ್ನು ನಿರ್ಮಿಸಿ ಅಲ್ಲಿ ವಾಸ್ತುಪೂಜೆಯನ್ನು ನೆರವೇರಿಸಿದನು. ಇಲ್ಲಿ ಈ ಶ್ಲೋಕ ಉಲ್ಲೇಖಿಸಲು ಮುಖ್ಯ ಕಾರಣ - ವಾಸ್ತುಪೂಜೆ ಎನ್ನುವುದು ಇತ್ತೀಚೆಗೆ ಆರಂಭವಾದದ್ದಲ್ಲ. ಯುಗಯುಗಗಳ ಪೂರ್ವದಲ್ಲೂ ಅದಕ್ಕೆ ಮಾನ್ಯತೆ ಇತ್ತು. ರಾಮನಂತಹ ಅವತಾರಿಯೇ ಅರಣ್ಯದಲ್ಲಿ ಕಟ್ಟಿದ ಪರ್ಣಕುಟಿಯಲ್ಲಿ ವಾಸ್ತು ಪೂಜೆ ಮಾಡಿ ಪ್ರವೇಶಿಸುವುದಾದರೆ ನ...

ಪದಶಕ್ತಿ ೩೧

🏹*ಪದಶಕ್ತಿ* ---೩೧🌄 *ವಾಸವಃ* _ಇಂದ್ರನ ಹೆಸರು. ವಸುಗಳು ಅಂದರೆ ದೇವತೆಗಳು.  ದೇವತೆಗಳ ಒಡೆಯ ಅಥವಾ ದೇವಪಕ್ಷದವನು ಇಂದ್ರ. ವಸು ಶಬ್ದಕ್ಕೆ ಮತ್ತೊಂದು ಅರ್ಥ ಸಂಪತ್ತು. ಹೆಚ್ಚಿನ ಸಂಪತ್ತು ಹೊಂದಿರುವವನು ಇಂದ್ರ, ಹಾಗಾಗಿ ವಾಸವ. ವಸುಗಳ ಪುತ್ರ ಎಂಬರ್ಥದಲ್ಲೂ ವಾಸವ. ದೈತ್ಯರ ವಾಸವನ್ನು ಅಥವಾ ಅವರ ಆವಾಸವನ್ನು ನಾಶಮಾಡುವನು ಎಂಬರ್ಥದಲ್ಲೂ ಇಂದ್ರನು ವಾಸವ. ಹೀಗೆ ವಾಸವ ಶಬ್ದಕ್ಕೆ ತುಂಬಾ ಅರ್ಥಗಳಿವೆ. ಬೆಂಗಳೂರು ಕಡೆ ವಾಸವಿ ಕನ್ನಿಕಾ ಎಂಬ ಶಬ್ದದ ಪ್ರಯೋಗ ಇದೆ. ಅಲ್ಲಿ ಇಂದ್ರನ ಮಗಳು ವಾಸವಿ ಎನ್ನಬಹುದು ಅಥವಾ ವಸುಪುತ್ರಿ ವಾಸವಿ ಎನ್ನಬಹುದು. ದೇವಪುತ್ರಿ ಎಂಬ ಅರ್ಥದಲ್ಲಿ, ಅಂತೆಯೇ ವ್ಯಾಸರ ತಾಯಿ ಮತ್ಸ್ಯಗಂಧಿಗೂ ವಾಸವಿ ಎಂಬ ಹೆಸರಿದೆ._ ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಕಡೆ ಈ ಹೆಸರನ್ನು ಕಾಣಬಹುದು. ಮಹಾಭಾರತದ ವನಪರ್ವದ ಈ ಶ್ಲೋಕದಲ್ಲಿ ಅರ್ಜುನನು ಇಂದ್ರನ ಆಸನವನ್ನು ಅರ್ಧ ಅಲಂಕರಿಸಿದಾಗ ಎರಡನೆಯ ಇಂದ್ರನಂತೆ ಶೋಭಿಸಿದನು ಎಂದಿದೆ. *सहस्राक्षनियोगात् स पार्थः शक्रासनं गतः । अध्यक्रामदमेयात्मा द्वितीय इव वासवः ॥* ಕನ್ನಡ ಸಾಹಿತ್ಯದಲ್ಲಿ ಕೆಲವೆಡೆ ಕಾಣಬಹುದು. *ಕಮಲಸಂಭವವಿನುತ ವಾಸವ ನಮಿತ ಮಂಗಳಚರಣ* ಕನಕದಾಸರ ಈ ಕೀರ್ತನೆಯಲ್ಲಿ ಇಂದ್ರನಿಂದ ನಮಿಸಲ್ಪಟ್ಟ ಎಂಬ ಅರ್ಥದಲ್ಲಿ ವಿಷ್ಣುವನ್ನು ಸ್ತುತಿಸಿದ್ದಾರೆ. ಇಂತಹ ವಾಸವ ನಮ್ಮನ್ನು ವಸುಗಳನ್ನಿತ್ತು ಪೊರೆಯಲೆಂದು ಪ್ರಾರ್ಥಿಸೋಣ.🙏 ಸಂಗ್ರಹ: ಶ್ರೀನಿಧಿ ಅಭ್ಯಂಕ...

ಧರ್ಮಾಚರಣೆ ೩೦

     ಧರ್ಮಾಚರಣೆ-೩೦ ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ | ದಾನಂ ದಮೋ ದಯಾ ಕ್ಷಾಂತಿಃ ಸರ್ವೇಷಾಂ ಧರ್ಮಸಂಗ್ರಹಃ || ಯಾಜ್ಞವಲ್ಕ್ಯ ಸ್ಮೃತಿ|| ಸಕಲ ಜೀವಿಗಳಲ್ಲಿ ಕಾಯಾ- ವಾಚಾ- ಮನಸಾ ಅಹಿಂಸೆ, ಮನಸಾ ಹಾಗೂ ವಾಚಾ ಸತ್ಯತೆ, ಪರದ್ರವ್ಯದ ಬಗ್ಗೆ ಆಸೆ ಪಡದಿರುವುದು, ದೈಹಿಕ ಹಾಗೂ ಮಾನಸಿಕ ಶೌಚ, ಇಂದ್ರಿಯನಿಗ್ರಹ, ಸಾಧ್ಯವಾದಷ್ಟು ದಾನ, ಸಂಯಮ, ಜೀವಿಗಳಲ್ಲಿ ದಯೆ, ಕ್ಷಮಾಗುಣ ಇವಿಷ್ಟು ಮುಖ್ಯವಾದ ಎಲ್ಲರೂ ಅನುಸರಿಸಬೇಕಾದ ಧರ್ಮದ ಲಕ್ಷಣಗಳು. ಸ್ವಚ್ಛತೆ ಅಂತರಂಗ ಹಾಗೂ ಬಹಿರಂಗಗಳಲ್ಲಿ ಇರಬೇಕು, ಅದೇ ಶೌಚ. ಯಾವ ಸಂದರ್ಭದಲ್ಲೂ ಸಂಯಮ ಕಾಪಾಡಿಕೊಳ್ಳುವುದು ದಮ.  ಪರರ ತಪ್ಪುಗಳನ್ನು ಕ್ಷಮಿಸುವ ಉದಾರತೆಯೂ ಒಂದು ಗುಣ.ಈ ಲಕ್ಷಣಗಳನ್ನು ಅಳವಡಿಸಿಕೊಳ್ಳದೆ ಎಷ್ಟು ಪೂಜೆ, ಉಪವಾಸ, ಉಪನ್ಯಾಸ, ಲೇಖನ ಏನು ಮಾಡಿದರೂ ವ್ಯಕ್ತಿ ಧಾರ್ಮಿಕನಾಗಲಾರ. ಧರ್ಮದ ಪಂಚಾಂಗ ಅಥವಾ ಅಡಿಪಾಯವೇ ಇದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಚಾರುದತ್ತ ೧೯

👳‍♀ಚಾರುದತ್ತ ಬೆಳಕು- ೧೯👳‍♀ *मयि द्रव्यक्षयक्षीणे स्त्रीद्रव्येणानुकम्पित: । अर्थत: पुरुषो नारी या नारी सार्थत: पुमान् ।* _ಚಾರುದತ್ತನ ಮಾತು. ಇವತ್ತಿಗೆ ನಾನು ಬದುಕಿದ್ದೂ ಸತ್ತಂತಾದೆ. ವಸಂತಸೇನೆಯು ನನ್ನ ಬಳಿ ಅಡವಿಟ್ಟ ಆಭರಣವು  ಕಳ್ಳನ ಪಾಲಾಯಿತು.  ಇದನ್ನರಿತ ನನ್ನ ಬ್ರಾಹ್ಮಣ ಪತ್ನಿಯು ತನ್ನ ಪರಂಪರೆಯಲ್ಲಿ ಬಂದ ತುಂಬಾ ಮೌಲ್ಯದ ಮುತ್ತಿನಹಾರವನ್ನು ಈ ವಿದೂಷಕನ ಮುಖಾಂತರ ನನಗೆ ನೀಡುತ್ತಿದ್ದಾಳೆ. ನನ್ನ ಸಂಪತ್ತು ಸಂಪೂರ್ಣ ನಷ್ಟವಾದ ಕಾರಣ ಸ್ತ್ರೀ ಸಂಪತ್ತಿನಿಂದ ಅನುಕಂಪಕ್ಕೆ ಒಳಗಾಗಿರುವೆ. ಅಯ್ಯೋ ಪಾಪ ಪತಿ ಪರಾಧೀನನಾಗುವುದು ಬೇಡ ಅಥವಾ ಋಣದಿಮದ ಕೂಡಿರುವುದು ಬೇಡ ಎಂದು ಸ್ತ್ರೀಯು ನನ್ನ ಬಗೆಗೆ ಅನುಕಂಪ ತಾಳುತ್ತಿದ್ದಾಳೆ‌. ಲೋಕದ ಮಟ್ಟಿಗೆ ಇದು ಪ್ರಶಂಸಾರ್ಹ ಅಥವಾ ಅವಶ್ಯ ಮಾಡಬೇಕಾದ ಕರ್ತವ್ಯವಾಗಿದ್ದರೂ ನನ್ನ ಮಟ್ಟಿಗೆ ಇದು ನನ್ನನ್ನೇ ಕಳೆದುಕೊಂಡಂತೆ ಸರಿ. ಏಕೆಂದರೆ ಪೌರುಷವನ್ನು ಆಶ್ರಯಿಸಿ ಧನ ಸಂಪಾದಿಸದ ನಾನು ಸ್ತ್ರೀಯಂತೆ ಆಗಿದ್ದೇನೆ ಅಥವಾ ಸ್ತ್ರೀಯೇ ಆಗಿದ್ದೇನೆ. ನನ್ನ ಪತ್ನಿಯಾದರೋ ಸಂಪತ್ತನ್ನು ಕೊಡುವುದರ ಮೂಲಕ ಅಥವಾ ಸಂಪಾದಿಸುವ ಮೂಲಕ ಪುರುಷಳಾಗಿದ್ದಾಳೆ. ಧನಕ್ಕಾಗಿ ಮಹಿಳೆಯರನ್ನು ಆಶ್ರಯಿಸಿದ ನನ್ನ ಪುರುಷತ್ವಕ್ಕೆ ಧಿಕ್ಕಾರವಿರಲಿ ಎಂಬ ಭಾವ. ಇಲ್ಲಿ ಲೋಕಕ್ಕೂ ಒಂದು ಪಾಠವಿದೆ. ಸಂಪತ್ತಿಗಾಗಿ ತಾನು ದುಡಿಯದೆ ಪತ್ನಿಯ ಸಂಪತ್ತಲ್ಲಿ ಕಾಲ ಕಳೆಯುವ ಪತಿ ಪುರುಷನಾಗಿದ್ದೂ ಸ್ತ್ರೀಯಂತೆಯ...

