ಪೋಸ್ಟ್‌ಗಳು

2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮಶಾಸ್ತ್ರ

ಧರ್ಮಶಾಸ್ತ್ರ ಮಾಸಿಕಾನ್ಯಸಮಾಪ್ಯೈವ ನಾಂದೀಶ್ರಾದ್ಧಂ ನ ಕಾರಯೇತ್| ಸಮಾಪ್ಯ ಚ ಪುನಃ ಕಾಲೇ ಪಿತ್ರೋರ್ಮಾಸಿಕಮಾಚರೇತ್|| ತಂದೆ ತಾಯಿ  ತೀರಿದ ವರ್ಷ ಮಾಸಿಕಗಳನ್ನು ಮುಗಿಸದೇ ನಾಂದೀಶ್ರಾದ್ಧ ಮಾಡುವಂತಿಲ್ಲ. ಶುಭಕಾರ್ಯಕ್ಕೆ ಒಂದು ವೇಳೆ ನಿವೃತ್ತಿ ಮಾಡಿದರೂ ಅದು ಮುಗಿದ ಮೇಲೆ ಮಾಸಿಕವನ್ನು ಮುಂದುವರಿಸಬೇಕು. ನಾವು ಮಕ್ಕಳಾಗಿದ್ದಾಗ ನಮಗೆ ಮೊದಲ ವರ್ಷ ತಿಂಗಳು  ತಿಂಗಳು ಉಪಚಾರ ಮಾಡಿದಂತೆ ಪಿತೃಗಳ ಬಾಧಾಪರಿಹಾರಕ್ಕೆ ಮಾಸಿಕಗಳೂ  ಅವಶ್ಯಕವಾಗಿವೆ. ಸಂಗ್ರಹ ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

                ಧರ್ಮಶಾಸ್ತ್ರ ಅಕ್ಷಯ್ಯಾಸನಯೋಃ ಷಷ್ಠೀ ದ್ವಿತೀಯಾವಾಹನೇ ತಥಾ|ಅನ್ನದಾನೇ ಚತುರ್ಥೀ ಸ್ಯಾಚ್ಛೇಷಾಃ ಸಂಬುದ್ಧಯಃ ಸ್ಮೃತಾಃ|| ನಾರದೀಯ ಪುರಾಣ|| ಶ್ರಾದ್ಧದಲ್ಲಿ ಸಂಕಲ್ಪ, ಅಕ್ಷಯ್ಯ ಹಾಗೂ ಆಸನ ಕೊಡುವಾಗ ಷಷ್ಠೀ ವಿಭಕ್ತಿಯನ್ನೂ ( ಧುರಿಲೋಚನಸಂಜ್ಞಕಾನಾಂ ) ಆವಾಹನೆ ಮಾಡುವಾಗ ದ್ವಿತೀಯಾ ವಿಭಕ್ತಿಯನ್ನೂ ( ಧುರಿಸಂಜ್ಞಕಂ, ಪಿತರಂ) ಅನ್ನದಾನ ಮಾಡುವಾಗ ಚತುರ್ಥೀ ವಿಭಕ್ತಿಯನ್ನೂ ( ಪಿತೃಪಿತಾಮಹಪ್ರಪಿತಾಮಹೇಭ್ಯಃ) ಉಳಿದ ಕಡೆಗಳಲ್ಲಿ ಸಂಬೋಧನಾವಿಭಕ್ತಿಯನ್ನು ಬಳಸಬೇಕು.(ಪಿತಃ ಇದಂತೇ ಅರ್ಘ್ಯಮ್) ಸಂಗ್ರಹ  ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

            ಧರ್ಮಶಾಸ್ತ್ರ ಆಮಂತ್ರಿತೋ ಜಪೇದ್ಧೋಗ್ಧ್ರೀಂ ಆಸೀನಸ್ತು ನಿಷಂಗಿಣಃ| ಶ್ರಾದ್ಧಾಂತೇ ವಾಮದೇವೀಯಂ ಶ್ರಾದ್ಧಭೋಕ್ತಾ ನ ದೋಷಭಾಕ್|| ವಾಯುಪುರಾಣ|| ಶ್ರಾದ್ಧಕ್ಕಾಗಿ ನಿಮಂತ್ರಣ ಬಂದ ಕೂಡಲೇ *ಉಪಹ್ವಯೇ ಸುದುಘಾಂ* *ಹಿಂಕೃಣ್ವತೀ* *ಆ ಬ್ರಹ್ಮನ್ ಬ್ರಾಹ್ಮಣೋ*  ಮಂತ್ರವನ್ನೂ  ಕುಳಿತಾಗ *ಇಂದ್ರ ದೃಹ್ಯಯಾಮ* *ವಾಶೀಮಂತ ಋಷ್ಟಿಮಂತ* *ಸ ಇಷುಹಸ್ತೈಃ* *ನಮಃ ಕಕುಭಾಯ ನಮೋ ನಿಷಂಗಿಣೇ* ಶ್ರಾದ್ಧದ ಕೊನೆಗೆ ವಿಸರ್ಜನೆ ಆದ ಮೇಲೆ *ಕಯಾನಶ್ಚಿತ್ರ* ಅಥವಾ ವಾಮದೇವೀಯ ಸಾಮವನ್ನು ಪಠಿಸಿದರೆ ಶ್ರಾದ್ಧ ಭೋಕ್ತೃವು ದೋಷಕ್ಕೆ ಒಳಗಾಗುವುದಿಲ್ಲ.  ಭಗವಂತನ ಸ್ಮರಣೆಯು ಮಂತ್ರಗಳ ಪಠನೆಯು ಪರಾನ್ನದ ದೋಷವನ್ನು ದೂರ ಮಾಡುತ್ತದೆ. ಸಂಗ್ರಹ ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

          ಧರ್ಮಶಾಸ್ತ್ರ ನ ಬ್ರಾಹ್ಮಣಂ ಪರೀಕ್ಷೇತ ದೈವೇ ಕರ್ಮಣಿ ಧರ್ಮವಿತ್| ಪಿತ್ರ್ಯೇ ತು ಕರ್ಮಣಿ ಪ್ರಾಪ್ತೇ ಪರೀಕ್ಷೇತ ಪ್ರಯತ್ನತಃ | ದೇವಕಾರ್ಯಾದ್ದ್ವಿಜಾತೀನಾಂ ಪಿತೃಕಾರ್ಯಂ ವಿಶಿಷ್ಯತೇ|| ಮನುಸ್ಮೃತಿ|| ದೈವಿಕ ಕರ್ಮಗಳಲ್ಲಿ ಪಾಲ್ಗೊಳ್ಳುವ ಬ್ರಾಹ್ಮಣರ ವಿದ್ಯೆ ಆಚಾರ ಮುಂತಾದವನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಬಾರದು. ಅದೇ ಪಿತೃಗಳ ಕರ್ಮ ಶ್ರಾದ್ಧ ಮಹಾಲಯ ಮೊದಲಾದವುಗಳಿಗೆ ಆಹ್ವಾನಿಸುವಾಗ ಅವರ ಅಚಾರ-ವಿಚಾರ-ವಿದ್ಯೆ ಮೊದಲಾದವುಗಳ ಬಗೆಗೆ ತುಂಬಾ ಗಮನ ಕೊಡಬೇಕು. ಏಕೆಂದರೆ ದೇವಕಾರ್ಯಕ್ಕಿಂತ ಪಿತೃಗಳ ಕಾರ್ಯವು ದ್ವಿಜರಿಗೆ ವಿಶಿಷ್ಟವಾಗಿದೆ.ಯಾರಾದರೂ ನಡೀತದೆ ಎಂಬ ಮನೋಭಾವ ಸಲ್ಲದು. ಸಂಗ್ರಹ ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

      ಧರ್ಮಶಾಸ್ತ್ರ ಸೂಕ್ತ ಸ್ತೋತ್ರ ಜಪಂ ತ್ಯಕ್ತ್ವಾ ಪಿಂಡಾಘ್ರಾಣಂ ಚ ದಕ್ಷಿಣಾಮ್| ಆಹ್ವಾನಂ ಸ್ವಾಗತಂ ಚ ಅರ್ಘ್ಯಂ ವಿನಾ ವ ಪರಿವೇಷಣಮ್| ವಿಸರ್ಜನಂ ಸೌಮನಸ್ಯಮಾಶಿಷಾಂ ಪ್ರಾರ್ಥನಾಂ ತಥಾ| ವಿಪ್ರಪ್ರದಕ್ಷಿಣಾಂ ಚೈವ ಸ್ವಸ್ತಿವಾಚನಕಂ ತಥಾ| ಪಿತೃನುದ್ದಿಶ್ಯ ಕರ್ತವ್ಯಂ ಪ್ರಾಚೀನಾವೀತಿನಾ ಸದಾ| ಜಮದಗ್ನಿ| ನಿರ್ಣಯಸಿಂಧು. ಅನ್ನಸೂಕ್ತ, ವರುಣ ಸೂಕ್ತ ಮೊದಲಾದ ಪಠನದಲ್ಲಿ, ಅರ್ಘ್ಯ ಕೊಡುವ ಕಾಲದಲ್ಲಿ, ವಿಪ್ರರಿಗೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುವ ಕಾಲದಲ್ಲಿ, ಸ್ವಸ್ತಿ ದಾತಾರೋ ಇತ್ಯಾದಿ ವಾಚನ ಕಾಲದಲ್ಲಿ ಸವ್ಯವಾಗಿ ಇರಬೇಕು. ಉಳಿದಂತೆ ಆವಾಹನೆ, ಪಿಂಡದ ಆಘ್ರಾಣ, ದಕ್ಷಿಣೆ ನೀಡುವಾಗ, ಸ್ವಾಗತ ಮತ್ತು ಪರಿವೇಷಣ ಕಾಲದಲ್ಲಿ, ವಿಸರ್ಜನೆ ಹಾಗೂ ಸೌಮನಸ್ಯವನ್ನು ಮತ್ತು ಪ್ರಾರ್ಥನೆ ಮಾಡುವ ಕಾಲದಲ್ಲಿ ಪಿತೃಗಳ  ಉದ್ದೇಶ ಇದ್ದಾಗ ಅಪಸವ್ಯದಲ್ಲೇ ಮಾಡಬೇಕು. ಸಂಗ್ರಹ ಶ್ರೀನಿಧಿ ಅಭ್ಯಂಕರ್ 

