ಪೋಸ್ಟ್‌ಗಳು

ಮೇ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

धर्म शास्त्र

प्रेतकर्माण्यनिर्वर्त्य चरेन्नाभ्युदयक्रियाम् ।  आ चतुर्थं ततः पुंसि पञ्चमे शुभदं भवेत्।। ಮೇಧಾತಿಥಿ:| ಕುಟುಂಬದ ಸದಸ್ಯರು ತೀರಿದಾಗ ಮೂರು ತಲೆಯವರು ಆ ಅಂತ್ಯಕ್ರಿಯೆ ಹಾಗೂ ಮಾಸಿಕಗಳು ಮುಗಿಯುವ ಮುನ್ನ ಅಭ್ಯುದಯ ಎಂದರೆ ಶುಭ ಕರ್ಮಗಳನ್ನು ಮಾಡುವಂತಿಲ್ಲ. ನಾಲ್ಕನೆಯವರೆಗೆ ಇದು ಮುಂದುವರೆಯುವುದು. ಐದನೇ ತಲೆಮಾರು ಆದಾಗ ಮುಂದುವರಿಯಲು ಅಡ್ಡಿ ಇಲ್ಲ. ಒಟ್ಟಿಗೆ ಎಲ್ಲವನ್ನೂ ಮುಗಿಸಿ ಸಪಿಂಡೀಕರಣ ಮಾಡಿದರೂ ಪ್ರೇತವು ಯಮಲೋಕ ಸೇರುವ ಮುನ್ನವೇ ಇಲ್ಲಿ ಪೀಪಿ ಊದುವುದು ಮೂರು ತಲೆಯವರಿಗೆ ಎಂದಿಗೂ ಸಲ್ಲದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

धर्मशास्त्रम्

                ಧರ್ಮಶಾಸ್ತ್ರ यद्ददासि विशिष्टेभ्यो यदश्नासि दिने दिने। तत्ते वित्तमहं मन्ये शेषं कस्यापि रक्षसि।। व्यासः। ಸಂಪಾದಿಸಿದ ದುಡ್ಡನ್ನು ಪಾತ್ರರಿಗೆ ದಾನ ಮಾಡಿದಾಗ ಹಾಗೂ ಹಸಿದವರಿಗೆ ಉಣಿಸಿದಾಗ ಆ ಧನವು ನಮ್ಮದೆಂದು ಕರೆಸಿಕೊಂಡು ಸಾರ್ಥಕವಾಗುವುದು. ಇದೆರಡಕ್ಕೂ ಉಪಯೋಗವಿಲ್ಲದ ದಾನಕ್ಕೂ- ಉಣಿಸಲೂ ಪ್ರಯೋಜನಕ್ಕೆ ಬಾರದ ದುಡ್ಡು ನಮ್ಮದೆಂದು ಹೇಗೆ ಕರೆಸಿಕೊಳ್ಳುವುದು! ಧನ ಸಂಪಾದನೆಯ ಉದ್ದೇಶ ಭೋಗವಲ್ಲ. ಹಂಚಿ ತಿನ್ನುವುದೇ ಪ್ರಧಾನ ಉದ್ದೇಶ. ಜೇನಿನಂತೆ ಕೇವಲ ಸಂಗ್ರಹದಲ್ಲಿ ರತನಾದರೆ ಕಡೆಗೊಮ್ಮೆ ಯಾರಾದರೂ ಕೊಂಡೊಯ್ಯುವರು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

धर्मशास्त्रम्

               ಧರ್ಮಶಾಸ್ತ್ರ प्रत्युद्वाहो नैव कार्यो नैकस्मै दुहितृद्वयम् । न चैकजन्ययोः पुंसोः एकजन्ये तु कन्यके।। ತನ್ನ ಮಗಳನ್ನು ಯಾರ ಮಗನಿಗೆ ಮದುವೆ ಮಾಡಿಕೊಟ್ಟಿರುತ್ತಾರೋ ಅಲ್ಲಿಯ ಕನ್ಯೆಯನ್ನು ತನ್ನ ಮಗನಿಗೆ ತಂದುಕೊಳ್ಳುವುದು ಸರಿಯಲ್ಲ. ಕೊಡುಕೊಳ್ಳುವ ವ್ಯಾಪಾರವಾಗುವುದು. ಒಂದು ಕೊಟ್ಟು ಒಂದು ತರುವುದು ವ್ಯಾಪಾರದಲ್ಲಿ ಮಾತ್ರವೇ ಹೊರತು ವಿವಾಹಾದಿಗಳಲ್ಲಿ ಸಲ್ಲದು. ಒಬ್ಬನಿಗೇ ಇಬ್ಬರನ್ನು ಧಾರೆಯೆರೆಯಬಾರದು. ಇಬ್ಬರು ಸೋದರರಿಗೆ ಇಬ್ಬರು ಸೋದರಿಯರನ್ನು ಎಂದಿಗೂ ದಾನಮಾಡಬಾರದು. ಸೋದರ/ಸೋದರಿ= ಒಂದೇ ಹೊಟ್ಟೆಯಲ್ಲಿ ಹುಟ್ಟಿದ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

धर्मशास्त्रम्

       ಧರ್ಮಶಾಸ್ತ್ರ ಊರ್ಧ್ವಂ ವಿವಾಹಾತ್ ಪುತ್ರಸ್ಯ ತಥಾ ಚ ವ್ರತಬಂಧನಾತ್ | ಆತ್ಮನೋ ಮುಂಡನಂ ನೈವ ವರ್ಷಂ ವರ್ಷಾರ್ಧಮೇವ ಚ|| ಮಾಸಮನ್ಯತ್ರ ಸಂಸ್ಕಾರೇ ತ್ರಿಮಾಸಂ ಚೌಲಕರ್ಮಣಿ | ಪಿಂಡದಾನಂ ಮೃದಾ ಸ್ನಾನಂ ನ ಕುರ್ಯಾತ್ತಿಲತರ್ಪಣಮ್|| ಧರ್ಮಶಾಸ್ತ್ರ ಕರದೀಪಿಕಾ|| ಮಗನ/ಮಗಳ ವಿವಾಹ ಅಥವಾ ಉಪನಯನ ನಡೆದು ಒಂದು ವರ್ಷ ಅಥವಾ ಆರು ತಿಂಗಳು ಮುಂಡನ ಕೂಡದು. ಆಯುಷ್ಕರ್ಮವು ಕೆಲವು ನಿಷಿದ್ಧ ಸಮಯದಲ್ಲಿ ಆಯುಷ್ಯವನ್ನು ಕಳೆಯಬಹುದು.ಬೇರೆ ಸಂಸ್ಕಾರಗಳಲ್ಲಿ ಒಂದು ತಿಂಗಳು ಮಾಡುವಂತಿಲ್ಲ. ಚೂಡಾಕರ್ಮವಾದರೆ ಮೂರು ತಿಂಗಳು ಮಾಡುವಂತಿಲ್ಲ. ಇದಿಷ್ಟೇ ಅಲ್ಲದೆ ಪಿಂಡಪ್ರಧಾನ, ಮೃತ್ತಿಕಾಸ್ನಾನ, ತಿಲತರ್ಪಣಗಳೂ ಕೂಡ ನಿಷಿದ್ಧವಾಗಿವೆ. ತ್ರಿಪುರುಷರ ಜ್ಞಾತಿಗಳಿಗೆ ಅಂದರೆ ಪಿತೃ-ಪಿತಾಮಹ-ಪ್ರಪಿತಾಮಹ ಸಂಬಂಧಿಗಳಿಗೆ ಅನ್ವಯಿಸುತ್ತದೆ. ಕಟ್ಟಿಂಗ್ , ಶೇವಿಂಗ್ ಮಾಡುವ ಮುನ್ನವೂ ಇಂತಹ ವಿಷಯಗಳನ್ನು ಗಮನಿಸುವುದು ಒಳಿತು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

