ಪೋಸ್ಟ್‌ಗಳು

ಜನವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
🌹 ಮೇಘದೂತದ ಒಂದು ಮಧುರ ಹನಿ 🌹 *जातं वंशे भुवनविदिते पुष्करावर्तकानां जानामि त्वां प्रकृतिपुरुषं कामरूपं मघोन: । तेनार्थित्वं त्वयि विधिवशाद्दूरबन्धुर्गतोहं याञ्चा मोघा वरमधिगुणे नाधमे लब्धकामा ।।* _ಮೇಘವನ್ನು ಕುರಿತು ಯಕ್ಷನಾಡುವ ಮಾತು. ಎಲೈ ಮೇಘವೇ, ನೀನು ಪ್ರಸಿದ್ಧವಾದ ಪುಷ್ಕರ ಹಾಗೂ ಆವರ್ತಕಗಳೆಂಬ ಮೇಘಗಳ ವಂಶದಲ್ಲಿ ಹುಟ್ಟಿರುವನೆಂದು ನಾನು ಅರಿತಿದ್ದೇನೆ. ನೀನು ಸತ್ಕುಲಪ್ರಸೂತ. ಅಷ್ಟಲ್ಲದೇ ಇಂದ್ರನ ಪ್ರಧಾನ  ಸೇವಕನೂ ನೀನೇ ಆಗಿರುವೆ. ಮಳೆಯ ಒಡೆಯ ಇಂದ್ರ. ಆ ಕೆಲಸ ನಿರ್ವಹಿಸುವ ಕಾರಣ ನೀನು ಅವನ ಸೇವಕ. ನೀನು ಕಾಮರೂಪನೂ ಹೌದು. ಇಷ್ಟ ಬಂದ ವೇಷವನ್ನೆಲ್ಲ ಧರಿಸಿ ಆಕಾಶದೆಲ್ಲೆಡೆ ಸಂಚರಿಸಬಲ್ಲೆ.( ಕೆಲವೊಮ್ಮೆ ಕಪ್ಪು ಕೆಲವೊಮ್ಮೆ ಬಿಳಿ , ಗಾತ್ರದಲ್ಲಿ ದೊಡ್ಡ ಸಣ್ಣ ಚಪ್ಪಟೆ ಉದ್ದ ಹೀಗೆ ಹಲವು ರೂಪ) ಈ ಎಲ್ಲಾ ಕಾರಣಗಳಿಂದ ನೀನು ನನಗೆ ದೂರದ ಬಂಧುವಾಗಿದ್ದಿ. ವಿಧಿಯು( ಶಾಪದ ಕಾರಣ) ನಿನ್ನನ್ನು ನನಗೆ ತೋರಿಸಿಕೊಟ್ಟಿದೆ. ನಾನು ನಿನ್ನ ಬಂಧುವೇ ಆದ್ದರಿಂದ ಈ ನನ್ನ ಕೋರಿಕೆಯನ್ನು ನಡೆಸಿಕೊಡಬಲ್ಲೆಯಾ! ನನ್ನ ಮನದರಸಿಗೆ ಈ ವಚೋರಸವನ್ನು ಅರುಹಬಲ್ಲೆಯಾ! ಒಂದು ವೇಳೆ ನೀನು ಆ ಕಾರ್ಯ ಮಾಡದಿದ್ದರೂ ಎನಗೆ ಚಿಂತೆಯಿಲ್ಲ. ಏಕೆಂದರೆ ಅಧಿಕ ಗುಣಶಾಲಿಗಳಲ್ಲಿ ನಮ್ಮ ಬಯಕೆ ಈಡೇರದಿದ್ದರೂ ಅದು ಶ್ರೇಷ್ಠವೇ ಹೌದು. ಅದೇ ಅಧಮರಲ್ಲಿ ನಮ್ಮ ಬಯಕೆ ಈಡೇರಿದರೂ ಶ್ರೇಷ್ಠವಲ್ಲ. ಅದು ಕನಿಷ್ಠ. ಕವಿ ಸುಂದರವ...
💐 ಪ್ರತಿಮಾ ನಾಟಕದ ಒಂದು ಕುಸುಮ 💐 *शून्य: प्राप्तो यदि रथो भग्नो मम मनोरथ: । नूनं दशरथं नेतुं कालेन प्रेषितो रथ: ।।* _ಸುಮಂತ್ರ ಹಿಂದಿರುಗಿದ್ದಾನೆ. ದಶರಥ ಕಂಚುಕಿಯ ಬಳಿ ಕೇಳುತ್ತಾನೆ. ಹಿಂದಿರುಗಿದರೇ ನನ್ನ ಮಕ್ಕಳು? ಆಗ ಕಂಚುಕಿ ಕೇವಲ ಸುಮಿತ್ರನೊಬ್ಬನೇ ಬಂದಿದ್ದಾನೆ ಎಂದು ಅರುಹುತ್ತಾನೆ. ಆಗ ಶೋಕ ಹೆಚ್ಚಾಗಿ ದಶರಥ ನುಡಿಯುವ ಮಾತು. ರಥವು ಶೂನ್ಯವಾಗಿಯೇ ಬಂದಿತೇ! ನನ್ನ ಬಾಳೂ ಇಂದಿಗೆ ಶೂನ್ಯವಾಯಿತು. ನನ್ನ ಮನದ ಅಭಿಲಾಷೆ ಅಸುನೀಗಿತು. ಕವಿ ಇಲ್ಲಿ ಮನೋರಥಕ್ಕೂ ರಥಕ್ಕೂ ಸಂಬಂಧ ಕಲ್ಪಿಸಿ ಸುಂದರವಾಗಿಸಿದ್ದಾನೆ. ರಥವು ಶೂನ್ಯವಾಗಿ ಹಿಂತಿರುಗಿದ್ದರಿಂದ ನನ್ನ ಮನೋರಥವು ಭಗ್ನವಾಯಿತು ಅಥವಾ ಶೂನ್ಯವಾಯಿತು. ಆಸೆಗಳೆಲ್ಲ ಬತ್ತಿ ಹೋದವು. ಈ ರಥ ಬಂದ ಉದ್ದೇಶವೇ ಬೇರೆ. ಈ ದಶರಥನ ಪ್ರಾಣವನ್ನು ಕರೆದೊಯ್ಯಲು ಕಾಲನೇ ಶೂನ್ಯವಾದ ರಥದಲ್ಲಿ ಬಂದಿರುವನು. ನನ್ನ ಕಾಲ ಇನ್ನು ಖಾಲಿಯಾಗುವುದು ರಥದಂತೆ. ರಾಮನಿಲ್ಲದ ಈ ದಶರಥನ ಬಾಳೆಂಬ ರಥ ಸಾಗಲಾರದು. ಪ್ರಾಣಗಳೆಂಬ ಸಾರಥಿ  ಕಾಲನನ್ನು ಅನುಸರಿಸುತ್ತಾನೆಯೋ ಏನೋ! ಕವಿ ಇಲ್ಲಿ ಅವನ ಅಂತ್ಯವು ಸಮೀಪಿಸಿತೆಂಬ ಧ್ವನಿಯನ್ನು ನೀಡಿದ್ದಾನೆ. ಭಾಸನ ಮಾತು ಪುಟ್ಟದಾದರೂ ಪುಟಕ್ಕಿಟ್ಟ ಚಿನ್ನದಂತೆ ಧ್ವನಿಪೂರ್ಣ. ಉತ್ಪ್ರೇಕ್ಷೆ ಅಲಂಕಾರ. ಯಮನೇ ರಥದ ರೂಪದಲ್ಲಿ ಬಂದನೆಂಬ ಭಾವ._ 📜ಸಂಗ್ರಹ ಶ್ರೀನಿಧಿ ಅಭ್ಯಂಕರ್.
🌹ಮೇಘದೂತದ ಒಂದು ತಂಪು ಹನಿ 🌹 *धूमज्योति:सलिलमरुतां सन्निपात: क्वमेघ: सन्देशार्था: क्व पटुकरणै: प्राणिभि: प्रापणीया: । इत्यौत्सुक्यादपरिगणयन्गुह्यकस्तं ययाचे कामार्ता हि प्रकृतिकृपणाश्चेतनाचेतनेषु ।।* _ಕವಿಯ ಒಂದು ಮಾರ್ಮಿಕ ಮಾತು. ಯಕ್ಷನು ಮೇಘವನ್ನು ಕುಸುಮಗಳಿಂದ ಪೂಜಿಸಿ ಸ್ವಾಗತಿಸಿ ತನ್ನ ಸಂದೇಶವನ್ನು ನಿವೇದಿಸಿಕೊಳ್ಳುತ್ತಿದ್ದಾನೆ. ಆ ಮೇಘ ಅದನ್ನು ಆಲಿಸುತ್ತದೆಯೇ! ಮೋಡವೆಂದರೇನದು! ಧೂಮ, ಬೆಳಕು, ನೀರು, ಗಾಳಿಗಳ ಪಾಕವೇ ಮೇಘ. ಬೇರೆ ಯಾವ ಪ್ರಾಣವೂ ಅದರಲ್ಲಿ ಇಲ್ಲ. ಗಾಳಿಯು ಚಲಿಸಿದಂತೆ ತಾನೂ ಚಲಿಸಿ ಮಳೆ ಸುರಿಸಿ ಕರಗಿಹೋಗುತ್ತದೆ. ಲೋಕದ ಜನರ ಸಂದೇಶಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಕಳುಹಿಸುವ ಇಂದ್ರಿಯಗಳ ಮೂಲಕ ಜ್ಞಾನ ಗ್ರಹಿಸುವ ಅದ್ಭುತ ಸಾಮರ್ಥ್ಯ ಇರುವ ಮನುಷ್ಯರೆಲ್ಲಿ ಈ ಮೋಡವೆಲ್ಲಿ! ಯಾವ ರೀತಿಯಿಂದಲಾದರೂ ಮಾನವನ ಸಾಮರ್ಥ್ಯಕ್ಕೆ ಅದು ನಿಲುಕಬಲ್ಲದೇ! ಇದನ್ನೆಲ್ಲ ಈ ಯಕ್ಷ ವಿಚಾರ ಮಾಡುತ್ತಲೇ ಇಲ್ಲ. ಪ್ರಿಯೆಗೆ ತನ್ನ ಮನದಾಳ ಕಳುಹಿಸುವ ಧಾವಂತ ಅವನದು. ಮೋಡದ ಬಳಿಯೇ ಯಾಚಿಸುತ್ತಿರುವನು ತನ್ನ ಕಾರ್ಯಕ್ಕಾಗಿ ಅವನು. ಲೋಕದಲ್ಲಿ ಕಾಮನೆಗಳ ಈಡೆರಿಕೆಗೆ ಹೊರಟವರು ಚೇತನ ಯಾವುದು ಅಚೇತನವಾವುದು ಎನ್ನುವ ವಿಷಯದಲ್ಲಿ ಅಜ್ಞಾನಿಗಳಾಗಿರುತ್ತಾರೆ. ಈ ಯಕ್ಷನಿಗೆ ತನ್ನ ಪ್ರಿಯಳಿಗೆ ಭಾವ ಅರುಹುವುದೊಂದೇ ಗುರಿ. ಅದರ ಈಡೆರಿಕೆಗೆ ಅವನು ಏನೂ ಬೇಕಾದರೂ ಮಾಡಬಲ್ಲ.ಆದರೆ ಅವನ ಆ ಬಯಕೆ ಎಷ್ಟು ಮನ...
