ಪೋಸ್ಟ್‌ಗಳು

ಮಾರ್ಚ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 📗🌾 ಭಾಗ-೧೧ *ದದ್ಯಾನ್ನ ಪ್ರತಿಗೃಹ್ಣೀಯಾತ್ಸತ್ಯಂ ಬ್ರೂಯಾನ್ನಚಾನೃತಮ್ ಅಪಿ ಜೀವಿತಹೇತೋರ್ವಾ ರಾಮಃ ಸತ್ಯ ಪರಾಕ್ರಮಃ* ರಾಮನ ಬಗೆಗೆ ಸೀತೆಯ ಮಾತು. ನನ್ನ ಪತಿ ಎಂದಿಗೂ ದಾನಕೊಡುತ್ತಾನೆ ಹೊರತು ಸ್ವೀಕರಿಸುವುದಿಲ್ಲ. ( ಕ್ಷತ್ರಿಯರಿಗೆ ದಾನಸ್ವೀಕಾರ ಶಾಸ್ತ್ರದಲ್ಲೂ ನಿಷಿದ್ಧ. ಅವರಿಗೆ ಮೂರೇ ಕರ್ಮಗಳು) ಎಂದಿಗೂ ಸತ್ಯವನ್ನು ಹೇಳುವವನೇ ಹೊರತು ಪ್ರಾಣ ಹೋದರೂ ಅಥವಾ ಅಂತಹ ಸಂದರ್ಭ ಬಂದರೂ ಸುಳ್ಳುಹೇಳಲಾರ. ರಾಮನ ಧರ್ಮನಿಷ್ಠೆ ಎಷ್ಟು ಎಂಬುದು ಸೀತೆಯ ಮಾತಿನಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ. *ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ* ಹನುಮನು ಜನಕಾತ್ಮಜೆಗೆ ನುಡಿಯುವ ವಚನ. ಸೀತೆ, ಸಾವೊಂದೇ ಸಮಸ್ಯೆಗಳಿಗೆ ಪರಾಹಾರವಲ್ಲ. ಸತ್ತು ಸಾಧಿಸುವುದಾದರೂ ಏನು? ಈಸಬೇಕು ಇದ್ದು ಜೈಸಬೇಕು ಎಂದಿದ್ದಾರೆ ಹಿರಿಯರು. ಬದುಕಿರುವ ಮನುಷ್ಯನಿಗೆ ನೂರು ವರ್ಷ ಕಳೆದ ಮೇಲಾದರೂ ಆನಂದ ಲಭಿಸಿಯೇ ತೀರುವುದು. ದೇಹದಲ್ಲಿ ಜೀವವೊಂದಿದ್ದರೆ ಇಂದಲ್ಲ ನಾಳೆ ಆನಂದದ ಕ್ಷಣಗಳನ್ನು ಕಾಣಬಹುದು. ಆದರೆ ಜೀವವೇ ಇಲ್ಲದಿದ್ದರೆ ಅದು ಸಾಧ್ಯವೇ? ಹಾಗಾಗಿ ನೂರು ವರ್ಷವಾದರೂ ದೇವನ ಅನುಗ್ರಹಕ್ಕಾಗಿ ಕಾಯಬೇಕೇ ಹೊರತು ಕೊರಗಬಾರದು. *ಐಶ್ವರ್ಯೇ ವಾ ಸುವಿಸ್ತೀರ್ಣೇ ವ್ಯಸನೇ ವಾ ಸುದಾರುಣೇ ರಜ್ವೇವ ಪುರುಷಂ ಬದ್ಧ್ವಾ ಕೃತಾಂತಃ ಪರಿಕರ್ಷತಿ* ಹನುಮನ ಮಾತು. ಮನುಷ್ಯನು ಅಪಾರವಾದ ಐಶ್ವರ್ಯದಲ್ಲಿ ಮುಳುಗಿಹೋಗಿರಲಿ, ಅತಿದಾರುಣವಾದ ವ...
🌺 ಪ್ರತಿಮಾನಾಟಕದ ಒಂದು ಕುಸುಮ 🌺 *अत्र रामश्च सीता च लक्ष्मणश्च महायशा: । सत्यं शीलं च भक्तिश्च येषु विग्रहवान् स्थिता ।।* _ಭರತ ರಾಮನ ಪರ್ಣಕುಟೀರ ಪ್ರವೇಶಿಸಿದ್ದಾನೆ. ತನ್ನ ತಾಯಿಯ ಪ್ರೀತಿಗೊಸ್ಕರ ರಾಜ್ಯಲಕ್ಷ್ಮಿಯನ್ನು ತ್ಯಜಿಸಿ ಕಾಡಿಗೆ ಬಂದ ತನ್ನ ಪರಮ ದೈವವಾದ ರಾಮನನ್ನು ನೋಡಲು ಅತಿಯಾದ ಕುತೂಹಲ. ಬಹಳ ದಿನಗಳಾಗಿದೆ ಅಣ್ಣ ಅತ್ತಿಗೆ ತಮ್ಮನನ್ನು ನೋಡಿ. ಆಗ ಸುಮಂತ್ರ ಅವರನ್ನು ತೋರಿಸಿಕೊಡುತ್ತಿರುವನು. ಇಲ್ಲೇ ಇದ್ದಾರೆ ಇವರು. ಸೀತಾರಾಮಲಕ್ಷ್ಮಣರು. ಬಹು ಕೀರ್ತಿವಂತರು. ಅಷ್ಟೇ ಅಲ್ಲ. ಸತ್ಯ ಶೀಲ ಭಕ್ತಿ ಮೂರು ಒಂದೆಡೆ ಸೇರಿದಂತಾಯಿತು. ಎಷ್ಟು ಸುಂದರ ಮಾತು ಭಾಸನದು. ಸತ್ಯದ ಪ್ರತೀಕ ಶ್ರೀರಾಮ. ಅವನೆಂದೂ ಸತ್ಯಮಾತಿಗೆ ತಪ್ಪಿ ನಡೆದವನಲ್ಲ ನಡೆಯುವವನೂ ಅಲ್ಲ. ಸೀತೆ ಸನ್ನಡತೆಯ ಸಂಕೇತ. ಪತಿ ಕಷ್ಟ ಅನುಭವಿಸುವಾಗ ತಾನು ರಾಜಭೋಗ ಅನುಭವಿಸುವುದು ಹೇಗೆಂಬ ಯೋಚನೆಯಿಂದ ಪತಿಯನ್ನೇ ಕಾಡಿನಲ್ಲೂ ಹಿಂಬಾಲಿಸಿದವಳು. ತನ್ನ ಮಾತು ಕೃತಿಗಳಲ್ಲಿ ಎಳ್ಳಷ್ಟೂ ಕುಂದುಂಟಾಗದಂತೆ ವರ್ತಿಸಿದ ಮಾತೆ ಅವಳು. ಇನ್ನು ಲಕ್ಷ್ಮಣ. ಭಕ್ತಿ ಹೇಗೆ ಮಾಡಬೇಕು, ಯಾರಲ್ಲಿ ಭಕ್ತಿ ಮಾಡಬೇಕು ಎಂಬುದನ್ನು ತನ್ನ ಕೃತಿಯ ಮೂಲಕ ತೋರಿಸಿಕೊಟ್ಟ ಮಹಾತ್ಮ. ರಾಮನ ಮೇಲಿನ ಅತಿಯಾದ ಭಕ್ತಿಯು ಅವನಿಗೆ ಭರತನನ್ನೇ ಸಂಶಯಿಸುವಂತೆ ಮಾಡಿದೆ.( ಭರತ ಕಾಡಿಗೆ ಬರುವಾಗ ) ಅಂತಹ ನಿಷ್ಕಲಂಕ ಕಾಮನೆಯಿಲ್ಲದ ಭಕ್ತಿ. ರಾಮನ ಭಕ್ತಿಯಿಂದ ಮೇಲ್ನೋಟಕ್ಕೆ ಕಾಣುವ ಯಾವ ಪ್ರ...
🌹 ಮೇಘದೂತದ ಒಂದು ಸಾಲು 🌹 *तस्माद्गच्छेरनुकनखलं शैलराजावतीर्णां जह्नो कन्यां सगरतनयस्वर्गसोपानपङ्तिम् । गौरीवक्त्रभ्रुकुटिरचनां या विहस्येव फेनै: शम्भो: केशग्रहणमकरोदिन्दुलग्नोर्मिहस्ता ।।* _ಹೇ ಸಖನೇ, ಆ ಕುರುಕ್ಷೇತ್ರವನ್ನು ದಾಟಿ ಕನಖಲವೆಂಬ ಪರ್ವತದ ಸಮೀಪದಲ್ಲಿ ಹಿಮಾಲಯದಿಂದ ಹರಿದು ಬಂದಿರುವ, ಸಗರನ ಮಕ್ಕಳ ಸ್ವರ್ಗದ ಗಮನಕ್ಕೆ ಮೆಟ್ಟಿಲಾದ ಜಹ್ನುವಿನ ಮಗಳಾದ ಗಂಗೆಯನ್ನು ಸೇವಿಸು. ಸಗರನ ಪುತ್ರರ ಪಾಪ ಕಳೆದು ಮುಕ್ತಿ ಕೊಡಿಸಿದ ಪುನೀತೆ ಅವಳು. ಅಷ್ಟೇ ಅಲ್ಲ ಜಹ್ನುವಿನ ಆಶ್ರಮ ಮುಳುಗಿಸಲು ಹೋಗಿ ತಾನೇ ಅವನಲ್ಲಿ ಮುಳುಗಿ ಮಗಳಾಗಿ ಬಂದ ಧೀರೆ. ಅವಳ ನೀರನ್ನು ತುಂಬಿಸಿಕೊಂಡರೆ ನೀನು ಪುನೀತನಾದಂತೆ ಆಗುವುದು. ಆ ಗಂಗೆ ಸಾಮಾನ್ಯಳಲ್ಲ. ಈಶ್ವರನನ್ನು ಆಶ್ರಯಿಸಿ ಪಾರ್ವತಿಗೆ ಅಸೂಯೆ ಉಂಟುಮಾಡಿ ಅವಳ ಹುಬ್ಬುಗಂಟುವೆಕೆಯನ್ನು ಅಣಕಿಸಲೆಂಬಂತೆ ತನ್ನ ಬಿಳಿಯ ನೊರೆಗಳೆಂಬ ನಗುವಿನಿಂದ ಅಟ್ಟಹಾಸಗೈಯುತ್ತಾ ಅಲೆಗಳನ್ನು ಚಂದ್ರನಿರುವ ಶಿವನ ತಲೆಯ ಮೇಲ್ಭಾಗದವರೆಗೆ ಕುಣಿಸುತ್ತಾ ಅವನ ಜುಟ್ಟು ತನ್ನ ಕೈಯಲ್ಲಿರುವಂತೆ ಶಿವೆಗೆ ಕಾಣುವ ರೀತಿಯ ವೈಯ್ಯಾರಮಿಶ್ರಿತ ನಡೆ ಅವಳದು. ಅಂತಹ ಶಿವನನ್ನು ಆಶ್ರಯಿಸಿದ ತನ್ಮೂಲಕ ಪಾಪವನ್ನು ತೊಳೆಯುವ ಗಂಗೆಯಲ್ಲಿ ಮುಳುಗು ಹಾಕು. ಭಗೀರಥನ ಕೋರಿಕೆಯಂತೆ ಶಿವನು ಗಂಗೆಯ ಮುಕ್ಕಾಲು ಪ್ರವಾಹವನ್ನು ತನ್ನ ಜಟೆಯಲ್ಲಿ ಬಂಧಿಸಿ ಸ್ವಲ್ಪ ಮಾತ್ರ ಬಿಟ್ಟನು. ಹೀಗೆ ಗಂಗೆ ಶಿವನ ತಲೆ ಮೇಲೆ ಸ...
🌺 ಪ್ರತಿಮಾ ನಾಟಕದ ಒಂದು ಸುರಭಿ 🌺 *दैत्येन्द्रमानमथनस्य नृपस्य पुत्रो यज्ञेपयुक्तविभवस्य नृपस्य पौत्र: । भ्राता पितु: प्रियकरस्य जगत्प्रियस्य रामस्य रामसदृशेन पथा प्रयाति ।।* _ಸುಮಂತ್ರನು ಭರತನ ಬಗೆಗೆ ಆಡುವ ಮಾತಿದು. ಈ ಭರತ ಎಂತಹವನೆಂದರೆ, ರಾಕ್ಷಸಶ್ರೇಷ್ಠರ ಅಹಂಕಾರವನ್ನು ಸದೆಬಡಿದ ದಶರಥನ ಮಗನಿವನು. ಹಿಂದೆ ದೇವಾಸುರ ಯುದ್ಧದಲ್ಲಿ ಇಂದ್ರನಿಗೆ ಸಹಾಯಕನಾಗಿ ದಶರಥ ಹೋರಾಡಿ ಗೆಲುವು ಪಡೆದಿದ್ದ. ಕೈಕೇಯಿ ವರ ಪಡೆದದ್ದು ಅದೇ ಕಾಲದಲ್ಲಿ. ಇನ್ನು ಯಜ್ಞ ರಕ್ಷಣೆಯನ್ನೇ ಉಸಿರಾಗಿಸಿಕೊಂಡು ತನ್ನ ಸಂಪತ್ತನ್ನೆಲ್ಲ ಯಜ್ಞಗಳಿಗೆ ವಿನಿಯೋಗಿಸಿದ ಅಜನ ಮೊಮ್ಮಗನಿವನು. ಅಜನು ತನಗಾಗಿ ಯಾವ ಸಂಪತ್ತನ್ನೂ ಬಳಸದೇ ಯಜ್ಞಗಳಿಗಾಗಿಯೇ ವಿನಿಯೋಗಿಸಿ ಕೃತಾರ್ಥನಾದನು. ಇನ್ನು ತಂದೆಯ ಮಾತನ್ನು ಮೀರದೇ ಗುರುಹಿರಿಯರಲ್ಲಿ ತೋರಬೇಕಾದ ವರ್ತನೆಯನ್ನು ಸ್ವತಃ ತೋರಿಸಿಕೊಟ್ಟ  ಜಗದ ಜನರ ಜೀವವೆನಿಸಿದ ಶ್ರೀರಾಮನ ಸಹೋದರನಿವನು. ಅಂತಹ ಭರತ ಹಿರಿಯರು ಹಾಕಿಕೊಟ್ಟ ಸನ್ಮಾರ್ಗ ಬಿಡದೆ ರಾಮನು ಯಾವ ಧರ್ಮ ಮಾರ್ಗದಲ್ಲಿ ನಡೆತುತ್ತಿದ್ದನೊ ಅದೇ ದಾರಿಯಲ್ಲಿ ಸಾಗುತ್ತಿದ್ದಾನೆ. ತಂದೆ ಅಜ್ಜ ಅಣ್ಣ ಯಾವ ಧರ್ಮವನ್ನು ಅನುಸರಿಸಿದರೋ ಅದೇ ಧರ್ಮ ಅನುಸರಿಸಿ ಹೆಜ್ಜೆ ಇಡುತ್ತಿರುವನು ಭರತ. ಇಲ್ಲಿ ಭರತನ ಅಧಿಕಾರದ ಆಸೆ ಇಲ್ಲದ ಬಂಧು ಪ್ರೀತಿ ಬಿಡದ ಶುದ್ಧ ಮನವನ್ನು ಕವಿ ವರ್ಣಿಸಿದ್ದಾನೆ. ಭರತನಂತೆ ತ್ಯಾಗಶೀಲನಾಗುವುದು ನಿಜಕ್ಕೂ ಕಷ್ಟ._ ?...
🌾📗ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು📗🌾 ಭಾಗ-೮ *ಸರ್ವತ್ರಾತಿಕೃತಂ ಭದ್ರೇ ವ್ಯಸನಾಯ ಉಪಕಲ್ಪತೇ* ಸೀತೆಗೆ ರಾಕ್ಷಸಿಯರು ನುಡಿಯುವ ಮಾತು. ನೀನು ಪತಿಯ ಮೇಲೆ ತೋರುವ ಅತಿಯಾದ ಪ್ರೀತಿಯೇ ನಿನ್ನ ದುಃಖಕ್ಕೆ ಕಾರಣವಾಗುವುದು. ಪತ್ನಿ ಪತಿಯರಲ್ಲಿ ಪರಸ್ಪರ ಎಷ್ಟು ಪ್ರೀತಿ ಇದ್ದರೂ ಅದು ಅತಿಯಾಗಲಾರದು. ಹಾಗಾಗಿ ಸೀತೆಗೆ ಈ ಮಾತು ಅನ್ವಯಿಸಲಾರದು.ನಮಗೆ ಬೇಕಾದಷ್ಟು ಅನ್ವಯಿಸುವುದು. ಎಲ್ಲೆಡೆ ಅತಿನಿದ್ರೆ ಅತಿಕಾಮ ಅತಿಸೇವನೆ( ತಿನ್ನುವುದು,ಕುಡಿಯುವುದು) ಅತಿ ವಿನಯ ಮುಂತಾದವುಗಳು ಒಳ್ಳೆಯದಲ್ಲ. ಅವೆಲ್ಲ ವ್ಯಸನಕ್ಕೆ ಕಾರಣವಾಗುವುದು. ಕನ್ನಡದ ವ್ಯಸನ ಅಲ್ಲ ದುಃಖ ಎಂಬ ಅರ್ಥದ ವ್ಯಸನ. *ಅತಿ ಸರ್ವತ್ರ ವರ್ಜಯೇತ್, ಅತಿ ವಿನಯಂ ಧೂರ್ತ ಲಕ್ಷಣಮ್*ಇತ್ಯಾದಿ ಮಾತುಗಳು ಇದನ್ನೇ ಪುಷ್ಟೀಕರಿಸುತ್ತವೆ. ಅತಿಯಾದ ಧರ್ಮಪ್ರೀತಿಯೇ ಇಂದಿನ ಭಯೋತ್ಪಾದನೆಗೆ ಮೂಲ ಕಾರಣ. *ದೃಶ್ಯಮಾನೇ ಭವೇತ್ಪ್ರೀತಿಃ ಸೌಹೃದಂ ನಾಸ್ತ್ಯಪಶ್ಯತಃ ನಾಶಯಂತಿ ಕೃತಘ್ನಾಸ್ತು ನ ರಾಮೋ ನಾಶಯಿಷ್ಯತಿ* ಸಾಮಾನ್ಯವಾಗಿ ಲೋಕದಲ್ಲಿ ಕಣ್ಣೆದುರಿನ ವಸ್ತು ಅಥವಾ ವ್ಯಕ್ತಿಯ ಮೇಲೆ ಪ್ರೀತಿ ಸದಾ ಇರುವುದು. ಬಹಳ ಕಾಲ ನೋಡದೇ ಇದ್ದರೆ ಸೌಹಾರ್ದ ಕ್ಷೀಣಿಸುತ್ತದೆ. ಹಾಗಂತ ಬಹಳ ಕಾಲ ನೋಡದಿದ್ದ ಮಾತ್ರಕ್ಕೆ ಪ್ರೀತಿಯಾಗಲೀ ಸೌಹಾರ್ದವಾಗಲೀ ಇರಲೇಬಾರದೆಂದಲ್ಲ. ಕೃತಘ್ನರು ( ಸಹಾಯವನ್ನು ಮರೆಯುವವರು) ಕಾಲ ಗತಿಸಿದಂತೆ ಪ್ರೀತಿಯನ್ನು ಸೌಜಾರ್ದವನ್ನು ಮರೆತುಬಿಡುತ್ತಾರೆ. ಆದರೆ ರಾಮನ ಸ್ವಭಾವ...
🌹ಮೇಘದೂತದ ಒಂದು ಬಿಂದು 🌹 *गम्भीराया: पयसि सरितश्चेतसीव प्रसन्ने छायात्मापि प्रकृतिसुभगो लप्स्यते ते प्रवेशम् । तस्मादस्या: कुमुदविशदान्यर्हसि त्वं न धैर्यात् मोघीकर्तुं चटुलशफरोद्वर्तनप्रेक्षितानि ।।* _ಗೆಳೆಯಾ, ನೀನು ಮುಂದೆ ಹೋದಂತೆ ಗಂಭೀರಾ ಎಂಬ ನದಿ ಸಿಗುವಳು. ಅವಳ ಮನಸ್ಸಿನಂತೆ ಸ್ವಚ್ಛವಾಗಿರುವ ನೀರಿನಲ್ಲಿ ನಿನ್ನ ಪ್ರತಿಬಿಂಬ ಬಿದ್ದು ಅವಳಿಂದ ಆಕರ್ಷಿಸಲ್ಪಡುವೆ. ನೀನೇನೂ ಕಡಿಮೆಯವನಲ್ಲ. ಸ್ವಭಾವ ಸುಂದರ ನಿನ್ನ ರೂಪ. ಅದು ತನ್ನಲ್ಲಿ ಪ್ರತಿಬಿಂಬಿತವಾದಾಗ ಅವಳ ಮನದಲ್ಲಿ ಸ್ಥಾನ ಪಡೆಯುವೆ. ನದಿಯ ಮೇಲೆ ಮೋಡವೊಂದು ಹಾದುಹೋಗುವ ದೃಶ್ಯವನ್ನೇ ಕವಿ ಹೀಗೆ ವರ್ಣಿಸಿದ್ದಾನೆ. ಆ ನದಿಯಲ್ಲಿ ನೀರಿನ ಪ್ರವಾಹದಲ್ಲಿ ಏಳುವ ಬೆಳ್ಳಗಿನ ನೊರೆಗಳು ಆಕೆಯ ವಾರೆನೋಟದಂತೆ ನಿನ್ನನ್ನೇ ದಿಟ್ಟಿಸುವವು. ಅರಳಿದ ಕುಮುದಗಳು ಅವಳ ಮುಖಕಮಲದಂತೆ. ನಿನ್ನ ಆಗಮನದಿಂದ ಅವಳ ಮುಖಕಮಲ ಅರಳಿದೆ. ಅಲ್ಲಲ್ಲಿ ಸುಳಿದಾಡುವ ಚಂಚಲವಾದ ಮೀನುಗಳ ಹೊರಳಾಟ ಅವಳ ಅಂಗಾಗಗಳ ವೈಯ್ಯಾರದಂತೆ ಕಾಣುವುದು. ಸೊಂಟ ಕುಣಿಸುವಂತೆ ಅಥವಾ ನಿಧಾನದ ನಡಿಗೆಯಂತೆ ಮೀನುಗಳ ಓಡಾಟ. ಇಷ್ಟೆಲ್ಲ ರೀತಿಯಲ್ಲಿ ನಿನ್ನನ್ನು ಆಕರ್ಷಿಸುವ ಅವಳನ್ನು ಸೇರಿ ಮುಂದುವರೆ. ಅವಳ ಬಯಕೆಯನ್ನು ವಿಫಲಗೊಳಿಸದೇ ಮಿಂದು ನೀನು ಸುಖಿಯಾಗು. ಉತ್ತಮ ನಾಯಿಕೆಯೊಬ್ಬಳು ಅನಾಮಿಕನನ್ನು ಪ್ರೇಮಿಸಿ ಸಫಲಳಾಗುವಂತೆ ಆ ನದಿಯ ಅಥವಾ ಅವಳ ಪ್ರೇಮಕಟಾಕ್ಷ ನಿನ್ನಲ್ಲಿ ವ್ಯರ್ಥವಾಗದೆ ...
