ಧರ್ಮಾಚರಣೆ ೧೦೬

ಧರ್ಮಾಚರಣೆ-೧೦೬

ಜಾತ್ಯುತ್ಕರ್ಷೋ ಯುಗೇ ಜ್ಞೇಯಃ ಪಂಚಮೇ ಸಪ್ತಮೇ ಪಿ ವಾ | ವ್ಯತ್ಯಯೇ ಕರ್ಮಣಾಂ ಸಾಮ್ಯಂ ಪೂರ್ವವಚ್ಚಾಧರೋತ್ತರಮ್ || ಯಾಜ್ಞವಲ್ಕ್ಯ ಸ್ಮೃತಿ||

ಸನಾತನ ಧರ್ಮದಲ್ಲಿ ಹಿಂದೆಯೂ ವರ್ಣಗಳ ವ್ಯತ್ಯಾಸದ ಕಾರಣದಿಂದ ಬೇರೆ ಬೇರೆ ಜಾತಿಗಳು ಉಂಟಾಗುತ್ತಿದ್ದವು. ಅಂತಹ ಜಾತಿಯ ಎಲ್ಲರಿಗೂ ಉಚ್ಚ ಜಾತಿಯನ್ನು ಪಡೆಯಲೂ ಅವಕಾಶ ಇತ್ತು. ಸಾಂಕರ್ಯದಿಂದ ಹುಟ್ಟಿದ ಮಗುವನ್ನು ಉಚ್ಚ ವರ್ಣದ  ಪುರುಷರು ಏಳು ತಲೆಗಳ ತನಕ,ಅಥವಾ ಐದು ತಲೆಗಳ ತನಕ, ಅಥವಾ ಆರು ತಲೆಗಳ ತನಕ  ವರಿಸಿದರೆ ಅವರೂ ಅದೇ ವರ್ಣದವರಾಗುತ್ತಿದ್ದರು.ಒಂದು ವೇಳೆ ಬೇರೆ ಸಂಸ್ಕಾರ ಪಡೆದಿದ್ದರೂ ಕಾಲಾನುಕ್ರಮದಲ್ಲಿ ಅದೇ ವರ್ಣದ ಸಂಸ್ಕಾರ ನೆಲೆನಿಂತು ವ್ಯವಹಾರಕ್ಕೆ ಸುಲಭವಾಗುತ್ತಿತ್ತು. ವೃತ್ತಿಯಲ್ಲೂ ಇದೇ ನೀತಿ ಅನ್ವಯ. ಜೀವನ ಸಾಗದಿದ್ದಾಗ ಯಾವ ವೃತ್ತಿ ಆಶ್ರಯಿಸಿದರೂ ದೋಷವಿಲ್ಲ. ಸುಖವಾಗಿದ್ದಾಗಲೂ   ಮುಂದುವರಿಸಿದರೆ ಆಯಾ ವರ್ಣಕ್ಕೆ ಕ್ರಮವಾಗಿ ಏಳು-ಆರು-ಐದು ತಲೆಯ ನಂತರ ಪರಿವರ್ತನೆ ಹೊಂದುವರು. ಹೀಗೆ ವ್ಯತ್ಯಾಸ ಎನ್ನುವುದು ನಾಲ್ಕು ವರ್ಣದವರಿಗೂ ಸರ್ವಸಾಮಾನ್ಯ ಸಂಗತಿ ಆಗಿತ್ತು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