ರಾಮಾಯಣ ೧೪೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೪ 🏝📖   *ಉಪಸ್ಪೃಶ್ಯೋದಕಂ ಸಮ್ಯಙ್ಮುನಿಃ ಸ್ಥಿತ್ವಾ ಕೃತಾಂಜಲಿಃ | ಪ್ರಾಚೀನಾಗ್ರೇಷು ದರ್ಭೇಷು ಧರ್ಮೇಣಾನ್ವೀಕ್ಷತೇ ಗತಿಮ್||* _ಬ್ರಹ್ಮನು ತೆರಳಿದ ನಂತರ ಮತ್ತೆ ಮತ್ತೆ ರಾಮನನ್ನೇ ಚಿಂತಿಸಿದರು ವಾಲ್ಮೀಕಿ ಮುನಿಗಳು. ಅನಂತರ ಶುದ್ಧಾಚಮನ ಮಾಡಿ ಪೂರ್ವಾಗ್ರದರ್ಭೆಗಳ ಮೇಲೆ ಕುಳಿತು ಪದ್ಮಾಸನದಲ್ಲಿ ಬದ್ಧಾಂಜಲಿಗಳಾಗಿ ಕುಳಿತು ಯೋಗವನ್ನು ಆಶ್ರಯಿಸಿ ರಾಮನನ್ನು ಅವನ ಕಥೆಯನ್ನು ಚಿಂತಿಸಿದರು. ಧರ್ಮಮಾರ್ಗದಿಂದ ರಾಮನ ಕಥೆ ಹೇಗೆ ನಡೆದಿದೆ ಎನ್ನುವುದನ್ನು ತಿಳಿಯಲು ಪ್ರಯತ್ನಿಸಿದರು. ಲೋಕದಲ್ಲಿ ಎರಡು ಬಗೆಯ ಮಾರ್ಗಗಳಿವೆ - ವ್ಯಕ್ತಿಗಳ ಪೂರ್ವಾಪರಗಳನ್ನು ತಿಳಿಯಲು. ಭಗವಂತನ ಅನುಗ್ರಹ ಪಡೆದು ಯೋಗಮಾರ್ಗವನ್ನು ಆಶ್ರಯಿಸಿ ಅಂದರೆ ಸಮಾಧಿಸ್ಥನಾಗಿ ಒಬ್ಬ ವ್ಯಕ್ತಿಯ ಬಗ್ಗೆ ಚಿಂತಿಸುತ್ತಾ ಹೋದರೆ ಆ ವ್ಯಕ್ತಿಯ ಎಲ್ಲಾ ಚರ್ಯೆಯನ್ನೂ ಅರಿಯಬಹುದು. ಇನ್ನೊಂದು ಅಧರ್ಮ ಮಾರ್ಗ- ಭೂತ, ಯಕ್ಷ,ಪಿಶಾಚಿಗಳನ್ನು ಆರಾಧಿಸಿ ಅವುಗಳ ಕರ್ಣಭಾಷಿತದಿಂದ ಅರಿಯುವುದು. ಇಲ್ಲಿ ಮುನಿಗಳು ಧರ್ಮಮಾರ್ಗದಿಂದ ರಾಮನನ್ನು ಶರಣುಹೊಕ್ಕರು. ಅವನ ಕಥೆ ಅವರ ಮನದ ರಂಗಮಂದಿರದಲ್ಲಿ ನಿಧಾನಕ್ಕೆ ಮೂಡಿಬಂದಿತು._ *ಹಸಿತಂ ಭಾಷಿತಂ ಚೈವ ಗತಿರ್ಯಾ ಯಚ್ಚ ಚೇಷ್ಟಿತಮ್ | ತತ್ಸರ್ವಂ ಧರ್ಮವೀರ್ಯೇಣ ಯಥಾವತ್ಸಂಪ್ರಪಶ್ಯತಿ ||* _ರಾಮಾದಿಗಳು ನಕ್ಕಿದ್ದು, ನುಡಿದದ್ದು, ವನಸಂಚಾರ ಮಾಡಿದ್ದು, ಜನರೊಡನೆ ವ್ಯವಹಾರ ಮಾಡಿದ್ದು ಹೀಗೆ ಪ್ರ...

ಧರ್ಮಾಚರಣೆ ೨೯

ಧರ್ಮಾಚರಣೆ---೨೯ ಶ್ರುತಿಸ್ಮೃತಿವಿರೋಧೇತು ಶ್ರುತಿರೇವ ಗರೀಯಸೀ | ಅವಿರೋಧೇ ಸದಾ ಕಾರ್ಯಂ ಸ್ಮಾರ್ತಂ ವೈದಿಕ ವತ್ಸದಾ || ಜಾಬಾಲಸ್ಮೃತಿ || ವೇದ ಮತ್ತು ಸ್ಮೃತಿ ಗಳ ನಡುವೆ ಕೆಲವೊಂದು ವಿಚಾರಗಳಲ್ಲಿ ಸಾಮ್ಯತೆ ಕಾಣದಿದ್ದಾಗ ಅಥವಾ ವಿರೋಧ ಬಂದಾಗ ವೇದವಾಕ್ಯಗಳನ್ನೇ ಪ್ರಮಾಣವೆಂದು ಸ್ವೀಕರಿಸಬೇಕು. ಏಕೆಂದರೆ ಶ್ರುತಿ ಅಪೌರುಷೇಯ. ಸ್ಮೃತಿಗಳು ಪೌರುಷೇಯವಾದ್ದರಿಂದ ಕೆಲವು ದೋಷಗಳು ಕಂಡುಬರಬಹುದು. ಒಂದು ವೇಳೆ ವಿರೋಧ ಕಂಡುಬರದಿದ್ದಾಗ ಸ್ಮಾರ್ತ ಕರ್ಮಗಳನ್ನು ಅಂದರೆ ಸ್ಮೃತಿ ಆಧಾರಿತ ಕರ್ಮಗಳನ್ನು ವೈದಿಕ ಕರ್ಮಗಳಂತೆ ಆಚರಿಸಬಹುದು. ಪರಮ ಪ್ರಮಾಣ ವೇದವೇ ಹೊರತು ನಂತರ ಹುಟ್ಟಿಕೊಂಡ ಗ್ರಂಥಗಳಲ್ಲ. ಅದರಲ್ಲೂ ಈ ಯುಗದ ವಿದ್ವಾಂಸರ ಗ್ರಂಥಗಳು ವೇದ ವಿರೋಧ ಪ್ರತಿಪಾದಿಸುತ್ತಿದ್ದರೆ ಯಾವ ವಿಷಯದಲ್ಲಾದರೂ ಅವು ತ್ಯಾಜ್ಯವೇ ಸರಿ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೨೮