🌺 ಪ್ರತಿಮಾನಾಟಕದ ಒಂದು ಸುಮ 🌺 *स्वर्गं गते नरपतौ सुकृतानुयात्रे पौराश्रुपातसलिलैरनुगम्यमान: ।  द्रष्टुं प्रयाम्यकृपणेषु तपोवनेषु रामाभिधानमपरं जगत: शशाङ्कम् ।।* _ಭರತ ಸುಮಂತ್ರನೊಡಗೂಡಿ ಅರಣ್ಯಕ್ಕೆ ರಾಮನನ್ನು ಕರೆತರಲು ಅರಣ್ಯಕ್ಕೆ ತೆರಳಿದ್ದಾನೆ. ಆ ಸಮಯದಲ್ಲಿ ಸುಮಂತ್ರನೊಡನೆ ಭರತನಾಡುವ ಮಾತು. ತಂದೆಯು ತನ್ನ ಪುಣ್ಯ ಫಲದ ಬಲದಿಂದ ಸ್ವರ್ಗವನ್ನು ಹೊಂದಿದ. ನಾನಾದರೋ ಪೌರರ ಕಣ್ಣೀರಧಾರೆಯನ್ನು ಅನುಸರಿಸಿದವನಾಗಿ( ಭರತನು ರಾಜ್ಯಕ್ಕೆ ಹಿಂತಿರುಗಿದಾಗ ರಾಜನನ್ನು ಕಳೆದುಕೊಂಡ ಪ್ರಜೆಗಳ ಆರ್ತನಾದವೇ ಅವನನ್ನು ಸ್ವಾಗತಿಸಿದ್ದು) ಉದಾರವಾದ ರಮಣೀಯವಾದ ತಪೋವನದಲ್ಲಿ ರಾಮನೆಂಬ ಜಗದ ಚಂದಿರನನ್ನು ನೋಡಲು ತೆರಳುತ್ತಿರುವೆನು. ದಶರಥನ ಮರಣವು ರಾಮನ ಗಮನವು ಅಯೋಧ್ಯೆಯ ಜನರ ಹಾಗೂ ಭರತನ ಚಿಂತೆಯನ್ನು ದುಃಖವನ್ನು ಹೆಚ್ಚಿಸಿದೆ. ತಂದೆ ತನ್ನ ಪುಣ್ಯದ ಪ್ರಭಾವದಿಂದೇನೋ ಸ್ವರ್ಗವನ್ನೈದ. ಆದರೆ ನಾವೇನು ಮಾಡಬೇಕು? ಹಾಗಾಗಿ ಜಗದ ಜನರ ಮನಕ್ಕೆ ತಂಪು ಕೊಡುವವನು ಒಬ್ಬ ರಾತ್ರಿಯ ಚಂದ್ರ. ಎಷ್ಟು ದುಃಖದಲ್ಲಿದ್ದರೂ ಒಮ್ಮೆ ಚಂದಿರನ ಕಂಡ ಕೂಡಲೇ ಆನಂದವಾಗುವುದು. ಪ್ರಕೃತ ನಮ್ಮ ದುಃಖ ಮರೆಯಲು ರಾಮನೆಂಬ ಚಂದ್ರ ನನ್ನು ದರ್ಶಿಸಬೇಕಾಗಿದೆ. *ಪ್ರಜಾಸುಖತ್ವೇ ಚಂದ್ರಸ್ಯ* ಪ್ರಜೆಗಳಿಗೆ ಸುಖ ಕೊಡುವುದರಲ್ಲಿ ಚಂದ್ರನಂತೆ ಎಂದಿದ್ದಾರೆ ವಾಲ್ಮೀಕಿಗಳು. ಅಂತಹ ಜಗದ  ಜನರ ತಾಪವನ್ನು ಪರಿಹರಿಸುವ ರಾಮನ ದರ್ಶನಕ್ಕೆ ಹೊರಟಿರುವ...
📙 ವೇದ- ಧರ್ಮ ಭಾಗ-೧೪ *ವೇದದ ಬ್ರಾಹ್ಮಣಗಳು* ಅಥರ್ವವೇದದ ಬ್ರಾಹ್ಮಣಗಳು *ಗೋಪಥ ಬ್ರಾಹ್ಮಣ*= ಅಥರ್ವವೇದದ ಪಿಪ್ಪಲಾದ ಶಾಖೆಯ ಏಕೈಕ ಬ್ರಾಹ್ಮಣಗ್ರಂಥ. ಅಥರ್ವವೇದದ ಶೌನಕ ಸಂಹಿತೆಯನ್ನು ಸಾಕ್ಷಾತ್ಕರಿಸಿಕೊಂಡವನು ಗೋಪಥ ಎಂಬ ಮಹರ್ಷಿ. ಅವನ ಹೆಸರಲ್ಲೇ ಈ ಗ್ರಂಥ ಪ್ರಸಿದ್ಧ ಆಗಿದೆ. ಇದರಲ್ಲಿ ಪೂರ್ವ ಗೋಪಥ ಹಾಗೂ ಉತ್ತರ ಗೋಪಥಗಳೆಂಬ ಎರಡು ವಿಭಾಗಗಳಿವೆ. ಪೂರ್ವಗೋಪಥದಲ್ಲಿ ೬ ಪ್ರಪಾಠಕಗಳು, ಉತ್ತರದಲ್ಲಿ ೧೧ಪ್ರಪಾಠಕಗಳು ಇವೆ. ಅಥರ್ವವೇದದ ಪರಿಶಿಷ್ಟದಲ್ಲಿ ಬರುವಂತೆ ಈ ಗ್ರಂಥ ಮೊದಲಿಗೆ ೧೦೦ ಪ್ರಪಾಠಕಗಳನ್ನು ಒಳಗೊಂಡಿತ್ತು. ಅನಂತರ ಕಲಿಯುವವರ ಅಭಾವದಿಂದ ಕೆಲವು ಪ್ರಪಾಠಕಗಳು ಕಾಣೆಯಾದವು ಎನ್ನಬಹುದು. ಪೂರ್ವ ಗೋಪಥದಲ್ಲಿ ಸೃಷ್ಟಿ ಪ್ರಕ್ರಿಯೆಯ ನಿರೂಪಣೆ ಇದೆ. ಪುಷ್ಕರವೆಂಬ ಕ್ಷೇತ್ರದಲ್ಲಿ ಬ್ರಹ್ಮನು ಸೃಷ್ಟಿಯನ್ನು ಪ್ರಾರಂಭಿಸಿದ ಕಥೆ, ಓಂ ಕಾರದ ಮಹಿಮೆಯ ಕಥೆ, ಓಂಕಾರದ ವಿಷಯದಲ್ಲಿ ೩೬ ಪ್ರಶ್ನೆಗಳು ಉತ್ತರಗಳು, ಗಾಯತ್ರೀ ಮಂತ್ರದ ಉಪಯುಕ್ತತೆ, ಆಚಮನದ ಮಹತ್ವ ಇತ್ಯಾದಿ ಅನೇಕ ವಿಷಯಗಳು ಅಧ್ಯಯನಕ್ಕೆ ಉಪಯುಕ್ತವಾಗಿವೆ. ಎರಡನೆಯ ಪ್ರಪಾಠಕದಲ್ಲಿ ಬ್ರಹ್ಮಚರ್ಯದ ಆಚರಣೆ ಅದರ ಫಲ, ಬ್ರಹ್ಮಚಾರಿಯ ಕರ್ತವ್ಯಗಳು, ಯಜ್ಞದಲ್ಲಿ ಪಾಲ್ಗೊಳ್ಳುವ ಹಿಂದೆ ಹೆಸರಿಸಿದ ನಾಲ್ವರ ಕಾರ್ಯದ ಬಗ್ಗೆ ಮಾಹಿತಿ ಇದೆ. ಮೂರನೆಯ ಪ್ರಪಾಠಕದಲ್ಲಿ ವಿವಿಧ ಯಜ್ಞಗಳ ವಿವರಣೆ, ಯಜ್ಞಗಳಲ್ಲಿ ಬ್ರಹ್ಮನ ಸ್ಥಾನಮಾನ, ವ್ರತಗಳು ಭಂಗಗೊಂಡಾಗ ಆಚರಿಸಬೇಕಾದ ಪ್ರಾಯಶ್ಚಿತ್ತ,...
🌹ಮೇಘದೂತದ ಒಂದು ಬಿಂದು 🌹 *गम्भीराया: पयसि सरितश्चेतसीव प्रसन्ने छायात्मापि प्रकृतिसुभगो लप्स्यते ते प्रवेशम् । तस्मादस्या: कुमुदविशदान्यर्हसि त्वं न धैर्यात् मोघीकर्तुं चटुलशफरोद्वर्तनप्रेक्षितानि ।।* _ಗೆಳೆಯಾ, ನೀನು ಮುಂದೆ ಹೋದಂತೆ ಗಂಭೀರಾ ಎಂಬ ನದಿ ಸಿಗುವಳು. ಅವಳ ಮನಸ್ಸಿನಂತೆ ಸ್ವಚ್ಛವಾಗಿರುವ ನೀರಿನಲ್ಲಿ ನಿನ್ನ ಪ್ರತಿಬಿಂಬ ಬಿದ್ದು ಅವಳಿಂದ ಆಕರ್ಷಿಸಲ್ಪಡುವೆ. ನೀನೇನೂ ಕಡಿಮೆಯವನಲ್ಲ. ಸ್ವಭಾವ ಸುಂದರ ನಿನ್ನ ರೂಪ. ಅದು ತನ್ನಲ್ಲಿ ಪ್ರತಿಬಿಂಬಿತವಾದಾಗ ಅವಳ ಮನದಲ್ಲಿ ಸ್ಥಾನ ಪಡೆಯುವೆ. ನದಿಯ ಮೇಲೆ ಮೋಡವೊಂದು ಹಾದುಹೋಗುವ ದೃಶ್ಯವನ್ನೇ ಕವಿ ಹೀಗೆ ವರ್ಣಿಸಿದ್ದಾನೆ. ಆ ನದಿಯಲ್ಲಿ ನೀರಿನ ಪ್ರವಾಹದಲ್ಲಿ ಏಳುವ ಬೆಳ್ಳಗಿನ ನೊರೆಗಳು ಆಕೆಯ ವಾರೆನೋಟದಂತೆ ನಿನ್ನನ್ನೇ ದಿಟ್ಟಿಸುವವು. ಅರಳಿದ ಕುಮುದಗಳು ಅವಳ ಮುಖಕಮಲದಂತೆ. ನಿನ್ನ ಆಗಮನದಿಂದ ಅವಳ ಮುಖಕಮಲ ಅರಳಿದೆ. ಅಲ್ಲಲ್ಲಿ ಸುಳಿದಾಡುವ ಚಂಚಲವಾದ ಮೀನುಗಳ ಹೊರಳಾಟ ಅವಳ ಅಂಗಾಗಗಳ ವೈಯ್ಯಾರದಂತೆ ಕಾಣುವುದು. ಸೊಂಟ ಕುಣಿಸುವಂತೆ ಅಥವಾ ನಿಧಾನದ ನಡಿಗೆಯಂತೆ ಮೀನುಗಳ ಓಡಾಟ. ಇಷ್ಟೆಲ್ಲ ರೀತಿಯಲ್ಲಿ ನಿನ್ನನ್ನು ಆಕರ್ಷಿಸುವ ಅವಳನ್ನು ಸೇರಿ ಮುಂದುವರೆ. ಅವಳ ಬಯಕೆಯನ್ನು ವಿಫಲಗೊಳಿಸದೇ ಮಿಂದು ನೀನು ಸುಖಿಯಾಗು. ಉತ್ತಮ ನಾಯಿಕೆಯೊಬ್ಬಳು ಅನಾಮಿಕನನ್ನು ಪ್ರೇಮಿಸಿ ಸಫಲಳಾಗುವಂತೆ ಆ ನದಿಯ ಅಥವಾ ಅವಳ ಪ್ರೇಮಕಟಾಕ್ಷ ನಿನ್ನಲ್ಲಿ ವ್ಯರ್ಥವಾಗದೆ ...
🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾 ಹಿಂದೆ ಸೂರ್ಯನಿಗೆ ತಪತಿ ಎಂಬ ಮಗಳಿದ್ದಳು. ಅತಿಲೋಕ ಸುಂದರಿಯೂ ಸದಾಚಾರಸಂಪನ್ನಳೂ ಆದ ಅವಳ ವಿವಾಹದ ಬಗ್ಗೆ ಚಿಂತೆಗೀಡಾದನು. ಅದೇ ಸಮಯದಲ್ಲಿ ಋಕ್ಷನ ಮಗನಾದ ಸಂವರಣನೆಂಬುವನು ಲೋಕವನ್ನು ಆಳುತ್ತಿದ್ದ. ಸೇವಾಪರನೂ, ನಿರಹಂಕಾರಿಯೂ ಭಕ್ತಿವಂತನೂ ಸದ್ಗುಣಪೂರ್ಣನೂ ಆಗಿದ್ದನು ಅವನು. ಅವನು ದಿನವೂ ಉದಯಕಾಲದ ಸೂರ್ಯನನ್ನು ದಿನವೂ ಬಹುವಿಧದಲ್ಲಿ ಆರಾಧಿಸುತ್ತಿದ್ದನು. ಪರಾಕ್ರಮಿಯೂ ತೇಜಸ್ವಿಯೂ ಆದ ಅವನನ್ನು ಕಂಡ ರವಿಯು ತನ್ನ ಮಗಳಿಗೆ ಇವನೇ ಸರಿಯಾದ ಪತಿ ಎಂದೆಣಿಸಿದನು. ಒಮ್ಮೆ ಸಂವರಣನು ಬೇಟೆಗೆಂದು ಹೋದಾಗ ಅವನ ಹಯ ದುರದೃಷ್ಟವಶಾತ್ ಸಾಯಲಾಗಿ ರಾಜನು ನಡೆದುಬರುತ್ತಿದ್ದಾಗ ಅರಣ್ಯದಲ್ಲಿ ಸಂಚರಿಸುತ್ತಿದ್ದ ತಪತಿಯನ್ನು ನೋಡಿ  ಅನುರಕ್ತನಾಗುವನು. ಅವಳೂ ಅವನ ಬಗೆಗೆ ಅದೇ ಭಾವನೆ ತಾಳಿದಳು. ಅವಳು ಅನುರಾಗ ತಾಳಿದರೂ ಆ ಕ್ಷಣವೇ  ಗಾಂಧರ್ವ ವಿವಾಹ ಮಾಡಿಕೊಳ್ಳದೇ ತನ್ನ ತಂದೆಯನ್ನು ಕೇಳಿ ವರಿಸುವೆನೆಂದಳು. ಅವನಾದರೋ ಅವಳದೇ ಚಿಂತೆಯಲ್ಲಿ ಮುಳುಗಿದ. ಅನಂತರ ಅವಳನ್ನು ಪಡೆಯಲು ಬಯಸಿ ಸೂರ್ಯನನ್ನು ಆರಾಧಿಸುತ್ತಾ ಒಮ್ಮೆ ತನ್ನ ಕುಲಗುರುಗಳಾದ ವಸಿಷ್ಠರನ್ನು ನೆನಪು ಮಾಡಿಕೊಳ್ಳುತ್ತಾನೆ. ವಸಿಷ್ಠರು ಅವನ ಮನದಿಂಗಿತವನ್ನು ಅರ್ಥೈಸಿಕೊಂಡು ಸೂರ್ಯನ ಬಳಿಗೆ ತೆರಳಿ ತಪತಿಯನ್ನು ಅವನೊಡನೆ ವಿವಾಹ ಮಾಡಿಸುತ್ತಾರೆ. ವಿವಾಹದ ನಂತರ ಆ ರಾಜಶ್ರೇಷ್ಠನು ತನ್ನ ಆಡಳಿತವನ್ನು ಮಂತ್ರಿಗೆ ನಿಯಮಿಸಿ ತಾನು ಹನ...
🌺 ಪ್ರತಿಮಾನಾಟಕದ ಒಂದು ಸುಮ 🌺 *स्वर्गं गते नरपतौ सुकृतानुयात्रे पौराश्रुपातसलिलैरनुगम्यमान: ।  द्रष्टुं प्रयाम्यकृपणेषु तपोवनेषु रामाभिधानमपरं जगत: शशाङ्कम् ।।* _ಭರತ ಸುಮಂತ್ರನೊಡಗೂಡಿ ಅರಣ್ಯಕ್ಕೆ ರಾಮನನ್ನು ಕರೆತರಲು ಅರಣ್ಯಕ್ಕೆ ತೆರಳಿದ್ದಾನೆ. ಆ ಸಮಯದಲ್ಲಿ ಸುಮಂತ್ರನೊಡನೆ ಭರತನಾಡುವ ಮಾತು. ತಂದೆಯು ತನ್ನ ಪುಣ್ಯ ಫಲದ ಬಲದಿಂದ ಸ್ವರ್ಗವನ್ನು ಹೊಂದಿದ. ನಾನಾದರೋ ಪೌರರ ಕಣ್ಣೀರಧಾರೆಯನ್ನು ಅನುಸರಿಸಿದವನಾಗಿ( ಭರತನು ರಾಜ್ಯಕ್ಕೆ ಹಿಂತಿರುಗಿದಾಗ ರಾಜನನ್ನು ಕಳೆದುಕೊಂಡ ಪ್ರಜೆಗಳ ಆರ್ತನಾದವೇ ಅವನನ್ನು ಸ್ವಾಗತಿಸಿದ್ದು) ಉದಾರವಾದ ರಮಣೀಯವಾದ ತಪೋವನದಲ್ಲಿ ರಾಮನೆಂಬ ಜಗದ ಚಂದಿರನನ್ನು ನೋಡಲು ತೆರಳುತ್ತಿರುವೆನು. ದಶರಥನ ಮರಣವು ರಾಮನ ಗಮನವು ಅಯೋಧ್ಯೆಯ ಜನರ ಹಾಗೂ ಭರತನ ಚಿಂತೆಯನ್ನು ದುಃಖವನ್ನು ಹೆಚ್ಚಿಸಿದೆ. ತಂದೆ ತನ್ನ ಪುಣ್ಯದ ಪ್ರಭಾವದಿಂದೇನೋ ಸ್ವರ್ಗವನ್ನೈದ. ಆದರೆ ನಾವೇನು ಮಾಡಬೇಕು? ಹಾಗಾಗಿ ಜಗದ ಜನರ ಮನಕ್ಕೆ ತಂಪು ಕೊಡುವವನು ಒಬ್ಬ ರಾತ್ರಿಯ ಚಂದ್ರ. ಎಷ್ಟು ದುಃಖದಲ್ಲಿದ್ದರೂ ಒಮ್ಮೆ ಚಂದಿರನ ಕಂಡ ಕೂಡಲೇ ಆನಂದವಾಗುವುದು. ಪ್ರಕೃತ ನಮ್ಮ ದುಃಖ ಮರೆಯಲು ರಾಮನೆಂಬ ಚಂದ್ರ ನನ್ನು ದರ್ಶಿಸಬೇಕಾಗಿದೆ. *ಪ್ರಜಾಸುಖತ್ವೇ ಚಂದ್ರಸ್ಯ* ಪ್ರಜೆಗಳಿಗೆ ಸುಖ ಕೊಡುವುದರಲ್ಲಿ ಚಂದ್ರನಂತೆ ಎಂದಿದ್ದಾರೆ ವಾಲ್ಮೀಕಿಗಳು. ಅಂತಹ ಜಗದ  ಜನರ ತಾಪವನ್ನು ಪರಿಹರಿಸುವ ರಾಮನ ದರ್ಶನಕ್ಕೆ ಹೊರಟಿರುವ...
🌾📗ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗 ಭಾಗ-೮ *ವಾಮಃ ಕಾಮೋ ಮನುಷ್ಯಾಣಾಂ ಯಸ್ಮಿನ್ಕಿಲ ನಿಬಧ್ಯತೇ ಜನೇ ತಸ್ಮಿಂಸ್ತ್ವನುಕ್ರೋಶಃ ಸ್ನೇಹಶ್ಚ ಕಿಲ ಜಾಯತೇ* ರಾವಣನ ಮಾತು. ಯಾವ ಜನರ ವಿಷಯದಲ್ಲಿ ಅತ್ಯಂತ ಉತ್ಕಟವಾದ ಕಾಮವಿರುವುದೋ ಅಂತಹವರ ವಿಷಯದಲ್ಲೇ ದಯೆ ಮತ್ತು ಸ್ನೇಹಭಾವಗಳು ಹುಟ್ಟುತ್ತವೆಯಲ್ಲವೇ! ಸೀತೆ ನಿನ್ನ ವಿಷಯದಲ್ಲಿ ನನ್ನ ಪರಿಸ್ಥಿತಿ ಹಾಗೇ ಆಗಿದೆ. ಲೋಕದಲ್ಲಿ ಜನರು ಯಾರ ಮೇಲಾದರೂ ಅತಿಯಾದ ದಯೆ ಅಥವಾ ಕರುಣೆ ತೋರಿದರೆ ಅಥವಾ ಹೆಚ್ಚಿನ ಸ್ನೇಹ ಸಂಬಂಧ ಬೆಳೆಸಿದರೆ ಯಾವುದಾದರೊಂದು ಬಗೆಯ ಕಾಮನೆ ಅದರ ಹಿಂದೆ ಇದ್ದೇ ಇರುತ್ತದೆ. ಇಲ್ಲದಿದ್ದರೆ ವಿಶ್ವಾಮಿತ್ರನಂತೆ ಎಲ್ಲರಿಗೂ ಮಿತ್ರನಾಗಿ ಭಗವಂತನಂತೆ ಎಲ್ಲರಿಗೂ ದಯೆ ತೋರಬೇಕಾದೀತು. ಆದರೆ ನಮ್ಮ ಸ್ವಭಾವ ಹಾಗಿಲ್ಲದಿರುವುದು ಸತ್ಯ. *ಅಕಾಮಾಂ ಕಾಮಯಾನಸ್ಯ ಶರೀರಮುಪತಪ್ಯತೇ ಇಚ್ಛಂತೀಂ ಕಾಮಯಾನಸ್ಯ ಪ್ರೀತಿರ್ಭವತಿ ಶೋಭನಾ* ಸೀತೆಯ ಉತ್ತರ. ಒಲಿಯದಿರುವವಳನ್ನು ಕಾಮಿಸಹೋಗುವವನ ಶರೀರ ಮುಂದೆ ಬಹಳ ಪರಿತಪಿಸುತ್ತದೆ. ತಾನಾಗಿಯೇ ಬಂದವಳನ್ನು ಕಾಮಿಸುವವನಿಗೆ ಅಂತಹವಳ ಸಮಾಗಮದಿಂದ ಶೋಭನವಾದ ಪ್ರೀತಿಯುಂಟಾಗುವುದು. ಸ್ತ್ರೀ ಒಲಿದು ಬಂದರೆ ಮಾತ್ರ ಚಿನ್ನ.  ಮುನಿದ ಮಾನಿನಿಯರ ತಾಗೆ ಅದು ಕಬ್ಬಿಣದಂತೆ ಎಂಬ ಸಂದೇಶ ಇದೆ. ನಾನು ನಿನ್ನ ವಿಷಯದಲ್ಲಿ ಸ್ವಲ್ಪವೂ ಪ್ರೀತಿ ಹೊಂದಿಲ್ಲ. ಹಾಗಾಗಿ ನನ್ನನ್ನು ಬಯಸುವುದು ನಿನಗೆ ಕ್ಷೇಮಕರವಲ್ಲ. 📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್. ...
