ಚಾರುದತ್ತ ೨೧

👳‍♀ಚಾರುದತ್ತ ಬೆಳಕು- ೨೧👳‍♀

*ವಿಷಾದಸ್ರಸ್ತಸರ್ವಾಂಗೀ ಸಂಭ್ರಮೋತ್ಫುಲ್ಲಲೋಚನಾ | ಮೃಗೀವ ಶರವಿದ್ಧಾಂಗೀ ಕಂಪಸೇ ಚಾನುಕಂಪಸೇ ||*

_ಭಾಸನ ಒಂದು ಚಿತ್ರಕಾವ್ಯದ ಉದಾಹರಣೆ. ನಾಯಿಕೆಯು ಮೈಯಲ್ಲಿ ನೆಟ್ಟ ಬಾಣದಿಂದ ನಡುಗುತ್ತಿರುವ ಅತ್ತಿತ್ತ ಕಣ್ಣನ್ನು ಬಿಡುತ್ತಾ ತಪ್ಪಿಸಿಕೊಳ್ಳಲು ಸಿದ್ಧವಾಗಿ ನಿಂತಿರುವ ಹರಿಣಿಯಂತೆ ತೋರುತ್ತಿದ್ದಾಳೆ. ಶ್ಲೋಕಕ್ಕನುಗುಣವಾಗಿ ಚಿತ್ರ ಬರೆಯಬಹುದಾದ ಕಾವ್ಯ. ವಸಂತಸೇನೆಯು ತನ್ನ ಬಳಿ ಬಂದ ಗ್ರಾಹಕನಿಂದ ಕೊಡಲ್ಪಟ್ಟ ಆಭರಣವೊಂದನ್ನು ಸ್ವೀಕರಿಸಿದ್ದಾಳೆ. ಆ ಆಭರಣ ತನ್ನದೆಂದು ಶಂಕಿಸಿ ಎಲ್ಲಿ ಸಿಕ್ಕಿತೆಂದು ಅವನ ಬಳಿ ವಿಚಾರಿಸಲಾಗಿ ಅವನು ತನ್ನ ಸಾಹಸದ ಕಾರ್ಯವನ್ನು ವರ್ಣಿಸತೊಡಗಿದನು. ತಾನು ದೊಡ್ಡ ವ್ಯಾಪಾರಿಯಾದ ಚಾರುದತ್ತನ ಮನೆಗೆ ಬೆಳಗಿನ ಜಾವ ಹೋದೆನು ಇತ್ಯಾದಿ. ಆಗ ತನ್ನ ಮನದರಸನಾದ ಚಾರುದತ್ತನಿಗೆ ಈ ಭೂಷಣದ ಸಲುವಾಗಿ ಇವನೇನಾದರೂ ಮಾಡಿದನೋ ಎಂಬ ಆತಂಕದಲ್ಲಿ ಪಿಳಿಪಿಳಿ ಕಣ್ಣುಬಿಡುತ್ತಾ ನಡುಗಿದಳು. ತನ್ನ ಪ್ರಿಯಕರನಿಗೇನಾಯ್ತೋ ಎಂದು ಅನುಕಂಪವನ್ನೂ ತೋರುತ್ತಿದ್ದಾಳೆ. ಆತಂಕದಿಂದ ದೇಹ ನಡುಗುವಾಗ ಇನ್ನೊಬ್ಬರ ಬಗ್ಗೆ ಅನುಕಂಪ ತೋರುವುದು ಕಷ್ಟದ ಕೆಲಸ. ಭಾಸನು ಅವೆರಡನ್ನೂ ಒಬ್ಬಳಲ್ಲೇ ಕಲ್ಪಿಸಿ ಚಿತ್ರಿಸಿದ್ದಾನೆ. ಮೊಗದಲ್ಲಿ ಗಾಬರಿ-ಕುತೂಹಲ-ದುಃಖ-ಅನುಕಂಪ ಇವೆಲ್ಲವನ್ನೂ ಧ್ವನಿಸುವ ಚಂಚಲ ಕಣ್ಣುಗಳು. ನಡುಗುವ ತನು.ಜಿಂಕೆ ಬಾಣದ ಪೆಟ್ಟು ಬಿದ್ದು ಓಡಲು ಸಿದ್ಧವಾಗಿರುವ ದೇಹ, ಕ್ಷಣಕ್ಕೊಮ್ಮೆ ಅತ್ತಿತ್ತ ಧಾವಿಸುವ ಕಣ್ಣುಗಳು. ಕವಿಯ ಒಂದು ಸುಂದರ ಕಲ್ಪನೆ._ 

📝ಸಂಗ್ರಹ ಲೇಖನ. ಶ್ರೀನಿಧಿ ಅಭ್ಯಂಕರ್. 

ಎಲ್ಲಾ ಲೇಖನಗಳಿಗೆ ಇಣುಕಿ
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