धर्मशास्त्रम्

                ಧರ್ಮಶಾಸ್ತ್ರन ज्येष्ठयोर्विवाहः स्यात् ज्येष्ठमासे विशेषतः। द्वौ ज्येष्ठौ मध्यमौ प्रोक्तौ एकज्येष्ठं सुखावहम् ।।ಹುಡುಗನು ಮನೆಯಲ್ಲಿ ಹಿರಿಯ,  ಹುಡುಗಿಯೂ ಜ್ಯೇಷ್ಠಳು. ಹೀಗಿರುವಾಗ ಅವರ ನಡುವೆ ಜಾತಕಾದಿಗಳು ಹೊಂದಿಕೆ ಆದರೂ ಮದುವೆ ಮಾಡುವಂತಿಲ್ಲ. ಒಂದು ವೇಳೆ ಮಾಡುವುದೇ ಆದರೂ ಜ್ಯೇಷ್ಠ ಮಾಸದಲ್ಲಿ ಯಾವ ಕಾರಣಕ್ಕೂ ಮಾಡಕೂಡದು. ಮೂರು ಜ್ಯೇಷ್ಠಗಳ ಸಂಗಮವು ನಾಶಕಾರಕ‌. ಎರಡು ಮಧ್ಯಮ. ಒಂದು ಮಾತ್ರ ಶಾಸ್ತ್ರಸಮ್ಮತ ಅಂದರೆ ಜ್ಯೇಷ್ಠ ಮಾಸದಲ್ಲಿ ಮಾಡುವುದಾದರೆ ಮಕ್ಕಳು ಕನಿಷ್ಠರೂ, ಬೇರೆ ಮಾಸದಲ್ಲಿ ಮಾಡುವುದಾದರೆ ಒಬ್ಬ ಜ್ಯೇಷ್ಠ ಇನ್ನೊಬ್ಬಳು ಮಧ್ಯಮ ಅಥವಾ ಕನಿಷ್ಠ. ಒಬ್ಬರೇ ಮಕ್ಕಳಿರುವಲ್ಲಿ ಈ ನಿಯಮ ಅನ್ವಯಿಸುವುದಿಲ್ಲ. ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಜ್ಯೇಷ್ಠ ಕನಿಷ್ಠ ಎಂಬ ವಿಭಾಗ. ಲೇಖನ: ಶ್ರೀನಿಧಿ ಅಭ್ಯಂಕರ

काव्यस्य सौन्दर्यम्

प्रकृत्याः प्रथमो भागः उमा देवी यशस्विनी।व्यक्तः सर्वमयो विश्वः स्र्तीसंज्ञो लोकभावनः।। हरिवंश।  ತಾಯಿ ಉಮೆಯು ಪ್ರಕೃತಿಯ ಮುಖ್ಯಭಾಗವಾಗಿದ್ದಾಳೆ.‌ಅವಳಿಂದಾಗಿಯೇ ಲೋಕವು ಸ್ತ್ರೀ ಸಂಜ್ಞೆಯನ್ನು ಪಡೆದಿದೆ. ಪ್ರಕೃತಿ ಮತ್ತು ಪುರುಷರಲ್ಲಿ ಪ್ರಕೃತಿಯೆಂದರೆ ಆ ತಾಯಿ ಉಮೆ . ಕಾಳಿದಾಸನು ಇದೇ ಅರ್ಥದಲ್ಲಿ ಮಾತಾಪಿತರನ್ನು  ಪಾರ್ವತೀಪರಮೇಶ್ವರರನ್ನು ಅಥವಾ ಪಾರ್ವತೀಪ- ರಮೇಶ್ವರನನ್ನು ವಂದಿಸುತ್ತೇನೆ ಎಂದದ್ದು. ಆ ನಾವೂ ಜಗನ್ಮಾತೆಯನ್ನು ನೆನೆಯೋಣ. वागर्थाविव सम्पृक्तौ वागर्थप्रतिपत्तये जगतः पितरौ वन्दे पार्वतीपरमेश्वरौ।। ಸಂಗ್ರಹ ಶ್ರೀನಿಧಿ ಅಭ್ಯಂಕರ್

धर्मशास्त्रम्

              ಧರ್ಮಶಾಸ್ತ್ರ ಅಭಿಜಿತ್ ಸರ್ವಕಾರ್ಯೇಷು ಶಸ್ತಂ ನಾತ್ರೋಪನಾಯನಮ್ | ಅಭಿಜಿತ್ ಸರ್ವದೇಶೇಷು ಮುಖ್ಯಂ ದೋಷವಿನಾಶಕೃತ್ || ಸೂರ್ಯಾಚ್ಚತುರ್ಥಂ ಯಲ್ಲಗ್ನಮಭಿಜಿತ್ಸಂಜ್ಞಿತಂ ಚ ತತ್|| ಸಂಗ್ರಹ|| ಶುಭಕರ್ಮಗಳಲ್ಲಿ ಅಭಿಜಿತ್ ಲಗ್ನ ಅತ್ಯಂತ ಶ್ರೇಷ್ಠವಾದರೂ ಉಪನಯನಕ್ಕೆ ಆ ಲಗ್ನ ಆಗುವುದಿಲ್ಲ. ಈ ಲಗ್ನವು ವಿವಾಹಾದಿಗಳಲ್ಲಿ ಗ್ರಹಸ್ಥಿತಿಯಿಂದ ಉಂಟಾಗುವ ಅನೇಕ ದೋಷಗಳನ್ನು ನಾಶನಾಡುತ್ತದೆ. ಸೂರ್ಯನು ಆ ಮಾಸದಲ್ಲಿ ಯಾವ ಲಗ್ನದಲ್ಲಿ ಉದಯವಾಗುವನೋ ಅದರಿಂದ ನಾಲ್ಕನೆಯ ಲಗ್ನವೇ ಅಭಿಜಿತ್ ಲಗ್ನ.   ಶ್ರೀನಿಧಿ ಅಭ್ಯಂಕರ್