🌹ಮೇಘದೂತದ ಒಂದು ಮಧುಬಿಂದು 🌹 *तस्मिन् काले नयनसलिलं योषितां खण्डितानां शान्तिं नेयं प्रणयिभिरतो वर्त्म भानोस्त्यजाशु । प्रालेयास्रं कमलवदनात्सोपि हर्तुं नलिन्या: प्रत्यावृत्तस्त्वयि कररुधि स्यादनल्पाभ्यसूय: ।।* _ಹೇ ಮಿತ್ರನೇ, ನೀನು ಮರುದಿನ ದಿನಕರನ ದಾರಿಯನ್ನು ಮುಚ್ಚಬೇಡ.  ಪ್ರಿಯತಮರ ಸಂಗದಿಂದ ವಂಚಿತರಾದ ಮಾನಿನಿಯರು ಕಣ್ಣೀರು ಸುರಿಸುತ್ತಾ ಸಮಯ ವೀಕ್ಷಿಸುತ್ತಾರೆ. ಸೂರ್ಯೋದಯವಾದೊಡನೆ ಎಲ್ಲವನ್ನೂ ಮರೆತು ತಮ್ಮ ತಮ್ಮ ಕೃತ್ಯಗಳನ್ನು ಕೈಗೊಳ್ಳುವರು. ಹಾಗಾಗಿ ಸೂರ್ಯನಿಗೆ ಬೆಳಗಲು ಅನುವು ಮಾಡಿಕೊಡು. ಹೀಗೆ ಅವರ ಕಣ್ಣೀರು ಒರೆಸುವ ಕೆಲಸದಲ್ಲಿ ಭಾಗಿಯಾಗು. ಆ ಸೂರ್ಯನೂ ಅದೇ ಸಮಯದಲ್ಲಿ ತನ್ನ ಕಾಂತೆಯಾದ ತಾವರೆಯ ದಂಟಿನ ಕೊನೆಯಲ್ಲಿ ಇರುವ ಕಮಲವೆಂಬ ಮುಖದ ಹಿಮವೆಂಬ ಕಣ್ಣೀರನ್ನು ಹೋಗಲಾಡಿಸಲು ಮರಳಿ ಬಂದಿರುತ್ತಾನೆ. ಆಗ ನೀನು ಒಂದು ವೇಳೆ ಅವನ ಕಿರಣವೆಂಬ ಕೈಯನ್ನು ತಡೆದರೆ ಮನದರಸಿಯ ಕಣ್ಣೀರು ಒರೆಸದೆ ಸೂರ್ಯನು ಕೋಪಗೊಳ್ಳುವನು._ _ಕವಿ ಪ್ರಕೃತಿ ಸಹಜ ದೃಶ್ಯಗಳನ್ನೇ ಸುಂದರವಾಗಿ ರೂಪಿಸಿದ್ದಾನೆ. ಪತಿಗಳು ಕಾರ್ಯ ನಿಮಿತ್ತವೋ, ಅಥವಾ ಪರಸತಿಯರ ಸಂಬಂಧ ನಿಮಿತ್ತವೋ ರಾತ್ರಿ ಮನೆಗೆ ಬಾರದೇ ಬೆಳಗಿನ ಜಾವ ಬಂದಾಗ ಮಾನಿನಿಯರು ಕೋಪಗೊಳ್ಳುವರು. ಆಗ ಅವರನ್ನು ಪತಿಯಂದಿರು ಸಮಾಧಾನ ಮಾಡಿ ಸೂರ್ಯ ಬರುವ ಹೊತ್ತಾಯಿತು ಬೇಗ ಉಳಿದ ಕಾರ್ಯಗಳಲ್ಲಿ ರತಳಾಗು ಎಂದು ಅನುನಯಿಸುತ್ತಾರೆ, ವಿಷಯಾಂತರ ಮಾಡ...
🌸📗 ಮಹಾಭಾರತದ ಕೆಲವು ಅಪ್ರಸಿದ್ಧ ಕಥೆಗಳು📗🌸 ಅಂಗಾರಪರ್ಣ ಹಾಗೂ ಅರ್ಜುನನ ಸಂವಾದ . ನಾವು ಬಳಸುವ ಆಯುಧಗಳೆಲ್ಲವೂ ವಜ್ರಾಯುಧದ ಭಾಗಗಳೇ ಆಗಿವೆ. *ಪುರಾ ಕೃತಂ ಮಹೇಂದ್ರಸ್ಯ ವಜ್ರಂ ವೃತ್ರನಿಬರ್ಹಣೇ ದಶಧಾ ಶತಧಾ ಚೈವ ತಚ್ಛೀರ್ಣಂ ವೃತ್ರಮೂರ್ಧನಿ* ವೃತ್ರನನ್ನು ಕೊಲ್ಲಲು ಹಿಂದೆ ವಜ್ರಾಯುಧವು ನಿರ್ಮಿಸಲ್ಪಟ್ಟಿತು. ಅದು ಅವನ ತಲೆಯ ಮೇಲೆ ಬಿದ್ದ ಕ್ಷಣವೇ ನೂರಾರು ಚೂರುಗಳಾಯಿತು. *ತತೋ ಭಾಗೀಕೃತೋ ದೇವೈರ್ವಜ್ರಭಾಗ ಉಪಾಸ್ಯತೇ ಲೋಕೇ ಯತ್ಸಾಧನಂ ಕಿಂಚಿತ್ಸಾ ವೈ ವಜ್ರತನು: ಸ್ಮೃತಾ* ಅದಾದ ನಂತರ ದೇವತೆಗಳು ತುಂಡಾದ ಆ ಭಾಗವನ್ನೇ ವಜ್ರ ವೆಂದು ಉಪಾಸಿಸುತ್ತಿರುವರು. ಲೋಕದಲ್ಲಿ ಎಲ್ಲಾ ಕೆಲಸಗಳಲ್ಲೂ ಬಳಸಲ್ಪಡುವ ಸಾಧನಗಳೂ ಅದರದ್ದೇ ಸ್ವರೂಪವೆನಿಸಿವೆ. *ವಜ್ರಪಾಣಿರ್ಬ್ರಾಹ್ಮಣಃ ಸ್ಯಾತ್ಕ್ಷತ್ರಂ ವಜ್ರರಥಂ ಸ್ಮೃತಮ್ ವೈಶ್ಯಾ ವೈ ದಾನವಜ್ರಾಶ್ಚ ಕರ್ಮವಜ್ರಾ ಯವೀಯಸಃ* ಬ್ರಾಹ್ಮಣನಿಗೆ ಕೈಯೇ ವಜ್ರ.( ತಪಸ್ಸಿನ ಶಕ್ತಿಯಿಂದ ಶಾಪ ಕೊಡಲು) ಕ್ಷತ್ರಿಯನಿಗೆ ರಥವೇ ವಜ್ರ( ಯುದ್ಧ ಮಾಡಿ ಗೆಲ್ಲಲು. ಹಾಗಾಗಿಯೇ ದೃಷ್ಟದ್ಯುಮ್ನ ಹುಟ್ಟಿದ ಕ್ಷಣವೇ ರಥವೇರಿ ಹೊರಡುವನು) ವೈಶ್ಯನಿಗೆ ದಾನವೇ ವಜ್ರ.( ನ್ಯಾಯಯುತವಾದ ಸಂಪಾದನೆಯ ಒಂದಷ್ಟು ಭಾಗ ದಾನ ಮಾಡಿ ಪಾಪ ಲೇಪವಾಗದಂತೆ ನೋಡುವುದು) ಉಳಿದವರಿಗೆ ಅವರ ಕರ್ಮವೇ ವಜ್ರ. ( ಕರ್ಮದಿಂದ ಏನನ್ನು ಬೇಕಾದರೂ ಸಾಧಿಸಬಹುದು, ಗುಹ ಶಬರಿ ಇತ್ಯಾದಿ ಮಹನೀಯರು ಋಷಿಗಳಿಗೂ ದೊರಕದ ಮೋಕ್ಷವನ್ನು ಕರ್ಮದಿಂದ ಪಡೆದರು) ಅ...
🌾📗ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗 ಭಾಗ-೭ *ಆಮ್ನಾಯಾನಾಮಯೋಗೇನ ವಿದ್ಯಾಂ ಪ್ರಶಿಥಿಲಾಮಿವ* ನಿನ್ನೆ ಇದರ ಅರ್ಥ ಬೇರೆ ರೀತಿಯಲ್ಲಿ ಬರೆದಿದ್ದೆ. ವ್ಯಾಖ್ಯಾನಕಾರರ ಮತದಂತೆ. ಇಲ್ಲಿ ಆಮ್ನಾಯ ಶಬ್ದಕ್ಕೆ ವೇದವೆಂದು ಅರ್ಥ ಮಾಡಿದಾಗ ವೇದರಹಿತವಾದ ವಿದ್ಯೆ ಹೇಗೆ ಶೋಭಿಸುವುದಿಲ್ಲವೋ ಹಾಗೆ ರಾಮನಿಲ್ಲದ ಸೀತೆ ಶೋಭಿಸುತ್ತಿರಲಿಲ್ಲ. ಎಲ್ಲಾ ವಿದ್ಯೆಗಳಿಗೂ ವೇದಗಳೇ ಮೂಲ. ಆ ಮೂಲವನ್ನೇ ಮರೆತು ಎಷ್ಟು ಕಲಿತರೇನು, ವೇದವನ್ನು ಅರ್ಥೈಸಿಕೊಳ್ಳದ ಪಂಡಿತನಂತೆ ಶೋಭಾಯಮಾನವಲ್ಲ ಎಂಬ ತಾತ್ಪರ್ಯ. *ಅತುಷ್ಟಂ ಸ್ವೇಷು ದಾರೇಷು ಚಪಲಂ ಚಲಿತೇಂದ್ರಿಯಮ್ ನಯಂತಿ ನಿಕೃತಿಪ್ರಾಜ್ಞಂ ಪರದಾರಾಃ ಪರಾಭವಮ್* ಸೀತೆ ರಾವಣನಿಗೆ ನುಡಿಯುವ ಮಾತು. ತನ್ನ ಪತ್ನಿಯಲ್ಲಿ ತೃಪ್ತಿ ಹೊಂದದೇ ಅಸಭ್ಯನಾದ ಚಂಚಲಚಿತ್ತನಾದ ಇಂದ್ರಿಯಗಳಿಗೆ ದಾಸನಾದ ವಂಚಿಸುವ ಬುದ್ಧಿಯಿಂದ ಕೂಡಿದ ಮಾನವನನ್ನು ಪರಪತ್ನಿಯರು ತಿರಸ್ಕಾರಕ್ಕೆ ಈಡು ಮಾಡುತ್ತಾರೆ. ಅಂತಹ ವ್ಯಕ್ತಿಗಳನ್ನು ಸ್ತ್ರೀ ಸಮೂಹ ಗೌರವಿಸಲಾರದು. ಸಮಾಜ ಅವನ ಬಗೆ ತಿರಸ್ಕಾರ ತಾಳುವುದು. ಎಷ್ಟೇ ಮುಂದುವರೆದ ಸಮಾಜವಾದರೂ  ಸಮಾಜದ ಸುವ್ಯವಸ್ಥೆಯ ದೃಷ್ಟಿಯಿಂದ ಇಂತಹ ಆಚರಣೆ ಅವಶ್ಯಕ. ಇಲ್ಲದಿದ್ದರೆ ಯಾರಿಗೆ ಯಾರು ಪತಿ ಯಾರಿಗೆ ಪತ್ನಿ ಯಾರ ಮಕ್ಕಳು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಬೇಗಾಗುತ್ತದೆ. ಅದು ಸಾಮಾಜಿಕ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ಹಾಗಾಗಿ ತನ್ನ ಪತ್ನಿಯಲ್ಲಿ ರಮಿಸುವುದು ಉತ್ತಮ ಎಂಬ ಅಭಿಪ್ರಾಯ ...
🌺 ಪ್ರತಿಮಾನಾಟಕದ ಒಂದು ಸುಮ🌺 *त्वया राज्यैषिण्या नृपतिरसुभिर्नैवगणित: सुतं ज्येष्ठं च त्वं व्रज वनमिति प्रेषितवती । न शीर्णं यद् दृष्ट्वा जनकतनयां वल्कलवतीं अहो धात्रा सृष्टं भवति हृदयं वज्रकठिनम् ।।* _ಭರತನ ಬೇಸರದ ಮಾತು.‌ಮಗನಿಗಾಗಿ ರಾಜ್ಯ ಕೇಳಿದ ನೀನು ಪತಿಯ ಪ್ರಾಣವನ್ನು ಲೆಕ್ಕಿಸಲಿಲ್ಲ. ಪತಿಯ ಪ್ರಾಣವನ್ನು ಬಲಿಕೊಟ್ಟಾದರೂ ರಾಜ್ಯ ಪಡೆಯುವ ನಿನ್ನ ಕೆಟ್ಟ ಬಯಕೆ ಸರಿಯಾದುದೇ! ಗಂಡನಿಗೆ ದ್ರೊಹ ಎಸಗಿರುವೆ ನೀನು. ಜ್ಯೇಷ್ಠನೂ ಸುತಶ್ರೇಷ್ಠನೂ ಆದ ರಾಮನನ್ನು ಕಾಡಿಗೆ ಅಟ್ಟಿದೆಯಲ್ಲಾ. ರಾಮ ಯಾವ ಗುಣದಲ್ಲಿ ಕಡಿಮೆ ಇದ್ದ,ಅಥವಾ ದೊಡ್ಡವನಲ್ಲವೇ, ಅವನಿಗೆ ಏನಾದರೂ ನ್ಯೂನತೆಗಳಿದ್ದವೇ, ಅಥವಾ ಪ್ರಜೆಗಳು ಅವನನ್ನು ಬಯಸಿರಲಿಲ್ಲವೇ? ಇದಾವುದೂ ಇಲ್ಲದೆ ಅವನನ್ನು ವಿನಾಕಾರಣ ಮನೆಗೆ ಕಳುಹಿ ಪುತ್ರ ದ್ರೋಹ ಮಾಡಿರುವೆ. ಅಷ್ಟಲ್ಲದೇ ಮಿಥಿಲೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಆ ಬಾಲಿಕೆ ಸೀತೆಗೆ ನಾರು ಬಟ್ಟೆ ಉಡಿಸಿದೆಯಲ್ಲ. ( ರಾಮಾಯಣದಲ್ಲಿ ಅವಳು ನಾರು ಬಟ್ಟೆ ಉಡುವುದಿಲ್ಲ. ರೇಶ್ಮೆ ಸೀರೆಯನ್ನೇ ಧರಿಸುತ್ತಾಳೆ) ಎಂದೂ ಅದರ ಪರಿಚಯವೇ ಇಲ್ಲದ ಮುದ್ದಿನ ಸೊಸೆಗೆ ಅದನ್ನು ಉಡಿಸಿದ ಕ್ಷಣದಲ್ಲಾದರೂ ನಿನ್ನ ಹೃದಯ ಒಡೆದು ಹೋಗಲಿಲ್ಲವೇ? ನೀನಿನ್ನೂ ಸಾಯಲಿಲ್ಲವೇ? ಅಬ್ಬಾ ನಿಜಕ್ಕೂ ಬ್ರಹ್ಮ ವಜ್ರದಷ್ಟು ಕಠಿನವಾದ ಅಥವಾ ಕ್ರೂರವಾದ ಹೃದಯವನ್ನೇ ಸೃಷ್ಟಿ ಮಾಡಿದ್ದಾನೆ. ಇಷ್ಟೆಲ್ಲಾ ಘಟನೆಗಳು ನಡೆದರೂ ದು:...
🌸📗 ಮಹಾಭಾರತದ ಕೆಲವು ಅಪ್ರಸಿದ್ಧ ಕಥೆಗಳು📗🌸 ಅಂಗಾರಪರ್ಣ ಹಾಗೂ ಅರ್ಜುನನ ಸಂವಾದ ಮುಂದುವರೆಯುತ್ತದೆ. ಅರ್ಜುನನ ನಿರ್ಭೀತಿಯ ಮಾತನ್ನು ಕೇಳಿದ ಅಂಗಾರಪರ್ಣ ಅವನ ಮೇಲೆ ಯುದ್ಧ ಸಾರಿದನು. ಪಾರ್ಥನು ಕೈಯಲ್ಲಿ ಹಿಡಿದ ಕೊಳ್ಳಿಯಿಂದ ಹಾಗೂ ಚರ್ಮದ ಚೀಲದಿಂದ ಅವನ ಬಾಣಗಳನ್ನೆಲ್ಲಾ ನಿವಾರಿಸಿ ಬೃಹಸ್ಪತಿಯ ಪರಂಪರೆಯಿಂದ ಬಂದ ಆಗ್ನೇಯಾಸ್ತ್ರ ಪ್ರಯೋಗಿಸಿ ಗಂಧರ್ವನ ರಥವನ್ನು ಸುಟ್ಟುಹಾಕಿದನು. ತಲೆಕೆಳಗಾಗಿ ಬೀಳುತ್ತಿದ್ದ ಆ ಗಂಧರ್ವನ ಜುಟ್ಟು ಹಿಡಿದು ಸೋದರರ ಬಳಿಗೆ ಕೊಂಡೊಯ್ದನು. ಆಗ ಅವನ ಪತ್ನಿ ಕುಂಭೀನಸಿ ಎಂಬುವಳು ಪತಿಯ ಪ್ರಾಣಭಿಕ್ಷೆಯನ್ನು ಧರ್ಮಜನಲ್ಲಿ ಕೇಳಿದಳು. ಧರ್ಮಜ ಅಭಯ ನೀಡುವನು. ಆಗ ಗಂಧರ್ವ ಕೆಲವು ಒಳ್ಳೆಯ ಮಾತುಗಳನ್ನು ನುಡಿಯುವನು. *ಸಂಸ್ತಂಭಿತಂ ಹಿ ತರಸಾ ಜಿತಂ ಶರಣಮಾಗತಮ್ ಯೋರಿಂ ಸಂಯೋಜಯೇತ್ಪ್ರಾಣೈ: ಕಲ್ಯಾಣಂ ಕಿಂ ನ ಸೋರ್ಹತಿ* ತನ್ನ ಪರಾಕ್ರಮದ ಮುಂದೆ ಸೋತು ಶರಣಾಗತನಾದ ಶತ್ರುವಿಗೆ ಪ್ರಾಣದಾನ ಮಾಡಿದವನು ಯಾವ ಕಲ್ಯಾಣಕ್ಕೆ ಅರ್ಹನಲ್ಲ? ಅಂತಹ ವ್ಯಕ್ತಿಯನ್ನು ಸಕಲ ರೀತಿಯಲ್ಲೂ ಗೌರವಿಸಬೇಕು. ಪ್ರಾಣಕ್ಕಿಂತ ಮಿಗಿಲಾದ ವಸ್ತು ಜಗದಲ್ಲಿ ಬೇರೊಂದಿಲ್ಲ. ಚಾಕ್ಷುಷೀ ವಿದ್ಯೆಯನ್ನು ಅರ್ಜುನನಿಗೆ ಉಪದೇಶಿಸುತ್ತಾನೆ. ಅದರ ಮಹತ್ವ- *ಯಚ್ಚಕ್ಷುಷಾ ದ್ರಷ್ಟುಮಿಚ್ಛೇತ್ರಿಷು ಲೋಕೇಷು ಕಿಂಚನ ತತ್ಪಶ್ಯೇದ್ಯಾದೃಶಂ ಚೇಚ್ಛೇತ್ತಾದೃಶಂ ದ್ರಷ್ಟುಮರ್ಹತಿ* ಮೂರು ಭುವನಗಳಲ್ಲಿ ಯಾವುದನ್ನು ಕಣ್ಣಿನಿಂದ ನೊಡಲು ಬಯಸಿದರೂ ಅವೆಲ್ಲವೂ...
🌾📗🌾 ರಾಮಾಯಣದ ಮೌಲ್ಯಯುತ ಮಾತುಗಳು ಭಾಗ-೬ *ಭರ್ತಾ ನಾಮ ಪರಂ ನಾರ್ಯಾ ಭೂಷಣಂ ಭೂಷಣಾದಪಿ ಏಷಾ ಹಿ ರಹಿತಾ ತೇನ ಶೋಭನಾರ್ಹಾ ನ ಶೋಭತೇ* ಹನುಮನು ಸೀತೆಯನ್ನು ನೋಡಿ ಚಿಂತಿಸುತ್ತಿದ್ದಾನೆ. ಮಹಿಳೆಯರಿಗೆ ಇತರ ಎಲ್ಲಾ ಆಭರಣಗಳಿಗಿಂತ ಪತಿಯೇ ಪರಮಶ್ರೇಷ್ಠ ಆಭರಣ. ಆಭರಣಗಳಿಂದ ಶೋಭಿಸಬೇಕಾಗಿರುವ ಇವಳು ಪತಿಯೆಂಬ ಆ ಅಮೂಲ್ಯ ಆಭರಣದಿಂದ ರಹಿತಳಾಗಿ ಶೋಭಿಸುತ್ತಿಲ್ಲ. ಪತಿ ಪತ್ನಿ ಒಟ್ಟಿಗಿದ್ದರೇನೇ ಚೆನ್ನ. ಇಲ್ಲದಿರೆ ಅದೆಷ್ಟು ಸಂಪತ್ತಿದ್ದರೂ ಮದುವೆಯಾದ ಲಲನೆಯರಿಗೆ ಅವೆಲ್ಲ ಶೊಭೆ ತರಲಾರದು. ಪತಿಯ ಜೊತೆಗಿದ್ದು ಧರಿಸುವ ಆಭರಣ ಅತ್ಯಂತ ಶೋಭಾಯಮಾನ. ಅವರ ನಡುವಿನ ಸಂಬಂಧ ಅಷ್ಟು ಸೂಕ್ಷ್ಮವಾದದ್ದು. ಲೋಕದೆದುರು ಅದು ಆಭರಣದಂತಿರಬೇಕು ಹೊರತು ಮರದ ತುಂಡಿನಂತಲ್ಲ ಎಂಬ ಧ್ವನಿ. ರಾಮ ಸೀತೆಯರ ಆತ್ಮೀಯತೆಯನ್ನೂ ಹನುಮ ಗುರುತಿಸಿದ್ದಾನೆ. *ವೈವಾಹಿಕೋ ವಿಧಿ: ಸ್ತ್ರೀಣಾಮೌಪನಾಯಿಕ: ಸ್ಮೃತ:* ವ್ಯಾಖ್ಯಾನದಲ್ಲಿ ಬರುವ ಸ್ಮೃತಿಯೊಂದರ ಮಾತು. ಸ್ತ್ರೀಯರಿಗೆ ಉಪನಯನ ಎಂಬ ಪ್ರತ್ಯೇಕ ಸಂಸ್ಕಾರ ಇಲ್ಲ. ವಿವಾಹವೇ ಅವರಿಗೆ ಉಪನಯನಕ್ಕೆ ಸಮಾನವಾದ ಸಂಸ್ಕಾರ ಎನ್ನುವರು ಸ್ಮೃತಿಕಾರರು. ಅದೇ ಅವರಿಗೆ ಎರಡನೆಯ ಜನ್ಮ ಅಥವಾ ದ್ವಿಜತ್ವದಾಯಕ. ಈ ಕಾರಣದಿಂದಲೋ ಏನೋ ಬಾಲ್ಯವಿವಾಹ ಮಾಡುತ್ತಿದ್ದುದು. ವಿವಾಹದ ಅನಂತರ ಸಾಕಷ್ಟು ಅಧ್ಯಯನ ಮಾಡಿದ ಉಲ್ಲೇಖಗಳು ಅಲ್ಲಲ್ಲಿ ಸಿಗುತ್ತವೆ. *ಅಭೂತೇನಾಪವಾದೇನ ಕೀರ್ತಿಂ ನಿಪತಿತಾಮಿವ ಆಮ್ನಾಯಾನಾಮಯೋಗೇನ ವಿದ್ಯಾಂ ಪ್ರಶಿಥಿಲಾಮಿವ*...