💐ಪ್ರತಿಮಾನಾಟಕದ ಒಂದು ಸುಮ💐 *अनपत्या वयम राम: पुत्रोन्यस्य महीपते: । वने व्याघ्री च कैकेयी त्वया किं न कृतं त्रयम् ।।* _ದಶರಥನ ವಿಲಾಪ ಮುಂದುವರೆಯುತ್ತಿದೆ. ಅಯ್ಯೋ ವಿಧಿಯೇ! ಹೀಗಾದರೂ ನಡೆದಿದ್ದರೆ ತೊಂದರೆ ಇರುತ್ತಿರಲಿಲ್ಲ. ನಾನು ಮಕ್ಕಳಿಲ್ಲದವನಾಗಿಯೇ ಇದ್ದು, ಅಥವಾ ರಾಮನು ಬೇರೋಬ್ಬ ರಾಜನ ಮಗನಾಗಿದ್ದರೆ, ಅಥವಾ ಈ ಕೈಕೇಯಿ ಕಾಡಿನಲ್ಲಿ ಹೆಣ್ಣು ಹುಲಿಯಾಗಿದ್ದರೆ ಹೀಗೆ ನಡೆಯುತ್ತಲೇ ಇರಲಿಲ್ಲ. ವಿಧಿಯೇ ನೀನು ಯಾಕೆ ಈ ಮೂರನ್ನು ನಡೆಸದೇ ಹೋದೆ! ಮಕ್ಕಳಿಲ್ಲವೆಂದು ಕೊರಗಿ ಪತ್ನಿಯರನ್ನು ಕಟ್ಟಿಕೊಂಡ ಯಜ್ಞ ಗಳನ್ನಾಚರಿಸಿದ ಮಕ್ಕಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ದಶರಥನ ಮಾತಿದು. ವಿಧಿಯ ನಿರ್ಣಯವನ್ನು ತಪ್ಪಿಸಲು ಸಾಧ್ಯವಿಲ್ಲ. ನೀನು ಈ ಮೂರನ್ನು ಮಾಡಿದ್ದರೆ ನನ್ನ ಈಗಿನ ದು:ಖ ಅಸಂಭವವಾಗುತ್ತಿತ್ತು. ಒಂದು ವೇಳೆ ನನಗೆ ಮಕ್ಕಳೇ ಆಗದೇ ಇದ್ದಿದ್ದರೆ ಇಂತಹ ಗುಣಪೂರ್ಣ ಪುತ್ರನನ್ನು ಕಾಡಿಗಟ್ಟುವ ಸಂದರ್ಭ ಒದಗುತ್ತಿತ್ತೇ! ಖಂಡಿತ ಇಲ್ಲ. ಅಥವಾ ರಾಮನಂತಹ ಧರ್ಮ ಭೂಯಿಷ್ಠನು ಬೇರೆಯವರ ಮಗನಾಗಿದ್ದರೆ ಅವನಿಗೆ ವನವಾಸದ ಕಷ್ಟ ಒದಗುತ್ತಿರಲಿಲ್ಲ. ಅಥವಾ ಈ ಕೈಕೇಯಿಯಂತಹ ದುಷ್ಟ ಮಹಿಳೆ ಕಾಡಿನಲ್ಲಿ ಹುಲಿಯಾಗಿಯಾದರೂ ಹುಟ್ಟಿದ್ದರೆ ನನ್ನ ಈ ಗೋಳಾಟ ರಾಮನ ಅರಣ್ಯ ಗಮನ ಎರಡೂ ಆಗುತ್ತಿರಲಿಲ್ಲ. ವಿಧಿಯೇ ಯಾಕಿದನ್ನು ನೀನು ಅನುಸರಿಸದೇ ನನ್ನ ಪಾಲಿನ ನಿಧಿಯನ್ನು ದೂರ ಮಾಡಿರುವೆಯಲ್ಲ. ಅಯ್ಯೋ! ನಾವೂ ದಶರಥನಂತೆ ಅನ...
[20/01, 3:25 PM] shreenidhiabhyankar: 🌹ಮೇಘದೂತದ ಒಂದು ಸುಂದರ ಸುಮ🌹 *तस्य स्थित्वा कथमपि पुर: कौतुकाधानहेतो: अन्तर्बाष्पश्चिरमनुचरो राजराजस्य दध्यौ । मेघालोके भवति सुखिनोप्यन्यथावृत्तिचेत: कण्ठाश्लेषप्रणयिनि जने किं पुनर्दूरसंस्थे ।।* _ದೊರೆಯ ಕ್ರೋಧಕ್ಕೆ ತುತ್ತಾಗಿ ರಾಮಗಿರಿಯ ಆಶ್ರಮ ಪ್ರದೇಶದಲ್ಲಿ ವಿರಹದ ವೇದನೆಯನ್ನು ಅನುಭವಿಸುತ್ತಿದ್ದಾನೆ ಆ ಯಕ್ಷ. ( ಹಿಂದೆ ರಾಮಾದಿಗಳು ಪರ್ಣಶಾಲೆಯನ್ನು ರಚಿಸಿ ವಾಸವಾದ ಸ್ಥಳ. ಈಗಿನ ರಾಮಟೀಕ್ ಎಂಬ ಪರ್ವತದ ತಪ್ಪಲು) ನವದಾಂಪತ್ಯದ ಸವಿಯನ್ನುಣ್ಣುವ ಸಮಯದಿ ಏಕಾಂಗಿಯಾಗಿ ನಿಟ್ಟುಸಿರು ಬಿಡುತ್ತಿದ್ದಾನೆ. ಅವನ ಕೈಯಲ್ಲಿದ್ದ ಬಂಗಾರದ ಕಡಗ ಎಂದೋ ಜಾರಿ ಹೋಗುವಷ್ಟು ಸೊರಗಿದ್ದಾನೆ. ಆ ಸಮಯದಲ್ಲಿ ಆಷಾಢ ಪ್ರವೇಶಿಸುತ್ತಿದೆ. ಜುಲೈ ತಿಂಗಳ ದಟ್ಟ ಮಳೆ ಬೀಳುವ ಸಮಯವದು. ಆಕಾಶದೆಲ್ಲೆಡೆ ಮೋಡಗಳು ಗುಂಪುಗುಂಪಾಗಿ ಬೆಳಗ್ಗಿನ ಕೆಲಸಕ್ಕೆ ಬಸ್ಸು ಹಿಡಿಯಲು ನಿಂತ ಜನರಂತೆ ಒಟ್ಟುಗೂಡಿವೆ. ಆ ಮೋಡವನ್ನು ನೋಡಿ ಯಕ್ಷನ ಮನದಲ್ಲೊಂದು ಬಯಕೆ ಮೂಡಿತು.  ವಿರಹದಿಂದ ನರಳುತ್ತಿರುವ ಕುಬೇರನ ಅನುಚರನಾದ ಇವನು  ತನ್ನ ಕಣ್ಣೀರನ್ನು ಗಂಟಲಲ್ಲೇ ತಡೆಹಿಡಿದು ಆಸೆಯ ಕಂಗಳಿಂದ ಮೇಘವನ್ನು ನೋಡುತ್ತಾ ಚಿಂತಿಸಿದನು. ಪರರೆದುರು ನಮ್ಮ ದು:ಖವನ್ನು ವ್ಯಕ್ತಪಡಿಸುವುದು ಅವರ ದು:ಖಕ್ಕೂ ಕಾರಣವಾದೀತು ಎಂಬ ದೃಷ್ಟಿಯಿಂದ ಯಕ್ಷನು ಅವನೆದುರು ನಿಂತು ಕಣ್ಣೀರಿನ ಬಿಂದುಗಳನ್ನು...
