ಧರ್ಮಾಚರಣೆ ೧೧೭

ಧರ್ಮಾಚರಣೆ-೧೧೭

ಕುಶೂಲಕುಂಭೀಧಾನ್ಯೋ ವಾ ತ್ರ್ಯಾಹಿಕೋsಶ್ವಸ್ತನೋಪಿ ವಾ | ಜೀವೇದ್ವಾಪಿಶಿಲೋಂಛೇನ              ಶ್ರೇಯಾನೇಷಃ ಪರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ||

ಕುಟುಂಬಕ್ಕೆ ಹನ್ನೆರಡು ದಿನ ಸಾಲುವಷ್ಟು ಧನಸಂಗ್ರಹ ಕುಶೂಲ, ಆರು ದಿನಕ್ಕೆ ಸಾಕಾಗುವಷ್ಟು ಕುಂಭ, ಮೂರು ದಿನಕ್ಕೆ ಸಾಕಾಗುವಷ್ಟು ತ್ರ್ಯಾಹಿಕ, ಒಂದು ದಿನಕ್ಕೂ ಸಾಕಾಗದಿದ್ದರೆ ಅಶ್ವಸ್ತನ, ರೈತರು ಬೀಳಿಸಿದ ತೆನೆ ಆರಿಸಿಕೊಂಡು ಬದುಕುವುದು ಶೀಲ, ಬಿದ್ದ ಕಾಳು ಆರಿಸಿಕೊಂಡು ಬದುಕುವುದು ಉಂಛ. ಇವುಗಳಲ್ಲಿ ಮುಂದುಮುಂದಿನದು ಅತ್ಯಂತ ಶ್ರೇಷ್ಠ. ಇವುಗಳ ಒಟ್ಟು ತಾತ್ಪರ್ಯ ಬದುಕಲು ಬೇಕಾಗುವಷ್ಟು ಸಂಪತ್ತಿನ ಸಂಗ್ರಹ ಶ್ರೇಷ್ಠ. ಮಕ್ಕಳು ಮೊಮ್ಮಕ್ಕಳು ಊರಿನವರೆಲ್ಲಾ ತಿನ್ನುವಷ್ಟು ಸಂಗ್ರಹ ಮಾಡುವ ಧನದ ದುರಾಸೆ ಎಂದಿಗೂ ವರ್ಜ್ಯ. ಒಂದು ವರ್ಷಕ್ಕೆ ಮೀರುವಷ್ಟು ಸಂಪತ್ತು ಶೇಖರಿಸಿದರೆ ಸೋಮಯಾಗ ಮಾಡಬೇಕೆನ್ನುತ್ತದೆ ಸ್ಮೃತಿ. ಹಾಗಾಗಿ ಧನಸಂಗ್ರಹದ ಬುದ್ಧಿಗಿಂತ ದಾನಬುದ್ಧಿ ಸದಾ ಶ್ರೇಯಸ್ಕರ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