🌹ಮೇಘದೂತದ ಒಂದು ಬಿಂದು 🌹 *गच्छन्तीनां रमणवसतिं योषितां तत्र न्यक्तं रुद्धालोके नरपतिपथे सूचिभेद्यैस्तमोभि: । सौदामन्या कनकनिकषस्निग्धया दर्शयोर्वीं तोयोत्सर्गस्तनितमुखरो मा च भूर्विक्लवास्ता: ।।* _ಎಲೈ ಮೇಘವೇ, ಉಜ್ಜಯಿನಿ ನಗರದಲ್ಲಿ ತಿರುಗುತ್ತಾ ರಾತ್ರಿಯಲ್ಲಿ ಗುಪ್ತವಾಗಿ ಪ್ರಿಯನ ಮನೆಗೆ ಹೊರಟಿರುವ ಸ್ತ್ರೀಯರ ದಾರಿಯನ್ನು ಬೆಳಗಿಸು. ಅತಿ ನಿಬಿಡವಾದ ಕತ್ತಲಲ್ಲಿ ಅವರಿಗೆ ಯಾವ ಕಡೆ ಹೋಗಬೇಕೆಂದು ಗೊತ್ತಾಗದೆ ಚಡಪಡಿಸುತ್ತಿರುವಾಗ ಒಂದು ಸಲ ಮಿಂಚು ಕಾಣಿಸಿ ಬೆಳಗಿಸು. ರಾಜಮಾರ್ಗದಲ್ಲಿ ಅಪ್ಪಟ ಬಂಗಾರದ ರೇಖೆಯಂದದಿ ಮನೋಹರವಾದ ಸೌದಾಮಿನಿಯಿಂದ ಭೂ ದಾರಿಯನ್ನು ತೋರಿಸು. ಅಷ್ಟು ಮಾತ್ರ ಮಾಡು. ಅವರನ್ನು ನೋಡಿದ ಹುಮ್ಮಸ್ಸಿನಲ್ಲಿ ಮಳೆ ಸುರಿಸುವುದನ್ನೊ ಅಥವಾ ಗುಡುಗುವುದನ್ನೋ ಮಾಡಿ ಹೆದರಿಕೆ ಹುಟ್ಟಿಸಬೇಡ. ಅವರು ತುಂಬಾ ಭೀರುಸ್ವಭಾವದವರು. ಮಿಂಚಿಗೆ ಹೆದರಿದರೂ ದಾರಿ ತಿಳಿದು ಬೇಗ ಬೇಗ ಸಾಗುವರು. ಮಳೆ ಸುರಿಸಿದರೆ ಹೋಗಲು ಸಾಧ್ಯವಾಗದೆ ನಿರಾಸೆ ಉಂಟಾಗಬಹುದು. ಗುಡುಗಂತೂ ಬೇಡವೇಬೇಡ. ಗುಡುಗಿಗೆ ಹೆದರಿ ನಡುಗಬಹುದು ಅಥವಾ ಹಿಂತಿರುಗಬಹುದು. ನಾವೂ ಕೇವಲ ಮಿಂಚಿಗೆ ಭಯ ಪಡದೇ ಗುಡುಗಿನ ಧ್ವನಿಗೆ ಬೆದರುತ್ತೇವೆ. ಅದನ್ನೇ ಕವಿ ಇಲ್ಲಿ ಹೇಳಿದ್ದಾನೆ. ನಿನ್ನ ಮಿಂಚಿನಿಂದ ದಾರಿ ತಿಳಿದ ಅವರು ಪ್ರಿಯರನ್ನು ಸೇರಿ ಮನಸಾರೆ ನಿನ್ನನ್ನು ಹರಸುವರು. ಹಾಗಾಗಿ ಮಾರ್ಗಕ್ರಮಣದ ಮನರಂಜನೆಗಾಗಿ ಹೀಗೆಲ್ಲಾ ಮಾಡುತ್ತ...
🌾📗🌾 ರಾಮಾಯಣದ ಮೌಲ್ಯಯುತ ಮಾತುಗಳು ಭಾಗ-೫ *ನಿವೇದ್ಯಮಾನೇ ದೋಷ: ಸ್ಯಾದ್ದೋಷ: ಸ್ಯಾದನಿವೇದನೇ ಕಥಂ ನು ಖಲು ಕರ್ತವ್ಯಂ ವಿಷಮಂ ಪ್ರತಿಭಾತಿ ಮೇ* ಹನುಮನ ಮಾತಿದು. ಸೀತೆ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಈ ವಾರ್ತೆಯನ್ನು ಹೇಳಿದರೂ ಕಷ್ಟವೇ! ಸಿಗಲಿಲ್ಲವೆಂದು ವಾನರರು ಹಾಗೂ ರಾಮಾದಿಗಳು ಪ್ರಾಣವನ್ನೇ ಬಿಟ್ಟಾರು. ಅಂತಹ ಅನರ್ಥ ಘಟಿಸೀತು. ಹೋಗಲಿ ಹೇಳದೇ ಉಳಿಯುವ ಎಂದರೆ ದೂತನಾಗಿ ಕರ್ತವ್ಯ ಸರಿಯಾಗಿ ನಿರ್ವಹಿಸದೆ ವಂಚಿಸಿದ ಪಾಪ ತಟ್ಟೀತು. ಹೀಗಿರುವಾಗ ನನ್ನ ಕರ್ತವ್ಯವೇನು! ಇದು ತುಂಬಾ ಇಕ್ಕಟ್ಟಿನ ಪರಿಸ್ಥಿತಿ ಆಗಿದೆ. ದುಷ್ಯಂತನಿಗೂ ಶಕುಂತಲೆಯ ಸ್ವೀಕಾರದ ಸಮಯದಲ್ಲಿ ಇಂತಹ ಸಂದಿಗ್ಧತೆ ಎದುರಾಗಿತ್ತು. ಪತ್ನಿಯೆಂದು ಸ್ವೀಕರಿಸಿದರೆ ಪರದಾರಪರಿಗ್ರಹವೆಂಬ ದೋಷ, ಬಿಟ್ಟರೆ ಗರ್ಭಕ್ಕೆ ಕಾರಣನಾಗಿ ನಡುನೀರಿನಲ್ಲಿ ಕೈ ಬಿಟ್ಟ ಪಾಪ ಯಾವುದು ಸರಿ ಯಾವುದು ತಪ್ಪು? ನಮ್ಮ ಜೀವನದಲ್ಲೂ ಇಂತಹ ಅನೇಕ ಸಂದಿಗ್ಧ ಸ್ಥಿತಿಗಳು ಬರುತ್ತಲೇ ಇರುತ್ತವೆ. ಆಗೆಲ್ಲ *ನ್ಯಾಯಾತ್ ಪಥ: ಪ್ರವಿಚಲಂತಿ ಪದಂ ನ ಧೀರಾ:* ಎಂಬಂತೆ ಸರಿಯಾದ ನ್ಯಾಯಯುತವಾದ ದಾರಿಯಲ್ಲೇ ನಡೆದು ಉಳಿದವರ ಕೋಪಕ್ಕೆ ಕಾರಣವಾದರೂ ದೇವನ ಪ್ರೀತಿ ಸಂಪಾದಿಸೋಣ. *ವಿನಾಶೇ ಬಹವೋ ದೋಷಾ ಜೀವನ್ಭದ್ರಾಣಿ ಪಶ್ಯತಿ ತಸ್ಮಾತ್ಪ್ರಾಣಾನ್ಧರಿಷ್ಯಾಮಿ ಧ್ರುವೊ ಜೀವತಿ ಸಂಗಮ:* ಜೀವನದಲ್ಲಿ ನಿರಾಶೆಗಳು ಸಹಜ. ಆಸೆಯ ಜೊತೆಗೇ ಬರುವುದು ನಿರಾಸೆ. ಅವೆರಡೂ ಅವಳಿ ಜವಳಿಯ ತರಹ. ನಿರಾಸೆಯಿಂದ ಪ್ರಾಣವನ್ನೇ ಬಿ...
📙 ವೇದ- ಧರ್ಮ ಭಾಗ-೧೩ *ವೇದದ ಬ್ರಾಹ್ಮಣಗಳು* ಸಾಮವೇದದ ಬ್ರಾಹ್ಮಣಗಳು *ತಾಂಡ್ಯ* ಬ್ರಾಹ್ಮಣ. ೨೫ ಅಧ್ಯಾಯಗಳಿಂದ ಕೂಡಿರುವ ಇದನ್ನು ಪಂಚವಿಂಶ ಬ್ರಾಹ್ಮಣ ಎಂದೂ ಕರೆಯುತ್ತಾರೆ. ಎಲ್ಲಾ ಬ್ರಾಹ್ಮಣಗಳಿಗಿಂತ ಬೃಹತ್ತಾದ ಕಾರಣ *ಮಹಾಬ್ರಾಹ್ಮಣ* ಎಂದೂ ಹೆಸರಿದೆ. ವಿಷಯಪ್ರತಿಪಾದನೆಯಲ್ಲಿರುವ ವಿಭಿನ್ನತೆ ಇಲ್ಲೂ ಕಂಡುಬರುತ್ತದೆ. *ವೀಂಕ* ಎಂಬ ಸಾಮದ ಸಹಾಯದಿಂದ ಚ್ಯವನನು ಕಾಯಕಲ್ಪ ಪಡೆದ ಕಥೆ( ಅಶ್ವಿನೀ ದೇವತೆಗಳ ಉಪದೇಶ ಇರಬಹುದು) , ಹಾಗೆಯೇ *ವಾತ್ಸ* ಎಂಬ ಸಾಮದ ಮಹತ್ವ ಹಾಗೂ ಅದರ ಕಥೆಯೂ ಹೇಳಲ್ಪಟ್ಟಿದೆ. ಈ ಸಾಮದಲ್ಲಿ ವತ್ಸ ಮತ್ತು ಮೇಧಾತಿಥಿ ಎಂಬ ಇಬ್ಬರು ಕಣ್ವ ಗೋತ್ರದ ಋಷಿಗಳ ಕಥೆ ಇದೆ. ಮೇಧಾತಿಥಿಯು ವತ್ಸನಿಗೆ ಶೂದ್ರಪುತ್ರ, ಅಬ್ರಾಹ್ಮಣ ಎಂದೆಲ್ಲಾ ನಿಂದಿಸುತ್ತಾನೆ. ವತ್ಸನು ಇದನ್ನು ನಿರ್ಣಯಿಸಲು ವಾತ್ಸವೆಂಬ ಸಾಮ ಹಾಡಿ ಅವನನ್ನು ನಿರಾಕರಿಸುತ್ತಾನೆ. ಹಾಡುತ್ತಾ ಅಗ್ನಿ ಪ್ರವೇಶಿಸಿದರೂ ವತ್ಸನಿಗೆ ಅಗ್ನಿ ತಂಪನ್ನೇ ಉಂಟುಮಾಡುತ್ತಾನೆ. ಮೇಧಾತಿಥಿಯು ಇನ್ನೊಂದು ಸಾಮ ಹಾಡಿ ಪ್ರವೇಶಿಸಲು ಪ್ರಯತ್ನಿಸುವಾಗ ಅವನಿಗೆ ಬೆಂಕಿಯ ಅನುಭವವಾಗಿ ಶರಣಾಗುತ್ತಾನೆ. ಹೀಗೆ ಕುಲ ಗೋತ್ರ ಯಾವುದಿದ್ದರೂ ಜ್ಞಾನ ಮಾರ್ಗದಿಂದ ಶ್ರೇಷ್ಠತ್ವ ನಿರ್ಣಯಿಸುವ ಕಥೆ ವೇದದ ಮಹತ್ವ ತಿಳಿಸುತ್ತದೆ. ಈ ಕಾರಣದಿಂದ ಈ ಸಾಮಕ್ಕೆ  *ಕಾಮಸನಿ* ಎಂದರೆ ಬಯಸಿದ್ದನ್ನು ನೀಡುವುದು ಎಂಬ ಹೆಸರೂ ಇದೆ. *ಷಡ್ವಿಂಶ ಬ್ರಾಹ್ಮಣ* ಆರು ಅಧ್ಯಾಯಗಳ ಬ್ರಾಹ್ಮಣ. ಆರನೇ ಅಧ್ಯಾಯದಲ...
🌺 ಪ್ರತಿಮಾನಾಟಕದ ಒಂದು ಸುಮ 🌺 *अयशसि यदि लोभ: कीर्तयित्वा किमस्मान् किमु नृपफलतर्ष: किं नरेन्द्रो न दद्यात् ।अथ तु नृपतिमातेत्येष शब्दस्तवेष्टो वदतु भवति! सत्यं किं तवार्यो न पुत्र: ।।* _ಭರತನ ಭಾವುಕ ನುಡಿಗಳು ಮುಂದುವರಿಯುತ್ತಿವೆ. ತನ್ನ ತಾಯಿ ಮಾಡಿದ ಕಾರ್ಯ ಅವನಿಗೆ ಎಳ್ಳಷ್ಟೂ ಸಮ್ಮತವಲ್ಲ. ಅಣ್ಣನನ್ನು ಮಡದಿಯ ಜೊತೆಗೆ ಕಾಡಿಗೆ ಕಳುಹಿಸುವುದೂ ಶುಲ್ಕದಲ್ಲಿ ಹೇಳಲ್ಪಟ್ಟಿತ್ತಾ? ಎಂದು ಪ್ರಶ್ನೆ ಮಾಡುವನು. ಮುಂದೆ ಹೀಗೆ ನುಡಿಯುವನು. ನಿನಗೆ ಒಂದು ವೇಳೆ ಅಪಕೀರ್ತಿಯಲ್ಲಿ ಆಸೆ ಇದ್ದರೆ ನಾನು ರಾಜನಾಗಬೇಕೆಂದು ಹೇಳಿ ನನಗೂ ಅಪಕೀರ್ತಿ ತಂದು ಕೊಟ್ಟೆಯಲ್ಲ. ಒಂದೋ ನೀನೇ ಆಡಳಿತ ನಡೆಸಿ ಮಗನನ್ನು ರಾಜ್ಯ ಭ್ರಷ್ಟನನ್ನಾಗಿಸಿದ ಲೋಭಿ ಎಂಬ ಅಪಕೀರ್ತಿ ಸಿಗುತ್ತಿತ್ತು. ಇಲ್ಲ ನಿನಗಿಷ್ಟವಿಲ್ಲವಾದರೆ ರಾಮನನ್ನು ಕಾಡಿಗೆ ಕಳುಹುವುದನ್ನು ಮಾತ್ರ ಬಯಸಬೇಕಾಗಿತ್ತು, ಭರತನು ರಾಜನಾಗುವುದನ್ನಲ್ಲ. ಈಗ ನಾನು ರಾಜನಾಗಬೇಕೆಂದು ಹೇಳಿ ಈ ಪಾಪದಲ್ಲಿ ನನ್ನನ್ನೂ ಭಾಗಿಯಾಗಿಸಿದೆಯಲ್ಲ. ಹೋಗಲಿ, ರಾಜನು ನಿನಗೆಂದಾದರೂ ಬಯಸಿದ್ದನ್ನು ನೀಡಲಿಲ್ಲವೇ? ನೀನು ಬಯಸಿದೆ ಎಂದಾದರೆ ರಾಜ್ಯವನ್ನೇ ಕೊಡುತ್ತಿದ್ದ. ನಿನ್ನ ಮೇಲೆ ಬೇರೆ ರಾಣಿಯರಿಗಿಂತ ಹೆಚ್ಚು ಪ್ರೀತಿ ಹೊಂದಿದ್ದ ನಮ್ಮ ಅಪ್ಪ. ನಿನಗೆ ಎಂದಾದರೂ ಕಡಿಮೆ ಮಾಡಿದ್ದಾನೆಯೇ ಅವನು? ಅಂತಹ ರಾಜನ ಪ್ರಾಣ ತೆಗೆದೆಯಲ್ಲಾ! ಇಲ್ಲ, ರಾಜನ ತಾಯಿ ಎಂಬ ಮಾತನ್ನು ಕೇಳಲು ನೀನು ಬಯಸಿದ...
🌹 ಮೇಘದೂತದ ಒಂದು ಕುಸುಮ 🌹 *तां कस्यांचिद्भवनवलभौ  सुप्तपारावतायां  नीत्वा रात्रिं चिरविलसनात्खिन्नविद्युकलत्र: । सूर्ये दृष्टे पुनरपि भवान्वाहयेदध्वशेषं मन्दायन्ते न खलु सुहृदामभ्युपेतार्थकृत्या: ।।* _ಮೇಘವೇ, ನೀನು ಅಲ್ಲಲ್ಲಿ ಮಿಂಚಿನ ಸಂಚಾರ ಏರ್ಪಡಿಸಿ ಮಳೆಯ ತೋರಣ ಕಟ್ಟುತ್ತಾ ಹೋಗುತ್ತಿರುವಾಗ ಬಹುಕಾಲ ಸ್ಫುರಿಸಿದುದರಿಂದ ಬಳಲಿದ ಮಿಂಚೆಂಬ ನಿನ್ನ ಪತ್ನಿಗೆ ಸ್ವಲ್ಪ ವಿಶ್ರಾಂತಿ ಕೊಡಿಸು. ಜನರೆದುರಿಗೆ ಅವಳು ಸತತವಾಗಿ ಕಾಣಿಸಿಕೊಂಡು ಆಕೆ ಬಳಲಿಹಳು ಆಧುನಿಕ ಮಾಡೆಲ್ ಗಳು ಕ್ಯಾಮೆರಾ ಕಣ್ಣಿಗೆ ಬಿದ್ದು ಬಳಲುವಂತೆ. ನೀನು ಯಾವುದಾದರೂ ಪಾರಿವಾಳಗಳು ಮಲಗಿರುವ ಮಹಡಿಯ ಮೇಲ್ಭಾಗದಲ್ಲಿ ಆ ರಾತ್ರಿಯನ್ನು ಕಳೆ. ಹಾಗೆಯೇ ಮೈ ಮರೆಯದಿರು. ಸೂರ್ಯೋದಯವಾಗುತ್ತಿದ್ದಂತೆ ಮತ್ತೆ ನಾನು ನಿರ್ದೇಶಿಸಿದ ಉಳಿದ ಮಾರ್ಗವನ್ನು ಸಾಕಷ್ಟು ಬೇಗ ಕ್ರಮಿಸು. ಏಕೆ ಹೀಗೆ ನುಡಿಯುವೆನೆಂದರೆ ಮಿತ್ರರ ಕೆಲಸ ಮಾಡುವೆವೆಂದು ಮಾತು ಕೊಟ್ಟವರಾರೂ ವಿಳಂಬ ಮಾಡದೇ ಶೀಘ್ರವಾಗಿ ‌ಮುಗಿಸುವರು._ _ಸ್ವಲ್ಪ ಕಾಲ ಯಾರಿಗೂ ಕಾಣಿಸಿಕೊಳ್ಳದೇ ಮಿಂಚು ಹೊಡೆಸದೇ ವಿಶ್ರಾಂತಿ ಪಡೆ. ಅನಂತರ ಎಷ್ಟು ಸಾಧ್ಯವೋ ಅಷ್ಟು ಬೇಗ ನನ್ನ ಮನದರಸಿಯ ಬಳಿ ತೆರಳು. ಒಳ್ಳೆಯ ಮಿತ್ರನು ಯಾವತ್ತಿಗೂ ತಾನು ಮಾಡಿಕೊಡುವೆನೆಂದು ಹೇಳಿದ ಕೆಲಸದ ವಿಷಯದಲ್ಲಿ ವಿಳಂಬ ಮಾಡಲಾರನು. ನನ್ನ ಆಪ್ತಮಿತ್ರ ನೀನು. ನಿನ್ನನ್ನೇ ನಂಬಿ ಬದುಕು ಉಳಿಸಿಕೊಂಡಿರುವೆ....
🌾📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೪ *ಯಸ್ಯ ಸತ್ವಸ್ಯ ಯಾ ಯೋನಿಸ್ತಸ್ಯಾಂ ತತ್ಪರಿಮಾರ್ಗ್ಯತೇ. ನ ಶಕ್ಯಾ ಪ್ರಮದಾ ನಷ್ಟಾ ಮೃಗೀಷು ಪರಿಮಾರ್ಗಿತುಮ್* ಹನುಮಂತ ಸೀತೆಯನ್ನು ಎಲ್ಲೆಡೆ ಹುಡುಕುತ್ತಿರುವಾಗ ಹೇಳುವ ಮಾತು. ನಮ್ಮನ್ನು ಕುರಿತೇ ಹೇಳಿದಂತಿದೆ. ತಪ್ಪಿಸಿಕೊಂಡು ಹೋದ ಒಂದು ಪ್ರಾಣಿಯನ್ನು ಆ ಜಾತಿಯ ಪ್ರಾಣಿಗಳ ಗುಂಪಲ್ಲೆ ಹುಡುಕಬೇಕೇ ಹೊರತು ಬೇರೆಡೆಯಲ್ಲ. ಹಸು ತಪ್ಪಿಸಿಕೊಂಡರೆ ಹಸುಗಳೆಡೆಯಲ್ಲಿ, ಜಿಂಕೆ ತಪ್ಪಿಸಿಕೊಂಡರೆ ಜಿಂಕೆಗಳ ಮಧ್ಯೆ ಹುಡುಕಬೇಕೇ ಹೊರತು ಮೊಲಗಳ ನಡುವೆ ಅಲ್ಲ. ಹಾಗಾಗಿ ಸ್ತ್ರೀಯರ ಸಮೂಹದಲ್ಲೇ ಸೀತೆಯ ಅನ್ವೇಷಣೆ ಸರಿಯಾದುದು ಎನ್ನುವ ಮಾತು. ನಾವೂ ಎಲ್ಲಿ  ತಪ್ಪು ಮಾಡುತ್ತೇವೆಯೋ ಅಲ್ಲಿ ಸರಿ ಮಾಡಿಕೊಳ್ಳದೇ ಬೇರೆ ಏನು ಮಾಡಿದರೂ ಫಲವಿದೆಯೇ! ವೈಫಲ್ಯ ಹೊಂದಿದಲ್ಲೇ ಮತ್ತೆ ಮತ್ತೆ ಫಲಾನ್ವೇಷಣೆ ನಡೆಸಿದರೆ ಯಶಸ್ವಿಯಾಗಬಹುದು. ಇನ್ನೊಂದು ರೀತಿಯಲ್ಲಿಯಾದರೆ ತಪ್ಪನ್ನು ಬೇರೆಡೆ ಹುಡುಕುವ ನಾವು ನಮ್ಮ ತಪ್ಪುಗಳನ್ನು ಮರೆತೇ ಬಿಡುತ್ತವೆ. ನಮ್ಮಲ್ಲೆ ಮೊದಲು ಹುಡುಕಿ ಸರಿ ಮಾಡುತ್ತಾ ಬಂದರೆ ಯಶಸ್ಸು ಸುಲಭವಾಗುವುದಲ್ಲವೇ! *ಅನಿರ್ವೇದ: ಶ್ರಿಯೋ ಮೂಲಮ್ ಅನಿರ್ವೇದ: ಪರಂ ಸುಖಮ್* ಕಳವಳಗೊಳ್ಳದೇ ಉತ್ಸಾಹಿತನಾಗಿರುವುದೇ ಶ್ರೇಯಸ್ಸಿನ ಪರಮ ಸಾಧನ. ಅದೇ ಸುಖಕ್ಕೂ ಹೇತುವಾಗಿದೆ. ಸಿಗಲಿಲ್ಲವೆಂದು ಧೈರ್ಯಗೆಡದೆ ಕಳವಳಪಡದೆ ಹಿಂದಿರುಗದೇ ಮರಳಿ ಯತ್ನವ ಮಾಡು ಎಂಬಂತೆ ಉತ್ಸಾಹದಿಂದ ಕಾರ್ಯದಲ್ಲಿ ತೊಡಗುವುದೇ ಯ...
🌾📙🌾 *ರಾಮಾಯಣದಲ್ಲಿ ಕಾಣಸಿಗುವ ವಿಶೇಷ ಮಾಹಿತಿಗಳು ಹಾಗೂ ನುಡಿಮುತ್ತುಗಳು* ಭಾಗ-೩ *ಪ್ರಯಾಣಕಾಲೇ ಸ್ವಗೃಹಪ್ರವೇಶೇ ವಿವಾಹಕಾಲೇಪಿ ಚ ದಕ್ಷಿಣಾಂಘ್ರಿಮ್ ಕೃತ್ವಾಗ್ರತ: ಶತ್ರುಪುರಪ್ರವೇಶೇ ವಾಮಂ ನಿದಧ್ಯಾಚ್ಚರಣಂ ನೃಪಾಲ:* *ಅದ್ವಾರೇಣ ಪ್ರವಿಶೇಚ್ಛತ್ರುವಿನಾಶಾಯ* ಎಂಬ ಮಾತಿನಂತೆ ಹನುಮನು ಲಂಕೆಯನ್ನು ಪ್ರವೇಶಿಸುವಾಗ ಅಪದ್ವಾರದಿಂದ ಪ್ರವೇಶಿಸಿದನು. ಕೃಷ್ಣನೂ ಮಗಧವನ್ನು ಪ್ರವೇಶಿಸುವಾಗ ಹಿಂದಿನ ಬಾಗಿಲಿನಿಂದಲೇ ಪ್ರವೇಶ ನೀಡುತ್ತಾನೆ. ಇದರ ನಂತರ ಹನುಮಂತ ಎಡಗಾಲನ್ನು ಇಟ್ಟ ಎನ್ನುವ ಶ್ಲೋಕದ ವ್ಯಾಖ್ಯಾನದ ಸಂದರ್ಭ ಈ  ಮೇಲಿನ ಶ್ಲೋಕ ಬೃಹಸ್ಪತಿ ಸ್ಮೃತಿಯದ್ದೆಂದು ಉಲ್ಲೇಖಿಸಿದ್ದಾರೆ. ದೂರಪ್ರಯಾಣಕ್ಕೆ ಹೊರಡುವಾಗ ಹಾಗೂ ತನ್ನ ಮನೆಯನ್ನು ಪ್ರವೇಶಿಸುವಾಗ , ವಿವಾಹಕಾಲದಲ್ಲಿ ಬಲಗಾಲನ್ನು ಮುಂದಿಡಬೇಕು. ಶತ್ರುಗಳ ಪುರ ಪ್ರವೇಶಿಸುವಾಗ ಎಡಗಾಲನ್ನು ಮೊದಲು ಇಡಬೇಕು. ಹೀಗಿರುವುದರಿಂದ ಈಗಿನ ಸೊಸೆಯಂದಿರು ಎಡಗಾಲಿಟ್ಟು ಬರುವುದು ಶತ್ರುಮನೆಯೆಂದೋ ತಿಳಿದಿಲ್ಲ. ಬೇರೆ ಶ್ಲೋಕಗಳು ಆ ಬಗ್ಗೆ ಇರಬಹುದು. ತಿಳಿದವರು ಹೇಳಿ. ಮುಂದುವರಿಯುತ್ತಾ ಪದ್ಮ ಸ್ವಸ್ತಿಕ ಮುಂತಾದ ಆಕಾರದ ಭವನಗಳನ್ನು ನೋಡಿದನೆಂದು ಬರುತ್ತದೆ. ಅಲ್ಲಿಯ ವ್ಯಾಖ್ಯಾನದ ಶ್ಲೋಕ- *ಚತು:ಶಾಲಂ ಚತುರ್ದ್ವಾರಂ ಸರ್ವತೋಭದ್ರಸಂಜ್ಞಕಮ್ ಪಶ್ಚಿಮದ್ವಾರರಹಿತಂ ನಂದ್ಯಾವರ್ತಾಹ್ವಯಂ ತು ತತ್ ಪ್ರಾಗ್ದ್ವಾರರಹಿತಂ ಸ್ವಸ್ತಿಕಾಖ್ಯಂ ಪುತ್ರಧನಪ್ರದಮ್* ನಾಲ್ಕು ಪ್ರಾಂಗಣವುಳ್ಳ ಮತ್ತು ನ...