💐ಪ್ರತಿಮಾ ನಾಟಕದ ಒಂದು ಕುಸುಮ💐 *सूर्य इव गतो राम: सूर्यं दिवस इव लक्ष्मणोनुगत: । सूर्यदिवसावसाने छायेव न दृश्यते सीता ।।* _ಸುಂದರವಾದ ಉಪಮೆಗಳಿಂದ ಕವಿ ಸೀತಾರಾಮಲಕ್ಷ್ಮಣರನ್ನು ಸಂಬೋಧಿಸುತ್ತಿದ್ದಾನೆ. ದಶರಥ ಕೊರಗುತ್ತಾ ಹೇಳುವ ಮಾತು. ಮೂವರೂ ನನ್ನನ್ನಗಲಿದರೇ! ರಾಮನು ಸೂರ್ಯನಂತೆ ಕಣ್ಮರೆಯಾದ. ದೃಷ್ಟಿಗೆ ಗೋಚರನಾಗದೇ ಬಹಳ ದೂರ ದಾರಿ ಸಾಗಿಸಿದ. ಸೂರ್ಯನಂತೆ ಮತ್ತೆ ಅಯೋಧ್ಯೆ ಬೆಳಗಿಸಲು ಉದಯಿಸುತ್ತಾನೆ ಎನ್ನುವುದೂ ಭಾವ. ಅಥವಾ ಸೂರ್ಯವಂಶದ ಕುಡಿ ಸೂರ್ಯಸಮಾನನೇ ಅಲ್ಲವೇ! ಯೋಗಿಗಳ ಹೃದಯದ ಅಜ್ಞಾನವೆಂಬ ಅಂಧಕಾರ ನೀಗಿಸುವ ಸುಜ್ಞಾನ ಕರುಣಿಸುವ ಅವರ ಮನವನ್ನು ಬೆಳಗಿಸುವ ಸೂರ್ಯನೂ ಹೌದು. ವಿಶ್ವಾಮಿತ್ರರೆಂಬ ಗಾಯತ್ರಿಯಿಂದ ಲೋಕದ ಕತ್ತಲೆ ಕಳೆಯಲು ತೋರಿಸಲ್ಪಟ್ಟ ಸೂರ್ಯನೂ ರಾಮನೇ ಹೌದು. ಇನ್ನು ಲಕ್ಷ್ಮಣ ಹಗಲಿನಂತೆ ಹಿಂಬಾಲಿಸಿದನು. ಸೂರ್ಯೋದಯಕ್ಕೆ ಆರಂಭವಾಗುವ ಹಗಲು ಸೂರ್ಯ ಅಸ್ತನಾಗುತ್ತಿದ್ದಂತೆ ತಾನೂ ತನ್ನನ್ನು ಮರೆಮಾಚಿಕೊಳ್ಳುತ್ತದೆ. ಅಥವಾ ಕೊನೆಗೊಳ್ಳುವುದು. ಅವರಿಬ್ಬರ ಅನ್ಯೋನ್ಯತೆ ಅಥವಾ ಬೇರ್ಪಡದಿರುವಿಕೆಯನ್ನೇ ಕವಿ ವರ್ಣಿಸಿದ್ದಾನೆ. ಹಗಲು ಮತ್ತು ಸೂರ್ಯ ಎಂದಾದರೂ ಅಗಲಿರುವರೇ! ಸಾಧ್ಯವೇ ಇಲ್ಲ. ಹಾಗೆಯೇ ರಾಮ ಲಕ್ಷ್ಮಣ ರ ಬಾಂಧವ್ಯ. ಅವರಿಬ್ಬರೂ ವನಕ್ಕೆ ತೆರಳಿದ್ದಾರೆ. ಹಗಲು ಹಾಗೂ ಸೂರ್ಯ ಎರಡೂ ಇಲ್ಲದಿದ್ದಾಗ ನೆರಳು ಕಾಣಲು ಸಾಧ್ಯವೇ ಇಲ್ಲ. ಇಲ್ಲಿ ಸೀತೆ ನೆರಳಿನಂತೆ. ಸೂರ್ಯನ ಬೆಳಕೇ ಚಲಿಸುವ ಕಾಲಕ...
📃ವೇದ-ಧರ್ಮ ಭಾಗ-೬ *ವೇದಗಳ ಸಂಹಿತೆಗಳು*   *ಅನೇಕೇಷಾಂ ಶಬ್ದಾನಾಂ ಯತ್ರ ಸಂಧಿರ್ಭವತಿ ತತ್ರ ಸಂಹಿತಾ* *ಪರ: ಸನ್ನಿಕರ್ಷ: ಸಂಹಿತಾ* ಎಂಬಂತೆ ಪದಗಳ ನಡುವಿನ ಸಂಬಂಧ ಅಥವಾ ಸಂಧಿ ಆದಲ್ಲಿ ಅದೆಲ್ಲ ಸಂಹಿತೆ ಎಂದು ಕರೆಸಿಕೊಳ್ಳುತ್ತದೆ. ವೇದಗಳ ಲಕ್ಷಾಂತರ ಮಂತ್ರಗಳು ಒಂದೆಡೆ ಸೇರಿಕೊಂಡಿವೆ ಎನ್ನುವ ಕಾರಣದಿಂದ ಇವುಗಳ ಮಂತ್ರಗಳ ಸಮೂಹವನ್ನು *ಸಂಹಿತೆಗಳು* ಎಂದು ಕರೆದರು. ನಾಲ್ಕು ವೇದಗಳಿಗೆ ಮುಖ್ಯವಾಗಿ ನಾಲ್ಕು ಸಂಹಿತೆಗಳಿವೆ. ಆದರೆ ಪಾಠ ಭೇದದಿಂದ ಮಂತ್ರ ಕ್ರಮದ ಭೇದದಿಂದ ಅವುಗಳು ಸಾಕಷ್ಟು ಭಿನ್ನವಾಗಿ ಅನೇಕ ಸಂಹಿತೆಗಳಾಗಿ ಉಳಿದುಕೊಂಡಿವೆ. ಸಂಹಿತೆಗಳ ಬಗ್ಗೆ ಪುರಾಣದ ಮಾತು ಹೀಗಿದೆ.( ಭಾಗವತ ಇರಬೇಕು) *ಋಕ್ ಯಜುಸ್ಸಾಮಾಥರ್ವಾಖ್ಯಾನ್ ವೇದಾನ್ ಪೂರ್ವಾದಿಭಿರ್ಮುಖೈ: ಶಸ್ತ್ರಮಿಜ್ಯಾ ಸ್ತುತಿಸ್ತೋಮಂ ಪ್ರಾಯಶ್ಚಿತ್ತಂ ವ್ಯದಧಾತ್ ಕ್ರಮಾತ್* ಅಂದರೆ ಋಗ್ವೇದ ಸಂಹಿತೆಯ ವಿಷಯ ಶಸ್ತ್ರ. ಯಜುರ್ವೇದದ ವಿಷಯ ಯಜ್ಞ. ಸಾಮವೇದದ ವಿಷಯ ಸ್ತುತಿ. ಅಥರ್ವವೇದದ ವಿಷಯ ಪ್ರಾಯಶ್ಚಿತ್ತ. ಇದು ಸಾಂಕೇತಿಕವಷ್ಟೇ ಹೊರತು ಅದೇ ಮುಖ್ಯವಲ್ಲ. ಭಗವಂತನನ್ನು ಶಸ್ತ್ರದ ಮೂಲಕ ಅಂದರೆ ಭಕ್ತಿಜ್ಞಾನಗಳ ಮೂಲಕ ಪಡೆಯಲು ಸಹಕರಿಸುವುದು ಋಗ್ವೇದ. ಕರ್ಮಗಳ ಮೂಲಕ ಪಡೆಯಲು ಸಹಕರಿಸುವುದು ಯಜುರ್ವೇದ. ಸ್ತೋತ್ರದ ಮೂಲಕ ಹೊಂದಲು ಸಹಕರಿಸುವುದು ಸಾಮವೇದ. ಈ ಮೂರಕ್ಕೆ ಅರ್ಹತೆ ಹೊಂದಲು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಪಡೆದು ಮುಂದುವರೆಯಲು ಸಹಾಯ ಮಾಡುವುದು ಅಥರ್ವವೇದ. *ಸ...
🌹ಶಾಕುಂತಲದ ಒಂದು ಶ್ಲೋಕ🌹 *मूढ: स्यामहमेषा वा वदेन्मिथ्येति संशये । दारत्यागी भवाम्याहो परस्त्रीस्पर्शपांसुल: ।।* _ದುಷ್ಯಂತನು ಶಾರ್ಙರವನನ್ನು ಕುರಿತು ಕೇಳುವ ಮಾತು. ಶಕುಂತಲೆಯ ತಪ್ಪೋ ನನ್ನ ತಪ್ಪೋ ಅರಿಯೆ ನಾನು. ಈಗ ನಾನು ಅವಳನ್ನು ವರಿಸಿ ಮರೆತಿರುವೆನೋ, ಅಥವಾ ಇವಳು ಸುಳ್ಳು ಹೇಳುತ್ತಿರುವಳೋ ಎಂಬ ಸಂಶಯ ಕಂಡುಬಂದಿದೆ. ಇಂತಹ ಸಮಯದಲ್ಲಿ ನಾನು ಏನು ಮಾಡಿದರೂ ಕಷ್ಟವೇ ಸರಿ. ಸ್ವಂತ ಕೈಹಿಡಿದ ಪತ್ನಿಯನ್ನು ನಡುನೀರಿನಲ್ಲಿ ಕೈ ಬಿಡುವುದು ಉಚಿತವೇ? ಅಥವಾ ಪರಸ್ತ್ರೀ ಸ್ಪರ್ಶ ಬಯಸಿದ ದೋಷಿಯಾಗುವುದು ಉಚಿತವೇ? ಎರಡೂ ಸಾಧ್ಯತೆಗಳು ಕಷ್ಟವೇ ಸರಿ. ನಾನು ಮರೆತಿದ್ದರೆ ಅವಳ ಕೈ ಹಿಡಿದಿರುವುದನ್ನು ಅದು ತಪ್ಪು. ಅಂತಹ ಪತ್ನಿಯನ್ನು ತ್ಯಜಿಸಿದ ಅದೂ ಗರ್ಭ ಧರಿಸಿದ ಕಾಲದಲ್ಲಿಯ ತ್ಯಾಗ ನನಗೆ ಕಟುಕತ್ವವನ್ನು ತಂದು ಕೊಟ್ಟೀತು. ಇದು ಯಾವಾಗ ಸಾಧ್ಯ ಅವಳ ಮಾತಿನಲ್ಲಿ ವಿಶ್ವಾಸವಿಟ್ಟಾಗ ಮಾತ್ರ. ಒಂದು ವೇಳೆ ಅವಳು ಸುಳ್ಳು ನುಡಿಯುತ್ತಿದ್ದಾಳೆ ಎಂದರೆ ಸುಂದರಿಯಾದ ಪರ ಪತ್ನಿಯ ಸ್ಪರ್ಶ ಹಂಬಲಿಸಿದ ಕಾಮಿಯೆಂಬ ಬಿರುದನ್ನು ನಾನು ಸಂಪಾದಿಸಲೋ? ಎರಡೂ ನುಂಗಲಾರದ ಬಿಸಿ ತುಪ್ಪದಂತಿದೆ. ಈಗ ನಾನು ಮಾಡಬೇಕಾಗಿರುವುದಾದರೂ ಏನನ್ನು ಎಂಬುದನ್ನು ನೀವೇ ನಿರ್ಣಯಿಸಿ. ಲೋಕದ ದೃಷ್ಟಿಯಲ್ಲಿ ಕಟುಕತ್ವವೂ ಕಾಮಿತ್ವವೂ ಕೆಟ್ಟದೇ. ಹಾಗಾಗಿ ನಿಮ್ಮನ್ನು ಪ್ರಶ್ನಿಸುತ್ತಿದ್ದೇನೆ. ಇದರಲ್ಲಿ ಯಾವುದು ಹೆಚ್ಚು ಅಪರಾಧ ? ಈ ಸನ್ನಿವೇಶದಲ್ಲಿ ದುಷ್ಯಂತನ...