ರಾಮಾಯಣ ೨೦೨

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೨೦೧🏝📖 *दग्धस्य तस्य रौद्रेण चक्षुषा रघुनन्दन। व्यशीर्यन्त शरीरात्स्वात्सर्वगात्राणि दुर्मतेः।। स चाङ्गविषयः श्रीमान्यत्राङ्गं प्रमुमोच ह।* _ರಾಮರನ್ನು ಕುರಿತು ಮಹರ್ಷಿಗಳು ಸ್ಥಳಪುರಾಣವನ್ನು ಅರುಹುತ್ತಿದ್ದಾರೆ. ಈ ಆಶ್ರಮದಲ್ಲಿ ಹಿಂದೆ ಸಾಕ್ಷಾತ್ ಪರಮೇಶ್ವರನು ತಪವ ಮಾಡಿದ್ದನು. ಮರುದ್ಗಣಗಳೊಂದಿಗೆ ದೇವತೆಗಳ ಆಶಯದಂತೆ ತಪಸ್ಸು ಕೆಡಿಸಲು ಯತ್ನಿಸಿದ ಮನ್ಮಥನನ್ನು ಶಿವನು ಹುಂಕರಿಸಿ ಫಾಲನೇತ್ರದಿಂದ ಸುಟ್ಟ ಪ್ರದೇಶವಿದು. ಮನ್ಮಥನು ತನ್ನ ಅಂಗವನ್ನು ತ್ಯಜಿಸಿ ಅನಂಗನಾದ ಈ ಪ್ರದೇಶ ಅಂದಿನಿಂದ ಅಂಗದೇಶವೆಂದು ಖ್ಯಾತವಾಯಿತು.‌ಈ ಆಶ್ರಮವು ಶಿವನ ಶಿಷ್ಯಪರಂಪರೆಯ ತಪಸ್ವಿಗಳಿಂದ ಕೂಡಿದೆ. ‌ಈ ಋಷಿಗಳು ಸದಾ ಧರ್ಮಪರರು ಹಾಗೂ ಪಾಪರಹಿತರು.ನಾವೂ ಈ ಪುಣ್ಯಭೂಮಿಯಲ್ಲಿ ಈ ರಾತ್ರಿ ಕಳೆಯೋಣ. ಇಂದಿನ ಬಿಹಾರದ ಭಾಗಲ್ಪುರ ನಗರದ ಸಮೀಪದ ಪ್ರದೇಶವನ್ನು ಅಂಗ ದೇಶ ಎನ್ನುತ್ತಾರೆ. ರಾಮಾಯಣ ಕಾಲದಲ್ಲಿ ರೋಮಪಾದನು ಈ ದೇಶದ ದೊರೆಯಾಗಿದ್ದನೆಂದು ತೋರುತ್ತದೆ. ಈ ದೇಶದ ಸಂಸ್ಕೃತಿ ಅಷ್ಟೇನೂ ಒಳ್ಳೆಯದಿದ್ದಂತಿಲ್ಲ. ಬುಡಕಟ್ಟು ಜನಾಂಗದವರಿದ್ದ ಈ ಪ್ರದೇಶದ ಜನರು ತಮ್ಮ ಪತ್ನಿಯನ್ನು ಪರರಿಗೆ ಮಾರುತ್ತಿದ್ದುದೇ ಬಹುಶಃ ಅದಕ್ಕೆ ಕಾರಣವಿರಬಹುದು. ಅಲ್ಲಿಯ ಜನರನ್ನು ಅಂಗರು ಎಂದು ಕರೆದಿದ್ದಾರೆ. ಬೋಧಾಯನ ಧರ್ಮಸೂತ್ರದಲ್ಲಿ ಅಂಗದೇಶಕ್ಕೆ ಹೋದರೆ ಶುದ್ಧಿಗಾಗಿ ಎರಡು ಯಜ್ಞ ಮಾಡಬೇಕೆಂದು ವಿಧಾನ ಮ...

ರಾಮಾಯಣ ೨೦೦

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೨೦೦🏝📖 *स्नात्वा कृतोदकौ वीरौ जेपतुः परमं जपम्।। कृताह्निकौ महावीर्यौ विश्वामित्रं तपोधनम्। अभिवाद्याभिसंहृष्टौ गमनायाभितस्थतुः।।* _ಇಬ್ಬರೂ ವೀರರೂ ಸ್ನಾನಾದಿಗಳನ್ನು ಮುಗಿಸಿ ಸೂರ್ಯನಿಗೆ ಅರ್ಘ್ಯ ನೀಡಿ ಪರಮಪವಿತ್ರ ಎನಿಸಿದ ಗಾಯತ್ರೀ ಮಂತ್ರವನ್ನು ಜಪಿಸಿದರು. ಮುಂಜಾನೆ ಎದ್ದು ಸ್ನಾನ ಮಾಡಿ ತಿಂಡಿ ತಿನ್ನುವುದೋ ಮೊಬೈಲ್ ನೋಡುವುದೋ ಸಿದ್ಧರಾಗಿ ಕಾರ್ಯಾಲಯಕ್ಕೆ ಹೋಗುವುದೋ ಅಲ್ಲ. ಜಪ- ತಪ ಬ್ರಾಹ್ಮಣರಿಗೆ ಮಾತ್ರ ಮೀಸಲಾದುದೂ ಅಲ್ಲ. ಆಯಾ ವರ್ಣದವರಿಗೆ ಉಕ್ತವಾದ ಅನುಷ್ಠಾನ ಮಾಡಲೇಬೇಕು. ಮಂತ್ರಪೂರ್ವಕವಾಗಿ ಅಥವಾ ಸ್ಮರಣೆ ಮಾಡಿಯಾದರೂ ಸೂರ್ಯನಾರಾಯಣನಿಗೆ ಅರ್ಘ್ಯ ಕೊಡುವುದು ಎಲ್ಲರ ಆದ್ಯ ಕರ್ತವ್ಯ. ಜಗತ್ತಿಗೆ ಬೆಳಕನ್ನು ನೀಡಿ ಜನರ ಜೀವನವನ್ನು ಸದಾಕಾಲ ಮುನ್ನಡೆಸುವ ಆ ಶಕ್ತಿಗೆ ಕೃತಜ್ಞತೆ ಎಂದಾದರೂ ಮೂರು ಬೊಗಸೆ ನೀರು ನೀಡಲು ಅಸಮರ್ಥರಾದರೆ ನಾವು ಈ ಭೂಮಿಯಲ್ಲಿ ಅವನ ಬೆಳಕನ್ನು ಉಪಯೋಗಿಸಲು ಹೇಗೆ ಮನಸ್ಸು ಮಾಡುವೆವು! ನಾವು ಏಳದಿದ್ದರೂ ತಾನು ಎದ್ದು ನಮ್ಮನ್ನು ನಿತ್ಯವೂ ಮುನ್ನಡೆಸುವ ಆ ಶಕ್ತಿಯನ್ನು ನೆನೆವುದೇ ಗಾಯತ್ರೀ ಜಪ. ಗಾಯಂತಂ ತ್ರಾಯತೇ ಎಂಬಂತೆ ಸ್ಮರಿಸುವರನ್ನು ರಕ್ಷಿಸುವ ಮಹಿಮೆಯುಳ್ಳ ಆ ಮಂತ್ರವನ್ನು ಹತ್ತು ಬಾರಿಯಾದರೂ ಉಪದೇಶ ಪಡೆದು ಪಠಿಸದಿರೆ ಮನದ ಕಲ್ಮಶ ಹೇಗೆ ದೂರವಾದೀತು! ಬುದ್ಧಿಯನ್ನು ಸದಾ ಸನ್ಮಾರ್ಗದತ್ತ ಪ್ರಚೋದಿಸು ಎಂಬ ಮಹೋನ್ನತ ಪ್ರಾರ...