🍀🌸 ಮಹಾಭಾರತದ ಅಪ್ರಸಿದ್ಧ ಕಥೆಗಳು ಹಾಗೂ ಕೆಲವು ಶ್ಲೋಕಗಳು ☘🌻  ಪಾಂಡವರು ಏಕಚಕ್ರನಗರದಿಂದ ವ್ಯಾಸರ ಆಣತಿಯಂತೆ ದ್ರೌಪದಿಯನ್ನು ಪಡೆಯಲೆಂದು ಪಾಂಚಾಲದ ಕಡೆಗೆ ಪಯಣಿಸುತ್ತಿದ್ದರು.ಮಧ್ಯ ಮಾರ್ಗದಲ್ಲಿ ಗಂಗೆಯ ತೀರವೊಂದರಲ್ಲಿ ಸಂಧ್ಯಾಸಮಯದಲ್ಲಿ ಉಳಿಯಲು ಬಯಸುತ್ತಾರೆ.ಆ ಸಮಯದಲ್ಲಿ ಅರ್ಜುನನು ಸ್ವಲ್ಪ ಕತ್ತಲಾದ್ದರಿಂದ ಬೆಳಕಿನ ದೊಂದಿ ಹಿಡಿದು ಅವರನ್ನು ಮುನ್ನಡೆಸುತ್ತಿರುತ್ತಾನೆ. ಆಗ ಅದೇ ಪ್ರದೇಶದಲ್ಲಿ ಸ್ವಲ್ಪ ರಮಣೀಯವಾದ ಗಂಗೆಯ ಪ್ರವಾಹವಿರುವ ಸ್ಥಳದಲ್ಲಿ  ಅಂಗಾರಪರ್ಣನೆಂಬ ಗಂಧರ್ವರಾಜನೊಬ್ಬ ಸಖಿಯರೊಡಗೂಡಿ ಜಲಕ್ರೀಡೆ ಆಡುತ್ತಿದ್ದನು. ಇವರ ಆಗಮನವನ್ನು ಕಂಡ ಆ ಈರ್ಷ್ಯೆಯ ಗಂಧರ್ವನು ಕುಪಿತನಾಗಿ ಆಕ್ಷೇಪಿಸುತ್ತಾನೆ. *ಸಂಧ್ಯಾ ಸಂರಜ್ಯತೇ ಘೋರಾ ಪೂರ್ವರಾತ್ರಾಗಮೇಷು ಯಾ ಅಶೀತಿಭಿಸ್ತ್ರುಟೈರ್ಹೀನಂ ತಂ ಮುಹೂರ್ತಂ ಪ್ರಚಕ್ಷತೆ ವಿಹಿತಂ ಕಾಮಚಾರಾಣಾಂ ಯಕ್ಷಗಂಧರ್ವರಾಕ್ಷಸಾಮ್.* ರಾತ್ರಿಯ ಆರಂಭಕ್ಕೆ ಮುನ್ನ ಘೋರವಾದ ಸಂಧ್ಯಾಕಾಲ ಕೆಂಪೇರುತ್ತಿದೆ. ಎಂಭತ್ತು ವಿಘಳಿಗೆಗಳು ಕಳೆದ ಮೇಲೆ ಬರುವ ಮುಹೂರ್ತವು ಕಾಮಚಾರಿಗಳಾದ ಯಕ್ಷರು ರಾಕ್ಷಸರು ಗಂಧರ್ವರು ಇವರುಗಳಿಗೆ ಹೇಳಿದ ಕಾಲ. ಉಳಿದ ಸಮಯವೆಲ್ಲ ಮನುಷ್ಯರಿಗೆ ಮೀಸಲಾಗಿದೆ.ಹಾಗಾಗಿ ನೀವೇಕೆ ಸಂಚರಿಸುತ್ತಿರುವಿರಿ. *ತತೋ ರಾತ್ರೌ ಪ್ರಾಪ್ನುವತೋ ಜಲಂ ಬ್ರಹ್ಮವಿದೋ ಜನಾ: ಗರ್ಹಯಂತಿ ನರಾನ್ಸ್ತರ್ವಾನ್ಬಲಸ್ಥಾನ್ನೃಪತೀನಪಿ* ರಾತ್ರಿಯ ಕಾಲದಲ್ಲಿ ನೀರಿನ ಬಳಿ ಬರುವ ಮನುಷ್ಯರನ್ನು ...
🌹ಮೇಘದೂತದ ಒಂದು ಸುರಭಿ 🌹 *जालोद्गीर्णैरुपचितवपु: केशसंस्कारधूपै: बन्धुप्रीत्या भवनशिखिभिर्दत्तनृत्योपहार: । हर्म्येष्वस्या: कुसुमसुरभिष्वध्वखेदं नयेथा लक्ष्मीं पश्यल्ललितवनितापातयदरागाङ्कितेषु ।।* _ಮೇಘನೇ ಮಾರ್ಗಾಯಾಸದ ನಿವಾರಣೆಗೆ ನಿನಗೆ ಸಾಕಷ್ಟು ಉಪಾಯ ಹೇಳುವೆನು. ಕಿವಿಗೊಟ್ಟು ಕೇಳು. ಉಜ್ಜಯಿನಿಯ ಆ ಪ್ರಾಸಾದಗಳಲ್ಲಿ ( ಮಹಡಿಮನೆ) ಸುಂದರ ಸ್ತ್ರೀಯರು ಅಭ್ಯಂಗ ಮಾಡಿ ಕೇಶಸಂಸ್ಕಾರವೆಂದು ಕಿಟಕಿಯ ಸಮೀಪದಲ್ಲಿ ಅಗರು ಚಂದನ ಮುಂತಾದ ಸುಗಂಧ ವಸ್ತುಗಳ ಧೂಪ ಹಾಕುವರು. ( ಈಗಿನ ಕೂದಲು ಒಣಗಿಸುವ ಸಾಧನದ ಬದಲು ಆಗ ಪರಿಮಳದ ಧೂಪ ಹಾಕಿ ಒಣಗಿಸಿ ಕೇಶ ಸಂಸ್ಕಾರ ಕೊಡುತ್ತಿದ್ದರು) ಆ ಸುಗಂಧ ಧೂಪವನ್ನು ಯಥೇಚ್ಛವಾಗಿ ಕುಡಿದು ನಿನ್ನ ದೇಹವನ್ನು ಬೆಳೆಸಿಕೊ. ಮೇಘಕ್ಕೆ ಧೂಮವೂ ಒಂದು ಮೂಲದ್ರವ್ಯ. ಕವಿ ಮೊದಲಿಗೆ *ಧೂಮಜ್ಯೋತಿ* ಎಂಬ ಶ್ಲೋಕದಲ್ಲಿ ಈ ಅಂಶವನ್ನು ಹೇಳಿದ್ದಾನೆ. ಅಷ್ಟಲ್ಲದೇ ನಿನ್ನನ್ನು ತಮ್ಮ ಬಂಧುವೆಂದು ಭಾವಿಸುವ ಆ ಲಲನೆಯರ ಮನೆಯಲ್ಲಿ ಸಾಕಿರುವ ನವಿಲುಗಳು ನಿನ್ನ ಆಗಮನವಾದೊಡೆ ಮಳೆ ಬರುವ ಕಾರಣದಿಂದೆಂಬಂತೆ ಮನದಣಿ ನರ್ತಿಸುತ್ತವೆ.‌ ಹಿಂದೆ ನವಿಲುಗಳನ್ನು ಸೌಂದರ್ಯದ ದೃಷ್ಟಿಯಿಂದ ಸಾಕುತ್ತಿದ್ದರು. ( ಈಗ ಮುದ್ದು ಮಾಡಲು ಪೆದ್ದು ನಾಯಿ ಸಾಕುವಂತೆ) ಹಾಗೆಯೇ ಆ ಮಹಡಿ ಮನೆಗಳ ಹೊರಭಾಗದಲ್ಲಿ ನೆಟ್ಟ ಹೂವಿನ ಬಳ್ಳಿಗಳು ಮನೆಸುತ್ತಲೂ ಪೂಜೆ ಮಾಡುವಂತೆ ಹೂವು ಚೆಲ್ಲುತ್ತವೆ. ಸಂಪಿಗೆ ಮಲ್ಲಿಗೆ ಜಾ...
🌺 ಪ್ರತಿಮಾ ನಾಟಕದ ಒಂದು ಕುಸುಮ 🌺 *वयमयशसा चीरेणार्यो नृपो गृहमृत्युना प्रततरुदितै: कृत्स्नायोध्या मृगै: सह लक्ष्मण: दयिततनया: शोकेनाम्बा: स्नुषाध्वपरिश्रमै: धिगिति वचसा चोग्रेणात्मा त्वया ननु योजिता: ।।* _ಭರತನ ಸಿಟ್ಟಿನ ಮಾತು. ಸುಮಂತ್ರನು ಇವಳು ನಿನ್ನವ್ವೆ, ನಮಸ್ಕರಿಸು ಎಂದಾಗ ಭರತನ ಪಾಪಿ ಎಂದು ಬೈಯುವನು. ಗಂಗೆ ಯಮುನೆಯರ ನಡುವೆ ಕೊಳಚೆ ನೀರೊಂದು ಬಂದಂತೆ ಕೌಸಲ್ಯಾ ಸುಮಿತ್ರೆಯರ ನಡುವೆ ಕೆಟ್ಟವಳಾದ ನೀನು ನಿಂತಿರುವೆ ಎಂದೆಲ್ಲಾ ಕ್ರೂರವಾಗಿ ನಿಂದಿಸುತ್ತಾನೆ. ಆಗ ಕೈಕೇಯಿ ಮಗನೇ ನಾನು ಏನು ಮಾಡಿದೆಯೆಂದು ಈ ನಿಂದೆ ಎಂದು ಪ್ರಶ್ನಿಸುತ್ತಾಳೆ. ಆಗ ಭರತನ ಮಾತು._ _ರಾಜ್ಯಲೋಭದಿಂದ ಭರತನು ಅಮ್ಮನ ಕೈಯಿಂದ ಹೀಗೆ ಮಾಡಿಸಿದನು ಎಂಬ ಅಪಕೀರ್ತಿ ನನಗೆ ತಂದೊಡ್ಡಿದೆ. ಅರಮನೆಯಲ್ಲಿ ಸುಖವಾಗಿದ್ದ ನನ್ನಣ್ಣ ರಾಮನಿಗೆ ನಾರುಬಟ್ಟೆ ಉಡಿಸಿ ಕಾಡಿಗೆ ಕಳುಹಿದೆ. ಇಕ್ಷ್ವಾಕು ವಂಶದವರಿಗೆ ಅನುರೂಪವಲ್ಲದ ಮನೆಯಲ್ಲೇ ಸಾವನ್ನು ರಾಜನಿಗೆ ಉಂಟುಮಾಡಿದೆ.ಅವರೇನಿದ್ದರೂ ಯೋಗೇನಾಂತೇ ತನುಂ ತ್ಯಜೇತ್ ಎಂಬಂತೆ ವಾನಪ್ರಸ್ಥಾಶ್ರಮದ ಕೊನೆಯಲ್ಲಿ ಯೋಗಮಾರ್ಗದಿಂದ ಪ್ರಾಣ ಬಿಡುವವರು. ಈಗ ನೋಡಿದರೆ ದಶರಥ ಎದೆ ಒಡೆದು ಸತ್ತಿದ್ದಾನೆ. ಈ ಎರಡು ಘಟನೆಗಳ ಕಾರಣ ರಾಮನ ವನವಾಸ ದಶರಥನ ಸ್ವರ್ಗ ವಾಸದ ಕಾರಣ ಅಯೋಧ್ಯೆಗೆ ಅಯೋಧ್ಯೆಯೇ ದು:ಖವೆಂಬ ಕಡಲಿನಲ್ಲಿ ಮುಳುಗಿದೆ. ಸಾಧು ಸ್ವಭಾವದ ನನ್ನ ತಮ್ಮ ಲಕ್ಷ್ಮಣನಿಗೆ ಮೃಗಗಳ ಜೊತೆಗ...
🌺 ಪ್ರತಿಮಾನಾಟಕದ ಒಂದು ಸುಮ 🌺 *त्यक्त्वा स्नेहं शीलसङ्क्रानतदोषै: पुत्रास्तावन्नन्वपुत्रा: क्रियन्ते । लोकेपूर्वं स्थापयाम्येव धर्मं भर्तृद्रोहादस्तुमाताप्यमाता ।।* _ಭರತನ ಮಾತು. ಕೌಸಲ್ಯೆ ನಿನ್ನ ತಾಯಿ ಇವಳು ನಮಸ್ಕರಿಸು ಎಂದಾಗ ಭರತನಾಡುವ ಮಾತು. ಹಿಂದೆ ಆಗಿದ್ದಳು ಈಗಲ್ಲ. ಎಂತಹ ಕ್ರೂರ ಮಾತು. ಏಕೆಂದರೆ ಕೆಟ್ಟವರ ಸಹವಾಸದಿಂದ ಮಕ್ಕಳಲ್ಲಿ ಪ್ರೀತಿಯನ್ನು ತೊರೆದ ಇವಳು ಮಕ್ಕಳನ್ನು ಮಕ್ಕಳಂತೆ ನೋಡದೇ ಅನ್ಯರಂತೆ ನೋಡಿದ್ದಾಳೆ. ನಾಲ್ಕು ಮಕ್ಕಳ ಮೇಲೂ ಯಾವ ಸಮಾನ ಪ್ರೀತಿ ತೋರಬೇಕಿತ್ತೋ ಅದನ್ನು ತೋರಲಿಲ್ಲ. ಅಥವಾ ಇನ್ನೊಂದು ಅರ್ಥ ಹೇಳುವುದಾದರೆ ಲೋಕದಲ್ಲಿ ಪಾಲಕರನ್ನು ಮರೆತ ಪುತ್ರರು/ಪುತ್ರಿಯರು ಅವರಿಗೆ ಸರಿಯಾದ ಮಕ್ಕಳೆನಿಸಲಾರರು. ಅಮ್ಮನ ಇಂತಹ ಕೃತ್ಯವನ್ನು ನಾನು ಸಹಿಸಲಾರೆ. ಈಗ ಹೊಸದೊಂದು ನಿಯಮವನ್ನು ಜಾರಿಗೆ ತರುತ್ತೇನೆ. ಪತಿಗೆ ದ್ರೋಹ ಬಗೆದ ಮಹಿಳೆಯು ಮಕ್ಕಳ ಪಾಲಿಗೆ ಅಮ್ಮನಲ್ಲ. ಪತಿಯ ಮರಣಕ್ಕೆ ಕಾರಣವಾದ ನಮ್ಮ ತಂದೆಯನ್ನು ಕೊಂದ ಈಕೆ ಹೇಗೆ ನಮಗೆ ತಾಯಿಯಾಗಬಲ್ಲಳು! ಇವಳನ್ನು ತಾಯಿಯೆಂದು ನಮಸ್ಕರಿಸಲು ನನ್ನ ಮನ ಎಳ್ಳಷ್ಟೂ ಒಪ್ಪಲಾರದು. ಹಾಗಾಗಿ ನಮಸ್ಕಾರ ಮಾಡುವ ಪ್ರಮೇಯವೇ ಇಲ್ಲ. ಮಕ್ಕಳಿಗೂ ಮೋಸ ಮಾಡಿದ್ದಾಳೆ ಪತಿಗೂ ದ್ರೋಹ ಮಾಡಿರುವ ಈಕೆ ಯಾವ ಸೀಮೆಯ ಅಮ್ಮ!  ಶಾಲಿನೀ ಎಂಬ ವೃತ್ತ ಇಲ್ಲಿ ಬಳಕೆಯಾಗಿದೆ. ಕವಿ ಭರತನ ಮನದ ಭಾವವನ್ನು ನಾಟಕಕ್ಕೆ ಪೂರಕವಾಗಿ ಅಳವಡಿಸಿದ್ದಾನೆ._ 📜 ಸಂ...
🌾📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು. *ಸಲಿಲಸಮೇ ಶಶಿನಿ ರವೇರ್ದೀಧಿತಯೋ ಮೂರ್ಛಿತಾಸ್ತಮೋ ನೈಶಮ್, ಕ್ಷಪಯಂತಿ ದರ್ಪಣೋದರನಿಹಿತಾ ಇವ ಮಂದಿರಸ್ಯಾಂತ:* ಸೂರ್ಯನ ಸಂಪರ್ಕದಿಂದ ಚಂದ್ರನ ಬೆಳಕೆಂಬುದನ್ನು ಸುಂದರಕಾಂಡದಲ್ಲಿ ಹೇಳುತ್ತಾರೆ. ಅದರ ವ್ಯಾಖ್ಯಾನದ ಸಂದರ್ಭದಲ್ಲಿ ವರಾಹ ಮಿಹಿರನ ಈ ಶ್ಲೋಕ ಉದಾಹರಿಸುತ್ತಾರೆ. ಸೂರ್ಯನ ಕಿರಣಗಳೇ ಚಂದ್ರನ ಮೇಲೆ ಬಿದ್ದು ತನ್ಮೂಲಕ ಚಂದ್ರ ಬೆಳಗುವನು. ಸೂರ್ಯನ ಕಿರಣಗಳ ಸಂಪರ್ಕವಿಲ್ಲದಿರೆ ಚಂದ್ರನ ಜಗವ ಬೆಳಗುವ ಕಾಂತಿ ಸಾಧ್ಯವಿಲ್ಲ. ಆಧುನಿಕ ವಿಜ್ಞಾನ ಸಂಶೋಧನೆ ಎನ್ನುವ ಈ ವಿಷಯ ವರಾಹಮಿಹಿರನಿಂದ ತುಂಬಾ ಮುಂಚೆಯೇ ಹೇಳಲ್ಪಟ್ಟಿತ್ತು. ಮುಂದೆ ರಾವಣನ ಸೈನ್ಯದ ಮಹಾರಥಿಗಳ ವರ್ಣನೆ ಬರುತ್ತದೆ. ಮಹಾರಥಿ ಎಂದರೇನು? *ಏಕೋ ದಶಸಹಸ್ರಾಣಿ ಯೋಧಯೇದ್ಯಸ್ತು ಧನ್ವಿನಾಮ್ ಶಸ್ತ್ರಶಾಸ್ತ್ರ ಪ್ರವೀಣಶ್ಚ ಸ ಮಹಾರಥ ಉಚ್ಯತೇ* ಹತ್ತು ಸಾವಿರ ಧನುರ್ಧಾರಿಗಳನ್ನು ಎದುರಿಸುವ ಸಾಮರ್ಥ್ಯ ಉಳ್ಳವನು ಹಾಗೂ ಶಸ್ತ್ರ ಮತ್ತು ಶಾಸ್ತ್ರಗಳೆರಡರ ಪರಿಣತಿ ಹೊಂದಿದ ವ್ಯಕ್ತಿಯೇ ಮಹಾರಥನಾಗುತ್ತಿದ್ದ. ಗೀತೆಯಲ್ಲಿ ಶಿಖಂಡಿಯನ್ನೂ ಮಹಾರಥನೆಂದು ಹೇಳಿರುವುದು ಭೀಷ್ಮನ ಎದುರಿಗೆ ಅವನ ಪರಾಕ್ರಮವೂ ಇತ್ತು ಎನ್ನುವುದರ ಸೂಚಕವೂ ಹೌದೇನೋ! *ಮನೋ ಹಿ ಹೇತು: ಸರ್ವೇಷಾಮಿಂದ್ರಿಯಾಣಾಂ ಪ್ರವರ್ತನೇ ಶುಭಾಶುಭಾಸ್ವವಸ್ಥಾಸು ತಚ್ಚ ಮೇ ಸುವ್ಯವಸ್ಥಿತಮ್* ಹನುಮಂತ ರಾವಣನ ಅಂತ:ಪುರದಲ್ಲಿ ನಾನಾ ಭಂಗಿಯಲ್ಲಿ ಮಲಗಿದ್ದ ಸಾವಿರಾರು ಸುಂದರಿಯರನ್ನ...
📙 ವೇದ- ಧರ್ಮ ಭಾಗ-೧೨ *ವೇದದ ಬ್ರಾಹ್ಮಣಗಳು* ಯಜುರ್ವೇದ ಬ್ರಾಹ್ಮಣ ಶುಕ್ಲ ಯಜುರ್ವೇದದ ಮಾಧ್ಯಂದಿನ ಹಾಗೂ ಕಾಣ್ವ ಶಾಖೆಗೆ ಸಂಬಂಧಿಸಿದ ಬ್ರಾಹ್ಮಣ. ಈ ಗ್ರಂಥ ಉಳಿದೆಲ್ಲ ಬ್ರಾಹ್ಮಣಗಳಿಗಿಂತ ಹೆಚ್ಚು ಮಹತ್ವಪೂರ್ಣವಾಗಿದೆ ಹಾಗೂ ಬೃಹತ್ತಾಗಿಯೂ ಇದೆ. ಯಜ್ಞಾನುಷ್ಠಾನದ ಸಂಪೂರ್ಣ ಪ್ರತಿಪಾದನೆ ಇಲ್ಲಿ ಕಂಡುಬರುತ್ತದೆ.‌ ಮಾಧ್ಯಂದಿನೀಯ ಶತಪಥಬ್ರಾಹ್ಮಣದಲ್ಲಿ ೧೪ ಕಾಂಡಗಳು, ೧೦೦ ಅಧ್ಯಾಯಗಳು, ೪೩೮ ಬ್ರಾಹ್ಮಣಗಳು, ೭೬೨೪ ಕಂಡಿಕೆಗಳು ಇವೆ. ಇದರ ನೂರು ಅಧ್ಯಾಯಗಳಿಂದಾಗೆಯೇ ಇದಕ್ಕೆ *ಶತಪಥ* ವೆಂಬ ಹೆಸರು ಬಂದಿದೆ. *ಶತಂ ಪಂಥಾ: ಯಸ್ಯ ತತ್* ಎಂಬ ವ್ಯುತ್ಪತ್ತಿಯಿಂದ ಸಿದ್ಧವಾದ ಹೆಸರು. ನೂರು ವಿಧಾನಗಳ ಪ್ರತಿಪಾದಕ ಎನ್ನುವ ಅರ್ಥವನ್ನು ಹೇಳಬಹುದು. ಪಥಿ ಶಬ್ದವು ಮಾರ್ಗ ಎನ್ನುವ ಅರ್ಥ ಹೇಳಿದಾಗ. ದೇವರನ್ನು ಹೊಂದಲು ನೂರಾರು ಮಾರ್ಗಗಳು. ದ್ರವ್ಯಯಜ್ಞ, ಯೋಗಯಜ್ಞ, ಜ್ಞಾನಯಜ್ಞ, ತಪೋಯಜ್ಞ ಇತ್ಯಾದಿ. ಕಾಣ್ವ ಶಾಖೆಯ ಇದೇ ಬ್ರಾಹ್ಮಣದಲ್ಲಿ ೧೭ ಕಾಂಡಗಳೂ, ೧೦೪ ಅಧ್ಯಾಯಗಳೂ ೪೩೫ ಬ್ರಾಹ್ಮಣಗಳೂ ( ಅನುವಾಕ ಅಥವಾ ಸೂಕ್ತ) ೬೮೦೬ ಕಂಡಿಕೆಗಳೂ ( ಮಂತ್ರಗಳು) ಇವೆ. ಹಾಗಿದ್ದರೂ ಅದನ್ನೂ ಇದೇ ಹೆಸರಿನಿಂದಲೇ ಕರೆಯಲಾಗುವುದು. ಈ ಶತಪಥ ಬ್ರಾಹ್ಮಣದಲ್ಲಿ ಯಜ್ಞಗಳ ವಿಭಿನ್ನ ಪರಿಚಯ, ಹಾಗೂ ಅನುಷ್ಠಾನ, ಅವುಗಳ ಪರಿಪೂರ್ಣತೆ ಇದನ್ನು ಸುಂದರವಾಗಿ ನಿರೂಪಣೆ ಮಾಡುತ್ತಾರೆ.( ವ್ಯರ್ಥವೆಂದು ಆಪಾದನೆ ಮಾಡುವವರ ಸಂಶಯ ಪರಿಹಾರಕ್ಕೆ ಹೇಗೆ ಪರಿಪೂರ್ಣ ಸಾರ್ಥಕ ಎನ...
