ಧರ್ಮಾಚರಣೆ ೧೦೧
ಧರ್ಮಾಚರಣೆ-೧೦೧
ಇತ್ಯುಕ್ತ್ವಾ ಚರತಾಂ ಧರ್ಮ ಸಹ ಯಾ ದೀಯತೇರ್ಥಿನೇ | ಸ ಕಾಯಃ ಪಾವಯೇತ್ತಜ್ಜಃ ಷಟ್ ಷಟ್ ವಂಶಾನ್ಸಹಾತ್ಮನಾ || ಆಸುರೋ ದ್ರವಿಣಾದಾನಾದ್ಗಂಧರ್ವಃ ಸಮಯನ್ಮಿಥಃ ||ಯಾಜ್ಞವಲ್ಕ್ಯ ಸ್ಮೃತಿ||
ಇಬ್ಬರೂ ಪರಸ್ಪರ ಪ್ರೀತಿಸಿದಾಗ ಕನ್ಯೆಯನ್ನು ವರನಿಗೆ ನೀಡಿ ಇನ್ನು ಮುಂದೆ ಇಬ್ಬರೂ ಧರ್ಮಗಳಲ್ಲಿ ಸಹಭಾಗಿಗಳಾಗಿ ಎಂದು ವಿವಾಹ ಮಾಡಿಕೊಡುವುದು ಪ್ರಾಜಾಪತ್ಯ. ಈ ವಿವಾಹದ ಫಲವು ಹದಿನಾರು ವ್ಯಕ್ತಿಗಳನ್ನು ಉದ್ಧರಿಸುವುದು. ಬ್ರಾಹ್ಮ ಇಪ್ಪತ್ತೊಂದಾದರೆ ಇಲ್ಲಿ ಹದಿನಾರು. ಈಗಿನ ಪ್ರೇಮವಿವಾಹಗಳಿಗೆ ಪೋಷಕರ ಸಮ್ಮತಿ ಇದ್ದರೆ ಅವುಗಳು ಪ್ರಾಜಾಪತ್ಯ ವಿವಾಹ ಎಂದು ಕರೆಸಿಕೊಳ್ಳುತ್ತವೆ. ಇನ್ನು ವರದಕ್ಷಿಣೆ ಅಥವಾ ವಧುದಕ್ಷಿಣೆ ತೆಗೆದುಕೊಂಡು ಮಾಡಿಕೊಂಡ ವಿವಾಹ ಆಸುರ. ಮುಂದುವರಿದ ಅಥವಾ ಶಿಕ್ಷಿತ ಅಥವಾ ಶ್ರೀಮಂತ ಕುಟುಂಬಗಳಲ್ಲಿ ಬಹುತೇಕ ಇಂತಹ ಆಸುರ ವಿವಾಹಗಳೇ ನಡೆಯುತ್ತಿವೆ. ಇನ್ನು ಬಹಳ ದಿನ ಒಟ್ಟಿಗಿದ್ದು ಕೊನೆಗೊಮ್ಮೆ ಮದುವೆಯಾದರೆ ಅಥವಾ ಗರ್ಭಿಣಿಯಾದಳೆಂದು ಕಟ್ಟಿಕೊಂಡರೆ ಅದು ಗಾಂಧರ್ವ ವಿವಾಹ. ಆಸುರ ಹಾಗೂ ಗಾಂಧರ್ವಕ್ಕೆ ಪ್ರಾಶಸ್ತ್ಯ ಇಲ್ಲ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