ರಾಮಾಯಣ ೨೦೧

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೯🏝📖. *दशरथनृपसूनुसत्तमाभ्यां तृणशयनेनुचिते सहोषिताभ्याम् । कुशिकसुतवचोनुलालिताभ्यां सुखमिव सा विबभौ विभावरी च ।।* _ಮಹರ್ಷಿಗಳ ಉಪದೇಶದ ನಂತರ ಆ ರಾತ್ರಿ ದಶರಥನ ಮಕ್ಕಳೀರ್ವರು ಸರಯೂ ನದಿಯ ತೀರದಲ್ಲಿ ಕಳೆದರು. ದಿನವೂ ಹಂಸತೂಲಿಕಾತಲ್ಪದಲ್ಲಿ ಮಾತೆಯರ ಲಾಲಿ ಹಾಡಿನೊಂದಿಗೆ, ವಂದಿಮಾಗಧರ ಸ್ವಸ್ತಿ ವಾಚನದಿಂದ ನಿದ್ರೆಗೆ ಜಾರುತ್ತಿದ್ದ ಆ ಸಣ್ಣ ಮಕ್ಕಳು ಅಂದು ರಾತ್ರಿ ದರ್ಭೆಯನ್ನೇ ನೆಲಕ್ಕೆ ಹಾಸಿ ವಿಶ್ವಾಮಿತ್ರರ ಮಾತನ್ನೇ ಲಾಲಿಹಾಡಾಗಿಸಿ ಸುಖದಿಂದ ಕಳೆದರು. ತಂದೆ ಮತ್ತು ಗುರುಗಳ ಆಜ್ಞೆಯಂತೆ ಕಾಡಿಗೆ ಬಂದಾಗಿದೆ. ಬಂದ ಮೇಲೆ ಗುರುಗಳು ಹೇಗಿರುವರೋ ನಾವೂ ಅದರಂತೆಯೇ ವ್ಯವಹರಿಸುವುದು. ಶಿಷ್ಯರು ಗುರುಗಳ ಬಳಿ ಹೇಗಿರಬೇಕು ಎಂದು ರಾಮನು ತಾನು ಇದ್ದು ತೋರಿಸಿಕೊಟ್ಟ ಪ್ರಸಂಗ. ರಾಜಕುಮಾರನಾದರೇನು ಯಾರಾದರೇನು ಯಾವ ಸೌಲಭ್ಯ ಇಂದು ಒದಗಿದೆಯೋ ಅದರಲ್ಲೇ ತೃಪ್ತಿ ಕಾಣುವ ಉದಾರತೆ, ಹೋದಲ್ಲೆಲ್ಲಾ ಅದು ಬೇಕು ಇದು ಬೇಕೆಂಬ ಇಚ್ಛೆಯಿಂದ ವ್ಯವಹರಿಸುವ ನಮಗೆಲ್ಲ ಪಾಠ ರಾಮನ ತೃಪ್ತಿಯುತ ನಡೆ. ಸಣ್ಣ ವಯಸ್ಸಿನಲ್ಲಿ ಕಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಒದಗಿದರೆ ಮುಂದೆಂದೂ ಕಷ್ಟಕ್ಕೆ ಕೊರಗುವ ಹೆದರುವ ಪರಿಸ್ಥಿತಿ ಬರದು. ಈಗಿನ ಕಾಲದ ಮಕ್ಕಳಿಗೆ ಆ ಕೆಲಸ ಮಾಡಬೇಡ, ಇಲ್ಲಿಗೆ ಹೋಗಬೇಡ, ಸಂಧ್ಯಾ- ಪೂಜಾ- ಭಜನೆ ದೊಡ್ಡವನಾದ/ ಳಾದ ಮೇಲೆ ಮಾಡುವಿರಂತೆ ಇತ್ಯಾದಿ ಸದಾ ಮಕ್ಕಳಾದ ಮುದ್ದಿನಲ್ಲ...

ರಾಮಾಯಣ ೧೯೯

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೮🏝📖 *न श्रमो न ज्वरो वा ते न रूपस्य विपर्ययः। न च सुप्तं प्रमत्तं वा धर्षयिष्यन्ति नैऋताः।।न बाह्वोः सदृशो वीर्ये पृथिव्यामस्ति कश्चन। बलामतिबलां चैव पठतस्तात राघव।।* _ಮಹರ್ಷಿಗಳು ಯೋಗ್ಯತೆಯನ್ನು ಗ್ರಹಿಸಿದ್ದಾರೆ. ಮಂತ್ರವಿರಲಿ ವಿದ್ಯೆಯಿರಲಿ ಅರ್ಹತೆ ಹಾಗೂ ಯೋಗ್ಯತೆ ಇದ್ದರೆ ಮಾತ್ರ ಉಪದೇಶಿಸಬೇಕು. ಆಗ ಮಾತ್ರ ಅದು ಸಮಾಜಕ್ಕೆ ಉಪಕಾರಿಯಾಗುವುದು. ಇಲ್ಲದಿದ್ದರೆ ವೈದ್ಯಕೀಯ ಕಲಿತು ಸಂಸತ್ತಿನ ಮೇಲೆ ದಾಳಿ ಮಾಡುವ ಪುಂಡರ ಗುಂಪಿಗೆ ಸೇರುತ್ತಾರೆ. ಮಗು ರಾಮ, ಮುಹೂರ್ತ ಮೀರುವ ಮುನ್ನ ಆಚಮನ ಮಾಡು, ಬಲಾ- ಅತಿಬಲಾ ಎಂಬ ವಿದ್ಯೆಗಳನ್ನು ಉಪದೇಶಿಸುವೆ.‌ಸಿದ್ಧಿಸಿಕೊ. ಅದರ ಫಲವಾದರೋ ಜಗದ ಯಾವ ತಾಪವೂ ಬಾಧಿಸದ ಅದ್ಭುತ ಫಲ. ಎಷ್ಟು ನಡೆದರೂ ಎಷ್ಟು ಕಾಲ ಯುದ್ಧ ಮಾಡಿದರೂ ದಣಿವಾಗದು. ಜ್ವರ ಮೊದಲಾದ ಯಾವ ಉಪದ್ರವವೂ ಸಮೀಪ ಬರದು. ಮೊಗದ ಕಾಂತಿ ಎಂದೂ ಮಾಸದು. ಮಲಗಿದರೂ ಏನನ್ನೋ ಯೋಚಿಸುತ್ತಿದ್ದರೂ ಯಾವೊಬ್ಬ ರಾತ್ರಿಚರನೂ ಪೀಡಿಸಲಾರನು. ಇದನ್ನು ಅನುಷ್ಠಾನ ಮಾಡಿ ಸಿದ್ಧಿಸಿಕೊಂಡವನ ಬಾಹುಬಲಕ್ಕೆ ಲೋಕದಲ್ಲಿ ಸಾಟಿಯೇ ಇರುವುದಿಲ್ಲ. ಸೌಭಾಗ್ಯದಲ್ಲಿ, ಸಾಮರ್ಥ್ಯದಲ್ಲಿ, ಲೌಕಿಕ-ಅಲೌಕಿಕ ವಿಷಯದ ಜ್ಞಾನದಲ್ಲಿ, ಬುದ್ಧಿಶಕ್ತಿಯಲ್ಲಿ, ವಾದಕ್ಕೆ ಉತ್ತರಿಸುವುದರಲ್ಲಿ ಈ ಮಂತ್ರದ ಪ್ರಭಾವದಿಂದ ನಿನ್ನ ಸಮನಾದವರು ಯಾರೂ ಇರುವುದಿಲ್ಲ. ಜನರ ಬದುಕಿನ ಏಕೈಕ ಚಿಂತೆಯಾದ ಹಸಿವು-...

