ಧರ್ಮಾಚರಣೆ-೮೪

ಧರ್ಮಾಚರಣೆ-84

ಗರ್ಭಾದಾನಮೃತೌ ಪುಂಸಃ ಸವನಂ‌ ಸ್ಯಂದನಾತ್ಪುರಾ | ಷಷ್ಠೇಷ್ಟಮೇ ವಾ ಸೀಮಂತೋ ಮಾಸ್ಯೇತೇ ಜಾತಕರ್ಮ ಚ || ಅಹನ್ಯೇಕಾದಶೋನಾಮ ಚತುರ್ಥೇ ಮಾಸಿ ನಿಷ್ಕೃಮಃ | ಷಷ್ಠೇನ್ನಪ್ರಾಶನಂ ಮಾಸಿ ಚೂಡಾಕಾರ್ಯಾ ಯಥಾಕುಲಮ್ || ಯಾಜ್ಞವಲ್ಕ್ಯ ಸ್ಮೃತಿ||

ಮುಟ್ಟಾದ ಆರರಿಂದ - ಹದಿನಾರು ದಿನದವರೆಗೆ ಗರ್ಭಾದಾನ, ಗರ್ಭವು ಚಲಿಸುವ ಮುನ್ನ ಪುಂಸವನ, ಆರು ಅಥವಾ ಎಂಟನೇ ತಿಂಗಳಲ್ಲಿ ಸೀಮಂತ, ಹುಟ್ಟಿದ  ದಿನವೇ ಜಾತಕರ್ಮ, ಹನ್ನೊಂದನೇ ದಿನ ನಾಮಕರಣ, ನಾಲ್ಕನೇ ತಿಂಗಳು ಉಪನಿಷ್ಕೃಮಣ ಅಂದರೆ ಹೊರಗೆ ತಂದು ಬೆಳಕನ್ನು ತೋರುವುದು, ಆರನೆಯ ತಿಂಗಳಲ್ಲಿ ಅನ್ನಪ್ರಾಶನ, ಕುಲದ ಸಂಪ್ರದಾಯದಂತೆ ಚೂಡಾಕರ್ಮ ಅಂದರೆ ಕೂದಲು ತೆಗೆಯುವ ಸಂಸ್ಕಾರಗಳನ್ನು ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹಾಕಲೆಂದೇ ಚಿತ್ರ- ದೃಶ್ಯ ತೆಗೆಯುವುದು ಅಥವಾ ಕೇಕ್ ಮುಂತಾದವನ್ನು ಕತ್ತರಿಸಿ ಆಚರಿಸುವುದಕ್ಕಿಂತ ಇವುಗಳ ಆಚರಣೆ ಮಾನವನ ಮುಂದಿನ ಜೀವನ ಸುಸಂಸ್ಕೃತ ಆಗಲು ಮುಖ್ಯ ಕಾರಣ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