  ಧರ್ಮಾಚರಣೆ - ೨೮ ಧರ್ಮಂ ಜಿಜ್ಞಾಸಮಾನಾನಾಂ ಪ್ರಮಾಣಂ ಪರಮಂ ಶ್ರುತಿಃ | ದ್ವಿತೀಯಂ ಧರ್ಮಶಾಸ್ತ್ರಾಣಿ ತೃತೀಯಂ ಲೋಕಸಂಗ್ರಹಃ || ಮಹಾಭಾರತ- ಅಶ್ವಮೇಧಿಕ ಪರ್ವ || ಧರ್ಮದ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಸಂಶಯ ಬಂದಾಗ ಮೊದಲಾಗಿ ವೇದವು ಪರಮಪ್ರಮಾಣ. ವೇದಾನುಸಾರಿ ಕಲ್ಪ ಗೃಹ್ಯಸೂತ್ರಗಳೂ ಪ್ರಮಾಣ. ಒಂದು ವೇಳೆ ವೇದೋಕ್ತವಲ್ಲದ ಪಕ್ಷದಲ್ಲಿ ಧರ್ಮಶಾಸ್ತ್ರವು ಪ್ರಮಾಣ. ವಸಿಷ್ಠ, ಪರಾಶರ, ಮನು, ಹಾರೀತ, ಶಂಖ ಮೊದಲಾದ ಸ್ಮೃತಿ ಆಧರಿಸಿದ ಧರ್ಮಶಾಸ್ತ್ರವು ಪ್ರಮಾಣ. ಅದರಲ್ಲೂ ಇಲ್ಲದ ಪಕ್ಷದಲ್ಲಿ ಆಗ ಹಿರಿಯರ ಅದರಲ್ಲೂ ಸಜ್ಜನರ ಆಚರಣೆಗಳು ನಮಗೆ ಮಾರ್ಗದರ್ಶಕ. ಯಾವುದೂ ಇಲ್ಲವೆಂದು ಧರ್ಮದ ಆಚರಣೆಗಳನ್ನು ಬಿಡುವಂತಿಲ್ಲ. ಹಾಗೆಂದು ಶ್ರುತಿ ಸ್ಮೃತಿ ವಿರೋಧ ಇದ್ದಾಗಲೂ ನಮ್ಮ ಮನೆಯಲ್ಲಿ ಹೀಗೆ, ನಮ್ಮ ಆಚಾರ್ಯರು ಅಥವಾ ಗುರುಗಳು ಹೀಗೆ ಹೇಳಿದ್ದಾರೆ, ನಮ್ಮ ಪರಂಪರೆ ಅಥವಾ ಪ್ರದೇಶದಲ್ಲಿ ಹೀಗೆ ಎಂದು ಮೌಢ್ಯವನ್ನು ಅನುಸರಿಸಬಾರದು. ಹಿಂದೆ ಧರ್ಮಶಾಸ್ತ್ರದ, ವೇದದ ವ್ಯಾಖ್ಯಾನಗಳು ಪುಸ್ತಕಗಳು ಅನೇಕ ಕಡೆ ಅಲಭ್ಯವಿದ್ದವು. ಆಗ ಆಚರಣೆಗೆ ಒಂದು ನಿಯಮ ತಂದಿರಬಹುದು ಅಷ್ಟೇ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ರಾಮಾಯಣ ೧೪೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೩ 🏝📖  *ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ | ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ಧಾಂ ಮನೋರಮಾಮ್ ||* _ಬ್ರಹ್ಮನ ಮಾತು. ಈ ನಿನ್ನ ಕಾವ್ಯದಲ್ಲಿ ಯಾವ ಅಂಶವೂ ಸುಳ್ಳಾಗದು. ಅಂತಹ ರಾಮಕಥೆಯನ್ನು ಶ್ಲೋಕಬದ್ಧವಾಗಿ ಮನೋಹಾರಿಯಾಗಿ ರಚಿಸು. ಈ ಮಾತನ್ನು ನೋಡಿದಾಗ ನಮಗರಿವಾಗುವ ಅಂಶ ವಾಲ್ಮೀಕಿ ಯಾವುದನ್ನೂ ಮುಚ್ಚಿಡುವ ಅಥವಾ ಸುಳ್ಳುಹೇಳುವ ಪ್ರಯತ್ನ ಮಾಡಿಲ್ಲ ಎಂಬುದು. ಅರ್ವಾಚೀನ ಕವಿಗಳನೇಕರು ವಾಲ್ಮೀಕಿಯ ಮನದ ಭಾವ ಹೀಗಿತ್ತು, ಅವನು ಹೇಳದೇ ಹೋದ ಎಂದೆಲ್ಲಾ ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ವಾಲ್ಮೀಕಿಗಳಿಗೆ ರಾಮನನ್ನು ಅಥವಾ ಯಾರನ್ನಾಗಲಿ ಚಿತ್ರಿಸಿ ಯಾವ ಲಾಭ ನಷ್ಟ ಪ್ರಶಸ್ತಿಯ ಅಪೇಕ್ಷೆ ಇರಲಿಲ್ಲ. ಬ್ರಹ್ಮನ ಆಣತಿಯಂತೆ ಸತ್ಯವನ್ನು ಮಾತ್ರ ಚಿತ್ರಿಸಿದ ಮಹಾಮುನಿ ಅವರು. ಸೀತೆಗೆ ಯಾರ ಬಗೆಗೋ ಒಲವಿತ್ತು, ಲಕ್ಷ್ಮಣನ ಮನದಲ್ಲಿ ಏನೋ ಇತ್ತು ಇತ್ಯಾದಿ ರಾಮಾಯಣದ ಪಾತ್ರಗಳನ್ನು ಕುಲಗೆಡಿಸಹೊರಟ ಖ್ಯಾತನಾಮರು ಹಾಗೂ ಅವರ ಅನುಯಾಯಿಗಳು ಈ ಅಂಶವನ್ನು ಓದಿ ಮುಂದುವರಿಯುವುದು ಅವರ ವಿಮರ್ಶೆಗೆ ಒಳಿತು._ *ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ | ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ ||ಯಾವದ್ರಾಮಾಯಣಕಥಾ ತ್ವತ್ಕೃತಾ ಪ್ರಚರಿಷ್ಯತಿ | ತಾವದೂರ್ಧ್ವಮಧಶ್ಚ ತ್ವಂ ಮಲ್ಲೋಕೇಷು ನಿವತ್ಸ್ಯತಿ ||* _ಹಿಂದೆಯೇ ಬ್ರಹ್ಮ ಎಚ್ಚರಿಕೆ ರೂಪದ ...

ರಾಮಾಯಣ ೧೪೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೨ 🏝📖  *ಪೂಜಯಾಮಾಸ ತಂ ದೇವಂ ಪಾದ್ಯಾರ್ಘ್ಯಾಸನವಂದನೈಃ | ಪ್ರಣಮ್ಯ ವಿಧಿವಚ್ಚೈನಂ ಪೃಷ್ಟ್ವಾನಾಮಯಮವ್ಯಯಮ್ ||* _ಕಾವ್ಯ ಹುಟ್ಟಿ ಕೆಲವು ಕ್ಷಣಗಳಾಗಿದೆ ವಾಲ್ಮೀಕಿ ಮುಖಾರವಿಂದದಲ್ಲಿ, ಅರವಿಂದಾಸನನಾದ ಬೊಮ್ಮನು ತಾನೂ ಆಲಿಸಲೆಂಬಂತೆ ಅಲ್ಲಿ ಬಂದುನಿಂತ. ಮಹರ್ಷಿ ಒಮ್ಮೆ ಅವಾಕ್ಕಾಗಿ ನಿಂತು ನಂತರ ವಾಗ್ವ್ಯಾಪಾರ ಆರಂಭಿಸಿದ. ಬಂದವನು ದೇವ, ನಿತ್ಯಶುದ್ಧ. ಹಾಗಿದ್ದರೂ ಸತ್ಕಾರದ ಒಂದು ಪರಂಪರೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಕಾಲು ತೊಳೆಯಲು ನೀರು, ಕೈ ತೊಳೆಯಲು ಅರ್ಘ್ಯ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸಿದ. ಆಶ್ರಮ ಯೋಗ್ಯವಾದ ಆಸನವನ್ನಿತ್ತ. ಅತಿಥಿಸತ್ಕಾರವನ್ನು ಯಥಾವತ್ತಾಗಿ ಮಾಡಿ ಅನಂತರ ಕುಶಲ ಪ್ರಶ್ನೆಯನ್ನು ಕೇಳಿದ. ಏನು ವಿಶೇಷ ಇಲ್ಲಿ ಎಂದರೆ ಬ್ರಹ್ಮನು ಲೋಕದ ಕುಶಲವನ್ನು ಈಕ್ಷಿಸುವ ಮಹಿಮಾನ್ವಿತ. ಅವನಲ್ಲಿ ಏಕೆ ಈ ಪ್ರಶ್ನೆ ಎಂದರೆ ಅದನ್ನೇ ಸಾಮಾಜಿಕ ಮರ್ಯಾದೆ ಅನ್ನುವುದು. ಮನೆಗೆ ಯಾರೇ ಅತಿಥಿಗಳು ಬರಲಿ ಅವರ ಸತ್ಕಾರ, ನಮ್ಮ ಮಾತುಕತೆ ಹೇಗಿರಬೇಕೆಂಬುದನ್ನು ತಮ್ಮ ಕಾರ್ಯಗಳಿಂದ ಮುನಿಗಳು ತೋರಿಕೊಡುತ್ತಿದ್ದಾರೆ. ಆಮಯ ಎಂದರೆ ರೋಗ- ತೊಂದರೆ ಮೊದಲಾದವು. ಅನಾಮಯ ಅಂದರೆ ಸುಖವಾಗಿ ಯಾವ ಪೀಡೆಯೂ ಬಾಧಿಸದಿರುವುದು. ಅತಿಥಿಗೆ ಅಥವಾ ಅಭ್ಯಾಗತರಿಗೆ ಪರಿಚಿತರಿರಲಿ ಅಪರಿಚಿತರಿರಲಿ ಯಥಾಯೋಗ್ಯ ಉಪಚರಿಸಿ ಕುಶಲ ಪ್ರಶ್ನೆ ಕೇಳುವುದು ನಮ್ಮ ಪರಂಪರೆ. ಸೋಂಕಿನ ಈ ಕಾಲದಲ್ಲಿ ಮತ್ತೆ ಪಾದ್ಯ-ಅರ್ಘ್...