ಧರ್ಮಶಾಸ್ತ್ರ

            ಧರ್ಮಶಾಸ್ತ್ರ ದಂತಧಾವನ ತಾಂಬೂಲಂ ತೈಲಾಭ್ಯಂಗಂ ಚ ಭೋಜನಮ್ | ರತ್ಯೌಷಧಪರಾನ್ನಂ ಚ ಶ್ರಾದ್ಧಕೃತ್ಸಪ್ತ ವರ್ಜಯೇತ್ || ಜಾಬಾಲಃ|| ಶ್ರಾದ್ಧ ಮಾಡುವ ವ್ಯಕ್ತಿಯು ಶ್ರಾದ್ಧ ದಿನದಂದು ಹಲ್ಲುಜ್ಜುವುದು, ಎಲೆ ಅಡಿಕೆ ತಿನ್ನುವುದು, ಎಣ್ಣೆ ಹಚ್ಚಿ ಅಭ್ಯಂಗ ಮಾಡುವುದು,  ತಿನ್ನುವುದು, ಮೈಥುನ, ಔಷಧಿ ಸೇವನೆ, ಇನ್ನೊಬ್ಬರ ಊಟ ಹಾಗೂ ಪರಿಗ್ರಹ ಇಷ್ಟು ವಿಷಯಗಳನ್ನು ಬಿಡಬೇಕು. ತನ್ನ ಮನೆಯಲ್ಲಿ ಶ್ರಾದ್ಧ ಮುಗಿಸಿ ಇನ್ನೊಬ್ಬರ ಮನೆಯಲ್ಲಿ ಊಟ ಮಾಡುವುದು ಅಥವಾ ದಕ್ಷಿಣೆ ತೆಗೆದುಕೊಳ್ಳುವುದು ಮಾಡಿದರೆ ಶ್ರಾದ್ಧ ಮಾಡಿಯೂ ಪ್ರಯೋಜನವಿಲ್ಲ. ಸಂಗ್ರಹ  ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

ಧರ್ಮಶಾಸ್ತ್ರ काममामरणात् तिष्ठेत् गृहे कन्यर्तुमत्यपि। न चैवैनां प्रयच्छेत्तु गुणहीनाय कर्हिचित्।। ಮನುಸ್ಮೃತಿ. ಮನುವು ಸ್ತ್ರೀಯರ ವಿಷಯದಲ್ಲಿ ಎಷ್ಟು ಒಳ್ಳೆಯ ಭಾವನೆ ಹೊಂದಿದ್ದನೆಂದು ಇಲ್ಲಿ ಗಮನಿಸಬಹುದು. ಪ್ರಾಪ್ತ ವಯಸ್ಕಳಾದ ತನ್ನ ಮಗಳಿಗೆ ಯೋಗ್ಯನಾದ ವರ ಅಕಸ್ಮಾತ್ ದೊರಕಲಿಲ್ಲ ಎಂದರೆ ಜೀವನಪೂರ್ತಿ ಮನೆಯಲ್ಲಿ ಅಪ್ಪನೇ ಸಾಕಿದರೂ ಅಡ್ಡಿಯಿಲ್ಲ. ಅದು ಧರ್ಮವಿರುದ್ಧ ಆಗದು ಅಥವಾ ಆಶ್ರಮ ಧರ್ಮ ಲೋಪ ಆಗದು.ಆದರೆ ಎಂದೆಂದಿಗೂ ಅಯೋಗ್ಯನೊಬ್ಬನಿಗೆ  ಗಂಡು ಎಂಬ ಏಕೈಕ ಕಾರಣಕ್ಕೆ ಕೊಟ್ಟು ಮದುವೆ ಮಾಡಬಾರದು. ಹಾಗಾಗಿಯೇ ಸಾವಿತ್ರಿಯ ವಿಷಯದಲ್ಲಿ ಅವಳ ತಂದೆ ಉದಾರವಾಗಿದ್ದನು. ಸ್ತ್ರೀ ಎನ್ನುವುದು ಪೂಜ್ಯತೆಯ ಸಂಕೇತ. ಅವಳು ಎಂದಿಗೂ ಅಯೋಗ್ಯರ ಪಾಲಾಗಬಾರದು ಎಂಬ ಎಚ್ಚರ ಮನುವಿನ ಆದೇಶದಲ್ಲಿ ಇದೆ. ಸಂಗ್ರಹ ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

                  ಧರ್ಮಶಾಸ್ತ್ರ ಆದದೀತ ನ ಶೂದ್ರೋಪಿ ಶುಲ್ಕಂ ದುಹಿತರಂ ದದತ್ | ಶುಲ್ಕಂ ಗೃಹ್ಣನ್ ಕುರುತೇ ಛನ್ನಂ ದುಹಿತೃವಿಕ್ರಯಮ್|| ಮನುಸ್ಮೃತಿ. ನಾಲ್ಕು ವರ್ಣದವರಲ್ಲಿ ಯಾರೊಬ್ಬರೂ ತನ್ನ ಮಗಳನ್ನು ಧಾರೆ ಎರೆದುಕೊಡುವಾಗ ಪ್ರತಿಯಾಗಿ ಧನವನ್ನು ಪಡೆಯಬಾರದು. ಒಂದು ವೇಳೆ ಹಾಗೆ ತೆಗೆದುಕೊಂಡರೆ ಅದು ಧನಕ್ಕಾಗಿ ಆ ಕನ್ಯೆಯನ್ನು ಮಾರಿದಂತಾಗುತ್ತದೆ. ರಹಸ್ಯವಾಗಿ ಮಾರುವುದೂ ಒಂದೇ, ಬಹಿರಂಗವಾಗಿ ಬೇಡಿಕೆ ಇಟ್ಟು ಹಣ ಪಡೆಯುವುದೂ ಒಂದೇ ಆಗಿದೆ. ಪತಿಯ ಅಕಾರ್ಯದ ಬಗ್ಗೆ ಅಥವಾ ಬೇಜವಾಬ್ದಾರಿಯ ಬಗ್ಗೆ ಪ್ರಶ್ನೆ ಮಾಡುವ ಹಕ್ಕೂ ಇಲ್ಲದಂತಾಗುತ್ತದೆ. ಹಾಗಾಗಿ ಎಂದಿಗೂ ಹೆಣ್ಣು ಹೆತ್ತವರು ದುಡ್ಡಿನ ಆಸೆಗೋ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಮಗಳನ್ನು ಅಯೋಗ್ಯರ ಕೈಯಲ್ಲಿ ಇರಿಸಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮ ಸೂಕ್ಷ್ಮ

         ಧರ್ಮಸೂಕ್ಷ್ಮ सत्यामपि तपःसिद्धौ नियमापेक्षया मुनिः। कल्पवित् कल्पयामास वन्यामेवास्य संविधाम्।। रघुवंशम्। ದಿಲೀಪನು ವ್ರತದ ನಿಯಮ ಪಾಲಿಸಿ ಫಲ ಪಡೆಯಲೆಂಬ ಇಚ್ಛೆಯಿಂದ ವಸಿಷ್ಠನು ರಾಜನಿಗೆ ಬೇಕುಬೇಕಾದ್ದನ್ನು ಅನುಕೂಲ ಮಾಡಿಕೊಡುವ ಸಾಮರ್ಥ್ಯ ಇದ್ದರೂ ಗುಡಿಸಲ ವಾಸವನ್ನೇ ಒದಗಿಸಿದನು. ಒಂದು ಕಾಮನೆ ಇಟ್ಟುಕೊಂಡು ಕರ್ಮದಲ್ಲಿ ತೊಡಗಿದಾಗ ಆ ಕರ್ಮೋಕ್ತ ನಿಯಮ ಪಾಲಿಸುವುದು ಅತ್ಯಂತ ಅವಶ್ಯಕ. ಯಜಮಾನನ ಕರ್ಮವನ್ನು ತಾನು ಮಾಡುವ ಪುರೋಹಿತನು ಈ ವಿಷಯದಲ್ಲಿ ಎಚ್ಚರ ವಹಿಸಬೇಕು. ಶ್ರೀಮಂತ ಅಥವಾ ಪ್ರತಿಷ್ಠಿತ ಇತ್ಯಾದಿ ಕಾರಣದಿಂದ ಕರ್ಮದ ನಿಯಮಗಳ ವಿನಾಯಿತಿ ಅಥವಾ ಔದಾಸೀನ್ಯವು ಎಂದಿಗೂ ಸಲ್ಲದು. ಹಾಗೆ ಮಾಡಿದರೆ ಕಾರಯಿತಾ ಚ ಸಮಭಾಗೀ ಎಂಬಂತೆ ನಾವು ಪಾಪಭಾಗಿಗಳಾಗಬೇಕಾದೀತು. ವಸಿಷ್ಠರ ನಡೆಯೇ ನಮಗೆ ಆದರ್ಶ. ಲೇಖನ: ಶ್ರೀನಿಧಿ ಅಭ್ಯಂಕರ್.