ಪದಶಕ್ತಿ ೪೭

ಪದಶಕ್ತಿ ೪೭🌄📔🖋️📕 *ಸಮಾನ* _ಅನ ಎಂಬ ಧಾತುವಿಗೆ ಸಮ್ ಎಂಬ ಉಪಸರ್ಗ ಸೇರಿ ಹುಟ್ಟಿದ ಪದ. ಭಾರತೀಯರೆಲ್ಲರೂ ಸಮಾನರು ಎಂಬ ವಾಕ್ಯ ನೋಡಿದರೆ ಸಾದೃಶ್ಯ ಅಥವಾ  ಸಹೋದರರು ಎಂಬ ಒಂದು ಅರ್ಥ ಕಂಡುಬರುತ್ತದೆ.ಮಾನದಲ್ಲಿ ಎಲ್ಲರೂ ಒಂದೇ ಎಂಬ ಅರ್ಥವನ್ನು ತಂದುಕೊಡುತ್ತದೆ._ _ಇನ್ನೊಂದು ಅಪರೂಪದ ಅರ್ಥ ಸರಿಯಾದುದು ಎಂದು. ಮರಾಠಿ ಭಾಷೆಯಲ್ಲಿ ಸಂಸ್ಕೃತದ ಈ ಅರ್ಥ ಸರಾಗವಾಗಿ ಬಳಕೆಯಲ್ಲಿ ಇದೆ. ಸಮಾನ ಆಯ್ತು ಎಂದರೆ ಸರಿಯಾಗಿ,ವ್ಯವಸ್ಥಿತವಾಗಿ ಆಯ್ತು ಎಂದು._ _ಮೂರನೆಯದಾಗಿ ಅಭಿಮಾನದಿಂದ ಕೂಡಿರುವುದು ಎಂಬ ಅರ್ಥವೂ ಇದೆ. ಸ್ಥೈರ್ಯಂ ಸಮಾನಮಹರತ್ ಮಧುಮಾನಿನೀನಾಂ ಎಂಬ ಶ್ಲೋಕದಲ್ಲಿ ಅಭಿಮಾನ ಅಥವಾ ಗರ್ವವನ್ನು ಅಪಹರಿಸಿದ ಉಲ್ಲೇಖ ಇದೆ._ _ನಾಲ್ಕನೆಯದಾಗಿ ಸಮಾನೋ ನಾಭಿದೇಶಗಃ ಎಂಬಂತೆ ಹೊಕ್ಕುಳಿನ ಬಳಿ ವಾಸ ಇರುವ ತಿಂದ ಅನ್ನಾದಿಗಳನ್ನು ಸರಿಯಾಗಿ ಜೀರ್ಣಿಸಲು ಸಹಕಾರಿಯಾದ ವಾಯುವಿನ ಒಂದು ಪ್ರಭೇದ._ _ಐದನೆಯದಾಗಿ ಪ್ರಾಣಾದಿ ವಾಯುವಿನ ಒಂದು ಭೇದ. ಇದನ್ನು ನಾಲ್ಕರಲ್ಲೇ ಸೇರಿಸಬಹುದು ಅಥವಾ ಜಗತ್ತಿಗೆ ಅನ್ವಯಿಸಿದಾಗ ಪ್ರತ್ಯೇಕಿಸಲೂಬಹುದು._ _ಕಡೆಯದಾಗಿ ಸಮಾನ ಅಂದರೆ ಒಟ್ಟಿಗೇ ಅಥವಾ ಒಂದೇ ಎಂಬ ಅರ್ಥವೂ ಇದೆ. ಸಮಾನತಂತ್ರದಲ್ಲಿ ಆಹುತಿ ಕೊಡಬೇಕು ಎಂಬಲ್ಲಿ ಒಂದೇ ನಿಯಮ ಅಥವಾ ಎಲ್ಲರಿಗೂ ಒಟ್ಟಿಗೇ ಕೊಡಬೇಕು ಎಂಬ ಅರ್ಥ ಸಿಗುತ್ತದೆ. ಹೀಗೆ ಅರ್ಥದಲ್ಲಿ ಸಮಾನತೆಯಿಲ್ಲದ ನಮ್ಮ ಸಂವಿಧಾನದ ಸಮಾನತೆಗೆ ಸದೃಶವಾದ ಪದ ಈ ಸಮಾನ._ _ಸಂಸ್ಕೃತ ಸಾಹಿತ್ಯದ ಬಹಳಷ್ಟು ಕಡೆ...