ಧರ್ಮಾಚರಣೆ ೨೭

      ಧರ್ಮಾಚರಣೆ---- ೨೭ ಇಷ್ಟಿಶ್ರಾದ್ಧೇ ಕ್ರತೂದಕ್ಷೌ ಸತ್ಯೌ ನಾಂದೀಮುಖೇ ವಸೂ | ನೈಮಿತ್ತಿಕೇ ಕಾಮಕಾಲೌ ಕಾಮ್ಯೇ ಚ ಧುರಿಲೋಚನೌ | ಪುರೂರವಾರ್ದ್ರವೌ ಚೈವ ಪಾರ್ವಣೇ ಸಮುದಾಹೃತೌ || ಹೇಮಾದ್ರಿ - ಶಂಖ, ಬೃಹಸ್ಪತಿ ವಚನ || ಇಷ್ಟಿಶ್ರಾದ್ಧ ಅಂದರೆ ಸಂಸ್ಕಾರ ಪೂರ್ವಕ ಅಗ್ನಿಯನ್ನು ಸ್ಥಾಪಿಸಿ ಮಾಡುವ ಕರ್ಮಗಳ ಆದಿಯಲ್ಲಿ ಅಂದರೆ ದೊಡ್ಡ ದೊಡ್ಡ ಯಾಗಗಳ ಆದಿಯಲ್ಲಿ ಮಾಡುವ ನಾಂದೀಶ್ರಾದ್ಧದಲ್ಲಿ ಕ್ರತುದಕ್ಷ ಹೆಸರಿನ ವಿಶ್ವೇದೇವತೆಗಳನ್ನು, ಸಾಮಾನ್ಯ ಕರ್ಮಗಳ ನಾಂದಿಯಲ್ಲಿ ಸತ್ಯವಸು ಹೆಸರಿನ ವಿಶ್ವೇದೇವತೆಗಳನ್ನು, ನವಶ್ರಾದ್ಧ ಹಾಗೂ ದ್ವಾದಶಮಾಸಿಕಗಳಲ್ಲಿ ಕಾಮಕಾಲರೆಂಬ  ವಿಶ್ವೇದೇವತೆಗಳನ್ನು,  ಮಹಾಲಯ ಹಾಗೂ ಕಾಮ್ಯವೆಂದು ತ್ರಿಪಿಂಡಿ ಮೊದಲಾದ ಶ್ರಾದ್ಧವನ್ನು ಮಾಡುವಾಗ ಧುರಿ- ಲೋಚನರೆಂಬ ವಿಶ್ವೇದೇವತೆಗಳನ್ನು, ಪ್ರತಿವಾರ್ಷಿಕ ಶ್ರಾದ್ಧ ಹಾಗೂ ಪಾರ್ವಣ ಶ್ರಾದ್ಧಗಳಲ್ಲಿ ಅಂದರೆ ಪರ್ವಗಳಲ್ಲಿ ಮಾಡುವುದಾದರೆ ಆಗ ಪುರೂರವ- ಆರ್ದ್ರವ ಹೆಸರಿನ ವಿಶ್ವೇದೇವತೆಗಳನ್ನು ಆರಾಧಿಸಬೇಕು. ಶ್ರಾದ್ಧ ಎಂದ ಕ್ಷಣ ದೇವತೆಗಳೆಲ್ಲ ಒಂದೇ ಅಲ್ಲ, ಭೇದಗಳಿಗನುಗುಣವಾಗಿ ದೇವತೆಗಳು ಭಿನ್ನರಿದ್ದಾರೆ. ಕ್ರಿಯಾ ವೈವಿಧ್ಯ, ದೇವತಾ ವೈವಿಧ್ಯ, ಪಾಕ ವೈವಿಧ್ಯ ಹೀಗೆ ವಿವಿಧತೆಯಲ್ಲಿ ಏಕತೆಯೇ ನಮ್ಮ ಸಂಸ್ಕೃತಿ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಚಾರುದತ್ತ ೧೮

👳‍♀ಚಾರುದತ್ತ ಬೆಳಕು- ೧೮👳‍♀ *क: श्रद्धास्यति भूतार्थं सर्वो मां तूलयिष्यति । शङ्कनीया हि दोषेषु निष्प्रभावा दरिद्रता ।।* _ಚಾರುದತ್ತನ ಮನೆಗೆ ಕಳ್ಳ ನುಗ್ಗಿ ಸಂಪತ್ತನ್ನು ಕದ್ದಿದ್ದಾನೆ. ವಿದೂಷಕನು ಅವನಲ್ಲಿದ್ದ ಸುವರ್ಣದ ಥೈಲಿಯನ್ನು ಚಾರುದತ್ತನೆಂದು ತಿಳಿದು ಕಳ್ಳನಿಗೆ ಕೊಟ್ಟಿದ್ದಾನೆ. ಕಳ್ಳತನವಾದ ಸುದ್ದಿ ತಿಳಿದ ತಕ್ಷಣ ಅಬ್ಬಾ ಬದುಕಿದೆ ರಾತ್ರಿಯೇ ನಿನಗೆ ಬಂಗಾರ ಕೊಟ್ಟೆ ಎಂದಾಗ ಚಾರುದತ್ತ ಗಾಬರಿಗೊಳ್ಳುತ್ತಾನೆ. ಆದರೇನು ಮಾಡುವುದು, ತನ್ನ ಬಳಿ ಕೊಟ್ಟಿಲ್ಲ ಎಂದರೆ ತನ್ನ ಮೇಲೆ ಇವರು ಸಂಶಯಪಡುತ್ತಾರೆ. ಏಕೆಂದರೆ ತನ್ನ ಈಗಿನ ದಾರಿದ್ರ್ಯದ ಸ್ಥಿತಿ ಹಾಗಿದೆ. ನನ್ನ ಹಿಂದಿನ ಪ್ರಾಮಾಣಿಕತೆ ಅಥವಾ ಉದಾರತೆಯನ್ನು ಯಾರು ತಾನೇ ನಂಬುವರು? ವಸಂತಸೇನೆಯ ಆಭರಣ ಕಳ್ಳನು ಅಪಹರಿಸಿದನೆಂದು ನುಡಿದರೆ ಎಲ್ಲರೂ ನನ್ನನ್ನೇ ಕಳ್ಳನೆಂದು ಶಂಕಿಸುತ್ತಾರೆ ಹೊರತು ಕಳ್ಳತನದ ವಿಷಯ ನಂಬಲಾರರು. ಈಗಿನ ನನ್ನ ದಟ್ಟ ದಾರಿದ್ರ್ಯವು ನನ್ನಲ್ಲಿ ಯಾವ ಬಗೆಯ ತಪ್ಪು ಇಲ್ಲದಿದ್ದರೂ ತಪ್ಪನ್ನು ಹೊರಿಸುತ್ತದೆ. ಮಾನವನ ದರಿದ್ರತೆ ಎಲ್ಲೋ ಯಾರಿಂದಲೋ ಆಗುವ ಮೋಸ- ಕಳ್ಳತನ ಮುಂತಾದ ಕುಕೃತ್ಯಗಳ ವಿಷಯದಲ್ಲಿ ಪ್ರಾಮಾಣಿಕನನ್ನೂ ಶಂಕಿಸುತ್ತದೆ. ದುಡ್ಡಿಗಾಗಿ ಹೀಗೆ ಮಾಡಿರಬಹುದು ಎಂಬ ಅತ್ಯಂತ ಸಹಜ ಎಂಬಂತಿರುವ ಮಾತು. ಕವಿ ಅದನ್ನೇ ನುಡಿಸಿದ್ದಾನೆ. ವಸ್ತುತಃ ಕಳ್ಳತನ ಅಥವಾ ಅಪಹಾರಕ್ಕೆ ಬಡತನ-ಶ್ರಿಮಮತಿಕೆಯ ಭೇದವಿಲ್ಲ. ಅತೃಪ್ತಿ ಒಂದೇ ಮುಖ್ಯ ಕಾರಣ._...

ರಾಮಾಯಣ ೧೪೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೧ 🏝📖 *ತಸ್ಯೈವಂ ಬ್ರುವತಶ್ಚಿಂತಾ ಬಭೂವ ಹೃದಿ ವೀಕ್ಷತಃ | ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ||* _ಮಾ ನಿಷಾದ ಎಂದು ಬೇಡನ ಕುಕೃತ್ಯವನ್ನು ಕಂಡು ಕ್ಷಣಕಾಲ ಕೋಪಗೊಂಡು ಶಾಪಕೊಟ್ಟರು ವಾಲ್ಮೀಕಿ ಮಹರ್ಷಿಗಳು. ರತಿಯಲ್ಲಿದ್ದಾಗ ಬಾಣಪ್ರಯೋಗ ನಿಷಿದ್ಧ ಶಾಸ್ತ್ರದ ಪ್ರಕಾರ. ಪಾಂಡುವು ಆ ಕಾರಣಕ್ಕೆ ಶಾಪಗ್ರಸ್ತನಾದ. ಬಹಳ ಕಾಲ ನೆಲೆಯಿಲ್ಲದಂತಾಗಲಿ ಎಂದು ಶಾಪವನ್ನು ಕೊಟ್ಟ ಮರುಕ್ಷಣವೇ ವಾಲ್ಮೀಕಿಗಳು ಪರಿತಪಿಸುತ್ತಾರೆ. ಅಯ್ಯೋ ಏನಿದು ತಪದ ಫಲವನ್ನು ಕ್ಷಣಿಕ ಕೋಪಕ್ಕೆ ಬಲಿ ಕೊಟ್ಟೆನಲ್ಲ ಎಂದು. ಈ ಕಾರಣವೇ ಅವರನ್ನು ಮಹರ್ಷಿಯನ್ನಾಗಿಸುವುದು. ಕೋಪ ಬರುವುದು ಮನುಜನ ಸಹಜ ಗುಣ.ಉಪ್ಪು ಹುಳಿ ಖಾರ ತಿನ್ನದವನಿಗೂ ಕೋಪ ಬಂದೇ ಬರುತ್ತದೆ. ಆದರೆ ಕೋಪ ಬಂದ ಮುಂದಿನ ಕ್ಷಣ ಅದಕ್ಕಾಗಿ ‌ಪಶ್ಚಾತ್ತಾಪ ಪಟ್ಟರೆ ಅದು ನಮ್ಮನ್ನು ನಾವು ತಿದ್ದಿಕೊಂಡಂತೆ. ನಾವು ಕೋಪಗೊಂಡು ಬಹಳ ಕಾಲ ಕೆಲವೊಮ್ಮೆ ಅಂತಹ ವ್ಯಕ್ತಿಯ ಬಗೆಗೆ ವರ್ಷಗಳ ಕಾಲ ಅದೇ ಭಾವನೆ ಇಟ್ಟುಕೊಂಡಿರುತ್ತೇವೆ. ಯಾವಾಗ ಆ ಭಾವ ಕ್ಷಣಮಾತ್ರದಲ್ಲಿ ಮರೆಯಾಗುವುದೋ ಹಾಗೂ ಸಂಪೂರ್ಣ ಶಾಸ್ತ್ರ ಸಮ್ಮತವಾದ ಕಾರಣ ಇರುವುದೋ ಅಂತಹ ಸಮಯದ ನಮ್ಮ ಕೋಪ ಪಾಪ ತರದು, ಪುಣ್ಯ ಕಳೆಯಬಹುದಷ್ಟೇ. ಕೋಪದ ಅಂತಹ ನಿಯಂತ್ರಣ ವಾಲ್ಮೀಕಿ ಮುನಿಗಳಿಂದ ನಾವು ಕಲಿಯಬೇಕಾದ ಮುಖ್ಯ ಅಂಶ._ *ಪಾದಬದ್ಧೋಕ್ಷರಸಮಸ್ತನ್ತ್ರೀಲಯಸಮನ್ವಿತಃ | ಶೋಕಾರ್ತಸ್ಯ ಪ್ರವೃತ್ತೋಯಂ ಶ್ಲೋಕೋ ಭವ...