ರಾಮಾಯಣ ೧೯೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೫🏝📖 *ಯದಾ ಸ್ವಯಂ ನ ಯಜ್ಞಸ್ಯ ವಿಘ್ನಕರ್ತಾ ಮಹಾಬಲಃ | ತೇನ ಸಂಚೋದಿತೌ ದ್ವೌ ತು ರಾಕ್ಷಸೌ ಸುಮಹಾಬಲೌ||* _ವಿಶ್ವಾಮಿತ್ರರ ಮಾತು. ಯಾರವರು ನಿಮಗೆ ತೊಂದರೆ ನೀಡುತ್ತಿರುವವರು ಎಂಬ ದಶರಥನ ಪ್ರಶ್ನೆಗೆ ಹೇಳುತ್ತಿದ್ದಾರೆ-ರಾವಣನೆಂಬ ಲೋಕೈಕವೀರನು ನೇರವಾಗಿ ತಾನು ಯಜ್ಞಕ್ಕೆ ವಿಘ್ನ ತರದೇ ತನ್ನ ಅನುಚರರ ಮೂಲಕ ತೊಂದರೆ ಕೊಡುತ್ತಿರುವನು. ರಾವಣನಿಗೆ ನಿಜಕ್ಕಾದರೆ ವಿಶ್ವಾಮಿತ್ರರಿಂದ ಯಾವ ತೊಂದರೆಯೂ ಇಲ್ಲ. ವಿಶ್ವಾಮಿತ್ರರು ಲೋಕ ಸದಾ ಸುಭಿಕ್ಷವಾಗಿರಲಿ ಎಂದು ಬಯಸುವವರು. ಯಾರಿಗೂ ಕೇಡನ್ನು ಬಯಸದ ತಪಸ್ವಿ. ಅಂತಹ ಋಷಿಗಳ ತಪಸ್ಸು ಕೆಡಿಸುವ ಕುಕೃತ್ಯವೇ ರಾವಣನನ್ನು ಕೊಲ್ಲಲು ಪ್ರಮುಖ ಕಾರಣ. ಅನೇಕರ ಆಕ್ಷೇಪಕ್ಕೆ ವಾಲ್ಮೀಕಿಗಳು ಅಲ್ಲಲ್ಲಿ ರಾವಣನ ದುಷ್ಕೃತ್ಯಗಳನ್ನು ವರ್ಣಿಸುತ್ತಾ ಹೋಗಿ ಸ್ಪಷ್ಟನೆ ಕೊಟ್ಟಿದ್ದಾರೆ. ರಾಮ ಕೇವಲ ಸೀತೆಗಾಗಿ ಅಲ್ಲದೆ ಸೀತೆಗೆ ಜನ್ಮ ನೀಡಿದ ಭೂತಾಯಿಯ ಉದ್ಧಾರಕ್ಕಾಗಿಯೂ ರಾವಣನಂತಹ ಕಟುಕರನ್ನು ಕೊಂದದ್ದು. ಲೋಕಕ್ಕೆ ಒಳಿತನ್ನು ಬಯಸುವ ಎಲ್ಲರ ಕ್ಷೇಮ ಬಯಸುವ ತನ್ನ ಆಳ್ವಿಕೆಗೆ ಕಿಂಚಿತ್ತೂ ಭಂಗ ಬರದ ಅಥವಾ ಸಂಬಂಧಪಡದ ವಿಶ್ವಾಮಿತ್ರರ ಯಜ್ಞಕ್ಕೆ ವಿಘ್ನ ತರುವ ಅವನ ಮನಸ್ಥಿತಿ ಎಷ್ಟು ದುಷ್ಟವಿದ್ದೀತು! ತಮ್ಮ ದೇಶಕ್ಕೆ ಸಂಬಂಧಿಸದ ವಿಷಯದಲ್ಲಿ ಮತ್ತೊಂದು ದೇಶ ತಲೆ ಹಾಕಿದರೆ ಈಗಿನ ಕಾಲದಲ್ಲಿ ಯುದ್ಧ. ಹಿಂದೆಯೂ ಅದೇ ರೀತಿ._ *ದೇವದಾನವಗಂಧರ್ವಾ ಯಕ್ಷಾಃ ಪತಗಪನ್ನಗಾಃ|| ಸ ಹಿ...

ಕಥೆ

ಒಮ್ಮೆ ಮಾಂಡವ್ಯ ಋಷಿಗಳು  ತಮ್ಮ ಆಶ್ರಮದಲ್ಲಿ ಧ್ಯಾನವನ್ನು ಮಾಡುತ್ತಾ ಕುಳಿತಿರುವರು. ಆಗ ಅಲ್ಲಿಗೆ ಕೆಲವು ಕಳ್ಳರು ತಮ್ಮ ಕದ್ದಮಾಲಿನೊಂದಿಗೆ ಓಡೋಡಿ ಬಂದು, ಆಶ್ರಮದ ಒಂದು ಜಾಗದಲ್ಲಿ ಕದ್ದಮಾಲನ್ನು ಬಚ್ಚಿಟ್ಟು, ಮತ್ತೊಂದು ಕಡೆ ಅವಿತುಕೊಳ್ಳುವರು. ಕಳ್ಳರನ್ನು ಹಿಡಿಯಲು ಹಿಂಬಾಲಿಸಿದ್ದ ರಾಜಭಟರು ಆ ಆಶ್ರಮಕ್ಕೂ ಬರುವರು. ಕದ್ದ ಮಾಲನ್ನು ವಶಪಡಿಸಿಕೊಂಡು, ಕಳ್ಳರನ್ನು ಹಿಡಿಯುವರು.  ಈ ವಿಷಯವೇ ತಿಳಿಯದ ಮಾಂಡವ್ಯರನ್ನು ಸಹ ಕಳ್ಳರ ಗುರುವೆಂದು ಭಾವಿಸಿ, ಹಿಡಿದು ರಾಜನ ಬಳಿಗೆ ಕರೆದುಕೊಂಡು ಹೋಗುವರು.  ಕದ್ದ ಮಾಲಿನ ಸಮೇತ ಸಿಕ್ಕಿದ್ದರಿಂದ ರಾಜನು ಪ್ರತ್ಯೇಕವಾಗಿ ವಿಚಾರಣೆ ಮಾಡದೆ, 'ಅವರನ್ನು ಶೂಲಕ್ಕೆ ಏರಿಸಿ' ಎಂಬ ತೀರ್ಪು ನೀಡುವನು. ಅದರಂತೆ ರಾಜಭಟರು ಎಲ್ಲರನ್ನೂ ಶೂಲಕ್ಕೆ ಏರಿಸುವರು. ಮನುಷ್ಯ ಸಹಜವಾದ ಯಾತನೆಯಿಂದ ಕಳ್ಳರೆಲ್ಲರೂ ಸತ್ತು ಹೋಗುವರು.  ಆಶ್ಚರ್ಯವೆಂದರೆ ಮಾಂಡವ್ಯರು ಮಾತ್ರ ಯಾತನೆಯಿಂದ ಬಳಲದೆ ಶಾಂತ ಚಿತ್ತರಾಗಿ ಭಗವಂತನ ಸ್ಮರಣೆಯೊಂದಿಗೆ ಇರುವುದನ್ನು ರಾಜಭಟರು ಗಮನಿಸುವರು. ಈ ವಿಷಯವನ್ನು ರಾಜನಿಗೆ ತಿಳಿಸಲು, ರಾಜನೂ ಅಲ್ಲಿಗೆ ಬರುವನು. ಮಾಂಡವ್ಯರನ್ನು ಕಂಡು ಇವರು ಮಹಾತ್ಮರೇ ಇರಬೇಕೆಂದು ನಿಶ್ಚಯಿಸಿ ' ನಾನು ನಿಮ್ಮನ್ನು ವಿಚಾರಣೆ ಮಾಡದೇ ಶಿಕ್ಷೆ ವಿಧಿಸಬಾರದಾಗಿತ್ತು, ನನ್ನದು ತಪ್ಪಾಗಿದೆ ' ಎಂದು ಪಶ್ಚಾತ್ತಾಪದಿಂದ ಕ್ಷಮೆ ಯಾಚಿಸುವನು.  ಮಾಂಡವ್ಯರು ಸ್ವಲ್ಪವೂ ವಿಕಾರಗೊಳ್ಳದೆ  ಕ್ಷ...