ವಿಕ್ರಮೋರ್ವಶೀಯ ೧೦

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೧೦ *इदमसुलभवस्तु प्रार्थनादुर्निवारं प्रथममपि मनो मे पञ्चबाणा क्षिणोति। किमुत मलयवातोन्मूलितापाण्डुपत्रैः उपवनसहकारैर्दर्शितेष्वङ्कुरेषु।।* _ಬೇಸರ ಕಳೆಯಲೆಂದು ಉಪವನಕ್ಕೆ ಬಂದರೆ ಇದು ಇನ್ನಷ್ಟು ಬೇಸರ ತಂದರೆ ಹೇಗೆ ಎಂಬುದನ್ನು ಪುರೂರವನ ಮಾತಿನಲ್ಲಿ ಕವಿ ವರ್ಣಿಸುತ್ತಿದ್ದಾನೆ. ಊರ್ವಶಿಯ ಸೌಂದರ್ಯದ ಪರಿಯನ್ನು ಕಂಡ ರಾಜನು ಅವಳಿಲ್ಲದ ಕ್ಷಣ ಕಷ್ಟವೆಂದು ಇತ್ತ ಕಡೆ ಉದ್ಯಾನಕ್ಕೆ ಬಂದಿದ್ದಾನೆ. ಸುಲಭದಲ್ಲಿ ಸಿಗದ ವಸ್ತುವಿನ ಬಯಕೆಯನ್ನು ತಡೆಯಲು ಮೊದಲೇ ಮನವು ಕಷ್ಟಪಡುತ್ತಿದೆ. ಹೂವಿನ ಬಾಣದ ಅನಂಗನು ಹೂವಿನ ಮೃದುತ್ವ ಕೊಡದೆ ಬಾಣದ ಕಾಠಿಣ್ಯದಿಂದ ಕಂಗೆಡಿಸುತ್ತಿದ್ದಾನೆ. ಕಾಮನೆಯು ಮನದಲ್ಲಿ ಅಚ್ಚೊತ್ತಿ ಪೀಡಿಸುತ್ತಿದೆ. ಈ ಉದ್ಯಾನದಲ್ಲಾದರೋ ಮಲಯಮಾರುತದಿಂದ ಮೆಲ್ಲನೆ ಮಾತನಾಡಿಸುತ್ತಿರುವ ಮುಪ್ಪಾದ ಎಲೆಗಳ ಬೀಳುವಿಕೆಯ ಜೊತೆಗೆ ಮಾವಿನ ಮರಗಳ ಅರಳಿದ ಸುಮಗಳ ಚಿತ್ರವು ನನ್ನ ಪ್ರಿಯೆಯ ಜೊತೆಗೆ ವಿಹರಿಸುವ ಇಚ್ಛೆಯನ್ನು ಬಡಿದೆಬ್ಬಿಸಿ ಮನಕೆ ಇನ್ನಷ್ಟು ಪೀಡೆ ಕೊಡುತ್ತಿದೆಯಲ್ಲ! ಚಿತ್ರಕಾವ್ಯದಂತಿದೆ ಕಾಳಿದಾಸನ ಈ ಶ್ಲೋಕ. ನಾಯಕ ವಿರಹ ಕಾತುರನಾಗಿ ಉದ್ಯಾನ ಪ್ರವೇಶಿಸುವ ಆ ಕ್ಷಣದಲ್ಲಿ ಮಂದಮಾರುತ ಮೆಲ್ಲನೆ ಕೆಳಗೆ ಬೀಳುತ್ತಿರುವ ಒಣಗಿದ ಬಿಳಿ ಎಲೆಗಳು ಜೊತೆಗೆ ಹೊಸದಾಗಿ ಅರಳಿದ ಮಾವಿನ ಅಂಕುರಗಳು. ಅನೇಕ ಸಿನೆಮಾಗಳಲ್ಲಿ ಮಾವಿನ ಬದಲು ಬೇರೆ ಹೂವನ್ನು ಬಳಸಿದರೂ ಇಂತ...

ರಾಮನ್ ೧೯೮

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೭🏝📖 *कृतस्वस्त्ययनं मात्रा पित्रा दशरथेन च। पुरोधसा वसिष्ठेन मङ्गलैरभिमन्त्रितम् ।।ददौ कुशिकपुत्राय सुप्रीतेनान्तरात्मना।।* _ರಾಘವನ ವನಗಮನ ನಿಶ್ಚಯವಾಯಿತು. ರಾಮನ ನಡೆ ಸರ್ವರಿಗೂ ಅಡಿಗಡಿಗೆ ಮಾರ್ಗದರ್ಶಕ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಅರಮನೆಯಲ್ಲಿ ಸುಖವಾಗಿ ಕಳೆವ ಹೊತ್ತಲ್ಲಿ ಅಪ್ಪ ಕಾಡಿಗೆ ಕಳುಹಿದನಲ್ಲ ಎಂದು ಇನಿತೂ ಬೇಸರಿಸದೇ ತಂದೆ- ತಾಯಂದಿರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು, ಗುರುಗಳಾದ ವಸಿಷ್ಠರಿಗೆ ನಮಸ್ಕರಿಸಿ ಅವರಿಂದ ಕೆಲವು ರಕ್ಷಾಮಂತ್ರಗಳಿಂದ ಅಭಿಮಂತ್ರಿತನಾಗಿ ಹೊರಟ ಬಾಲರಾಮ. ದೂರ ಪ್ರಯಾಣ ಮಾಡುವುದಾದರೆ ಅಥವಾ ಬಹುದಿನ ಎಲ್ಲಾದರೂ ಹೋಗುವುದಾದರೆ ತಂದೆ-ತಾಯಂದಿರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದು ಹೋಗುವ ಸುಂದರ ಪರಂಪರೆಯ ದರ್ಶನ ಇಲ್ಲಿದೆ. ತಾನು ಹೋದವನು ತಿರುಗಿ ಬರುವನೋ ಇಲ್ಲವೋ ಅಥವಾ ಇವರೀರ್ವರು ವಯೋಸಹಜತೆಯಿಂದ ಸ್ವರ್ಗದ ದಾರಿ ಕ್ರಮಿಸಿದರೆ ಎಂಬ ಒಂದು ಜಾಗೃತಿ ಅಲ್ಲದೆ  ಗುರುಹಿರಿಯರ ನಿತ್ಯವಂದನೆಯು ಆಯುಷ್ಯವನ್ನೂ-ವಿದ್ಯೆಯನ್ನೂ-ಯಶಸ್ಸನ್ನೂ- ಮನೋಬಲವನ್ನೂ ಹೆಚ್ಚು ಮಾಡುತ್ತದೆ. ಅವರ ಮನಃಪೂರ್ವಕ ಆಶೀರ್ವಾದವು ನಮ್ಮಲ್ಲಿ ಇನ್ನಷ್ಟು ಕಸುವನ್ನು ತುಂಬಿಕೊಡುತ್ತವೆ. ಹಾಗಾಗಿ ಅಭಿವಾದನ ಎನ್ನುವುದು ತಂದೆ ತಾಯಂದಿರಿಂದ ಆರಂಭವಾಗಿ ಯಾರು ಜ್ಞಾನಿಗಳು ಎದುರಾದರೂ ಮಾಡುವುದು ಅತ್ಯಂತ ಅವಶ್ಯ ಕರ್ತವ್ಯ. ‌ಅದನ್ನೇ ರಾಮ ತನ್ನ ನಡೆಯಿಂದ ...