ಧರ್ಮಾಚರಣೆ ೨೬

ಧರ್ಮಾಚರಣೆ-- ೨೬ ವಸವಃ ಪಿತರೋ ಜ್ಞೇಯಾ ರುದ್ರಾ ಜ್ಞೇಯಾಃ ಪಿತಾಮಹಾಃ | ಪ್ರಪಿತಾಮಹಾಸ್ತಥಾದಿತ್ಯಾಃ ಶ್ರುತಿರೇಷಾ ಸನಾತನೀ || ಮನುಸ್ಮೃತಿ, ದೇವಲ ವಚನ || ವಸುರುದ್ರಾದಿತಿಸುತಾಃ ಪಿತರಃ ಶ್ರಾದ್ಧ ದೇವತಾಃ | ಯಾಜ್ಞವಲ್ಕ್ಯ ಸ್ಮೃತಿ|| ಶ್ರಾದ್ಧದಲ್ಲಿ ವಸು-ರುದ್ರ-ಆದಿತ್ಯ ರೆಂದು ತಂದೆ-ಅಜ್ಜ-ಮುತ್ತಜ್ಜ ಅಥವಾ ತಾಯಿ-ಅಜ್ಜಿ- ಮುತ್ತಜ್ಜಿ ಇತ್ಯಾದಿ ಉಚ್ಚಾರಣೆ ಮಾಡಲು ಈ ಶ್ಲೋಕವು ಆಧಾರರೂಪವಾದುದು.ವಸುಗಳು ಪಿತೃಗಳೆಂದು ಗುರುತಿಸಲ್ಪಟ್ಟರೆ, ರುದ್ರರು ಪಿತಾಮಹರು, ಆದಿತ್ಯರು ಪ್ರಪಿತಾಮಹರು. ಇದನ್ನೇ ಯಾಜ್ಞವಲ್ಕ್ಯರು ಹೇಳಿದ್ದು ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರೆಂಬ ಅದಿತಿ ಸುತರು ಪಿತೃದೇವತೆಗಳೆಂದು ಪ್ರಸಿದ್ಧರಾದವರು. ಹಾಗಾಗಿ ಯಾವ ಶ್ರಾದ್ಧ ಮಾಡುವುದಿದ್ದರೂ ನಮ್ಮ ಹಿರಿಯರನ್ನು ಈ ರೂಪದಲ್ಲಿ ಕಲ್ಪಿಸಿ ಪೂಜಿಸಬೇಕು. ಪಿತೃಗಳು ಯಾವ ರೂಪದಲ್ಲಿದ್ದರೂ ಈ ದೇವತೆಗಳು ಅವರಿಗೆ ಪೂಜೆಯನ್ನು ತಲುಪಿಸುತ್ತಾರೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಅನುವಾದಿತ ಕಥೆ ೧೮

अनूदित कथावलि-१८ परोपकार: पुण्याय चन्द्र: निशाया: आगमनं प्रतीक्षते स्म। गृहस्य निर्यूहे एक: रव: आकर्णित: मया, इदानीं क: आगत: इति विचार्य यदा बहि: गतवान् तदा  एक: वृद्ध: गृहसंख्यां कष्टेन अन्विषति स्म। स: जीर्णानि वस्त्राणि धृतवान् आसीत्, तस्य हस्ते एकं स्यूतं  च । यदा तं गूढं दृष्टवान् तदा ज्ञातम् बहुदूरं यानं कृत्वा अत्रागत: ,मार्गायासेन खिद्यमानो$पि अस्ति इति । हस्ते विद्यमानं पत्रं पठित्वा तेन पृष्टो$हम् - एतत् आनन्दस्य गृहं किल, एष: योगानन्द मार्ग: ननु ? इति ।  आम् , अहमेव आनन्द: , त्वया अन्विष्यमाणं गृहं एतदेव इत्युक्तवान् । तस्य हस्तौ  कम्पमानौ, अधरौ तृष्णया पीडितौ च दृश्यन्ते स्म। तव ग्रामादागतो$स्मि, तव पित्रा एवमुक्तम् - गच्छ मम पुत्राय एतत् पत्रं ददातु, स: तुभ्यं साहाय्यं करिष्यति इति   ।  अहं चकितमना: किं मम पित्रा इति पृष्ट्वा तत् पत्रं पठितुमारेभे - नन्दनाय आनन्दाय तव पितु: आशिष: , एष: मम मित्रम् , सज्जन: सरलश्च। सप्ताहात् प्राक् तस्य पुत्र: मार्गमध्ये दुर्घटनायां पञ्चत्वम् आप्तवान् ।  दुर्घटनायां मृतस्य बन्धुभ्य: परिहार रूपेण  द...

ರಾಮಾಯಣ ೧೪೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೦ 🏝📖 *ಪಠನ್ದ್ವಿಜೋ ವಾಗೃಷಭತ್ವಮೀಯಾತ್ ಸ್ಯಾತ್ಕ್ಷತ್ರಿಯೋ ಭೂಮಿಪತಿತ್ವಮೀಯಾತ್ ||ವಣಿಗ್ಜನಃ ಪಣ್ಯಫಲತ್ವಮೀಯಾತ್ ಜನಶ್ಚ ಶೂದ್ರೋಪಿ ಮಹತ್ವಮೀಯಾತ್ ||* _ರಾಮಾಯಣದ ಅಧ್ಯಯನವು ಎಲ್ಲಾ ವರ್ಣಗಳಿಗೂ ಉತ್ತಮ ಫಲವನ್ನೇ ನೀಡುತ್ತದೆ. ಬಹಳಷ್ಟು ಜನರಿಗೆ ಭ್ರಮೆಯಿದೆ ಸಂಸ್ಕೃತ ಗ್ರಂಥಗಳು ಬ್ರಾಹ್ಮಣರಿಗೆ ಮೀಸಲು, ನಮಗೆ ಸಂಬಂಧಿಸಿದ್ದಲ್ಲ. ನಮಗೆ ಅರ್ಥವಾಗುವಂತಹವೂ ಅಲ್ಲ ಇತ್ಯಾದಿ. ಆದರೆ ವಾಲ್ಮೀಕಿಗಳ ಗ್ರಂಥವು ಅದು ಲೋಕೋತ್ತರ. ಎಲ್ಲರ ಒಳಿತಿಗಾಗಿ ಮಾರ್ಗದರ್ಶನಕ್ಕಾಗಿ ರಚಿತವಾದುದು. ಯಾವುದಾದರೂ ಜಾತಿಗೆ ಮತಕ್ಕೆ ಸಂಬಂಧಿಸಿ ಬರೆದದ್ದಲ್ಲ. ರಾಮಾಯಣದ ಪಠನವು ಬ್ರಾಹ್ಮಣರಿಗೆ ಉತ್ತಮ ವಾಕ್ಶಕ್ತಿಯನ್ನು, ಕ್ಷತ್ರಿಯರಿಗೆ ಅಧಿಕಾರವನ್ನೂ, ವೈಶ್ಯರಿಗೆ ವ್ಯಾಪಾರದಲ್ಲಿ ಏಳ್ಗೆಯನ್ನೂ, ಶೂದ್ರರಿಗೆ ಸಾಮಾಜಿಕವಾಗಿ ಉನ್ನತ ಸ್ಥಾನಮಾನವನ್ನೂ ಕರುಣಿಸುತ್ತದೆ. ಇಲ್ಲಿ ಒಂದು ವಿಧವಾದ ಪುಣ್ಯದ ಕಲ್ಪನೆ ಇದ್ದರೆ ಮತ್ತೊಂದು ಬಗೆಯಲ್ಲಿ ನಮ್ಮ ಜ್ಞಾನದ ಮಿತಿಯನ್ನು ಹೆಚ್ಚಿಸುವುದರ ಮೂಲಕ, ನಾನಾ ಪಾತ್ರಗಳ ಮೂಲಕ ಜೀವನಾನುಭವಗಳನ್ನು ತಿಳಿಸುತ್ತಾ ನಮ್ಮ ನಮ್ಮ ಜೀವನದಲ್ಲಿ ಅಥವಾ ನಮ್ಮ ಉದ್ಯೋಗದಲ್ಲಿ ಮೇಲುಗೈ ಸಾಧಿಸಲು ರಾಮಾಯಣವು ಅನುವು ಮಾಡಿಕೊಡುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ರಾಮಾಯಣವು ಫಲವನ್ನು ಕೊಡುತ್ತದೆ. ಹಾಗಾಗಿ ಸನಾತನ ಧರ್ಮ ವಿರೋಧಿಗಳೂ, ಬುದ್ಧಿಜೀವಿಗಳೂ, ವಿಶ್ವವಿದ್ಯಾಲಗಳ ಪ್ರಾಧ್ಯಾಪಕರುಗಳೂ ಇಂತಹ...