ರಾಮಾಯಣ ೧೯೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೪🏝📖 *ದೇವದಾನವಗಂಧರ್ವಾ ಯಕ್ಷಾಃ ಪತಗಪನ್ನಗಾಃ | ನ ಶಕ್ತಾ ರಾವಣಂ ಸೋಢುಂ ಕಿಂ ಪುನರ್ಮಾನವಾ ಯುಧಿ|| ಸ ಹಿ ವೀರ್ಯವತಾಂ ವೀರ್ಯಮಾದತ್ತೇ ಯುಧಿ ರಾಕ್ಷಸಃ|* _ಮಹಾನುಭಾವರೇ, ದೇವ-ದಾನವ-ಗಂಧರ್ವರಿಂದಲೂ ಎದುರಿಸಲು ಅಸಾಧ್ಯವಾದ ಪರಾಕ್ರಮಿ ರಾವಣ. ಅವನ ಆಜ್ಞೆಯ ಮೇರೆಗೆ ವಿಘ್ನ ಉಂಟುಮಾಡುತ್ತಿರುವ ಮಾರೀಚ ಸುಬಾಹುಗಳೂ ಮಹಾ ಪರಾಕ್ರಮಿಗಳು. ನಾನೂ ಸಹ ಇವರನ್ನು ಎದುರಿಸಲು ಸಮರ್ಥನಲ್ಲ. ರಾವಣನಂತೂ ತನ್ನೆದುರು ಯುದ್ಧ ಮಾಡುವವರ ಪರಾಕ್ರಮವನ್ನೇ ಧ್ವಂಸ ಮಾಡುವ ಸಾಮರ್ಥ್ಯ ಉಳ್ಳವನು. ನಾನು ಸಸೈನ್ಯನಾಗಿ ಬಂದರೂ ಅವರನ್ನು ಎದುರಿಸಲಾರೆ. ಅಂತಹುದರಲ್ಲಿ ಯುದ್ಧ ಮಾಡಿ ಗೊತ್ತಿಲ್ಲದ ಬಾಲ ರಾಮನನ್ನು ಖಂಡಿತವಾಗಿಯೂ ಕಳುಹಿಸಲಾರೆ. ದಯವಿಟ್ಟು ಇಂತಹ ಕೋರಿಕೆಯನ್ನು ಮುಂದಿಡಬೇಡಿ ಎನ್ನುವನು ದಶರಥ. ರಾವಣನ ಹಾಗೂ ಮಾರೀಚ-ಸುಬಾಹುಗಳ ಪರಾಕ್ರಮ ಬಹುಶಃ ದಶರಥನ ಕಾಲದಲ್ಲೇ ಪ್ರಸಿದ್ಧವಾಗಿತ್ತು. ದಶರಥನಂತಹ ದೇವತೆಗಳಿಗೂ ಯುದ್ಧದಲ್ಲಿ ಸಹಕರಿಸಿದ ವೀರನು ಹೀಗೆ ನುಡಿಯುವುದನ್ನು ನೋಡಿದರೆ ರಾವಣನ ಖ್ಯಾತಿ ಹಾಗೂ ಪರಾಕ್ರಮದ ಎತ್ತರ ಎರಡೂ ಅರಿವಾಗುತ್ತದೆ. ಅದರಲ್ಲೂ ಮಾರೀಚ ಸುಬಾಹುಗಳಲ್ಲಿ ಒಬ್ಬನೊಡನೆ ಬೇಕಾದರೆ ನಾನು ಹೋರಾಡಬಲ್ಲೆ, ಇಬ್ಬರೂ ಸೇರಿ ಬಂದರೆ ಅವರನ್ನೂ ಎದುರಿಸಲಾರೆ ಎಂಬ ದಶರಥನ ಹೆದರಿಕೆ ಬಹುಶಃ ಮಾಯಾಯುದ್ಧದ ಕುರಿತಾಗಿದ್ದಿರಬಹುದು._ *ಪೂರ್ವಮರ್ಥಂ ಪ್ರತಿಶ್ರುತ್ಯ ಪ್ರತಿಜ್ಞಾಂ ಹಾತುಮಿಚ್ಛಸಿ| ರಾಘವಾಣಾಮಯುಕ...

ಧರ್ಮಶಾಸ್ತ್ರ

ಲಾಜಾಚಂದನ ಸಿದ್ಧಾರ್ಥಭಸ್ಮದೂರ್ವಾಂಕುರಾಕ್ಷತಾಃ ವಿಕಿರಾ ಇತಿ ಸಂದಿಷ್ಟಾ ಸರ್ವವಿಘ್ನೌಘನಾಶನಾಃ  ಶಾರದಾತಿಲಕ. ೪ ಪಟಲ. ಅರಳು, ಗಂಧ ಅಥವಾ ಅದರ ನೀರು, ಸಾಸಿವೆ, ಭಸ್ಮ, ಗರಿಕೆ, ಅಕ್ಷತೆ ಇವಿಷ್ಟು ವಿಕಿರಗಳು. ಇವುಗಳು ಕರ್ಮದ ವಿಘ್ನವನ್ನು ದೂರ ಮಾಡುತ್ತವೆ. ನಮ್ಮ ಪ್ರಯೋಗದಲ್ಲಿ ಅರಳು ಮತ್ತು ಸಾಸಿವೆಯನ್ನು ಯದತ್ರ ಶ್ಲೋಕ ಹೇಳಿ ಈಗಲೂ ಕರ್ಮದ ಆದಿಯಲ್ಲಿ ಸುತ್ತಲೂ ಚೆಲ್ಲುತ್ತಾರೆ. ಕೆಲವು ಕಡೆ ಬಹುಶಃ ಇದರ ಆಚರಣೆ ಬಿಟ್ಟು ಹೋಗಿದೆ.ಇದನ್ನು ಅಗ್ನಿಪುರಾಣವೂ ಉಲ್ಲೇಖಿಸಿದೆ. ಅಧ್ಯಾಯ ೩೪.  ಶ್ರೀನಿಧಿ ಅಭ್ಯಂಕರ್

ರಾಮಾಯಣ ೧೯೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೩🏝📖. *ಅಹಮೇವ ಧನುಷ್ಪಾಣಿರ್ಗೋಪ್ತಾ ಸಮರಮೂರ್ಧನಿ| ಯಾವತ್ಪ್ರಾಣಾನ್ಧರಿಷ್ಯಾಮಿ ತಾವದ್ಯೋತ್ಸ್ಯೇ ನಿಶಾಚರೈಃ||* _ಮುನಿಗಳ ಮಾತಿಗೆ ದಶರಥನು ಕಂಗೆಟ್ಟು ಕ್ಷಣಕಾಲ ಮೂರ್ಛೆ ಹೋದನು.ಸಾವರಿಸಿಕೊಂಡು ಹೀಗೆನ್ನುವನು- ರಾಮನಿನ್ನೂ ಸಣ್ಣವನು,ಹದಿನಾರೂ ಕಳೆಯದ ಬಾಲಕ, ರಾಕ್ಷಸರ ಮೋಸದ ಮಾಯೆಯೊಂದು ಅವನಿಗರಿಯದು, ಈ ಒಂದು ಅಕ್ಷೌಹಿಣೀ ಸೇನೆಯೊಡನೆ ನಾನೇ ಬಂದು ಕಾದುವೆ, ನನ್ನ ಪ್ರಾಣ ಹೋಗುವ ತನಕ ನಿಶಾಚರರ ಜೊತೆ ಸಮರ್ಥವಾಗಿ ಹೋರಾಡಿ ನಿಮ್ಮ ಯಜ್ಞವನ್ನು ರಕ್ಷಿಸುವೆ. ದಶರಥನ ಕ್ಷಾತ್ರ ಇಲ್ಲಿ ಸಮಯೋಚಿತವಾಗಿ ಅಭಿವ್ಯಕ್ತವಾಗಿದೆ. ಕ್ಷತ್ರಿಯನಾದವನಿಗೆ ಪ್ರಾಣದ ಬಗ್ಗೆ ಭಯ ಇರಬಾರದು. ಯುದ್ಧರಂಗಕ್ಕೆ ಇಳಿದ ಮೇಲೆ ಗೆಲುವೋ ಸೋಲೋ ಗಾಯವೋ ಮರಣವೋ ಯಾವುದನ್ನೂ ಲೆಕ್ಕಿಸದೆ ಮುನ್ನುಗ್ಗುವ ಛಾತಿ ಕ್ಷತ್ರಿಯನಿಗೆ ಅವಶ್ಯವಾಗಿ ಇರಬೇಕಾದದ್ದು. ಹೇಗೆ ಬ್ರಾಹ್ಮಣನಿಗೆ ತನ್ನ ಧರ್ಮಾಚರಣೆಯಲ್ಲಿ ಪ್ರಾಣ ಹೋದರೂ ಸರಿ ಧರ್ಮವಿರೋಧಿ ಕರ್ಮ ಮಾಡಲಾರೆ ಎಂಬ ಆಸ್ಥೆ ಇರಬೇಕೋ ಅಂತೆಯೇ ಕ್ಷತ್ರಿಯನಿಗೆ ಈ ರೀತಿಯ ರಕ್ಷಕಬುದ್ಧಿ ಇರಬೇಕು. ದಶರಥನು ಒಬ್ಬ ಸಮರ್ಥ ಯೋಧನೂ, ರಾಜನೂ ಹೌದೆಂದು ಸಾರಿದ್ದಾನೆ._ *ಷಷ್ಟಿವರ್ಷಸಹಸ್ರಾಣಿ ಮಮ ಜಾತಸ್ಯ ಕೌಶಿಕ| ದುಃಖೇನೋತ್ಪಾದಿತಶ್ಚಾಯಂ ನ ರಾಮಂ ನೇತುಮರ್ಹಸಿ ಜ್ಯೇಷ್ಠಂ ಧರ್ಮಪ್ರಧಾನಂ ಚ ನ ರಾಮಂ ನೇತುಮರ್ಹಸಿ * _ಮಹರ್ಷಿಗಳೇ, ಅರವತ್ತು ಸಾವಿರ ವರ್ಷಗಳು ಕಳೆದ ಮೇಲೆ ಇವರು ಜನಿಸಿದ್ದಾರೆ.ಇವರನ್ನ...