ರಾಮಾಯಣ ೧೯೭

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೬🏝📖_ *गुप्तं कुशिकपुत्रेण ज्वलनेनामृतं यथा।। एष विग्रहवान्धर्म एष वीर्यवतां वरः। एष बुद्ध्याधिको लोके तपसश्च परायणम्।।*  _ದಶರಥನಿಗೆ ಮನದಟ್ಟು ಮಾಡಿಸುವ ಮಾತುಗಳನ್ನು ವಸಿಷ್ಠರು ಆಡುತ್ತಿದ್ದಾರೆ‌. ಅಯ್ಯಾ ರಾಜನೇ, ವಿಶ್ವಾಮಿತ್ರರ ರಕ್ಷೆಯಲ್ಲಿ ಹೊರಟ ಇವರನ್ನು ಯಾರೂ ಏನೂ ಮಾಡಲಾರರು, ಸುತ್ತಲೂ ಬೆಂಕಿಯಿರುವಾಗ ಮಧ್ಯದ ಅಮೃತಕ್ಕಾಗಿ ಆಸೆಪಟ್ಟರೆ ಹೇಗೆ ಸುಟ್ಟು ಬೂದಿಯಾಗುವರೋ ಈ ಮಹರ್ಷಿಯೆಂಬ ಬೆಂಕಿಯಿರುವಾಗ ಯಾರೂ ಬಾಲರನ್ನು ಮುಟ್ಟಲಾರರು. ಇವನೇನು ಸಾಮಾನ್ಯನನಲ್ಲ ಧರ್ಮದ ಸಾಕಾರಮೂರ್ತಿ, ಪರಾಕ್ರಮ ದಲ್ಲಿ ಅಸದೃಶ, ಬುದ್ಧಿವಂತಿಕೆಯಲ್ಲೂ ಇವನ ಸಮೀಪ ಯಾರೂ ಬರಲಾರರು, ಈ ಮೂರಕ್ಕೂ ತಿಲಕವಿಟ್ಟಂತೆ ತಪಸ್ಸು ಇವನಲ್ಲಿ ಮಡುಗಟ್ಟಿದೆ. ಇವನಿಗೆ ತಿಳಿಯದ ಅಸ್ತ್ರಗಳಿಲ್ಲ, ಉಳಿದವರಿಗೆ ತಿಳಿಯದ ಅಸ್ತ್ರಗಳೂ ಇವನಿಗೆ ತಿಳಿದಿವೆ, ದೇವ-ಗಂಧರ್ವ-ಋಷಿ-ಅಸುರ-ರಾಕ್ಷಸ-ಉರಗ-ಕಿನ್ನರ ಇವರಾರೂ ಅಸ್ತ್ರವಿದ್ಯೆಯಲ್ಲಿ ಇವನಿಗೆ ಸಮರಲ್ಲ. ಇಲ್ಲಿ ವಸಿಷ್ಠರ ಹೃದಯ ವೈಶಾಲ್ಯವನ್ನೂ ವಿಶ್ವಾಮಿತ್ರರ ಮೇರು ವ್ಯಕ್ತಿತ್ವವನ್ನೂ ಎರಡನ್ನೂ ನಾವು ಗಮನಿಸಬಹುದು. ವಾಲ್ಮೀಕಿಗಳು ಮುಂದೆ ರಾಮನಿಗೆ ಈ ವಿಶೇಷಣ ಬಳಸಿದ್ದಾರೆ *ರಾಮೋ ವಿಗ್ರಹವಾನ್ಧರ್ಮ* ಎಂದು. ಇಲ್ಲಿ ವಸಿಷ್ಠರ ಬಾಯಲ್ಲಿ ವಿಶ್ವಾಮಿತ್ರರ ಧರ್ಮನಿಷ್ಠೆಯನ್ನು ಲೋಕಕ್ಕೆ ಸಾರಿದ್ದಾರೆ. ತನ್ನೊಂದಿಗೆ ಒಂದು ಕಾಲದಲ್ಲಿ ಸ್ಪರ್ಧೆಗಿಳಿದ ತರ...

रರಾಮಾಯಣ ೧೯೬

📖📝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೫🏝📖 *इक्ष्वाकूणां कुले जातः साक्षाद्धर्म इवापरः। धृतिमान् सुव्रतः श्रीमान् न धर्मं हातुमर्हसि।। स्वधर्मं प्रतिपद्यस्व नाधर्मं वोढुमर्हसि।।* _ಸಜ್ಜನರ ಕೋಪವೆಂದರೆ ಕ್ಷಣ ಹೊತ್ತಾದರೂ ಅದು ಜಗತ್ತಿಗೆ ಮಾರಕ. ಸಹಜವಾಗಿ ಕೋಪಗೊಳ್ಳದ ಅವರು ಅಪರೂಪಕ್ಕೆ ಕೋಪಗೊಂಡರೆ ಅದರ ಪರಿಣಾಮ ಬಹಳ ತಾಪವನ್ನು ತಂದುಕೊಡುತ್ತದೆ. ಜಗದ ಹಿತವನ್ನೇ ಸದಾ ಬಯಸುವ ವಿಶ್ವಾಮಿತ್ರರು ಕೋಪಗೊಂಡುದನ್ನು ಕಂಡ ಇಳೆ ನಡುಗಿತು, ಸುರರು ಬೆದರಿದರು, ಜಗದ ಜೀವಿಗಳು ತತ್ತರಿಸಿದರು‌. ಒಡನೆಯೇ ಕಾರ್ಯಪ್ರವೃತ್ತರಾದ ತಪನಕುಲಪುರೋಹಿತರಾದ ವಸಿಷ್ಠರು ಈ ಮಾತನ್ನು ನುಡಿಯುತ್ತಾರೆ. ರಾಜನೇ, ನೀನು ಜನಿಸಿದ ಕುಲ ಸಾಮಾನ್ಯವಾದುದಲ್ಲ, ಇಕ್ಷ್ವಾಕು ಅಂತಹ ಶ್ರೇಷ್ಠರ ಕುಲದಲ್ಲಿ ಜನ್ಮ ತಾಳಿರುವೆ.ಇಂದಿನವರೆಗೂ ಸದ್ಧರ್ಮಾಚರಣೆಯಲ್ಲಿ ಧರ್ಮದೇವತೆಗೆ ಸಮಾನನಾಗಿ ಮೆರೆದಿರುವೆ. ದಶರಥನಿಗೆ ಮಗನಾಗಿ ಜನಿಸಬೇಕಾದರೆ ಅವನ ಯೋಗ್ಯತೆ ಎಷ್ಟಿತ್ತೆಂದು ನಾವು ಊಹಿಸಬಹುದು. ಭಗವಂತನ ಯಾವ ರೂಪದಲ್ಲಿ ಕಾಣಿಸಿಕೊಳ್ಳಬೇಕಾದರೂ ನಮ್ಮ ತಪಸ್ಸು ಹೆಚ್ಚಿರಬೇಕು‌. ಸಕಲ ಸಂಪತ್ತುಗಳೂ ನಿನ್ನನ್ನು ಆಶ್ರಯಿಸಿವೆ. ಮಕ್ಕಳಿಲ್ಲವೆಂಬ ಕೊರಗೂ ನಾಲ್ವರಿಂದ ದೂರವಾಗಿದೆ. ಬದುಕಿನಲ್ಲಿ ಪಡೆದು ತೀರಬೇಕಾದುದು ಇನ್ನೇನೂ ಉಳಿದಿಲ್ಲ. ಸತ್ಯಸಂಕಲ್ಪನೆಂದು ಖ್ಯಾತನಾಗಿರುವೆ. ಇಷ್ಟೆಲ್ಲ ಇದ್ದೂ ಇಂದು ನೀನು ಮಾತು ತಪ್ಪುವ ಅಧರ್ಮಕ್ಕೆ ಗುರಿಯಾಗದಿರು. ...