ಧರ್ಮಾಚರಣೆ ೨೫

    ಧರ್ಮಾಚರಣೆ--೨೫ ವಿಭಕ್ತಾಸ್ತು ಪೃಥಕ್ಕುರ್ಯುಃ ಪ್ರತಿಸಂವತ್ಸರಾದಿಕಮ್ | ಏಕೇನೈವಾವಿಭಕ್ತೇಷು ಕೃತೇ ಸರ್ವೈಸ್ತು ತತ್ಕೃತಮ್ || ಮದನರತ್ನ ||  ಊರ್ಧ್ವಂ ಸಪಿಂಡೀಕರಣಾತ್ಸರ್ವೇ ಕುರ್ಯುಃ ಪೃಥಕ್ ಪೃಥಕ್ ||ಲಘುಹಾರೀತ ||  ಅಣ್ಣ ತಮ್ಮಂದಿರು ಬೇರೆ ಬೇರೆ ಮನೆ ಮಾಡಿ ವಾಸಿಸುತ್ತಿದ್ದ ಪಕ್ಷದಲ್ಲಿ ಪ್ರತಿವರ್ಷದ ಶ್ರಾದ್ಧವಾಗಲಿ, ಮಹಾಲಯವಾಗಲಿ ಪ್ರತ್ಯೇಕವಾಗಿ ಮಾಡಬೇಕು. ಅವಿಭಕ್ತ ಕುಟುಂಬವಾಗಿದ್ದರೆ ಅಂದರೆ ಅಣ್ಣತಮ್ಮಂದಿರು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರೆ ಆಗ ಹಿರಿಯನು ಮಾತ್ರ ಮಾಡಿದರೆ ಸಾಕಾಗುತ್ತದೆ. ಅಣ್ಣ ಊರಲ್ಲಿ ಮಾಡುತ್ತಾನೆ ನಾನು ಪ್ರತ್ಯೇಕ ಮಾಡಬೇಕೆಂದಿಲ್ಲ ಅಥವಾ ನಾನೂ ಅವನೊಡನೆ ಸೇರಿ ಮಾಡುತ್ತೇನೆ ಖರ್ಚು ಉಳಿಯುತ್ತದೆ ಊರಿಗೂ ಹೋದಂತಾಗುತ್ತದೆ  ಇತ್ಯಾದಿಗೆ ಶಾಸ್ತ್ರದ ಸಮ್ಮತಿ ಇಲ್ಲ. ಅಡುಗೆ ಬೇರೆಯಾದರೆ ಶ್ರಾದ್ಧವೂ ಬೇರೆಯಾದಂತೆ. ಮೃತರ ಸಪಿಂಡೀಕರಣದವರೆಗಿನ ಕಾರ್ಯಗಳು ಮಾತ್ರ ಹಿರಿಯನಿಂದ ಮಾಡಲ್ಪಡುವವು. ಉಳಿದ ವಾರ್ಷಿಕ ಕರ್ಮಗಳು ನಿಯಮಿತವಾಗಿ ಪ್ರತ್ಯೇಕ ಮಾಡಬೇಕು. ಆಭರಣ-ಮನೆ- ಸಂಪತ್ತು-ವಾಹನಾದಿಗಳನ್ನು ಯಥೇಚ್ಛವಾಗಿ ಪ್ರತ್ಯೇಕವಾಗಿ ಸಂಪಾದಿಸಿ ಪಿತೃಕರ್ಮಕ್ಕೆ ಮಾತ್ರ ಇನ್ನೊಬ್ಬರನ್ನು ಆಶ್ರಯಿಸುವುದು ಅಧಮ ಪಕ್ಷ. ಅಣ್ಣ ತಮ್ಮಂದಿರ ವಾಸ-ಪಾಕ ಬೇರೆಯಾದರೆ ದೈವ ಕರ್ಮಗಳಂತೆ ಪಿತೃಕರ್ಮವೂ ಪ್ರತ್ಯೇಕ ಆಚರಣೀಯವಾದುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.b...

ರಾಮಾಯಣ ೨೪

   ಧರ್ಮಾಚರಣೆ --- ೨೪ ನ ಬ್ರಾಹ್ಮಣೇನ ಕರ್ತವ್ಯಂ ಶೂದ್ರಸ್ಯಾಪ್ಯೌರ್ಧ್ವದೇಹಿಕಮ್ | ಶೂದ್ರೇಣ ವಾ ಬ್ರಾಹ್ಮಣಸ್ಯ ವಿನಾ ಪಾರಶವಾತ್ಕ್ವಚಿತ್ || ಪಾರಸ್ಕರ ವಚನ || ಶಾಸ್ತ್ರದಲ್ಲಿ ಆಯಾ ಪರಂಪರೆಗೆ ತನ್ನದೇ ಆದ ಮಹತ್ವವಿದೆ. ಹಾಗಾಗಿ ಅವರವರ ಪಂಗಡದ ಅಂತ್ಯಕ್ರಿಯೆಗಳನ್ನು ಅವರವರೇ ಮಾಡಬೇಕು. ಬ್ರಾಹ್ಮಣನು ಇತರೆ ವರ್ಣದವರ ಶ್ರಾದ್ಧಾದಿಗಳನ್ನಾಗಲಿ, ಇತರರು ಬ್ರಾಹ್ಮಣರ ಶ್ರಾದ್ಧಾದಿಗಳನ್ನು ಮಾಡಲು ಅವಕಾಶವಿಲ್ಲ. ಪ್ರತಿಯೊಂದು ಮನೆತನದ ಆಚಾರಗಳಲ್ಲಿ ವೈವಿಧ್ಯತೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಯಾವುದನ್ನೂ ಯಾರಮೇಲೂ ಹೇರಲು ಬಯಸದು ಶಾಸ್ತ್ರ. ಆಹಾರ- ಆಚರಣೆ- ನಡೆ-ನುಡಿ ಹೀಗೆ ಅವರವರ ಸಂಪ್ರದಾಯದಂತೆ ಪ್ರತಿಯೊಂದು ಸ್ವೀಕಾರಾರ್ಹ. ಅನಾಥ ಶವದ ವಿಷಯದಲ್ಲಿ ಈ ನಿಯಮ ಇಲ್ಲ. ಅಲ್ಲಿ ಮಾನವೀಯತೆ ಹೊಂದಿರುವ ಯಾರೂ ಸಂಸ್ಕಾರ ಮಾಡಬಹುದು. ಅಂತರ್ಜಾತೀಯ ವಿವಾಹವಾದಲ್ಲೂ ಮಕ್ಕಳು ಮಾಡಲು ಅವಕಾಶವಿದೆ. ಶಾಸ್ತ್ರ ಎಂದೂ ವೈದಿಕತೆಯನ್ನು ಹೇರುವುದಿಲ್ಲ. ಹಾಗೆ ಹೇಳುವವರಿಗೆ ಶಾಸ್ತ್ರದ ಅರಿವಿರುವುದಿಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ರಾಮಾಯಣ ೧೩೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೯ 🏝📖 *ಪ್ರಹೃಷ್ಟಮುದಿತೋ ಲೋಕಃ ತುಷ್ಟಃಪುಷ್ಟಃ ಸುಧಾರ್ಮಿಕಃ ನಿರಾಮಯೋ ಹ್ಯರೋಗಶ್ಚ ದುರ್ಭಿಕ್ಷಭಯವರ್ಜಿತಃ* *ನ ಪುತ್ರಮರಣಂ ಕಿಂಚಿದ್ದ್ರಕ್ಷ್ಯಂತಿ ಪುರುಷಾಃ ಕ್ವಚಿತ್ ನಾರ್ಯಶ್ಚಾವಿಧವಾ ನಿತ್ಯಂ ಭವಿಷ್ಯಂತಿ ಪತಿವ್ರತಾಃ* _ರಾಮರಾಜ್ಯದ ಲಕ್ಷಣಗಳನ್ನು ಇಲ್ಲಿ ನಾರದರು ವರ್ಣಿಸುತ್ತಿದ್ದಾರೆ. ಬಾಲಕಾಂಡದ ಮೊದಲ ಸರ್ಗದ  ಎಂಭಂತ್ತೆಂಟನೇ ಶ್ಲೋಕವಿದು. ರಾಮ ರಾಜ್ಯದಲ್ಲಿ ಪ್ರಜೆಗಳು ಸದಾ ಆನಂದಭರಿತರಾಗಿದ್ದರು‌. ದುಃಖ ಪಡಲು ಯಾವುದಾದರೂ ಕೊರತೆ ಕಾಣದಾಗಿತ್ತು. ಮನಸ್ಸಿನಲ್ಲಿ ಸಂತೋಷ, ದೈಹಿಕವಾಗಿ ಪುಷ್ಟರಾಗಿದ್ದರು. ಇದಕ್ಕೆ ಮೂಲಕಾರಣ ಜನರು ಧರ್ಮವನ್ನು ಅನುಸರಿಸುತ್ತಿದ್ದರು. ಧರ್ಮವೇ ಜೀವನಕ್ರಮವಾಗಿತ್ತು. ಈಗ ನಾವೆಲ್ಲರೂ ಅರ್ಥಮೂಲರು ಅಥವಾ ಕಾಮಮೂಲರಾಗಿದ್ದೇವೆ. ಧರ್ಮವನ್ನು ಇವೆರಡಕ್ಕಾಗಿ ಕೆಲವೊಮ್ಮೆ ತ್ಯಜಿಸುತ್ತೇವೆ. ಪ್ರಜೆಗಳು ಯಾವ ರೋಗಗಳಿಲ್ಲದೆ ದೃಢಕಾಯರಾಗಿ ಬದುಕುತ್ತಿದ್ದರು. ಯಾವ ವಿಧದ ಮಾನಸಿಕ ಚಿಂತೆಯೂ ಜನರಿಗೆ ಇರಲಿಲ್ಲ. ಬರಗಾಲದ ಭಯವು ಜನರನ್ನು ಬಾಧಿಸುತ್ತಿರಲಿಲ್ಲ. ಸದಾ ಸಸ್ಯಸಮೃದ್ಧವಾಗಿ ಜಲಸಮೃದ್ಧಿಯು ಇದ್ದ ಕಾರಣ ಬರದ ಛಾಯೆಯೂ ಸುಳಿಯುತ್ತಿರಲಿಲ್ಲ. ತಂದೆ ತಾಯಿ ಬದುಕಿದ್ದಾಗಲೇ ಮಕ್ಕಳು ಸಾಯುತ್ತಿರಲಿಲ್ಲ. ಸಾವು ಜೀವಿಗೆ ನಿಶ್ಚಿತವಾದುದು. ಆದರೆ ತಮ್ಮ ಕಣ್ಣೆದುರೇ ಮಕ್ಕಳು ಸಾಯುವುದನ್ನು ಪಾಲಕರೆಂದಿಗೂ ಬಯಸಲಾರರು. ಅಂತಹ ಸ್ಥಿತಿಯೂ ಬಂದಿರಲಿಲ್ಲ ರಾಮರಾಜ್ಯದಲ್ಲಿ. ನ...