🌹 ಮೇಘದೂತದ ಒಂದು ಮಧುಬಿಂದು 🌹 *वक्र: पन्था यदपि भवत: प्रस्थितस्योत्तराशां सौधौत्सङ्गप्रणयविमुखो मा स्म भूरुज्जयिन्या: । विद्युद्दामस्फुरितचकितैस्तत्र पौराङ्गनानां लोलापाङ्गैर्यदि न रमसे लोचनैर्वञ्चितोसि ।।* _ಎಲೈ ಸಖನೇ, ಉತ್ತರದಿಕ್ಕಿನಲ್ಲಿ ಹೊರಟಿರುವ ನಿನಗೆ ಮಾರ್ಗವು ಸುತ್ತುಬಳಸಿ ಹೋಗುವ ರೀತಿಯೆಂದು ಕಾಣಿಸಿದರೂ ಹಾಗೆಯೇ ಹೋಗು. ಏಕೆಂದರೆ ಆ ದಾರಿಯಲ್ಲಿ ಕಾಣಸಿಗುವ ಉಜ್ಜಯಿನೀ ನಗರದ ಉನ್ನತ ವಾದ ಭವನಗಳ ಮೇಲ್ಭಾಗದಲ್ಲಿ ಮಾನಿನಿಯರ ಸ್ನೇಹದಿಂದ ವಿರಹಿತನಾಗದಿರು. ನೀನು ಮಿಂಚು ಕಾಣಿಸಿದಾಗ ಆ ಮಿಂಚಿನ ಬಳ್ಳಿಯಿಂದ ಅಥವಾ ಅಕಸ್ಮಾತ್ತಾಗಿ ಕಾಣಿಸಿಕೊಂಡ ಮಿಂಚಿನ ರೇಖೆಯಿಂದ ಭಯ ಹಾಗೂ ಆಶ್ಚರ್ಯದಿಂದ ಕೂಡಿರುವ ಅತ್ಯಂತ ಚಂಚಲವಾದ ನೋಟದಿಂದ ಕೂಡಿರುವ ಆ ನಗರದ ಮುದ್ದು ಮುದ್ದಾದ ಅತ್ತಿತ್ತ ಓಲಾಡುತ್ತಿರುವ ಸ್ತ್ರೀಯರ ಕಣ್ಣುಗಳಿಂದ ನೀನು ವಿಹರಿಸದಿದ್ದಲ್ಲಿ ನಿನ್ನ ಜನ್ಮವು ವ್ಯರ್ಥವಾದೀತು._ _ಉಜ್ಜಯಿನಿಯ ಮಹಿಳೆಯರು ಸ್ವಭಾವ ಸುಂದರಿಯರು. ಅವರು ಬಟ್ಟೆ ಒಣಗಹಾಕಲೆಂದೋ ಅಥವಾ ಸಂಡಿಗೆ ಮುಂತಾದವುಗಳನ್ನು ಒಣಗಿಸಲೆಂದೋ ಅಥವಾ ತಂಗಾಳಿ ಸೇವಿಸಲೆಂದೋ ಅಥವಾ ಪ್ರಿಯನ ಮುಖಕಮಲ ಕಾಣಸಿಗುವುದೆಂದೋ ಉಪ್ಪರಿಗೆಯ ಮೇಲೆ ಬಂದಿರುತ್ತಾರೆ. ನೀನು ನೇರವಾಗಿ ಹೋದರೆ ಆ ನಗರ ಸಿಗಲಾರದು. ಸುತ್ತು ಬಳಸಿ ಹೋಗುವುದೆಂದೆನಿಸದರೂ ಅವರ ಆ ಒಂದು ಕಣ್ಣೋಟವನ್ನು ಅನುಭವಿಸಲಿಕ್ಕಾದರೂ ಉಜ್ಜಯಿನಿಯ ಕಡೆಗೆ ತೆರಳು. ನಿನ್ನ ಆಗಮನವ...
🌾📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೨ *ಭೂತಾಶ್ಚಾರ್ಥಾ ವಿಪದ್ಯಂತೇ ದೇಶಕಾಲವಿರೋಧಿತಾ: ವಿಕ್ಲವಂ ದೂತಮಾಸಾದ್ಯ ತಮ: ಸೂರ್ಯೋದಯೇ ಯಥಾ* ದೂತನ ಲಕ್ಷಣವನ್ನು ಹೇಳಿದ್ದಾರೆ. ಸಮಯ ಸಂದರ್ಭ ನೋಡದೇ ವ್ಯವಹರಿಸುವ ದೂತನಿಗೆ ಒಪ್ಪಿಸಿದ ಕಾರ್ಯಗಳೆಲ್ಲವೂ ಸೂರ್ಯೋದಯವಾಗುವಾಗ ನಾಶ ಹೊಂದುವ ಕತ್ತಲಿನಂತೆ ಸರ್ವನಾಶವಾಗುತ್ತವೆ. ವಿಕ್ಲವ ಎಂದರೆ ಕಕ್ಕಾಬಿಕ್ಕಿಯಾದ, ಕಳವಳಗೊಂಡ, ಧೈರ್ಯವಿಲ್ಲದ, ವಿಮರ್ಶಿಸದೇ ಕಾರ್ಯ ಮಾಡುವವ ಎಂದೆಲ್ಲಾ ವ್ಯಾಖ್ಯಾನಗಳಿವೆ. ಹನುಮಂತನ ಮನದ ಮಾತಿದು. ನಾನು ರಾಮನ ದೂತನಾಗಿ ಬಂದು ವಿಕ್ಲವ ಹೊಂದದೇ ಪಕ್ವತೆಯಿಂದ ಕಾರ್ಯ ಮಾಡಬೇಕೆಂದು ಚಿಂತಿಸುತ್ತಿದ್ದಾನೆ. ದೂತನೆಂದಲ್ಲ ನಮ್ಮ ನಿಮ್ಮೆಲ್ಲರಿಗೂ ಈ ಗುಣಗಳು ವ್ಯವಹಾರಕ್ಕೆ ಎಂದಿಗೂ ಅವಶ್ಯವಾಗಿ ಬೇಕೇ ಬೇಕು. *ಅರ್ಥಾನರ್ಥಾನ್ತರೇ ಬುದ್ಧಿರ್ನಿಶ್ಚಿತಾಪಿ ನ ಶೋಭತೆ ಘಾತಯಂತಿ ಹಿ ಕಾರ್ಯಾಣಿ ದೂತಾ: ಪಂಡಿತಮಾನಿನ:* ಇದು ಹನುಮನದೇ ಮುಂದಿನ ಮಾತು. ಯಾವ ಕಾರ್ಯ ಮಾಡಬೇಕು ಯಾವುದನ್ನು ಮಾಡಬಾರದೆನ್ನುವ ವಿಷಯದಲ್ಲಿ ರಾಜನು ಮಂತ್ರಿಗಳೊಡನೆ ಸಮಾಲೋಚಿಸಿ ನಿರ್ಣಯಿಸಿದ ಬುದ್ಧಿಯೂ ಅವಿವೇಕಿ ದೂತನಲ್ಲಿ ಶೋಭಿಸುವುದಿಲ್ಲ. ತಾನೇ ಮಹಾಪಂಡಿತನೆಂದು ಭಾವಿಸಿ ತನಗೆ ಸರಿಬಂದಂತೆ ಸ್ವೇಚ್ಛೆಯಿಂದ ಕಾರ್ಯಮಾಡುವ ದೂತರು ಸ್ವಾಮಿಯ ಕಾರ್ಯ ಹಾಳುಮಾಡುತ್ತಾರೆ. ರಾಜನ ಮಂತ್ರ ಎಷ್ಟು ಚೆನ್ನಾಗಿದ್ದರೂ ದೂತನ ಬುದ್ಧಿ ವಿವೇಕರಹಿತವಾದರೆ ಆ ಕಾರ್ಯ ಮಣ್ಣು ಪಾಲಾದಂತೆಯೇ ಸರಿ. ದೂತರು...
🌹 ಮೇಘದೂತದ ಒಂದು ಬಿಂದು 🌹 *वीचिक्षोभस्तनितविहगश्रेणिकाञ्चीगुणाया: संसर्पन्त्या: स्खलितसुभगं दर्शितावर्तनाभे: । निर्विन्ध्याया: पथि भव रसाभ्यन्तरस्सन्निपत्य स्त्रीणामाद्यं प्रणयवचनं विभ्रमो हि प्रियेषु ।।* _ಹೇ ಮೇಘವೇ, ನೀನು ಚಲಿಸುವ ದಾರಿಯಲ್ಲಿ ಅಲೆಗಳ ಭೋರ್ಗರೆತದ ನಾದವನ್ನು ಉಂಟುಮಾಡುತ್ತಿರುವ, ಸ್ವಲ್ಪ ಮೇಲೆ ಗುಂಪು ಗುಂಪಾಗಿ ಹೃದಯದ ಆಕಾರದಲ್ಲಿ ಹಾರುತ್ತಿರುವ ಪಕ್ಷಿಗಳೇ ಸೊಂಟದ ಡಾಬಾಗಿರುವ, ಬಂಡೆಗಳಲ್ಲಿ ಒಮ್ಮೆ ಜಾರುತ್ತಾ ಮತ್ತೆ ಇಳಿಯುತ್ತಾ ಹರಿಯುವ ಮೂಲಕ ನಾಚೆಕೆ ತೋರುತ್ತಿರುವ, ಒಂದೆಡೆ ಸುಳಿಯೆಂಬ ತನ್ನ ಹೊಕ್ಕುಳನ್ನು ತೋರುತ್ತಾ ಆಕರ್ಷಿಸುತ್ತಿರುವ ನಿರ್ವಿಂಧ್ಯಾ ಎಂಬ ನದಿಯ ಸಂಸರ್ಗವನ್ನು ಹೊಂದಿ ನೀನು ಶೃಂಗಾರ ರಸವನ್ನು ಮನಸಾರೆ ಅನುಭವಿಸು. ಏಕೆಂದರೆ ಸ್ತ್ರೀಯರೆಂದೂ ಪ್ರೀತಿಯನ್ನು ಅಥವಾ ಪ್ರಿಯನ ಮೇಲಿನ ಬಯಕೆಯನ್ನು ಮಾತಿನಲ್ಲಿ ಹೇಳಲಾರರು. ಅವರ ವಿಲಾಸವೇ ( ಹಾವ-ಭಾವ, ವೇಷ- ಭೂಷಣ, ಸ್ವರಭಾರ,ನಾಚಿಕೆ) ಮೊದಲನೆಯ ಅನುರಾಗದ ನುಡಿ._ _ಉಜ್ಜಯಿನಿಗೆ ತೆರಳುವ ಮಾರ್ಗದಲ್ಲಿ ಸಿಗುವ ನಿರ್ವಿಂಧ್ಯಾ ಎಂಬ ನದಿಯ ವರ್ಣನೆ ಇಲ್ಲಿದೆ. ವಿಂಧ್ಯ ಪರ್ವತದಿಂದ ಉತ್ತರಕ್ಕೆ ಈ ನದಿ ಹರಿಯುತ್ತದೆ. ಈ ನದಿಯ ಪ್ರವಾಹ ಸಾಗುವ ವೇಳೆ ತೆರೆಗಳು ಅಲೆ ಅಲೆಯಾಗಿ ಸಾಗುವ ವೇಳೆ, ಅವುಗಳ ಮೇಲ್ಭಾಗದಲ್ಲಿ ಒಂದು ಪ್ರಕಾರವಾಗಿ ಹಾರುತ್ತಾ ಶಬ್ದ ಮಾಡುತ್ತಿರುವ ಪಕ್ಷಿಗಳ ಸಾಲು ಕವಿಗೆ ಹೆಣ್ಣಿನ ಡಾಬಿನಂತೆ ...
🌺 ಪ್ರತಿಮಾನಾಟಕದ ಒಂದು ಸುಮ 🌺 *अन्वास्यमानश्चिरजीवदोषै: कृतघ्नभावेन विडम्ब्यमान: । अहं हि तस्मिन् नृपतौ विपन्ने जीवामि शून्यस्य रथस्य सूत: ।।* _ಸುಮಂತ್ರನ ದು:ಖದ ಮಾತು. ತಾಯಂದಿರಿಗೆ ನಮಸ್ಕರಿಸುವ ವಿಧಾನವನ್ನು ಹೀಗೆ ಹೀಗೆ ಎಂದು ಉಪದೇಶಿಸಿದಾಗ ಭರತನಿಗೆ ಸಂಶಯ ಬಂದು ನೀನು ಹಿರಿಯ ಸುಮಂತ್ರನಲ್ಲವೇ? ಎಂದು ಪ್ರಶ್ನಿಸುತ್ತಾನೆ. ಆಗ ಸುಮಂತ್ರನಾಡುವ ಮಾತಿದು. ಹೌದಪ್ಪಾ ನಾನೇ ನತದೃಷ್ಟ ಸುಮಂತ್ರ. ಇನ್ನೂ ಸತ್ತಿಲ್ಲ. ಬಹುಕಾಲ ಬದುಕುವುದೆಂಬ ದೋಷವು ನನ್ನನ್ನು ಕಾಡುತ್ತಿದೆ. ನನ್ನ ಆಪ್ತರನೇಕರ ಮರಣ, ದು:ಖಪಡುವಿಕೆ, ನಾಶ ಮುಂತಾದವುಗಳನ್ನು ಕಣ್ಣಾರೆ ಕಾಣಬೇಕಾದ ಯೋಗ ಅಥವಾ ದೌರ್ಭಾಗ್ಯ ನನ್ನದು. ಒಡೆಯ ತೀರಿದರೂ ಅವನನ್ನುಸರಿಸದೆ ಬದುಕಿ ಕೃತಘ್ನತೆಯನ್ನು ವ್ಯಕ್ತಪಡಿಸುತ್ತಿದ್ದಾನೆ ಎಂದು ಲೋಕ ನನ್ನ ಬಗೆಗೆ ತಮಾಷೆ ಮಾಡುತ್ತಿದೆ. ಒಡೆಯನನ್ನು ( ದಶರಥನನ್ನು ) ಎಲ್ಲಾ ಕಾಲಕ್ಕೂ ಅನುಸರಿಸಿದವನು ಇಂದು ಮಾತ್ರ ಮರಣ ಸಮಯದಲ್ಲಿ ಬಿಟ್ಟು ಬದುಕುತ್ತಿರುವನು. ನಿಜವಾಗಿ ಕೃತಘ್ನ. ಒಡೆಯನ ಬಗೆಗೆ ಪ್ರೀತಿಯೇ ಹೊಂದಿಲ್ಲ ಎಂದೆಲ್ಲಾ ಹಾಸ್ಯ ಮಾಡುತ್ತಿರುವರು._ _ನಾನೇ ನೀನು ಹೇಳಿದ ಸುಮಂತ್ರ. ಅಂತಹ ಲೋಕದೀಪಕನಾದ ಮಹಾರಾಜ ಅಳಿದರೂ ಇನ್ನೂ ಬದುಕಿರುವ ಪಾಪಿ. ಕವಿ ಇಲ್ಲಿ ಸುಂದರವಾದ ದೃಷ್ಟಾಂತ ಕೊಟ್ಟಿದ್ದಾನೆ. ಖಾಲಿ ರಥಕ್ಕೆ ಸೂತ ಯಾಕೆ ಬೇಕು? ರಥದಲ್ಲಿ ಯಾರಾದರೂ ಹೋಗುವವರಿದ್ದರೆ ಆಗ ಸಾರಥಿಯ ಅವಶ್ಯಕತೆ ಇದೆ. ಈಗ ನನ್ನ ಸ್...
🌺 ಪ್ರತಿಮಾ ನಾಟಕದ ಒಂದು ಪುಷ್ಪ 🌺 *एते ते देवतानामसुरपुरवधे गच्छन्त्यभिसरीम् एते ते शक्रलोके सपुरजनपदा यान्ति स्वसुकृतै: । एते ते प्राप्नुवन्त: स्वभुजबलजितां कृत्स्नां वसुमतीम् एते ते मृत्युना ये चिरमनवसिताश्छन्दं मृगयता ।।* _ಭರತನು ಇಕ್ಷ್ವಾಕು ಕುಲದ ಹಿರಿಯರ ಪ್ರತಿಮೆಯನ್ನು ನೋಡಿ ತನ್ನ ಕುಲದವರ ಬಗೆಗೆ ಹೆಮ್ಮೆಯಿಂದ ನುಡಿಯುವ ವಚನ. ಈ ರಾಜರು ಹೇಗಿದ್ದರೆಂದರೆ, ದೇವತೆಗಳು ಹಾಗೂ ರಾಕ್ಷಸರ ನಡುವೆ ಯುದ್ಧ ನಡೆದಾಗ ದೇವ ಸಹಾಯಕ್ಕಾಗಿ ತೆರಳುತ್ತಿದ್ದ ಮಹಾವೀರರಿವರು. ಧರ್ಮ ಪಕ್ಷಪಾತಿಯಾಗಿ ದೇವತೆಗಳ ಪರವಾಗಿ ಪ್ರಾಣವನ್ನು ಪಣಕ್ಕಿಟ್ಟು ಯುದ್ಧ ಮಾಡುತ್ತಿದ್ದರು. ಇದು ದೇವತೆಗಳಿಗೂ ಸಮಾನವಾದ ಅಥವಾ ಮಿಗಿಲಾದ ಪರಾಕ್ರಮ ಉಳ್ಳವರು. ಇನ್ನು ತಮ್ಮ ಉತ್ತಮ ಕಾರ್ಯಗಳಿಂದಲೇ ಪುರದ ಜನರ ಜೊತೆಗೆ ಸ್ವರ್ಗವನ್ನು ಯಾರು ಹೊಂದುತ್ತಿದ್ದರೋ ಅಂತಹ ಮಹಿಮರಿವರು. ತಾವು ಮಾತ್ರ ಸ್ವರ್ಗಕ್ಕೆ ಹೋಗದೇ ತಮ್ಮ ಪುರಜನರನ್ನೂ ಉದ್ಧಾರ ಮಾಡುತ್ತಿದ್ದ  ವಿಶಾಲ ಹೃದಯದವರು. ಅಷ್ಟಲ್ಲದೇ ಇವರು ತಮ್ಮ ಭುಜಬಲದಿಂದ ಸಂಪೂರ್ಣ ಪೃಥ್ವಿಯನ್ನು ಗೆದ್ದು ಆಳುತ್ತಿದ್ದ ಮಹಾವೀರರು. ಈಗಿನಂತೆ ವಂಶಪಾರಂಪರ್ಯವಾಗಿ ಮಾತ್ರ ಆಳುತ್ತಿದ್ದ ರಾಜರುಗಳಲ್ಲ. ಸದಾ ಶತ್ರುಗಳನ್ನು ಸದೆ ಬಡಿದು ಚಕ್ರವರ್ತಿಗಳಾಗಿ ಬಾಳ್ವೆ ನಡೆಸಿದವರು. ಇವರು ನಮಗೆ ಮೃತ್ಯು ಬರದಿರಲಿ ಎಂಬ ಇಕ್ಷ್ವಾಕುಗಳ ಮಾತಿನಂತೆ ಯಮನೂ ಅವರಾಗಿಯೇ ಅವಸಾನ ಹೊಂದುವುದನ್ನು...
🌹 ಮೇಘದೂತದ ಒಂದು ಕುಸುಮ 🌹 *तेषां दिक्षु प्रथितविदिशालक्षणां राजधानीं गत्वा सद्य: फलमविकलं कामुकत्वस्य लब्धा । तीरोपान्तस्तनितसुभगं पास्यसि स्वादु यस्मात् सभ्रूभङ्गं मुखमिव पयो वेत्रवत्याश्चलोर्मि ।।* _ಎಲೈ ಮಿತ್ರನೇ, ನೀನೀಗ ದಶದಿಕ್ಕುಗಳಲ್ಲಿ ಪ್ರಸಿದ್ಧವಾದ ವಿದಿಶಾ ಎಂಬ ಹೆಸರಿನ ಆ ದಶಾರ್ಣದೇಶದ ರಾಜಧಾನಿಯನ್ನು ಪ್ರವೇಶಿಸಿ ಸುಖವನ್ನು ಹೊಂದುವೆ. ಇಲ್ಲಿ ನಿನಗೆ ಹೊಸ ಹೊಸ ಅನುಭವಗಳು ಜೊತೆಯಾಗುವವು. ಇಲ್ಲಿ ನೀನು ನಿನ್ನ ರಸಿಕತೆಗೆ ಸಂಪೂರ್ಣ ಫಲವನ್ನು ಪಡೆಯುವೆ ಅಥವಾ ನಿನ್ನ ವಿಲಾಸಿತನಕ್ಕೆ ಪ್ರಯೋಜನ ದೊರಕುವುದು. ಅದು ಹೇಗೆಂದರೆ ಅಲ್ಲಿ ವೇತ್ರವತಿಯೆಂಬ ನದಿ ಹರಿಯುತ್ತಲಿರುವುದು. ಅದರ ಅಲೆಗಳು ಬಹಳ ಚಂಚಲ. ( ನದಿಗಳ ಅಲೆ ಸಾಮಾನ್ಯವಾಗಿ ಚಂಚಲವೇ, ಹೆಣ್ಣಿನ ಮನದಂತೆ) ಆ ನದಿಯ ನೀರನ್ನು ಹುಬ್ಬುಗಂಟಿಕ್ಕುತ್ತಿರುವ ಅಥವಾ ಓರೆನೋಟ ಬೀರುತ್ತಿರುವ ಹೆಣ್ಣಿನ ಮೊಗವೆಂಬಂತೆ ಅವಲೋಕಿಸಿ ಆ ನೀರನ್ನು ಪಾನ ಮಾಡಲು ಬಯಸಿದವನಾಗಿ ಜೋರಾಗಿ ಒಮ್ಮೆ ಗರ್ಜಿಸಿ ನಿಧಾನಕ್ಕೆ ಪಾನಮಾಡು. ಇಲ್ಲಿ ನದಿಯ ಬಾಗಿದ ಅಲೆಗಳು ಕಾಮಿನಿಯ ಬಾಗಿದ ಹುಬ್ಬನ್ನು ಹೋಲುತ್ತವೆ. ಆ ಅಲೆಗಳು ಅತ್ತಿತ್ತ ಗಾಳಿಗೆ ಸುತ್ತಾಡುವುದು ಲಲನೆಯ ಕೇಶಗಳು ಸುತ್ತಾಡುವಂತಿದೆ. ಅಲೆಗಳ ಕೊನೆ ಅಂದರೆ ತೀರದ ಸಮೀಪ ಅವಳ ಮೊಗ. ಮಧುರ ಜಲವನ್ನು ಸರಸರ ಪಾನಮಾಡುವುದು ಕಾಮಿನಿಯ ಅಧರವನ್ನು ಪಾನಮಾಡಿದಂತೆ. ನೀರನ್ನು ಪಾನ ಮಾಡುವಾಗ ಅಲೆಗಳು ಚೆಲ್ಲಾಪಿಲ್...