ವಿಕ್ರಮೋರ್ವಶೀಯ ೯

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-९ *निषिञ्चन् माधवीं लक्ष्मीं लतां कौन्दीं च नर्तयन् । स्नेहदाक्षिण्ययोर्योगात्कामीव प्रतिभाति मे।।* _ಕಾಳಿದಾಸನ ಕವಿಸಮಯಕ್ಕೆ ಈ ಶ್ಲೋಕ ಉತ್ತಮ ಉದಾಹರಣೆ. ಪುರೂರವ ಊರ್ವಶಿಯನ್ನೇ ಕನವರಿಸುತ್ತಾ ಉದ್ಯಾನ ಪ್ರವೇಶಿಸಿದರೆ ಮಂದಮಾರುತವೊಂದು ಸುಳಿಯುತ್ತಲಿದೆ. ಪುರೂರವನು ಆ ಮಾರುತವನ್ನೇ ಕಾಮಿಯೆಂಬಂತೆ ಕಾಣುತ್ತಾದ್ದಾನೆ. ವಸಂತಕಾಲದ ಸೊಬಗನ್ನು ಹೆಚ್ಚಿಸುತ್ತಾ ಕುಂದದ ಲತೆಯನ್ನು ಕುಣಿಸುತ್ತಲಿರುವ ಈ ಮೆಲ್ಲನೆಯ ಗಾಳಿ ಪ್ರೀತಿ ಹಾಗೂ ದಾಕ್ಷಿಣ್ಯದ ಸೋಂಕಿನಿಂದ ಎನಗೆ ಕಾಮಿಯಂತೆ ತೋರುತ್ತಿದೆ. ಕಾಮಿನಿಯೋರ್ವಳು ನಾಚಿಕೆಯಿಂದ ವಯ್ಯಾರ ತೋರುತ್ತಾ ಬರುತ್ತಿರುವಂತೆ ಈ ಮಾರುತವೂ ಮಂದವಾಗಿ ಪ್ರಕೃತಿಯನ್ನು ಅತ್ತಿಂದಿತ್ತ ಚಲಿಸುವಂತೆ ಮಾಡಿ ಮನದ ಸಂಸ್ಕಾರಗಳೆಲ್ಲವೂ ಮಧುರಭಾವದೆಡೆಗೆ ಸಂಚರಿಸುವಂತೆ ಮಾಡುತ್ತಿದೆ. ಪ್ರಿಯಳೇ ನನ್ನ ಅರಸಿ ಬಂದಂತೆ ಭಾಸವಾಗುತ್ತಿದೆ. ಕವಿಗೆ ಭಾವ ತೋರಲು ಅನಲವಾದರೇನು ಅನಿಲವಾದರೇನು! ಕಲ್ಪನೆ ಮಧುರ ಭಾವವನ್ನು  ವ್ಯಕ್ತಪಡಿಸಬೇಕು.ಸ್ನೇಹ ಎಂದರೆ ಸಂಸ್ಕೃತದಲ್ಲಿ ಮೂಲತಃ ಅಂಟು ಎಂಬರ್ಥ. ಪ್ರೀತಿಯೂ ಒಂದು ಬಗೆಯ ಮನದ ಅಂಟು. ಆ ಪ್ರೀತಿಯ ಅಭಿವ್ಯಕ್ತಿಗೆ ದಾಕ್ಷಿಣ್ಯವು ಅಂದರೆ ಸಂಕೋಚವು ಒಂದಾದರೆ ಇನ್ನೂ ಸೊಗಸು. ಎಲ್ಲಾ ಭಾವಗಳ ನೇರಾನೇರ ಅಭಿವ್ಯಕ್ತಿಯು ಕುತೂಹಲವನ್ನು ಅಥವಾ ಮಾಧುರ್ಯವನ್ನು ಉಂಟುಮಾಡದು.ಇದನ್ನೇ ಕವಿ ಹೇಳಿದ್ದು ಸರಸಕ್ಕೆ ಬಂದ ಮನದರಸಿ...

ರಾಮಾಯಣ ೧೯೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೨🏝📖! *ಯದಿ ತೇ ಧರ್ಮಲಾಭಂ ಚ ಯಶಶ್ಚ ಪರಮಂ ಭುವಿ | ಸ್ಥಿರಮಿಚ್ಛಸಿ ರಾಜೇಂದ್ರ ರಾಮಂ ಮೇ ದಾತುಮರ್ಹಸಿ||* _ವಿಶ್ವಾಮಿತ್ರರು ಮುಂದುವರಿದು ರಾಜನಿಗೆ ನುಡಿಯುತ್ತಿದ್ದಾರೆ. ರಾಮನೆದುರು ನಿಲ್ಲಲು ಆ ಪಾಪಿಗಳಿಗೆ ಎಳ್ಳಷ್ಟೂ ಸಾಧ್ಯವಿಲ್ಲ. ಕಾಲನ ಕರೆಗೆ ಓಗೊಟ್ಟು ಅವರೀಗಲೇ ರಾಮನಿಂದ ಹತರಾದರೆಂದು ಭಾವಿಸು. ಮಕ್ಕಳೆಂಬ ವ್ಯಾಮೋಹ ಬಿಟ್ಟು ಮಕ್ಕಳ ಸಾಮರ್ಥ್ಯ ಎಂತಹದು ಎಂಬುದನ್ನು ಯೋಚಿಸು. ನಿನಗೆ ಧರ್ಮವನ್ನು ಸ್ಥಿರಗೊಳಿಸಿದ ಕೀರ್ತಿ ಹಾಗೂ ಪ್ರಪಂಚದಲ್ಲಿ ಅತ್ಯುತ್ಕೃಷ್ಟವಾದ ಯಶಸ್ಸು ಪಡೆಯಬೇಕೆಂಬ ಬಯಕೆ ಇದ್ದರೆ ರಾಮನನ್ನು ಕಳಿಸಿಕೊಡು. ಮುಂದೆ ಕೃಷ್ಣನು ಗೀತೆಯಲ್ಲಿ ಇದೇ ಮಾತನ್ನು ಭಿನ್ನವಾಗಿ ನುಡಿಯುತ್ತಾನೆ. ಅರ್ಜುನ ನಿನ್ನೆದುರು ನಿಂತ ಯೋಧರೆಲ್ಲರೂ ನನ್ನ ಬಾಯೊಳಗೆ ಸೇರಿ ಹತರಾಗಿದ್ದಾರೆ ಎಂದು ವಿಶ್ವರೂಪ ತೋರಿ ನುಡಿಯುವನು. ಇಲ್ಲಿ ವಿಶ್ವಾಮಿತ್ರರು ಅದೇ ಅರ್ಥ ಬರುವಂತೆ ಭಗವಂತನ ಅವತಾರಿಯಾದ ರಾಮನ ಕೈಯಲ್ಲಿ ಈಗಾಗಲೇ ಅಳಿದಿದ್ದಾರೆ ಎಂದು ಭಾವಿಸು ಎನ್ನುತ್ತಾರೆ. ಸಂಕಲ್ಪ ಮಾತ್ರದಿಂದ ಸರ್ವವನ್ನೂ ನುಂಗಬಲ್ಲ ಅವನ ಮಹಿಮೆ ಯೋಗಿಗಳಿಗೆ ಮಾತ್ರ ತಿಳಿಯಬಲ್ಲದು. ಇಲ್ಲಿ ನೆರೆದಿರುವ ವಸಿಷ್ಠ, ವಾಮದೇವಾದಿ ಮಹರ್ಷಿಗಳೂ ಅವನ ಶಕ್ತಿಯನ್ನು ಬಲ್ಲರು. ವಿಶ್ವಾಮಿತ್ರರು ರಾಜನೊಡನೆ ನಡೆಸಿದ ಸಂಭಾಷಣೆ ಬಹಳ ಸೊಗಸಾಗಿದೆ. ತಾನೊಬ್ಬ ಬ್ರಹ್ಮರ್ಷಿ ಅಥವಾ ಸರ್ವಸಮರ್ಥ ಇತ್ಯಾದಿ ಯಾವುದನ್ನೂ ತೋರಗೊಡದೆ ಯಾವ ಕಾರಣದ...