📙 ಮಹಾಭಾರತದ ಒಂದು ಅಪ್ರಸಿದ್ಧ ಕಥೆ 📙 ಹಿಂದೆ ಯಮುನಾ ತೀರದಲ್ಲಿ ಶಮಾನ್ವಿತರೂ ಸಂಹಿತಾಧ್ಯಯನ ನಿರತರೂ ಕಾಶ್ಯಪ ಗೋತ್ರದವರೂ ಆದ ಯಾಜ ಮತ್ತು ಉಪಯಾಜ ಎಂಬ ಇಬ್ಬರು ಬ್ರಾಹ್ಮಣರಿದ್ದರು. ದ್ರೋಣರಿಂದ ಅಪಮಾನಿತನಾದ ದ್ರುಪದನು ತನ್ನ ಪ್ರತೀಕಾರ ತೀರಿಸಿಕೊಳ್ಳಲು ಅವರನ್ನು ಆಶ್ರಯಿಸಿದನು. ಮೊದಲಿಗೆ ಕಿರಿಯನಾದ ಉಪಯಾಜನನ್ನು ಆಶ್ರಯಿಸಿ ಬಹಳ ಕಾಲ ಶುಶ್ರೂಷೆ ಮಾಡಿ ತನ್ನ ಮನದಿಂಗಿತವನ್ನು ಅವನ ಬಳಿ ನುಡಿಯುತ್ತಾನೆ. ಸಾಕಷ್ಟು ಆಮಿಷಗಳನ್ನೂ ಒಡ್ಡುತ್ತಾನೆ. ಹತ್ತು ಕೋಟಿ ಗೋವುಗಳನ್ನು ನೀಡುವೆನು, ನೀನು ಮನದಲ್ಲಿ ಇಚ್ಛಿಸಿದ ಯಾವುದನ್ನಾದರೂ ಕೊಡುವೆನು ಇತ್ಯಾದಿಯಾಗಿ. ಹೀಗೆ ಏನು ಹೇಳಿದರೂ ಆ ಸಣ್ಣವನಾದ ಉಪಯಾಜ ಮಹರ್ಷಿ ಒಬ್ಬನಿಗೆ ಕೇಡು ಬಯಸುವ ಅಂತಹ ಯಜ್ಞ ತಾನು ಮಾಡಲಾರೆನೆಂದು ನಯವಾಗಿಯೇ ತಿರಸ್ಕರಿಸುತ್ತಾನೆ. ಅನಂತರ ಮತ್ತೆ ಒಂದು ವರ್ಷ ದ್ರುಪದ ಅವನ ಸೇವೆ ಮುಂದುವರೆಸುತ್ತಾನೆ. ಆಗಲೂ ಯಜ್ಞ ಮಾಡಲೊಪ್ಪದ ಉಪಯಾಜನು ತನ್ನ ಅಣ್ಣನಾದ ಯಾಜನ ಬಳಿ ತೆರಳುವಂತೆ ಸೂಚಿಸುತ್ತಾನೆ. ಅದಕ್ಕೆ ಒಂದು ಕಾರಣವನ್ನೂ ನೀಡುತ್ತಾನೆ. ' ಹಿಂದೆ ಒಮ್ಮೆ ನನ್ನ ಹಿರಿಯ ಸಹೋದರ ಕಾಡಿನಲ್ಲಿ ಹೋಗುತ್ತಿದ್ದಾಗ ಹೊಳೆಯ ತೀರದಲ್ಲಿ ಬಿದ್ದಿದ್ದ ಹಣ್ಣನ್ನು ಅದರ ಶುದ್ಧತೆಯ ಬಗೆಗೆ ವಿಚಾರ ಮಾಡದೇ ಸೇವಿಸಿದನು. ನಾನು ಅಣ್ಣನ ಈ ಅನುಚಿತವಾದ ಕೆಲಸ ನೋಡಿದೆ.‌ ದುಷ್ಟಪದಾರ್ಥಗಳನ್ನು ಸ್ವೀಕರಿಸುವ ವಿಷಯದಲ್ಲಿ ಯಾವ ರೀತಿಯಿಂದಲೂ ವಿಮರ್ಶೆ ಮಾಡುವುದಿಲ್ಲ. ಆ ಹಣ್ಣನ್ನು ನೋಡಿ ಅದರ ಜ...
💐ಪ್ರತಿಮಾನಾಟಕದ ಒಂದು  ಕುಸುಮ💐 *सत्यसन्ध!  जितक्रोध!  विमत्सर!  जगत्प्रिय । गुरुशुश्रूषणे युक्त!  प्रतिवाक्यं प्रयच्छ मे ।।* _ದಶರಥನ ರೋದನ ಮೇರೆಮೀರಿದೆ. ಸೀತೆಗೆ ನೀನು ನನ್ನ ಮುದ್ದಿನ ಸೊಸೆಯಾಗಿ ರಾಮ-ಲಕ್ಷ್ಮಣರಂತೆ ಬಿಟ್ಟು ಹೋಗುವುದೇ ಎಂದೆಲ್ಲಾ ಕೇಳಿದ. ಈಗ ಮಗನಾದ ರಾಮನನ್ನು ನೆನಪಿಸಿಕೊಂಡು ದು:ಖಿಸುತ್ತಿದ್ದಾನೆ. ಕೌಸಲ್ಯಾ ಪುತ್ರ ಮಗು ಶ್ರೀ ರಾಮ ಎಲ್ಲಿರುವೆ, ನೀನು ಸತ್ಯಸಂಧ, ಸತ್ಯದ ದಾರಿಯನ್ನು ಎಂದೂ ಬಿಟ್ಟವನಲ್ಲ, ಕೋಪವನ್ನು ಗೆದ್ದವನು, ಅಕಾರಣವಾಗಿ ಅಥವಾ ವ್ಯರ್ಥವಾಗಿ ಯಾರ ಮೇಲೂ ಕೋಪ ಮಾಡಿಕೊಂಡದ್ದಿಲ್ಲ, ಅಸೂಯೆ ನಿನ್ನ ಬಳಿ ಸುಳಿಯಲಾರದು, ಹಾಗಾಗಿಯೇ ನೀನು ಅನ್ಯರ ಏಳಿಗೆಯನ್ನು ಕಂಡು ಕೊರಗಿದವನಲ್ಲ, ನಿರ್ಮತ್ಸರಿ ನೀನು, ಇಷ್ಟೆಲ್ಲಾ ಗುಣಗಳಿಂದ ಕೂಡಿ ಲೋಕದ ಜೀವಿಗಳಿಗೆ ಪ್ರಿಯನಾದವನು, ತಾನು ಹಿರಿಯ ಪುತ್ರನಾದರೂ ನೀನು ಗುರು ಶುಶ್ರೂಷೆಯನ್ನೆಂದೂ ತ್ಯಜಿಸಿದವನಲ್ಲ, ಗುರು ಹಿರಿಯರ ಮಾತಿಗೆ ಗೌರವ ಕೊಟ್ಟು ವಿನೀತನಾಗಿ ಇದ್ದವನು , ಈಗ ಈ ನಿನ್ನ ತಂದೆಗೆ ಉತ್ತರ ಕೊಡಲಾರದೆ ಹೋದೆಯಲ್ಲ! ನನಗೆ ನನ್ನ ಪ್ರಶ್ನೆಗೆ ಉತ್ತರಿಸು! ಯಾಕೆ ನನ್ನನ್ನು ಬಿಟ್ಟು ದೂರ ಹೋಗುತ್ತಿರುವೆ! ಎಂದೂ ನನ್ನ ಮಾತನ್ನು ಮೀರದವನು ಇಂದು ಮಾತ್ರ ನನ್ನ ಪ್ರಶ್ನೆಗೆ ಉತ್ತರಿಸುತ್ತಿಲ್ಲವಲ್ಲಾ ರಾಮ ಬೇಗ ಉತ್ತರಿಸು! ಪರಿಕರ ಅಲಂಕಾರ. ಅಪ್ಪನ ಮಾತನ್ನು ಸತ್ಯ ಮಾಡಲು ತೆರಳಿದ ಕಾರಣ ಸತ್ಯಸಂಧ, ಕೈಕೇಯಿಯ ...