🌺 ಪ್ರತಿಮಾನಾಟಕದ ಒಂದು ಸುಮ 🌺 *ತಾಯಂದಿರ ದಿನದ ವಿಶೇಷ ಕುಸುಮ* *काले खल्वागता देव्य: पुत्रे मोहमुपागते । हस्तस्पर्शोहि मातृणामजलस्य जलाञ्जलि: ।।* _ದೇವಕುಲಿಕನ ಮಾತು. ಭರತ ತನ್ನ ತಂದೆಯನ್ನು, ಅಣ್ಣನನ್ನು ನೆನೆನೆನೆದು  ಮೂರ್ಛೆ ಹೋಗಿದ್ದಾನೆ. ಅದೇ ಸಮಯದಿ ಕೌಸಲ್ಯಾದಿ ಅಮ್ಮಂದಿರು ರಾಜರ ಪ್ರತಿಮೆ ಇಡುವ ಆ ಮನೆಗೆ ಬಂದಿದ್ದಾರೆ. ಅವರು ಬಂದ ಸಮಯ ಸೂಕ್ತವಾಗಿದೆ. ಏಕೆಂದರೆ ತಾಯಂದಿರ ಸ್ಪರ್ಶ ಮಕ್ಕಳ ಎಲ್ಲಾ ನೋವನ್ನೂ ಮರೆಸಬಲ್ಲದು ಹೊರತು ಇನ್ಯಾವುದೂ ಅಲ್ಲ. ನೀರು ಸಿಗದೇ ಬಾಯಾರಿ ಬಳಲಿದವನಿಗೆ ನೀರು ದೊರಕಿದಾಗ ಎಷ್ಟು ಆನಂದವಾಗುವುದೋ ಅಂತಹ ಆನಂದ ಅಮ್ಮನ ಸ್ಪರ್ಶದಲ್ಲಿದೆ. ಅರ್ಥಾಂತರ ನ್ಯಾಸ ಅಲಂಕಾರ. ಅಂತಹ ಅಮ್ಮಂದಿರನ್ನು ದಿನವೂ ನೆನೆಯುತ್ತಾ ಅವರ ಮನಕ್ಕೆ ದು:ಖ ನೀಡದೇ ಪ್ರೀತಿ ಉಳಿಸಿಕೊಂಡು ಗೌರವಿಸೋಣ. ನಮ್ಮೆಲ್ಲರನ್ನೂ ಅಮ್ಮಂದಿರ ಆತ್ಮೀಯ ಸ್ಪರ್ಶ ಹರಸಲಿ._ 📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
🌾📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು. ಭಾಗ-೧ *ಕರ್ತವ್ಯಮಕೃತಂ ಕಾರ್ಯಂ ಸತಾಂ ಮನ್ಯುಮುದೀರಯೇತ್* ಮಾಡಬೇಕಾಗಿರುವ ಕೆಲಸ ಸರಿಯಾದ ಸಮಯದಲ್ಲಿ ಮಾಡದಿದ್ದಾಗ ಸಜ್ಜನರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಸಮುದ್ರರಾಜನು ಮೈನಾಕನಿಗೆ ನುಡಿಯುವ ಮಾತು. ಹನುಮಂತ ರಾಮಕಾರ್ಯಕ್ಕಾಗಿ ಜಲಧಿಯನ್ನು ದಾಟುವಾಗ ಉತ್ತಮ ಕೆಲಸಕ್ಕಾಗಿ ಹೊರಟ ಇವನಿಗೆ ನೀನೀಗಲೇ ಸಹಾಯ ಮಾಡು ಎಂದು ಆಜ್ಞಾಪಿಸುತ್ತಾನೆ. ನಾವಾದರೂ ನಮ್ಮ ನಮ್ಮ ವೃತ್ತಿಗಳಲ್ಲಿ ಉದಾಸೀನತೆ ತೋರಿದಾಗ ಸಜ್ಜನರೆಂದಲ್ಲಾ, ಎಲ್ಲರ ಕೋಪಕ್ಕೂ ಗುರಿಯಾಗಬೇಕಾದೀತು. ಸಮಯ ಸಂದರ್ಭ ನೋಡಿ ಅವಶ್ಯ ಮಾಡಬೇಕಾದ ಕಾರ್ಯಗಳಲ್ಲಿ ಕೂಡಲೇ ತೊಡಗಬೇಕೆಂಬುದು ಈ ಮಾತಿನ ಅಭಿಪ್ರಾಯ. ಯಾರೋ ಒಳ್ಳೆಯದನ್ನು ಮಾಡ ಹೊರಟಾಗ ಒಂದಷ್ಟು ಪ್ರೋತ್ಸಾಹಕ ಮಾತು, ಕೈಲಾದಷ್ಟು ಸಹಾಯ ಇವು ನಮ್ಮ ಶ್ರಮವನ್ನು ಹೆಚ್ಚಿಸಲಾರವು.ಹಾಗಾಗಿ ಯಾರೇ ಸಾಧನೆಗೆ ಹೊರಟಾಗ ಸಮುದ್ರರಾಜನಂತೆ ವಿಶಾಲಮನದಿಂದ ಬೆಂಬಲಿಸೋಣ. *ಕೃತೇ ಚ ಪ್ರತಿಕರ್ತವ್ಯಂ ಏಷ ಧರ್ಮ: ಸನಾತನ:* ಮೈನಾಕನು ಹನುಮನಿಗೆ ನುಡಿಯುವ ಮಾತಿದು. ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ಸನಾತನ ಧರ್ಮವಾಗಿದೆ. ನಮ್ಮ ಸಂಸ್ಕೃತಿಯ ಮಹತ್ವ ಇಲ್ಲಿ ಗಮನಿಸಬಹುದು. ರಾಘವನ ವಂಶದಲ್ಲಿ ಜನಿಸಿದವರೇ ಸಮುದ್ರರಾಜನ ಏಳಿಗೆಗೆ ಕಾರಣರಾದವರು. ಹಾಗೆ ಸಹಾಯ ಮಾಡಿರುವುದನ್ನು ನೆನಪು ಮಾಡಿಕೊಂಡು ಈಗ ಮತ್ತೆ ಅವನ ಮೂಲಕ ನಿನ್ನೆದುರು ನಿನ್ನ ಸಹಾಯಕನಾಗಿ ನಾನು ಬಂದಿರುವೆ. ಇನ್ನೊಬ್ಬರ ಸಹಾಯ...
🌹 ಮೇಘದೂತದ ಒಂದು ಮಧುಬಿಂದು 🌹 *अम्भोबिन्दुग्रहणचतुराम्श्चातकान्वीक्षमाणा: श्रेणीभूता: परिगणनया निर्दिशन्तो बलाका: । त्वामासाद्य स्तनितसमये मानयिष्यन्ति सिद्धा: सोत्कम्पानि प्रियसहचरीसम्भ्रमालिङ्गितानि ।।* _ಎಲೈ ಜೀಮೂತವೇ, ನೀನು ಮಾರ್ಗದಲ್ಲಿ ಸಾಗುತ್ತಿರುವ ವೇಳೆ ಮಳೆ ಸುರಿಸುವಿಯೆಂಬ ಬಯಕೆಯಿಂದ ಕಾಯುತ್ತಿರುವ ಚಾತಕ ಪಕ್ಷಿಗಳು ಮಳೆಹನಿಗಳು ಬೀಳುತ್ತಿರುವ ವೇಳೆಗೆ ಅದನ್ನು ಹೀರುವ ಪರಿಯನ್ನು ಈವರೆಗೆ ನೋಡಿಯೇ ಇಲ್ಲವೆಂಬಂತೆ ಚಕಿತಚಿತ್ತರಾಗಿ ಸಿದ್ಧದಂಪತಿಗಳು ನೋಡುತ್ತಿರುವರು. ಎಲ್ಲಾ ಮಳೆಹನಿಗಳು ಚಾತಕ ಪಕ್ಷಿಗಳಿಗೆ ಪ್ರಿಯವಲ್ಲ. ಕೆಲವು ಹನಿಗಳನ್ನು ಮಾತ್ರ ಆರಿಸಿ ಕುಡಿಯುವ ಸುಂದರ ಕಲ್ಪನೆ ಕವಿ ಸಮಯ. ಅದೇ ಸಮಯದಲ್ಲಿ ನಿನ್ನ ಆಗಮನದಿಂದ ಸಂತಸಗೊಂಡ ಬಕ ಪಕ್ಷಿಗಳು ಸಾಲು ಸಾಲಾಗಿ ನಿನ್ನನ್ನೇ ಮುತ್ತಿಕೊಳ್ಳುವಂತೆ ಹಾರುವ ಬಗೆಯನ್ನು ಆ ಸಿದ್ಧ ಸ್ತ್ರೀಯರು ವರ್ಣಿಸುತ್ತಾ ತಮ್ಮ ಪ್ರಿಯಕರರಿಗೆ ಒಂದು ಎರಡು ಮೂರು ಎಂದೆಲ್ಲಾ ಬಕಗಳನ್ನು ತೋರಿಸುವ ಬಗೆ ನೋಡು. ಹೀಗೆ ಸಂಭ್ರಮದ ವೇಳೆಯಲ್ಲಿ ನೀನೊಮ್ಮೆ ಗುಡುಗಿದರೆ ಆ ಗರ್ಜನೆಗೆ ಗಾಬರಿಗೊಂಡ ಆ ಲಲನೆಯರು ಹೆದರಿ ತಮ್ಮ ಪ್ರಿಯಕರರನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾರೆ. ಹೆದರಿಕೆಯಿಂದ ನಡುಕ ಉಂಟಾದ ಅವರ ದೇಹಾಲಿಂಗನವನ್ನು ಆಸ್ವಾದಿಸಿದ ಆ ಸಿದ್ಧ ಪುರುಷರು ನಿನ್ನನ್ನು ಮನಸಾರೆ ಗೌರವಿಸುವರು. ಬಯಸದೇ ಪ್ರಿಯಾಲಿಂಗನವೆಂಬ ಭಾಗ್ಯವನ್ನು ಕರುಣಿಸಿದ ನಿನ್ನ...
📙 ವೇದ- ಧರ್ಮ ಭಾಗ-೧೧ *ವೇದದ ಬ್ರಾಹ್ಮಣಗಳು* *ಋಗ್ವೇದದ ಐತರೇಯ ಬ್ರಾಹ್ಮಣ* ಅನೇಕ ರೋಚಕವಾದ ಕಥೆಗಳು, ಸೂಕ್ತಗಳು ಇಲ್ಲಿ ಕಾಣಸಿಗುತ್ತವೆ. ಮಾನವೀಯ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸಿದೆ ಈ ಬ್ರಾಹ್ಮಣ. ೮ ಪಂಜಿಕಾಗಳು, ( ಒಂದು ರೀತಿಯ ವಿಭಾಗ) ೪೦ ಅಧ್ಯಾಯಗಳು, ೨೮೫ ಕಂಡಿಕಾಗಳಷ್ಟು ವಿಸ್ತಾರವಾಗಿದೆ. ಯಜ್ಞದಲ್ಲಿ *ಹೋತೃವಿನ* ಕೆಲಸವನ್ನು ,ಜವಾಬ್ದಾರಿಯನ್ನು, ಶಾಸ್ತ್ರದ ಆಚರಣೆಯನ್ನು ಇಲ್ಲಿ ವಿವರಿಸಲಾಗಿದೆ. ಒಂದು ಯಜ್ಞದಲ್ಲಿ *ಹೋತೃ, ಅಧ್ವರ್ಯು, ಉದ್ಗಾತೃ, ಬ್ರಹ್ಮ* ಹೀಗೆ ನಾಲ್ಕು ಜನರು ಮುಖ್ಯ ಪಾತ್ರ ವಹಿಸುತ್ತಾರೆ. ಮೂರು ಜನರು ಮೂರು ವೇದಗಳ ಕರ್ಮಾನುಷ್ಠಾನದಲ್ಲಿ ಪ್ರವೀಣರಾದರೆ, ಬ್ರಹ್ಮನು ನಾಲ್ಕು ವೇದಗಳಲ್ಲೂ ಪರಿಣತಿ ಹೊಂದಿ ಎಲ್ಲರ ಸರಿ-ತಪ್ಪುಗಳ ಮೇಲ್ವಿಚಾರಣೆ ನಡೆಸುತ್ತಾನೆ. ಹೋತೃವು ಯಜ್ಞದಲ್ಲಿ ದೇವತೆಯನ್ನು ಸ್ತುತಿಗೈಯ್ಯುವ ಕೆಲಸ ಪ್ರಧಾನವಾಗಿ ನಿರ್ವಹಿಸುವನು. ಅಧ್ವರ್ಯುವು ಉಳಿದ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಾನೆ. ಉದ್ಗಾತೃವು ಸಾಮಗಾನದ ಮೂಲಕ ಸುಸ್ವರದಿಂದ ದೇವತೆಗಳನ್ನು ಸ್ವಾಗತಿಸುತ್ತಾನೆ. ಬ್ರಹ್ಮನು ಇವರಲ್ಲದೇ ಉಳಿದ ಋತ್ವಿಜರೆಂಬ ಯಜ್ಞ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಕರ್ಮಗಳನ್ನು ನಿರ್ದೇಶಿಸುತ್ತಾನೆ. ಇವನು ಅಥರ್ವವೇದಿಯಾಗಿರುವುದು ಸಾಮಾನ್ಯ. ಉಳಿದ ವೇದಗಳು ಇವನಿಗೆ ತಿಳಿದಿರುವುದು ಅವನ ಮಹತ್ವವನ್ನು ಹೆಚ್ಚಿಸುತ್ತದೆ. ಇವೆಲ್ಲ ಸೋಮ, ವಾಜಪೇಯ, ರಾಜಸೂಯ, ಸೌತ್ರಾಮಣ ಮುಂತಾದ ಯಜ್ಞಗಳಲ...
🌺 ಪ್ರತಿಮಾ ನಾಟಕದ ಒಂದು ಸುಮ 🌺 *तं स्मृत्वा शुल्कदोषं भवतु मम सुतो राजेत्यभिहितं तद्धैर्येणाश्वसन्त्या व्रज सुत!  वनमित्यार्योप्यभिहित: । तं दृष्ट्वा बद्धचीरं निधनमसदृशं राजा ननु गत: पात्यन्ते धिक्प्रलापा ननु मयि सदृशा: शेषा: प्रकृतिभि: ।।* _ದೇವಕುಲಿಕನು ಭರತನಿಗೆ ನಡೆದ ಘಟನೆಗಳನ್ನೆಲ್ಲ ವಿವರಿಸಲು ತೊಡಗಿದಾಗ ಸ್ವಲ್ಪ ಆಲಿಸಿ ಭರತನೇ ಮುಂದುವರೆಸುತ್ತಾನೆ. ಹಾಗಾದರೆ ಹೀಗಾಗಿರಬಹುದು- ನನ್ನ ಮಗ ರಾಜನಾಗಬೇಕೆಂಬ ಹಿಂದಿನ ವಿವಾಹ ಶುಲ್ಕವನ್ನು ಸ್ಮರಿಸಿ ಕೈಕೇಯಿಯು ನನ್ನ ಮಗನಿಗೆ ಪಟ್ಟಕಟ್ಟು ಎನ್ನಲು, ತನ್ನ ಮಾತಿನಂತೆ ಮಗನನ್ನು ದಶರಥ ರಾಜನನ್ನಾಗಿಸಬಹುದೆಂಬ ಧೈರ್ಯದಿಂದ ರಾಮನನ್ನು ಕುರಿತು ಹೀಗೆ ನುಡಿಯಲು " ಮಗನೇ ರಾಮ ನೀನು ಅಡವಿಗೆ ಪೋಗು" , ವನವಾಸಕ್ಕಾಗಿ ನಾರುಬಟ್ಟೆಯುಟ್ಟು ಸಿದ್ಧನಾದ ರಾಮನ ನೋಡಿ ದಶರಥನು ಅಕಾಲಿಕವಾದ ಅಥವಾ ಅವನಿಗೆ ಯೋಗ್ಯವಲ್ಲದ ( ಇಕ್ಷ್ವಾಕು ಕುಲದವರು ವಾನಪ್ರಸ್ಥದಲ್ಲಿ ಯೋಗದ ಮೂಲಕ ಪ್ರಾಣ ಬಿಡುವ ಪದ್ಧತಿ ಇದ್ದುದರಿಂದ) ನಿಧನವನ್ನು ಹೊಂದಿರಬೇಕು. ಇಷ್ಟೆಲ್ಲ ನಡೆದಾಗ ಇವುಗಳಿಗೆಲ್ಲ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭರತನೇ ಕಾರಣನೆಂದು ತಿಳಿದ ಮಂತ್ರಿಗಳು, ಸೇವಕರು, ರಾಜಪರಿವಾದವರು ಹಾಗೂ ಉಳಿದ ಪುರಜನರು ಧಿಕ್ಕಾರವಿರಲಿ ಇಂತಹ ದುಷ್ಟನಿಗೆ ಎಂಬ ಮಾತನ್ನು ನನ್ನ ಕುರಿತು ಆಡುತ್ತಿರುವರೇನೋ? ತನ್ನ ಅಮ್ಮ ತನ್ನ ಉದ್ದೇವಾಗಿ ಮಾಡಿದ ಅರ್ಥವು ಅ...
🌹ಮೇಘದೂತದ ಒಂದು ಮಧುರ ಹನಿ 🌹 *तस्यास्तिक्तैर्वनगजमदैर्वासितं वान्तदृष्टि: जम्बूकुञ्जप्रतिहतरयं तोयमादाय गच्छे: । अन्तस्सारं घन तुलयितुं नानिलश्शक्षति त्वां रिक्तस्सर्वो भवति हि लघु: पूर्णता गौरवाय ।।* _ಎಲೈ ಘನನೇ, ನೀನು ಮಳೆ ಸುರಿಸಿ ಸುತ್ತಲೂ ಪರಿಮಳವನ್ನು ಹಬ್ಬಿಸಿದ್ದಿ. ಅಷ್ಟಲ್ಲದೇ ಕಾಡಾನೆಗಳ ಮದಜಲದಿಂದ  ಇನ್ನಷ್ಟು ಸುವಾಸನೆ ತುಂಬಿಕೊಂಡಿರುವ ಮಧ್ಯ ಮಧ್ಯದಲ್ಲಿ ನೇರಳೆ ಗಿಡದ ಪೊದೆಗಳು ಬೆಳೆದು ಅವುಗಳಿಂದ ತಡೆಯಲ್ಪಟ್ಟ ವೇಗವುಳ್ಳ, ಆ ರೇವಾನದಿಯ ನೀರನ್ನು ಹೀರಿ ಮುಂದುವರೆ. ರೇವಾನದಿ ಆನೆಗಳ ನದಿಯೆನಿಸಿದೆ. ಆ ವಿಂಧ್ಯಪರ್ವತದ ಭಾಗ ಆನೆಗಳ ಜನ್ಮಭೂಮಿಯೆನಿಸಿದೆ. ಅದೊಂದು ತರಹದ ಸುವಾಸನೆ ಅವುಗಳ ಮದಜಲದಲ್ಲಿ ಅಡಗಿದೆ. ಅದೀಗ ನದೀ ನೀರಿನಲ್ಲಿ ಅವುಗಳ ಜಲಕ್ರೀಡಾಸಮಯದಲ್ಲಿ ಮಿಳಿತವಾಗಿದೆ. ಅಂತಹ ಸುಗಂಧ ಭರಿತ ನೀರನ್ನು ಕುಡಿದು ಪ್ರಯಾಣ ಮುಂದುವರೆಸು. ಮಳೆ ಸುರಿಸಿ ಆಗಲೇ ಖಾಲಿಯಾಗಿದ್ದಿ. ಈಗ ತುಂಬಿಕೊ. ಹೊಸ ಮಳೆ ಬಿದ್ದ ಹಾಗೂ ಆನೆಗಳ ಮದಜಲದ ಪರಿಮಳ ಎರಡೂ ಮಿಲಿತವಾಗಿ ಒಂದೊಳ್ಳೆ ಮಾದಕತೆ ಅಲ್ಲಿನ ವಾತಾವರಣದಲ್ಲಿ ಮೂಡುವುದು. ಆ ನದಿ ನೀರು ಕುಡಿದು ತುಂಬಿಕೊಂಡಿರುವ ನಿನ್ನನ್ನು ಗಾಳಿ ಹಾರಿಸಲು ಸಮರ್ಥವಾಗದು. ನಿನ್ನಷ್ಟಕ್ಕೆ ನೀನು ನಿಧಾನಕ್ಕೆ ಹೋಗಬಹುದು. ಒಳಗೆ ಬಲವಿಲ್ಲದ ಎಲ್ಲರೂ ಹಗುರವಾಗುತ್ತಾರೆ, ಸಂಪೂರ್ಣ ಬಲವು ಗೌರವಕ್ಕೆ ಕಾರಣವಾಗುವುದು. ಕವಿಯ ಸಾರ್ವಕಾಲಿಕ ಮಾತಿದು. ನಮ್ಮಲ್ಲ...
🌺 ಪ್ರತಿಮಾ ನಾಟಕದ ಒಂದು ಕುಸುಮ 🌺 *अयोध्यामटवीभूतां पित्रा भ्रात्रा च वर्जिताम् । पिपासार्तोनुधावामि क्षीणतोयां नदीमिव ।।* _ಪ್ರತಿಮೆಗಳ ಪೂಜಕನು ಭರತನನ್ನು ಸಮಾಧಾನಿಸುತ್ತಾನೆ. ಆಗ ಭರತನಾಡುವ ಮಾತು- ಯಾವ ಅಯೋಧ್ಯೆಗೆ ನಾನು ಬಂದಿದ್ದೇನೆ! ಇದು ಕಾಡು, ಅಯೋಧ್ಯೆಯಲ್ಲ. ಮಮತೆಯಿಂದ ಬೆಳೆಸಿ ಸಲಹಿದ ತಂದೆಯಿಲ್ಲದ, ತಾಯಿಯಷ್ಟೇ ಪ್ರೀತಿ ತೋರಿದ ಅಣ್ಣನಿಲ್ಲದ ಈ ಅಯೋಧ್ಯೆ ಅಯೋಧ್ಯೆಯೇ ಅಲ್ಲ. ಇದು ಕಾಡಾಗಿದೆ. ವಿಷಯ ಸರಿಯಾಗಿ ತಿಳಿದುಕೊಳ್ಳದೇ ಓಡೋಡಿ ಬಂದ ನನ್ನ ಪಾಡಿದು. ಒಂದೊಳ್ಳೆ ದೃಷ್ಟಾಂತ ಕೊಟ್ಟಿದ್ದಾನೆ ಕವಿ. ದಾಹದಿಂದ ತತ್ತರಿಸುವ ಪಥಿಕನೊಬ್ಬ ನೀರಿಗೆಂದು ಬತ್ತಿ ಹೋಗುತ್ತಿರುವ ನದಿಗೆ ಹೋದರೆ ಅವನ ದಾಹ ತಣಿಯುವುದೇ? ಸಾಧ್ಯವೇ ಇಲ್ಲ. ಸಮೃದ್ಧವಾಗಿ ಅಥವಾ ಒಂದು ರೇಖೆಯಷ್ಟಾದರೂ ಹರಿಯುವ ನೀರು ಅವನ ದಾಹವನ್ನು ತಣಿಸೀತು. ಭರತನೂ ಇಲ್ಲಿ ಅಣ್ಣ, ಅಪ್ಪನ ಪ್ರೀತಿಯ ಕರೆಯೆಂದು ಓಡೋಡಿ ಬಂದಿರುವನು. ಇಲ್ಲಿ ನೋಡಿದರೆ ಅವನ ದಾಹವು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ತನ್ನ ತಂದೆಯನ್ನು ಹಾಗೂ ಅಣ್ಣನನ್ನು ಎಷ್ಟು ಪ್ರೀತಿಸುತ್ತಿದ್ದನೆಂಬ ಭಾವ ಕವಿಯ ಪದಗಳಲ್ಲಿ ಸುಂದರವಾಗಿ ಮೂಡಿಬಂದಿದೆ.ಅವನ ಎಣಿಕೆಯೆಲ್ಲ ಮಣ್ಣಾಗಿ ಹೋಗಿದೆ. ಅಯೋಧ್ಯೆ ಅವನ ಪಾಲಿಗೆ ಸುಡುಗಾಡು ಇದ್ದಂತೆ. ಆದರೂ ಪ್ರಜೆಗಳ ಮೇಲಿನ ಪ್ರೀತಿಯು, ಜನ್ಮ ಭೂಮಿಯ ಮೇಲಿನ ಅಭಿಮಾನದಿಂದ ಹಾಗೆ ಹೇಳಲಿಲ್ಲವಷ್ಟೇ! ಉಪಮಾ ಅಲಂಕಾರ._ 📜 ಸಂಗ್ರಹ ✍ ಶ್ರೀನಿಧಿ ಅಭ್ಯಂ...