अनूदित कथावली ३७

अनूदितकथावलिः -३७*परोपकारः पुण्याय* एकस्मिन् ग्रामे एकः देवभक्तः आसीत्। प्रत्यहं अग्निहोत्रादि कर्म, दर्श-पूर्णमासादि इष्टिकर्माणि तथा सोमयागादयः अपि तेन अनुष्ठीयन्ते स्म। एकदा तद्देशस्य राज्ञः एकः दूतः आगत्य तमुवाच - अस्माकं राज्ञे मरणयोगः पण्डितैः सूचितः। तस्य परिहारार्थं प्रायश्चित्तं तैः एवं निरूपितम् ' *मृत्योः सुवर्णप्रतिमा एवं तिलराशिः ब्राह्मणेभ्यः दीयताम् * ' इति। किन्तु यःकश्चिदपि विप्रः दानं स्वीकर्तुं नेच्छति, कृपया भवान् स्वीकरोतु इति। अस्त्विति अङ्गीकृत्य तेन तत्र गमनं कृतम्। तदर्थं निश्चिते अहनि पुरोहितैः संकल्पितेन राज्ञा दत्तं सर्वं  स्वीचकार। ततः अचिरादेव तिलराशिः समीपस्थे पुष्करिण्यां यादसां ओदनार्थं तेन दत्ता, एवं कनकप्रतिमां स्वर्णकाराय विक्रीय तेन प्राप्तं सर्वं धनं दीनेभ्यः दानं कृतवान्। तादृशीं दानबुद्धिं दृष्ट्वा राज्ञा साकं सर्वे चकिताः अभूवन्।तदा तेन भक्तेन एवमुक्तम् - ह्यः मम स्वप्ने मृत्योः दर्शनं अभूत्, सः उक्तवान् ' अहं सुलभेन राजानं न परित्यजामि, मम कृते बहुवत्सरैः भवता समाचरितस्य अग्निहोत्रस्य पुण्यफलं दातव्यम् इति ' मया तत् नाङ्गीकृतम् ...

ಪದಶಕ್ತಿ ೪೬

ಪದಶಕ್ತಿ ೪೬🌄📔🖋️📕 *ಪ್ರಾಣ* _ಈ ಶಬ್ದದ ಪ್ರಸಿದ್ಧ ಅರ್ಥ ಜೀವ. ಅಬ್ಬಾ ಪ್ರಾಣ ಹೋಗ್ತಿತ್ತು, ಪ್ರಾಣ ಈಗ ತಾನೇ ಹೋಯ್ತು ಇತ್ಯಾದಿ ಪ್ರಯೋಗಗಳಲ್ಲಿ ಸಹಜವಾಗಿ ಬಳಸುತ್ತೇವೆ._ _ಇನ್ನೊಂದು ಅರ್ಥ ಪಂಚ ಪ್ರಾಣಗಳು ಶರೀರವನ್ನು ಆಶ್ರಯಿಸಿರುತ್ತವೆ. ಪ್ರಾಣ-ಅಪಾನ-ವ್ಯಾನ- ಉದಾನ ಹಾಗೂ ಸಮಾನ. ಹೃದಯದಲ್ಲಿ ಇರುವ ಗಾಳಿಯ ರೂಪ ಅದು ಪ್ರಾಣ._ _ಮೂರನೆಯದಾಗಿ ಭಗವಂತನ ಇನ್ನೊಂದು ಹೆಸರು ಪ್ರಾಣ.*ಸರ್ವಾನಿ ಹವಾ ಇಮಾನಿ ಭೂತಾನಿ ಪ್ರಾಣಮೇವಾಭಿಸಂವಿಶಂತಿ* ಎಂಬ ಉಪನಿಷತ್ತು ಭಗವಂತನನ್ನು ಪ್ರಾಣ ಎನ್ನುತ್ತದೆ. ನಾಲ್ಕನೆಯ ಅರ್ಥ ಶಕ್ತಿ. ಕನ್ನಡದ ತ್ರಾಣವೂ ಈ ಪ್ರಾಣವೂ ಸಮಾನಾರ್ಥಕ. ಐದನೆಯದಾಗಿ ಮೇದಿನೀ ಕೋಶದ ಪ್ರಕಾರ ಪೂರ್ಣಗೊಂಡಿರುವುದನ್ನು ಪ್ರಾಣ ಎನ್ನಬಹುದು. ಶರೀರವು ಆತ್ಮದ ಜೊತೆಗಿದ್ದಾಗ ಪ್ರಾಣ. ಇಲ್ಲದಿದ್ದಾಗ ಅದೊಂದು ಕಸ._ _ಆರನೆಯದಾಗಿ ನಮಗೆಲ್ಲ ತಿಳಿದಿರುವಂತೆ ಗಾಳಿ. ಮುಖ್ಯಪ್ರಾಣ ಎನ್ನುವುದು ಅವನಿಗೇ ಅಲ್ಲವೇ! ಹೀಗೆ ಅನೇಕ ಅರ್ಥಗಳಿಂದ ಕೂಡಿದ ಈ ಪ್ರಾಣ ನಮ್ಮಲ್ಲಿ ನೆಲೆನಿಂತು ಪ್ರಾಣಿಜಗತ್ತಿನಲ್ಲಿ ತ್ರಾಣದಿಂದ ನೆಲೆಸಲೆಂದು ಆ ಮುಖ್ಯಪ್ರಾಣನನ್ನು ನೆನೆಯೋಣ._ _ಸಂಸ್ಕೃತ ಕನ್ನಡ ಸಾಹಿತ್ಯದಲ್ಲಿ ಸಾವಿರಾರು ಕಡೆ ಈ ಪದ ಪ್ರಸಿದ್ಧ. प्राणीह माता प्राणः पितेति ವೇದದ ಮಾತು._ *ಪಲ್ಲಕ್ಕಿಯ ಸಾನಂದದೊಳೇರುಹಲ್ಲಣಿಸದ ಕರಿತುರಗವನೇರುಎಲ್ಲಾಭರಣವನಿಟ್ಟು ಸುಖದಿ ಪ್ರಾಣದೊಲ್ಲಭಸಹಿತ ಸಂತೋಷದೊಳಿರು ಶ್ರೀಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ* ಕೆಳದಿ ವೆ...