ರಾಮಾಯಣ ೧೯೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೧🏝📖 *ನ ಚ ಮೇ ಕ್ರೋಧಮುತ್ಸೃಷ್ಟುಂ ಬುದ್ಧಿರ್ಭವತಿ ಪಾರ್ಥಿವ| ತಥಾಭೂತಾ ಹಿ ಸಾ ಚರ್ಯಾ ನ ಶಾಪಸ್ತತ್ರ ಮುಚ್ಯತೇ ||* _ದಶರಥನ ಬಳಿ ಬಂದ ವಿಶ್ವಾಮಿತ್ರರ ಯಾವ ಕೆಲಸವನ್ನಾದರೂ ನಡೆಸಿಕೊಡುವೆ ಎಂದು ಮಾತು ಕೊಟ್ಟಾಗ ಋಷಿಗಳು ಋಷಿಗಳು ಹೀಗೆನ್ನುತ್ತಾರೆ. ರಾಜನೇ ನಾನು ಕೈಗೊಂಡಿರುವ ಯಜ್ಞಕ್ಕೆ ರಾಕ್ಷಸರು ವಿಘ್ನ ಉಂಟುಮಾಡುತ್ತಿದ್ದಾರೆ. ಹೀಗೆ ಮತ್ತೆ ಮತ್ತೆ ನನ್ನ ಪರಿಶ್ರಮ ಎಲ್ಲವೂ ವ್ಯರ್ಥವಾಗಿ ಹೋಗುತ್ತಿದೆ. ಅವರಿಗೆ ಶಾಪ ಕೊಡಬಹುದಲ್ಲವೇ ಎಂದರೆ ವ್ರತಸ್ಥನಾದಾಗ ಶಾಪಾದಿಗಳನ್ನು ಕೊಡಬಾರದು. ಒಂದು ಯಜ್ಞ, ವ್ರತ, ಪೂಜೆ, ಸತ್ರ, ಯಾಗ ಹೀಗೆ ಲೋಕಕಲ್ಯಾಣಾರ್ಥವಾದ ಕಾರ್ಯಗಳನ್ನು ಕೈಗೊಂಡ ಸಮಯದಲ್ಲಿ ಕಾಮಾದಿ ಅರಿಷಡ್ವರ್ಗಗಳನ್ನು ಗೆಲ್ಲುವುದರತ್ತ ದೃಷ್ಟಿ ಇರಬೇಕೇ ಹೊರತು ಮತ್ತೂ ಅದರಲ್ಲಿ ಮುಳುಗುವತ್ತ ಅಲ್ಲ. ಕರ್ಮಕ್ಕೆ ದೀಕ್ಷೆ ತೆಗೆದುಕೊಳ್ಳುವುದು ಎಂದರೆ ನಿತ್ಯದ ವ್ಯವಹಾರ ಮುಂತಾದವನ್ನು ಬದಿಗಿಟ್ಟು ಭಗವಂತನಲ್ಲಿ ಬುದ್ಧಿಯನ್ನು ನೆಡುವುದು. ಹಾಗಾಗಿ ರಾಜನೇ, ಈ ಯಜ್ಞದ ಸಮಯದಲ್ಲಿ ನಾನು ಯಾರ ಮೇಲೂ ಕೋಪಿಸಲು ಅಥವಾ ಶಾಪಾದಿಗಳನ್ನು ಕೊಡಲು ಸಾಧ್ಯವಿಲ್ಲ.ಹಾಗೆ ಮಾಡಿದರೆ ವ್ರತಭಂಗವಾಗುತ್ತದೆ. ಕರ್ಮಗಳನ್ನು ಮಾಡುವ ಉದ್ದೇಶವೇ ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತಂದು ಸದ್ಗುಣಗಳನ್ನು ಅಳವಡಿಸಿಕೊಳ್ಳುವುದು. ಎಡಚರರ ವಾದದಂತೆ ತುಪ್ಪ ಮುಂತಾದ ದ್ರವ್ಯ ವಿನಿಯೋಗಿಸಲು, ಜೋರಾಗಿ ಮಂತ್ರ ಹೇಳುವುದು, ದಕ್ಷ...

ವಿಕ್ರಮೋರ್ವಶೀಯ೮

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-8 *आभरणस्याभरणं प्रसाधनविधेः प्रसाधनविशेषः। उपमानस्यापि सखे प्रत्युपमानं वपुस्तस्याः।।* _ಕಾಳಿದಾಸನ ಸುಂದರ ಶ್ಲೋಕಗಳಲ್ಲಿ ಇದೂ ಒಂದು. ಪುರೂರವನು ಊರ್ವಶಿಯಲ್ಲೇ  ಮನವಿಟ್ಟಿದ್ದಾನೆ. ವಿದೂಷಕನು ಅವಳೇನು ಅಂತಹ ಸೌಂದರ್ಯವತಿಯೇ? ಎಂದು ಪ್ರಶ್ನಿಸಿದಾಗ ಒಂದೊಂದು ಅವಯವ ಸೊಗಸೆಂದರೆ ಅದು ಅವಳ ಸೌಂದರ್ಯಕ್ಕೆ ಅಪಚಾರ ಎನ್ನುತ್ತಾ ರಾಜ ಈ ಮಾತನ್ನು ಆಡುವನು. ಕೆಲವೊಂದು ಅವಯವಗಳಿಂದ ಸುಂದರಿಯರು ಬಹಳಷ್ಟು ಇದ್ದಾರೆ. ಆದರೆ ಒಟ್ಟಂದದ ಸೌಂದರ್ಯ ಕಾಣಸಿಗುವುದು ಅಪರೂಪ. ಹಾಗಾಗಿಯೇ ಈ ರೂಪ ನನ್ನನ್ನು ಅಪಹರಿಸಿದೆ ಎಂದು ಅವಳ ಸೊಗಸಿನ ಬಗೆಗೆ ಈ ಮಾತು. ಅವಳು ಲೋಕದಲ್ಲಿ ಎಂತಹ ವಿಶಿಷ್ಟವಾದ ರೂಪವರ್ಧಕ ಆಕರ್ಷಕ ಆಭರಣಗಳಿವೆಯೋ ಅವೆಲ್ಲಕ್ಕೂ ಮಿಗಿಲು. ಅಂತಹ ಆಭರಣಗಳನ್ನು ಇವಳು ಧರಿಸಿ ಅವುಗಳ ಮೆರುಗು ಹೆಚ್ಚಾಗಬಹುದೇ ಹೊರತು ಆಭರಣಗಳಿಂದ ಇವಳದಲ್ಲ. ಎಲ್ಲಾ ಆಭರಣಗಳಿಗಿಂತಲೂ ಒಂದು ತೂಕ ಹೆಚ್ಚಿನ ಮನೋಹರ ರೂಪ ಇವಳದು. ಸ್ತ್ರೀಯರ ಪ್ರಸಾಧನ ಸಾಮಗ್ರಿಗಳು ಏನೇನು ಇವೆಯೋ ಅವೆಲ್ಲವನ್ನೂ ಮೀರಿಸಿದ ಸಹಜ ಸೌಂದರ್ಯ ಇವಳ ಕಾಯದಲ್ಲಿದೆ.‌ಕಾಡಿಗೆ-ಗಂಧ,ಚಂದನ-ಮೂಗುತಿ-ಕಾಲ್ಗೆಜ್ಜೆ-ಕಿವಿಯೋಲೆ-ಬಳೆ-ಡಾಬು-ರತ್ನಹಾರ-ಉಂಗುರ-ಬಣ್ಣಗಳು-ನಾನಾ ಲೇಪನಗಳು ಹೀಗೆ ಅಲಂಕಾರ ಮಾಡಿಕೊಳ್ಳಲು ಇರುವ ಸಕಲ ಸಾಮಗ್ರಿಗಳೂ ಇವಳ ಸೌಂದರ್ಯದ ಇದಿರು ಸಪ್ಪೆ ಎನಿಸುತ್ತವೆ. ಇವಳ ರೂಪವೇ ಅಲಂಕಾರ ಸಾಮಗ್ರಗಳಿಗೆ ವಿಶೇಷ ಮಾದರ...