📙 ವೇದ- ಧರ್ಮ ಭಾಗ-೧೦ *ವೇದದ ಬ್ರಾಹ್ಮಣಗಳು* ಕೃಷ್ಣದ್ವೈಪಾಯನರು ವೇದಗಳ ಅಧ್ಯಯನ ಸುಲಭವಾಗಲೆಂದು, ವೇದರಾಶಿ ಉಳಿಯಲೆಂದು ವೇದಗಳನ್ನು ನಾಲ್ಕಾಗಿ ವಿಂಗಡಿಸಿದರು. ಆ ಪ್ರತಿಯೊಂದು ವೇದವೂ ಮತ್ತೆ ವಿಷಯ ನಿರೂಪಣೆಯ ಭಿನ್ನತೆಯಿಂದಾಗಿ ನಾಲ್ಕು ರೂಪಗಳನ್ನು ಪಡೆಯಿತು. ಅವೇ  *ಸಂಹಿತಾ,ಬ್ರಾಹ್ಮಣ, ಆರಣ್ಯಕ, ಉಪನಿಷತ್* ಎಂಬುದಾಗಿ.  ಇಲ್ಲಿ ಬ್ರಾಹ್ಮಣ ಎನ್ನುವುದು ಜಾತಿವಾಚಕವಲ್ಲ. ದ್ವಾಪರದ ಕಾಲದವರೆಗೂ ಸಹಜ ವಾಗಿಯೂ ಈ ಶಬ್ದ ಜಾತಿವಾಚಕವಾಗಿರಲಿಲ್ಲ. ಬ್ರಹ್ಮ ಚಿಂತನೆ ಇರುವ ಪ್ರತಿಯೊಬ್ಬನೂ ಬ್ರಾಹ್ಮಣ ಎಂದೇ ಕರೆಸಿಕೊಳ್ಳುತ್ತಿದ್ದ. ಇಲ್ಲಿ ಬ್ರಾಹ್ಮಣವೆಂದರೆ *ಬ್ರಾಹ್ಮಣಂ ನಾಮ ಕರ್ಮಣ: ತನ್ಮಂತ್ರಾಣಾಂ ಚ ವ್ಯಾಖ್ಯಾನಂ ಗ್ರಂಥ:* ಎಂದಿದ್ದಾರೆ ಸಾಯಣರು. ನಾನಾ ಕರ್ಮಗಳು ಹಾಗೂ ಮಂತ್ರಗಳ ವಿವರಣೆಯೇ ಮುಖ್ಯ ವಿಷಯ. ಒಂದು ರೀತಿಯಲ್ಲಿ ವೈಜ್ಞಾನಿಕ, ಆಧಿಭೌತಿಕ, ಆಧ್ಯಾತ್ಮಿಕ ಮೀಮಾಂಸೆಯನ್ನು ಪ್ರಸ್ತುತಪಡಿಸುವ ವಿಶ್ವಕೋಶಗಳೇ ಬ್ರಾಹ್ಮಣಗಳು. *ನೈರುಕ್ತ್ಯಂ ಯಸ್ಯ ಮಂತ್ರಸ್ಯ ವಿನಿಯೋಗ: ಪ್ರಯೋಜನಮ್, ಪ್ರತಿಷ್ಠಾನಂ , ವಿಧಿಶ್ಚೈವ ಬ್ತಾಹ್ಮಣಮ್ ತದಿಹೋಚ್ಯತೇ* ಎನ್ನುತ್ತಾರೆ ವ್ಯಾಖ್ಯಾನ ಕಾರರು. ಮಂತ್ರದ ಅರ್ಥವನ್ನು ವಿವರಿಸುತ್ತಾ ಎಲ್ಲಿ ಅದರ ಬಳಕೆ, ಏನು ಪ್ರಯೋಜನ, ಯಜ್ಞಗಳ ವಿವರಣೆ, ಆ ಪದದ ನಿಜಾರ್ಥವೇನು, ಮಂತ್ರ ಪ್ರತಿಪಾದ್ಯ ಯಾರು, ಕರ್ಮಗಳ ಸರಿಯಾದ ಅನುಷ್ಠಾನ ಹೇಗೆ ಮುಂತಾದವನ್ನು ವಿವರಿಸುವುದು ಬ್ರಾಹ್ಮಣ.  *ಹೇತು,...
🌹 ಮೇಘದೂತದ ಒಂದು ಬಿಂದು🌹 *त्वामासारप्रशमितवनोपप्लवं साधु मूर्ध्ना वक्ष्यत्यध्वश्रमपरिगतं सानुमानाम्रकूट: । न क्षुद्रोपि प्रथमसुकृतापेक्षया संश्रयाय प्राप्ते मित्रे भवति विमुख: किं पुनर्यस्तथोच्चै: ।।* _ಎಲೈ ಮೇಘವೇ ನೀನು ಸಂಚಾರ ಮುಂದುವರೆಸಿದಂತೆ ಮುಂದೊಂದು ಪರ್ವತಶಿಖರ ಗೋಚರಿಸುವುದು. ಆ ಪರ್ವತದ ಶಿಖರಭಾಗದಲ್ಲಿ ಮಾವಿನ ಅನೇಕ ಮರಗಳಿವೆ. ನೀನು ಹಿಂದೆ ಅನೇಕ ಬಾರಿ ಅಲ್ಲಿ ಹೊತ್ತಿ ಉರಿಯುತ್ತಿದ್ದ ಕಾಡ್ಗಿಚ್ಚನ್ನು ನಿನ್ನ ತಂಪಾದ ಧಾರಾಕಾರ ಹನಿಗಳಿಂದ ನಂದಿಸಿ ಉಪಕರಿಸಿದ್ದಿ. ಹೀಗೆ ಅಪರೂಪಕ್ಕೆ ಬಂದ ನಿನ್ನನ್ನು ಆ ಶೈಲವು ತನ್ನ ಶಿರದಲ್ಲಿ ಧರಿಸಿ ಉಪಚರಿಸುತ್ತದೆ. ಲೋಕದ ನಿಯಮವೇ ಹಾಗಿದೆ‌. ಕೆಟ್ಟವನು ಅಥವಾ ಜಿಪುಣನಾದರೂ ಬಹುಕಾಲದ ನಂತರ ಗೆಳೆಯನೊಬ್ಬನು ವಾಸ ಮಾಡಲೆಂದು ಬಂದಾಗ ಮೊದಲು ಅವನು ಮಾಡಿದ ಉಪಕಾರವನ್ನು ಮರೆತು ತಿರಸ್ಕರಿಸಲಾರ. ಗುಣದಿಂದ ಕೆಟ್ಟವನಾದರೂ ಯಾವನಾದರೂ ಉಪಕಾರಿಯೊಬ್ಬನು ತಾನೇ ಮನೆಗೆ ಬಂದಾಗ ತೋರಿಕೆಗಾದರೂ ಉಪಚರಿಸುವನು. ಅವನನ್ನು ತಿರಸ್ಕರಿಸಲಾರ. ಅಂತಹುದರಲ್ಲಿ ವಿಶಾಲ ಮನೊಭಾವವುಳ್ಳ ಉದಾರಿಯಾದ ಈ ಶೈಲನು ನಿನ್ನ ಆಗಮನವನ್ನು ಹಬ್ಬದಂತೆ ಆಚರಿಸುವನು. ಮೋಡ ಸಹಜವಾಗಿ ಪರ್ವತಗಳ ಮೇಲೆ ನಿಲ್ಲುವುದನ್ನು ಕವಿ ಇಲ್ಲಿ ತಲೆಯ ಮೇಲೆ ಧರಿಸಿ ಮೆರೆಸುವನೆಂದು ವರ್ಣಿಸಿದ್ದಾನೆ. ಲೋಕದಲ್ಲಿ ಸಹಜವಾಗಿಯೇ ಹಿಂದೆ ತನ್ನ ಆಪತ್ತಿನಲ್ಲಿ ಯಾರು ನೆರವಾಗಿರುವನೋ ಅಂತಹ ವ್ಯಕ್ತಿ ಮನೆಗೆ ಬಂದ...
💐 ಪ್ರತಿಮಾ ನಾಟಕದ ಒಂದು  ಹೂವು 💐 *हृदय भव सकामं यत्कृते शङ्कसे त्वं शृणु पितृनिधनं तद् गच्छ धैर्यं च तावत् । स्पृशति तु यदि नीचो मामयं शुल्कशब्द: अथ च भवति सत्यं तत्र देहो विशोध्य: ।।* _ಭರತನಾಡುವ ಮಾತು. ಮೃತರ ಪ್ರತಿಮೆಯನ್ನು ಇರಿಸುವ ಮನೆಗೆ ಹೋಗಿ ದಶರಥನ ಪ್ರತಿಮೆಯನ್ನು ನೋಡಿದಾಗಲೇ ಭರತನಿಗೆ ಶಂಕೆ ಬಂದಿತ್ತು. ತಾನು ಊರಿನಿಂದ ಹೊರಡಲು ಕಾರಣವಾದ ಸಂದೇಶದಲ್ಲೂ ಏನಾದರೂ ಕೆಡುಕು ಘಟಿಸಿರಬಹುದೇ ಎಂದು ಸಂದೇಹಪಟ್ಟಿದ್ದನು‌. ಈಗ ನೋಡಿದರೆ ಅದು ನಿಜವಾಗಿದೆ. ಏ, ಮನವೇ ನಿನ್ನ ಬಯಕೆ ಈಡೇರಿತು. ಏನು ಆಗಬಾರದಿತ್ತೋ ಅದನ್ನೇ ನೀನು ಯೋಚಿಸುವುದು , ಅದೇ ಈಗ ಆಗಿ ಹೋಗಿದೆ. ಯಾವುದನ್ನು ಶಂಕಿಸುತ್ತಿದ್ದಿಯೋ ( ದಶರಥನ ಸಾವು ಆಗಿರಬಹುದೇ ಅಥವಾ ಬೇರೆ ಏನಾದರೂ ಕೆಡುಕು)ಅದು ನಿಜವಾಗಿದೆ. ತಂದೆ ಸತ್ತ ಸುದ್ದಿ ತಿಳಿದು ಧೈರ್ಯ ಕಳೆದುಕೊಳ್ಳದಿರು. ಅಪ್ಪನ ಮರಣ ವಾರ್ತೆಯನ್ನು ಕೇಳು.‌ ಅಧೀರನಾಗದಿರು. ಆದರೆ ಅಪ್ಪನ ಸಾವಿಗೆ ಯಾವ ಈ ನೀಚವಾದ ಶುಲ್ಕ ವೆಂಬ ಶಬ್ದವು ಕಾರಣವಾಯಿತೋ ಅದು ನನ್ನನ್ನುದ್ದೇಶಿಸಿ ಅಥವಾ ನನಗೆ ಸಂಬಂಧಿಸಿದ್ದಾದರೆ, ಈ ನನ್ನ ದೇಹವನ್ನು ಅಗ್ನಿ ಪ್ರವೇಶಾದಿಗಳ ಮೂಲಕ ಶುದ್ಧ ಮಾಡಿಕೊಳ್ಳಬೇಕು. ಏನೋ ನಡೆದಿರಬಹುದೆಂದು ಭರತನ ಅಂತರಾತ್ಮ ಚಿಂತಿಸುತ್ತಿತ್ತು. ಮಾರ್ಗದಲ್ಲಿ ಕಂಡ ಅಪಶಕುನಗಳು ಅದನ್ನೇ ಸೂಚಿಸುತ್ತಿದ್ದವು. ಈಗ ಅವನ ಯೋಚನೆ ನಿಜವಾಗಿದೆ. ಹಾಗಾಗಿಯೇ ಧೈರ್ಯದಿಂದಿರು ಎಂದು ಸಮಾಧಾನಿ...
🌹ಮೇಘದೂತದ ಒಂದು ಬಿಂದು 🌹 *त्वय्यायत्तं कृषिफलमिति भ्रूविकारानभिज्ञै: प्रीतिस्निग्धैर्जनपदवधूलोचनै: पीयमान: सद्यस्सीरोत्कषणसुरभि क्षेत्रमारुह्य मालं किॆञ्चित्पश्चाद्व्रज लघुगतिर्भूय एवोत्तरेण ।।* _ಎಲೈ ಮೇಘವೇ, ಕೃಷಿಯಲ್ಲಿನ ಫಲವು ನಿನ್ನನ್ನು ಅವಲಂಬಿಸಿದೆ ಎಂಬ ಕಾರಣದಿಂದ, ನಿನ್ನ ಮೇಲೆ ಹೆಚ್ಚಿನ ಪ್ರೀತಿಯುಳ್ಳ , ಕಡೆಗಣ್ಣಿನ ನೋಟಬೀರಿ ವಂಚಿಸಲು ಅರಿಯದ  ಹಳ್ಳಿಯ ಮುಗುದೆಯರ ಕಣ್ಣುಗಳಿಂದ ನೋಡಲ್ಪಟ್ಟವನಾಗಿ ಅಥವಾ ಅವರ ನೋಟದಿಂದಲೇ ಕುಡಿಯಲ್ಪಟ್ಟವನಾಗಿ( ತುಂಬಾ ಆಸಕ್ತಿಯಿಂದ ನೋಡುತ್ತಿದ್ದರೆ ತಿಂದುಬಿಡುವಂತೆ ನೋಡುತ್ತಿದ್ದಾನೆ ಎನ್ನುವುದಿಲ್ಲವೇ ಹಾಗೇ ಇಲ್ಲಿ ಕುಡಿದುಬಿಡುವಂತೆ ನೋಟ ಬೀರುತ್ತಿದ್ದಾರೆ ಮೇಘದೆಡೆ ಮಳೆ ಸುರಿಸುವನೆಂದು) ಸಂತೋಷಪಡುವೆ. ಆ ಪ್ರದೇಶವಾದರೋ ಈಗಷ್ಟೇ ನೇಗಿಲಿನಿಂದ ಭೂಮಿಯು ಉಳಲ್ಪಟ್ಟ ಕಾರಣ ಆ ಮಣ್ಣಿನ ಸುವಾಸನೆಯಿಂದ ಕೂಡಿರುತ್ತದೆ. ಮಾಲವೆಂಬ ಆ ಸ್ಥಳದಲ್ಲಿ ಪರಿಮಳವನ್ನು ಆಸ್ವಾದಿಸುತ್ತಾ ಎತ್ತರದ ಬಯಲು ಪ್ರದೇಶವನ್ನು ಏರಿ ಸ್ವಲ್ಪ ಪಶ್ಚಿಮಕ್ಕೆ ಶೀಘ್ರ ಗತಿಯಲ್ಲಿ ಹೋಗಿ ಮುಂದೆ ಉತ್ತರದಿಕ್ಕಿನಲ್ಲೇ ನಿನ್ನ ಪಯಣವನ್ನು ಮುಂದುವರೆಸು. ಕೃಷಿಯನ್ನು ಮಳೆ ತರುವ ಮೋಡಗಳೊಡನೆ ಆಡುವ ಜೂಜಾಟವೆಂದಿದ್ದಾರೆ ಅರ್ಥಶಾಸ್ತ್ರಜ್ಞರು. ಹಾಗಾಗಿ ಮಳೆ ಬಂದರೆ ಮಾತ್ರ ಉತ್ತು ಬಿತ್ತಿದ ಬೀಜ ಮೊಳಕೆಯೊಡೆದು ಪಲ ಕೈಗೆ ಬರಲು ಸಾಧ್ಯ. ಇಲ್ಲದಿದ್ದರೆ ಮಾಡಿದ ಪ್ರಯತ್ನವೆಲ್ಲ ಹೊಳೆ ನೀರಲ್...
💐 ಪ್ರತಿಮಾ ನಾಟಕದ ಒಂದು ಕುಸುಮ💐  *पतितमिव शिर: पितु: पादयो: स्निह्यतेवास्मि राज्ञा समुत्थापित: त्वरितमुपगता इव भ्रातर: क्लेदयन्तीव मामश्रुभिर्मातर: । सदृश इति महानिति व्यायतश्चेति भृत्यैरिवाहं स्तुत: सेवया परिहसितमिवात्मनस्तत्र पश्यामि वेषं च भाषां च सौमित्रिणा ।।* _ಭರತನ ಕಲ್ಪನೆ. ಊರು ಸಮೀಪಿಸಿದಂತೆ ನಮ್ಮ ಮನದಲ್ಲಿ ಏನೆಲ್ಲ ಅಗಬಹುದು ಎಂದು ಮೂಡುವ ಭಾವವನ್ನು ಕವಿ ಭರತನ ಮೂಲಕ ವರ್ಣಿಸಿದ್ದಾನೆ. ಅರಮನೆಗೆ ಹೋದ ಕ್ಷಣದಲ್ಲೇ ಮೊದಲು ಅಪ್ಪನ ಕಾಲಿಗೆ ಬಿದ್ದು ಅವನ ಆಶೀರ್ವಾದ ಪಡೆದುಕೊಳ್ಳುವಂತೆ, ಅಪ್ಪನು ನನ್ನ ಮೇಲಿನ ಅತಿಯಾದ ವಾತ್ಸಲ್ಯದಿಂದ ಎಬ್ಬಿಸಿ ಮೈದಡವಿದಂತೆ ಭಾವಿಸುತ್ತೇನೆ. ಭರತನಿಗೆ ಹಿರಿಯರ ಮೇಲಿದ್ದ ಗೌರವವನ್ನು ಇಲ್ಲಿ ಕಾಣಬಹುದು. ಎಲ್ಲದಕ್ಕಿಂತ ಮೊದಲು ತಂದೆ- ತಾಯಂದಿರ ಯೋಗಕ್ಷೇಮ ವಿಚಾರಿಸಿ ಆಶೀರ್ವಾದ ಪಡೆದುಕೊಳ್ಳುವುದು. ಅನಂತರ ಬಹುಕಾಲದ ನಂತರ ಹಿಂತಿರುಗಿದ ಸಹೋದರರನ್ನು ನನ್ನ ಅಣ್ಣ ತಮ್ಮಂದಿರು ತ್ವರಿತವಾಗಿ ನನ್ನನ್ನು ಸುತ್ತುವರೆದು ನಿಂತಂತೆ, ಮೂರೂ ಜನ ಅಮ್ಮಂದಿರು ನನ್ನನ್ನು ಅವರ ಆನಂದಾಶ್ರುಗಳಿಂದ ತೋಯಿಸಿದಂತೆ ಊಹಿಸಿಕೊಳ್ಳುತ್ತೇನೆ. ರಾಮಾದಿಗಳ ಮಧ್ಯೆ ಎಂತಹ ಸುಮಧುರ ಬಾಂಧವ್ಯ ಇತ್ತೆನ್ನುವುದು ಇದರಿಂದ ತಿಳಿಯುವುದು. ಭರತ ಬಂದನೆಂಬ ವಾರ್ತೆ ಕೇಳಿದೊಡನೆ ಅವರೆಲ್ಲ ಮಾಡುತ್ತಿದ್ದ ಕಾರ್ಯಗಳನ್ನು ಅಲ್ಲಲ್ಲೆ ತ್ಯಜಿಸಿ ಒಡೋಡಿಬಂದು ಸುತ್ತುವರೆದಂತ...
🌹ಮೇಘದೂತದ ಒಂದು ಬಿಂದು🌹 *रत्नच्छायाव्यतिकर इव प्रेक्ष्यमेतत्पुरस्तात् वल्मीकाग्रात्प्रभवति धनु:खण्डमाखण्डलस्य । येन श्यामं वपुरतितरां कान्तिमापस्त्यते ते बर्हेणेव स्फुरितरुचिना गोपवेषस्य विष्णो: ।।* _ಚಿತ್ರಕೂಟ ಪರ್ವತವನ್ನು ದಾಟಿ ಹೋಗುವಾಗ ಕಾಣುವ ಬಗೆಯನ್ನು ಯಕ್ಷ ವರ್ಣಿಸುತ್ತಿದ್ದಾನೆ. ನೀನು ಕಪ್ಪೆಂದು ಕೀಳರಿಮೆ ಬೇಡ. ಕೃಷ್ಣನೂ ಕಪ್ಪು ವರ್ಣದವನೇ. ನೀನು ಈ ಪ್ರಕೃತಿಯಲ್ಲಿ ಮಿಂದಾಗ ಕೃಷ್ಣನಂತೇ ಕಾಣುವೆ. ನಿನ್ನ ಮಾರ್ಗದಲ್ಲಿ ಈ ಪರ್ವತಪ್ರದೇಶದ ಅನೇಕ ಕಡೆ ಹುತ್ತಗಳನ್ನು ನೀನು ಕಾಣುವಿ. ಬೆಳಗಿನ ಹೊಂಬಿಸಿಲು ಆ ಹುತ್ತಗಳು ಮತ್ತು ಮರಗಳ ನಡುವೆ ಒಡಮೂಡಿದಾಗ ಅಲ್ಲೊಂದು ಚಮತ್ಕಾರ ನಡೆಯುತ್ತದೆ. ಇಂದ್ರನ ಧನುಸ್ಸು ಅಥವಾ ಕಾಮನಬಿಲ್ಲು ನಿನ್ನ ಮುಂಭಾಗದ ಹುತ್ತದ ಮೇಲೆ ಕಾಣಬರುವುದು. ಅದರ ಕಾಂತಿ ಪದ್ಮರಾಗ ಮಾಣಿಕ್ಯ ಪಚ್ಚೆ ಮುಂತಾದ ರತ್ನಗಳ ಮಿಶ್ರಣದಂತೆ ಶೋಭಿಸುವುದು. ನಿನ್ನೆದುರು ಅದು ಕಂಡಾಗ ನಿಜಕ್ಕೂ ನೀನು ಸಂತೋಷಪಡುವೆ. ಏಳು ಬಣ್ಣದ ಆ ಇಂದ್ರಚಾಪವು ಕ್ಷಣಕಾಲ ಮಿಂಚುತ್ತಿರಲು ಯಾವ ರಸಿಕರ ಕಣ್ಣು ಮುಚ್ಚೀತು! ಅನತಿ ಕಾಲದಲ್ಲೇ ಆ ಕಾಮನಬಿಲ್ಲಿನ ಪ್ರಕಾಶಮಾನ ಬೆಳಕು ಕಪ್ಪಾದ ದೇಹವುಳ್ಳ ನಿನ್ನ ಮೇಲೆ ಬಿದ್ದಾಗ ನಿಜಕ್ಕೂ ನೀನು ಅತಿಶಯವಾಗಿ ಶೋಭಿಸುವೆ. ಅದರಲ್ಲೂ ಗೋಪವೇಷವನ್ನು ಧರಿಸಿದ ಕಪ್ಪಾದ ಕೃಷ್ಣನು ನವಿಲುಗರಿ ಮುಡಿದುಕೊಂಡು ಹೇಗೆ ಸಕಲರನ್ನೂ ಆಕರ್ಷಿಸುವನೋ ಅಂತಹ ಶೋಭೆ ನಿನ್ನಲ್ಲೂ ಕಂಡ...