🌹ಶಾಕುಂತಲದ ಒಂದು ಸುಮ🌹 *कुमुदान्येव शशाङ्क: सविता बोधयति पङ्कजान्येव । वशिनां हि परपरिग्रहसंश्लेषपराङ्मुखी वृत्ति: ।।* _ಶಾರ್ಙರವನು ಶಕುಂತಲೆಯನ್ನು ನಿಂದಿಸಲು ತೊಡಗಿದಾಗ ರಾಜನಾಡುವ ಮಾತು. ತಪಸ್ವಿಯೇ ಇವಳೊಡನೇಕೆ ವಾದಿಸುವೆ? ಚಂದ್ರನು ಕುಮುದಗಳನ್ನು ಮಾತ್ರ ಅರಳಿಸುವನು. ಸೂರ್ಯನು ಕಮಲಗಳನ್ನು ಮಾತ್ರ ಅರಳಿಸುವನು. ಇಂದ್ರಿಯ ನಿಗ್ರಹವುಳ್ಳವರ ನಡತೆಯು ಬೇರೆಯವರ ಹೆಂಡಂದಿರನ್ನು ಆಲಿಂಗಿಸಲು ಪ್ರತಿಕೂಲವಾಗಿರುವುದು. ಬಹಳ ಮಾರ್ಮಿಕವಾದ ಮಾತು. ತನ್ನನ್ನು ತಾನು ರಾಜ ಸಮರ್ಥಿಸಿಕೊಳ್ಳುತ್ತಾನೆ. ಚಂದ್ರನೆಂದೂ ತಾವರೆ ಅರಳಿಸಲಾರ. ಅವನು ರಾತ್ರಿ ಕಾಲದ ನೈದಿಲೆಯನ್ನು ಮಾತ್ರ ಅರಳುವಂತೆ ಮಾಡಬಲ್ಲ. ಅವನ ನಡತೆ ಅದು ಶುದ್ಧ. ಸೂರ್ಯನು ಕಮಲವನ್ನು ಬಿಟ್ಟು ಬೇರೆ ಹೂಗಳೊಡನೆ ಅಂತಹ ಸಂಬಂಧ ಹೊಂದಿಲ್ಲ. ಕಮಲಗಳನ್ನು ಅವನೇ ಅರಳಿಸಬಲ್ಲನು. ಅವನೂ ತನ್ನ ಪತ್ನಿಗೆ ( ಕಮಲಕ್ಕೆ) ನಿಷ್ಠನಾಗಿದ್ದಾನೆ. ಯಾರು ತಮ್ಮ ಇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೋ ಅಂತಹ ವ್ಯಕ್ತಿಗಳು ಎಂದಿಗೂ ಬೇರೊಬ್ಬರ ಪತ್ನಿಯ ಆಲಿಂಗನವನ್ನು ಇಷ್ಟಪಡಲಾರರು. ತಾನೇ ತಾನಾಗಿ ಶಕುಂತಲೆ ಈಗ ಬಂದಿದ್ದರೂ ಇಂದ್ರಿಯನಿಗ್ರಹ ಹೊಂದಿರುವ ನಾನು ಅವಳನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಹಾಗೆಲ್ಲ ಪರ ಪತ್ನಿಯ ಆಲಿಂಗನ ನನ್ನಂತಹ ಅಚಾರ ಶ್ರೇಷ್ಠ ರಿಗೆ ಸಮಂಜಸವೂ ಅಲ್ಲ. ಹೀಗಾಗಿ ಅವಳೊಡನೆ ಸುಮ್ಮನೆ ಚರ್ಚೆ ಮಾಡದೇ ಅವಳನ್ನು ಕರೆದುಕೊಂಡು ಹೋಗು. ನೀನು ಇಲ್ಲಿಯೇ...
📃 ವೇದ- ಧರ್ಮ ಭಾಗ- ೭ *ವೇದಗಳ ಸಂಹಿತೆಗಳು* _ಯಜುರ್ವೇದದ ಎರಡು ಸಂಹಿತೆಗಳು ಪ್ರಸಿದ್ಧವಾಗಿವೆ. ಕೃಷ್ಣ ಹಾಗೂ ಶುಕ್ಲ ಯಜುರ್ವೇದ ಸಂಹಿತೆಗಳು. ಯಜು ಎಂಬ ಶಬ್ದದ ಧಾತು ಯಜ್. ಇದರರ್ಥ ದೇವಪೂಜೆ, ದಾನ, ಸ್ತುತಿ ಎಂದೆಲ್ಲ ಇದೆ. ದೇವತೆಗಳನ್ನು ಆಹ್ವಾನಿಸಲು ಆಯಾ ದೇವತೆಗೆ ಸಂಬಂಧಿಸಿದ ಮಂತ್ರಗಳನ್ನು ಉಚ್ಚರಿಸಬೇಕು. ಇಂತಹ ದೇವತೆಗಳ ಆಹ್ವಾನದ ಬಗೆ, ಅವರನ್ನು ಪೂಜಿಸುವ ವಿಧಾನವನ್ನು ಸುಂದರವಾಗಿ ನಿರೂಪಿಸುತ್ತದೆ ಈ ಸಂಹಿತೆ. ಶತಪಥ ಬ್ರಾಹ್ಮಣದ ಈ ಮಂತ್ರ ಹೀಗಿದೆ *ಆದಿತ್ಯಾನಿಮಾನಿ ಶುಕ್ಲಾನಿ ಯಜೂಂಷಿ ವಾಜಸನೇಯೇನ ಯಾಜ್ಞವಲ್ಕ್ಯೇನ ಆಖ್ಯಾಯಂತೆ* ಯಾಜ್ಞವಲ್ಕ್ಯ ಮಹರ್ಷಿಗಳು ಸೂರ್ಯನಿಂದ ಉಪದೇಶ ಪಡೆದ ಈ ಮಂತ್ರಗಳೇ ಶುಕ್ಲವೆಂದೂ, ವೈಶಂಪಾಯನರು ತಮ್ಮ ಶಿಷ್ಯರಿಗೆ ಉಪದೇಶಿಸಿದ ಅದೇ ಮಂತ್ರಗಳು ಕೃಷ್ಣವೆಂದೆನಿಸಿದವು. ಈ ಶುಕ್ಲ ಕೃಷ್ಣ ವಿಭಾಗ ಹೇಗೆ ಅಂದರೆ ಸಂಹಿತೆ ಹಾಗೂ ಅವುಗಳ ವ್ಯಾಖ್ಯಾನ ರೂಪವಾದ ಬ್ರಾಹ್ಮಣ ಮಂತ್ರಗಳು ಸೇರಿ ಒಂದೇ ಕಡೆ ಇದ್ದಾಗ ಕೃಷ್ಣ ಪ್ರತ್ಯೇಕವಾಗಿ ಇದ್ದಾಗ ಶುಕ್ಲ ಎಂದು ವಿದ್ವಾಂಸರ ಅಭಿಮತ. ಕೃ. ಯಜುರ್ವೇದದ ಈಗ ಲಭ್ಯವಿರುವ ಎರಡು ಸಂಹಿತೆಗಳು  ತೈತ್ತಿರೀಯ ಹಾಗೂ ಮೈತ್ರಾಯಣ. ಶು. ಯಜುರ್ವೇದದ  ಸಂಹಿತೆ ವಾಜಸನೇಯ ಸಂಹಿತೆ. ಈ ವಾಜಸನೇಯ  ಸಂಹಿತೆಯಲ್ಲಿ ಒಟ್ಟು ೪೦ ಅಧ್ಯಾಯಗಳಿವೆ. ಅಂತಿಮ ೧೫ ಅಧ್ಯಾಯಗಳು ಖಿಲವೆಂದು ಕರೆಸಲ್ಪಟ್ಟಿವೆ. ಮೊದಲ ಎರಡು ಅಧ್ಯಾಯಗಳಲ್ಲಿ ದರ್ಶಪೌರ್ಣಮಾಸ ಯಾಗಕ್ಕೆ ಸಂಬಂಧಿಸಿದ ಮಂತ್...
💐ಪ್ರತಿಮಾನಾಟಕದ ಒಂದು  ಸುರಭಿ💐 *हा वत्स राम!  जगतां नयनाभिराम हा वत्स लक्ष्मण सलक्षणसर्वगात्र । हा साध्वि मैथिलि पतिस्थितचित्तवृत्ते हा हा गता: किल वनं बत मे तनूजा: ।।* _ದಶರಥ ವಿಲಪಿಸುವ ಶ್ಲೋಕವಿದು. ಅಯ್ಯೋ ರಾಮ, ಜಗದ ಜನರೆಲ್ಲ ಎವೆಯಿಕ್ಕದೆ ನಿನ್ನ ಮುಖಕಮಲವನ್ನು ನೋಡಿ ಆನಂದಿಸುತ್ತಿದ್ದರು. ಹಾಗಾಗಿ ನೀನು ಕಣ್ಣುಗಳಿಗೊಂದು ಹಬ್ಬ,ನೀನು ಹೊರಟು ಹೋದಿಯಲ್ಲ! ಅಯ್ಯೋ ಲಕ್ಷ್ಮಣ ಸಾಮುದ್ರಿಕ ಶಾಸ್ತ್ರದ ರೀತಿಯಲ್ಲಿ ದೇಹದ ಅಂಗಾಂಗಗಳಲ್ಲಿ ಉತ್ತಮ ಲಕ್ಷಣಗಳನ್ನು ಹೊಂದಿ ಶ್ರೇಷ್ಠನೆನಿಸಿಕೊಂಡವನೇ ನೀನೂ ಹೊರಟು ನಿಂತೆಯಲ್ಲ! ಅಯ್ಯೋ ಪತಿವ್ರತೆ ಸೀತೆ,  ಪತಿಯನ್ನು ಬಿಟ್ಟು ಅನ್ಯರನ್ನು ಚಿಂತಿಸದ ಸಾಧ್ವಿ ಅಥವಾ ಪತಿಯನ್ನು ಮಾತ್ರ ಪ್ರೀತಿಸುವ ಪತಿವ್ರತೆ, ನೀನೂ ರಾಮನೊಡನೆ ಹೊರಟು ನಿಂತೆಯಲ್ಲ, ಅಯ್ಯೋ ಅಯ್ಯೋ ಈ ಹತಭಾಗ್ಯನಾದ ಅಥವಾ ಅದೃಷ್ಟಹೀನನಾದ ನನ್ನನ್ನು ಈ ಮಕ್ಕಳು ಬಿಟ್ಟುಹೋಗುತ್ತಿರುವರಲ್ಲ! ನನಗಿನ್ನಾರು ಗತಿ! ನನ್ನನ್ನು ಸಲಹುವವರು ಯಾರೂ ಇಲ್ಲವೇ! ದಶರಥನ ಅಳು ನಿಲ್ಲುತ್ತಲೇ ಇಲ್ಲ. ನಾವೂ ದಶರಥನಂತೆಯೇ ರಾಮಸೀತಾಲಕ್ಷ್ಮಣರ ಸ್ಮರಣೆ ಸದಾ ನಡೆಸೋಣ. ಈ ಶ್ಲೋಕದಲ್ಲಿ ಕವಿ ಆ ಹೆಸರುಗಳ ಅರ್ಥವನ್ನೂ ಸೂಚಿಸಿದ್ದಾನೆ. ರಾಮ ಸಂತೋಷ ನೀಡುವವನು, ಲಕ್ಷ್ಮಣ ಲಕ್ಷಣವಾಗಿರುವವನು, ಸೀತೆ ಪತಿವ್ರತೆ ಎಂದು ವಿವರಣೆ ನೀಡಿರುವುದು ಸಮಂಜಸವಾಗಿದೆ. ಇಂತಹ ಮಹನೀಯರು ಬಿಟ್ಟು ಹೊಗುತ್ತಿರುವರಲ್ಲ ಎಂದೇ ದಶ...