ರಾಮಾಯಣ ೧೯೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೦🏝📖 *ಯಥಾಮೃತಸ್ಯ ಸಂಪ್ರಾಪ್ತಿರ್ಯಥಾ ವರ್ಷಮನೂದಕೇ|ಯಥಾ ಸದೃಶದಾರೇಷು ಪುತ್ರಜನ್ಮಾಪ್ರಜಸ್ಯ ಚ ಪ್ರಣಷ್ಟಸ್ಯ ಯಥಾ ಲಾಭೋ ಯಥಾ ಹರ್ಷೋ ಮಹೋದಯೇ| ತಥೈವಾಗಮನಂ ಮನ್ಯೇ ಸ್ವಾಗತಂ ತೇ ಮಹಾಮುನೇ * _ವಿಶ್ವಾಮಿತ್ರರ ಆಗಮನವಾಗಿ ಕುಶಲಪ್ರಶ್ನೆಗಳು ನಡೆದು ಅರ್ಘ್ಯಪಾದ್ಯಾದಿ ಅರ್ಪಿಸಿ ದಶರಥನು ನಿವೇದಿಸಿಕೊಳ್ಳುತ್ತಿದ್ದಾನೆ ಮಹರ್ಷಿಗಳ ಬಳಿ- ಜೀವನದಲ್ಲಿ ಒಮ್ಮೆಯೂ ಸಿಗಲು ಅಸಾಧ್ಯವೆನಿಸಿದ ಅಮೃತವು ಕಿಂಚಿತ್ತು ದೊರೆತರೆ ಯಾವ ಆನಂದ ಉಂಟಾಗುವುದೋ, ಮಳೆಯೇ ಬರದೇ ಬಹುಕಾಲ ಒಣಗಿದ್ದ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದರೆ ಹೇಗೆ ತಂಪೆನಿಸುವುದೋ, ಬಹುಕಾಲ ಮಕ್ಕಳಿಲ್ಲದೇ ಪರಿತಪಿಸುವವನಿಗೆ ಮಕ್ಕಳು ಹುಟ್ಟಿದರೆ ಹೇಗೆ ಸ್ವರ್ಗವೇ ಕೈಗೆಟುಕಿದಂತೆ ತೋರುವುದೋ, ಇನ್ನೆಂದೂ ಸಿಗದೆಂದು ಭಾವಿಸಿದ್ದ ಕಳೆದುಕೊಂಡ ವಸ್ತುವೊಂದು ಆಕಸ್ಮಿಕವಾಗಿ ದೊರೆತಾಗ ಆದ ಹರ್ಷದಂತೆ, ಕಷ್ಟವೆನಿಸಿದ ಕಾರ್ಯಗಳು ಸುಲಭವಾಗಿ ನೆರವೇರಿದಾಗ ಉಂಟಾದ ಮೋದದಂತೆ ತಮ್ಮ ಆಗಮನವು ನನ್ನಲ್ಲಿ ಆನಂದವನ್ನು ಉಂಟುಮಾಡಿದೆ. ವಿಶ್ವಾಮಿತ್ರರು ವಿಶ್ವವನ್ನೇ ತಮ್ಮ ಪ್ರೀತಿಯಿಂದ ಗೆದ್ದವರು. ಪರಾಕ್ರಮದಿಂದ ಅಥವಾ ಆಕ್ರಮಣಗಳಿಂದ ಗೆಲ್ಲುವುದಕ್ಕಿಂತ ಪ್ರೀತಿಯಿಂದ ಗೆಲ್ಲುವುದು ಕಷ್ಟ. ಕೌಶಿಕನಾಗಿದ್ದವರು ಇಂತಹ ವಿಶ್ವಬಂಧುತ್ವ ಗುಣದಿಂದ ವಿಶ್ವಾಮಿತ್ರರಾಗಿ ಸಾಮಾನ್ಯರೂ ಅಸಾಮಾನ್ಯರಾಗಬಹುದೆಂಬುದನ್ನು ಸಾಧನೆಯ ಮೂಲಕ ತೋರಿದವರು. ಅಂತಹ ಮಹಾಮಹಿಮರು ಕರೆದರೂ ಬ...

ವಿಕ್ರಮೋರ್ವಶೀಯ ೭

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೭ *आ लोकान्तात्प्रतिहततमोवृत्तिरासां प्रजानां तुल्योद्योगस्तव दिनकृतश्चाधिकारो मतो नः। तिष्ठत्येष क्षणमधिपतिर्ज्योतिषां व्योममध्ये षष्ठे भागे त्वमपि दिवसस्यात्मनश्छन्दवर्ती।।* _ಕವಿ ಸೂರ್ಯನನ್ನು ಹಾಗೂ ಚಂದ್ರವಂಶದ ಖ್ಯಾತ ದೊರೆ ಪುರೂರವನನ್ನು ಸಮೀಕರಿಸಿ ವರ್ಣಿಸುತ್ತಿದ್ದಾನೆ. ಆ ರವಿಯಾದರೋ ಮೂರು ಲೋಕದ ಜನರ ಕತ್ತಲನ್ನು ಕಳೆವ ಕಾರ್ಯದಲ್ಲಿ ಸದಾ ನಿರತನಾಗಿದ್ದಾನೆ. ನೀನಾದರೂ ಅವನಂತೆಯೇ ಆಲೋಕನ ಎಂದರೆ ದರ್ಶನ ಮಾತ್ರದಿಂದ ಪ್ರಜೆಗಳ ತಪ್ಪು ಗ್ರಹಿಕೆ ಹಾಗೂ ದುಃಖ ಮೊದಲಾದವನ್ನು ಕಳೆಯುತ್ತಿರುವೆ. ಸೂರ್ಯ ಸಹಜವಾಗಿ ದಿನವೂ ಲೋಕಕ್ಕೆ ಬೆಳಕು ನೀಡುವ ಕಾಯಕದಲ್ಲಿ ತೊಡಗಿಕೊಂಡಂತೆ ನೀನು ದರ್ಶನಾಕಾಂಕ್ಷಿಗಳಾಗಿ ಬಂದ ಜನರ ಕಷ್ಟಕ್ಕೆ ಸ್ಪಂದಿಸಿ ಅವರ ಸಂಶಯಗಳನ್ನು ನಿವಾರಿಸಿ ಅವರ ಮನದಲ್ಲಿ ನೆಲೆಸಿದ್ದ ಶೋಕ-ದುಃಖ- ಚಿಂತೆ- ಸಂಶಯಗಳನ್ನು ನಿವಾರಿಸಿ ಅವರ ಬಾಳಿಗೆ ಬೆಳಕಾಗಿರುವಿ. ಹೀಗೆ ಇಬ್ಬರೂ ಸಮಾನವಾದ ಕೆಲಸದಲ್ಲಿ ತೊಡಗಿಕೊಂಡಿರುವಿರೆಂದು ನನ್ನ ಮತ. ರಾಜನೂ ಸೂರ್ಯನಂತೆ ಕೀರ್ತಿಶಾಲಿ ಹಾಗೂ ಲೋಕಕ್ಷೇಮದ ಕಾರ್ಯದಲ್ಲಿ ತೊಡಗಿಕೊಂಡಿರುವನೆಂದು ವೈತಾಲಿಕನ ಹೊಗಳಿಕೆಯ ಸಾರ. ಸೂರ್ಯನಾದರೋ ಮಧ್ಯಾಹ್ನದ ಅರೆಘಳಿಗೆ ತಾರಾಧಿಪತಿಯಾಗಿ ಆಕಾಶದಲ್ಲಿ ವಿರಾಜಿಸುತ್ತಾ ವಿಶ್ರಾಂತಿ ಪಡೆಯುವನು. ರಾಜನಿಗೆ ಯಾವಾಗ ಈ ತರಹದ ಸವಲತ್ತು ಎಂದರೆ ದಿನದ ಕೊನೆಯ ಭಾಗ ಅಥವಾ ಆರನೇ ಯಾಮ...

ರಾಮಾಯಣ ೧೮೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೯🏝📖 *ಪುರೇ ಕೋಶೇ ಜನಪದೇ ಬಾಂಧವೇಷು ಸುಹೃತ್ಸುಚ| ಕುಶಲಂ ಕೌಶಿಕೋ ರಾಜ್ಞಃ ಪರ್ಯಪೃಚ್ಛತ್ಸುಧಾರ್ಮಿಕಃ ||* _ದಶರಥನ ಮನದಲ್ಲಿ ಮಕ್ಕಳ ವಿವಾಹದ ಚಿಂತೆ ಮೂಡಿದೊಡನೆ ಆಗಮಿಸಿದರು ಪುರೋಹಿತರಾದ ವಿಶ್ವಾಮಿತ್ರರು. ಅವರ ಮೊದಲ ಪ್ರಶ್ನೆಯೇ ಇದು. ರಾಜನೇ, ಜನರು ಕುಶಲಾವಾಗಿರುವರೇ? ನಿನ್ನ ಖಜಾನೆ ತುಂಬಿದೆಯೇ? ಗ್ರಾಮೀಣರು ಸುಖದಿಂದಿರುವರೇ? ನಿನ್ನ ಬಂಧು-ಬಾಂಧವರು ಹಾಗೂ ಮಿತ್ರರು ಕುಶಲವೇ?  ಹೀಗಾಗಿಯೇ ವಿಶ್ವಾಮಿತ್ರರನ್ನು ಪರಮಧಾರ್ಮಿಕರೆಂದು ಕರೆದ ಮಹರ್ಷಿ ವಾಲ್ಮೀಕಿ. ಯಾರು ಮೊದಲು ಲೋಕಕ್ಷೇಮವನ್ನು ಚಿಂತಿಸುವನೋ ಅವನೇ ಧಾರ್ಮಿಕ. ಕೇವಲ ತನ್ನ ಧರ್ಮಾನುಷ್ಠಾನ ಮಾಡಿಕೊಂಡು ತನ್ನ ಉದ್ಧಾರವೇ ಜೀವನದ ಧ್ಯೇಯ ಮಾಡಿಕೊಳ್ಳುವ ವ್ಯಕ್ತಿ ಸ್ವಾರ್ಥಿ ಎನಿಸುವನು. ಲೋಕದ ಹಿತದಲ್ಲಿ ತನ್ನ ಹಿತವೂ ಅಡಗಿದೆ ಎಂಬ ಉದಾತ್ತ ಚಿಂತನೆಯೇ ಧರ್ಮದ ಜೀವಾಳ. ಮಹರ್ಷಿಯು ದಶರಥನ ಹೆಂಡತಿ-ಮಕ್ಕಳು ಕ್ಷೇಮದಿಂದ ಇದ್ದಾರೆಯೇ ಎಂದು ವಿಚಾರಿಸಲಿಲ್ಲ. ಜನರು ಸುಖಿಯಾಗಿರುವರೇ? ಜನರ ಸುಖಕ್ಕಾಗಿ ವಿನಿಯೋಗ ಆಗುವ ಕೋಶ ತುಂಬಿದೆಯೇ? ನಗರದ ಜಂಜಾಟದಿಂದ ತುಂಬಾ ದೂರದಲ್ಲಿ ತಮ್ಮದೇ ಶೈಲಿಯಲ್ಲಿ ಬದುಕು ನಡೆಸುತ್ತಿರುವ ಜಾನಪದರ ಬದುಕು ಸಮೃದ್ಧಿ ಪಡೆದಿದೆಯೇ? ಇವರ ನಂತರ ಬಂಧು- ಬಾಂಧವ- ಮಿತ್ರರು. ಈ ಚಿಂತನೆ ಯಾವ ರಾಜನಿಗಿರುತ್ತದೋ ಅಥವಾ ಯಾವ ಸಲಹೆಗಾರನಿಗಿರುತ್ತದೋ ಅಂತಹ ದೇಶ ನಿಜಕ್ಕೂ ಪುಣ್ಯಭೂಮಿ._ *ಅಪಿ ತೇ ಸಂನತಾಃ ಸರ್ವೇ ಸಾಮ...

