ಧರ್ಮಾಚರಣೆ-೭೭
ಧರ್ಮಾಚರಣೆ-೭೭
ವಾಪೀಕೂಪತಟಾಕಾದ್ಯೈಃ ವಾಜಪೇಯಶತೈರ್ಮಖೈಃ | ಗವಾಂ ಕೋಟಿಪ್ರದಾನೇನ ಭೂಮಿಹರ್ತಾ ನ ಶುದ್ಧ್ಯತಿ || ಪರಾಶರ ಸ್ಮೃತಿ||
ದುಡ್ಡು ಕೊಟ್ಟು ತೆಗೆದುಕೊಂಡಿದ್ದು ಅಥವಾ ಪಿತ್ರಾರ್ಜಿತವಾಗಿ ಸಿಕ್ಕಿದ್ದು ಅಥವಾ ಯಾರೋ ದಾನ ಮಾಡಿದ ಭೂಮಿ ಅನುಭವಿಸುವುದು ಪಾಪವಲ್ಲ. ಅದೇ ಅಕ್ರಮ- ಸಕ್ರಮ ಎಂದು ನಾವೇ ಅಕ್ರಮ ಮಾಡಿ ಅಥವಾ ಸರ್ಕಾರದ/ ಖಾಸಗಿ ಜಾಗಗಳ ಒಂದು ಇಂಚಿನ ಪ್ರಮಾಣದಷ್ಟು ಭೂಮಿ ಅಪಹರಿಸಿದರೂ ಆ ಪಾಪಕ್ಕೆ ಯಾವ ಪರಿಹಾರವೂ ಪ್ರಾಯಶ್ಚಿತ್ತವೂ ಇಲ್ಲ. ಬಾವಿ- ಕೆರೆ- ಕಾಲುವೆ ನಿರ್ಮಿಸುವುದು, ನೂರು ವಾಜಪೇಯ ಯಾಗ ಮಾಡುವುದು, ಕೋಟಿ ಗೋವುಗಳನ್ನು ದಾನ ಮಾಡಿದರೂ ಆ ಪಾಪ ಪರಿಹಾರವಾಗದು. ಅದನ್ನು ಅನುಭವಿಸಲು ಮತ್ತೆ ಜನ್ಮ ತಾಳಬೇಕಾಗುವುದು. ಹಾಗಾಗಿ ಭೂಮಿಯ ಮೇಲಿನ ಆಸೆ ಎಂದೂ ಒಳ್ಳೆಯದಲ್ಲ. ಅದು ಒಂದು ಚದರಡಿ ಆಗಲಿ ನೂರಾರು ಎಕ್ರೆ ಆಗಲಿ ಅಕ್ರಮವು ಯಾವ ಪ್ರಾಯಶ್ಚಿತ್ತಕ್ಕೂ ನಿಲುಕದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