🌹ಶಾಕುಂತಲದ ಒಂದು ಕುಸುಮ🌹 *आजन्मन: शाठ्यमशिक्षितो य: तस्याप्रमाणं वचनं जनस्य । परातिसन्धानमधीयते यैर्विद्येति ते सन्तु किलाप्तवाच: ।।* _ಶಾರ್ಙರವನ ಕಠಿಣ ಮಾತು. ಸ್ತ್ರೀಯರಿಗೆ ಕಪಟ ಬುದ್ಧಿ ಸಹಜ. ಕೋಗಿಲೆ ತನ್ನ ಮಕ್ಕಳನ್ನು ಕಾಗೆಯ ಗೂಡಿನಲ್ಲಿಟ್ಟು ಪೋಷಿಸುವುದೇ ಉದಾಹರಣೆ ಎಂದೆಲ್ಲಾ ಶಕುಂತಲೆಯ ಮಾತನ್ನು ಮೋಸಮಾಡಲೆಂದೇ ನುಡಿದ ವಚನವಿರಬೇಕು ಎಂದು ರಾಜ ನುಡಿದಾಗ ಸಿಟ್ಟಿನಿಂದ ಋಷಿ ಹೇಳುವ ಮಾತಿದು. ಇವನ ಮಧುರ ವಚನವನ್ನು ಕೇಳಿದಿರಲ್ಲ!. ಯಾರಿಗೆ ಹುಟ್ಟಿನಿಂದ ಆರಂಭಿಸಿ ಮೋಸ ಎಂಬುದೇ ತಿಳಿದಿಲ್ಲವೋ ಅವರಾಡುವ ಮಾತು ಒಪ್ಪಲಾಗುವುದಿಲ್ಲವಂತೆ, ಯಾರು ಬೇರೆಯವರಿಗೆ ವಂಚನೆ ಮಾಡುವುದನ್ನೇ ಒಂದು ವಿದ್ಯೆಯೆಂದು ಶ್ರದ್ಧೆಯಿಂದ ಕಲಿಯುತ್ತಾರೋ ಅವರಾಡುವ ಮಾತು ಮಾತ್ರ ನಂಬಲರ್ಹವಂತೆ. ಆಹಾ ಎಂತಹ ವಿಪರ್ಯಾಸ! ಅಪ್ರಸ್ತುತಪ್ರಶಂಸೆ ಹಾಗೂ ರೂಪಕ ಅಲಂಕಾರಗಳು. ಶಕುಂತಲೆ ಕಾಡಿನಲ್ಲಿ ಮಹರ್ಷಿಗಳ ಬಳಿ ಬೆಳೆದುಬಂದವಳು. ಆಶ್ರಮದ ಆ ಪರಿಸರದಲ್ಲಿ ಮೋಸ ವಂಚನೆಗಳೆಂಬ ಪದಗಳೇ ಅರ್ಥ ಕಳೆದುಕೊಳ್ಳುವ ಪ್ರಶಾಂತ ವಾತಾವರಣ. ಅಂತಹ ಪರಿಸರದಲ್ಲೇ ತನ್ನ ಬಾಲ್ಯ ಕಳೆದ ಶಕುಂತಲೆ ಕಪಟವೇನೆಂದೇ ಅರಿಯಳು. ಆದರೆ ರಾಜ ನುಡಿಯುತ್ತಿದ್ದಾನೆ ಇವಳು ನನ್ನನ್ನು ಮೋಸಗೊಳಿಸಲೆಂದೇ ಹೀಗೆಲ್ಲಾ ಮಾತನಾಡುತ್ತಿದ್ದಾಳೆಂದು , ಯಾಕಾದರೂ ಅವಳು ಹೀಗೆ ಮಾಡಿಯಾಳು? ರಾಜನ ಈ ಆಪಾದನೆ ಒಪ್ಪಲಾಗದು. ಇನ್ನು ರಾಜಪುತ್ರರು ಅಧ್ಯಯನದ ಕಾಲದಲ್ಲಿ ಅರವತ್ತ ನಾಲ್ಕು ವಿದ್ಯೆ...
💐ಪ್ರತಿಮಾ ನಾಟಕದ ಒಂದು ಕುಸುಮ💐 *नागेन्द्रा यवसाभिलाषविमुखा: सास्नेक्षणा वाजिनो ह्रेषाशून्यमुखा: सवृद्धवनिताबालाश्च पौरा जना: । त्यक्ताहारकथा: सुदीनवदना: क्रन्दन्त उच्चैर्दिशा रामो याति यया सदारसहजस्तामेव पश्यन्त्यमी ।।* _ಕಂಚುಕಿ ಆಡುವ ಮಾತು. ಪ್ರತೀಹಾರಿಯ ಬಳಿ ಹೇಳುತ್ತಾನೆ. ರಾಮನ ನಿರ್ಗಮನದಿಂದ ಅಯೋಧ್ಯೆಗೆ ಅಯೋಧ್ಯೆಯೇ ಶೂನ್ಯವಾದಂತಿದೆ. ಯಾಕೆಂದರೆ- ಗಜಶಾಲೆಯ ಕರಿಗಳು ಎಳೆ ಹುಲ್ಲಿನ ತುತ್ತನ್ನು ತಿನ್ನುವುದನ್ನು ಬಿಟ್ಟು ರಾಮನ ಪ್ರೀತಿಯನ್ನೇ ಚಿಂತಿಸುತ್ತಿವೆ. ಅಶ್ವಗಳು ಕೇವಲ ಕಣ್ಣಿನಲ್ಲಿ ನೀರು ಮಾತ್ರ ತುಂಬಿಕೊಂಡಿಲ್ಲ ಹೊರತು ಕೆನೆಯುವುದನ್ನೇ ಬಿಟ್ಟುಬಿಟ್ಟಿವೆ. ಇನ್ನು ಜನರ ಬಗ್ಗೆ ಹೇಳುವುದಾದರೆ ವೃದ್ಧರು ವನಿತೆಯರು ಬಾಲರಾದಿಯಾಗಿ ಎಲ್ಲರೂ ಪೌರರು ಸಂತೋಷವಾಗಿ ಮಾತನಾಡುವುದನ್ನೂ, ಆಹಾರ ಸ್ವೀಕರಿಸುವುದನ್ನೂ ಬಿಟ್ಟುಬಿಟ್ಟಿದ್ದಾರೆ. ಕಾಂತಿ ಕಳೆದ ಮುಖದಲ್ಲಿ ಸದಾ ಕಣ್ಣೀರು ಸುರಿಸುತ್ತಿದ್ದಾರೆ. ಇವರೆಲ್ಲರ ನೋಟವೂ ಒಂದೇ ದಿಕ್ಕಿನೆಡೆ ಕೇಂದ್ರೀಕೃತವಾಗಿದೆ ರಾಮ ಯಾವ ದಿಕ್ಕಿನತ್ತ ಪಯಣಿಸಿದನೋ ಆ ಕಡೆಗೆ. ಸೀತಾಲಕ್ಷ್ಮಣರೊಡಗೂಡಿ ರಾಮ ಅಯೋಧ್ಯೆಯೊಂದ ವನಕ್ಕೆ ತೆರಳುತ್ತಿರುವನು. ಅಯೋಧ್ಯೆಯ ಜೀವರಾಶಿಯೆಲ್ಲವೂ ರಾಮನಿಗಾಗಿ ಮಿಡಿಯುತ್ತಿದೆ. ಗಜಗಳು ಆಹಾರ ತಿನ್ನುವುದನ್ನು ಬಿಟ್ಟು ಇನ್ನು ನಮಗೆ ರಾಮನ ಪ್ರೀತಿ ಸಿಗುವುದಿಲ್ಲವಲ್ಲ ಎಂದು ಚಿಂತಿಸುತ್ತಾ ರಾಮ ಹೋದ ಕಡೇಗೆ ನೋಡುತ್ತಿವೆ. ...