ರಾಮಾಯಣ ೧೮೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೮🏝📖 *ಸರ್ವೇ ವೇದವಿದಃ ಶೂರಾಃ ಸರ್ವೇ ಲೋಕಹಿತೇ ರತಾಃ | ಸರ್ವೇ ಜ್ಞಾನೋಪಸಂಪನ್ನಾಃ ಸರ್ವೇ ಸಮುದಿತಾ ಗುಣೈಃ||* _ರಾಮಾದಿ ನಾಲ್ವರೂ ವೇದ-ಶಾಸ್ತ್ರಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಲೋಕದ ಹಿತವನ್ನು ಆಚರಿಸುವುದು ಅವರಿಗೆ ಸಹಜವಾದ ಸ್ವಭಾವವಾಗಿತ್ತು. ತತ್ವಜ್ಞಾನವೂ ಅವರಿಗೆ ಬಹಳವಾಗಿತ್ತು. ಸದ್ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ರಾಜಪುತ್ರರಾಗಿ ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಬೆಳೆದ ಅನೇಕ ರಾಜಕುವರರಂತೆ ಇರಲಿಲ್ಲ ಈ ದೇವಕುಮಾರರು. ಗುರುಕುಲದಲ್ಲಿ ಅಧ್ಯಯನ ಮಾಡಿ ವೇದ-ಶಾಸ್ತ್ರ-ತತ್ವ ಈ ಮೂರನ ಸಾರವನ್ನೂ ಅರಿತಿದ್ದರು. ನಮ್ಮ ಸುತ್ತಮುತ್ತಲಿನ ಅಧಿಕಾರಿ ವರ್ಗ ಅಥವಾ ಶ್ರೀಮಂತರ ಮಕ್ಕಳು ಅಧ್ಯಯನಕ್ಕಿಂತ ಇತರ ಚಟುವಟಿಕೆಗೇ ಮಹತ್ವ ಕೊಡುವುದು ನೋಡಿದಾಗ ದಶರಥನ ವ್ಯಕ್ತಿತ್ವ ಶಿಕ್ಷಣ ಮಾದರಿಯಾಗುತ್ತದೆ. ಜ್ಞಾನ ಸಂಪಾದಿಸಿದ್ದು ಮಾತ್ರವಲ್ಲ ಅದರ ಸದ್ವಿನಿಯೋಗ ಆಗುವುದು ಅದು ಸಮಾಜಕ್ಕೆ ಯಾವುದಾದರೂ ರೀತಿಯಲ್ಲಿ ಸಹಕಾರಿ ಆದಾಗ. ಈ ನಾಲ್ವರೂ ಲೊಕಹಿತದ ಬುದ್ಧಿಯನ್ನು ಎಂದಿಗೂ ಬಿಡುತ್ತಿರಲಿಲ್ಲ. ತಮ್ಮ ಯಾವ ಕಾರ್ಯವೂ ಲೋಕಕ್ಕೆ ಹಿತವೆನಿಸದಿದ್ದರೆ ಅದನ್ನು ಬಿಟ್ಟು ಬಿಡುತ್ತಿದ್ದರು. ಸೀತಾಪರಿತ್ಯಾಗದಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವ ರಾಮನ ಹಾಗೂ ತಮ್ಮಂದಿರ ಬಾಲ್ಯದ ತರಬೇತಿಯೇ ಹಾಗಿತ್ತು.‌ನಮಗೆ ಸಮ್ಮತವಾದುದು ಅಥವಾ ಸುಖಕರವಾದುದು ಲೋಕಕ್ಕೆ ಅಹಿತ ಅಥವಾ ದುಃಖಕರ ಎಂದರೆ ನಮಗೂ ಅದು ಅಹ...

ವಿಕ್ರಮೋರ್ವಶೀಯ ಪದ್ಯ ೬

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೬ *एषा मनो मे प्रसभं शरीरात्पितुः पदं मध्यममुत्पतन्ती। सुराङ्गना कर्षति खण्डिताग्रात्सूत्रं मृणालादिव राजहंसी।।* _ಧರೆಗಿಳಿದ ಊರ್ವಶಿ ಮತ್ತೆ ತ್ರಿವಿಕ್ರಮನ ಮಧ್ಯಮ ಪಾದದೆಡೆಗೆ ನೆಗೆದಿದ್ದಾಳೆ. ಇತ್ತ ಪುರೂರವನಿಗೆ ಚಿಂತೆ ಆವರಿಸುತ್ತಿದೆ. ರಾಜಹಂಸವು ಬಹಳ ನಾಜೂಕಾಗಿ ಮೊದಲೇ ಕತ್ತರಿಸಿದ ಕಮಲದ ದಂಟಿನಿಂದ ನಾರನ್ನು ಬಿಡಿಸಿ ಒಯ್ಯುವಂತೆ ಈ ಅತಿಲೋಕ ಸುಂದರಿಯು ನನ್ನೀ ಮನವನ್ನು ಶರೀರದಿಂದ ಕತ್ತರಿಸಿ ಶೋಷಿಸುತ್ತಿರುವಳಲ್ಲ! ಅಯ್ಯೋ. ರಾಕ್ಷಸಪೀಡಿತ ಸುರಾಂಗನೆ ಊರ್ವಶಿಯು ರಾಜನ ಪರಾಕ್ರಮದಿಂದ ಬಂಧನದಿಂದ ಬಿಡುಗಡೆಗೊಂಡು ತನ್ನ ವಾಸವೆನಿಸಿದ ಗಂಧರ್ವಲೋಕಕ್ಕೆ ತೆರಳುತ್ತಿದ್ದಾಳೆ. ಆಕಾಶಮಾರ್ಗದಲ್ಲಿ ಹಾರುತ್ತಾ ಹೋಗುತ್ತಿರುವಳು. ರಾಜನಿಗೆ ಅವಳ ಅಗಲುವಿಕೆ ಅಸಹನೀಯವೆನಿಸತೊಡಗಿದೆ. ಕವಿ ಇದನ್ನೇ ಹೀಗೆ ವರ್ಣಿಸಿದ್ದಾನೆ. ಕಮಲದ ದೇಟಿನಿಂದ ತಂತುವನ್ನು ಬೇರ್ಪಡಿಸುವ ನಾಜೂಕು ರಾಜಹಂಸಗಳ ವೈಶಿಷ್ಟ್ಯವಾದರೆ ಜಿತೇಂದ್ರಿಯನಾದ ಪುರೂರವನ ಮನವನ್ನು ಸೆಳೆಯುವ ಕಲೆ ಈ ಸುರಾಂಗನೆಯ ವೈಶಿಷ್ಟ್ಯ. ಇಲ್ಲಿ ವಿಷ್ಣುವಿನ ವಾಮನಾವತಾರದ  ಉಲ್ಲೇಖ ಮಾಡಿರುವುದು ಕವಿಯ ಜಾಣ್ಮೆ. ಬಲಿಯ ಬಳಿ ಎರಡನೇ ಪಾದ ಎಲ್ಲಿಡಲಿ ಎಂದಾಗ ಆಕಾಶ ತೋರಲಾಗಿ ವ್ಯಾಪಕನಾಗುವನು ವಾಮನ. ಶರೀರದಿಂದ ಮನವನ್ನು ಬೇರ್ಪಡಿಸುವುದು ಎಂದರೆ ಅವಳ ಧ್ಯಾನದಲ್ಲೇ ಮುಳುಗುವುದು ಹಾಗೂ ತನ್ನ ಬಯಕೆಗಳನ್ನು ಮರೆಯುವುದು. ಕವಿ ಅದ...