ಧರ್ಮಾಚರಣೆ ೧೦೩
ಧರ್ಮಾಚರಣೆ- ೧೦೩
ಸೋಮಃ ಶೌಚಂ ದದೌ ಸ್ತ್ರೀಣಾಂ ಗಂಧರ್ವಶ್ಚ ಶುಭಾಂ ಗಿರಮ್ | ಪಾವಕಃ ಸರ್ವಮೇಧ್ಯತ್ವಂ ಮೇಧ್ಯಾ ವೈ ಯೋಷಿತೋ ಹ್ಯತಃ || ಯಾಜ್ಞವಲ್ಕ್ಯ ಸ್ಮೃತಿ||
ಸ್ತ್ರೀಯರಿಗೆ ಸೋಮನು ವಿವಾಹ ಪೂರ್ವದಲ್ಲಿ ಶುಚಿತ್ವ ನೀಡುವನು. ಗಂಧರ್ವರು ಮಾತಿನಲ್ಲಿ ಮಾಧುರ್ಯವನ್ನು ನೀಡುವನು. ಅಗ್ನಿಯು ಪಾವಿತ್ರ್ಯವನ್ನು ನೀಡುತ್ತಾನೆ. ಋತುಕಾಲದಲ್ಲಿ ಮಾತ್ರ ಇವರಿಂದಲೇ ದೋಷ ಬರುತ್ತದೆ. ಹಾಗಾಗಿ ಸ್ತ್ರೀಯರು ಸ್ಪರ್ಶ- ಭಾಷಣ- ಆಲಿಂಗನ ಮೊದಲಾದ ಪ್ರಸಂಗಗಳಲ್ಲಿ ಸದಾ ಶುಚಿಗಳಾಗಿರುತ್ತಾರೆ. ಕೆಲವು ಧರ್ಮಗಳಲ್ಲಿ ಕೆಲವು ದೇಶಗಳಲ್ಲಿ ಸ್ತ್ರೀಯರ ಪಾವಿತ್ರ್ಯ ಪರೀಕ್ಷಿಸಿ ಮದುವೆ ಮಾಡುವ ಕೆಟ್ಟ ಪದ್ಧತಿ ಇದೆ. ನಮ್ಮ ಸನಾತನ ಧರ್ಮದಲ್ಲಿ ವಿವಾಹ ಪೂರ್ವದಲ್ಲಿ ಅವರು ಸದಾಶುಚಿ. ಹಾಗಾಗಿ ಅಂತಹ ಅನಾಗರಿಕತೆಯ ಆಚರಣೆಗಳಿಗೆ ಆಸ್ಪದವಿಲ್ಲ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