🌹ಶಾಕುಂತಲದ ಮಧುರ ಸುಮ🌹 *अत: परीक्ष्य कर्तव्यं विशेषात्सङ्गतं रह: । अज्ञातहृदयेष्वेवं वैरीभवति सौहृदम् ।।* _ಕಾಳಿದಾಸನ ಸಾರ್ವಕಾಲಿಕ ಸಂದೇಶ. ಶಾರ್ಙರವ ಶಕುಂತಲೆಗೆ ಹೇಳುವ ಮಾತು. ಶಕುಂತಲೆ ಈ ವಂಚಕನಿಂದ ನಾನು ಮೋಸಹೋದೆ ಎಂದು ಅತ್ತಾಗ ನುಡಿಯುವ ಮಾತು. ಯಾರೊಡನೆಯೂ ರಹಸ್ಯವಾದ ಸಂಪರ್ಕ ಬೆಳೆಸುವ ಮುನ್ನ ಅವರನ್ನು ಪರೀಕ್ಷಿಸಬೇಕು. ಇಲ್ಲದಿದ್ದರೆ ಅಂತಹ ಒಂದು ಸ್ನೇಹ ಕೊನೆಗೊಮ್ಮೆ ಶತ್ರುತ್ವದಲ್ಲಿ ಕೊನೆಗೊಳ್ಳುವುದು. ಗುರುತು ಪರಿಚಯ ಇಲ್ಲದ ಅಜ್ಞಾತ ವ್ಯಕ್ತಿಗಳಲ್ಲಿ ಸ್ನೇಹ ಸಂಬಂಧ ಬೆಳೆಸುವ ಮುನ್ನ ಹತ್ತಾರು ಬಾರಿ ಪರೀಕ್ಷಿಸಿ ಮುಂದಡಿ ಇಡಬೇಕು. ಶಕುಂತಲೆ ದುಷ್ಯಂತರು ಬಹುಕಾಲದ ಪರಿಚಿತರೇನಲ್ಲ. ಆದರೆ ಯಾವುದೋ ಆಕರ್ಷಣೆಗೆ ಒಳಗಾಗಿ ಗಾಂಧರ್ವ ವಿವಾಹ ಮಾಡಿಕೊಂಡರು. ಈಗ ಆಕೆ ತುಂಬು ಗರ್ಭಿಣಿ. ದುಷ್ಯಂತ ರಾಜನೆಂದು ಪರಿಚಿತನೇ ಹೊರತು  ಶಕುಂತಲೆಗೆ ಬೇರೆ ರೀತಿಯಲ್ಲಿ ಪರಿಚಯವಿರಲಿಲ್ಲ.   ಅವನನ್ನು ನೋಡಿ ಅವನೊಡನೆ ಮಾತನಾಡಿ ಹಿರಿಯರನ್ನು ಕೇಳದೆ ಗಾಂಧರ್ವ ವಿವಾಹ ಮಾಡಿಕೊಳ್ಳುವುದು ತಪಸ್ವಿಯ ಸಂಗದಲ್ಲಿ ಬೆಳೆದ ಶಕುಂತಲೆ ಮಾಡಿದ ಮೂರ್ಖತನದ ಕೆಲಸ. ಯಾರು ಇಂತಹ ಕೆಲಸ ಮಾಡಿದರೂ ಮೂರ್ಖತನವೇ. ಅಧಿಕಾರಿಗಳು ಸಿರಿವಂತರು ಅದನ್ನು ಸಾಧಿಸಿಕೊಳ್ಳುವರು. ಆದರೆ ಬಡವರು ಏನು ತಾನೇ ಮಾಡಿಯಾರು! ಈ ಮಾತು ಸ್ತ್ರೀಯರಿಗೆ ಮಾತ್ರವಲ್ಲ. ಪುರುಷರಾದರೂ ಅಷ್ಟೇ. ಅಜ್ಞಾತರಲ್ಲಿ ಸ್ನೇಹ ಅಥವಾ ಪ್ರೀತಿ ಮಾಡುವ ಮುನ್ನ ಅವನ ಅಥವಾ ಅವಳ...
💐ಪ್ರತಿಮಾನಾಟಕದ ಒಂದು ಸುರಭಿ💐 *मेरुश्चलन्निवयुगक्षयसन्निकर्षे शोषं व्रजन्निव महोदधिरप्रमेय: । सूर्य: पतन्निव च मण्डलमात्रलक्ष्य: शोकाद्भृशं शिथिलदेहमतिर्नरेन्द्र: ।।* _ಕಂಚುಕಿಯು ದಶರಥನನ್ನು ವರ್ಣಿಸುವ ಪರಿ. ರಾಮನು ಸೀತೆ ಹಾಗೂ ಲಕ್ಷ್ಮಣನ ಜೊತೆಗೆ ಅಪ್ಪನಿಗೆ ಕಾಯದೇ ತೆರಳಿದ್ದಾನೆ. ಅವರ ಗಮನದ ವಾರ್ತೆ ಕೇಳಿದ ದಶರಥ ಕೃತಕ ಸಮುದ್ರದ ಸಮೀಪದಲ್ಲಿ ನಿರ್ಮಿಸಲ್ಪಟ್ಟ ಶಯ್ಯಾಗೃಹದಿಂದ ಬೇಗನೇ ಎದ್ದು ಬಂದಿದ್ದಾನೆ. ಅವನ ಸ್ಥಿತಿ ಈ ಶ್ಲೋಕದ ವರ್ಣನೆ. ಯುಗದ ಕೊನೆಯಾಗುವ ಸಮಯ ಸಮೀಪಿಸಿದಾಗ ಸ್ಥಿರವಾಗಿ ನಿಂತಿದ್ದ ಮೇರು ಪರ್ವತವು ಚಲಿಸುವಂತೆ, ಎಂದಿಗೂ ಬತ್ತದಿರುವ ಸಮುದ್ರವು ಒಣಗಲು ಪ್ರಾರಂಭಿಸಿದಂತೆ, ಸೂರ್ಯನು ತನ್ನ ಪ್ರಖರತೆಯನ್ನು ಕಳೆದುಕೊಂಡು ಕೇವಲ ಮಂಡಲದಲ್ಲಿ ಮಾತ್ರ ಹೆಸರಿಗೆ ಉಳಿಯುವಂತೆ , ಶೋಕದಿಂದ ಆಯಾಸಗೊಂಡ ದೇಹ ಮನಸ್ಸಿನಿಂದ ಕೂಡಿ ನಿಟ್ಟುಸಿರುಬಿಡುತ್ತಿದ್ದಾನೆ. ಮೇರುಪರ್ವತ ಚಲಿಸಲು ಸಾಧ್ಯವಿಲ್ಲ. ಅದು ಚಲಿಸುವುದೆಂದರೆ ಯುಗದ ಕೊನೆಯಲ್ಲಿ ಮಾತ್ರ. ಅಂತೆಯೇ ನಮ್ಮ ರಾಜನು ಧೈರ್ಯ ಕಳೆದುಕೊಂಡವನಲ್ಲ. ಆದರೆ ಪುತ್ರವಿರಹದ ಶೋಕವು ಅವನ ಧೈರ್ಯವನ್ನು ಕಸಿದಿದೆ. ಅಪ್ರಮೇಯವಾದ ಅಂದರೆ ಸರಿಸಾಟಿಯಿಲ್ಲದ ನೀರನ್ನು ಟಿ ಎಂ ಸಿ ಗಳಲ್ಲಿ ಲೆಕ್ಕಹಾಕಲು ಸಾಧ್ಯವಿಲ್ಲದ ಎಂದೂ ಬತ್ತದ ಸಮುದ್ರವು ಬತ್ತುವಂತಿದೆ. ದಶರಥನ ಜೀವನೋತ್ಸಾಹವೆಂಬ ಸಮುದ್ರ ಘೋರಶಾಪಾದಿಗಳ ಅಥವಾ ಘೋರಯುದ್ಧಗಳ ಕಾಲದಲ್ಲೂ ಬತ್ತಿರಲಿಲ್ಲ. ಆ...