ಧರ್ಮಾಚರಣೆ ೨೩

  ಧರ್ಮಾಚರಣೆ---೨೩ ಪಿತುಃ ಪುತ್ರೇಣ ಕರ್ತವ್ಯಾ ಪಿಂಡದಾನೋದಕಕ್ರಿಯಾ| ಪುತ್ರಾಭಾವೇ ತು ಪತ್ನೀ ಸ್ಯಾತ್ತದಭಾವೇ ತು ಸೋದರಃ || ಹೇಮಾದ್ರಿ - ಶಂಖವಚನ || ತಂದೆ-ತಾಯಂದಿರ ಅಂತ್ಯಕ್ರಿಯೆಯನ್ನು ಮಗನು ಮಾಡಬೇಕು. ಪುತ್ರನಿಲ್ಲದಿದ್ದರೆ ಪತ್ನಿ, ಒಂದು ವೇಳೆ ಅವಳೂ ಇಲ್ಲದಿದ್ದರೆ ಸಹೋದರನು ಮಾಡಬೇಕು. ಉತ್ತರಕ್ರಿಯೆಯನ್ನು ಯಾವ ಕಾರಣಕ್ಕೂ ಮಾಡದೇ ಬಿಡಬಾರದು. ಸಪಿಂಡಕರು ಯಾರಾದರೂ ಕ್ರಿಯೆಗಳನ್ನು ನಡೆಸಲು ಅರ್ಹರು. ಹಿಂದೂ ಪರಂಪರೆಯಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಡೆಸಲು ಸಾಕಷ್ಟು ಅವಕಾಶ ಕೊಡಲಾಗಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೨೨

    ಧರ್ಮಾಚರಣೆ ---೨೨ ಶ್ರಾದ್ಧಾರ್ಹದ್ರವ್ಯಸಂಪತ್ತೌ ತಥಾ ದುಸ್ವಪ್ನದರ್ಶನೇ | ಜನ್ಮರ್ಕ್ಷೇ ಗ್ರಹಪೀಡಾಸು ಶ್ರಾದ್ಧಂ ಕುರ್ವೀತ ಚೇಚ್ಛಯಾ || ಮಾರ್ಕಂಡೇಯ ಪುರಾಣ||    ಶ್ರಾದ್ಧ ಮಾಡಲು ಬೇಕಾದ ದರ್ಭೆ-ಎಳ್ಳು-ಬ್ರಾಹ್ಮಣ-ದ್ರವ್ಯ ಲಭ್ಯವಿದ್ದಾಗ, ರಾತ್ರಿ ಕನಸಿನಲ್ಲಿ ಕೆಟ್ಟ ಕನಸನ್ನು ಕಂಡಾಗ, ಜನ್ಮನಕ್ಷತ್ರದ ದಿನ ( ಅಧಿಕಾರಿಗಳು) ಗ್ರಹಚಾರ ಪೀಡಿತನಾದಾಗ ಶ್ರದ್ಧೆಯಿಂದ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಬಹುದು. ಪಿತೃಪಕ್ಷ, ವ್ಯತೀಪಾತಾದಿ ಯೋಗ, ಸಂಕ್ರಾಂತಿ, ಅಮಾ- ಪೌರ್ಣಮೀ ಅಲ್ಲದೇ ಇಂತಹ ಸಂದರ್ಭದಲ್ಲೂ ಶ್ರಾದ್ಧ ಮಾಡಬಹುದೆನ್ನುವ ಮೂಲಕ ಪಿತೃಸೇವೆಯ ಮಹತ್ವ ಹಾಗೂ ಪ್ರಯೋಜನವನ್ನು ಪುರಾಣ ಎತ್ತಿಹಿಡಿಯುತ್ತದೆ. ಸಂಗ್ರಹ : ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೨೧

    ಧರ್ಮಾಚರಣೆ---೨೧ ಪರಕೀಯಪ್ರದೇಶೇಷು ಪಿತೃಣಾಂ ನಿರ್ವಪೇತ್ತು ಯಃ | ತದ್ಭೂಮಿಸ್ವಾಮಿಪಿತೃಭಿಃ ಶ್ರಾದ್ಧಕರ್ಮ ವಿಹನ್ಯತೇ|| ಯಮವಚನ || ಪರಕೀಯಗೃಹೇ ಯಸ್ತು ಸ್ವಾನ್ಪಿತೃನ್ತರ್ಪಯೇದ್ಯದಿ | ತದ್ಭೂಮಿಸ್ವಾಮಿನಸ್ತಸ್ಯ ಹರಂತಿ ಪಿತರೋ ಬಲಾತ್ || ಬ್ರಾಹ್ಮ ಪುರಾಣ|| ಶ್ರಾದ್ಧವನ್ನು ಎಂದಿಗೂ ನಮ್ಮ ನಮ್ಮ ಮನೆಗಳಲ್ಲಿ ಮಾಡುವುದು ತುಂಬಾ ಶ್ರೇಷ್ಠ. ನೂರು ಜನರನ್ನು ಕರೆದು ತುಂಬಾ ಅದ್ದೂರಿಯಾಗಿ ಯಾರದೋ ಒಡೆತನದ ಸಭಾಗೃಹಗಳಲ್ಲಿ ಮಾಡಿದರೆ ಅದರ ಪುಣ್ಯದ ಪಾಲು ಅದರೊಡೆಯನಿಗೆ ಸೇರುತ್ತದೆ. ಅದರ ಬದಲು ಮೂರು ಜನರನ್ನು ಕರೆದು ಶ್ರದ್ಧೆಯಿಂದ ಮನೆಯಲ್ಲೇ ಮಾಡಿದರೆ ಗತಿಸಿದ ಜೀವಕ್ಕೂ ತೃಪ್ತಿ, ನಮಗೂ ಅನುಗ್ರಹ ದೊರಕುವುದು. ' ನ ಕುರ್ಯಾತ್ ಶ್ರಾದ್ಧವಿಸ್ತರಂ ' ಎಂಬಂತೆ ತುಂಬಾ ಖರ್ಚು ಮಾಡಿ ಮಾಡುವುದಕ್ಕಿಂತ ತುಂಬಾ ಶ್ರದ್ಧೆ ಇಟ್ಟು ಮಾಡುವುದು ಶ್ರೇಯಸ್ಕರ. ಮನೆಯ ಒಂದು ಸಣ್ಣ ಜಾಗವನ್ನಾದರೂ ಶುದ್ಧಿ ಮಾಡಿಕೊಂಡು ತುಲಸೀಜಲ ವಾ ಮೃತ್ತಿಕೆ ಪ್ರೋಕ್ಷಿಸಿ ಅಲ್ಲಿ ಮಾಡುವುದು ತುಂಬಾ ಉತ್ತಮ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೨೦

