ಧರ್ಮಾಚರಣೆ-೮೮
ಧರ್ಮಾಚರಣೆ-೮೮
ದಂಡಾಜಿನೋಪವೀತಾನಿ ಮೇಖಲಾಂ ಚೈವ ಧಾರಯೇತ್ | ಬ್ರಾಹ್ಮಣೇಷು ಚರೇದ್ಭೈಕ್ಷಮನಿಂದ್ಯೇಷ್ವಾತ್ಮವೃತ್ತಯೇ ||ಯಾಜ್ಞವಲ್ಕ್ಯ ಸ್ಮೃತಿ||
ಆತ್ಮರಕ್ಷಣೆಗೆ ದಂಡ, ಶುದ್ಧತೆಗೆ ಕೃಷ್ಣಾಜಿನ, ದೇವತೆಗಳ ಅನುಗ್ರಹಕ್ಕೆ ಯಜ್ಞೋಪವೀತ, ಕೆಟ್ಟ ಚಿಂತನೆ ಸುಳಿಯದಂತೆ ಕಟಿಗೆ ಮೇಖಲೆಯನ್ನು ಬ್ರಹ್ಮಚಾರಿಯು ಧರಿಸಬೇಕು. ದೋಷರಹಿತನೂ, ಗುರುಗಳು- ಹಿರಿಯರು ಹೇಳಿದ ಕರ್ಮಗಳಲ್ಲಿ ಹಾಗೂ ತನ್ನ ವಿದ್ಯಾರ್ಜನೆಯಲ್ಲಿ ರತನಾಗಿ ಯಾರು ಪ್ರಾಮಾಣಿಕವಾಗಿ- ಸಮಾಜಕ್ಕೆ ಹೊರೆಯಾಗದಂತೆ ಬದುಕುತ್ತಿರುವರೋ ಅಂತಹವರ ಬಳಿಯಲ್ಲಿ ಅನ್ನ ಪಡೆದು ಜೀವನ ನಡೆಸಬೇಕು. ಕೆಟ್ಟವರ ಅನ್ನವು ಕೆಟ್ಟ ಮನಸ್ಸನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇವುಗಳ ತಿಳುವಳಿಕೆಯು ಮುಂದೆ ಸಮಾಜಕ್ಕೆ ಉಪಕಾರಿಯಾಗಿ ನಾಲ್ಕು ಜನಕ್ಕೆ ಸಹಕಾರಿಯಾಗಿ ಬದುಕಲು ಪ್ರೇರಣೆ ನೀಡುತ್ತದೆ. ಬ್ರಹ್ಮಚರ್ಯ ಆಶ್ರಮದ ಜೀವನ ಹೀಗೆ ಸಾಗಿದಾಗ ಮಾತ್ರ ಸಾರ್ಥಕವೆನಿಸುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