💐ಪ್ರತಿಮಾನಾಟಕದ ಒಂದು ಸುಮ💐 *स्वैरं हि पश्यन्तु कलत्रमेतद् बाष्पाकुलाक्षैर्वदनैर्भवन्त: । निर्दोषदृश्या हि भवन्ति नार्यो यज्ञे विवाहे व्यसने वने च ।।* _ರಾಮ- ಸೀತೆಯರು ಅಡವಿಗೆ ಹೋಗುತ್ತಿದ್ದಾರೆ. ಜನರೆಲ್ಲ ದು:ಖದಿಂದ ಅಳುತ್ತಿದ್ದಾರೆ. ಆಗ ರಾಮನ ಮಾತು. ಈವರೆಗೂ ಸರಿಯಾಗಿ ನೋಡದಿದ್ದ ಈ ನನ್ನ ಮಡದಿಯನ್ನು ಕಣ್ಣೀರು ತುಂಬಿದ ನಿಮ್ಮಯ ಕಣ್ಣುಗಳಿಂದ ನೋಡಿರಿ. ನಾನು ಆಕ್ಷೇಪಿಸಲಾರೆ. ( ವಿವಾಹ ಮಿಥಿಲೆಯಲ್ಲಿ ನಡೆದದ್ದು, ಅನಂತರ ಆರತಕ್ಷತೆ ಇತ್ಯಾದಿ ರಾಜಕುಟುಂಬದವರಿಗೆ ಮಾತ್ರ ಪ್ರವೇಶ ಇತ್ತೇ ಹೊರತು ಸಾಮಾನ್ಯರಿಗಲ್ಲ. ಹಾಗಾಗಿ ಸೀತೆಯನ್ನು ಪ್ರಜೆಗಳು ಇಲ್ಲಿಯವರೆಗೆ ಸರಿಯಾಗಿ ನೋಡಿಲ್ಲ. ಅಷ್ಟಾಗಿ ಓಡಾಡುವಾಗ ರಥದಲ್ಲಿ ಹೋಗುತ್ತಿದ್ದಳು ಇದೂ ಕಾರಣ. ಮುಖ್ಯವಾಗಿ ಪರಪತ್ನಿಯರನ್ನು ದಿಟ್ಟಿಸಿ ನೊಡುವ ಸಂಸ್ಕೃತಿ ಆಗಿನ ಕಾಲದಲ್ಲಿ ಇರಲಿಲ್ಲ. ಸ್ತ್ರೀಯರ ಬಗೆಗಿನ ಗೌರವ ಎಲ್ಲರಲ್ಲಿ ಸಹಜವಾಗಿತ್ತು.) ನಿಮಗೆ ನಮ್ಮ ಗಮನವು ಕಣ್ಣೀರನ್ನು ತರುತ್ತಿದೆ. ಆದರೂ ಸೀತೆಯನ್ನು ನೋಡುವ ಕುತೂಹಲ ಇದ್ದರೆ ನೋಡಿಬಿಡಿ. ಗಂಡನಾದ ನಾನೇ ಹೀಗೆ ಹೇಳಬಹುದೇ ಎಂಬ ಜನರ ಪ್ರಶ್ನೆಗೆ ರಾಮನೇ ಉತ್ತರಿಸುತ್ತಿದ್ದಾನೆ. ನಾಲ್ಕು ಸಂದರ್ಭಗಳಲ್ಲಿ ಪರಸ್ತ್ರೀಯರನ್ನು ನೋಡಬಹುದು. ಅದು ದೋಷಕಾರಣವಲ್ಲ. ಯಜ್ಞದಲ್ಲಿ ಸಹಧರ್ಮಿಣಿಯಾಗಿ ಪಾಲ್ಗೊಂಡಾಗ, ವಿವಾಹಮಂಟಪದಲ್ಲಿ, ಆಪತ್ತಿಗೆ ಒಳಗಾದಾಗ, ವನಕ್ಕೆ ಹೊರಟಾಗ ಅಥವಾ ವನದಲ್ಲಿ ಅದು ದೋಷ ತಂದುಕೊಡುವುದಿ...
🌹ಶಾಕುಂತಲದ ಒಂದು ಸುಂದರ ಸುಮ🌹 *व्यपदेशमाविलयितुं किमीहसे जनमिमं च पातयितुम् । कूलंकषेव सिन्धु: प्रसन्नमम्भस्तटतरुं च ।।* _ಶಕುಂತಲೆ ದುಷ್ಯಂತನನ್ನು ನಿಂದಿಸುತ್ತಾಳೆ. ಮುಗ್ಧ ಮನದ ಮಾನಿನಿಗೆ ಮಾತು ಕೊಟ್ಟು ವಂಚಿಸಿದೆ  ಎಂದೆಲ್ಲಾ ಹೇಳಿದಾಗ ರಾಜನಾಡುವ ಮಾತು. ಇಂತಹ ಕೆಟ್ಟ ಮಾತುಗಳನ್ನು ನಾನು ಕೇಳಲಾರೆ. ನಿನ್ನ ಈ ವರ್ತನೆ ನಿನ್ನ ಕುಲಕ್ಕೆ ಕಳಂಕ ತರಲೂ ಮತ್ತು ನನ್ನನ್ನು ಕೀರ್ತಿಯ ಪರ್ವತದ ಶಿಖರದಿಂದ ಕೆಳಗೆ ನೂಕಲು ಸಮರ್ಥವಾಗಿದೆ. ಇದು ಹೇಗೆಂದರೆ ದಡವನ್ನು ನಿಧಾನವಾಗಿ ಕೊರೆಯುವ ನದಿಯು ತಿಳಿಯಾದ ನೀರನ್ನು ಕೆಸರು ಮಾಡಲೂ , ದಂಡೆಯ ಮರವನ್ನು ಕೆಡವಲೂ ಪ್ರಯತ್ನಿಸುವಂತಿದೆ ನಿನ್ನ ಪ್ರಯತ್ನ. ಏಕೆ ನಿನಗೆ ಇಂತಹ ಹುಚ್ಚು ಪ್ರಯತ್ನ? ದಡದೊಂದಿಗೆ ಸಂಘರ್ಷ ಮಾಡುವ ನದಿಯು ನದಿಯ ನೀರನ್ನು ಕಲುಷಗೊಳಿಸಿ, ಬಾನೆತ್ತರಕ್ಕೆ ಬೆಳೆದ ಮರವನ್ನು ಕೆಡಹಲು ಪ್ರಯತ್ನಿಸುತ್ತದೆ. ನೀನು ಕೂಡ ನದಿಯಂತೆಯೇ ಮಾಡುತ್ತಿರುವೆ. ಜನರು ಯಾವುದರಿಂದ ವ್ಯವಹರಿಸುವರೊ ಅದು ಕುಲವೆಂದು ಕರೆಯಲ್ಪಡುತ್ತದೆ. ಅಂತಹ ಕುಲಕ್ಕೆ ಕಳಂಕ ತರುವ ಪ್ರಯತ್ನ ನಡೆಸುತ್ತಿರುವೆಯಲ್ಲ! ಬರಿದೆ ನನ್ನ ಕುಲ ಮಾತ್ರವಲ್ಲ ಇಂತಹ ಸ್ವೇಚ್ಛೆಯಾಗಿ ಬದುಕುವ ಹೆಣ್ಣನ್ನು ಹೆತ್ತ ನಿನ್ನ ಕುಲದ ಮರ್ಯಾದೆಯನ್ನು ನಿನ್ನ ಮಾತುಗಳಿಂದ ಕಳೆಯುತ್ತಿರುವೆ. ನನ್ನ ಮನವು ಹಾಗೂ ಆಚಾರ ನಿರ್ಮಲವಾಗಿದೆ ನದಿಯ ನಿರ್ಮಲ ಜಲದಂತೆ. ನೀನು ಪ್ರವಾಹರೂಪದಲ್ಲಿ ಬಂದು ಅದನ್ನು ಕೆಡಿಸುತ್ತಿರುವ...
🌹ಶಾಕುಂತಲದ ಒಂದು ಸೌರಭ 🌹 *कृताभिमर्षामनुमन्यमान: सुता त्वया नाम मुनिर्विमान्य: । मुष्टं प्रतिग्राहयता स्वमर्थं पात्रीकृतो दस्युरिवासि येन ।।* _ದುಷ್ಯಂತ ಶಕುಂತಲೆಯನ್ನು ವರಿಸಿರುವುದನ್ನು ಒಪ್ಪುತ್ತಿಲ್ಲ. ಈ ಸಂದರ್ಭದಲ್ಲಿ ಸಿಟ್ಟುಗೊಂಡ ಶಾರ್ಙರವನಾಡುವ ಮಾತು. ನಿನ್ನಿಂದ ಆಕ್ರಮಿಸಲ್ಪಟ್ಟ ತನ್ನ ಮಗಳನ್ನು ಕ್ಷಮಿಸಿದ ಕಣ್ವ ಮುನಿಯು ಹೀಗೆ ಅವಮಾನಿಸಲ್ಪಡುತ್ತಿದ್ದಾನೆ. ನೀವಿಬ್ಬರೂ ಯಾರಿಗೂ ತಿಳಿಸದೇ ನಿಮ್ಮಷ್ಟಕ್ಕೆ ಸಂಬಂಧ ಮಾಡಿಕೊಂಡರೂ ಸಿಟ್ಟು ಮಾಡಿಕೊಂಡು ರಂಪ ಮಾಡದೇ ಇಬ್ಬರನ್ನು ಕಣ್ವರು ಕ್ಷಮಿಸಿದರು. ಆದರೆ ಈಗ ಇವಳನ್ನು ತಿರಸ್ಕರಿಸುವ ಮಾತನಾಡುತ್ತಿರುವ ನೀನು ಅವರ ಕ್ಷಮೆಗೆ ಅರ್ಹನಾಗದೇ ಅವರನ್ನು ಅವಮಾನ ಮಾಡುತ್ತಿರುವೆ. ಇದು ಹೇಗೆಂದರೆ ಮುನಿಯು ಕದ್ದು ತೆಗೆದುಕೊಂಡ ವಸ್ತುವನ್ನು ಕಳ್ಳನಿಗೇ ದಾನ ಕೊಟ್ಟು ಅವನನ್ನೇ ದಾನಕ್ಕೆ ಪಾತ್ರನನ್ನಾಗಿಸಿದ್ದಾನೆ. ನಿಜವಾಗಿಯಾದರೆ ಕಳ್ಳತನಕ್ಕೆ ಶಿಕ್ಷೆ ವಿಧಿಸಬೇಕಿತ್ತು. ಆದರೆ ಕರುಣಾಮಯಿ ಮಹರ್ಷಿ ಮಗಳ ಮೈಮನಗಳನ್ನು ಸೂರೆಗೊಂಡ ನಿನ್ನನ್ನು ಉದಾರವಾಗಿ ಕ್ಷಮಿಸಿ ಮತ್ತೆ ನಿನಗೇ ಮಗಳನ್ನು ಧಾರೆಯೆರೆದು ಕೊಡುತ್ತಿರುವನು. ಆದರೆ ನೀನು ಅವರ ಕ್ಷಮಾಗುಣವನ್ನು ದುರುಪಯೋಗ ಮಾಡಿಕೊಂಡು ಇವಳನ್ನು ತಿರಸ್ಕರಿಸುವ ಮೂಲಕ ಅವರಿಗೆ ಅವರ ಸಾಮರ್ಥ್ಯಕ್ಕೆ ಅವಮಾನ ಮಾಡುತ್ತಿರುವೆ. ಹೀಗೆ ನೀನು ಮಾಡುತ್ತಿರುವುದು ಸರಿಯೇ? ಲೋಕದಲ್ಲಿ ಕಳ್ಳನಿಗೇ ಕದ್ದ ವಸ್ತುಗಳನ್ನು ದಾನವಾಗಿ ಯಾರ...