ಧರ್ಮಾಚರಣೆ ೧೧೬

ಧರ್ಮಾಚರಣೆ-೧೧೬

ವಿದ್ಯಾಕರ್ಮವಯೋಬಂಧುವಿತ್ತೈರ್ಮಾನ್ಯಾ ಯಥಾಕ್ರಮಮ್ | ಏತೈಃ ಪ್ರಭೂತೈಃ ಶೂದ್ರೋಪಿ ವಾರ್ಧಕೇ ಮಾನಮರ್ಹತಿ || ಯಾಜ್ಞವಲ್ಕ್ಯ ಸ್ಮೃತಿ||

ಅಪಾರ ವಿದ್ಯೆ, ಸತ್ಕರ್ಮಾಚರಣೆ ಅಂದರೆ ಶಾಸ್ತ್ರ ಒಪ್ಪಿರುವ ಉತ್ತಮ ಕೆಲಸಗಳನ್ನು ಮಾಡುವುದು, ವಯಸ್ಸಿನಲ್ಲಿ ಹಿರಿಯರು, ಶ್ರೀಮಂತರನ್ನು ಕ್ರಮವಾಗಿ ವಂದಿಸಬೇಕು. ಮೊದಲು ವಿದ್ಯಾವಂತರನ್ನು ಅನಂತರ ಕರ್ಮಠರನ್ನೂ ಅನಂತರ ಹಿರಿಯರನ್ನೂ ಕೊನೆಯದಾಗಿ ಧನಿಕರನ್ನು ಗೌರವಿಸಬೇಕು. ಈ ಗುಣಗಳಿಂದ ಕೂಡಿದ ಶೂದ್ರನಾದರೂ ಸಹಿತ ಹಿರಿಯನಾಗಿದ್ದರೆ ಸನ್ಮಾನಕ್ಕೆ ಅರ್ಹನೇ ಸರಿ. ಗೌರವ ನೀಡುವುದು ಜಾತಿ-ಮತ-ಲಿಂಗಗಳನ್ನು ನೋಡಿ ಅಲ್ಲ. ಅವನೇನು ಶೂದ್ರ, ಅವನೇನು ಪುಳಿಚಾರು ಎಂದು ಯಾರನ್ನೂ ಕಡೆಗಣಿಸದೆ ಅವರ ವಿದ್ಯೆ ಮೊದಲಾದವನ್ನು ನೋಡಿಯೇ ಗೌರವ ನೀಡುವ ಪದ್ಧತಿಯನ್ನು ಘಂಟಾಘೋಷವಾಗಿ ಸಾರಿದೆ ನಮ್ಮ ಸನಾತನ ಸಂಸ್ಕೃತಿ. ಹಾಗಾಗಿಯೇ ಕೌಶಿಕನು ಬ್ರಾಹ್ಮಣನಾದರೂ ಧರ್ಮವ್ಯಾಧನಂತಹ ಯೋಗ್ಯನನ್ನು  ಗೌರವಿಸಿದ್ದು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