       ಧರ್ಮಾಚರಣೆ---೨೦ ಉದ್ಧರೇತ್ಸಪ್ತಗೋತ್ರಾಣಿ ಕುಲಮೇಕೋತ್ತರಂ ಶತಮ್ ಎಂಬಲ್ಲಿ ಹೇಳಿರುವ ಏಳು ಗೋತ್ರಗಳು ಯಾವುವೆಂದರೆ- ಪಿತಾ ಮಾತಾ ಚ ಭಾರ್ಯಾ ಚ ಭಗಿನೀ ದುಹಿತಾ ತಥಾ | ಪಿತೃಮಾತೃಷ್ವಸಾ ಚೈವ ಸಪ್ತ ಗೋತ್ರಾಣಿ ವೈ ವಿದುಃ || ವಾಯವೀಯ|| ತಂದೆಯ ಗೋತ್ರ, ತಾಯಿಯ ಕುಲದ ಗೋತ್ರ, ಹೆಂಡತಿಯ ಕುಲದ ಗೋತ್ರ, ತಂಗಿ ಅಥವಾ ಅಕ್ಕನ ಗಂಡನ ಮನೆಯ ಗೋತ್ರ, ಮಗಳು ಮದುವೆಯಾಗುವ ಮನೆಯ ಗೋತ್ರ, ತಂದೆಯ ಅಕ್ಕ ಅಥವಾ ತಂಗಿ ಹೋದ ಮನೆಯ ಗೋತ್ರ, ತಾಯಿಯ ಅಕ್ಕತಂಗಿಯರು ಮದುವೆಯಾದ ಗೋತ್ರ. ಇವಿಷ್ಟು ಗೋತ್ರಗಳ ಉದ್ಧಾರ ಗಯಾದಲ್ಲಿ ಶಮೀಪತ್ರದಷ್ಟು ಸಣ್ಣ ಪಿಂಡ ದಾನ ಮಾಡಿದರೂ ಆಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ರಾಮಾಯಣ ೧೩೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೮ 🏝📖 *ಪ್ರಕೃತೀನಾಂ ಹಿತೇ ಯುಕ್ತಂ ಪ್ರಕೃತಿಪ್ರಿಯಕಾಮ್ಯಯಾ ಯೌವರಾಜ್ಯೇನ ಸಂಯೋಕ್ತುಂ ಐಚ್ಛತ್ಪ್ರೀತ್ಯಾ ಮಹೀಪತಿಃ* _ಸುಂದರ ಕಾಂಡದಿಂದ ಆರಂಭವಾದ ರಾಮಾಯಣ ಲೇಖನ ಯಜ್ಞ ಮತ್ತೆ ಬಾಲಕಾಂಡದೆಡೆಗೆ ಹೊರಳಿದೆ. ಇಷ್ಟು ದಿನ ಬರೆಯದಿದ್ದುದಕ್ಕೆ ಕ್ಷಮೆ ಕೋರುತ್ತಾ ಮುಂದುವರೆಸುತ್ತಿದ್ದೇನೆ._ _ಬಾಲಕಾಂಡದ ಇಪ್ಪತ್ತನೇ ಶ್ಲೋಕವಿದು. ನಾರದರು ವಾಲ್ಮೀಕಿಮಹರ್ಷಿಗಳಿಗೆ ಹೇಳುವ ಮಾತು. ದಶರಥನು ಕೇವಲ ಹಿರಿಯನೆಂಬ ಆಧಾರದಲ್ಲಿ ರಾಮನನ್ನು ಪಟ್ಟಗಟ್ಟಲು ಯೋಚಿಸಿದ್ದಲ್ಲ. ಅನೇಕರು ಹಿರಿಯರೆಂದು ಹಿಂದುಮುಂದು ನೋಡದೇ ಅಧಿಕಾರದಲ್ಲಿ ಇರಿಸುತ್ತಿದ್ದರು ಎಂದು ತಪ್ಪು ಅಭಿಪ್ರಾಯಪಡುತ್ತಾರೆ. ಆದರೆ ಹೆಚ್ಚಿನ ಬಾರಿ ಭಾರತೀಯ ಇತಿಹಾಸದಲ್ಲಿ ಹಿರಿಯರು ಕಿರಿಯರು ಎನ್ನುವುದಕ್ಕಿಂತ ಯೋಗ್ಯರಿಗೆ ಪಟ್ಟ ಸಿಕ್ಕಿದೆ ಎನ್ನುವುದು ಸತ್ಯ. ರಾಮನು ಪ್ರಜೆಗಳ ಪ್ರೀತಿಗೆ ಪಾತ್ರನಾದವನು ಹಾಗೂ ಪ್ರಜೆಗಳ ಹಿತಚಿಂತನೆಯಲ್ಲಿ ರತನಾದವನು. ಇದು ರಾಜನಾಗುವವನಿಗೆ ಅತ್ಯಂತ ಅವಶ್ಯವಾಗಿ ಇರಬೇಕಾದ ಗುಣ. ವಿದ್ವತ್ತು, ಪರಾಕ್ರಮ, ರೂಪ, ಜ್ಯೇಷ್ಠತೆ ಮೊದಲಾದ ಬೇರೆ ಗುಣಗಳಿಗಿಂತ ಪ್ರಜಾರಂಜನೆ ಮೊದಲ ಅರ್ಹತೆ. ಅದು ರಾಮನಲ್ಲಿ ಉಳಿದ ಮೂವರಿಗಿಂತ ಹೆಚ್ಚಿದ್ದ ಕಾರಣ ದಶರಥ ರಾಜಾರಾಮನನ್ನು ಕಾಣಲು ಬಯಸಿದನೇ ಹೊರತು ಕೇವಲ ಮೊದಲು ಜನಿಸಿದನೆಂಬ ಕಾರಣಕ್ಕಲ್ಲ. ಯಯಾತಿ ತನ್ನ ಕಿರಿಮಗನಾದ ಪುರುವನ್ನು ಅಧಿಕಾರದಲ್ಲಿ ಕೂಡಿಸಲೂ ಇಂತಹದೇ ಕಾರಣ ಮುಖ್ಯವಾಗಿತ್ತ...

ಧರ್ಮಾಚರಣೆ ೧೯

               ಧರ್ಮಾಚರಣೆ--೧೯ ಪ್ರೇತಂ ಪಿತೃಂಶ್ಚ ನಿರ್ದಿಶ್ಯ ಭೋಜ್ಯಂ ಯತ್ಪ್ರಿಯಮಾತ್ಮನಃ | ಶ್ರದ್ಧಯಾ ದೀಯತೇ ಯತ್ರ ತಚ್ಛ್ರಾದ್ಧಂ ಪರಿಕೀರ್ತಿತಮ್ || ಮರೀಚಿವಚನ | ಪೃಥ್ವೀಚಂದ್ರೋದಯ.  ಸತ್ತು ಬೇರೆ ಜನ್ಮ ಅಥವಾ ಸ್ಥಾನ ಹೊಂದದ ಆತ್ಮಗಳು  ಹಾಗೂ ಸತ್ತು ತಮ್ಮ ಕರ್ಮಕ್ಕನುಸಾರ ನಾನಾ ಜನ್ಮ ಪಡೆದ ಅಥವಾ ಮೋಕ್ಷಹೊಂದಿದ ನಮ್ಮ ಹಿರಿಯರ ಉದ್ದೇಶವಾಗಿ  ನಾವು ಇಷ್ಟಪಡುವ ಆಹಾರಾದಿಗಳನ್ನು ಶ್ರದ್ಧೆಯಿಂದ ನೀಡುವುದೇ ಶ್ರಾದ್ಧ. ಇಲ್ಲಿ ಶ್ರದ್ಧೆ ಅತ್ಯಂತ ಮುಖ್ಯ. ವಸ್ತುಗಳು, ಅಡುಗೆ, ಜನರು ಮೊದಲಾದವು ಗೌಣ. ನಮಗೆ ಜನ್ಮ ನೀಡಿ ಮಾತಾಪಿತೃಗಳು, ಯಾವುದಾದರೊಂದು ರೀತಿಯಲ್ಲಿ ಉಪಕಾರ ಮಾಡಿದ ಬಂಧುಗಳು, ನಮ್ಮ ಸಂಪರ್ಕಕ್ಕೆ ಬಂದ ಲೋಕದ ಲಕ್ಷಾಂತರ ಜನರಿಗೆ ಶ್ರದ್ಧೆಯಿಂದ ಏನನ್ನಾದರೂ ಕೊಡಮಾಡುವುದೇ ಶ್ರಾದ್ಧ. ವ್ಯಕ್ತಿ ಬದುಕಿದ್ದಾಗಲೂ ಸತ್ತಮೇಲೂ ಆದರ ಹೆಚ್ಚು ಕಡಿಮೆ ಆಗಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಅನುವಾದಿತ ಕಥೆ ೧೭

   अनूदित कथावलि: - १७        आनन्देन जातानि जीवन्ति  एकस्मिन् नगरे कश्चन योगी आसीत्। स: सर्वदा आनन्देन कालं यापयति स्म। कोरोना वा भवतु मरणं वा भवतु स: कथंचिदपि दु:खं न आप्नोति स्म। एकदा तस्य अनुचरा: कन्दुकक्रीडा विषयं तस्य समीपे अवदन् ।  तदा तेनोक्तम् - मया  कदापि सा स्पर्धा न दृष्टा'   इति।   काले गते तन्नगरे श्रीमद्भि: प्रसिद्धगणेषु स्पर्धा आयोजिता । तद्वीक्षितुं सहस्राधिका: जना: आगता: । योगिन: अनुचरा: अपि योगिनं आग्रहं कृतवन्त: -भवतापि आगन्तव्यम् इति । तत: सोपि स्पर्धां   ईक्षितुम् गतवान् । क्रीडाsङ्गणे स्पर्धा आरब्धा आसीत् । एतेsपि आसनं स्वीकृत्य  क्रीडायां मग्ना: अभूवन् । द्वौ गणौ अपि नितरां बलिष्ठौ, अत्युत्साहेन क्रीडन्तौ आस्ताम् । गणस्यैकस्य क्रीडालु: कन्दुकस्य पश्चात् वेगेन धावन् तं  पेटिकायां पातितवान् । तदा तद्गणस्य अभिमानिजना: उच्चै: अहो अहो इति उद्घोषणं कृतवन्त: । तदा योगी अपि आसनादुत्थाय  स्वशिरस्त्राणं वायौ पर्यटन् उच्चै: साधु , अद्भुतम् इत्युक्त्वा उपविष्टवान् ।  एवं क्रीडा प्र...

ಧರ್ಮಾಚರಣೆ ೧೮

   ಧರ್ಮಾಚರಣೆ ----೧೮ ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ | ದಾನಂ ದಮೋ ದಯಾಕ್ಷಾಂತಿಃ ಸರ್ವೇಷಾಂ ಧರ್ಮಸಾಧನಮ್ ||ಯಾಜ್ಞವಲ್ಕ್ಯ ಸ್ಮೃತಿ|| ಮನಸ್ಸಿನಿಂದಾಗಲೀ, ಮಾತಿನಿಂದಾಗಲೀ, ಕ್ರಿಯೆಯಿಂದಾಗಲೀ ಇನ್ನೊಬ್ಬರಿಗೆ ಹಿಂಸೆ ಮಾಡದೇ, ಆಂತರ್ಯದಲ್ಲೂ- ಬಹಿರಂಗದಲ್ಲೂ ಸತ್ಯಕ್ಕೆ ನಿಷ್ಠೆಯಿಂದಿದ್ದು, ಪರರ ವಸ್ತುಗಳಿಗೆ ಆಸೆ ಪಡದೇ, ಅಂತರ್ಬಹಿ ಶುಚಿಯನ್ನು ಕಾಪಾಡಿಕೊಂಡು, ಇಂದ್ರಿಯಗಳನ್ನು ಸಲ್ಲದ ವಿಷಯಗಳಿಗೆ ಹರಿಯಬಿಡದೇ, ಶಕ್ತ್ಯಾನುಸಾರ ದಾನ ಮಾಡುವುದು, ಲಾಲಸೆ ಹೊಂದದಿರುವುದು, ಜೀವದಯೆ, ಕ್ಷಮಾಗುಣವನ್ನು ಹೊಂದಿರುವುದೇ ನಿಜವಾದ ಧರ್ಮ. ಯಾವ ವರ್ಣ-ಜಾತಿ-ಲಿಂಗ ಭೇದವಿಲ್ಲದಂತೆ ನಿಜವಾದ ಧಾರ್ಮಿಕ ಯಾರೆಂದರೆ ಈ ಗುಣಗಳಿಂದ ಕೂಡಿರುವ ವ್ಯಕ್ತಿ. ಸಂಗ್ರಹ : ಶ್ರೀನಿಧಿ ಅಭ್ಯಂಕರ್